ಶುಕ್ರವಾರ, ಜನವರಿ 26, 2018

ಭೀಮಾ-ಕೋರೆಗಾಂವ್ ವಿಜಯೋತ್ಸವ ಗಲಭೆ

ಭೀಮಾ-ಕೋರೆಗಾಂವ್ ವಿಜಯೋತ್ಸವ ಗಲಭೆ: ಮಹಾರಾಷ್ಟ್ರ ಬಂದ್

Posted by

on Jan 20, 2018 in ರಾಷ್ಟ್ರೀಯ

ಪ್ರತಿ ವರ್ಷ ಜನವರಿ 1ರಂದು ಪುಣೆಯ ಸಮೀಪದಲ್ಲಿರುವ ‘ಭೀಮಾ-ಕೋರೆಗಾಂವ್”ನಲ್ಲಿ ಕೋರೆಗಾಂವ್ ವಿಜಯೋತ್ಸವ ಆಚರಿಸಲು ತೆರಳುತ್ತಿದ್ದ ದಲಿತ ಗುಂಪಿನ ಮೇಲೆ ಹಿಂದೂತ್ವ ಸಂಘಟನೆಗಳು ದಾಳಿ ಮಾಡಿದ್ದು, ಮಹಾರಾಷ್ಟ್ರದಾದ್ಯಂತ ಭಾರಿ ಸಂಚಲನ ಮಾಡಿದೆ. ಅಲ್ಲದೆ ದಾಳಿಯನ್ನು ಖಂಡಿಸಿ ಮಹಾರಾಷ್ಟ್ರ ಬಂದ್ ಗೆ ಕರೆ ನೀಡಲಾಗಿತ್ತು.

ಏನಿದು ಭೀಮಾ-ಕೋರೆಗಾಂವ್ ವಿಜಯೋತ್ಸವ:

