ಭಾನುವಾರ, ಜನವರಿ 30, 2022

ಆಸ್ಟ್ರೇಲಿಯನ್ ಓಪನ್ ಗೆಲುವು ; 21 ನೇ ಗ್ರ್ಯಾನ್ ಸ್ಲಾಮ್ ಗೆದ್ದ ನಡಾಲ್ ವಿಶ್ವ ದಾಖಲೆ.

ಮೆಲ್ಬರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2022 ಟೆನಿಸ್ ಟೂರ್ನಿ ಗೆದ್ದಿರುವ ಸ್ಪೇನ್‌ನ ರಫೆಲ್ ನಡಾಲ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.

ಭಾನುವಾರ ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ನಡಾಲ್, ಎರಡನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 2-6, 6-7(5/7), 6-4, 6-4, 7-5ರ ಕಠಿಣ ಅಂತರದಲ್ಲಿ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಈ ಮೂಲಕ ಸಮಕಾಲೀನ ದಿಗ್ಗಜರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್‌ ದಾಖಲೆಯನ್ನು ಮುರಿದು ಟೆನಿಸ್ ಅಂಗಣದ ನೂತನ ರಾಜ ಎನಿಸಿದ್ದಾರೆ.

ಪುರುಷ ಸಿಂಗಲ್ಸ್ ವಿಭಾಗದಲ್ಲಿ ಫೆಡರರ್ ಹಾಗೂ ಜೆಕೊವಿಚ್ ತಲಾ 20 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ದಾಖಲೆಯನ್ನೀಗ ಮುರಿದಿರುವ ನಡಾಲ್, ಪುರುಷ ಸಿಂಗಲ್ಸ್ ಇತಿಹಾಸದಲ್ಲೇ 21 ಗ್ರ್ಯಾನ್ ಸ್ಲಾಂ ಗೆದ್ದ ವಿಶ್ವದ ಮೊದಲ ಟೆನಿಸ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಎಲ್ಲ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ಬಿರುದಿಗೆ ಪಾತ್ರರಾಗಿದ್ದಾರೆ.

ಈ ಗೆಲುವು ನಡಾಲ್‌ ಪಾಲಿಗೆ ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಸಾಕಷ್ಟು ಬೆವರಿಳಿಸಬೇಕಾಯಿತು. ಐದು ತಾಸು 24 ನಿಮಿಷಗಳ ವರೆಗೆ ಸಾಗಿದ ಮ್ಯಾರಾಥನ್ ಹೋರಾಟದ ಅಂತ್ಯದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.

ನಡಾಲ್ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳು 21:

(ಫ್ರೆಂಚ್ ಓಪನ್: 2005, 2006, 2007, 2008, 2010, 2011, 2012, 2013, 2014, 2017, 2018, 2019, 2020);

ವಿಂಬಲ್ಡನ್‌ (2008, 2010)

ಅಮೆರಿಕ ಓಪನ್ (2010, 2013, 2017, 2019)

ಆಸ್ಟ್ರೇಲಿಯನ್ ಓಪನ್ (2009, 2022)

ಗೆಲುವಿನ ಹಾದಿ:

ಮೊದಲ ಸುತ್ತು: ಅಮೆರಿಕದ ಮಾರ್ಕೋಸ್ ಗಿರಾನ್‌ ಎದುರು 6-1, 6-4, 6-2ರಲ್ಲಿ ಜಯ

ಎರಡನೇ ಸುತ್ತು: ಜರ್ಮನಿಯ ಯಾನಿಕ್ ಹಂಫ್‌ಮ್ಯಾನ್‌ ವಿರುದ್ಧ 6-2, 6-3, 6-4ರಲ್ಲಿ ಜಯ

ಮೂರನೇ ಸುತ್ತು: ರಷ್ಯಾದ ಕರೇನ್ ಖಚನೊವ್‌ ಎದುರು 6-3, 6-2, 3-6, 6-1ರಲ್ಲಿ ಗೆಲುವು

ನಾಲ್ಕನೇ ಸುತ್ತು: ಫ್ರಾನ್ಸ್‌ನ ಅಡ್ರಿಯನ್ ಮನಾರಿನೊ ವಿರುದ್ಧ 7-6 (16/14) 6-2, 6-2ರಲ್ಲಿ ಜಯ

ಕ್ವಾರ್ಟರ್ ಫೈನಲ್‌: ಕೆನಡಾದ ಡೆನಿಸ್ ಶಪೊವಲೊವ್‌ ವಿರುದ್ಧ 6-3, 6-4, 4-6, 3-6, 6-3ರಲ್ಲಿ ಜಯ

