ಬುಧವಾರ, ಡಿಸೆಂಬರ್ 27, 2017

All web site

Dear All,
In need of any book(.pdf) relating to any subject/field or topic?
Go to your browser and type:
www.pdfdrive.net
You will get access to millions of  books you need, for free.
Unlimited downloads.

You may browse by title or author, etc.
Currently 274376478 books are available for free and every minute, around 50 new books are added to the database.
All downloads are free😊.

Spread this message....



*_SOME USEFUL  WEBSITES  ONLINE EDUCATIONAL SUPPORT_*

www.khanacademy.org
www.academicearths.org
www.coursera.com
www.edx.org
www.open2study.com
www.academicjournals.org
codeacademy.org
youtube.com/education

*BOOK SITES*
www.bookboon.com
http://ebookee.org
http://sharebookfree.com
http://m.freebooks.com
www.obooko.com
www.manybooks.net
www.epubbud.com
www.bookyards.com
www.getfreeebooks.com
http://freecomputerbooks.com
www.essays.se
www.sparknotes.com
www.pink.monkey.com

*ONLINE EDUCATIONAL SUPPORT*
http://www.ocwconsortium.org/
http://www.ocwconsortium.org/en/courses/ocwsites
http://ocw.tufts.edu -Tuft University
http://ocw.upm.es -Univesidad Politechnica, Madrid
http://www.open.edu/openlearn/
http://ocw.usu.edu/ -Utah State University
http://open.umich.edu/ -University of Michigan
http://ocw.nd.edu/ -Nore Dame University

*ANSWERS TO QUESTIONS*
www.ehow.com
www.whatis.com
www.howstuffwork.com
www.webopedia.com
www.plagtracker.com
www.answers.com

*SEARCH SITES*
■ About.com (www.about.com)
■ AllTheWeb (www.alltheweb.com)
■ AltaVista (www.altavista.com)
■ Ask Jeeves! (www.askjeeves.com)
■ Excite (www.excite.com)
■ HotBot (www.hotbot.com)
■ LookSmart (www.looksmart.com)
■ Lycos (www.lycos.com)
■ Open Directory (www.dmoz.org)
■ Google (www.google.com)
■ Mamma (www.mamma.com)
■ Webcrawler (www.webcrawler.com)
■ Aol (www.aol.com)
■ Dogpile (www.dogpile.com)
■ 10pht (www.10pht.com)

*SEARCHING FOR PEOPLE*
■ AnyWho (www.anywho.com)
■ InfoSpace (www.infospace.com)
■ Switchboard (www.switchboard.com)
■ WhitePages.com (www.whitepages.com)
■ WhoWhere (www.whowhere.lycos.com)

*SEARCHING FOR THE LATEST NEWS*
■ ABC News (www.abcnews.com)
■ CBS News (www.cbsnews.com)
■ CNN (www.cnn.com)
■ Fox News (www.foxnews.com)
■ MSNBC (www.msnbc.com)
■ New York Times (www.nytimes.com)
■ USA Today (www.usatoday.com)

*SEARCHING FOR SPORTS HEADLINES AND SCORES*
■ CBS SportsLine (www.sportsline.com)
■ CNN/Sports Illustrated (sportsillustrated.cnn.com)
■ ESPN.com (espn.go.com)
■ FOXSports (foxsports.lycos.com)
■ NBC Sports (www.nbcsports.com)
■ The Sporting News (www.sportingnews.com)

*SEARCHING FOR MEDICAL INFORMATION*
■ healthAtoZ.com (www.healthatoz.com)
■ kidsDoctor (www.kidsdoctor.com)
■ MedExplorer (www.medexplorer.com)
■ MedicineNet (www.medicinenet.com)
■ National Library of Medicine
(www.nlm.nih.gov)
■ Planet Wellness (www.planetwellness.com)
■ WebMD Health (my.webmd.com)

*JOURNALS*
http://www.indexcopernicus.com Multidisciplinary
http://www.ajol.info/ - African Journal Online
www.africanjournalseries.com -
www.devconsortservices.com.ng
www.doaj.org - directory of open access journal
www.sabinet.co.za - South African Journals.
www.oajse.com - Open Access Journal Search Engine
http://www.lub.lu.se/en.html - Lund University
http://www.dovepress.com/ - Free Scientific & Medical Materials
http://www.copernicus.org/ - Access & Publication

ACADEMIC SEARCH/WEB RESEARCH TOOLS/REFERENCE MANAGERS
http://academic.research.microsoft.com - Multidisciplinary
http://www.scirus.com
www.scholar.google.com
http://dbis.uni-trier.de/DBL-Browser/ - Digital Bibliography Library Browser
http://academic.live.com - Live Search Academic
http://www.science.gov/ - USA government for Science
http://citeseerx.ist.psu.edu/index - Computing & Information Sciences
http://www.mendeley.com/ - academic social network/collaboration
http://www.worldcat.org/ - Multidisciplinary
http://libserver.cedefop.europa.eu - Voc & Tech Education
http://inspirehep.net/ - Stanford physics information retrieval system
hsystemv  www.ssrn.com/ - Social Science Research Network.     M.Ravichandran.VKR PHARMA KRISHNAGIRI

ಶನಿವಾರ, ಡಿಸೆಂಬರ್ 23, 2017

2017 ರ ಪ್ರಚಲಿತ ಘಟನೆಗಳು.

🌻🌻  ವಿಷಯ ::*ಪ್ರಚಲಿತ ಘಟನೆಗಳು ....🌻🌻

1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?

A.  90  ಉಪಗ್ರಹಗಳು
B.  95  ಉಪಗ್ರಹಗಳು
C. *104 ಉಪಗ್ರಹಗಳು*
D.  109  ಉಪಗ್ರಹಗಳು

*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?

1)  ಜಾಕಿ ಶರೀಪ್
2)  ಎ.ಆರ್.ರೆಹಮಾನ
3) *ಕಿರಣ ಭಟ್*
4)  ಯಾರೂ ಅಲ್

*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?

1) *ಇರಾನ್*
2)  ಇರಾಕ್
3) ಅಫಘಾನಿಸ್ತಾನ್
4)  ನೇಪಾಳ

*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?

1)  ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3)  ರಕ್ತದಾನ ಶ್ರೇಷ್ಠದಾನ
4)  ಯಾವುದು ಅಲ್

*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?

1)  ಶಿಮ್ಲಾ
2) *ಧರ್ಮಶಾಲಾ*
3)  ಡೆಹ್ರಾಡೂನ್
4)  ಕುಲುಮನಾಲಿ

6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?

1)  ಕೆನಡಾ
2)  ಇಟಲಿ
3)  ಅಮೇರಿಕಾ
4) *ಜಪಾನ್*

7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?

1)  ಇಂಗ್ಲೇಂಡ್
2)  ಬಾಂಗ್ಲದೇಶ
3) *ಅಮೆರಿಕಾ*
4)  ಶ್ರೀಲಂಕಾ

8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?

1) *ಕೇರಳ*
2)  ಕರ್ನಾಟಕ
3)  ತೆಲಂಗಾಣ
4)  ಆಂಧ್ರಪ್ರದೇಶ

9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?

1) *ವೆಸ ಮೆಯರ*
2)  ದಿಸೋಜಾ ಪ೦ಟಿಕೊ
3)  ಕಾರ್ಲೋ ಫ್ರಾಂಕ್
4)  ಯಾರು ಅಲ್

10) *ಶಾನ್ ಡಂಗ್* ಎಂದರೇನು ?

1) *ಚೀನಾದ ವಿಮಾನ ನೌಕೆ*
2)  ನೂತನ ಅಣ್ವಸ್ತ್ರ
3)  ಚಿನಾದ ಉಪಗ್ರಹ
4)  ಯಾವುದು ಅಲ್

11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?

