ಅಂತಾರಾಷ್ಟ್ರೀಯ ಸುದ್ಧಿ – January 2017ನೇಪಾಳಕ್ಕೆ ಹಣ:
ಆರ್ಬಿಐ ಒಪ್ಪಿಗೆ
*.ನೇಪಾಳ ರಾಷ್ಟ್ರ ಬ್ಯಾಂಕ್ಗೆ (ಎನ್ಆರ್ಬಿ)100 ಕೋಟಿ ಮೊತ್ತದಷ್ಟು 100ರ ಮುಖಬೆಲೆಯ ನೋಟುಗಳನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ಸೂಚಿಸಿದೆ.
*.ನೇಪಾಳದಲ್ಲಿ 100ರ ನೋಟುಗಳ ಕೊರತೆ ಎದುರಾಗಿತ್ತು. ಈ ಸಮಸ್ಯೆ ಪರಿಹರಿಸಲು 100ರ ನೋಟುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಮುಂದಾಗಿತ್ತು.
*.ಭಾರತದಲ್ಲಿ 500 ಹಾಗೂ 1 ಸಾವಿರ ಮುಖಬೆಲೆಯ ನೋಟು ರದ್ದುಪಡಿಸಿದ ಬಳಿಕ ನೇಪಾಳದಲ್ಲಿ ಭಾರತದನೋಟು ವಿನಿಮಯ ಮಿತಿಯನ್ನು ಕಡಿಮೆ ಮಾಡಿದೆ.ಭಾರತ–ಪೋರ್ಚುಗಲ್ ಮಧ್ಯೆ 6 ಒಪ್ಪಂದ
*.ರಕ್ಷಣಾ ಸಹಕಾರ ಸೇರಿದಂತೆ ಆರು ಒಪ್ಪಂದಗಳಿಗೆ ಭಾರತ ಮತ್ತು ಪೋರ್ಚುಗಲ್ ಶನಿವಾರ ಸಹಿ ಮಾಡಿವೆ.
*.ಪ್ರಧಾನಿ ನರೇಂದ್ರ ಮೋದಿ ಮತ್ತು ಪೋರ್ಚುಗಲ್ ಪ್ರಧಾನಿ ಆಂಟೊನಿಯೊ ಕೋಸ್ಟ ಅವರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
*.ಸಹಕಾರ,ವಾಣಿಜ್ಯ,ಬಂಡವಾಳಹೂಡಿಕೆ,ವ್ಯಾವಹಾರಿಕಸಹಭಾಗಿತ್ವ,ಮಾಹಿತಿತಂತ್ರಜ್ಞಾನಮತ್ತುನವೀಕರಿಸಬಹುದಾದಶಕ್ತಿಕ್ಷೇತ್ರಗಳಲ್ಲಿಪರಸ್ಪರಸಹಕಾರಕ್ಕಾಗಿಎರಡೂದೇಶಗಳುಒಪ್ಪಂದಕ್ಕೆಸಹಿಮಾಡಿವೆ.
*.ಭಯೋತ್ಪಾದನೆ ನಿಗ್ರಹ, ಮಸೂದ್ ಅಜರ್ನನ್ನು ಉಗ್ರರ ಪಟ್ಟಿಗೆ ಸೇರಿಸುವಲ್ಲಿ ಚೀನಾ ಅಡ್ಡಗಾಲು ಹಾಕುತ್ತಿರುವ ಬಗ್ಗೆ ಮಾತುಕತೆ ವೇಳೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
*.ಭಯೋತ್ಪಾದನೆಯನ್ನು ನಿಗ್ರಹಿಸಲು ಜಾಗತಿಕ ಸಮುದಾಯವುವಿಶ್ವಸಂಸ್ಥೆಯಭದ್ರತಾಮಂಡಳಿಯ‘1267ಸಮಿತಿ’ಯನಿಯಮಗಳನ್ನುಪರಿಣಾಮಕಾರಿಯಾಗಿಜಾರಿಗೆತರಬೇಕು’ಎಂದು ಮೋದಿ ಮತ್ತು ಕೋಸ್ಟಾ ಅವರು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
*.‘ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಗೆ ಸೇರಲು ಬೆಂಬಲ ನೀಡಿದ್ದಕ್ಕಾಗಿ ಹಾಗೂ ಭಾರತ ಪರಮಾಣು ಪೂರೈಕೆದಾರರ ಗುಂಪನ್ನು ಸೇರಲು ಪೋರ್ಚುಗಲ್ ಬೆಂಬಲ ಸೂಚಿಸಿದ
*ರಾಷ್ಟ್ರೀಯ ವಿದ್ಯಮಾನ*
ರಾಷ್ಟ್ರೀಯ ಸುದ್ಧಿ -January 2017ಪ್ರವಾಸಿ ಭಾರತೀಯ ದಿವಸ್ :ಹೂಡಿಕೆಗೆ ಏಕಗವಾಕ್ಷಿ ಅನುಮತಿ
*.ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಮೊದಲ ದಿನ ‘ಯುವ ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಲಾಯಿತು.
*.ಅನಿವಾಸಿ ಭಾರತೀಯ ಯುವಕರು ದೇಶದ ಸಾಮಾಜಿಕ ಯೋಜನೆಗಳಲ್ಲಿ ಹೂಡಿಕೆಗೆ ಮುಂದಾದರೆ ತಕ್ಷಣವೇ ಏಕಗವಾಕ್ಷಿಯಡಿ ಮಂಜೂರಾತಿ ನೀಡುವುದಾಗಿ ಕೇಂದ್ರ ಸರ್ಕಾರ ಸೂಚಿಸಿದೆ
*.ಪ್ರವಾಸಿದಿವಸ:ನೋಟ
* 7,100 ಕ್ಕಿಂತಲೂ ಹೆಚ್ಚು ನೋಂದಾಯಿತ ಸದಸ್ಯರು
* 1,700 ವಿದೇಶಿ ಪ್ರತಿನಿಧಿಗಳು
* 7 ರಾಷ್ಟ್ರಗಳ ರಾಯಭಾರಿಗಳು
* 72 ದೇಶಗಳ ಅನಿವಾಸಿ ಭಾರತೀಯರು (ಎನ್ಆರ್ಐ)
* ‘ಯು ನೋ ಇಂಡಿಯಾ’ ಯೋಜನೆ ಅಡಿಯಲ್ಲಿ 160 ಪ್ರತಿನಿಧಿಗಳು
* ಸ್ವಯಂ ಸೇವಾ ಕಾರ್ಯದಲ್ಲಿ 300 ವಿದ್ಯಾರ್ಥಿಗಳು ಮತ್ತು 200 ಎನ್ಎಸ್ಎಸ್ವಿದ್ಯಾರ್ಥಿಗಳು
* ಹೊರ ದೇಶಗಳಿಂದ ಬಂದವರಲ್ಲಿ ಬಹುತೇಕರು ಕತಾರ್, ಮಲೇಷ್ಯಾ, ಯುಎಇ, ಒಮನ್, ಬಹರೇನ್ ಮತ್ತು ಅಮೆರಿಕದವರು.ಕತಾರಿನಲ್ಲಿರುವಾನಿವಾಸಿಭಾರತೀಯರಸಮಸ್ಯೆಗಳು
*.ಎನ್ಆರ್ಐ ಆನ್ಲೈನ್ ವೋಟಿಂಗ್ ಪವರ್ ಇಲ್ಲದಿರುವುದು
*.ದೋಹಾನಿಂದ ಬೆಂಗಳೂರಿಗೆ ಒಂದೇ ಫ್ಲೈಟ್ ಇರುವುದು
*.ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತಿರುವವರಿಗೆ ಯಾವುದೇ ವೃತ್ತಿ ಭದ್ರತೆ ಇಲ್ಲ.ಪರಿಹಾರಗಳು
*.ಎನ್ಆರ್ಐಗಳ ಸಮಸ್ಯೆಗಳನ್ನು ಪ್ರತಿನಿಧಿಸಲು ಪ್ರತಿನಿಧಿಯೊಬ್ಬರನ್ನು ಭಾರತೀಯ ರಾಯಭಾರ ಕಚೇರಿ ನೇಮಿಸಬೇಕು, ಅಲ್ಲಿಯೇ ನಾವು ಆಧಾರ್ ಕಾರ್ಡ್, ಐಡಿ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳು (ಡಾಕ್ಯುಮೆಂಟ್ಸ್) ಸಿಗುವಂತಾಗಬೇಕು.