ಸೆಮಿಫೈನಲ್: ಇಟಲಿಯ ಮಟಿಯೊ ಬೆರೆಟಿನಿ ಎದುರು 6-3, 6-2, 3-6, 6-3ರಲ್ಲಿ ಗೆಲುವು

ಫೈನಲ್: ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 2-6, 6-7(5/7), 6-4, 6-4, 7-5ರಲ್ಲಿ ಗೆಲುವು.

ಮಂಗಳವಾರ, ಜನವರಿ 18, 2022

ಕಥಕ್ ಕುಟುಂಬದ ಬಿರ್ಜು ಮಹಾರಾಜ್

ಕಥಕ್ ಕುಟುಂಬದ ಬಿರ್ಜು ಮಹಾರಾಜ್

ಕಥಕ್‌ ನೃತ್ಯಕ್ಕೆ ಹೊಸ ರೂಪ ಕೊಟ್ಟ ಪಂಡಿತ್‌ ಬಿರ್ಜು ಮಹಾರಾಜ್‌ ಇನ್ನು ನೆನಪು ಮಾತ್ರ. ವಿಶ್ವದಾದ್ಯಂತ ಅಪಾರ ಸಂಖ್ಯೆಯ ಶಿಷ್ಯರನ್ನು ಹೊಂದಿದ್ದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ. ಬಿರ್ಜು ಮಹಾರಾಜ್‌ ಭೌತಿಕವಾಗಿ ಇನ್ನಿಲ್ಲವಾದರೂ ಅವರು ಸೃಷ್ಟಿಸಿರುವ ‘ಹೆಜ್ಜೆ– ಗೆಜ್ಜೆ’ ನೃತ್ಯ ಜಗತ್ತಿನಲ್ಲಿ ಸದಾ ಗುರುತು ಮೂಡಿಸುತ್ತವೆ. ಭಾರತೀಯ ಸಂಗೀತ, ನೃತ್ಯ ಲೋಕಕ್ಕೆ ಅವರು ಕೊಟ್ಟ ಅಗಾಧ ಕೊಡುಗೆಯ ನೋಟ ಇಲ್ಲಿದೆ...

ಬ್ರಿಜ್‌ ಮೋಹನ್‌ ನಾಥ್‌ ಮಿಶ್ರಾ ಎಂಬ ಹೆಸರು ನೃತ್ಯ ಜಗತ್ತಿನಲ್ಲಿ ಪಂಡಿತ್‌ ಬಿರ್ಜು ಮಹಾರಾಜ್‌ ಎಂದೇ ಪ್ರಸಿದ್ಧಿ ಪಡೆದಿದೆ. ಬಿರ್ಜು ಮಹಾರಾಜ್‌ ಎಂದೊಡನೆ ಕಥಕ್‌ ಶೈಲಿಯ ಹೆಜ್ಜೆಗಳು ಕಣ್ಣ ಮುಂದೆ ವಿರಾಜಮಾನಗೊಳ್ಳುತ್ತವೆ. ತಮ್ಮದೇ ಆದ ಕಲ್ಕಾಬಿಂದಾದಿನ್‌ ನೃತ್ಯ ಘರಾಣೆ ಹುಟ್ಟು ಹಾಕಿದ ಅವರು ನೃತ್ಯ ಜಗತ್ತಿನಲ್ಲಿ ಎತ್ತರದ ಸ್ಥಾನ ಪಡೆದಿದ್ದಾರೆ. ಕಥಕ್‌ ನೃತ್ಯ ಶೈಲಿಯನ್ನು ಎತ್ತರಕ್ಕೇರಿಸಿದ್ದಾರೆ. ನೃತ್ಯ ಕುಟುಂಬದಲ್ಲೇ ಹುಟ್ಟಿ ಬೆಳೆದ ಬಿರ್ಜು ಮಹಾರಾಜರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲೂ ದೊಡ್ಡ ಹೆಸರು ಮಾಡಿ ನೃತ್ಯ ಕುಟುಂಬಕ್ಕೆ ಹೊಸ ರೂಪ ಕೊಟ್ಟರು.

