ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು Saturday, 14.09.2019, 7:39 PM Public TV No Comments FacebookTwitterWhatsApp  ದುಬೈ: ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಅರಾಮ್ಕೊ ನಡೆಸುತ್ತಿರುವ ಎರಡು ಪ್ರಮುಖ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಇರಾನ್‍ಗೆ ಸೇರಿದ ಹೌತಿ ಗುಂಪಿನ ಬಂಡುಕೋರರು ಅರಾಮ್ಕೊದ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳಾದ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ಗಳ ಮೇಲೆ ದಾಳಿ ನಡೆಸಿದ್ದಾರೆ. ಘಟಕಗಳನ್ನು ಗುರಿಯಾಗಿಸಿಕೊಂಡು 10 ಡ್ರೋನ್‍ಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ದಾಳಿ ನಡೆಸಿದ ಹೌತಿ ಗುಂಪಿನ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ಅಲ್-ಮಸಿರಾ ಟಿವಿಗೆ ಈ ಕುರಿತು ಮಾಹಿತಿ ನೀಡಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾನೆ.  Javier Blas ✔ @JavierBlas Saudi Arabia says it has contained a fires after two large #oil facilities were attacked with drones: the Abqaiq processing center and the Khurais oilfield (video is Abqaiq) | #OOTT #SaudiArabia   https://www.bloomberg.com/news/articles/2019-09-14/saudi-aramco-contain-fires-at-facilities-attacked-by-drones …  368 12:34 PM - Sep 14, 2019 · South East, England Twitter Ads info and privacy 401 people are talking about this ಡ್ರೋನ್ ದಾಳಿಯಿಂದಾಗಿ ಅರಾಮ್ಕೋದ ಎರಡು ತೈಲ ಘಟಕಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸೌದಿಯ ಆಂತರಿಕ ಸಚಿವಾಲಯ ಸ್ಪಷ್ಟಪಡಿಸಿದೆ. ಸ್ಟಾಕ್ ಪೆಟ್ಟಿಗೆ ಸಿದ್ಧಪಡಿಸುತ್ತಿದ್ದಂತೆ ಹೌತಿ ಬಂಡುಕೋರರು ದಾಳಿ ನಡೆಸಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸಾವು, ನೋವು ಸಂಭವಿಸಿರುವ ಕುರಿತು ಈವರೆಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಪೂರ್ವ ಸೌದಿ ಅರೇಬಿಯಾದ ಎರಡು ಪ್ರಮುಖ ಅರಾಮ್ಕೋ ಘಟಕಗಳಾದ ಅಬ್ಕೈಕ್ ಮತ್ತು ಖುರೈಸ್‍ಗಳ ಮೇಲೆ ಇಂದು ಬೆಳಗ್ಗೆ ನಡೆದ ದಾಳಿಯ ನಂತರ ಹೊಗೆಯು ಆಕಾಶದ ತುಂಬೆಲ್ಲ ಹಬ್ಬಿದ್ದು, ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸುಧಾರಿತ ಶಸ್ತ್ರಾಸ್ತ್ರಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಹಿಡಿದು ಮಾನವ ರಹಿತ ಡ್ರೋನ್‍ಗಳ ವರೆಗೆ ವಿಸ್ತರಿಸಿದೆ. ಇದರಿಂದ ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತು ಮಾಡುವ ಸೌದಿ ಅರೇಬಿಯಾಗೆ ತೈಲ ಘಟಕಗಳ ಸ್ಥಾಪನೆಗೆ ಭಾರೀ ಆತಂಕ ಎದುರಾಗಿದೆ.  Al Arabiya English ✔ @AlArabiya_Eng Now-contained fires broke out at two Saudi Aramco oil facilities in Saudi Arabia's eastern city of Abqaiq following an attack by several drones. The strikes were claimed by Yemen's Houthi militia.https://english.alarabiya.net/en/News/gulf/2019/09/14/Fire-at-Saudi-Aramco-s-facility-in-Abqaiq-under-control-cause-yet-unknown.html …  99 3:31 PM - Sep 14, 2019 Twitter Ads info and privacy 133 people are talking about this ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಇತ್ತೀಚೆಗಷ್ಟೇ ಸಮ್ಮತಿ ಸೂಚಿಸಿತ್ತು. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಿದೆ ಎಂದು ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದರು. ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿದೆ. ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿತ್ತು. 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