*.ವಿಮಾನ ಶುಲ್ಕ ಕಡಿಮೆ ಮಾಡಬೇಕು. ವಿಮಾನ ಸಂಖ್ಯೆಹೆಚ್ಚಿಸಬೇಕು
*.ಶಿಕ್ಷಣ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್ ಹೀಗೆಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಬಲ್ಲ ವಿವಿಧ ಶಾಖೆ ಅಥವಾ ಸಂಸ್ಥೆಗಳನ್ನು ಸರ್ಕಾರ ಪ್ರಾರಂಭಿಸಿದರೆ ವಿದೇಶದಲ್ಲಿರುವವರಿಗೆ ಅನುಕೂಲವಾಗಲಿದೆ.ಪ್ರವಾಸಿಕೌಶಲ್ವಿಕಾಸ್ಯೋಜನಾ
*.ಉದ್ಯೋಗ ಅರಸಿ ವಿದೇಶಕ್ಕೆ ವಲಸೆ ಹೋಗುವವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ವಿದೇಶದಲ್ಲಿಕೆಲಸ ಕೊಡಿಸುವುದಾಗಿ ವಂಚಿಸುವವರನ್ನು ಶಿಕ್ಷಿಸಲಾಗುವುದು. ಹೆಚ್ಚು ಶಿಕ್ಷಣವಿಲ್ಲದ, ವಿದೇಶಕ್ಕೆ ಕೆಲಸಕ್ಕೆ ಹೋಗಬಯಸುವ ಯುವಕರ ಕೌಶಲ್ಯ ವೃದ್ಧಿಗಾಗಿ ಪ್ರವಾಸಿ ಕೌಶಲ್ ವಿಕಾಸ್ಯೋಜನಾ ಜಾರಿಗೆ ತರಲಾಗುವುದುಭಾರತವಾಣಿ ನಿಘಂಟು: 16 ಸಾವಿರ ಡೌನ್ಲೋಡ್
*.ಕೇಂದ್ರ ಸರ್ಕಾರದ ‘ಭಾರತವಾಣಿ ಯೋಜನೆ’ಯುರೂಪಿಸಿರುವ ಬಹುಭಾಷಾ ನಿಘಂಟಿನ ಅಪ್ಲಿಕೇಷನ್ ಡೌನ್ಲೋಡ್ 16 ಸಾವಿರ ದಾಟಿದೆ.
*.ಒಂದೇ ವೇದಿಕೆಯಲ್ಲಿ ಕನ್ನಡವೂ ಸೇರಿದಂತೆ 43 ವಿವಿಧ ನಿಘಂಟುಗಳಿದ್ದು, ಬಳಕೆದಾರಸ್ನೇಹಿ ಆಗಿರುವುದು ಪ್ರಸಿದ್ಧಿಗೆ ಕಾರಣವಾಗಿದೆ. ಅಲ್ಲದೆ, ಭಾರತವಾಣಿಯ ವೆಬ್ಸೈಟ್ನಲ್ಲಿ (english.bharatavani.in) ಈಗ 220 ವಿವಿಧ ನಿಘಂಟುಗಳು ಲಭ್ಯವಿವೆ.
*.2016ರ ಮೇ 25ರಂದು ಬಿಡುಗಡೆಯಾಗಿರುವ ಭಾರತವಾಣಿ ಯೋಜನೆಯು ಮೊಬೈಲ್ ಅಪ್ಲಿಕೇಷನ್ ಹಾಗೂ ಕಂಪ್ಯೂಟರ್ ಆಧಾರಿತ ವೆಬ್ಸೈಟ್ ಈಗಾಗಲೇ ಸಾಕಷ್ಟು ಜನಮನ್ನಣೆ ಗಳಿಸಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್) ಕಾರ್ಯನಿರ್ವಹಿಸುತ್ತಿರುವ ಈ ಯೋಜನೆಯು ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಪರಿಷತ್ತಿನ ಸಹಯೋಗದಲ್ಲಿ ಮತ್ತಷ್ಟು ನಿಘಂಟು ಸೇವೆ ನೀಡಲು ಮುಂದಾಗಿದೆ.
*.ಭಾರತದ ವಿವಿಧ ಭಾಷೆಗಳ ನಿಘಂಟುಗಳು ಭಾರತವಾಣಿ ಅಪ್ಲಿಕೇಷನ್ನಲ್ಲಿ ಒಂದೇ ಕಡೆ ಸಿಗುತ್ತಿವೆ. ಒಟ್ಟು 3 ಲಕ್ಷ ಪದಗಳಿಗೆ ಈಗಾಗಲೇ ಅರ್ಥ ಹಾಗೂ ವ್ಯಾಖ್ಯಾನ ಸಿಗುತ್ತಿದೆ. ಪ್ರತಿದಿನ ಈ ಅಪ್ಲಿಕೇಷನ್ ಪರಿಷ್ಕೃತವಾಗುತ್ತಿದ್ದು (ಅಪ್ಡೇಟ್) ಪದಗಳ ಸೇರ್ಪಡೆ ಹೆಚ್ಚುತ್ತಲೇ ಇರುವುದು, ಬಳಕೆದಾರರ ಮೆಚ್ಚುಗೆಗೆ ಕಾರಣವಾಗಿದೆ.
*.ಇದರ ಜತೆಗೆ, ಕನ್ನಡ ಸಾಹಿತ್ಯ ಪರಿಷತ್ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದ ನಿಘಂಟನ್ನು (ಕಸಾಪ ಸಂಕ್ಷಿಪ್ತ ನಿಘಂಟು) ಇದೀಗ ಭಾರತವಾಣಿಗೆ ಸೇರಿಸಲಾಗಿದೆ. ಯಾವುದೇ ಕನ್ನಡ ಪದವನ್ನು ಅಪ್ಲಿಕೇಷನ್ನಲ್ಲಿ ಟೈಪ್ ಮಾಡಿದರೆ, ಅದರ ಅರ್ಥವು ಕಸಾಪಕನ್ನಡ ಸಾಹಿತ್ಯ ಪರಿಷತ್ ನಿಘಂಟಿನಲ್ಲೂ ತೆರೆದುಕೊಳ್ಳುತ್ತಿದೆ.
*.ಕನ್ನಡ ಸಾಹಿತ್ಯ ಪರಿಷತ್ ಕನ್ನಡ–ಕನ್ನಡ ನಿಘಂಟು ಶೀಘ್ರವೇ ಭಾರತವಾಣಿಗೆ ಸೇರ್ಪಡೆಯಾಗುತ್ತಿದೆ.