1) *ಇಂದೋರ*
2)  ಸೂರತ
3)  ಮೈಸೂರು
4)  ತಿರುಪತಿ

12) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?

1)  ಭೂತಾನ
2) *ನೇಪಾಳ*
3)  ಶ್ರೀಲಂಕಾ
4)  ಮಯನ್ಮಾರ್

13) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?

1)  ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3)  ಭಾರತ ನೆಟ್
4)  ಗ್ರಾಮೀಣ ನೆಟ್

14) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?

1) *ಮಹಾರಾಷ್ಟ್ರ*
2)  ಕರ್ನಾಟಕ
3)  ಕೇರಳ
4)  ಗೋವಾ

15) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?

1) *ಡೋಕ್ಲಾಂ*
2)  ತವಾಂಗ
3)  ಚಾಂಡಿಪುರ
4)  ಯಾವುದು ಅಲ್

16) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?

1) *ಕೆ.ಕೆ.ವೇಣುಗೋಪಾಲ*
2)  ಕೆ.ಕೆ.ರಾಮಗೋಪಾಲ್
3)  ದೀಪಕ ಮಿಶ್ರ
4)  ಯಾರು ಅಲೢಾ

17) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?

1) *ಕಂಬಳ*
2)  ಜೆಲ್ಲಿಕಟ್ಟು
3)  ಕಬಡ್ಡಿ
4)  ಮಲ್ಲಕಂಬ

18) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?

1) *ರವಿಶಾಸ್ತ್ರ*
2)  ಸೌರವ್ ಗಂಗೂಲಿ
3)  ರಾಹುಲ್ ದ್ರಾವಿಡ
4)  ಅನಿಲ್ ಕುಂಬ್ಳೆ

19) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?

1) *ಚೀನಾ*
2)  ಭಾರತ
3)  ರಷ್ಯಾ
4)  ಫ್ರಾನ್ಸ್

20) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?

1)  ಉಷಾರಾವ
2)  ಲತಾ ಹೆಗ್ಗಡೆ
3) *S.ಅಪರ್ಣಾ*
4)  ಯಾರು ಅಲ್

21) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?

1) *ರಾಜೀವ ಕುಮಾರ್*
2)  ಆನಂದ ಕುಮಾರ್
3)  ರಾಮ ಕುಮಾರ್
4)  ಸಂತೋಷ ಕುಮಾರ್

22) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?

1)  ಬ್ರಹ್ಮಪುತ್ರ
2)  ಸರಸ್ವತಿ
3)  ಅಲಕನಂದಾ
4) *ಮೇಚಿ*

23) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?

1)  ದೀಪಕ್ ಮಿಶ್ರ
2)  ವಿವೇಕ ಗೋಯೆಂಕಾ
3)  ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*

24) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?

1)  ಸುನೀಲ್ ಚೌದ್ರಿ
2)  ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4)  ಸ್ಟೀವ್ ಜಾನ್ಸನ್

25) *ಭಾರತದ ನೂತನ ರಕ್ಷಣಾ ಸಚಿವರು ಯಾರು*?

1)  ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3)  ಅರುಣ್ ಜೇಟ್ಲಿ
4)  ಸುಷ್ಮಾ ಸ್ವರಾಜ್

26) *IIT ಧಾರವಾಡದ ನೂತನ ನಿರ್ದೇಶಕರಾಗಿ ನೇಮಕಗೊಂಡವರು ಯಾರು*?

1) *ಪ್ರೊ. ಕವಿ ಮಹೇಶ್*
2)  ರೂಪ ಕುಮಾರಿ
3)  ಲಲಿತಾ ದೇವಿ
4)  ಪ್ರೊ.ಮಹೇಶ್

27) *ವಿಶ್ವದ ಹೈಟೆಕ್ ನಗರಗಳ ಪೈಕಿ ಬೆಂಗಳೂರು ನಗರದ ಸ್ಥಾನವೇನು*?

1) *19*
2)  20
3)  21
4)  22

28) *ಯಾವ ದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಿ ಭಾರತೀಯರ ಉದ್ಯೋಗವನ್ನು ಕಡಿತಗೊಳಿಸಲಾಗಿದೆ*?

1) *ಸೌಧಿ ಅರೆಬಿಯಾ*
2)  ಅಮೇರಿಕಾ
3)  ಕತಾರ್
4)  ಇರಾನ್

29) *ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ (CAG) ಜನರಲ್ ಯಾರು*?

1) *ರಾಜೀವ್ ಮಹರ್ಷಿ*
2)  ರಾಜೀವ್ ಹೆಗ್ಗಡೆ
3)  ರಾಜೀವ್ ಸಿಂಗ್
4)  ಯಾರೂ ಅಲ್

30) *ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯಾವುದು*?

1) *ಹಬೀಬ್ ಗಂಜ್ ರೈಲ್ವೆ ನಿಲ್ದಾಣ*
2)  ಗೋರಕ್ ಪುರ್ ರೈಲ್ವೆ ನಿಲ್ದಾಣ
3)  ಸಂಬಾಲ್ ಪುರ ರೈಲ್ವೆ ನಿಲ್ದಾಣದ
4)  ಯಾವುದು ಅಲ್

31) *ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್ ಯಾವುದು*?

1)  ಅಲಹಾಬಾದ್ ಹೈಕೋರ್ಟ್
2) *ರಾಜ್ಯ ಸ್ಥಾನ ಹೈಕೋರ್ಟ್*
3)  ಕರ್ನಾಟಕ ಹೈಕೋರ್ಟ್
4)  ಮದ್ರಾಸ್ ಹೈಕೋರ್ಟ್

32) *ಗೋವು ದೇವರ ಪ್ರತಿರೂಪ, ಅದನ್ನು ಕೊಲ್ಲುವಂತಿಲ, ಎಂದು ಯಾವ ಹೈಕೋರ್ಟ್ ತೀರ್ಪು ನೀಡಿದೆ*?

1)  ಮದ್ರಾಸ್ ಹೈಕೋರ್ಟ್
2)  ಅಲಹಾಬಾದ್ ಹೈಕೋರ್ಟ್
3)  ಗುಜರಾತ್ ಹೈಕೋರ್ಟ್

4) *ಹೈದರಾಬಾದ್ ಹೈಕೋರ್ಟ್*

33) *ಸರೋವರದ ಮೇಲೆ ಜಗತ್ತಿನ ಅತಿ ದೊಡ್ಡ ತೇಲುವ ಸೌರ ಘಟಕವನ್ನು ನಿರ್ಮಿಸಿದ ದೇಶ ಯಾವುದು*?

1)  ಫ್ರಾನ್ಸ್
2) *ಚೀನಾ*
3)  ಕೆನಡಾ
4)  ಜಪಾನ್

34) *ಯಾವ ಹೈಟೆಕ್ ಅಣು ಸ್ಥಾವರವನ್ನು ಭಾರತದ ಹೆಮ್ಮೆಯ ಅಕ್ಷಯ ಪಾತ್ರೆ ಎಂದು ಕರೆಯಲಾಗುತ್ತದೆ*?

1) *ಕಕ್ರಫಾರ್ ಅಣುಸ್ಥಾವರ*
2)  ಕಲ್ಪಕಂ ಅಣು ಸ್ಥಾವರ
3)  ಕೈಗಾ ಅಣು ವಿದ್ಯುತ್ ಸ್ಥಾವರ
4)  ಯಾವುದು ಅಲ್ಲ

35) *ಯುನೆಸ್ಕೋ ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಗರ ಯಾವುದು*?

