ಬುಧವಾರ, ಜನವರಿ 30, 2019

ರಾಷ್ಟ್ರೀಯ ಉಚ್ಛತಾ ಶಿಕ್ಷಣ ಅಭಿಯಾನ

ರಾಷ್ಟ್ರೀಯ ಉಚ್ಛತಾ ಶಿಕ್ಷಣ ಅಭಿಯಾನ


CONTENTS


ಘಟಕಗಳು


ರಾಷ್ಟ್ರೀಯ ಉಚ್ಛತಾರ್ಶಿಕ್ಷಣ ಅಭಿಯಾನ ಅಂದರೆ ರಾಷ್ಟ್ರೀಯ ಉನ್ನತಶಿಕ್ಷಣ ಅಭಿಯಾನ (RUSA)ಒಂದು (ಸಿಎಸ್ಎಸ್) ಕೇಂದ್ರಪ್ರಾಯೋಜಿತಯೋಜನೆ, ೨೦೧೩ರಲ್ಲಿಇದನ್ನುಬಿಡುಗಡೆಮಾಡಲಾಯಿತುಇದುರಾಜ್ಯದ ಅರ್ಹ ಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಹಣ ಒದಗಿಸುವುದಾಗಿದೆ. ಕೇಂದ್ರ ಅನುದಾನ (60:40 ಅನುಪಾತ ಸಾಮಾನ್ಯ ವರ್ಗದ  ರಾಜ್ಯಗಳಿಗೆ ವಿಶೇಷ ವರ್ಗದ ರಾಜ್ಯಗಳಿಗೆ 90:10 ರಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100% ) ಗೌರವ ಆಧಾರಿತ ಮತ್ತು ಫಲಿತಾಂಶದ ಅವಲಂಬಿಸಿ. ಕೇಂದ್ರ ಸಚಿವಾಲಯ ದಿಂದ ಬಿಡುಗಡೆಯಾದ ಹಣವು  ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶದ  ಸರ್ಕಾರದ ಮೂಲಕ  ಉನ್ನತ ಶಿಕ್ಷಣ ಮಂಡಳಿಗೆ ತಲುಪುತ್ತದೆ . ರಾಜ್ಯಗಳಿಗೆ ನೀಡುವ ಹಣಕಾಸಿನ ವ್ಯವಸ್ಥೆ ಆಯಾ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಯ ಉನ್ನತೀಕರಣ ಮತ್ತು ಬೆಳವಣಿಗೆಯನ್ನು ಅವಲಂಬಿಸಿರುತ್ತದೆ


ಉದ್ದೇಶಗಳು

RUSA ಪ್ರಧಾನ ಉದ್ದೇಶಗಳು ಈ ಕೆಳಕಂಡಂತಿವೆ;

 

ರೂಢಿಗಳು ಮತ್ತು ಗುಣಮಟ್ಟವನ್ನು ಅನುಸರಣೆಯ ಖಾತರಿ ಮೂಲಕ ರಾಜ್ಯದ ಸಂಸ್ಥೆಗಳು ಒಟ್ಟಾರೆ ಗುಣಮಟ್ಟವನ್ನು ಹಾಗೂ ಕಡ್ಡಾಯವಾಗಿ ಗುಣಮಟ್ಟದ ಭರವಸೆ ಚೌಕಟ್ಟನ್ನು ಮಾನ್ಯತೆ ಅಳವಡಿಸಿಕೊಳ್ಳುವುದು


ಸಾಂಸ್ಥಿಕ ರಚನೆ ಮತ್ತು ರಾಜ್ಯ ಹಂತದಲ್ಲಿ ಮೇಲ್ವಿಚಾರಣೆ ವಿಶ್ವವಿದ್ಯಾಲಯಗಳ ಸ್ವತಂತ್ರ ಪ್ರಚಾರ ಮತ್ತು ಸಂಸ್ಥೆಗಳಲ್ಲಿ ಆಡಳಿತ ಸುಧಾರಣೆ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತಕ ಸುಧಾರಣೆಗಳು


ಶೈಕ್ಷಣಿಕ ಮತ್ತು ಪರೀಕ್ಷೆ ವ್ಯವಸ್ಥೆಗಳಲ್ಲಿ ಸುಧಾರಣೆ


ಎಲ್ಲಾ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟದ ಸಿಬ್ಬಂದಿ ಸೂಕ್ತ ಲಭ್ಯತೆ  ಮತ್ತು  ಎಲ್ಲಾ ಹಂತಗಳ ಉದ್ಯೋಗ ಲಭ್ಯತೆ ಖಚಿತಪಡಿಸಿಕೊಳ್ಳುವುದು .


ಸಂಶೋಧನೆ ಮತ್ತು ನಾವೀನ್ಯತೆಗಳ ತಮ್ಮನ್ನು ತೊಡಗಿಸಿಕೊಳ್ಳಲು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೂಕ್ತ ವಾತಾವರಣ ರಚಿಸುವುದು


ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ಹೆಚ್ಚುವರಿ ಸಾಮರ್ಥ್ಯ ರಚಿಸುವುದು ಮತ್ತು ನೋಂದಣಿ ಗುರಿಗಳನ್ನು ಸಾಧಿಸುವುದು,ಹೊಸ ಸಂಸ್ಥೆಗಳನ್ನು  ಸ್ಥಾಪಿಸಿ ಸಾಂಸ್ಥಿಕ ನೆಲೆಯನ್ನು ವಿಸ್ತರಿಸುವುದು


ಸಂಸ್ಥೆಗಳ ಸ್ಥಾಪನೆಯಿಂದ ಉನ್ನತ ಶಿಕ್ಷಣ ಪ್ರವೇಶದಲ್ಲಿ ಇರುವ  ಪ್ರಾದೇಶಿಕ ಅಸಮತೋಲನ ನಿವಾರಿಸುವುದು


ಎಸ್ಸಿ / ಪರಿಶಿಷ್ಟ ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸೂಕ್ತ ಅವಕಾಶಗಳನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣದಲ್ಲಿ ಸಮತೋಲನ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಭಿನ್ನವಾಗಿ ಅಂಗವಿಕಲ ವ್ಯಕ್ತಿಗಳ ಸೇರ್ಪಡೆ.


 

ಘಟಕಗಳು

RUSA ಅಸ್ತಿತ್ವದಲ್ಲಿರುವ ಸ್ವಾಯತ್ತ ಕಾಲೇಜುಗಳು ಮತ್ತು ಒಂದು ಕ್ಲಸ್ಟರ್ ಕಾಲೇಜುಗಳ ಪರಿವರ್ತನೆ ಮೇಲ್ದರ್ಜೆಗೇರಿಸುವ ಮೂಲಕ ಹೊಸ ವಿಶ್ವವಿದ್ಯಾನಿಲಯಗಳು ರಚಿಸಿದರು.ಇದು ಹೊಸ ಮಾದರಿಯ ಪದವಿ ಕಾಲೇಜುಗಳು, ಹೊಸ ವೃತ್ತಿಪರ ಕಾಲೇಜುಗಳು ರಚಿಸಲು ಮತ್ತು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಮೂಲಭೂತ ಬೆಂಬಲ ಒದಗಿಸುವುದು.ಫ್ಯಾಕಲ್ಟಿ ನೇಮಕಾತಿ ಬೆಂಬಲ, ಸಿಬ್ಬಂದಿ ಸುಧಾರಣೆಗಳನ್ನು ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಆಡಳಿತಗಾರರ ನಾಯಕತ್ವ ಅಭಿವೃದ್ಧಿ ಯೋಜನೆಯ ಒಂದು ಪ್ರಮುಖ ಭಾಗವಾಗಿದೆ.ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು ಸಲುವಾಗಿ ಪಾಲಿಟೆಕ್ನಿಕ್ಗಳನ್ನು ಅಸ್ತಿತ್ವದಲ್ಲಿರುವ ಕೇಂದ್ರ ಯೋಜನೆ ಮಾಡಲಾಗಿದೆ.ಉನ್ನತ ಶಿಕ್ಷಣ ಸಹ RUSA ಸೇರಿಸಲಾಯಿತು ವೃತ್ತಿಪರ ಶಿಕ್ಷಣ ಕ್ರೋಢೀಕರಿಸುವ ಒಂದು ಪ್ರತ್ಯೇಕ ಘಟಕ. ಇದರ ಜೊತೆಗೆ, RUSA ರಾಜ್ಯ ಭಾಗವಹಿಸುವ ಸುಧಾರಣೆ, ಸಂಸ್ಥೆಗಳ ಮರುಸ್ಥಾಪನೆ

ಮುಖ್ಯ ಗುರಿ ಮತ್ತು ಮುಖ್ಯ ಕಾರ್ಯನಿರ್ವಹಿಸಲು ಈ ಕೆಳಗಿನ RUSA ಪ್ರಾಥಮಿಕ ಅಂಶಗಳು ಒಳಗೊಂಡಿರುತ್ತದೆ

ಅಸ್ತಿತ್ವದಲ್ಲಿರುವ ಸ್ವಾಯತ್ತ ಕಾಲೇಜುಗಳನ್ ವಿಶ್ವವಿದ್ಯಾಲಯಗಳಾಗಿ ಪರಿವರ್ತನೆ


ಕ್ಲಸ್ಟರ್ ವಿಶ್ವವಿದ್ಯಾಲಯಗಳಾಗಿ  ಕಾಲೇಜುಗಳ ಪರಿವರ್ತನೆ


ವಿಶ್ವವಿದ್ಯಾಲಯಗಳಿಗೆ ಇನ್ಫ್ರಾಸ್ಟ್ರಕ್ಚರ್ ಅನುದಾನ


ಹೊಸ ಮಾದರಿ ಕಾಲೇಜುಗಳು (ಜನರಲ್)


ಅಸ್ತಿತ್ವದಲ್ಲಿರುವ ಪದವಿ ಕಾಲೇಜುಗಳನ್ನು  ಮಾದರಿ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸುವುದು


ಹೊಸ ಕಾಲೇಜುಗಳು (ವೃತ್ತಿಪರ)


ಕಾಲೇಜುಗಳಿಗೆ ಮೂಲಸೌಕರ್ಯ ಅನುದಾನ


ಸಂಶೋಧನೆ, ನಾವೀನ್ಯತೆ ಮತ್ತು ಗುಣಮಟ್ಟದ ಸುಧಾರಣೆ


ಇಕ್ವಿಟಿ ಉಪಕ್ರಮಗಳು


ಫ್ಯಾಕಲ್ಟಿ ನೇಮಕಾತಿ ಬೆಂಬಲ


ಫ್ಯಾಕಲ್ಟಿ ಸುಧಾರಣೆಗಳು


ಉನ್ನತ ಶಿಕ್ಷಣ ಅಭಿಯಾನ


ಶೈಕ್ಷಣಿಕ ನಿರ್ವಾಹಕರು ನಾಯಕತ್ವ ಅಭಿವೃದ್ಧಿ


ಸಾಂಸ್ಥಿಕ ಮರುಸ್ಥಾಪನೆ & ಸುಧಾರಣೆಗಳು


ಸಾಮರ್ಥ್ಯ ವರ್ಧನೆ & ತಯಾರಿ, ಡೇಟಾ ಸಂಗ್ರಹಣೆ ಮತ್ತು ಯೋಜನೆ

ಮೂಲ : ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಸಾರ್ವಜನಿಕ ಶಿಕ್ಷಣ ಇಲಾಖೆ

ಸಾರ್ವಜನಿಕ ಶಿಕ್ಷಣ ಇಲಾಖೆ


CONTENTS


ಇಲಾಖ ಕಾರ್ಯಕ್ರಮ


ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ


ಉದ್ದೇಶಗಳು


ಅಂಕಿ ಅಂಶಗಳು


2009-2010 ಜಿಲ್ಲಾವಾರು ಅಂಕಿಅಂಶ


ಸೂಚಿತ ಆಹಾರ ಪಟ್ಟಿ


ಪೌಷ್ಠಿಕಾಂಶದ ವಿವರ


ಆರೋಗ್ಯ ಇಲಾಖೆಯಿಂದ ನಿರ್ವಹಿಸಲಾಗುವ ಮಾತ್ರೆಗಳು


ಅಡುಗೆ ಕೋಣೆಗಳ ವಿವರ


ಪಾತ್ರೆ ಪರಿಕರಗಳ ಖರೀದಿ ಬಗ್ಗೆ


ಅಡುಗೆ ಸಿಬ್ಬಂದಿ ವಿವರ


ಅಗ್ನಿ ನಂದಕಗಳ ಅಳವಡಿಕೆ


ಅಡುಗೆ ಕೇಂದ್ರಗಳ ವಿವರ


ಅಡುಗೆಯವರ ಆಯ್ಕೆ


ಅಡುಗೆಯವರ ಸಂಭಾವನೆ


ತರಬೇತಿಗಳು


ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ


ಕ್ಷೀರ ಭಾಗ್ಯ ಯೋಜನೆ

ಮಗುವಿಗೆ ಒಂದು ಬಾರಿಗೆ


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್


ಆರೋಗ್ಯ ಇಲಾಖೆ


ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ


ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ


ಭಾರತೀಯ ಆಹಾರ ನಿಗಮ


ಆಯವ್ಯಯ


ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ


ರಾಜ್ಯದಲ್ಲಿ ಅನುಸರಿಸಲ್ಪಡುತ್ತಿರುವ ಉತ್ತಮ ಅಭ್ಯಾಸಗಳು


ಬೆಂಗಳೂರು ನಗರ


ಬೆಂಗಳೂರು ಗ್ರಾಮಾಂತರ


ರಾಮನಗರ


ತುಮಕೂರ್


ಕೋಲಾರ್


ಚಿಕ್ಕಬಲ್ಲಪುರ್


ಚಿತ್ರದುರ್ಗ


ದಾವಣಗೆರೆ


ಶಿಮೊಗ


ನಮ್ಮ ಧ್ಯೇಯ


ನಮ್ಮ ರಾಜ್ಯದ ಎಲ್ಲಾ ಮಕ್ಕಳನ್ನು ಉತ್ತಮ ಮಾನವರಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮರಾಗಲು ಅವಶ್ಯವಾಗಿ ಬೇಕಾದ ನಿಗದಿತ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಗುರಿಯಾಗಿದೆ

ವಿನ್ಯಾಸ & ನಿರ್ಮಾಣ ಕಾರ್ಯವನ್ನು ಇ-ಆಡಳಿತ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ.