*.ಈ ಬಗ್ಗೆ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ಜತೆಗೆ ಒಡಂಬಡಿಕೆ ಆಗಿದೆ. ಒಟ್ಟು 8 ಸಂಪುಟಗಳಲ್ಲಿ ಈ ನಿಘಂಟಿದ್ದು, ಅವಷ್ಟನ್ನೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಒಟ್ಟಾರೆಯಾಗಿ 20 ಲಕ್ಷ ಪದಗಳು ಈ ನಿಘಂಟಿನ ಮೂಲಕ ಭಾರತವಾಣಿ ಅಪ್ಲಿಕೇಷನ್ಗೆ ಸೇರಲಿವೆ. 20 ಸಾವಿರ ಪುಟಗಳ ಈ ಸಂಪುಟಗಳನ್ನು ಡಿಜಿಟಲೀಕರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ.ಒಂದೇ ಬಾರಿಗೆ 103 ಉಪಗ್ರಹ ಉಡಾವಣೆ: ಇಸ್ರೊ ಸಿದ್ಧತೆ
*.ಫೆಬ್ರುವರಿ ಮೊದಲ ವಾರದಲ್ಲಿಪಿಎಸ್ಎಲ್ವಿ–ಸಿ37ಉಡಾವಣಾವಾಹನದ ಮೂಲಕ ಒಂದೇ ಬಾರಿ103ಉಪಗ್ರಹಗಳನ್ನುಬಾಹ್ಯಾಕಾಶಕ್ಕೆಉಡಾವಣೆಮಾಡಲುಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆ(ಇಸ್ರೊ)ಸಿದ್ಧತೆಮಾಡಿಕೊಂಡಿದೆ.
*.ಉಡಾವಣೆಯಾಗಲಿರುವಉಪಗ್ರಹಗಳಲ್ಲಿಹೆಚ್ಚಿನವುಅಮೆರಿಕ,ಜರ್ಮನಿ,ಇಸ್ರೇಲ್,ನೆದರ್ಲೆಂಡ್ಸ್,ಸ್ವಿಟ್ಜರ್ಲೆಂಡ್ಮತ್ತುಇನ್ನಿತರದೇಶಗಳಿಗೆಸೇರಿದವು
*.ಈ ಯೋಜನೆಯಲ್ಲಿಭಾರತದಕಾರ್ಟೋಸ್ಯಾಟ್ 2ಡಿ,ಐಎನ್ಎಸ್–1ಎಮತ್ತುಐಎನ್ಎಸ್–1ಬಿಉಪಗ್ರಹಗಳುಉಡಾವಣೆಯಾಗಲಿವೆ.
*.ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಈ ಯೋಜನೆಯು ಒಂದು ಮೈಲಿಗಲ್ಲಾಗಲಿದೆ. ಇಸ್ರೊ ಈವರೆಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಉಪಗ್ರಹಗಳ ಉಡಾವಣೆ ಮಾಡಿರಲಿಲ್ಲ. ಕಳೆದ ವರ್ಷ ಇಸ್ರೊ ಒಂದೇಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
*.2018 ರಲ್ಲಿಚಂದ್ರಯಾನ–2ಮತ್ತುಸೂರ್ಯನನ್ನುಅಧ್ಯಯನಮಾಡಲು2019ರಲ್ಲಿಆದಿತ್ಯಾ–ಎಲ್1ಎಂಬ ಉಪಗ್ರಹಗಳ ಉಡಾವಣೆ ಇಸ್ರೊದ ಮುಂದಿನ ಯೋಜನೆಗಳಾಗಿವೆ.
*.ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ‘ಮಂಗಳಯಾನ’(ಮಾರ್ಸ್ ಆರ್ಬಿಟರ್ ಮಿಷನ್– ಮಾಮ್)ದ ಯಶಸ್ಸಿನ ನಂತರ ಶುಕ್ರ ಮತ್ತು ಗುರು ಗ್ರಹಗಳಿಗೆ ಉಪಗ್ರಹ ಉಡಾವಣೆ ಮಾಡಲು ಇಸ್ರೊ ಚಿಂತನೆ ನಡೆಸಿದೆ.ಮುಖ್ಯ ನ್ಯಾಯಮೂರ್ತಿಯಾಗಿ ಖೇಹರ್ ಅಧಿಕಾರ ಸ್ವೀಕಾರ
*.ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದನ್ಯಾಯಮೂರ್ತಿಜಗದೀಶ್ಸಿಂಗ್ಖೇಹರ್ಅವರುಭಾರತದ44ನೇಮುಖ್ಯನ್ಯಾಯಮೂರ್ತಿಯಾಗಿಅಧಿಕಾರಸ್ವೀಕರಿಸಿದರು.
*.64 ವರ್ಷದ ಖೇಹರ್ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದಸಿಖ್ಸಮುದಾಯದಮೊದಲವ್ಯಕ್ತಿ.ಧಾರವಾಡ ಐಐಟಿ ನಿರ್ದೇಶಕರಾಗಿ ಪಿ.ಶೇಷು
*.ಧಾರವಾಡದಲ್ಲಿ ಕಳೆದ ವರ್ಷ ಆರಂಭವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯೂ ಸೇರಿದಂತೆ ರಾಷ್ಟ್ರದ ಐದು ಐಐಟಿಗಳ ನಿರ್ದೇಶಕರನೇಮಕಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಒಪ್ಪಿಗೆ ದೊರೆತಿದೆ.
*.ಧಾರವಾಡಐಐಟಿನಿರ್ದೇಶಕರನ್ನಾಗಿಪ್ರೊ.ಪಿ.ಶೇಷುಅವರನ್ನು ನೇಮಕ ಮಾಡಲಾಗಿದೆ. ಇವರು ಮುಂಬೈನ ಐಐಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
*.ಧಾರವಾಡ, ತಿರುಪತಿ, ಪಾಲಕ್ಕಾಡ್, ಭಿಲಾಯಿದುರ್ಗ ಮತ್ತು ಗೋವಾದ ಐಐಟಿಗಳನೂತನ ನಿರ್ದೇಶಕರ ಪಟ್ಟಿಯನ್ನು ಸಿದ್ಧಪಡಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿತ್ತು.ಬ್ರಿಟಿಷರ ಹಿಂಸೆಯಿಂದ ನೇತಾಜಿ ಸಾವು!
*.ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ. ಅವರು ಹಿಂದಿನ ಸೋವಿಯತ್ ಒಕ್ಕೂಟದ ಜೈಲೊಂದರಲ್ಲಿ ಬ್ರಿಟಿಷರ ಹಿಂಸೆ ತಾಳಲಾರದೆ ಮೃತಪಟ್ಟರು’ ಎಂದು ಹೊಸ ಪುಸ್ತಕವೊಂದರಲ್ಲಿ ಹೇಳಲಾಗಿದೆ.
*.ವಿಮಾನ ಅಪಘಾತದಲ್ಲಿ ಅವರು ಸತ್ತಿರಲಿಲ್ಲ. ಆದರೆ ಬೋಸ್ ಅವರು ಸೋವಿಯತ್ ಒಕ್ಕೂಟಕ್ಕೆ ಹೋಗಲು ಅನುಕೂಲ ಮಾಡಿಕೊಡಲು ಜಪಾನಿನ ಗುಪ್ತಚರ ಸಂಸ್ಥೆಗಳು ವಿಮಾನ ಅಪಘಾತದ ಸುದ್ದಿ ಹಬ್ಬಿಸಿದವು’ ಎಂದುಕೃತಿಕಾರಮೇಜರ್ಜನರಲ್(ನಿವೃತ್ತ)ಜಿ.ಡಿ.ಬಕ್ಷಿಹೇಳಿಕೊಂಡಿದ್ದಾರೆ.