ಅವರ ತಂದೆ ಜಗನ್ನಾಥ್‌ ಮಹಾರಾಜ್‌ ಅವರು ರಾಯಘಡ ರಾಜರ ಆಸ್ಥಾನದಲ್ಲಿ ಕಥಕ್‌ ನೃತ್ಯಪಟುವಾಗಿದ್ದರು. ಅವರು ಲಚ್ಚು ಮಹಾರಾಜ್‌ ಎಂದೂ ಪ್ರಸಿದ್ಧಿ ಪಡೆದಿದ್ದರು. ಬಿರ್ಜು ಅವರು ತಂದೆಯಿಂದಲೇ ಆರಂಭಿಕ ಕಥಕ್‌ ನೃತ್ಯಾಭ್ಯಾಸ ಮಾಡಿದರು. ಸಣ್ಣ ವಯಸ್ಸಿನಿಂದ ಭೂಮಿಕೆ ಏರಿದ ಅವರು ಇತ್ತೀಚಿನವರೆಗೂ ಪ್ರದರ್ಶನ ನೀಡಿ ನೃತ್ಯಪ್ರಿಯರ ಮನಸ್ಸಿನಲ್ಲಿ ಮೆಚ್ಚುಗೆಯ ಮುದ್ರೆ ಒತ್ತಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ನೃತ್ಯ ಮುದ್ರೆ ಪ್ರದರ್ಶಿಸುವ ಮೂಲಕ ಸಂಗೀತ ಸ್ವರಗಳ ಜೊತೆಗೆ ನೃತ್ಯವನ್ನು ಬೆಸೆದಿದ್ದರು. ಹಾಡುತ್ತಲೇ ನೃತ್ಯ ಪ್ರದರ್ಶನ ಮಾಡುತ್ತಿದ್ದ ಇವರು ರಸಿಕರ ಎದೆಯಲ್ಲಿ ಆನಂದ ಸೃಷ್ಟಿ ಮಾಡುತ್ತಿದ್ದರು.


ಬಿರ್ಜು ಮಹಾರಾಜರು 1938ರ ಫೆಬ್ರುವರಿ 4ರಂದು ರಾಯಘರದಲ್ಲಿ ಜನಿಸಿದರು. ಅವರು ತಮ್ಮ 7ನೇ ವಯಸ್ಸಿನಲ್ಲಿಯೇ ಮೊದಲ ನೃತ್ಯ ಪ್ರದರ್ಶನ ನೀಡಿದರು. ಅವರಿಗೆ 9 ವರ್ಷ ವಯಸ್ಸಾಗಿದ್ದಾಗ ಅವರ ತಂದೆ ನಿಧನರಾದರು. ಹೀಗಾಗಿ ಅವರ ಕುಟುಂಬ ದೆಹಲಿಗೆ ವಲಸೆ ಬಂತು. ಬಹುಶೃತ ಪ್ರತಿಭಾವಂತರಾಗಿದ್ದ ಅವರು ಬಹುವಾದ್ಯ ವಾದನದಲ್ಲೂ ಪಾಂಡಿತ್ಯ ಪಡೆದಿದ್ದರು. ಕಥಕ್ ನೃತ್ಯದದಲ್ಲಿ ರೂಪಕ ಮತ್ತು ನೃತ್ಯ ನಾಟಕ ಸೃಷ್ಟಿಸುವ ಮೂಲಕ ಕಥಕ್ ನೃತ್ಯಕ್ಕೆ ವೈಶಾಲ್ಯತೆ ತಂದುಕೊಟ್ಟರು.

‘ಕಲಾಶ್ರಮ’ ನೃತ್ಯ ಶಿಕ್ಷಣಕ್ಕೆ ಬಿರ್ಜು ಮಹಾರಾಜ್ ಅವರ ಕೊಡುಗೆ ಮಹತ್ವಪೂರ್ಣವಾದುದು. ಸಂಸ್ಥೆಯ ಮೂಲಕ ಅವರು ವಿಶ್ವದಾದ್ಯಂತ ಪ್ರವಾಸ ಮಾಡಿ ಪ್ರಸಿದ್ಧಿ ಪಡೆದರು. ವಿಶ್ವದ ಹಲವು ನಗರಗಳಲ್ಲಿ ಕಥಕ್‌ ಕಾರ್ಯಾಗಾರ ನಡೆಸಿಕೊಟ್ಟರು. ಸಾಮಾಜಿಕ ಜಾಲತಾಣಗಳನ್ನು ಬಳಸಿ ಇತ್ತೀಚಿನವರೆಗೂ ಅವರು ದೇಶ ವಿದೇಶದ ವಿದ್ಯಾರ್ಥಿಗಳಿಗೆ ನೃತ್ಯ ಪಾಠ ಮಾಡುತ್ತಿದ್ದರು.