ಇಲಾಖ ಕಾರ್ಯಕ್ರಮ

ಶಾಲಾ ಪೋಷಣೆ


ಮಧ್ಯಾಹ್ನ ಉಪಹಾರ ಯೋಜನೆ


ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ   ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಆಹಾರವನ್ನು ಒದಗಿಸಬೇಕಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯ ಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು, ಸಹಕಾರಿಯಾಗಿದೆ. ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು  ಹೆಚ್ಚಿಸುವುದಾಗಿದೆ.

ಘನೋದ್ದೇಶ

ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ

2002-03ರವರೆಗೆ  ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗಿತ್ತಿದೆ. ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ  ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು.

2003-04 ನೇ ಸಾಲಿನಿಂದ ಉಳಿದ 20 ಜಿಲ್ಲೆಗಳಿಗೂ ವಿಸ್ತರಿಸಲಾಯಿತು.


ದಿನಾಂಕ 01-09-2004 ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಯಿತು.


ದಿನಾಂಕ 01-10-2004 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.


2007-08ನೇ ಸಾಲಿನಿಂದ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು. ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಸರ್ಕಾರದಿಂದ ಹಾಗೂ 9 ಮತ್ತು 10 ನೇ ತರಗತಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸಲಾಯಿತು.


ದಿನಾಂಕ:01-08-2013ರಿಂಧ 1-10ನೇ ತರಗತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪ್ರತೀ ವಿದ್ಯಾರ್ಥಿಗೂ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿದೆ.


ಉದ್ದೇಶಗಳು

ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು.


ಶೈಕ್ಷಣಿಕ ವರ್ಷದಲ್ಲಿ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯದಂತೆ ತಡೆಯುವುದು.


ಪೌಷ್ಠಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಅಭಿವೃದ್ಧಿಗೊಳಿಸುವುದು.


ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.


ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿ ಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸುವುದು.


ಬರಪೀಡಿತ ಪ್ರದೇಶಗಳಿಗೆ ಬೇಸಿಗೆ ರಜೆ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯನ್ನು ನೀಡಲಾಗುತ್ತಿದೆ.


ಅಂಕಿ ಅಂಶಗಳು

ಪ್ರಯೋಜನ ಪಡೆಯುತ್ತಿರುವ ಶಾಲೆಗಳ ಸಂಖ್ಯೆ

ಶಾಲೆಗಳು

ಸರ್ಕಾರಿ

ಅನುದಾನಿತ

ಒಟ್ಟು

ಪ್ರಾಥಮಿಕ

21455

219

21674

ಹಿರಿಯ ಪ್ರಾಥಮಿಕ ಶಾಲೆ

22545

2570

25115

ಪ್ರೌಢ

4464

3551

8015

ಎ.ಐ.ಇ.ಸೆಂಟರ್

67

0

67

ಮದರಸಾ

127

0

127

ಎನ್.ಸಿ.ಎಲ್.ಪಿ.

115

0

115

ಒಟ್ಟು

48773

6340

55113

ಪ್ರಯೋಜನ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ

ತರಗತಿ

ಅನುಮೋದನೆ

ದಾಖಲಾತಿ

ಫಲಾನುಭವಿಗಳು

ಅನುಮೋದನೆಗೆ ಎದುರಾಗಿಫಲಾನುಭವಿಗಳುಶೇಕಡಾವಾರು

ದಾಖಲಾತಿಗೆ ಎದುರಾಗಿಫಲಾನುಭವಿಗಳುಶೇಕಡಾವಾರು

1 to 5

34.00

34.12

31.86

93.71

93.38

6 to 8

20.00

20.86

18.69

93.45

86.60

9 to 10

12.00

11.86

10.85

90.42

92.89

ಒಟ್ಟು

66.00

66.66

61.40

93.03

92.11

ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ ಧಾನ್ಯ ಮತ್ತು ಪರಿವರ್ತನಾ ವೆಚ್ಚದ ವಿವರ:ಪ್ರತಿ ವಿದ್ಯಾರ್ಥಿಗೆ/ಪ್ರತಿ ದಿನಕ್ಕೆ) (ರೂ.ಗಳಲ್ಲಿ)

ಕ್ರಸಂ.

ಆಹಾರಪದಾರ್ಥ

ತರಗತಿ 1 ರಿಂದ 5

ತರಗತಿ 6 ರಿಂದ 8

ತರಗತಿ 6 ರಿಂದ 8

ಪ್ರಮಾಣ
(ಗ್ರಾಂಗಳಲ್ಲಿ)

ಅಡುಗೆತಯಾರಿಕಾ ವೆಚ್ಚ

ಪ್ರಮಾಣ
(ಗ್ರಾಂಗಳಲ್ಲಿ)

ಅಡುಗೆತಯಾರಿಕಾವೆಚ್ಚ

ಪ್ರಮಾಣ
(ಗ್ರಾಂಗಳಲ್ಲಿ)

ಅಡುಗೆತಯಾರಿಕಾವೆಚ್ಚ

1

ಅಕ್ಕಿ

100

ಉಚಿತ

150

ಉಚಿತ

150

1.62

2

ಬೇಳೆ

20

1.47

30

2.19

30

2.19

3

ತರಕಾರಿ

50

0.76

75

1.14

75

1.14

4

ಎಣ್ಣೆ

5

0.32

7.5

0.49

7.5

0.49

5

ಉಪ್ಪು

2

0.02

4

0.04

4

0.04

6

ಅಡುಗೆ ಅನಿಲ

-

0.60

-

0.90

-

0.90

 

7

ಸಾಂಬಾರು ಪದಾರ್ಥ

-

0.17

-

0.24

-

0.24

 

ಒಟ್ಟು

3.34

5.00

6.62

ಕೇಂದ್ರ ಸರ್ಕಾರವು 1 ರಿಂದ 8ನೇ ತರಗತಿ ಮಕ್ಕಳಿಗೆ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.


ರಾಜ್ಯ ಸರ್ಕಾರವು 9 ಮತ್ತು 10 ನೇ ತರಗತಿ ಮಕ್ಕಳಿಗೆ ಎ.ಪಿ.ಎಲ್. ದರ ರೂ.8.30/ಕೆ.ಜಿ ಯಂತೆ ಅಕ್ಕಿಯನ್ನು ನೀಡುತ್ತಿದೆ.


ಕೇಂದ್ರ ಮತ್ತು ರಾಜ್ಯ ಸರ್ಕಾರದ ಘಟಕ ವೆಚ್ಚದ ವಿವರ

ತರಗತಿ

ರಾಜ್ಯದ ಪಾಲು

ಕೇಂದ್ರದ 
ಪಾಲು

ಒಟ್ಟು

ಸಾಗಾಣಿಕಾ
ವೆಚ್ಚ(ರೂ.ಗಳಲ್ಲಿ)

ರೂ.ಪೈ

ರೂ.ಪೈ

ರೂ.ಪೈ

ರಾಜ್ಯ

ಕೇಂದ್ರ

1-5

0.84

2.50

3.34

-

75

6-8

1.25

3.75

5.00

-

75

9-10

6.62

0

6.62

75

-

2009-2010 ಜಿಲ್ಲಾವಾರು ಅಂಕಿಅಂಶ

ಶಾಲೆಗಳು.


ಅಡುಗೆ ಕೇಂದ್ರಗಳು.


ಅಡುಗೆ ಕೋಣೆಗಳು.


ಅಡುಗೆ ಸಾಮಗ್ರಿಗಳು.


ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು.


ಸರ್ಕಾರಿ ಶಾಲೆಗಳ ಫಲಾನುಭವಿಗಳು.


ಅನುದಾನಿತ ಶಾಲೆಗಳ ಫಲಾನುಭವಿಗಳು.


ಅನುದಾನಿತ ಮತ್ತು ಸರ್ಕಾರಿ ಶಾಲೆಗಳ ಫಲಾನುಭವಿಗಳು.


ಅನುಷ್ಟಾನ ಮತ್ತು ಮೇಲ್ವಿಚಾರಣೆ

ಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.,ಯವರು ಹಾಗೂ ಮುಖ್ಯ ಅಡುಗೆಯವರು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ  ನಿರ್ದೇಶನ ಹಾಗೂ ಮಾರ್ಗದರ್ಶಿ  ಸೂಚನೆಯಂತೆ ತಾಯಿಯಂದಿರ ಸಮಿತಿಯನ್ನು ಶಾಲೆಗಳಲ್ಲಿ ರಚಿಸಲಾಗಿದ್ದು, ಪ್ರತಿ ದಿನವೂ ಒಬ್ಬ  ವಿದ್ಯಾರ್ಥಿಯ ತಾಯಿ ಅಡುಗೆಯ ಮೇಲ್ವಿಚಾರಣೆ  ಹಾಗೂ ಊಟದ ರುಚಿ ನೋಡಿ ಬಡಿಸುವುದರಲ್ಲಿ  ಪಾಲ್ಗೊಳ್ಳುವುದರ ಮೂಲಕ ಮಕ್ಕಳು ತಮ್ಮ ಮನೆಯ ವಾತಾವರಣದಂತೆ  ಭಾವಿಸಿಕೊಂಡು ವರಾಂಡದಲ್ಲಿ/ಕೋಣೆಯಲ್ಲಿ ಕುಳ್ಳಿರಿಸಿ ಮುಖ್ಯ ಶಿಕ್ಷಕರು/ಶಿಕ್ಷಕರ ಉಸ್ತುವಾರಿ ಊಟ ನೀಡಲಾಗುತ್ತದೆ. ಊಟಕ್ಕೆ ಮುಂಚೆ ಶಿಕ್ಷಕರು ಕಡ್ಡಾಯವಾಗಿ  ರುಚಿ ನೋಡಿ, ರುಚಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿದೆ. ಊಟಕ್ಕೆ ಮುಂಚೆ ಮತ್ತು ನಂತರ ಸೋಪು ಬಳಸಿ ಕೈ ತೊಳೆಯುವ ಉತ್ತಮ ಅಭ್ಯಾಸವನ್ನು ರೂಢಿಸಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಅನುಪಯುಕ್ತ ಹಳೆಯ ವಸ್ತುಗಳನ್ನು ತೆಗೆದು ಹಾಕುವುದು. ಕಾರ್ಯಕ್ರಮದ ಬಗ್ಗೆ ನಿರಂತರ ಗಮನ ಹರಿಸುವುದು. ಅಡುಗೆಯವರು ಅಡುಗೆ ತಯಾರಿಸುವ ಹಾಗೂ ಬಡಿಸುವಾಗ ಏಪ್ರಾನ್ ಬಳಸುವುದು. ನೀರು ಹಾಗೂ ಆಹಾರ ಧಾನ್ಯ , ತರಕಾರಿಗಳ ಸ್ವಚ್ಛತೆ ಬಗ್ಗೆ ನಿಗಾ ವಹಿಸುವುದು. ಶಾಲಾ ಎಸ್.ಡಿ. ಎಂ.ಸಿ.,ಸಭೆಗಳಲ್ಲಿ ಅಕ್ಷರ ದಾಸೋಹ   ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಪರಿಶೀಲಿಸಿ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವಿವರಗಳನ್ನು ದಾಖಲಿಸುತ್ತದೆ ಹಾಗೂ ಶಾಲೆಗೆ ಭೇಟಿ ನೀಡಿರುವ ಅಧಿಕಾರಿಗಳು ಕಡ್ಡಾಯವಾಗಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ ವರದಿಯಲ್ಲಿ  ದಾಖಲಿಸಬೇಕಾಗಿರುತ್ತದೆ..