*.ಜಪಾನಿನಲ್ಲಿ ಅಂದಿನ ಸೋವಿಯತ್ ಒಕ್ಕೂಟದ ರಾಯಭಾರಿ ಆಗಿದ್ದ ಜೇಕಬ್ ಮಲಿಕ್ ಅವರ ಸಹಾಯ ಪಡೆದಿದ್ದ ಬೋಸ್,ಸೈಬೀರಿಯಾದಲ್ಲಿ‘ಆಜಾದ್ಹಿಂದ್ಸರ್ಕಾರ’ದರಾಯಭಾರಕಚೇರಿತೆರೆದಿದ್ದರುಎಂದು ಬಕ್ಷಿ ಹೇಳಿದ್ದಾರೆ.
*.ನೇತಾಜಿ ಅವರು 1945ರ ಆಗಸ್ಟ್ 18ರಂದು ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂಬುದಕ್ಕೆ ತಮ್ಮ ಬಳಿ ಅಲ್ಲಗಳೆಯಲು ಸಾಧ್ಯವಾಗದಂತಹ ಆಧಾರ ಇದೆ ಎಂದು ಬಕ್ಷಿ ಹೇಳಿದ್ದಾರೆ.
*.‘ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಬಾಂಬರ್ಗಳ ದಾಳಿ ತಪ್ಪಿಸಿಕೊಳ್ಳಲು ಸೋವಿಯತ್ ಸರ್ಕಾರವು ತನ್ನ ನೆಲೆಯನ್ನು ಸೈಬೀರಿಯಾಕ್ಕೆ ಸ್ಥಳಾಂತರ ಮಾಡಿತ್ತು. ಜಪಾನ್ನಿಂದ ತಪ್ಪಿಸಿಕೊಂಡ ಬೋಸ್ ಅಲ್ಲಿಗೆ ಹೋಗಿದ್ದರು. ಸೈಬೀರಿಯಾದಿಂದ ಮೂರು ಬಾರಿ ರೇಡಿಯೊ ಪ್ರಸಾರ ಮಾಡಿದ್ದರು. ಬೋಸ್ ತಪ್ಪಿಸಿಕೊಂಡದ್ದು ಬ್ರಿಟಿಷರಿಗೆ ಆಗ ಗೊತ್ತಾಯಿತು’ ಎಂದು ಪುಸ್ತಕದಲ್ಲಿ ಹೇಳಲಾಗಿದೆ.
*.‘ಇದಾದ ನಂತರ ಬ್ರಿಟಿಷರು, ಬೋಸ್ ಅವರ ವಿಚಾರಣೆ ನಡೆಸಲು ತಮಗೆ ಅವಕಾಶ ಕೊಡಬೇಕು ಎಂದು ಸೋವಿಯತ್ ಅಧಿಕಾರಿಗಳಲ್ಲಿ ಕೇಳಿದರು. ವಿಚಾರಣೆಯಲ್ಲಿ ಹಿಂಸೆ ತಾಳಲಾರದೆ ಬೋಸ್ ಮರಣಹೊಂದಿದರು’ ಎಂದು ಪುಸ್ತಕ ಹೇಳುತ್ತದೆ.ಜಿಡಿಪಿ ಶೇ 7.1ರಷ್ಟಕ್ಕೆ ಕುಸಿತ
*.ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ1ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
*.2015–16ರಲ್ಲಿ ಜಿಡಿಪಿ ಶೇ 7.6ರಷ್ಟಿತ್ತು.
*.ತಯಾರಿಕೆ, ಗಣಿಗಾರಿಕೆ ಮತ್ತು ಕಟ್ಟಡ ನಿರ್ಮಾಣ ರಂಗದಲ್ಲಿನ ಮಂದಗತಿಯ ಪ್ರಗತಿ ಕಾರಣಕ್ಕೆ ಜಿಡಿಪಿ ವೃದ್ಧಿ ದರ ಕಡಿಮೆಯಾಗಲಿರುವುದು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ದೃಢಪಟ್ಟಿದೆ.
*.ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್ಒ) ಸಿದ್ಧಪಡಿಸಿರುವ ಈ ವೃದ್ಧಿ ದರದ ಅಂದಾಜು, ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿರುವ ಅಂದಾಜಿನ ಮಟ್ಟದಲ್ಲಿಯೇ ಇದೆ.
*.ಈ ಬಾರಿ ಮುಂಚಿತವಾಗಿಯೇ ಸಾಮಾನ್ಯ ಬಜೆಟ್ ಮಂಡಿಸಲಾಗುತ್ತಿರುವುದರಿಂದ ಪೂರ್ವಸಿದ್ಧತೆ ಮಾಡಿಕೊಳ್ಳಲು ನೆರವಾಗಲು ಒಂದು ತಿಂಗಳ ಮೊದಲೇ ಈ ವಿವರ ಪ್ರಕಟಿಸಲಾಗಿದೆ.
*.ನವೆಂಬರ್ ತಿಂಗಳ ಅಂಕಿಅಂಶಗಳೂ ಲಭ್ಯ ಇವೆ. ಆದರೆ, ನೋಟುಗಳ ರದ್ದತಿ ಕಾರಣಕ್ಕೆ ಈ ಅಂಕಿ ಅಂಶಗಳಲ್ಲಿ ತೀವ್ರ ಏರಿಳಿತ ಕಂಡು ಬಂದಿದೆ. ಹೀಗಾಗಿ ಜಿಡಿಪಿ ಅಂದಾಜು ಮಾಡಲು ಈ ವಿವರಗಳನ್ನು ಪ್ರಜ್ಞಾಪೂರ್ವಕವಾಗಿ ಪರಿಗಣಿಸಿಲ್ಲ
*2016–17ನೇ ಸಾಲಿನ ರಾಷ್ಟ್ರೀಯ ವರಮಾನಕ್ಕೆ ಸಂಬಂಧಿಸಿದ ಈ ಮೊದಲ ಮುಂಗಡ ಅಂದಾಜಿನಲ್ಲಿ, ನೋಟು ರದ್ದತಿಯ ಪರಿಣಾಮ ಪ್ರತಿಫಲನಗೊಂಡಿಲ್ಲ. ಅಕ್ಟೋಬರ್ ತಿಂಗಳವರೆಗಿನ ವಿವಿಧ ವಲಯಗಳ ಅಂಕಿಅಂಶಗಳನ್ನಷ್ಟೇ ಆಧರಿಸಿದೆ.
*.ನೋಟು ರದ್ದತಿಯು ಸರಕು– ಸೇವೆಗಳ ಬಳಕೆ, ಉದ್ಯೋಗ ಮತ್ತಿತರ ವಲಯಗಳಲ್ಲಿ ಪ್ರತಿಕೂಲ ಪರಿಣಾಮ ಬೀರಿ ಆರ್ಥಿಕ ವೃದ್ಧಿ ದರವನ್ನು ಇನ್ನಷ್ಟು ತಗ್ಗಿಸುವ ಸಾಧ್ಯತೆ ಇದೆ.
*.2011–12ನೇ ಸಾಲಿನ ಸ್ಥಿರ ಬೆಲೆ ಆಧರಿಸಿದ, 2016–17ನೇ ಸಾಲಿನ ಜಿಡಿಪಿಯು 121.55 ಲಕ್ಷ ಕೋಟಿಗಳಷ್ಟಾಗಲಿದೆ.