ತಮ್ಮ ಚಿಕ್ಕಪ್ಪ ಶಂಭು ಮಹಾರಾಜ್ ಅವರೊಂದಿಗೆ ‘ಭಾರತೀಯ ಕಲಾಕೇಂದ್ರ’ದಲ್ಲಿ ಕಾರ್ಯನಿರ್ವಹಿಸಿದ ಬಿರ್ಜು ಮಹಾರಾಜ್, ಮುಂದೆ ನವದೆಹಲಿಯ ಕಥಕ್ ಶಿಕ್ಷಣ ಕೇಂದ್ರದ ಶಿಕ್ಷಕರಾಗಿ, ಅದರ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನೂರಾರು ನೃತ್ಯ ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ನಂತರ 1998ರಲ್ಲಿ ನಿವೃತ್ತರಾಗಿದ್ದರು. ವೃತ್ತಿಯಿಂದ ನಿವೃತ್ತರಾದರೂ ಅವರು ನೃತ್ಯದಿಂದ ನಿವೃತ್ತರಾಗಲಿಲ್ಲ. ನಂತರ ತಮ್ಮದೇ ಆದ ‘ಕಲಾಶ್ರಮ’ ನೃತ್ಯ ಕಲಾಶಾಲೆ ಸ್ಥಾಪನೆ ಮಾಡಿದರು.


ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ್ ಸಮ್ಮಾನ್‌, ಗಾಂಧಿ ಶಾಂತಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಖೈರಾಗರ್ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಲತಾ ಮಂಗೇಶ್ಕರ್ ಪುರಸ್ಕಾರ ಮುಂತಾದ ಅನೇಕ ಮಹತ್ವದ ಗೌರವಗಳು ಬಿರ್ಜು ಮಹಾರಾಜ್ ಅವರಿಗೆ ಸಂದಿವೆ.


ಬಾಲಿವುಡ್‌ನಲ್ಲೂ ಛಾಪು: ಬಿರ್ಜು ಮಹಾರಾಜ್‌ ಅವರು ಚಲನಚಿತ್ರ ಕ್ಷೇತ್ರದಲ್ಲೂ ಹಲವು ಸಾಧನೆ ಮಾಡಿದ್ದಾರೆ. ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸತ್ಯಜಿತ್ ರೇ ಅವರ ‘ಶತರಂಜ್ ಖಿಲಾರಿ’ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುವ ಜೊತೆಗೆ ಗಾಯನವನ್ನೂ ಪ್ರಸ್ತುತಪಡಿಸಿದ್ದಾರೆ. ದೇವದಾಸ್ ಚಿತ್ರದ ‘ಕಾಹೆ ಛೇದ್ ಮೋಹೆ’ ಗೀತೆಯ ನೃತ್ಯಕ್ಕೆ ಹೆಜ್ಜೆ ಮೂಡಿಸಿದರು. ದಿಲ್ ತೋ ಪಾಗಲ್ ಹೈ, ಗದರ್ – ಏಕ್ ಪ್ರೇಮ್ ಕಥಾ, ವಿಶ್ವರೂಪಂ ಮುಂತಾದ ಅನೇಕ ಚಲನಚಿತ್ರಗಳಿಗೆ ನೃತ್ಯ ವಿನ್ಯಾಸ ಮಾಡಿದರು.