ಮಧ್ಯಾಹ್ನ ಉಪಹಾರ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ  ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕಾಯ್ರಕ್ರಮದ  ಅನುಷ್ಡಾನದಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ವಹಿಸುವುದು ಎಲ್ಲಾ ಸ್ಥರದ ಅಧಿಕಾರಿ/ಸಿಬ್ಬಂದಿಯವರ ಜವಾಬ್ದಾರಿಯಾಗಿದ್ದು, ಸುತ್ತೋಲೆ/ಆದೇಶ/ಮಾರ್ಗಸೂಚಿಗಳಂತೆ ಹಾಗೂ ಈ ಕೆಳಗೆ ಸೂಚಿಸಿರುವ ಕರ್ತವ್ಯಗಳಲ್ಲಿನ ಮಕ್ಕಳ ಸುರಕ್ಷತೆಗಾಗಿ ಜವಾಬ್ದಾರಿಗಳನ್ನು ನಿರ್ವಹಿಸುವರು.


ಅಡುಗೆಯನ್ನು ಮಕ್ಕಳಿಗೆ ಊಟ ಬಡಿಸುವ ಅರ್ಧ ಘಂಟೆ ಮುಂಚಿತವಾಗಿ ತಯಾರಿಸಿ ದೊಡ್ಡ ಪಾತ್ರೆಗಳಿಂದ ಚಿಕ್ಕ ಪಾತ್ರೆಗಳಿಗೆ  ಬದಲಾಯಿಸಿಕೊಂಡು ಒಂದನೇ ತರಗತಿಯ ಮಕ್ಕಳೂ ಸಹ ಸರಾಗವಾಗಿ ಊಟ ಮಾಡಲು ಸಾಧ್ಯವಾಗುವಷ್ಟು ಬಿಸಿ ಇರುವಂತೆ ನೋಡಿಕೊಂಡು ಬಡಿಸತಕ್ಕದ್ದು. ಅಡುಗೆ ಕೋಣೆಯೊಳಗೆ ಯಾವ ಮಕ್ಕಳೂ ಯಾವುದೇ ಕಾರಣಕ್ಕೂ ಹೋಗದಂತೆ ನಿಷೇಧಿಸುವುದು.ಅಡುಗೆಯವರು ಯಾವುದೇ ಕಾರಣಕ್ಕೂ ದೊಡ್ಡದೊಡ್ಡ ಪಾತ್ರೆಗಳಲ್ಲಿ ತುಂಬಿಕೊಂಡು ಊಟ ಬಡಿಸುವುದು. ಕಡ್ಡಾಯವಾಗಿ ಶಾಲಾ ಕಾರಿಡಾರಿನಲ್ಲಿಯೇ ಅಥವಾ ತರಗತಿ ಕೋಣೆಯೋಳಗೆ ಮಕ್ಕಳು ಕುಳಿತು ಊಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು  ಊಟವನ್ನು ತಟ್ಟೆಗೆ ಹಾಕಿಸಿಕೊಳ್ಳುವುದನ್ನು ನಿಷೇಧಿಸಿದೆ. ಕಾರಿಡಾರ್ ಅಥವಾ ಕೋಣೆ ಯೊಳಗೆ ಊಟ ಬಡಿಸಬೇಕು. ಮಕ್ಕಳು ಕುಳಿತು ಊಟ ಮಾಡಬೇಕು. ಹೆಚ್ಚು ಮಕ್ಕಳಿದ್ದಲ್ಲಿ  ಸರದಿ ಪ್ರಕಾರ ಊಟ ನೀಡುವುದು. ಊಟದ ಬೆಲ್ ಆದ ತಕ್ಷಣ ಆಯಾ ತರಗತಿಯ ಶಿಕ್ಷಕರು  ಅವರವರ ತರಗತಿ ಕೋಣೆಯೊಳಗೆ ಧಾವಿಸಿ ಮುಂದೆ ನಿಂತು ಮಕ್ಕಳು ತರಗತಿ ಕೋಣೆಯಿಂದ ಹೊರಟು ಹೊರಗಡೆ ಊಟದ  ಕಾರಿಡಾರ್ ವರೆಗೆ ಬಂದು ಕ್ರಮವಾಗಿ ಕುಳಿತುಕೊಂಡು ಊಟವನ್ನು ಪಡೆದು ಊಟಮಾಡಿ ಮತ್ತೆ ಕೈ ತಟ್ಟೆ ತೊಳೆದುಕೊಂಡು ತರಗತಿ ಕೋಣೆಗೆ ಹೋಗಿ ಅವರ ತಟ್ಟೆಗಳನ್ನು ಇಡಲು ಹೋಗುವವರೆಗೆ ಉಸ್ತುವಾರಿ ವಹಿಸಲು ತರಗತಿ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಸೂಕ್ತ ಆದೇಶವನ್ನು ಮೆಮೊ ಮೂಲಕ ನೀಡಲು ಸೂಚಿಸಿದೆ. ತರಗತಿ ಶಿಕ್ಷಕರು ರಜೆ ಇದ್ದಾಗ ಈ ಉಸ್ತುವಾರಿ ಕೆಲಸವನ್ನು ಬೇರೆ ಶಿಕ್ಷಕರಿಗೆ ತಪ್ಪದೇ ಬೆಳಗಿನ ಅವಧಿಯಲ್ಲಿಯೇ ಮುಖ್ಯ ಶಿಕ್ಷಕರು ಮೆಮೊ ಮೂಲಕ ಆದೇಶ ನೀಡಬೇಕು.ಯಾವುದೇ ಕೆಲಸವಿದ್ದರೂ ಅದನ್ನು ಬಿಟ್ಟು ಮುಖ್ಯಶಿಕ್ಷಕರು  ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರು ಹಾಗೂ ಅಡುಗೆಯವರೂ ಕಡ್ಡಾಯವಾಗಿ ಹಾಜರಿದ್ದು, ಮುಂದೆ ನಿಂತು ಊಟದ ಉಸ್ತುವಾರಿ ನಿರ್ವಹಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ


ತಾಲ್ಲೂಕು ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರ್ ರವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ನಲ್ಲಿ ಉಸ್ತುವಾರಿ ಹಾಗೂ ಪರಾಮರ್ಶ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದ ಅನುಷ್ಠಾನ ಹಾಗೂ ಮೇಲುಸ್ತುವಾರಿಯನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಗಳು ನಿರ್ವಹಿಸುತ್ತಿದ್ದಾರೆ. ತಾಲ್ಲೂಕು  ಕಾರ್ಯ ನಿರ್ವಹಣಾಧಿಕಾರಿಗಳ ಅಧೀನದಲ್ಲಿ ಸಹಾಯಕ ನಿರ್ದೇಶಕರು (ಅಕ್ಷರ ದಾಸೋಹ) ಕಾರ್ಯಕ್ರಮದ ಅನುಷ್ಠಾನದಲ್ಲಿ  ನೆರವಾಗಲು ಕಾರ್ಯನಿರ್ವಹಿತ್ತಿದ್ದಾರೆ. 
ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಂದಲೂ ಫಲಾನುಭವಿ ಮಕ್ಕಳ ಸಂಖ್ಯೆಗನುಗುಣವಾಗಿ ಬೇಡಿಕೆ ಮತ್ತು ಉಪಯೋಗಿತಾ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಕ್ರೋಢೀಕರಿಸಿ, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರಿಗೆ ತಲುಪಿಸುವುದು. ಅವರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಹಾಯ ಪಡೆದುಕೊಂಡು ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಫಲಾನುಭವಿಗಳ ವಿವರವಾದ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ತಲುಪಿಸುವುದು. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಡೆದುಕೊಂಡ ಮಾತ್ರೆಗಳನ್ನು ಸಿ.ಆರ್.ಪಿ. ಗಳ ಮೂಲಕ ಶಾಲಾ ಮಕ್ಕಳಿಗೆ ವಿತರಿಸಬೇಕು.


ಕ್ಷೇತ್ರಶಿಕ್ಷಣಾಧಿಕಾರಿಗಳು ತಾಲ್ಲೂಕು ಪಂಚಾಯತ್  ಕಾರ್ಯನಿರ್ವಾಹಣಾಧಿಕಾರಿಗಳು, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಎಸ್. ಡಿ. ಎಂ. ಸಿ. ಹಾಗೂ ಶಾಲಾ ಮುಖ್ಯಶಿಕ್ಷಕರರುಗಳೊಂದಿಗೆ ಉತ್ತಮ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಿ.ಆರ್.ಸಿ.,ಇ.ಸಿ.ಒ./ ಸಿ.ಆರ್.ಪಿ. ಇವರ ಸೇವೆಯನ್ನು ಕಾರ್ಯಕ್ರಮಕ್ಕೆ ಉಪಯೋಗಿಸಿ ಕೊಳ್ಳಬೇಕಾಗುತ್ತದೆ


ಜಿಲ್ಲಾಧಿಕಾರಿಗಳ/ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಚಾಲನಾ ಮತ್ತು ಪರಾಮರ್ಶನ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ ಹಾಗೂ ಇದರಿಂದ ಕಾರ್ಯಕ್ರಮದ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲಾಗುತ್ತಿದೆ.


ಜಿಲ್ಲಾ  ಮಟ್ಟದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮಕ್ಕೆ ಉಪನಿರ್ದೇಶಕರು ಸಹಕಾರ ನೀಡಬೇಕು. ಇವರು ಜಿಲ್ಲೆ ಮತ್ತು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಆಹಾರ ಸಾಮಗ್ರಿಗಳು ಹಾಗೂ ಅನುದಾನದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸಂಗ್ರಹಿಸಿ, ಕ್ರೋಢೀಕರಿಸಿ, ರಾಜ್ಯ ಅನುದಾನದ ಯೋಜನೆ ಕೇಂದ್ರ ಕಛೇರಿಯ ಜಂಟಿ ನಿರ್ದೇಶಕರಿಗೆ ತಲುಪಿಸಬೇಕು. ಅಡುಗೆ ಕೋಣೆ ನಿರ್ಮಾಣ ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಅಗ್ನಿನಂದಕ ಅಳವಡಿಕೆ ಬಗ್ಗೆ ಗಮನಹರಿಸಿ ಕಡ್ಡಾಯವಾಗಿ ಎಲ್ಲಾ ಸರ್ಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.


ರಾಜ್ಯ ಮಟ್ಟದಲ್ಲಿ ಚಾಲನಾ ಮತ್ತು ಪರಾಮರ್ಶ ಸಮಿತಿ, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದು, ಸದರಿ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.


ಸೂಚಿತ ಆಹಾರ ಪಟ್ಟಿ

ವಿದ್ಯಾರ್ಥಿಗಳಿಗೆ ವಾರದಲ್ಲಿ ಈ ಕೆಳಕಂಡಂತೆ ಆಹಾರವನ್ನು ತಯಾರಿಸಿ ನೀಡಲು ಸೂಚಿಸಲಾಗಿದೆ.

