ಮಾಂಡೂಸ್’ ಚಂಡಮಾರುತಕ್ಕೆ ಅರೆಬಿಕ್ ಹೆಸರು
‘ಮಾಂಡೂಸ್’ ಅರೆಬಿಕ್ ಮೂಲದ ಪದ. ಮಾಂಡೂಸ್ ಎಂದರೆ ‘ಟ್ರೆಷರ್ ಬಾಕ್ಸ್ (ಖಜಾನೆ ಪೆಟ್ಟಿಗೆ)’ ಎನ್ನುವ ಅರ್ಥವಿದೆ. ‘ಮ್ಯಾನ್-ಡೌಸ್’ ಎಂದೂ ಉಚ್ಚರಿಸಲಾಗುತ್ತದೆ. ಇದು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ನಿಧಾನವಾಗಿ ಚಲಿಸುವ ಮತ್ತು ಬಹಳಷ್ಟು ತೇವಾಂಶ ಹೀರಿಕೊಳ್ಳುವ ಈ ಚಂಡಮಾರುತಕ್ಕೆ ‘ಮಾಂಡೂಸ್’ ಹೆಸರನ್ನು ಅರಬ್ ಸಂಯುಕ್ತ ಸಂಸ್ಥಾನವು (ಯುಎಇ) ಸೂಚಿಸಿದೆ.