*.2016ರ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದ 2015-16ರ ಸಾಲಿನ ತಾತ್ಪೂರ್ತಿಕ ಅಂದಾಜು 50ಲಕ್ಷ ಕೋಟಿಗಳಷ್ಟಿತ್ತು.ನೋಟುರದ್ದುಪರಿಣಾಮ
*.ಉಪಭೋಗ ಮತ್ತು ಉತ್ಪಾದನೆ ಮೇಲೆ ನೋಟು ರದ್ದತಿ ಬೀರಿರುವ ಪ್ರಭಾವದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ7ರಷ್ಟಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ ಸಂಶೋಧನಾ ವಿಭಾಗವು (ಎಸ್ಬಿಐ ರಿಸರ್ಚ್) ಅಂದಾಜಿಸಿದೆ.ನೋಟು ರದ್ದತಿ ಕಸರತ್ತಿನ ವಾಸ್ತವಿಕ ಅಂದಾಜು ಮಾಡುವುದು ಸದ್ಯಕ್ಕೆ ಸುಲಭವಾಗಿಲ್ಲ.
*.3 ಮತ್ತು 4 ತ್ರೈಮಾಸಿಕಗಳಲ್ಲಿ ಖಂಡಿತವಾಗಿಯೂ ಶೇ 6ಕ್ಕಿಂತ ಕಡಿಮೆಯಾಗಲಿದೆ. ನಂತರದ ದಿನಗಳಲ್ಲಿ ಕ್ರಮೇಣ ಏರಿಕೆ ಕಾಣಲಿದೆ ಎಂದು ಅಭಿಪ್ರಾಯಪಡಲಾಗಿದೆ.ಮಾಹಿತಿಯ ಗೌಪ್ಯತೆ :ಆಧಾರ್ಗಾಗಿ ಖಾಸಗಿಯವರಿಂದ ಮಾಹಿತಿ ಸಂಗ್ರಹ ಒಳ್ಳೆಯದಲ್ಲ: ‘ಸುಪ್ರೀಂ’
*.ಆಧಾರ್ ಸಂಖ್ಯೆ ನೀಡುವುದಕ್ಕಾಗಿ ಖಾಸಗಿ ಸಂಸ್ಥೆಗಳು ಮಾಹಿತಿ ಸಂಗ್ರಹಿಸುವುದು ಒಳ್ಳೆಯದಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
*.ಆಧಾರ್ ಯೋಜನೆ ಬಗೆಗಿನ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠವು ಈ ಹಿಂದೆಯೇ ಮಧ್ಯಂತರ ಆದೇಶ ನೀಡಿದೆ. ಅಂತಿಮ ತೀರ್ಪು ಬರುವವರೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡುವಂತಿಲ್ಲ, ಅಲ್ಲಿವರೆಗೆ ಅದು ಸ್ವಯಂಪ್ರೇರಿತ ಮಾತ್ರ ಎಂದು ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿದೆ.
*ಕರ್ನಾಟಕ ರಾಜ್ಯ ವಿದ್ಯಮಾನ*
ರಾಜ್ಯ ಸುದ್ಧಿ – January 2017ಪ್ರವಾಸಿ ಭಾರತೀಯ ದಿವಸ್ ಕರ್ನಾಟಕದಲ್ಲಿ ವಿಶೇಷತೆಗಳುಬಿ.ಟಿನವೋದ್ಯಮಗಳತ್ತಚಿತ್ತ
*.ಅಮೆರಿಕ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನ ಕೆಲವು ಉದ್ಯಮಿಗಳು ಜೈವಿಕ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳಲ್ಲಿ (ಸ್ಟಾರ್ಟ್ ಅಪ್) ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ.
*.ಎಲೆಕ್ಟ್ರಾನಿಕ್ಸ್ ಸಿಟಿಯ ಬೆಂಗಳೂರು ಹೆಲಿಕ್ಸ್ ಬಯೋಟೆಕ್ನಾಲಜಿ ಪಾರ್ಕ್ನಲ್ಲಿರುವ ಬೆಂಗಳೂರು ಬಯೋ ಇನೊವೇಷನ್ ಸೆಂಟರ್ನಲ್ಲಿ(ಬಿಬಿಸಿ) ನಡೆಯುತ್ತಿರುವ ಸಂಶೋಧನಾ ಚಟುವಟಿಕೆ ವಿದೇಶಿ ಉದ್ಯಮಿಗಳ ಗಮನ ಸೆಳೆಯಿತು.
*.ಈ ಉದ್ಯಮಿಗಳ ತಂಡ ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಟೌನ್ಷಿಪ್ ಪ್ರದೇಶ (ಎಲ್ಸಿಟಾ) ಹಾಗೂ ಇನ್ಫೊಸಿಸ್ ಕ್ಯಾಂಪಸ್ಗೂ ಭೇಟಿ ನೀಡಿತು. ನಾರ್ತ್ ವೆಸ್ಟ್ ಆಸಿಯಾನ್ ಬಿಜಿನೆಸ್ ಅಸೋಸಿಯೇಷನ್ (ಎನ್ಡಬ್ಲ್ಯುಎಬಿಎ) ವ್ಯವಸ್ಥಾಪಕ ನಿರ್ದೇಶಕ ರಿಡ್ವಾನ್ ಅಸ್ಮಲ್, ಅಮೆರಿಕನ್ ಸೊಸೈಟಿ ಆಫ್ ಎಂಜಿನಿಯರ್ಸ್ ಆಫ್ ಇಂಡಿಯನ್ ಒರಿಜಿನ್ (ಎಎಸ್ಇಐ) ಸಂಸ್ಥಾಪಕ ಹರಿ ಬಿ. ಬಿಂಡಾಲ್, ಆಸಿಯಾನ್ ಬ್ಯುಸಿನೆಸ್ ಕನೆಕ್ಷನ್ಸ್ನ ಪ್ರೊ.ಅಮ್ಮರ್ ಮಿರ್ಜಾ, ಉದ್ಯಮಿಗಳಾದ ಮಾರ್ಟಿನ್ ವೆನ್ನಿಂಗ್, ಶ್ಯಾರನ್ ಜಂಡು ಸೇರಿದಂತೆ 13 ಉದ್ಯಮಿಗಳು ತಂಡದಲ್ಲಿದ್ದರು.
*.ಏರೋಸ್ಪೇಸ್ ಪಾರ್ಕ್ಗೆ ಭೇಟಿ: ದೇವನಹಳ್ಳಿ ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ಏರೋಸ್ಪೇಸ್ ಪಾರ್ಕ್ಗೆ ಭೇಟಿ ನೀಡಿದ ಉದ್ಯಮಿಗಳ ಇನ್ನೊಂದು ತಂಡ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಿತು.
*.ಬಿಐಇಸಿ ಆವರಣ 40,000 ಚದರ ಮೀಟರ್ ಇದ್ದು, ಇಲ್ಲಿ ಮೂರು ದಿನಗಳ ಕಾಲ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.ಅನಿವಾಸಿಭಾರತೀಯರಿಗಾಗಿ‘ಪಿಬಿಡಿ2017’ವಿಶೇಷಆ್ಯಪ್ಬಿಡುಗಡೆಮಾಡಲಾಗಿದೆ.ಗೂಗಲ್ಪ್ಲೇಮತ್ತುಆ್ಯಪಲ್ಆ್ಯಪ್ಸ್ಟೋರ್ನಲ್ಲಿಆ್ಯಪ್ಲಭ್ಯವಿದೆಅನಿವಾಸಿ ಕನ್ನಡಿಗರಿಗೆ
*.ಅನಿವಾಸಿ ಕನ್ನಡಿಗರಿಗೆ (ಎನ್ಆರ್ಕೆ) ಅಧಿಕೃತ ಗುರುತಿನ ಚೀಟಿಯಾಗಿ ‘ಅನಿವಾಸಿ ಕನ್ನಡಿಗ ಕಾರ್ಡ್’ ವಿತರಣೆ. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಮಟ್ಟದಲ್ಲಿ ಅನಿವಾಸಿ ಭಾರತೀಯ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.