ವಾರ/ದಿನ

ನಿಗದಿ ಪಡಿಸಿರುವಆಹಾರದ ವಿವರ

ಸಾಂಬಾರಿಗೆ ಬಳಸಬೇಕಾದ 
ತರಕಾರಿ

ಸೋಮವಾರ

ಅನ್ನ-ಸಾಂಬಾರ್

ಪಾಲಕ್, ನುಗ್ಗೆ ಸೊಪ್ಪು ಅಥವಾ ಇತರೆ ಸೊಪ್ಪು,ಆಲೂಗೆಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಮಂಗಳವಾರ

ಅನ್ನ-ಸಾಂಬಾರ್

ಬೂದುಕುಂಬಳ,ಕ್ಯಾರೆಟ್,ಬೀನ್ಸ್,ಎಲೆಕೋಸು, ಬೀಟ್ರೂಟ್,ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಬುಧವಾರ

ಅನ್ನ-ಸಾಂಬಾರ್

ನುಗ್ಗೆಕಾಯಿ,ಬೀನ್ಸ್ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಗುರುವಾರ

ಅನ್ನ-ಸಾಂಬಾರ್

ಕುಂಬಳಕಾಯಿ,ಸೋರೆಕಾಯಿ, ಸಾಂಬಾರುಸೌತೆ,ಬೆಂಡೆಕಾಯಿ,ಹೀರೆಕಾಯಿ,ಮೂಲಂಗಿ,ಇತರೆ ತರಕಾರಿಗಳು

ಶುಕ್ರವಾರ/
ಭಾನುವಾರ

ಬಿಸಿಬೇಳೆ ಬಾತ್

ಬೀನ್ಸ್,ಗೆಡ್ಡೆಕೋಸು,ಕ್ಯಾರೆಟ್, ಕ್ಯಾಪ್ಸಿಕಮ್,ಈರುಳ್ಳಿ ಟೊಮೆಟೋ ಇತರೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು

ಶನಿವಾರ

ಗೋಧಿ ಉತ್ಪನ್ನಗಳಿಂದ ತಯಾರಿಸಿದ ಆಹಾರ

ಈರುಳ್ಳಿ, ಬೀನ್ಸ್, ಕ್ಯಾರೆಟ್, ಎಲೆಕೋಸು ಸಬ್ಬಸ್ಸಿಗೆ ಸೊಪ್ಪು ಮತ್ತು ಇತರೆ ದ್ವಿದಳ ಧಾನ್ಯಗಳು

ಷರಾ:ಬೇಳೆ/ಕಾಳನ್ನು ಕಡ್ಡಾಯಗೊಳಿಸಿದೆ. ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸುವುದು. ಸ್ಥಳೀಯವಾಗಿ ಆಹಾರ ಪದ್ಧತಿಯನ್ವಯವೇ ತರಕಾರಿಗಳನ್ನು ಮತ್ತು ಸಾಂಬಾರು ಪದಾರ್ಥಗಳನ್ನು ಹೊಂದಾಣಿಕೆ ಮಾಡಿಕೊಂಡು ಆಹಾರ ಸಿದ್ಧಪಡಿಸುವುದು. ಸಿದ್ಧ ಪಡಿಸಿದ ಸಾಂಬಾರು ಪದಾರ್ಥ/ಪುಡಿಗಳನ್ನು ಆಗ್ ಮಾರ್ಕ್ ಮುದ್ರೆ/ಪ್ರಮಾಣ ಪತ್ರ ಹೊಂದಿರುವ ತಯಾರಕರಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಬಳಸುವುದು ಅಥವಾ ಉತ್ತಮ ಸಾಮಗ್ರಿಗಳನ್ನು ಬಳಸಿ ಸ್ವಂತವಾಗಿ ತಯಾರಿಸಿ ಬಳಸುವುದು. ಸ್ಥಳೀಯ ಹವಾಮಾನ /ವಾತಾವರಣಕ್ಕೆ ಅನುಗುಣವಾಗಿ ತರಕಾರಿ ಮತ್ತು ಸಾಂಬಾರು ಪದಾರ್ಥಗಳನ್ನು ಬಳಸುವುದು.

ಪೌಷ್ಠಿಕಾಂಶದ ವಿವರ

ಬಿಸಿಊಟ ನೀಡುವುದರಿಂದ ಪ್ರತೀ ಮಗುವಿಗೆ ದಿವಸಕ್ಕೆ ಪ್ರಾಥಮಿಕ ಶಾಲಾ ಮಕ್ಕಳಿಗೆ 490 ಕ್ಯಾಲರಿಯಷ್ಟು ಪೌಷ್ಠಿಕಾಂಶ ಹಾಗೂ 12 ರಿಂದ 16 ಗ್ರಾಂ ಪ್ರೋಟೀನ್ ದೊರೆಯುತ್ತದೆ. 
2012-13 ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಮಧ್ಯಾಹ್ನ ಬಿಸಿಊಟದಲ್ಲಿ ರಾಗಿ ಮುದ್ದೆ ಮತ್ತು ಸೊಪ್ಪಿನ ಸಾಂಬಾರನ್ನು ನೀಡಲಾಗುತ್ತಿದೆ. 2013-14 ನೇ ಸಾಲಿಗೆ ಚಿತ್ರದುರ್ಗ, ಶಿವಮೊಗ್ಗ, ಕೋಲಾರ  ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ರಾಗಿ ಬಳಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ.

ಮಾತ್ರೆಗಳ ಸರಬರಾಜು ವಿವರ

ಶಿಕ್ಷಣ ಇಲಾಖೆಯಿಂದ ನಿರ್ವಹಿಸಲಾಗುವ ಮಾತ್ರೆಗಳು

1 ರಿಂದ 7ನೇ ತರಗತಿಯವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಿಟಮಿನ್ ಎ 2 ಲ್ಯಾಕ್ ಐ.ಯು 6 ತಿಂಗಳಿಗೆ 1 ರಂತೆ ವರ್ಷಕ್ಕೆ 2 ಮಾತ್ರೆಗಳನ್ನು ನೀಡಲಾಗುವುದು.

ಆರೋಗ್ಯ ಇಲಾಖೆಯಿಂದ ನಿರ್ವಹಿಸಲಾಗುವ ಮಾತ್ರೆಗಳು

1 ರಿಂದ 10 ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎನ್. ಆರ್. ಹೆಚ್. ಎಂ. WIFS ಕಾರ್ಯಕ್ರಮದಡಿ ವಾರಕ್ಕೊಂದು ಸಲ ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆ ಮತ್ತು 6 ತಿಂಗಳಿಗೆ 1 ರಂತೆ ವರ್ಷಕ್ಕೆ 2  ಆಲ್ ಬೆಂಡಜೋಲ್ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತದೆ

ಅಡುಗೆ ಕೋಣೆ & ಉಪಕರಣಗಳು

ಅಡುಗೆ ಕೋಣೆಗಳ ವಿವರ

ಕೇಂದ್ರ ಸರ್ಕಾರವು 2007-08 ನೇ ಸಾಲಿನಲ್ಲಿ 18241 ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲು ಪ್ರತೀ ಅಡುಗೆ ಕೋಣೆಗೆ ರೂ. 60,000/- ದಂತೆ ಒಟ್ಟು 10,944.60 ಲಕ್ಷಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಅನುದಾನವನ್ನು ರಾಜ್ಯ ಸರ್ಕಾರವು ಜುಲೈ-09 ರ ಮಾಹೆಯಲ್ಲಿ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ.

ಸೂಚಿತ ನಕ್ಷೆಯಂತೆ, 2007-08ರಲ್ಲಿನ ಎಸ್.ಆರ್. ದರದಂತೆ ಕೇಂದ್ರ ಸರ್ಕಾರವು ನೀಡಿದ ಮೊತ್ತದಲ್ಲಿ ನಿರ್ಮಿಸಲು ರೂ. 1.85 ಲಕ್ಷಗಳು ಬೇಕಾಗುತ್ತದೆ. ಕಟ್ಟಡದ ನಿರ್ಮಾಣದ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರದಿಂದ ಮ್ಯಾಚಿಂಗ್ ಗ್ರ್ಯಾಂಟ್ ಬಳಸಿಕೊಂಡು ಅಡುಗೆ ಕೋಣೆ ಪೂರ್ಣಗೊಳಿಸಲು ಜ್ಞಾಪನ ಹೊರಡಿಸಲಾಗಿದೆ.

2011-12 ನೇ ಸಾಲಿನ ಆರ್ಥಿಕ ವರ್ಷದ ಕೊನೆಯಲ್ಲಿ ಕೇಂದ್ರ ಸರ್ಕಾರವು 8724 ಅಡುಗೆ ಕೋಣೆಗಳನ್ನು ಕೇಂದ್ರ ಮತ್ತು ರಾಜ್ಯದ ಶೇ.75:25 % ರ ಅನುಪಾತದಂತೆ ವಿವಿಧ ಪ್ಲಿಂತ್ ಏರಿಯಾವಾರು ಪ್ರತೀ ಏರಿಯಾಕ್ಕೆ ರೂ. 3.01 ಲಕ್ಷಗಳಂತೆ ಒಟ್ಟಾರೆ ರೂ. 33660.83 ಲಕ್ಷಗಳಿಗೆ ಅನುಮೋದನೆ ನೀಡಿ ಕೇದ್ರ ಸರ್ಕಾರದ ಬಾಬ್ತಾದ ರೂ.25245.62 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಜಿಲ್ಲೆಗಳಿಗೆ ರಾಜ್ಯದ ಪಾಲಾದ ರೂ. 8415.21 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. 
2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 3906 ಅಡುಗೆ ಕೋಣೆಗಳು ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಕೇಂದ್ರದ ಪಾಲು ರೂ.11975.59 ಲಕ್ಷಗಳು ಹಾಗೂ ರಾಜ್ಯದ ಪಾಲು ರೂ.3991.86 ಲಕ್ಷಗಳು ಒಟ್ಟಾರೆ ರೂ.15967.45 ಲಕ್ಷಗಳಾಗಿರುತ್ತದೆ.

ಪಾತ್ರೆ ಪರಿಕರಗಳ ಖರೀದಿ ಬಗ್ಗೆ

ಕಾರ್ಯಕ್ರಮದ ಪ್ರಾರಂಭದಲ್ಲಿ ಪಾತ್ರೆ ಪರಿಕರ ಹಾಗೂ ಸ್ಟೌ ಖರೀದಿಸಲು ರಾಜ್ಯ ಸರ್ಕಾರವು ಪ್ರತೀ ಅಡುಗೆ ಕೇಂದ್ರಕ್ಕೆ ರೂ.5000/- ರಂತೆ ಅನುದಾನ ನೀಡಿದೆ. 2006-07 ನೇ ಸಾಲಿನಿಂದ ಕೇಂದ್ರ ಸರ್ಕಾರವು ಪಾತ್ರೆ ಹಾಗೂ ಸ್ಟೌ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿದ್ದು, ಅದರ ವಿವರ ಕೆಳಕಂಡಂತಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗಿರುವ ಹೊಸ ಅಡುಗೆ ಕೇಂದ್ರಗಳಿಗೆ MME ಅಡಿಯಲ್ಲಿ 1283 ಪ್ರಾಥಮಿಕ ಕೇಂದ್ರಗಳಿಗೆ ರೂ. 5000/- ನಂತೆ 64.15 ಲಕ್ಷಗಳನ್ನು 1023 ಪ್ರೌಢ ಶಾಲೆಗಳಿಗೆ (ರೂ.7500/-ರಂತೆ) ಒಟ್ಟು 77.40 ಲಕ್ಷಗಳನ್ನು ಬಿಡುಗಡೆಗೊಳಿಸಿ, ವೆಚ್ಚ ಭರಿಸಲಾಗಿದೆ.

2012-13 ನೇ ಸಾಲಿಗೆ 16,325 ಹೊಸ ಕೇಂದ್ರಗಳಿಗೆ ಪಾತ್ರೆ ಪರಿಕರಕ್ಕಾಗಿ ಮಂಜೂರಾತಿ ನೀಡಿದ್ದು, ಹಾಗೂ 30,691 ಕೇಂದ್ರಗಳ ಹಳೆಯ ಪಾತ್ರೆ ಪರಿಕರಗಳನ್ನು ಬದಲಾವಣೆಗೆ ರೂ.5000/-ರಂತೆ ಒಟ್ಟಾರೆ ರೂ.2135.85 ಲಕ್ಷಗಳನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿದ್ದು, ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಬಿಡುಗಡೆಗೊಳಿಸಿದೆ.

ವರ್ಷ

ಮಂಜೂರಾತಿ

ಖರೀದಿ
ಪೂರ್ಣವಾಗಿರುವುದು

ಬಾಕಿ

ಶೇ.

ಷರಾ

ಭೌತಿಕ

ಆರ್ಥಿಕ

ಭೌತಿಕ

ಆರ್ಥಿಕ

2006-07

14401

720.05

14401

720.05

0

100

ಖರೀದಿ ಆಗಿರುತ್ತದೆ

2007-08

16290

814.50

16290

814.50

0

100

ಖರೀದಿ ಆಗಿರುತ್ತದೆ

900

45.00

900

45.00

0

100

ಖರೀದಿ ಆಗಿರುತ್ತದೆ

2011-12

2315

141.55

2315

141.55

0

100

ಖರೀದಿ ಆಗಿರುತ್ತದೆ

2012-13

42717

2135.85

42717

2135.85

0

100

ಖರೀದಿ ಆಗಿರುತ್ತದೆ

ಅಡುಗೆ ಸಿಬ್ಬಂದಿ ವಿವರ

ಒಟ್ಟು ಕೇಂದ್ರ ಸರ್ಕಾರದಿಂದ 1,14,653 ಅಡುಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ದೊರೆತಿದ್ದು, ಪ್ರಸ್ತುತ 1,08,209 ಅಡುಗೆಯವರು ಕಾರ್ಯ ನಿರ್ವಹಿಸಿತ್ತಿದ್ದಾರೆ, ಉಳಿದ ಅಡುಗೆಯವರನ್ನು ಎನ್.ಜಿ.ಒ. ನೀಡುತ್ತಿರುವ  ಶಾಲೆಗಳಿಗೆ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದ್ದು, ಈವರೆಗೆ 2025 ಸಹಾಯಕರನ್ನು  ನೇಮಕ ಮಾಡಿಕೊಳ್ಳಲಾಗಿದೆ.
ಗೌರವ ಧನವನ್ನು ಮುಖ್ಯ ಅಡುಗೆಯವರಿಗೆ ರೂ. 1,700/- ಮತ್ತು ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಸಹಾಯಕರಿಗೆ ರೂ.1600/-ಗಳನ್ನು ನಿಗದಿ ಪಡಿಸಿದೆ.