1818 ಜನವರಿ 1ರಂದು ನಡೆದ ಸಂಘರ್ಷದಲ್ಲಿ ಹೋರಾಡಿ ಮಡಿದ 22 ಮಹರ್ ಸೈನಿಕರ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ 65 ಅಡಿ ಎತ್ತರದ ವಿಜಯಸ್ತಂಭ ನಿರ್ಮಿಸಿದ್ದಾರೆ. 1740ರಲ್ಲಿ ಒಂದನೇ ಬಾಜಿ ರಾವ್ ನಿಧನದ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪೇಶ್ವೆಗಳು ಹಾಗೂ ದಲಿತರಾದ ಮಹರ್‌ ಜನರ ನಡುವಿನ ಸಂಬಂಧ ಹದಗೆಟ್ಟಿತು. ಎರಡನೇ ಬಾಜಿ ರಾವ್‌ ಆಡಳಿತದಲ್ಲಿ ಮಹರ್‌ ಸಮುದಾಯವನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತದೆ. ಪೇಶ್ವೆಗಳ ಸೇನೆಗೆ ತಮ್ಮನ್ನೂ ಸೇರಿಸಿಕೊಳ್ಳುವಂತೆ ಮಹರ್‌ ಜನರು ಮಾಡುವ ಬಿನ್ನಹವನ್ನು ತಿರಸ್ಕರಿಸುವ ಎರಡನೇ ಬಾಜಿ ರಾವ್‌, ಕೀಳು ಜಾತಿಯವರಾದ ನಿಮ್ಮನ್ನು ಸೇನೆಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಆತ್ಮಗೌರವದ ಪ್ರಶ್ನೆಯಿಂದ ಬ್ರಿಟಿಷ್‌ ಸೇನೆಯೊಂದಿಗೆ ಸೇರುವ ಮಹರ್‌ ಜನರು 1818ರಲ್ಲಿ ಪೇಶ್ವೆ ಸೇನೆಯ ವಿರುದ್ಧ ಕಾದಾಡುತ್ತಾರೆ. ಬ್ರಿಟಿಷ್ ಕ್ಯಾಫ್ಟನ್ ಎಫ್.ಎಫ್. ಸ್ಟಾಂಟನ್ ನೇತೃತ್ವದಲ್ಲಿ ಬಾಂಬೆ ರೆಜಿಮೆಂಟ್‌ನ 500 ಮಹರ್‌ ಸೈನಿಕರು, ಪೂನಾದ 250 ಅಶ್ವದಳ ಹಾಗೂ ಮದ್ರಾಸ್‌ನ 24 ಗನ್‌ಮೆನ್‌ಗಳು 1818ರ ಜನವರಿ 1ರಂದು 28 ಸಾವಿರ ಯೋಧ ಬಲದ ಬೃಹತ್‌ ಪೇಶ್ವೆ ಪಡೆಯ ವಿರುದ್ಧ ಹೋರಾಟ ನಡೆಸಿದರು. 20 ಸಾವಿರ ಅಶ್ವದಳ ಮತ್ತು 8,000 ಕಾಲಾಳುಗಳಿದ್ದ ಮಹಾರಾಷ್ಟ್ರ ಆಡಳಿತದ ಸೇನೆಯ 2000 ಯೋಧರು ಪ್ರಾರಂಭದಲ್ಲಿ ಕಣಕ್ಕಿಳಿದರು. ಪೇಶ್ವೆ ಯೋಧರ ಸಂಖ್ಯೆ ಹೆಚ್ಚಿಸಿ ಸೇನೆ ಬಲಪಡಿಸಿದರೂ 500 ಮಹರ್‌ ಸೈನಿಕರು ದಿಟ್ಟ ಹೋರಾಟದಿಂದ ಅವರನ್ನು ಧೂಳೀಪಟ ಮಾಡಿದರು. 600ಕ್ಕೂ ಹೆಚ್ಚು ಪೇಶ್ವೆ ಯೋಧರು ಬಲಿಯಾಗುತ್ತಿದ್ದಂತೆ ಆ ಸೇನೆ ರಣರಂಗದಿಂದ ಪಲಾಯನ ಮಾಡಿತು. ಈ ಯುದ್ಧದಲ್ಲಿ ನೂರಾರು ಬ್ರಿಟಿಷ್‌, ಮರಾಠ, ರಜಪೂತ ಸೇರಿ ಹಲವು ಸಮುದಾಯದ ಯೋಧರು ಮೃತಪಟ್ಟರು. ಇಲ್ಲಿ 22 ಮಹರ್ ಯೋಧರ ಹುತಾತ್ಮರಾದರು.

    1927ರ ಜನವರಿ 1ರಂದು ಕೋರೆಗಾಂವ್‌ ಭೇಟಿ ನೀಡಿದ್ದ ಅಂಬೇಡ್ಕರ್, ಮಹರ್ ಯೋಧರ ಹೋರಾಟವನ್ನು ಜನರಿಗೆ ತಿಳಿಯುವಂತೆ ಮಾಡಿದ್ದರು. ಅಂಬೇಡ್ಕರ್‌ ತಾವು ಬದುಕಿರುವವರೆಗೂ ಪ್ರತಿ ವರ್ಷ ಜನವರಿಯಲ್ಲಿ ಕೋರೆಗಾಂವ್ ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದರು.
    ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಮಹರ್ ದಲಿತ ಯೋಧರು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ದಿನವು, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ. ಭಾರತದ ಇತಿಹಾಸದಲ್ಲಿ ಈ ಅಧ್ಯಾಯ ನೆನಪಿನಲ್ಲಿ ಉಳಿಸಲು ಹಾಗೂ ಆತ್ಮಗೌರವಕ್ಕಾಗಿ ಹೋರಾಡಿದ ದಲಿತರ ಗೌರವಾರ್ಥ 2005ರಲ್ಲಿ ಭೀಮಾ–ಕೋರೆಗಾಂವ್‌ ರಣಸ್ತಂಭ ಸೇವಾ ಸಂಘ(ಬಿಕೆಆರ್‌ಎಸ್‌ಎಸ್‌) ಸ್ಥಾಪಿಸಲಾಗಿದೆ.

ಕೃಪೆ: ಪ್ರಜಾವಾಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