*.ಎನ್ಆರ್ಕೆ ಮತ್ತು ರಾಜ್ಯದ ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಕಲ್ಪಿಸುವ ಜಾಲತಾಣ ಸೃಷ್ಟಿ.
*.ಎನ್ಆರ್ಕೆಗಳಿಗೆ ಅಪಘಾತ ಸಂಭವಿಸಿದರೆ 2 ಲಕ್ಷಗಳವರೆಗೆ ವಿಮಾ ಸೌಲಭ್ಯ.
*.ಕರ್ನಾಟಕ ಮತ್ತು ಎನ್ಆರ್ಕೆಗಳೊಂದಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜನೆ. ಅವರಿಗಾಗಿ ವಿಶೇಷ ಪ್ರವಾಸ ಏರ್ಪಡಿಸುವುದು.
*.ತಾಯ್ನಾಡಿನಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಎನ್ಆರ್ಕೆಗಳಿಗೆ ಉತ್ತೇಜನ ನೀಡಲು ‘ನಮ್ಮ ಊರು, ನಮ್ಮ ನಾಡು’ ಯೋಜನೆ ಆರಂಭ.
*.ವಿಶ್ವದೆಲ್ಲೆಡೆ ಕನ್ನಡ ಕೂಟ ಆರಂಭಿಸಲು ಪ್ರೋತ್ಸಾಹ. ಕನ್ನಡ ಭಾಷೆ ಮತ್ತು ಸಂಸ್ಕೃತಿ ರಕ್ಷಿಸಲು ಉತ್ತೇಜನ ನೀಡುವುದು.
*.ಉತ್ತಮ ಸಾಧನೆ ಮಾಡಿದ ಒಬ್ಬ ಅನಿವಾಸಿ ಕನ್ನಡಿಗನಿಗೆ ಪ್ರತಿ ವರ್ಷ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ‘ವರ್ಷದ ಅನಿವಾಸಿ ಕನ್ನಡಿಗ ಪ್ರಶಸ್ತಿ’ ಪ್ರದಾನ.
*.ಸಾಗರೋತ್ತರ ದೇಶಗಳಲ್ಲಿ ಕನ್ನಡಿಗರು ಉದ್ಯೋಗ ಪಡೆಯಲು ಪ್ರೋತ್ಸಾಹ. ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ, ಉದ್ಯೋಗಕ್ಕೆ ತೆರಳುವವರಿಗೆ ಪೂರ್ವಭಾವಿ ಮಾರ್ಗದರ್ಶನ.
*.ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಕಾನೂನು ವಿವಾದ, ವಾಣಿಜ್ಯ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಕಾನೂನು ಸಲಹೆಗಾರರು ಮತ್ತು ವಕೀಲರ ಮೂಲಕ ನೆರವು ನೀಡುವುದು.
*.ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಮೃತರಾದರೆ,ಸ್ವದೇಶಕ್ಕೆ ಮೃತ ದೇಹ ಸಾಗಿಸಲು ವಿಮಾನ ವೆಚ್ಚವನ್ನು ಸರ್ಕಾರದಿಂದ ಭರಿಸುವುದು.ಏಳು ವಿಜ್ಞಾನಿಗಳಿಗೆ ಇನ್ಫೊಸಿಸ್ ವಿಜ್ಞಾನ ಪ್ರಶಸ್ತಿ
*.ವಿಜ್ಞಾನ,ಸಾಮಾಜಿಕಮತ್ತುಆರ್ಥಿಕಕ್ಷೇತ್ರಗಳಲ್ಲಿನಸವಾಲುಗಳಿಗೆಪರಿಹಾರಕಂಡುಕೊಳ್ಳುವನಿಟ್ಟಿನಲ್ಲಿಪ್ರಾಮಾಣಿಕಸೇವೆಸಲ್ಲಿಸಿದವರನ್ನುಈಬಾರಿಯಪ್ರಶಸ್ತಿಗೆಆಯ್ಕೆಮಾಡಲಾಗಿದೆ. ಅವರ ಕೆಲಸಗಳು ಭೌಗೋಳಿಕ ಎಲ್ಲೆಗಳನ್ನು ದಾಟಿ ಮಾನವ ಕುಲದ ಸರ್ವಾಂಗೀಣ ಕಲ್ಯಾಣಕ್ಕೆ ಸಹಕಾರಿಯಾಗಿವೆ
*.ಪ್ರಶಸ್ತಿ 65 ಲಕ್ಷ ನಗದು, ಚಿನ್ನದ ಪದಕ ಮತ್ತುಪ್ರಮಾಣಫಲಕವನ್ನು ಒಳಗೊಂಡಿದೆ.ಚಮ್ಮಾರರಿಗೆ ಮನೆ ನಿರ್ಮಾಣಕ್ಕಾಗಿ 3.5 ಲಕ್ಷ
*.ಚಮ್ಮಾರ ವೃತ್ತಿ ಮಾಡುವ ಮಾದಿಗರು, ಮೋಚಿಗರು, ಸಮಗಾರರಂತಹ ಸಮುದಾಯದವರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ 3.5 ಲಕ್ಷ ಆರ್ಥಿಕ ನೆರವು ನೀಡಾಗುತ್ತದೆ.
*.‘ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಈ ಸಮುದಾಯದವರಿಗೆ ಮನೆ ನಿರ್ಮಾಣಕ್ಕಾಗಿ 2 ಲಕ್ಷ ನೀಡಲಾಗುತ್ತಿತ್ತು. ಇನ್ನು ಮುಂದೆ ಅಂಬೇಡ್ಕರ್ ವಸತಿ ಯೋಜನೆಯಡಿ ರಾಜೀವ್ಗಾಂಧಿ ವಸತಿ ನಿಗಮದಿಂದ ₹1.50 ಲಕ್ಷಸೇರಿಸಿ, 5 ಲಕ್ಷ ಹಣವನ್ನು ಮನೆ ನಿರ್ಮಾಣಕ್ಕಾಗಿ ನೀಡಲಾಗುತ್ತದೆ.
*.ಚಮ್ಮಾರರ ಆರ್ಥಿಕ ಸ್ಥಿತಿಯನ್ನು ಉನ್ನತಿಗೊಳಿಸುವುದಕ್ಕಾಗಿ ಈ ನೂತನ ಯೋಜನೆ ರೂಪಿಸಲಾಗಿದೆ.
*.ಚಪ್ಪಲಿ ತಯಾರಿಸಲು ಚಮ್ಮಾರರಿಗೆ ಸರ್ಕಾರದಿಂದ ಉಚಿತವಾಗಿ ಶೆಡ್ ನಿರ್ಮಿಸಿಕೊಡಲಾಗುತ್ತಿದೆ. ಜತೆಗೆ 5ಸಾವಿರ ಬಂಡವಾಳ ಹಾಗೂ ಚಮ್ಮಾರಿಕೆಗೆ ಬೇಕಾದ ಪರಿಕರಗಳನ್ನು ಕೊಡಿಸಲಾಗುತ್ತಿದೆ.ಪ್ರಾದೇಶಿಕ ಪಕ್ಷ ಉಗಮಕ್ಕೆ ಸಕಾಲ
*.60–70 ರ ದಶಕದಲ್ಲಿ ಪ್ರಾದೇಶಿಕ ಪಕ್ಷಗಳ ಯುಗಆರಂಭವಾಗಿತ್ತು.