ದಿನಾಂಕ: 01-01-2014 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರವು ಅಡುಗೆಯವರ ಗೌರವ ಸಂಭಾವನೆಯನ್ನು ರೂ.500/- ಗಳನ್ನು ಹೆಚ್ಚಿಸಿದ್ದು, ಪ್ರಸ್ತುತ ಮುಖ್ಯ ಅಡುಗೆಯವರಿಗೆ ಮಾಸಿಕ ರೂ.1700/- ಹಾಗೂ ಸಹಾಯಕ ಅಡುಗೆಯವರಿಗೆ ರೂ.1600/- ಗಳನ್ನು ನೀಡಲಾಗುತ್ತಿದೆ.


ಕೇಂದ್ರ ಸರ್ಕಾರವು ದಿನಾಂಕ 01-12-2009  ರಿಂದ ಅಡುಗೆ ತಯಾರಕರಿಗೆ ಸಂಭಾವನೆಯನ್ನು ತಿಂಗಳಿಗೆ ರೂ.1000/- ದಂತೆ ನಿಗದಿಗೊಳಿಸಿದೆ. ಸದರಿ ಸಂಭಾವನೆಯನ್ನು ಕೇಂದ್ರ ಸರ್ಕಾರ ಶೇ.75, ರಾಜ್ಯ ಸರ್ಕಾರ ಶೇ.25 ರ ಆಧಾರದಲ್ಲಿ ಪಾವತಿಸುತ್ತದೆ. ಮುಖ್ಯ ಅಡುಗೆಯವರಿಗೆ ಹೆಚ್ಚುವರಿಯಾಗಿ ರೂ.100/- ಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ.


ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಅಡುಗೆ ತಯಾರಿಸುವ ಸುಟ್ಟ ಗಾಯಗಳಾದಲ್ಲಿ ರೂ.30000/- ಗಳನ್ನು, ಅಂಗವಿಕಲತೆ ಉಂಟಾದಲ್ಲಿ ರೂ.75,000/- ಮತ್ತು ಸುಟ್ಟ ಗಾಯಗಳಾಗಿ ಮರಣ ಹೊಂದಿದರೆ ರೂ.1 ಲಕ್ಷ ಪರಿಹಾರ ನೀಡಲಾಗುತ್ತಿದೆ


ಅಗ್ನಿ ನಂದಕಗಳ ಅಳವಡಿಕೆ

ಭಾರತದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:13-04-2009 ರಲ್ಲಿನ ತೀರ್ಪಿನಂತೆ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಗ್ನಿ ಆಕಸ್ಮಿಕಗಳು ನಡೆಯದಂತೆ ಅನಾಹುತಗಳನ್ನು ತಡೆಯುವ ಸಲುವಾಗಿ ಅಗ್ನಿ ನಂದಿಸುವ ಸಾಧನಗಳನ್ನು ಅಳವಡಿಸಲು ಆದೇಶವಾಗಿರುತ್ತದೆ.

ಅದರಂತೆ, ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಈಗಾಗಲೇ ಬಂದಿರುವ ಮಾಹಿತಿಯಂತೆ ಶೇ.99.8 ರಷ್ಟು ಶಾಲೆಗಳಲ್ಲಿ  ಅಗ್ನಿ ನಂದಕಗಳನ್ನು ಅಳವಡಿಸಲಾಗಿದೆ. ಕಡ್ಡಾಯವಾಗಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಮತ್ತೊಮ್ಮೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಸಹಕಾರವನ್ನು ಪಡೆದು ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ  ತರಬೇತಿಯನ್ನು ಏರ್ಪಡಿಸಲು ಸಹ ಸೂಚಿಸಿದೆ. ಪೌಡರ್ ಬದಲಾಯಿಸಲು ಶಾಲಾ ಸಂಚಿತ ನಿಧಿಯಲ್ಲಿ ಹಣ ಬಳಸಲು ಅನುಮತಿ ನೀಡಲಾಗಿದೆ. ಅದರಂತೆ  ಅಗ್ನಿ ನಂದಕಗಳನ್ನು ಸದಾಕಾಲ ಸುಸ್ಥಿತಿಯಲ್ಲಿಡಲು ಕಡ್ಡಾಯವಾಗಿದೆ

ಅಡುಗೆ ಕೇಂದ್ರಗಳ ವಿವರ

ರಾಜ್ಯದಲ್ಲಿ ಒಟ್ಟು 46,414 ಅಡುಗೆ ಕೇಂದ್ರಗಳಿದ್ದು, ಈ ಕೆಳಕಂಡಂತೆ ಅಡುಗೆ ಕೇಂದ್ರಗಳನ್ನು ವರ್ಗೀಕರಿಸಲಾಗಿದೆ.

ಕ್ರ.ಸಂ.

ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗ

ಮಕ್ಕಳಸಂಖ್ಕೆ

ಕೇಂದ್ರದ ಮಾದರಿ

ಅಡುಗೆಯವರ ಸಂಖ್ಯೆ

1

1 ರಿಂದ 25 ರವರೆಗೆ

1

2

26 ರಿಂದ 100 ರವರೆಗೆ

ಬಿ

2

3

101 ರಿಂದ 200 ರವರೆಗೆ

ಸಿ

3

4

201 ರಿಂದ 300 ರವರೆಗೆ

ಡಿ

4

5

301 ರಿಂದ 500 ರವರೆಗೆ

5

6

501 ರಿಂದ 800 ರವರೆಗೆ

ಎಫ್

6

7

801 ರಿಂದ 1100 ರವರೆಗೆ

ಜಿ

7

8

1101 ರಿಂದ 1400 ರವರೆಗೆ

ಹೆಚ್

8

9

1401 ರಿಂದ 1700 ರವರೆಗೆ

9

10

1701 ರಿಂದ 25 ಮೇಲ್ಪಟ್ಟು

ಜೆ

10

l

ಅಡುಗೆಯವರ ಆಯ್ಕೆ

ಆಯ್ಕೆ ಸಮಿತಿಯು  ಕೆಳಕಂಡ ಅಂಶಗಳನ್ನು ಒಳಗೊಂಡಿದೆ

ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮುನ್ಸಿಪಾಲಿಟಿ/ಪಟ್ಟಣ ಕಾರ್ಪೋರೇಷನ್ ವಾರ್ಡ್ ನ ಸದಸ್ಯರು ಈ ಸಮಿತಿಯ ಅಧ್ಯಕ್ಷರಾಗಿರಬೇಕು.


ಎಸ್. ಡಿ. ಎಂ. ಸಿ. ಅಧ್ಯಕ್ಷರು-ಸದಸ್ಯರು,


ಶಾಲಾ ಮುಖ್ಯಸ್ಥರು-ಸದಸ್ಯರು.


ಪಟ್ಟಣ ಕಾರ್ಪೋರೇಷನ್ನಿನ ಮುಖ್ಯಾಧಿಕಾರಿ /ಮುನ್ಸಿಪಾಲಿಟಿಯ ಪ್ರಧಾನ ಕಾರ್ಯದರ್ಶಿ/ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಇವರಲ್ಲಿ ಯಾರಾದರೂ ಸಮಿತಿಯ ಕಾರ್ಯದರ್ಶಿಯಾಗಿರಬೇಕು.


ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವಸಂದರ್ಭದಲ್ಲಿ  ಕೆಳಕಂಡ ಅಂಶಗಳು ಒಳಗೊಂಡಿರಬೇಕು

ಗ್ರಾಮ ಪಂಚಾಯತಿಯ ಅಧ್ಯಕ್ಷರು/ಪಟ್ಟಣ ಕಾರ್ಪೋರೇಷನ್ನಿನ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಪ್ರಾಥಮಿಕ ಸಭೆಯು ನಡೆಯುವುದು.


ಒಂದು ಶಾಲೆಗಿಂತ ಹೆಚ್ಚಿನ ಶಾಲೆಗಳಲ್ಲಿ ಅಡುಗೆ ಕೇಂದ್ರ ತೆರೆಯಬೇಕಾದ ಸಂದರ್ಭದಲ್ಲಿ ಆಯಾ ಶಾಲಾ ಮುಖ್ಯಸ್ಥರು ಆ ಸಭೆಯ ವಿಶೇಷ ಆಹ್ವಾನಿತರಾಗಿರುವುದು.


ಈ ಸಭೆಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕುರಿತು ಚರ್ಚಿಸುವುದು ಮತ್ತು ಅರ್ಜಿ ಅಹ್ವಾನಿಸುವ ಹಾಗೂ ನೇಮಕಾತಿಯ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು.


ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಸಭಾ ನಡಾವಳಿಯನ್ನು ಅನುಸರಿಸುವುದು.


ವಿದ್ಯಾರ್ಹತೆ, ಕಾಲಾವಧಿ ಮತ್ತು ಅಡುಗೆ ಸಿಬ್ಬಂದಿಯನ್ನು ನೇಮಕಾತಿ ಮಾಡಲು ನೀಡುವ ಸಂಭಾವನೆ ಕುರಿತಾದ ವಿವರಗಳನ್ನು ಗ್ರಾಮ ಪಂಚಾಯಿತಿಯು ಹತ್ತು ದಿನಗಳಿಗೆ ಮೊದಲೇ ಸೂಚನಾ ಫಲಕದಲ್ಲಿ ಸೂಚಿಸುವುದು.


ಮುಖ್ಯ ಅಡುಗೆಯವರೂ ಸೇರಿದಂತೆ ಉಳಿದ ಅಡುಗೆಯವರೆಲ್ಲರೂ ಮಹಿಳೆಯರಾಗಿರಬೇಕು.


ಮುಖ್ಯ ಅಡುಗೆಯವರ ವಿದ್ಯಾರ್ಹತೆ ಕನಿಷ್ಠ ಏಳನೇ ತರಗತಿ ತೇರ್ಗಡೆಯಾಗಿರಬೇಕು. ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯು ಅದೇ ಗ್ರಾಮಕ್ಕೆ ಸೇರಿದವರೆಂದು ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳಿಂದ ದೃಢೀಕರಿಸುವುದು.


ಅಡುಗೆ ಸಿಬ್ಬಂದಿ ಸಹಾಯಕರಿಗೆ ವಿದ್ಯಾರ್ಹತೆಯನ್ನು ನಿಗದಿ ಪಡಿಸಿರುವುದಿಲ್ಲ. ಆದರೆ ಅಕ್ಷರಸ್ಥರಿಗೆ ಆದ್ಯತೆ ನೀಡುವುದು.


ಮುಖ್ಯ ಅಡುಗೆಯವರು/ಅಡುಗೆಯವರನ್ನು ಆರಿಸುವಾಗ 30 ವರ್ಷ ವಯಸ್ಸಿನ ಹಾಗೂ ಅದೇ ಗ್ರಾಮಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡುವುದು.


ಆಯ್ಕೆಯ ಸಂದರ್ಭದಲ್ಲಿ ವಿಧವೆಯರು ಹಾಗೂ ನೊಂದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು.


ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ.ಜಾ./ಪ.ಪಂ.ಕ್ಕೆ ಸೇರಿದವರನ್ನೇ ಆಯ್ಕೆ ಮಾಡಬೇಕು.


ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು ಹಾಗೂ ಮತ್ತೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.


ಬಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಹಾಗೂ ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿರಬೇಕು.


ಸಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಮತ್ತು ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ನಾಲ್ಕನೆಯವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು.


ಸರ್ಕಾರಕ್ಕೆ ಹೊರೆಯಾಗದಂತೆ ಆಯಾ ಮುನ್ಸಿಪಾಲಿಟಿ ಹಾಗೂ ಸಿಟಿ ಕಾರ್ಪೋರೇಷನ್ ವ್ಯಾಪ್ತಿಗೆ ಒಳಪಡುವ  ಸ್ಥಳೀಯ ದಿನಪತ್ರಿಕೆಗಳಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ  ಉಚಿತ ಸಾರ್ವಜನಿಕ ಪತ್ರಿಕಾ ಪ್ರಕಟಣೆಯನ್ನು ನೀಡುವುದು. ಪ್ರಕಟಣೆಯು ಭಿತ್ತಿ ಪತ್ರ, ಕರ ಪತ್ರ ಹಾಗೂ ಪ್ಲೇ ಕಾರ್ಡ್ ಗಳ ಮೂಲಕವೇ ಇರಬೇಕು.ಸ್ಥಳೀಯವಾಗಿ ಪ್ರಕಟಿಸುವ ಸಂದರ್ಭದಲ್ಲಿ  ಸಂದರ್ಶನ ದಿನಾಂಕವನ್ನು ತಪ್ಪದೇ ತಿಳುಸುವುದು.