2002ರಲ್ಲಿ ಬಿಡುಗಡೆ ಕಂಡ ‘ದೇವದಾಸ್‌’ ಚಿತ್ರದಲ್ಲಿ ನಟಿ ಮಾಧುರಿ ದೀಕ್ಷಿತ್‌ ಕಥಕ್‌ ನೃತ್ಯಕ್ಕೆ ಹೆಜ್ಜೆಯಾಗಿದ್ದಾರೆ. ಮಾಧುರಿಯ ಮನಮೋಹಕ ಹೆಜ್ಜೆಗಳಿಗೆ ಬಿರ್ಜು ಮಹಾರಾಜ್‌ ಶಕ್ತಿಯಾಗಿದ್ದಾರೆ. ಕಮಲಹಾಸನ್ ನಟನೆಯ ‘ವಿಶ್ವರೂಪಂ’ ಚಿತ್ರದ ಸುಂದರ ನೃತ್ಯ ನಿರ್ದೇಶನಕ್ಕೆ ಬಿರ್ಜು ಮಹಾರಾಜ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ‘ಉನ್ನೈ ಕಾಣಾದ್‌’ ಸುಂದರ ಗೀತೆಯನ್ನು ಸಂಪೂರ್ಣವಾಗಿ ಕಥಕ್‌ ನೃತ್ಯ ಶೈಲಿಯಲ್ಲಿ ರೂಪಿಸಲಾಗಿದೆ. ಈ ಗೀತೆಯಲ್ಲಿ ಕಮಲಹಾಸನ್‌ ನಟನೆ ಇದ್ದರೂ ಆ ನೃತ್ಯ ನಿರ್ದೇಶನ ಮಾಡಿರುವ ಬಿರ್ಜು ಮಹಾರಾಜರೇ ನೋಡುಗರ ಕಣ್ಣಿಗೆ ಕಟ್ಟಿಕೊಳ್ಳುತ್ತಾರೆ. 2012ರಲ್ಲಿ ಬಿಡುಗಡೆಯಾದ ಈ ಚಿತ್ರದ ಗೀತೆ ಬಹಳಷ್ಟು ಪ್ರಸಿದ್ಧಿಪಡೆದಿದೆ.


‘ಬಾಜಿರಾ ಮಸ್ತಾನಿ’ ಚಿತ್ರದ ಮಾಹೇ ರಂಗ್‌ ದೋ ಲಾಲ್‌ ಗೀತೆ ಎಲ್ಲರಿಗೂ ಗೊತ್ತೇ ಇದೆ. ಶ್ರೇಯಾ ಘೋಷಾಲ್‌ ಅವರೊಂದಿಗೆ ಬಿರ್ಜು ಮಹಾರಾಜ್‌ ಅವರು ಸ್ವತಃ ಹಾಡಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಟಿ ದೀಪಿಕಾ ಪಡುಕೋಣೆಯ ಸುಂದರ ಹೆಜ್ಜೆಗಳಲ್ಲಿ ಬಿರ್ಜು ಮಹಾರಾಜ್‌ ಅವರ ನೃತ್ಯ ಶಕ್ತಿಯಿದೆ. ಈ ಗೀತೆಗೆ ಬಿರ್ಜು ಮಹಾರಾಜ್‌ ಅವರಿಗೆ ಫಿಲ್ಮಫೇರ್‌ ಪ್ರಶಸ್ತಿ ಬಂದಿದೆ.

ವಿಶ್ವದೆಲ್ಲೆಡೆ ಕಥಕ್‌ ನೃತ್ಯ ಪ್ರಕಾರದ ಹೆಸರು ಬಂದಾಗ ಅದರೊಂದಿಗೆ ಬಿರ್ಜು ಮಹಾರಾಜ್‌ ಅವರ ಹೆಸರೂ ಸೇರಿಕೊಳ್ಳುತ್ತದೆ. ನೃತ್ಯದ ಶಾಸ್ತ್ರಕ್ಕೆ ಬದ್ಧರಾಗಿ ಚಿತ್ರಗೀತೆ ಹಾಗೂ ಇತರ ಸಮಕಾಲೀನ ನೃತ್ಯದಲ್ಲೂ ಅವರು ಮೋಡಿ ಮಾಡಿದ್ದಾರೆ. ಕಥಕ್‌ ಕಲಿಯುವ ಪ್ರತಿ ವಿದ್ಯಾರ್ಥಿಯೂ ಬಿರ್ಜು ಮಹಾರಾಜರ ಹೆಜ್ಜೆಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಾರೆ.