*.ಸಾರ್ವಜನಿಕರ ಒತ್ತಡ ಸ್ಫೋಟದಿಂದ ಪರ್ಯಾಯ ಶಕ್ತಿ ಉಗಮವಾಗಬೇಕು. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಇದೆ
*.ಪ್ರಾದೇಶಿಕ ಶಕ್ತಿಗಳು ಕಾಲಕಾಲಕ್ಕೆ ಜನರನ್ನು ಎಚ್ಚರಿಸುವ ದಾರಿದೀಪವಾಗಬೇಕು. ಚಿಂತನೆ ಮತ್ತುವಿಚಾರಗಳನ್ನು ಮಂಡಿಸುವಾಗ ಚೌಕಟ್ಟಿಗೆ ಕಟ್ಟುಬೀಳದೆ ಜನರ ಮುಂದೆ ಮುಕ್ತ ಸಂವಾದ ನಡೆಸಬೇಕು
*.ದಿನಕಳೆದಂತೆ ಆ ಪಕ್ಷಗಳ ಬಗೆಗಿನ ನಂಬಿಕೆ ಜನರಿಂದ ದೂರವಾದವು.ಕಾರಣಗಳು:
*.ಭ್ರಷ್ಟಾಚಾರ
*.ಕಳಪೆ ಆಡಳಿತ
*.ಮಾನವೀಯ ಮೌಲ್ಯಗಳ ತುಳಿತ
*.ಕುಟುಂಬ ರಾಜಕಾರಣದಿಂದ ಪ್ರಾದೇಶಿಕ ಪಕ್ಷಗಳು ನೆಲಕಚ್ಚಿದವು.ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಶಕ್ತಿ ರೂಪುಗೊಳ್ಳಲು ಕಾಲ ಸನ್ನಿಹಿತವಾಗಿದೆ.
*.ನೆಲ, ಜಲ, ಭಾಷೆ, ಬದುಕಿನ ಅಸ್ತಿತ್ವ ಕಾಪಾಡಲು ಪರ್ಯಾಯ ರಾಜಕೀಯ ಪಕ್ಷ ರಚನೆ ಅತ್ಯವಶ್ಯ. ಪರ್ಯಾಯ ಎಂಬುದು ಅಧಿಕಾರ ಹೊರತಾದ ಚಿಂತನೆಯಾಗಬೇಕು. ರಾಜಕೀಯ ವ್ಯವಸ್ಥೆಗೆ ಎಚ್ಚರಿಕೆ ನೀಡುವ ಸಾಧನವಾಗಬೇಕು. ಸಮಾಜ ವಿರೋಧಿ ನೀತಿ ವಿರುದ್ಧ ಧ್ವನಿ ಮೊಳಗಿಸುವ ಸಾಧನವಾಗಬೇಕು.ಹಕ್ಕಿ ಜ್ವರ: ಆತಂಕದಲ್ಲಿ ಸರ್ಕಾರ
*.ವಿದೇಶಗಳಿಂದ ವಲಸೆ ಬಂದ ಪಕ್ಷಿಗಳಲ್ಲಿ ಅಪಾಯಕಾರಿ ‘ಹಕ್ಕಿ ಜ್ವರ’(ಎಚ್5ಎನ್8) ಸೋಂಕು ಪತ್ತೆಯಾಗಿರುವುದು ರಾಜ್ಯ ಸರ್ಕಾರವನ್ನು ತೀವ್ರ ಆತಂಕಕ್ಕೀಡು ಮಾಡಿದೆ.
*.ಬೀದರ್ ಮತ್ತು ಬಳ್ಳಾರಿಯಲ್ಲಿ ಆರು ತಿಂಗಳ ಅಂತರದಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರವನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಈ ಎರಡೂ ಫಾರಂಗಳಲ್ಲಿನ ಕೋಳಿಗಳನ್ನು ನಾಶಪಡಿಸಲಾಗಿತ್ತು.
*.ಮೈಸೂರು ಮೃಗಾಲಯಕ್ಕೆ ವಲಸೆ ಬಂದು ಸತ್ತುಬಿದ್ದವೈಲ್ಡ್ಗೂಸ್ ಮತ್ತು ಪೆಲಿಕಾನ್ ಹಕ್ಕಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಮೃಗಾಲಯದಲ್ಲಿ ಅಪರೂಪದ ವಿವಿಧ ಜಾತಿಯ 800ಕ್ಕೂ ಹೆಚ್ಚು ಹಕ್ಕಿಗಳಿರುವುದು ಕಳವಳಕ್ಕೆ ಕಾರಣ.
*.ಕೇಂದ್ರ ಸರ್ಕಾರದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕಾ ಇಲಾಖೆ (ಡಿಎಡಿಎಫ್) ಹೊರಡಿಸಿದ‘ಪರಿಷ್ಕೃತ ಹಕ್ಕಿ ಜ್ವರ ನಿಯಂತ್ರಣ ಕ್ರಿಯಾ ಯೋಜನೆ–2015’ರಮಾರ್ಗಸೂಚಿ ಪ್ರಕಾರ,ಹಕ್ಕಿ ಜ್ವರ ಕಾಣಿಸಿಕೊಂಡರೂ ಮೃಗಾಲಯದ ಹಕ್ಕಿಗಳನ್ನು ನಾಶಪಡಿಸಲು ಅವಕಾಶ ಇಲ್ಲ.
*.ವಲಸೆ ಪಕ್ಷಿಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಮೈಸೂರಿನ ರಂಗನತಿಟ್ಟು, ಮದ್ದೂರು ಬಳಿಯ ಕೊಕ್ಕರೆ ಬೆಳ್ಳೂರು, ಶಿವಮೊಗ್ಗದ ಮಂಡಗದ್ದೆ ಸೇರಿದಂತೆ ಎಲ್ಲ ಪಕ್ಷಿಧಾಮಗಳಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.ಮೈಸೂರು ಮೃಗಾಲಯ: ಹಕ್ಕಿಜ್ವರ ನಿಯಂತ್ರಣಕ್ಕೆ ತುರ್ತು ಕ್ರಮ
*.ಚಾಮರಾಜೇಂದ್ರ ಮೃಗಾಲಯದಲ್ಲಿ ‘ಹಕ್ಕಿಜ್ವರ’ (ಎಚ್5ಎನ್8 ವೈರಾಣು)ಭೀತಿ ಆವರಿಸಿರುವ ಕಾರಣ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿವಿಕ್ರಾನ್–ಎಸ್ (Vicron-s) ಎಂಬ ಔಷಧಿಸಿಂಪಡಣೆ ಮಾಡುತ್ತಿದ್ದು, ಸಿಬ್ಬಂದಿಗೂಟ್ಯಾಮಿಫ್ಲೂ ಮಾತ್ರೆನೀಡಲಾಗಿದೆ.
*.ವಲಸೆ ಪಕ್ಷಿಗಳಾದ ಕೊಕ್ಕರೆ ಮತ್ತು ಬಾತುಕೋಳಿಗಳು ಹಕ್ಕಿಜ್ವರದಿಂದ ಮೃತಪಟ್ಟಿರುವಹಿನ್ನೆಲೆಯಲ್ಲಿ ಮೃಗಾಲಯವನ್ನು ಒಂದು ತಿಂಗಳು ಬಂದ್ ಮಾಡಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
*.ಹಕ್ಕಿ ಜ್ವರದಲ್ಲಿ ಅನೇಕ ವಿಧಗಳಿವೆ. ಬೀದರ್ನಲ್ಲಿ ಎಚ್5ಎನ್1 ಕಾಣಿಸಿಕೊಂಡಿತ್ತು. ಇದು ಮನುಷ್ಯರಿಗೆ ಹೆಚ್ಚುಅಪಾಯಕಾರಿ. ಆದರೆ, ಬಳ್ಳಾರಿ ಮತ್ತು ಮೈಸೂರಿನಲ್ಲಿ ಎಚ್5ಎನ್8 ಕಾಣಿಸಿಕೊಂಡಿದೆ.