ಸಂದರ್ಶನಕ್ಕೆ ಬರುವ ಅಭ್ಯರ್ಥಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.


ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕ  ಪಟ್ಟಿಯನ್ನು ಜೆರಾಕ್ಸ್ ದ್ವಿಪ್ರತಿಯಲ್ಲಿ, ಇತ್ತೀಚಿನ ಪಾಸ್ ಪೋರ್ಟ್  ಅಳತೆಯ ಎರಡು ಭಾವಚಿತ್ರಗಳನ್ನು ತರುವುದು.


ಆಯ್ಕೆ ಸಮಿತಿಯು ಸಂದರ್ಶನದ ವೇಳೆಯಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.


ಸಭೆಯಲ್ಲಿ ತೀರ್ಮಾನಿಸಲಾದ ಸಭಾ ನಡಾವಳಿಗಳನ್ನು ದಾಖಲಿಸುವುದು. ಮೀಸಲಾತಿಯ ಪಟ್ಟಿಯನ್ನು ಸಭಾ ನಡಾವಳಿಯೊಂದಿಗೆ ಲಗತ್ತಿಸುವುದು. ಆದ್ಯತೆಯ ಮೇರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವುದು. ಮುಖ್ಯ ಅಡುಗೆಯವರು ಯಾವುದೇ ವೈಯಕ್ತಿಕ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಆ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬಹುದು.


ಮೇಲ್ಕಾಣಿಸಿದ ಎರಡು ಆಯ್ಕೆ ಪಟ್ಟಿಯನ್ನು ಅಂತಿಮ ಅನುಮೋದನೆಗಾಗಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸತಕ್ಕದ್ದು.


ಮೇಲ್ಕಾಣಿಸಿದ  ಮಾನದಂಡಗಳನ್ನು ಬಳಸಿ, ಪಾರದರ್ಶಕವಾಗಿ  ಆಯ್ಕೆ ಮಾಡುವುದು.


ಮಾರ್ಗಸೂಚಿಯಂತೆ ಆಯ್ಕೆ ಮಾಡದಿದ್ದಲ್ಲಿ, ಯಾವುದೇ ದೂರು ಬಂದಾಗ ಆಯ್ಕೆ ಪಟ್ಟಿಯನ್ನು ನಿರಾಕರಿಸುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಗೆ ನೀಡಲಾಗಿದೆ.


ಅಡುಗೆಯವರ ಸಂಭಾವನೆ

ವರ್ಗ

ಮಕ್ಕಳ ಸಂಖ್ಯೆ

ಅಡುಗೆಯವರ ಸಂಖ್ಯೆ

ಸಂಭಾವನೆ

ಎ-1

1-25

1

ಮು.ಅ.-ರೂ.1700/-ಅ.ಸಹಾಯಕರಿಗೆ-ರೂ.1600/-

26- 70

2

ಬಿ

71 - 300

3

ಸಿ

301 ಕ್ಕಿಂತ ಮೇಲ್ಪಟ್ಟು

4

 

ವರ್ಗ

ಮಕ್ಕಳ ಸಂಖ್ಯೆ

ಅಡುಗೆಯವರಸಂಖ್ಯೆ

ಸಂಭಾವನೆ

ಹಿ.ಪ್ರಾ.ಕ್ಕೆ ಸೇರಿಸಿದಂತೆ

1 - 300

1

ಮು.ಅ.-ರೂ.1700/- ಅ.ಸಹಾಯಕರಿಗೆ-ರೂ.1600/-

301 - 500

4

ಬಿ

501 - 1000

5

ಸಿ

1001 ಕ್ಕೂ ಮೇಲ್ಪಟ್ಟು

6

ಅಡುಗೆ ಸಿಬ್ಬಂದಿಯ ಅಂತಿಮ ಆಯ್ಕೆ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆಯುವುದು.


ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆದು, ಅಂತಿಮವಾಗಿ ಆಯ್ಕೆಯಾದ ಅಡುಗೆ ಸಿಬ್ಬಂದಿಗೆ  ಅನುಸೂಚಿ-ಇನಲ್ಲಿ ಸೂಚಿಸಿದಂತೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ/ತತ್ಸಮಾನ ಅಧಿಕಾರಿಯವರು ನೇಮಕಾತಿ ಆದೇಶವನ್ನು ನೀಡುವುದು.


ಆಯ್ಕೆಯಾದ ಅಡುಗೆ ಸಿಬ್ಬಂದಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನ ರೂ.10/- ಬಾಂಡ್ ಪೇಪರ್ ನಲ್ಲಿ ಅನುಸೂಚಿ-ಇ ನಲ್ಲಿ ತಿಳಿಸಿರುವಂತೆ ನಿಯಮ ನಿಬಂಧನೆಗಳಿಗೆ ಒಪ್ಪಿರುತ್ತೇನೆಂದು ಕರಾರು ಪತ್ರವನ್ನು ನೀಡುವುದು.


ತರಬೇತಿಗಳು

ಅಡುಗೆಯವರಿಗೆ ಈ ಕೆಳಕಂಡ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.

ವೈಯಕ್ತಿಕ ಸ್ವಚ್ಛತೆ


ಎಲ್.ಪಿ.ಜಿ.ಗ್ಯಾಸ್ ಬಳಕೆ


ಅಡುಗೆ ಕೋಣೆ ಸ್ವಚ್ಛತೆ


ಬೇಳೆ ಮತ್ತು ತರಕಾರಿಗಳ ಬಳಕೆಯಿಂದ ರುಚಿಕರ ಮತ್ತು ಪೌಷ್ಠಿಕ ಆಹಾರ ತಯಾರಿಕೆ.


ಸುರಕ್ಷಿತವಾಗಿ ಮಕ್ಕಳಿಗೆ ವಿತರಿಸುವುದು.


ಕಾರ್ಯಕ್ರಮಗಳು_ತರಬೇತಿಗಳು

ತರಬೇತಿಗಳು :

ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ

ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು 2006-07ನೇ ಸಾಲಿನಿಂದ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಾರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ. ಸರ್ವ ಶಿಕ್ಷಣ ಅಭಿಯಾನ ಎನ್.ಆರ್.ಹೆಚ್.ಎಂ. ವತಿಯಿಂದ ಹೆಲ್ತ್ ಕಾರ್ಡ್ ಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸಿದೆ. ವಾಹನದ ಇಂಧನ ವೆಚ್ಚಕ್ಕಾಗಿ ಪ್ರತಿ ತಾಲ್ಲೂಕಿಗೆ ರೂ.69318/- ದಂತೆ ರೂ.122.00 ಲಕ್ಷಗಳನ್ನು ಮಧ್ಯಾಹ್ನ ಉಪಹಾರ ಯೋಜನೆಯ ಲೆಕ್ಕ ಶೀರ್ಷಿಕೆಯಡಿ ಭರಿಸಲಾಗಿದೆ. 2010-11ನೇ ಸಾಲಿನಲ್ಲಿ ತಪಾಸಣೆಗೊಳಪಟ್ಟ ವಿದ್ಯಾರ್ಥಿ ಗಳ ಸಂಖ್ಯೆ 86,08,998(93.34%) ಇದರಲ್ಲಿ 2538 ವಿದ್ಯಾರ್ಥಿ ಗಳಿಗೆ ತೀವ್ರತರವಾದ ಖಾಯಿಲೆಗಳಿಗೆ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಚಿಕಿತ್ಸೆ ನೀಡಲಾಗಿದೆ. ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ವತಿಯಿಂದ ರೂ.778.53 ಲಕ್ಷ ಖರ್ಚು ಭರಿಸಲಾಗಿದೆ.

2011-12ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸುವರ್ಣ ಆರೋಗ್ಯ ಮಾಸಾಚರಣೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡು ಮಾರ್ಚ್-2012ರ ಅಂತ್ಯಕ್ಕೆ ಶೇ.95.72 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1241 ವಿದ್ಯಾರ್ಥಿಗಳಿಗೆ ತೀವ್ರತರ ಖಾಯಿಲೆಗಳನ್ನು ಗುರ್ತಿಸಿ ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ಯೋಜನೆಯಡಿಯಲ್ಲಿ ರೂ.630.42 ಲಕ್ಷಗಳ ಖರ್ಚು ಭರಿಸಲಾಗಿದೆ.
2012-13ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸುವರ್ಣ ಆರೋಗ್ಯ ಮಾಸಾಚರಣೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡು ಮಾರ್ಚ್-2013ರ ಅಂತ್ಯಕ್ಕೆ ಶೇ.91.51 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1219 ವಿದ್ಯಾರ್ಥಿಗಳಿಗೆ ತೀವ್ರತರ ಖಾಯಿಲೆಗಳನ್ನು ಗುರ್ತಿಸಿ ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ಯೋಜನೆಯಡಿಯಲ್ಲಿ ರೂ.703.71 ಲಕ್ಷಗಳ ಖರ್ಚು ಭರಿಸಲಾಗಿದೆ.

 

ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳಲ್ಲಿ ಮಾಸಾಚರಣೆಯನ್ನಾಗಿ ಹಮ್ಮಿಕೊಳ್ಳಲಾಗುತ್ತಿದೆ. 2013-14ನೇ ಸಾಲಿನಿಂದ ವರ್ಷಪೂರ್ತಿ ತಪಾಸಣಾ ಕಾರ್ಯಕ್ರಮವು 1 ರಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಮುಂದುವರೆಸಲಾಗುತ್ತದೆ. ಎನ್.ಆರ್.ಹೆಚ್.ಎಂ.ನಡಿ ಪ್ರತಿ ತಾಲ್ಲೂಕಿನಲ್ಲಿ ಒಬ್ಬರು ವೈದ್ಯಾಧಿಕಾರಿ ಹಾಗೂ ಒಬ್ಬ ನರ್ಸ್ ಒಳಗೊಂಡಂತೆ 2 ತಂಡಗಳನ್ನು ರಚಿಸಿಕೊಂಡು ಮಕ್ಕಳ ತಪಾಸಣೆ ನಡೆಸಲಾಗುತ್ತದೆ

ಕ್ಷೀರ ಭಾಗ್ಯ ಯೋಜನೆ

ಕರ್ನಾಟಕ ಸರ್ಕಾರವು 2013-14 ನೇ ಸಾಲಿನ 01-08-2013 ರಿಂದ 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ. ಹಾಲನ್ನು ವಾರದಲ್ಲಿ 03 ದಿನ (ಒಂದು ದಿನ ಬಿಟ್ಟು ಒಂದು ದಿನ ) ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ದಿನಾಂಕ: 01-08-2013 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಿದರು.


ಕ್ಷೀರಭಾಗ್ಯ ಯೋಜನೆಗೆ ಕರ್ನಾಟಕ ಹಾಲು ಮಹಾಮಂಡಳಿಯು ಕಾರ್ಯಕ್ರಮಕ್ಕೆ ಅಗತ್ಯ ಕೆನೆಭರಿತ ಹಾಲಿನ ಪುಡಿಯನ್ನು ಶಾಲಾ ಬಾಗಿಲಿಗೆ ಸರಬರಾಜು ಮಾಡುತ್ತದೆ.


ಮಗುವಿಗೆ ಒಂದು ಬಾರಿಗೆ

ಕ್ರ.ಸಂ.

ಪದಾರ್ಥ/ವಿವರ

ಪರಿಮಾಣ

ಮೊತ್ತ(ರೂ.ಗಳಲ್ಲಿ)

1

ಹಾಲಿನ ಪುಡಿ

18 ಗ್ರಾಂ

4.59

2

ಸಕ್ಕರೆ

10 ಗ್ರಾಂ

0.32

3

ಇಂಧನ

-

0.15

4

ಇತರೆ

0.12

0.12

 

 

ಒಟ್ಟು :

5.18

ಅಡುಗೆಯವರ ಗೌರವ ಸಂಭಾವನೆ ಮಾಸಿಕ

ರೂ. 100.00

 

ಇತರೆ ಇಲಾಖೆಗಳೊಂದಿಗೆ ಸಂಯೋಜಿತ ಕಾರ್ಯಕ್ರಮಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ್ದಾಗಿರುತ್ತದೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೇಡ್-1 ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ಈ ಕಾರ್ಯಕ್ರಮವು ನಡೆಯುತ್ತದೆ.