1)  ಸೂರತ್
2) *ಅಲಹಾಬಾದ್‌*
3)  ಉದಯಪುರ
4)  ಅಹ್ಮದ್ಬಾದ

36) *ರೇರಾ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ*?

1)  ಭ್ರಷ್ಟಾಚಾರ ನಿರ್ಮೂಲನೆಗೆ
2) *ರಿಯಲ್ ಎಸ್ಟೇಟ್ ಉದ್ಯಮಕ್ಕೆ*
3)  ಕಪ್ಪು ಹಣ ನಿಗ್ರಹಕ್ಕೆ
4)  ಅನಿವಾಸಿ ಭಾರತೀಯರಿಗೆ ಶಾಶ್ವತ ನೆಲೆ ಕಲ್ಪಿಸುವುದು

37) *ಸಲಿಂಗ ವಿವಾಹವನ್ನು ಇತ್ತೀಚೆಗೆ ಯಾವ ದೇಶದ ಸಂಸತ್ತು ಕಾನೂನು ಬದ್ಧಗೊಳಿಸಿದೆ*?

1)  ಬ್ರಿಟಿನ
2) *ಜರ್ಮನ್*
3)  ರಷ್ಯಾ
4)  ಫ್ರಾನ್ಸ್

38) *ಇತ್ತೀಚೆಗೆ ಬಿಡುಗಡೆಯಾದ ಹೊಸ ಅದು ಐವತ್ತು (50)  ರೂಪಾಯಿಯ ನೋಟಿನಲ್ಲಿ ಕರ್ನಾಟಕದ ಯಾವ ಐತಿಹಾಸಿಕ ಸ್ಮಾರಕವನ್ನು ಮುದ್ರಿಸಲಾಗಿದೆ*?

1)  ಬೇಲೂರು ಚನ್ನಕೇಶವ ದೇವಾಲಯ
2) *ಹಂಪಿಯ ಕಲ್ಲಿನ ರಥ*
3)  ಬಾದಾಮಿಯ ಮೇಣಬಸದಿ
4)  ಯಾವುದು ಅಲ್ಲ

39) *ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಇತ್ತೀಚೆಗೆ ಎಲ್ಲಿ ನಡೆಯಿತು*?

1) *ಬಿಜಾಪುರ*
2)  ಬೀದರ್
3)  ಕಲಬುರ್ಗಿ
4)  ರಾಯಚೂರು

40) *ಈ ಕೆಳಗಿನ ಯಾವ ನಗರದ ಉದ್ಯಾನವನಕ್ಕೆ ರಾಣಿ ಚನ್ನಮ್ಮನ ಹೆಸರಿಡಲಾಗಿದೆ*?

1)  ಚೆನ್ನೈ
2)  ಹೈದರಾಬಾದ್
3) *ದೆಹಲಿ*
4)  ಕೋಲ್ಕತಾ

41) *2017 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಪಡೆದರು ಯಾರೂ*?

1)  ದೇವನೂರು ಮಹಾದೇವ
2)  ಟಿ.ಸಿದ್ದಲಿಂಗಯ್ಯ
3) *ಮಲ್ಲಿಕಾರ್ಜುನ್ ಖರ್ಗೆ*
4)  ಸಚಿವ ಆಂಜನೇಯ

42) *ಯಾವ ರಾಜ್ಯ ಸರಕಾರ ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸಿದೆ*?

1) *ರಾಜಸ್ಥಾನ*
2)  ಮಧ್ಯಪ್ರದೇಶ
3)  ಪಂಜಾಬ
4)  ಹರಿಯಾಣ

43) *ಜಗತ್ತಿನ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತದ ಮೆಟ್ರೋ ಯಾವುದು*?

1)  ಕೋಲ್ಕತಾ
2)  ಮುಂಬೈ
3)  ಕೊಚ್ಚಿ
4) *ನವದೆಹಲಿ*

44) *2017 ರ ಆನೆಗಳ ಗಣತಿ ಪ್ರಕಾರ  ಕರ್ನಾಟಕ ಎಷ್ಟು ಆನೆಗಳನ್ನು ಹೊಂದಿದೆ*?

1) *6049*
2)  5719
3)  3054
4)  2761

45) *ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಲಿದೆ*?

1)  ಬೆಳಗಾವಿ
2)  ಮೖಸೂರ
3)  ಉಡುಪಿ
4) *ದಾವಣಗೆರೆ*

46) *"DIGI YATRA" ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ*?

1)  ಸಂಸದರ ವಿದೇಶಿ ಪ್ರವಾಸ
2)  ವಿಮಾನಯಾನಕ್ಕೆ ಕಡ್ಡಾಯ ಪಾಸ್ ಪೋರ್ಟ್ ವ್ಯವಸ್ಥೆ
3) *ವಿಮಾನಯಾನ ಕ್ಷೇತ್ರದಲ್ಲಿ ಕಡಿಮೆ ಪೇಪರ್ ಬಳಕೆ*
4)  ವಿದೇಶಿ ಪ್ರವಾಸಿಗರಿಗೆ ಇರುವ ಡಿಜಿಟಲ್ ವ್ಯವಸ್ಥೆ

47) *ಕರ್ನಾಟಕ ಸರ್ಕಾರ ಯಾವ ಚಿಟ್ಟೆಯನ್ನು "ರಾಜ್ಯದ ಅಧಿಕೃತ ರಾಜ್ಯ ಚಿಟ್ಟೆ" ಎಂದು ಘೋಷಿಸಿದೆ*?

1) *ಸದರನ್ ಬರ್ಡ್ ವಿಂಗ್*
2)  ಬ್ಲ್ಯು ಮಾರ್ಮನ್
3)  ರಾಕೆಟ್ ಬರ್ಡ್ ವಿಂಗ್
4)  ಯಾವುದು ಅಲ್ಲ

48) *ರಾಜ್ಯದ 6 ನೇ ವೇತನ ಆಯೋಗದ ಅಧ್ಯಕ್ಷರು ಯಾರು*?

1)  ಏ.ಕೆ.ಮಾತೂರ್
2)  *ಎಂ.ಆರ್ .ಶ್ರೀನಿವಾಸ್ ಮೂರ್ತಿ*
3)  ವೈ ವಿ ರೆಡ್ಡಿ
4)  ಯಾರೂ ಅಲ್ಲ

49) *ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಗರವನ್ನೇ ಮುಳುಗಿಸಿದ ಚಂಡಮಾರುತ ಯಾವುದು*?

1) *ಹಾರ್ವೆ*
2)  ಹರೀಕೆನ
3)  ಕರೀಷಮ
4)  ಇರಮಾ

50) *2017 ನೇ ಸಾಲಿನ "ಬಸವಶ್ರೀ ಪ್ರಶಸ್ತಿ" ಯನ್ನು ಯಾರಿಗೆ ನೀಡಲಾಗಿದೆ*?

1)  ಮಾಣಿಕ್ ಸರಕಾರ
2) *ಪಿ.ಸಾಯಿನಾಥ*
3)  ಮೆಧಾ ಪಾಟಕರ್
4)   ಯಾರೂ  ಅಲ್ಲ

51) *ಕರ್ನಾಟಕ ರಾಜ್ಯದ ಯಾವ ಗ್ರಾಮಕ್ಕೆ ಅಂತಾರಾಷ್ಟ್ರೀಯ ಗೂಗಲ್ ಪ್ರಶಸ್ತಿ ದೊರೆತಿದೆ*?

1)  ಎಚ್.ಡಿ.ಕೋಟೆ
2) *ಶಿರಗುಪ್ಪಿ*
3)  ಯಲವಾಳ
4)  ಹುಕ್ಕೇರಿ

🌻ಇದು *"ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿ ಒದಗಿಸುವ ಒಂದು ಸಣ್ಣ ಪ್ರಯತ್ನ....🌻🙏

ಗುರುವಾರ, ಡಿಸೆಂಬರ್ 14, 2017

ತಿರ್ಥಯಾತ್ರೆಯ ವಿಚಾರ....