ಶುಕ್ರವಾರ, ಜನವರಿ 14, 2022

‘1K’ ಅಥವಾ ‘1M’ ಎಂದರೆ ಏನು? ಇದರ ಕುರಿತು ಒಂದಿಷ್ಟು ಸಂಪೂರ್ಣ ಮಾಹಿತಿ(What Does ‘1K’ or ‘1M’ Mean? Full Information)

‘1K’ ಅಥವಾ ‘1M’ ಎಂದರೆ ಏನು? ಇದರ ಕುರಿತು ಒಂದಿಷ್ಟು ಸಂಪೂರ್ಣ ಮಾಹಿತಿ ಕೊಡಲು ಪ್ರಯತ್ನಿಸಿದ್ದೆನೆ.

 Facebook, Twitter ಮತ್ತು YouTube ನಲ್ಲಿ, ನೀವು 1K, 2K, 10K ಅಥವಾ 1M, 10M ಬರಹವನ್ನು ನೋಡಿರಬೇಕು.  ಸಂಖ್ಯೆಯ ಹಿಂದೆ ಇರುವ ಈ ‘ಕೆ(K)’ ಅಥವಾ ‘ಎಂ(M)’ ಎಂದರೆ ಏನು ಗೊತ್ತಾ?  ಇಲ್ಲದಿದ್ದರೆ, ಈ ಪೋಸ್ಟ್‌ನಲ್ಲಿ ನೀವು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.  ಈ ಲೇಖನದಲ್ಲಿ, ನಾವು ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೇವೆ.

 ಸಾಮಾಜಿಕ ಜಾಲತಾಣದ ಮಾಧ್ಯಮಗಳಲ್ಲಿ ಹಾಗೂ ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಲೈಕ್‌ಗಳು, ಕಾಮೆಂಟ್‌ಗಳು, ಶೇರ್, ರಿಟ್ವೀಟ್, ಸಬ್‌ಸ್ಕ್ರೈಬ್‌ಗಳ ಎಣಿಕೆಗಾಗಿ *ಕೆ(K)* ಮತ್ತು *ಎಂ(M)* ಅಕ್ಷರಗಳನ್ನು  ಬಳಸಲಾಗುತ್ತದೆ.

 ಅನೇಕ ಹೊಸ ಜನರಿಗೆ ಇದರ ಬಗ್ಗೆ ತಿಳಿದಿಲ್ಲ ಮತ್ತು *"ಕೆ(K)"* ಎಂದರೆ ಏನು ಮತ್ತು ಅದನ್ನು ಏಕೆ ಬಳಸಲಾಗಿದೆ ಎಂದು ತಿಳಿದಿಲ್ಲ.

 *"ಸಂಖ್ಯೆಗಳ ಹಿಂದೆ "ಕೆ(K)" ಅಥವಾ "ಎಂ(M)" ಎಂದರೆ ಏನು?"*

 *"ಅಂತರ್ಜಾಲದಲ್ಲಿ, 1 ಸಾವಿರವನ್ನು ಪ್ರತಿನಿಧಿಸಲು 1K ಅನ್ನು ಬಳಸಲಾಗುತ್ತದೆ ಮತ್ತು 10 ಸಾವಿರವನ್ನು ಪ್ರತಿನಿಧಿಸಲು 10K ಅನ್ನು ಬಳಸಲಾಗುತ್ತದೆ, ಅದೇ ರೀತಿ, 1 ಮಿಲಿಯನ್ ಅನ್ನು ಪ್ರತಿನಿಧಿಸಲು 1M ಅನ್ನು ಬಳಸಲಾಗುತ್ತದೆ."*

 *1M = 1 ಮಿಲಿಯನ್ (ಅಂದರೆ 10 ಲಕ್ಷ)*

 ನೀವು ಈ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಂಡಿರಬೇಕು ಏಕೆಂದರೆ *"M" ಎಂದರೆ ಮಿಲಿಯನ್, ಆದ್ದರಿಂದ "M" ಅನ್ನು ಮಿಲಿಯನ್‌ಗೆ ಬಳಸಲಾಗುತ್ತದೆ. ಇದು ಲ್ಯಾಟಿನ್ ಭಾಷೆಯಿಂದ ಪಡೆಯಲಾಗಿದೆ ಎಂಬುದನ್ನು ನಾವೆಲ್ಲರೂ ಮರೆಯಬಾರದು.*

 ಆದರೆ ಇಂಗ್ಲೀಷಿನಲ್ಲಿ ಥೌಸಂಡ್ ಅನ್ನು ಥೌಸಂಡ್ ಎಂದು ಕರೆಯುತ್ತಾರೆ ಎಂದು ನೀವು ಯೋಚಿಸುತ್ತಿರಬೇಕು, ಹಾಗಾದರೆ ಇದಕ್ಕೆ ಟಿ ಬಳಸಲಾಗುವುದಿಲ್ಲ.