ತಾಲ್ಲೂಕು ಮಟ್ಟದಲ್ಲಿ ಗ್ರೂಪ್-ಬಿ ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯು ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುತ್ತದೆ

ಆರೋಗ್ಯ ಇಲಾಖೆ

ಮಧ್ಯಾಹ್ನ ಬಿಸಿಯೂಟದ ಜೊತೆಗೆ ಹೆಚ್ಚುವರಿ ಪೌಷ್ಟಿಕಾಂಶವುಳ್ಳ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ. ಇದನ್ನು Karnataka Drugs Logistics and Warehousing Society’ ಯ ಸಹಯೋಗದೊಂದಿಗೆ ಸರಬರಾಜು ಮಾಡಲಾಗುತ್ತಿದೆ. ಮಾತ್ರೆಗಳನ್ನು ಶಿಕ್ಷಣ ಇಲಾಖೆಯಿಂದ ಬಂದ ಬೇಡಿಕೆಗೆ ಅನುಸಾರವಾಗಿ ತಾಲ್ಲೂಕು ಮಟ್ಟದಲ್ಲಿ ಪೂರೈಕೆ ಮಾಡಿದ ನಂತರ ಶಾಲೆಗಳಿಗೆ ಮರುಹಂಚಿಕೆಯಾಗುತ್ತದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರವ್ಯಾಜ್ಯಗಳ ಇಲಾಖೆ

ಈ ಇಲಾಖೆಯು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಎ.ಪಿ.ಎಲ್. ಆಹಾರ ಧಾನ್ಯಗಳನ್ನು ಪೂರೈಸುವ ಕೆಲಸ ಮಾಡುತ್ತದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಬಿಸಿಯೂಟ ಕಾರ್ಯಕ್ರಮಕ್ಕೆ ಬೇಳೆ, ಎಣ್ಣೆ, ಉಪ್ಪು ಇನ್ನಿತರ ಆಹಾರಧಾನ್ಯಗಳನ್ನು ಪೂರೈಸುವ ಜವಾಬ್ದಾರಿ ಹೊಂದಿದ್ದು, ಆಹಾರಧಾನ್ಯಗಳ ಬೇಡಿಕೆಗನುಸಾರ ಯಾವುದೇ ಅಡೆತಡೆಗಳಿಲ್ಲದೆ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಇದರ ಜವಾಬ್ದಾರಿಯಾಗಿದೆ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಹಾರಧಾನ್ಯಗಳ ಬೇಡಿಕೆಗೆ ಅನುಸಾರವಾಗಿ 02 ತಿಂಗಳ ಮುಂಗಡ ಹಣ ಬಿಡುಗಡೆ ಮಾಡಿ ಮುಂದಿನ ತಿಂಗಳುಗಳಲ್ಲಿ ಸರಬರಾಜು ಮಾಡುವ ಆಹಾರಧಾನ್ಯಗಳ ಬಿಲ್ಲಿಗೆ ಈ ಹಣವನ್ನು ಸರಿದೂಗಿಸುತ್ತದೆ.

ಭಾರತೀಯ ಆಹಾರ ನಿಗಮ

ಭಾರತೀಯ ಆಹಾರ ನಿಗಮವು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ನೀಡುವ ಅಕ್ಕಿ, ಗೋಧಿಯನ್ನು ಎಫ್.ಸಿ.ಐ. ಗೋದಾಮಿನಲ್ಲಿ ಶೇಖರಿಸಿಟ್ಟುಕೊಂಡು, ಹಂಚಿಕೆ ಮಾಡುವ ಕಾರ್ಯ ನಿಗಮದ್ದಾಗಿರುತ್ತದೆ.
ಆಹಾರ ಸರಬರಾಜಿನಲ್ಲಿ ಯಾವುದೇ ನಿಲುಗಡೆಗೆ ಆಸ್ಪದವಿಲ್ಲದಂತೆ ತ್ರೈಮಾಸಿಕಕ್ಕೆ ಅಗತ್ಯವಿರುವ ಆಹಾರಧಾನ್ಯಗಳನ್ನು ಸರಬರಾಜು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಎಫ್.ಎ.ಕ್ಯೂ. ಆಧಾರದ ಮೇಲೆ ಮಧ್ಯಾಹ್ನ ಉಪಹಾರ ಯೋಜನೆಗೆ ಎಫ್.ಸಿ.ಐ. ಯು ಅತ್ಯುತ್ತಮ ಆಹಾರಧಾನ್ಯಗಳನ್ನು ಸರಬರಾಜು ಮಾಡುತ್ತದೆ.

ಶಿಕ್ಷಣ ಇಲಾಖೆ, ಭಾರತೀಯ ಆಹಾರ ನಿಗಮದ ಅಧಿಕಾರಿಗಳನ್ನೊಳಗೊಂಡಂತೆ ಜಿಲ್ಲಾಧಿಕಾರಿಗಳ ನೇತೃತ್ವದ ಆಹಾರ ಗುಣಮಟ್ಟ ಪರಿಶೀಲನಾ ತಂಡ ಆಹಾರಧಾನ್ಯ ಸರಬರಾಜಿನ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರವಿದೆಯೇ ಎಂದು ಪರಿಶೀಲಿಸಿ ವರದಿ ನೀಡುತ್ತದೆ ಹಾಗೂ ಆಹಾರಧಾನ್ಯಗಳ ಮಾದರಿಯನ್ನಿಟ್ಟುಕೊಂಡು ಪರಿಶೀಲಿಸುತ್ತದೆ.

ಆಯವ್ಯಯ

 

 

ವರ್ಗ

ಅಕ್ಕಿ(ಗ್ರಾಂ.ಗಳಲ್ಲಿ)

ತಯಾರಿಕಾ ವೆಚ್ಚ(ರೂ.ಗಳಲ್ಲಿ)

ಸಾಗಾಣಿಕಾ ವೆಚ್ಚ(ಕ್ವಿಂರೂ.ಗಳಲ್ಲಿ)

 

ಕೇಂದ್ರ

ರಾಜ್ಯ

ಕೇಂದ್ರ

ರಾಜ್ಯ

Total

ಕೇಂದ್ರ

ರಾಜ್ಯ

1 - 5

100

-

2.50

0.84

3.59

75

-

6 - 8

150

-

3.75

1.25

5.38

75

-

9 - 10

-

150

-

6.62

6.62

-

75

 

ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 2014-15 ನೇಸಾಲಿಗೆ ಬಿಡುಗಡೆಗೊಳಿಸಿರುವ ಅನುದಾನ

ಕ್ರ.ಸಂ

ಜಿಲ್ಲಾಪಂಚಾಯತ್

ಜಿಲ್ಲಾಕೋಡ್

2014-15 ನೇ ಸಾಲಿನಲ್ಲಿಒದಗಿಸಿದ ಅನುದಾನ

ಮೊದಲ ಕಂತಿನಲ್ಲಿಬಿಡುಗಡೆ ಮಾಡಿದಅನುದಾನ

ಎರಡನೇ ಕಂತಿನಲ್ಲಿಬಿಡುಗಡೆ ಮಾಡಿದಅನುದಾನ

1

ಬೆಂಗಳೂರು ನಗರ

401

6030.00

2009.80

2508.48

2

ಬೆಂಗಳೂರು ಗ್ರಾಮಾಂತರ

402

2227.00

742.26

926.43

3

ಚಿತ್ರದುರ್ಗ

403

4627.00

1542.18

1924.83

4

ಕೋಲಾರ

404

3318.00

1105.89

1380.29

5

ಶಿವಮೊಗ್ಗ

405

3988.00

1329.20

1659.01

6

ತುಮಕೂರು

406

5933.00

1977.47

2468.13

7

ಮೈಸೂರು

407

5238.00

1745.83

2179.01

8

ಚಿಕ್ಕಮಗಳೂರು

408

2802.00

933.91

1165.63

9

ದಕ್ಷಿಣ ಕನ್ನಡ

409

4140.00

1379.86

1722.24

10

ಹಾಸನ

410

3641.00

1213.55

1514.66

11

ಕೊಡಗು

411

1367.00

455.62

568.67

12

ಮಂಡ್ಯ

412

4163.00

1387.53

1731.81

13

ಬೆಳಗಾವಿ

413

12014.00

4004.27

4997.82

14

ಬಿಜಾಪುರ

414

7082.00

2360.43

2946.11

15

ಧಾರವಾಡ

415

3908.00

1302.54

1625.73

16

ಉತ್ತರ ಕನ್ನಡ

416

4169.00

1389.53

1734.30

17

ಗುಲ್ಬರ್ಗ

417

5930.00

1976.47

2466.88

18

ಬಳ್ಳಾರಿ

418

5953.00

1984.13

2476.45

19

ಬೀದರ್

419

4485.00

1494.85

1865.76

20

ರಾಯಚೂರು

420

4657.00

1552.18

1937.31

21

ಯಾದಗಿರಿ

421

3127.00

1937.31

1300.83

22

ದಾವಣಗೆರೆ

451

4190.00

1396.53

1743.04

23

ರಾಮನಗರ

452

2094.00

697.93

871.10

24

ಚಿಕ್ಕಬಳ್ಳಾಪುರ

453

2506.00

835.25

1042.50

25

ಚಾಮರಾಜನಗರ

456

1908.00

635.94

793.73

26

ಉಡುಪಿ

457

2422.00

807.25

1077.55

27

ಬಾಗಲಕೋಟೆ

461

5433.00

1810.82

2260.13

28

ಗದಗ

462

2568.00

855.91

1068.29

29

ಹಾವೇರಿ

463

4216.08

1405.22

1753.89

30

ಕೊಪ್ಪಳ

466

3786.00

1261.87

1574.98

ಒಟ್ಟು

 

127922.08

42636.45

53285.59

 

ಪ್ರತೀ ಮಗುವಿಗೆ/ದಿನಕ್ಕೆ ಆಹಾರ ಧಾನ್ಯಗಳು ಹಾಗೂ ತಯಾರಿಕಾ ವೆಚ್ಚ - 2014-15 ನೇ ಸಾಲು :

ಕ್ರ.ಸಂ.

ಆಹಾರಧಾನ್ಯಗಳು

ತರಗತಿ 1 ರಿಂದ 5

ತರಗತಿ 6 ರಿಂದ 8

ತರಗತಿ 9 ರಿಂದ 10

ಪ್ರಮಾಣ(ಗ್ರಾಂ.ಗಳಲ್ಲಿ)

ವೆಚ್ಚ(ರೂ.ಗಳಲ್ಲಿ)

ಪ್ರಮಾಣ(ಗ್ರಾಂ.ಗಳಲ್ಲಿ)

ವೆಚ್ಚ(ರೂ.ಗಳಲ್ಲಿ)

ಪ್ರಮಾಣ(ಗ್ರಾಂ.ಗಳಲ್ಲಿ)

ವೆಚ್ಚ(ರೂ.ಗಳಲ್ಲಿ)

1

ಅಕ್ಕಿ

100

ಉಚಿತ

150

ಉಚಿತ

150

1.62

2

ಬೇಳೆ

20

1.48

30

2.19

30

2.19

3

ತರಕಾರಿ ಮತ್ತು ಸಾಂಬಾರು ಪದಾರ್ಥಗಳು

50

1.00

75

1.50

75

1.14

4

ಎಣ್ಣೆ

05

0.32

7.5

0.50

7.5

0.49

5

ಉಪ್ಪು

02

0.02

04

0.04

04

0.04

6

Cooking gas

-

0.17

-

0.24

-

0.24

7

Transportation of Dhal, oil and salt

-

0.60

-

0.90

-

0.90

ಒಟ್ಟು :

3.59

5.38

-

6.62

ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ

ಶಾಲೆ, ತಾಲ್ಲೂಕು ಮತ್ತು ಜಿಲ್ಲೆಗಳ ಮಾಹಿತಿಯನ್ನಾಧರಿಸಿ, ಮಧ್ಯಾಹ್ನ ಉಪಹಾರ ಯೋಜನೆಯು ರಾಜ್ಯಮಟ್ಟದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯವನ್ನು ಸಿದ್ಧಪಡಿಸುತ್ತದೆ. ಯೋಜನೆಯು ಮೇಲಿನ ಹಂತಕ್ಕಿಂತಲೂ ಕೆಳಹಂತದಲ್ಲಿ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಶಾಲಾ ಹಂತದ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಿ ದಾಖಲೀಕರಿಸಲಾಗುವುದು.