ಹೀಗೊಂದು ಕಥೆ

ಗುರುಕುಲದಲ್ಲಿ ಓದುತ್ತಿದ್ದ  ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು,
"ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದುಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯಕ್ಷೇತ್ರಗಳಿಗೆ ತೆರಳಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬರುತ್ತೇವೆ" ಎಂದು ಹೇಳಿ ಯಾತ್ರೆಗೆ ಅನುಮತಿ ಕೋರಿದರು.

ನೀವು ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶವೇನು? ಎಂದು ಗುರುಗಳು ತಮ್ಮ ಶಿಷ್ಯರಿಗೆ ಕೇಳಿದರು.

ಇದಕ್ಕೆ ಉತ್ತರಿಸಿದ ಶಿಷ್ಯರು,
"ಗುರುಗಳೇ ನಾವು ಅಂತರಂಗಶುದ್ಧಿಗಾಗಿ ತೀರ್ಥಯಾತ್ರೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.

"ಸಂತೋಷ ಹೋಗಿಬನ್ನಿ ಶುಭವಾಗಲಿ" ಎಂದ ಗುರುಗಳು, ಯಾತ್ರೆಗೆ ಹೊರಟ ಶಿಷ್ಯರೆಲ್ಲರಿಗೂ ಒಂದೊಂದು ಹಾಗಲಕಾಯಿ ಕೊಟ್ಟು,
"ಈ ಕಾಯನ್ನೂ ನಿಮ್ಮ ಜೊತೆ ತೆಗೆದುಕೊಂಡು ಹೋಗಿ, ನೀವು ಎಲ್ಲೆಲ್ಲಿ ಸ್ನಾನ ಮಾಡುತ್ತೀರೋ ಅಲ್ಲಿ ಈ ಹಾಗಲ ಕಾಯಿಗೂ ಸ್ನಾನ ಮಾಡಿಸಿ. ನೀವು ಎಲ್ಲೆಲ್ಲಿ ದೇವರ ದರ್ಶನ ಪಡೆಯುತ್ತೀರೋ ಅಲ್ಲಿ ದೇವರ ಪಾದದ ಬಳಿ ಈ ಕಾಯಿಗಳನ್ನು ಇಟ್ಟು ಪೂಜೆ ಮಾಡಿಸಿಕೊಂಡು ಬನ್ನಿ" ಎಂದು ತಿಳಿಸಿದರು.

ಸರಿ ಎಂದ ಶಿಷ್ಯರು ಹಾಗಲಕಾಯಿಯ ಜೊತೆ ಯಾತ್ರೆ ಹೊರಟು ಒಂದು ವಾರದ ಬಳಿಕ ಹಿಂತಿರುಗಿದರು.

ಶಿಷ್ಯರನ್ನು ಕಂಡ ಗುರುಗಳು,
"ಏನು ಕ್ಷೇತ್ರ ದರ್ಶನದಿಂದ ನೀವೆಲ್ಲ ಪುನೀತರಾದಿರಾ ನಿಮ್ಮ ಅಂತರಂಗ ಶುದ್ಧಿಯಾಯಿತೇ?" ಎಂದು ಕೇಳಿದರು.

ಎಲ್ಲ ಶಿಷ್ಯರೂ ಒಕ್ಕೊರಲಿನಿಂದ ಹೌದೆಂದರು.
ಆಗ  ಗುರುಗಳು "ನೀವು ಯಾತ್ರೆಗೆ ಹೊರಡುವಾಗ ನಾನು ಕೊಟ್ಟಿದ್ದ ಹಾಗಲಕಾಯಿಗಳಿಗೆ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿದಿರಾ?, ದೇವರ ಬಳಿ ಇಟ್ಟು ಪೂಜೆ ಮಾಡಿಸಿದಿರಾ?"  ಎಂದು ಕೇಳಿದರು.

ಶಿಷ್ಯರು ಹೌದೆಂದರು.

"ಸರಿ ಹಾಗಾದರೆ ಈ ಕಾಯಿಗಳನ್ನು ಹಾಕಿ ಇಂದು ಅಡುಗೆ ಮಾಡಿಸಿ" ಎಂದು ಅಪ್ಪಣೆ ಕೊಡಿಸಿದರು.

ಊಟಕ್ಕೆ ಕುಳಿತಾಗ ಹಾಗಲ ಕಾಯಿ ತಿಂದ ಗುರುಗಳು,
"ಅಯ್ಯೋ! !!.. ಇದೇನು ಇಷ್ಟು ಕಹಿಯಾಗಿದೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ಉತ್ತರ ಕೊಟ್ಟ ಶಿಷ್ಯ
"ಅಲ್ಲ ಗುರುಗಳೇ ಹಾಗಲ ಕಾಯಿಯ ಗುಣವೇ ಕಹಿ ಅದು ಸಿಹಿ ಆಗಲು ಹೇಗೆ ಸಾಧ್ಯ?" ಎಂದು ಕೇಳಿದರು.

ಆಗ ಗುರುಗಳು ಹೇಳಿದರು
"ಪವಿತ್ರ ಸ್ನಾನ ಮಾಡಿ, ದೇವರ ದರ್ಶನ ಮಾಡಿದ ಮಾತ್ರಕ್ಕೆ ನಿಮ್ಮ ಅಂತರಂಗಶುದ್ಧಿ ಆಗುವುದಾದರೆ ಈ ಹಾಗಲ ಕಾಯಿಯೂ ನಿಮ್ಮೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ ಪುನೀತವಾಗಿದೆ. ದೇವರ ದರ್ಶನದಿಂದ ಇದರ ಅಂತರಂಗ ಶುದ್ಧಿ ಆಗಿರಬೇಕಲ್ಲ. ಹಾಗಾದರೆ ಸಿಹಿ ಆಗುವ ಬದಲು ಕಹಿ ಏಕಾಯಿತು?" ಎಂದು ಪ್ರಶ್ನಿಸಿದರು.

ಗುರುಗಳ ಅಂತರ್ಯ ಅರಿತ ಶಿಷ್ಯರು ತಲೆ ತಗ್ಗಿಸಿ ನಿಂತರು.

ಆಗ ಗುರುಗಳು ಹೇಳಿದರು
"ಮಾಡುವ ಪಾಪವನ್ನೆಲ್ಲಾ ಮಾಡಿ ದೇವರ ಬಳಿ ಹೋದರೆ ನೀವು ಪುನೀತರಾಗುವುದಿಲ್ಲ.
ನಿಮ್ಮಲ್ಲಿ ದುರ್ಗುಣ ತುಂಬಿಕೊಂಡು ಪುಣ್ಯ ಸ್ನಾನ ಮಾಡಿದರೆ ನಿಮ್ಮ ಅಂತರಂಗ ಶುದ್ಧಿ ಆಗುವುದಿಲ್ಲ.
ಮೊದಲು ನಿಮ್ಮ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಿ.
ಸತ್ಯವನ್ನೇ ನುಡಿಯಿರಿ,
ಧರ್ಮದಿಂದ ನಡೆಯಿರಿ,
ಎಲ್ಲರನ್ನೂ ನಿಮ್ಮಂತೆಯೇ ಕಾಣಿ.
ಮೋಸ, ವಂಚನೆ ಮಾಡಬೇಡಿ, ಜಗತ್ತಿನಲ್ಲಿರುವ ಎಲ್ಲವೂ ನನಗೇ ಬೇಕು ಎಂದು ಕೂಡಿಡುವ ಮನೋಸ್ಥಿತಿ ಬಿಡಿ (ಭ್ರಷ್ಟಾಚಾರ),
ನಿಮ್ಮ ಬದುಕನ್ನು ಪರೋಪಕಾರಕ್ಕೆ ಮೀಸಲಿಡಿ.
ಆಗ ಭಗವಂತನೂ ಮೆಚ್ಚುತ್ತಾನೆ.
ನೀವೂ ಪುನೀತರಾಗುತ್ತೀರಿ" ಎಂದು ಹೇಳಿದರು.