 *"ವಾಸ್ತವವಾಗಿ, 'ಕೆ' ಎಂದರೆ ಕಿಲೋ ಮತ್ತು ಗ್ರೀಕ್‌ ಭಾಷೆಯಲ್ಲಿ ಕಿಲೋ ಎಂದರೆ 1,000."*  ಹಾಗೆ,

 1 ಕಿಲೋಗ್ರಾಂ = 1 ಸಾವಿರ ಗ್ರಾಂ

 1 ಕಿಲೋಮೀಟರ್ = 1 ಸಾವಿರ ಮೀಟರ್

 *"ಆದ್ದರಿಂದ, "ಕೆ" ಅನ್ನು ಸಾವಿರಕ್ಕೆ ಬಳಸಲಾಗುತ್ತದೆ."*  ಹಾಗೆ,

 *1K = 1,000 (ಒಂದು ಸಾವಿರ)*

 *10K = 10,000 (ಹತ್ತು ಸಾವಿರ)*

 ಸಂಖ್ಯೆಗಳ ಹಿಂದೆ ಇರಿಸಲಾದ “ಕೆ(K)” ಎಂದರೆ ಸಾವಿರ ಎಂದರ್ಥ, *"ಯಾವುದೇ ಸಂಖ್ಯೆಯಾಗಿರಲಿ.  ಫ್ರಾನ್ಸ್‌ನ ವಿಜ್ಞಾನಿಗಳು ಸಾವಿರವನ್ನು ಹೊಂದಿರುವ ಘಟಕಕ್ಕೆ "ಕೆ" ಎಂದು ಹೆಸರಿಸಿದ್ದಾರೆ."*

 *ಕಿಲೋ ಎಂಬ ಪದವು ಗ್ರೀಕ್ ಭಾಷೆಯ ಖಿಲಿಯೊಯಿಯಿಂದ ಹುಟ್ಟಿಕೊಂಡಿತು.*

 *"ಕೆ" ಮತ್ತು "ಎಂ" ಅನ್ನು ಏಕೆ ಬಳಸಬೇಕು?*

 ಜನರು ಯಾವಾಗಲೂ ಶಾರ್ಟ್‌ಕಟ್‌ಗಳನ್ನು ಹುಡುಕುತ್ತಿರುತ್ತಾರೆ.  ಅದಕ್ಕಾಗಿಯೇ ನಾವು 1,000 ಬದಲಿಗೆ "1K" ಮತ್ತು 1 ಮಿಲಿಯನ್ ಬದಲಿಗೆ "1M" ಎಂದು ಬರೆಯುತ್ತೇವೆ.  ಇದು ಜಾಗವನ್ನು ಉಳಿಸುತ್ತದೆ ಮತ್ತು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

M Stands for Millennium and

K Stand for Kilo

Millennium is a Latin word, meaning Ten lakhs (i.e. 1000000=10⁶ )

Kilo is a Greek word, meaning Thousand (i.e. 1000 =10³ )

On YouTube as per views are concerned

  • 1M views means 1000000 or Ten Lakhs of views
  • 1K views means 1000 or One Thousand views

Always remember 1M=10⁶…ex- 4M → 4×1000000=4000000 views

and 1K = 10³…ex- 6K → 6×1000=6000 views.


 *ಸಾಮಾಜಿಕ ಜಾಲತಾಣ ಮಾಧ್ಯಮವಾದ Facebook, Twitter ನಲ್ಲಿ YouTube ಇತ್ಯಾದಿಗಳಲ್ಲಿ ಇಷ್ಟಪಡಲು, ಕಾಮೆಂಟ್ ಮಾಡಲು, ಹಂಚಿಕೊಳ್ಳಲು ಮತ್ತು ಚಂದಾದಾರರಾಗಲು "K" ಮತ್ತು "M" ಅನ್ನು ಬಳಸಲಾಗುತ್ತದೆ.*

 ಇದರ ಪ್ರಯೋಜನವೆಂದರೆ ಸಂಖ್ಯೆಯ ಹಿಂದೆ ಎಷ್ಟು "0" ಎಂದು ನೋಡುವ ಅಗತ್ಯವಿಲ್ಲ, ಅದನ್ನು ಎಷ್ಟು ಬರೆಯಲಾಗಿದೆ ಎಂಬುದನ್ನು ವೀಕ್ಷಕರು ಬೇಗನೆ ಅರ್ಥಮಾಡಿಕೊಳ್ಳುತ್ತಾರೆ.