ಮಧ್ಯಾಹ್ನ ಉಪಹಾರ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳ ಸಮಗ್ರವಾದ ಪ್ರಸ್ತುತ ಚಿತ್ರಣವನ್ನು ನೀಡುತ್ತದೆ. ಆಡಳಿತಾತ್ಮಕ ರಚನೆ, ಅನುಷ್ಠಾನದ ವಿಧಾನ, ನಿರ್ವಹಣಾ ವಿಧಾನ, ಸಾಮಾಜಿಕವಾಗಿ ಗುರಿಮುಟ್ಟಲು ದೊರೆಯುವ ಮೂಲಭೂತ ಸೌಕರ್ಯಗಳ ಸ್ಥಿತಿ, ಮೌಲ್ಯಮಾಪನದ ಅಧ್ಯಯನದಲ್ಲಿ ದೊರೆಯುವ ಅಂಶಗಳು, ಸಮಸ್ಯೆಯನ್ನು ಎದುರಿಸುವ ಉತ್ತಮ ಅಂಶಗಳು, ಸಮುದಾಯದ ಪಾಲ್ಗೊಳ್ಳುವಿಕೆಯ ಪರಿಶೀಲನೆಯೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳನ್ನು ತಯಾರಿಸಲಾಗುತ್ತದೆ

ರಾಜ್ಯದಲ್ಲಿ ಅನುಸರಿಸಲ್ಪಡುತ್ತಿರುವ ಉತ್ತಮ ಅಭ್ಯಾಸಗಳು

ಶಾಲೆಗಳಲ್ಲಿ ಎಲ್.ಪಿ.ಜಿ. ಬಳಕೆಯಿಂದ ಆಹಾರ ತಯಾರಿಸುವುದರಿಂದ ಶಾಲಾವರಣ ಮತ್ತು ಅಡುಗೆಕೋಣೆ ಸ್ವಚ್ಛವಾಗಿರುವುದು.


ಅಡುಗೆ ಮಾಡಲು ಮಹಿಳೆಯರನ್ನೇ ನೇಮಕ ಮಾಡಿಕೊಂಡಿರುವುದು.


ಮಹಿಳಾ ಅಡುಗೆ ಸಿಬ್ಬಂದಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಎಸ್.ಸಿ/ಎಸ್.ಟಿ./ಒ.ಬಿ.ಸಿ. ಗೆ ನೀಡಲಾಗಿದ್ದು, ಅದರಲ್ಲೂ ವಿಧವಾ/ಅನಾಥ ಮಹಿಳೆಯರಿಗೆ ಪ್ರಾಧಾನ್ಯತೆಗೆ ನೀಡಲಾಗಿದೆ.


ಊಟ ಬಡಿಸುವಾಗ ಮಕ್ಕಳನ್ನು ಜಾತಿ/ಲಿಂಗ ತಾರತಮ್ಯವಿಲ್ಲದೆ ಸರದಿಯಲ್ಲಿ ಸಾಲಾಗಿ ಕುಳ್ಳಿರಿಸಿ, ಊಟ ಬಡಿಸುವುದು. ಇದು ಮಕ್ಕಳಲ್ಲಿ ಜಾತ್ಯಾತೀತತೆ, ಸಮಾನತೆ ಮತ್ತು ಸಾಮಾಜಿಕ ಐಕ್ಯತೆಯ ಮನೋಭಾವವನ್ನು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.


5. ರಾಜ್ಯ ಕಛೇರಿ


ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಶ್ರೀ ಬೆಳ್ಳಶೆಟ್ಟಿ..ಸೇ
ಜಂಟಿ ನಿರ್ದೇಶಕರು(ಮ.ಉ.ಯೋ)

080-22242943
9449817874, 9480835500

080-22271998

Jd_mms@yahoo.co.in

-
ಸಹಾಯಕ ಪೌಷ್ಠಿಕಾಂಶಧಿಕಾರಿ(..ಯೋ)

 

080-22271998

 

ಗಂಗಾಧರ ಎನ್, ಕ.ಆ.ಸೇ.,
ಹಿರಿಯ ಸಹಾಯಕನಿರ್ದೇಶಕರು(..ಯೋ)

9480835502

080-22271998

 

ಹಿರಿಯ ಸಹಾಯಕನಿರ್ದೇಶಕರು(..ಯೋ)

9480835503

080-22271998

 

ಟಿ.ಎನ್.ಲಿಂಗೇಗೌಡ,
ಸಹಾಯಕ ನಿರ್ದೇಶಕರು(..ಯೋ)

9480835504

080-22271998

 

ಮುಷೀರ್ ಅಹ್ಮದ್ ಎಂ.
ಪತ್ರಾಂಕಿತ ಸಹಾಯಕರು

9449081789

080-22271998

 

ಲೆಕ್ಕ ಅಧೀಕ್ಷಕರು

9480835501

080-22271998

 

ಬೆಂಗಳೂರು ನಗರ

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಜಯಕುಮಾರ್ 
ಶಿಕ್ಷಣಾಧಿಕಾರಿಗಳು

9480835505

 

eoban_urbanmms@yahoo.co.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ಬೆಂಗಳೂರುನಗರ

ಪ್ರಭಾವತಿ  ಭದ್ರಿ

9480835506

ಬೆಂಗಳೂರು ದಕ್ಷಿಣ

ಹರೀಶ್

9480835507

ಬೆಂಗಳೂರು ಪೂರ್ವ

ನಾಗರಾಜ್

9480835508

ಆನೇಕಲ್

ಭಾಗ್ಯಳಕ್ಷಮ್ಮ

9480835509

ಬೆಂಗಳೂರು ಗ್ರಾಮಾಂತರ

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಟಿ.ಜಯರಾಂ
ಶಿಕ್ಷಣಾಧಿಕಾರಿ

9480835532

 

eobangruralmms@yahoo.co.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ನೆಲಮಂಗಲ

ರಾಘವೇಂದ್ರ

9480835536

ದೇವನಹಳ್ಳಿ

ಬಿ . ರೇಣುಕ

9480835533

ದೊಡ್ಡಬಳ್ಳಾಪುರ

ಶಿವಕುಮಾರ್

9480835534

ಹೊಸಕೋಟೆ

-

9480835535

ರಾಮನಗರ

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಸೂರ್ಯಪ್ರಕಾಶ್  ಮೂರ್ತಿ 
ಶಿಕ್ಷಣಾಧಿಕಾರಿ

9480835537

 

eorammms@yahoo.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ರಾಮನಗರ

ಶಂಕರೇಗೌಡ

9480835541

ಮಾಗಡಿ

ಶಿವಣ್ಣ

9480835540

ಕನಕಪುರ

ಮುನೇಗೌಡ

9480835539

ಚನ್ನಪಟ್ಟಣ

ಕುಮಾರ್

9480835538

ತುಮಕೂರ್

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಗಂಗಯ್ಯ 
ಶಿಕ್ಷಣಾಧಿಕಾರಿ

9480835555

 

eotummms@yahoo.co.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ತುಮಕೂರು

ಶಿವಣ್ಣ

9480835560

ತುರುವೇಕೆರೆ

ನಾಗರಾಜಪ್ಪ

9480835561

ಗುಬ್ಬಿ

ಸೋಮಷೆಕರ್

9480835557

ಕುಣಿಗಲ್

ಸಿದ್ದಯ್ಯ

9480835558

ತಿಪಟೂರು

ರಾಮಚಂದ್ರಯ್ಯ

9480835559

ಚಿಕ್ಕನಾಯಕನ ಹಳ್ಳಿ

ತಿಮ್ಮರಾಜು

9480835556

ಮಧುಗಿರಿ

ಲಕ್ಷ್ಮಿಕಂಥ

9480835563

ಕೊರಟಗೆರೆ

ಮುದ್ಳಗಿರಿಯಪ್ಪ

9480835562

ಪಾವಗಡ

ಬಿ .ಏನ್  ನಾಗರಾಜ್

9480835564

ಸಿರಾ

ಹನುಮಂತಪ್ಪ

9480835565

ಕೋಲಾರ್

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಶಿವಲಿಂಗಯ್ಯ 
ಶಿಕ್ಷಣಾಧಿಕಾರಿ

9480835542

 

eokolmms@yahoo.co.in

 

ತಾಲ್ಲೂಕಿನ ಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ಕೋಲಾರ

ಉಮಾ

9480835544

ಬಂಗಾರಪೇಟೆ(ಕೆ.ಜಿ.ಎಫ್)

ಕೆ .ಸಿದ್ದರಾಜು

9480835543

ಮಾಲೂರು

ಏನ್ .ನಾರಾಯಣಸ್ವಾಮಿ

9480835554

ಮುಳಬಾಗಿಲು

ಬಿ .ಜಿ .ನರ್ಯನಸ್ವಾಮ್ಯ್

9480835546

ಶ್ರೀನಿವಾಸಪುರ

ಎಸ್ . ಅಬ್ದುಲ್  ರಜ್ಯಾಕ್

9480835547

ಚಿಕ್ಕಬಲ್ಲಪುರ್

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಅಶ್ವಥಯ್ಯ 
ಶಿಕ್ಷಣಾಧಿಕಾರಿ

9480835548

 

eockbmms@yahoo.co.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ಚಿಕ್ಕಬಳ್ಳಾಪುರ

ಚಂದ್ರಪ್ಪ

9480835550

ಬಾಗೇಪಲ್ಲಿ

ಲಕ್ಷ್ಮಣಪ್ಪ

9480835546

ಚಿಂತಾಮಣಿ

ವೆಂಕಟರಮಣಪ್ಪ

9480835551

ಗೌರಿಬಿದನೂರು

ದೇವರಾಜು

9480835552

ಗುಡಿಬಂಡೆ

ನಾರಾಯಣಪ್ಪ

9480835553

ಶಿಡ್ಲಘಟ್ಟ

ನಾಗರಾಜರಾವ್

9480835554

ಚಿತ್ರದುರ್ಗ

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಪಿ .ಕುಮಾರಸ್ವಾಮಿ 
ಶಿಕ್ಷಣಾಧಿಕಾರಿ

9480835510

 

eochtmms@yahoo.co.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ಚಳ್ಳಕೆರೆ

ಸುರೇಶ

9480835511

ಚಿತ್ರದುರ್ಗ

ಬಸವರಾಜ್

9480835512

ಹಿರಿಯೂರು

ಭಿಮ್ಳನಯ್ಕ

9480835513

ಹೊಳಲ್ಕೆರೆ

ಜಯಣ್ಣ

9480835514

ಹೊಸದುರ್ಗ

ಸ್ಯೆದ್  ಮೊಶಿನ್

9480835515

ಮೊಳಕಾಲ್ಮೂರು

ಎಸ್ .ಪಿ .ಶಿವಣ್ಣ

9480835516

ದಾವಣಗೆರೆ

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಬಿ .ಎಸ್ .ಜಗದೀಶ್ವರ್ 
ಶಿಕ್ಷಣಾಧಿಕಾರಿ

9480835517

 

eodavmms@yahoo.co.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ಚನ್ನಗಿರಿ

ಕೆ . ಸೋಮಷೆಕರಪ್ಪ

9480835518

ದಾವಣಗೆರೆ

ಅರ್. ಬಸವರಾಜಪ್ಪ

9480835519

ಹರಪ್ಪನಹಳ್ಳಿ

ಎಂ . ಜಗದೀಶ್  ಗೌಡ

9480835520

ಹರಿಹರ

ಸಂಜೀವಪ್ಪ

9480835521

ಹೊನ್ನಾಳಿ

ಭರಮಪ್ಪ  ಮೈಸೂರ್

9480835522

ಜಗಳೂರು

ಬೇಬಿ  ಸುನಿತಾ

9480835523

ಶಿಮೊಗ

ಅಧಿಕಾರಿಗಳ ಹೆಸರು & ಪದನಾಮ

ದೂರವಾಣಿಮೊಬೈಲ್

ಫ್ಯಾಕ್ಸ್

ಮಿಂಚಂಚೆ ವಿಳಾಸ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು

 

 

 

ಲೋಹಿತಾಶ್ವ 
ಶಿಕ್ಷಣಾಧಿಕಾರಿ

9480835524

 

eoshimms@yahoo.co.in

 

ತಾಲ್ಲೂಕಿನಹಸರು

ಶಿಕ್ಷಣಾಧಿಕಾರಿ(.ದಾ.)_ಹೆಸರು,
ಪದನಾಮ: O/o ಸಹಾಯಕ ನಿರ್ದೇಶಕರು(.ದಾ.), ತಾಲ್ಲೂಕು ಪಂಚಾಯಿತಿ,

ದೂರವಾಣಿ/ಮೊಬೈಲ್/ಮಿಂಚಂಚೆ

ಭದ್ರಾವತಿ

ರಾಜಪ್ಪ

9480835525

ಹೊಸನಗರ

ಎಷ್ವರಪ್ಪ  ಐ /ಸಿ

9480835526

ಸಾಗರ

ಗನ್ನಪಥಿ

9480835527

ಶಿಕಾರಿಪುರ

ಭಿಮ್ಲ  ನಾಯಕ್

9480835528

ಶಿವಮೊಗ್ಗ

ಊಮಮಹೆಶ್  ಕೆ .ಅರ್

9480835529

ಸೊರಬ

ರಾಮಪ್ಪ  ಕೆ .ಅರ್

9480835530

ತೀರ್ಥಹಳ್ಳಿ

G.K Giri Raju

9480835531

ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