ಈ ಪುಟ್ಟ ಕಥೆ ಎಷ್ಟು ಅರ್ಥಪೂರ್ಣ ಅಲ್ಲವೇ.?

ದೇವರು ನೈವೆದ್ಯ ತಿಂತಾನಾ?

ನಿಮ್ಮ ದೇವರು ನೈವೇದ್ಯ ತಿಂತಾನಾ?

ಒಂದು ಅದ್ಭುತ ವಿಚಾರದ
ವಿಶ್ಲೇಷಣೆಯ ಸಂವಾದ ಈ ಕೆಳಗಿದೆ.

ಓದಿ ಅನುಭವಿಸಿ ಮತ್ತು ಆನಂದಿಸಿ.

ನೈವೇದ್ಯ :  ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?

ಇದು ನಂಬಿಕೆಯಿಲ್ಲದವರ ಪ್ರಶ್ನೆ.  ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ.

ಒಬ್ಬ ಗುರು ಮತ್ತು  ಶಿಷ್ಯರ ಸಂವಾದ ಹೀಗೆ ನಡೆದಿತ್ತು.
 
ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ.

ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ  ತಯಾರಾಗಲು ಆದೇಶಿಸಿದರು. 

ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.  

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ  ಕಂಠಸ್ಥ ಹೇಳಿ, ಒಪ್ಪಿಸಿದ. 

ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ  ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ.

" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು  " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು. 

ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.  

"ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ.

ನಾವು ಉಣ್ಣುವ ಆಹಾರದಲ್ಲಿ 'ಭಕ್ತಿ' ಹೊಕ್ಕರೆ
ಅದು ' ಪ್ರಸಾದ' ವಾಗುತ್ತದೆ.....

ನಮ್ಮ ಹಸಿವಿಗೆ 'ಭಕ್ತಿ' ಹೊಕ್ಕರೆ
ಅದು ' ಉಪವಾಸ' ವಾಗುತ್ತದೆ...... 

ನಾವು 'ಭಕ್ತಿ' ಕುಡಿದರೆ
ಅದು 'ಚರಣಾಮೃತ' ವಾಗುತ್ತದೆ...... 

ನಮ್ಮ ಪ್ರಯಾಣ ' ಭಕ್ತಿ' ಪೂರ್ಣವಾದರೆ
ಅದು ' ತೀರ್ಥಯಾತ್ರೆ' ಯಾಗುತ್ತದೆ.......  

ನಾವು ಹಾಡುವ ಸಂಗೀತ' ಭಕ್ತಿ' ಮಯವಾದರೆ
ಅದು 'ಕೀರ್ತನೆ'ಯಾಗುತ್ತದೆ......

ನಮ್ಮ ವಾಸದ ಮನೆಯೊಳಕ್ಕೆ' ಭಕ್ತಿ ' ತುಂಬಿದರೆ
ನಮ್ಮ ಮನೆಯೇ ' ಮಂದಿರ ' ವಾಗುತ್ತದೆ.......

ನಮ್ಮ ಕ್ರಿಯೆ ' ಭಕ್ತಿ' ಪೂರಿತವಾದರೆ
ನಮ್ಮ ಕಾರ್ಯಗಳು ' ಸೇವೆ' ಯಾಗುತ್ತದೆ..... 

ನಾವು ಮಾಡುವ ಕೆಲಸದಲ್ಲಿ' ಭಕ್ತಿ ' ಇದ್ದರೆ
ಅದು ನಮ್ಮ ' ಕರ್ಮ ' ವಾಗುತ್ತದೆ..... 

ನಮ್ಮ ಹೃದಯದಲ್ಲಿ ' ಭಕ್ತಿ ' ತುಂಬಿದರೆ
ನಾವು ಮಾನವರಾಗುತ್ತೇವೆ.....

ನಮ್ಮ ವಿಚಾರವಿನಿಮಯದಲ್ಲಿ ' ಭಕ್ತಿ' ಇದ್ದರೆ
ಅದು ' ಸತ್ಸಂಗ' ವಾಗುತ್ತದೆ....

ಶನಿವಾರ, ಡಿಸೆಂಬರ್ 9, 2017

ಕುವೆಂಪು ಮತ್ತು ರಾಜಕೀಯ

#ಕುವೆಂಪು_ಮತ್ತು_ರಾಜಕೀಯ

ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕೆಯನ್ನು ಕುವೆಂಪು ಮೌಲ್ಯಮಾಪನ ಮಾಡಿದರು. ನೂರಕ್ಕೆ 17 ಅಂಕವನ್ನು ಕೊಟ್ಟರು. ಇದು ಆಗಿನ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎನ್.ಎಸ್.ಸುಬ್ಬರಾವ್ ಅವರಿಗೆ ಗೊತ್ತಾಯಿತು. ಅಲ್ಲದೆ ಈ ವಿಷಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೂ ತಿಳಿಯಿತು. ಕುಲಪತಿ ಅವರು ಈ ಬಗ್ಗೆ ವಿಚಾರಣೆ ನಡೆಸಲು ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಂಡರು.

ವೆಂಕಣ್ಣಯ್ಯ ಅವರು ಕುವೆಂಪು ಅವರನ್ನು ಕರೆದು, `ಏನಯ್ಯ, ರಾಜಕುಮಾರರಿಗೆ 17 ಅಂಕ ನೀಡಿದ್ದೀಯಲ್ಲ' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕುವೆಂಪು, `ನಾನು ನೀಡಿದ್ದಲ್ಲ. ಅವರು ತೆಗೆದುಕೊಂಡಿದ್ದು ಅಷ್ಟು' ಎಂದು ಉತ್ತರಿಸಿದರು. `ಅದನ್ನು 71 ಮಾಡಲು ಸಾಧ್ಯವಿಲ್ಲವೇ?' ಎಂದು ವೆಂಕಣ್ಣಯ್ಯ ಕೇಳಿದಾಗ, `ಉತ್ತರ ಪತ್ರಿಕೆಯನ್ನು ನೀವೇ ನೋಡಿ. ಎಷ್ಟು ಬೇಕಾದರೂ ಅಂಕ ಕೊಡಿ' ಎಂದು ಕುವೆಂಪು ಹೇಳಿದರಂತೆ.

ಇದರಿಂದ ಮಹಾರಾಜರೇನೂ ಸಿಟ್ಟಾಗಲಿಲ್ಲ. ಬದಲಿಗೆ ಕುವೆಂಪು ಅವರಿಗೆ ವಾರಕ್ಕೆ ಮೂರು ದಿನ ಅರಮನೆಗೆ ಬಂದು ಯುವ ರಾಜರಿಗೆ ಪಾಠ ಮಾಡಿ. ನಿಮ್ಮನ್ನು ಕರೆದುಕೊಂಡು ಬರಲು ಕಾರು ಕಳುಹಿಸಲಾಗುತ್ತದೆ. ಅಲ್ಲದೆ ನೂರು ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಿದರಂತೆ. ಆದರೆ ಅದಕ್ಕೂ ಕುವೆಂಪು ಒಪ್ಪಲಿಲ್ಲ. ಮಹಾರಾಜರ ಆಹ್ವಾನವನ್ನು ತಿರಸ್ಕರಿಸಿದ್ದೇ ಅಲ್ಲದೆ ಒಂದು ಕವನವನ್ನೂ ಬರೆದರು.