 ಇದು ಎಣಿಕೆಯನ್ನು ಸುಲಭಗೊಳಿಸಿದೆ ಎಂದು ನಾವು ಅರ್ಥೈಸಿಕೊಳ್ಳಬೇಕು.  ಹಾಗಾಗಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನೇ ಹೆಚ್ಚು ಬಳಸುತ್ತಿದ್ದಾರೆ.  ಈಗಲೂ ಜನರು ಅವುಗಳನ್ನು ಟೈಪಿಂಗ್‌ನಲ್ಲಿ ಬಳಸಲು ಪ್ರಾರಂಭಿಸಿದ್ದಾರೆ.

 *"ಉಪಸಂಹಾರ(ತೀರ್ಮಾನ):-"*

 ‘1K’ ಅಥವಾ ‘1M’ ಎಂದರೆ ಏನು? ಇದರ  ಸಂಪೂರ್ಣ ಮಾಹಿತಿ ಈ ಪೋಸ್ಟ್‌ನ ಮೂಲಕ ನಾನು ನಿಮಗೆ ಹೇಳಿದ್ದೇನೆ ಮತ್ತು ನೀವು ಪೋಸ್ಟ್ ಅನ್ನು ಇಷ್ಟಪಟ್ಟಿದ್ದೀರಿ ಎಂದು ನಾನು ಭಾವಿಸುತ್ತೇನೆ.

ಗುರುವಾರ, ಜನವರಿ 13, 2022

Senior rocket scientist Somanath is new Isro chairman

BENGALURU: Senior rocket scientist S Somanath has been appointed as the tenth chairman of the Indian Space Research Organisation (Isro) and secretary, department of space (DoS). He will replace K Sivan, who will complete his term, which included a one-year extension, on January 14.

Somanath, who at present is serving as director, 
Vikram Sarabhai Space Centre

 (VSSC), told TOI: “The most important responsibility is to create a space enterprise in India where all the stakeholders, including DoS, Isro, IN-SPACe, industry and start-ups are all part of the efforts to expand the space programme on a bigger scale. This is the primary responsibility.”

ಭಾನುವಾರ, ಜನವರಿ 2, 2022

ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ (87) ನಿಧನ.

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ, ಕರ್ನಾಟಕ ಕೊಂಕಣಿ ಸಾಹಿತ್ಯ ಪರಿಷತ್‌ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿದ್ದ ಹೋರಾಟಗಾರ ಬಸ್ತಿ ವಾಮನ ಶೆಣೈ (87) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು.

1980ರಿಂದ ಕೊಂಕಣಿ ಭಾಷಾ ಮಂಡಲದಲ್ಲಿ ತೊಡಗಿಸಿಕೊಂಡಿದ್ದ ಶೆಣೈ ಅವರು ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿ ಜಾಥಾ, ಚಳವಳಿಗಳನ್ನು ಸಂಘಟಿಸಿದ್ದರು. ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ 1994-95ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತ್ತು. ಎರಡು ಅವಧಿಗೆ ಅವರು ಈ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು. ಶೆಣೈ ಅವರು 1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

1995ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಪ್ರಥಮ ವಿಶ್ವ ಕೊಂಕಣಿ ಸಮಾವೇಶದಲ್ಲಿ ಶೆಣೈ ಅವರಿಗೆ ‘ವಿಶ್ವ ಕೊಂಕಣಿ ಸರ್ದಾರ್’ ಬಿರುದು ನೀಡಿ ಗೌರವಿಸಲಾಗಿತ್ತು. 2004ರಲ್ಲಿ ಅವರು ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ವಾಮನ ಶೆಣೈ ಅವರ ಅಂತ್ಯ ಸಂಸ್ಕಾರವು ಸೋಮವಾರ (ಜ.3) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಬೆಳಿಗ್ಗೆ 9ರಿಂದ 10ರವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ಪಾರ್ಥಿವ ಶರೀರವನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.