*.ವಿದೇಶಗಳಿಂದ ವಲಸೆ ಬಂದ ಹಕ್ಕಿಗಳ ದೇಹದಲ್ಲಿದ್ದ ಸೋಂಕು ಮೈಸೂರಿನ ವಾತಾವರಣದಲ್ಲಿ ಉಲ್ಬಣಗೊಂಡಿರುವ ಸಾಧ್ಯತೆಯೂ ಇದೆ.
*.ಹಕ್ಕಿಜ್ವರ ಮನುಷ್ಯರಿಗೆ ತಗಲುವ ಸಾಧ್ಯತೆ ಇಲ್ಲ. ಆದರೆ, ವೈರಾಣುಗಳು ಚಪ್ಪಲಿ, ವಾಹನಗಳ ಟಯರ್ಗೆ ಅಂಟಿಕೊಂಡು ಹರಡುವ ಸಾಧ್ಯತೆ ಇರುತ್ತದೆ.
*.ಹಕ್ಕಿಜ್ವರ ಹರಡಿರುವುದು ಕೇರಳದಿಂದ ವಲಸೆ ಬಂದಹಕ್ಕಿಗಳಿಗೆ ಮಾತ್ರ. ಆಹಾರ ಅರಸಿ ಕೊಕ್ಕರೆ ಹಾಗೂ ಬಾತುಕೋಳಿಗಳು ಇತ್ತ ಬಂದಿವೆ. ಕೆರೆ, ನೀರಿನ ತೊಟ್ಟಿಗಳ ಸುತ್ತ ಇವು ಹಾಕಿದ ಹಿಕ್ಕಿಯಿಂದ ವೈರಾಣು ಹರಡುತ್ತಿದೆ. ಈ ವೈರಾಣು ಅಂಟಿಕೊಂಡರೆ 5ರಿಂದ 15ದಿನದ ನಂತರವೇ ಗೊತ್ತಾಗುತ್ತದೆ. ರೋಗ ಪತ್ತೆಯಾದ ಎರಡೇ ದಿನಕ್ಕೆ ಹಕ್ಕಿ ಸಾಯುವ ಸಾಧ್ಯತೆ ಹೆಚ್ಚು3ನೇ ‘ಹಕ್ಕಿ ಹಬ್ಬ’
*.ಹೊಸಪೇಟೆ ತಾಲ್ಲೂಕಿನ ಕಮಲಾಪುರ ಬಳಿಯ ನಿಸರ್ಗಧಾಮದಲ್ಲಿ ಎರಡು ದಿನ‘ಕರ್ನಾಟಕ ಹಕ್ಕಿ ಹಬ್ಬ’ ನಡೆಯಲಿದೆ.
*.ದೇಶದ ವಿವಿಧೆಡೆಯ 300ಕ್ಕೂ ಹೆಚ್ಚು ಪಕ್ಷಿ ತಜ್ಞರು, ಛಾಯಾ ಗ್ರಾಹಕರು, ಪಕ್ಷಿ ಸಂಶೋಧಕರು ಭಾಗವಹಿಸಲಿದ್ದಾರೆ.
*.ನೂರಕ್ಕೂ ಹೆಚ್ಚು ಅಪರೂಪದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ, ಸಂವಾದ ನಡೆಯಲಿದೆ.
*.ಹಂಪಿ, ದರೋಜಿ ಕರಡಿಧಾಮ, ಹಂಪಿ ಕನ್ನಡ ವಿಶ್ವ ವಿದ್ಯಾಲಯ ಮತ್ತು ಕಮಲಾಪುರ ಕೆರೆ ಬಳಿ ಪಕ್ಷಿ ವೀಕ್ಷಣೆ ಕಾರ್ಯ ಕ್ರಮವಿದ್ದು, ಹಕ್ಕಿಗಳಿಗೆ ಸಂಬಂಧಿ ಸಿದ ಚಲನಚಿತ್ರ ಪ್ರದರ್ಶನ ನಡೆಯಲಿದೆ.ಎಸ್.ಜಿ.ವಾಸುದೇವ್ಗೆ ಸುವರ್ಣಗೌರವ ಫೆಲೋಷಿಪ್
*.ಕರ್ನಾಟಕ ಲಲಿತಕಲಾ ಅಕಾಡೆಮಿಯ 2016ನೇ ಸಾಲಿನಸುವರ್ಣ ಗೌರವ ಫೆಲೋಷಿಪ್ಗೆ ಹಿರಿಯ ಕಲಾವಿದ ಎಸ್.ಜಿ.ವಾಸುದೇವ ಅವರನ್ನು ಆಯ್ಕೆ ಮಾಡಲಾಗಿದೆ.
*.‘ಫೆಲೋಷಿಪ್ 2 ಲಕ್ಷ ಗೌರವಧನ ಒಳಗೊಂಡಿದೆ. ಗೌರವಕ್ಕೆ ಪಾತ್ರರಾದವರು ತಮ್ಮ ರಚನೆಯ ಅತ್ಯುತ್ತಮ ಕಲಾಕೃತಿಯೊಂದನ್ನು ಅಕಾಡೆಮಿಗೆ ಕೊಡುಗೆಯಾಗಿ ನೀಡುವರು.
*.ಸಂಶೋಧನಾಫೆಲೋಷಿಪ್: 2016–17ನೇ ಸಾಲಿನ ಅಕಾಡೆಮಿಯ ಸಂಶೋಧನಾ ಫೆಲೋಷಿಪ್ಗೆ 22 ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ದೃಶ್ಯಕಲೆ, ಕಲಾ ಶಿಕ್ಷಣ, ಗ್ರಾಫಿಕ್ಸ್ ಕಲೆಗಳಲ್ಲಿ ಪರಿಣಿತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ. ಸಂಶೋಧನೆಗಾಗಿ ಕಲಾವಿದರಿಗೆ ಮೂರು ಕಂತುಗಳಲ್ಲಿ 1 ಲಕ್ಷ ನೀಡಲಾಗುತ್ತಿದೆಕಲಾ ಸಂಚಾರ ಯೋಜನೆ
*.ಅಕಾಡೆಮಿ ‘ಸುವರ್ಣ ಕಲಾ ಸಂಚಾರ ಯೋಜನೆ’ ರೂಪಿಸಿದೆ.
*.ಇದರಲ್ಲಿ ನಾಲ್ವರು ಯುವ ಕಲಾವಿದರಿರುವ ತಂಡಕ್ಕೆ 1 ಲಕ್ಷ ಅನುದಾನ ನೀಡಲಾಗುತ್ತದೆ.
*.ಅವರು ಅಜಂತಾ, ಎಲ್ಲೋರ, ಬೇಲೂರು, ಹಳೇಬೀಡು, ಹಂಪಿಸೇರಿದಂತೆ ದಕ್ಷಿಣ ಭಾರತದ ಕಲಾ ದೇಗುಲಗಳಿಗೆ ಪ್ರವಾಸ ಮಾಡಿ ಚಿತ್ರಕಲಾಕೃತಿಗಳನ್ನು ರಚಿಸಿ ಅಕಾಡೆಮಿಗೆ ನೀಡಬೇಕು.