ವಸಂತ ವನದಲ್ಲಿ ಕೂಗುವ ಕೋಗಿಲೆ
ರಾಜರ ಬಿರುದನ್ನು ಬಯಸುವುದಿಲ್ಲ
ಕವಿಗೆ ಅರಸುಗಿರಸುಗಳ ಋಣವಿಲ್ಲ
ಅವನು ಅಗ್ನಿಮುಖಿ ಪ್ರಳಯ ಶಿಖಿ

ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಇನ್ನೂ ಮಾನಸ ಗಂಗೋತ್ರಿಗೆ ಸಂಪೂರ್ಣವಾಗಿ ಸ್ಥಳಾಂತರವಾಗಿರಲಿಲ್ಲ. ಸ್ಥಳಾಂತರಕ್ಕೆ ಸಾಕಷ್ಟು ಮಂದಿಯ ವಿರೋಧ ಕೂಡ ಇತ್ತು. ಮಾನಸ ಗಂಗೋತ್ರಿಗೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಸಾಹಸದಲ್ಲಿ ಕುವೆಂಪು ನಿರತರಾಗಿದ್ದರು.

ಮಾಜಿ ಕೇಂದ್ರ ಸಚಿವರೂ ಆಗಿದ್ದ ಸಿ.ಡಿ.ದೇಶಮುಖ್ ಅವರು ಆಗ ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ತಮ್ಮ ಪತ್ನಿ ಜೊತೆಗೆ ಕೃಷ್ಣರಾಜಸಾಗರಕ್ಕೆ ಬಂದು ಉಳಿದುಕೊಂಡಿದ್ದರು. ಹೀಗೆ ಬಂದ ದೇಶಮುಖ್ ಅವರಿಗೆ ಜ್ವರ ಬಂದು ನಾಲ್ಕು ದಿನ ಇಲ್ಲಿಯೇ ಉಳಿದುಕೊಳ್ಳುವಂತೆ ಆಯಿತು. ಆಗ ಪ್ರತಿ ದಿನ ಕುವೆಂಪು ಕೆಆರ್‌ಎಸ್‌ಗೆ ಹೋಗಿ ಅವರನ್ನು ನೋಡಿಕೊಂಡು ಬರುತ್ತಿದ್ದರಂತೆ.  ದೇಶಮುಖ್ ಅವರ ಪತ್ನಿ ಒಳ್ಳೆ ಕವಯತ್ರಿ. ಕುವೆಂಪು ಅವರು ಅಲ್ಲಿಗೆ ಹೋದಾಗ ಇವರೊಂದು ಅವರೊಂದು ಕವನ ವಾಚಿಸುತ್ತಿದ್ದರಂತೆ.

ಆಗಿನ್ನು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಯುಜಿಸಿ ವೇತನ ಸಿಗುತ್ತಿರಲಿಲ್ಲ. ಕುವೆಂಪು ಈ ಬಗ್ಗೆ ದೇಶಮುಖ್ ಅವರಲ್ಲಿ ಪ್ರಸ್ತಾಪಿಸಿದಾಗ, `ನಿಮ್ಮ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕಳುಹಿಸಿದರೆ ತಕ್ಷಣವೇ ಅದಕ್ಕೆ ಒಪ್ಪಿಗೆ ಕೊಡುತ್ತೇನೆ' ಎಂಬ ಭರವಸೆಯನ್ನು ನೀಡಿದರು.

ಖುಷಿಯಾದ ಕುವೆಂಪು ಈ ಬಗ್ಗೆ ಚರ್ಚೆ ನಡೆಸಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ `ತಮ್ಮನ್ನು ಕಾಣಲು ಬರಬೇಕು. ನಿಮ್ಮ ಸಮಯ ತಿಳಿಸಿ' ಎಂದು ಕೇಳಿಕೊಂಡರು. ಅದಕ್ಕೆ ನಿಜಲಿಂಗಪ್ಪ `ನೀವು ನನ್ನನ್ನು ನೋಡಲು ಇಲ್ಲಿಗೆ ಬರುವುದಾ? ನನಗೆ ಅವಮಾನ ಮಾಡಬೇಡಿ. ನಮ್ಮ ಶಿಕ್ಷಣ ಸಚಿವರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಚರ್ಚೆ ಮಾಡಿ. ನಾನು ಎಲ್ಲ ಅನುಕೂಲ ಮಾಡಿಕೊಡುತ್ತೇನೆ' ಎಂದು ಉತ್ತರಿಸಿದರು.

ಅದರಂತೆ ಆಗಿನ ಶಿಕ್ಷಣ ಸಚಿವ ವಿ.ವೆಂಕಟಪ್ಪ ಕುವೆಂಪು ಅವರ ಬಳಿಗೆ ಬಂದು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಆಲಿಸಿದರು. ಯುಜಿಸಿಗೆ ಸೂಕ್ತ ಪ್ರಸ್ತಾವನೆಯನ್ನೂ ಸಲ್ಲಿಸಿದರು. ಅಲ್ಲದೆ ಮಾನಸ ಗಂಗೋತ್ರಿಯಲ್ಲಿ ಸಂಚರಿಸಿ ಅಲ್ಲಿ ಮೂರು ಕಟ್ಟಡಗಳನ್ನು ನಿರ್ಮಿಸಲು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ನೀಡಲು ಒಪ್ಪಿಕೊಂಡರು.
***
ಕುವೆಂಪು ಅವರು ಕರ್ನಾಟಕ ಏಕೀಕರಣದ ಪರವಾಗಿದ್ದರು. ಇದರಿಂದ ಮೈಸೂರು ಭಾಗದ ರಾಜಕಾರಣಿಗಳು ಸಿಟ್ಟಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕುವೆಂಪು ಅವರಿಗೆ ಒಂದು ನೋಟಿಸ್ ಜಾರಿ ಮಾಡಿತು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಕೇಳಿತು. ಅದಕ್ಕೆ ಕುವೆಂಪು ಪದ್ಯದ ರೂಪದಲ್ಲಿಯೇ ಉತ್ತರ ಬರೆದರು. ಆ ಪದ್ಯವೇ ಕುವೆಂಪು ಅವರ ಪ್ರಸಿದ್ಧ `ಅಖಂಡ ಕರ್ನಾಟಕ' ಪದ್ಯ.
ರಾಜ್ಯ ಸರ್ಕಾರದ ನೋಟಿಸ್‌ಗೆ ಕುವೆಂಪು ಉತ್ತರ ಹೀಗಿದೆ:

ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಹರಸುತಿಹನು ದೇವ ಗಾಂಧಿ
ಮಂತ್ರಿಸಿಹುದು ಋಷಿಯ ನಾಂದಿ
*
ಅಖಂಡ ಕರ್ನಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
*
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ
***
ಕುವೆಂಪು ಅವರ ಪದ್ಯರೂಪದ ಉತ್ತರ ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಅವರನ್ನು ಮೆಳ್ಳಗಣ್ಣು ಎಂದು ಟೀಕಿಸಿದ್ದು ಕೂಡ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿತ್ತು. ಮೈಸೂರಿನಲ್ಲಿ ಕೆಲವರು ಈ ಪದ್ಯವನ್ನು ಸಾವಿರಾರು ಪ್ರತಿ ಮಾಡಿ ಹಂಚಿಬಿಟ್ಟರು. ವಿಷಯ ಸಚಿವ ಸಂಪುಟದ ಮುಂದೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದವರು ಕೆ.ಸಿ.ರೆಡ್ಡಿ. ಸಂಪುಟ ಸಭೆಯಲ್ಲಿ ಕೆಲವು ಸಚಿವರು ಕುವೆಂಪು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅವರ ಬಡ್ತಿ ರದ್ದು ಮಾಡಬೇಕು. ಇನ್ನೊಂದು ನೋಟಿಸ್ ನೀಡಬೇಕು ಎಂದೆಲ್ಲಾ ಒತ್ತಾಯಿಸಿದರು.

ಆಗ ಕೆ.ಸಿ.ರೆಡ್ಡಿ ಅವರು `ಒಂದು ನೋಟಿಸ್‌ಗೆ ಈ ಪದ್ಯ ಬರೆದಿದ್ದಾರೆ. ಇನ್ನೊಂದು ನೋಟಿಸ್ ನೀಡಿದರೆ ಮತ್ತೆ ಮೂರು ಪದ್ಯ ಬರೆಯಬಹುದು. ಬೆಂಕಿಯ ಜೊತೆ ಸರಸ ಒಳ್ಳೆಯದಲ್ಲ' ಎಂದು ಹೇಳಿ ಈ ಬಗ್ಗೆ ತಾವು ವಿಚಾರಣೆ ನಡೆಸುವುದಾಗಿ ಹೇಳಿದರು.

ಅದರಂತೆ ಕೆ.ಸಿ.ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸರಾಯರ ಬಳಿ ಈ ಬಗ್ಗೆ ಚರ್ಚೆ ನಡೆಸಿದರು. ಆಗ ನಿಟ್ಟೂರು ಶ್ರೀನಿವಾಸರಾಯರು `ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸು ಪಡೆಯುವುದೇ ಸೂಕ್ತ' ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು. ರೆಡ್ಡಿ ಅವರು ಕುವೆಂಪು ಅವರಿಗೆ ನೀಡಿದ್ದ ನೋಟಿಸ್ ವಾಪಸು ಪಡೆದರು.
***
1929ರ ವೇಳೆಗೆ ಕುವೆಂಪು ಇನ್ನೂ ಯುವಕರು. ಶ್ರೀರಂಗಪಟ್ಟಣದಲ್ಲಿ ಒಂದು ಭಾಷಣ ಮಾಡಿದರು. `ನಿರಂಕುಶಮತಿಗಳಾಗಿ' ಎಂದು ಜನರಿಗೆ ಕರೆ ನೀಡಿದರು. ಸರ್ಕಾರದ ವಿರುದ್ಧ, ಮೂಢ ನಂಬಿಕೆಗಳ ವಿರುದ್ಧ ಅವರು ಮಾತನಾಡಿದ್ದು ಕೂಡ ಅಧಿಕಾರಸ್ಥರನ್ನು ಕೆರಳಿಸಿತು. ಈ ಬಗ್ಗೆ ವರದಿ ನೀಡುವಂತೆ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಳ್ಳಲಾಯಿತು. ವೆಂಕಣ್ಣಯ್ಯ ಅವರು ಕುವೆಂಪು ಅವರ ಭಾಷಣವನ್ನು ಪರಿಶೀಲಿಸಿ `ನನ್ನ ಮಗನಿಗೆ ಬುದ್ಧಿ ಹೇಳಿ ಎಂದು ಯಾರಾದರೂ ಹೇಳಿದರೆ ನಾನು ಇದಕ್ಕಿಂತ ಚೆನ್ನಾಗಿ ಹೇಳಲಾಗದು' ಎಂದು ಸರ್ಕಾರಕ್ಕೆ ವರದಿ ನೀಡಿದರು. ಅದು ಅಲ್ಲಿಗೇ ನಿಂತಿತು
***
ಕುವೆಂಪು ಅವರಿಗೆ ವಿನೋಬಾ ಭಾವೆ ಅವರನ್ನು ಕಂಡರೆ ತುಂಬಾ ಗೌರವ. ಯಾವಾಗಲೂ ಅವರನ್ನು ಹೊಗಳುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಕಾರ್ಯಕ್ರಮ. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆ. ಕುವೆಂಪು ಅತಿಥಿಗಳು. ಕುವೆಂಪು ತಮ್ಮ ಭಾಷಣದಲ್ಲಿ ವಿನೋಬಾ ಅವರನ್ನು ಸಾಕಷ್ಟು ಹೊಗಳಿದರು. ಇದು ಕೆಂಗಲ್ ಅವರಿಗೆ ಸರಿಕಾಣಲಿಲ್ಲ. ಅವರು ತಮ್ಮ ಭಾಷಣದಲ್ಲಿ ಕುವೆಂಪು ಅವರು ವಿನೋಬಾ ಅವರನ್ನು ಹೊಗಳಿದ್ದು ಹೆಚ್ಚಾಯಿತು ಎಂದರು. ಇದರಿಂದ ಕುವೆಂಪು ಸಿಟ್ಟಾದರಲ್ಲದೆ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಕೆಂಗಲ್ ಕಸಿವಿಸಿಗೊಂಡರು. ಈ ಸುದ್ದಿ ಯಾವ ಪತ್ರಿಕೆಯಲ್ಲೂ ಬರದಂತೆ ನೋಡಿಕೊಂಡರು.

ಆದರೆ ಈ ಘಟನೆ ಕೆಂಗಲ್ ಮತ್ತು ಕುವೆಂಪು ಅವರ ಸಂಬಂಧವನ್ನು ಹಾಳು ಮಾಡಲಿಲ್ಲ. ಮುಂದೆ ಕುವೆಂಪು ಅವರನ್ನು ಮಹಾರಾಜ ಕಾಲೇಜು ಪ್ರಾಂಶುಪಾಲರನ್ನಾಗಿ ಮಾಡಿದ್ದು ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿದ್ದು ಕೂಡ ಕೆಂಗಲ್ ಹನುಮಂತಯ್ಯ ಅವರೆ.

ಕೆಂಗಲ್ ಹನುಮಂತಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿತ್ತು. ಅವರನ್ನು ಕೆಳಕ್ಕೆ ಇಳಿಸಲು ಕಸರತ್ತುಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಒಮ್ಮೆ ಕುವೆಂಪು ಅವರು ಕೆಂಗಲ್ ಹುನುಮಂತಯ್ಯ ಅವರನ್ನು ನೋಡಲು ಅವರ ಮನೆಗೆ ಹೋದರು. ಆಗ ಹನುಮಂತಯ್ಯ ಪ್ಲೇಟೋನ `ರಿಪಬ್ಲಿಕ್' ಪುಸ್ತಕವನ್ನು ಓದುತ್ತಿದ್ದರು. ಅದನ್ನು ಕಂಡು ಕುವೆಂಪು ಅವರಿಗೆ ಅಚ್ಚರಿಯಾಯಿತು.

`ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ನಿಮ್ಮ ವಿರೋಧಿಗಳು ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಆದರೂ ನೀವು ಶಾಂತವಾಗಿ ರಿಪಬ್ಲಿಕ್ ಓದುತ್ತಿದ್ದೀರಲ್ಲ?' ಎಂದು ಕೆಂಗಲ್‌ರನ್ನು ಕುವೆಂಪು ಕೇಳಿದರು.

`ಪುಟ್ಟಪ್ಪ, ನಾನು ನನ್ನ ಬದುಕಿನಲ್ಲಿ ಹಲವಾರು ಬಾರಿ ಆತ್ಮಹತ್ಯೆಗೆ ಮನಸ್ಸು ಮಾಡಿದ್ದೆ. ಆಗೆಲ್ಲಾ ನನ್ನನ್ನು ರಕ್ಷಿಸಿದ್ದು ರಾಮಾಯಣ, ಮಹಾಭಾರತ, ಪ್ಲೇಟೊ, ಅರಿಸ್ಟಾಟಲ್ ಮುಂತಾದವರು. ಈಗ ಅದೆಲ್ಲಾ ಯಾಕೆ. ನೀವು ಅಕ್ಷರದಲ್ಲಿ ಮಹಾಕಾವ್ಯ ರಚಿಸಿದ್ದೀರಿ. ನಾನು ಕಲ್ಲಿನಲ್ಲಿ ಮಹಾಕಾವ್ಯ ರಚಿಸಿದ್ದೇನೆ. ನೋಡೋಣ ಬನ್ನಿ' ಎಂದು ಕುವೆಂಪು ಅವರನ್ನು ವಿಧಾನಸೌಧ ತೋರಿಸಲು ಕರೆದುಕೊಂಡು ಹೋದರು. ಈ ಘಟನೆ ನಡೆದಾಗ ದೇಜಗೌ ಅವರು ಕುವೆಂಪು ಅವರೊಂದಿಗೆ ಇದ್ದರು.
***
ಒಮ್ಮೆ ವಿನೋಬಾ ಭಾವೆ ಅವರು ಮೈಸೂರಿಗೆ ಬಂದಿದ್ದರು. ಅವರನ್ನು ಕಾಣಲು ಕುವೆಂಪು ಹೋದರು. ಕುವೆಂಪು ಅವರ `ರಾಮಾಯಣ ದರ್ಶನಂ' ಕಾವ್ಯವನ್ನು ವಿನೋಬಾ ಭಾವೆ ಅವರೂ ಓದಿದ್ದರು. ಭಾವೆ ಅವರನ್ನು ಭೇಟಿ ಮಾಡಿ ಹೊರಡುವಾಗ ಕುವೆಂಪು ಅವರಿಗೆ ವಿನೋಬಾ ಅವರು, `ನೀವು ನಿಮ್ಮ ಮನೆಗೆ ನನ್ನನ್ನು ಕರೆದೇ ಇಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕುವೆಂಪು ಉತ್ತರ `ಧನ್ಯೋಸ್ಮಿ' ಎಂದಷ್ಟೆ.

ನಂತರ ವಿನೋಬಾ ಕುವೆಂಪು ಅವರ `ಉದಯ ರವಿ'ಗೆ ಬಂದರು. ಕುವೆಂಪು `ರಾಮಾಯಣ ದರ್ಶನಂ' ಬರೆದ ಜಾಗವನ್ನು ಕೇಳಿ ತಿಳಿದುಕೊಂಡು ಅಲ್ಲಿಯೇ ಕೊಂಚ ಕಾಲ ಧ್ಯಾನಸ್ಥರಾಗಿ ಕುಳಿತುಕೊಂಡರು. ಕೆಲವರಿಂದ `ರಾಮಾಯಣ ದರ್ಶನಂ'ನ ಕೆಲವು ಭಾಗಗಳನ್ನು ಮತ್ತೆ ಓದಿಸಿಕೊಂಡರು. ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿಯೂ ಕುವೆಂಪು ಅವರನ್ನು `ಸಂತ' ಎಂದು ಕರೆದು ಹೊಗಳಿದರು.
***
ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು. ಆಗ ಒಬ್ಬ ಸಚಿವರು ಕುವೆಂಪು ಅವರಿಗೆ ಫೋನ್ ಮಾಡಿ ತಮ್ಮ ಕಡೆಯವರನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಿದರು. ಕುವೆಂಪು ನಿರಾಕರಿಸಿದರು. ಅದಕ್ಕೆ ಸಚಿವರು `ನನ್ನ ಮಾತನ್ನೇ ಕೇಳುವುದಿಲ್ಲವೇ ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದರು. ಆಗ ಕುವೆಂಪು `ಏನ್ ನೋಡಿಕೊಳ್ಳುತ್ತೀಯಾ, ರ‌್ಯಾಸ್ಕಲ್' ಎಂದು ಫೋನ್ ಇಟ್ಟುಬಿಟ್ಟರು. ಈ ಘಟನೆಗೂ ತಾವೇ ಸಾಕ್ಷಿ ಎಂದು ದೇಜಗೌ ಹೇಳುತ್ತಾರೆ.
***
ರಾಜಕೀಯ ಮತ್ತು ರಾಜಕಾರಣದ ಬಗ್ಗೆ ಕುವೆಂಪು ಅವರಿಗೆ ಸಿಟ್ಟಿತ್ತು. ಅವರು ತಮ್ಮ `ವಿಚಾರ ಕ್ರಾಂತಿಗೆ ಆಹ್ವಾನ' ಎಂಬ ಭಾಷಣದಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ, ಅಧಿಕಾರ, ಶಿಕ್ಷಣ ರಂಗದಲ್ಲಿ ನಿರ್ಲಜ್ಜರಾಗಿ ಪಾಪಮಯ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಮ್ಮಲ್ಲಿ `ಡೆಮಾಕ್ರಸಿ' ಎನ್ನುವುದು ಬರಿಯ `ಮಾಕರಿ'ಯಾಗಿದೆ. ಕೋಟ್ಯಧೀಶರಲ್ಲದವರು ಚುನಾವಣೆಯಲ್ಲಿ ಗೆಲ್ಲುವುದು ಹಾಗಿರಲಿ, ನಿಲ್ಲುವುದು ಕೂಡ ಅಸಾಧ್ಯವಾಗಿದೆ. ಜಾತಿ, ಮತ, ಹೆಂಡ, ದುಡ್ಡು ಇವೇ ಓಟರುಗಳಾಗಿವೆ. ಓಟು ಕೊಡುವ ಪ್ರಜೆಗಳು ಬರಿಯ ನಿಮಿತ್ತ ಮಾತ್ರ. ಮೂಕ ವಾಹನಗಳಷ್ಟೆ. ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ ಯಾವ ಉಪಾಯದಿಂದಾದರೂ ಕಾಳಸಂತೆಯ ಕಪ್ಪು ಹಣವೋ, ಕಳ್ಳ ಸಾಗಾಣಿಕೆಯ ಹಳದಿ ಹಣವೋ ಅಂತೂ ಹೆಚ್ಚು ಹಣ ಒಟ್ಟು ಮಾಡಿದರಾಯ್ತು ಚುನಾವಣೆ ಗೆಲ್ಲಬಹುದು.

ಒಮ್ಮೆ ಗೆದ್ದು ಅಧಿಕಾರ ಹಿಡಿದರಾಯ್ತು. ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನು ಅಧಿಕಾರದ ಭಯದಿಂದಲೋ ದುಡ್ಡಿನ ಬಲದಿಂದಲೋ ವಶಪಡಿಸಿಕೊಳ್ಳಬಹುದು. ಒಮ್ಮೆ ಜನಶಕ್ತಿ ಪ್ರತಿಭಟನೆಗೆ ನಿಂತರೂ ಪೊಲೀಸ್, ಸೇನೆ ಬಳಸಿ ವಿಫಲಗೊಳಿಸಬಹುದು ಎಂದು ಅವರು ಆಗಲೇ ಸಿಟ್ಟು ಕಾರಿದ್ದರು. ಗುಡುಗಿದ್ದರು. ಈಗಿನ ರಾಜಕೀಯವನ್ನು ನೋಡಿದ್ದರೆ ಏನು ಹೇಳುತ್ತಿದ್ದರೋ ಏನೋ?

ಚಿತ್ರಗಳು: ಲೀಲಾ ಅಪ್ಪಾಜಿ ಅವರ ಸಂಗ್ರಹ