ಸೋಮವಾರ, ಮಾರ್ಚ್ 6, 2017

ದೇಶ್ಯ ಅಚ್ಚಕನ್ನಡ ಶಬ್ದಗಳು

ದೇಶ್ಯ ಅಚ್ಚಗನ್ನಡ ಶಬ್ದಗಳು
***********************

ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ, ಹೋಗು, ಹೊಗು, ಬರು, ತಿನ್ನು, ಒಂದು, ಎರಡು, ನೂರು, ಹೆಚ್ಚು, ಕಡಿಮೆ, ಮೆಲ್ಲಗೆ, ಚೆನ್ನಾಗಿ, ತಿಳಿವಳಿಕೆ, ನಡೆವಳಿಕೆ, ನೀರು, ಮೀನು, ಬಾನು, ಬೋನ, ಅರಸು, ಹುಡುಕು, ಅಗಿ, ಅಲರು, ಅರೆ, ನುರಿ, ಉಡು, ತೊಡು, ಕೈ, ಕಾಲು, ಬಾಯಿ, ಕಣ್ಣು, ತಲೆ, ಕಿವಿ, ಮೂಗು, ಕೆನ್ನೀರು, ಬೆನ್ನೀರು, ಬೆಚ್ಚಗೆ, ತಣ್ಣಗೆ, ಕಮ್ಮಗೆ, ಸಣ್ಣ, ದೊಡ್ಡ, ಬಿಳಿದು, ಕರಿದು, ಹಿರಿದು, ಜೇನು, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಅವು, ಕರು, ಆಕಳು, ತುರು, ನೆರೆ, ಸೇರು, ಕಾರು, ಹೀರು, ಸೋರು, ಸಾರು, ಹುಳಿ, ಹುರುಳಿ, ಹುಲ್ಲು, ರಾಗಿ, ಜೋಳ, ಬೆಲ್ಲ, ಎಳ್ಳು, ಎಣ್ಣೆ, ಬೆಣ್ಣೆ -ಇತ್ಯಾದಿಗಳು.

(೧) ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು

ಭೂಮಿ, ಪೃಥ್ವಿ, ನದಿ, ಆರ‍್ಯ, ಅನಾರ‍್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ, ಸಂಗ, ಸಂಗಮ, ಸಮಾಗಮ, ದೇವತಾ, ಯಾತ್ರಾ, ದೇವಾಲಯ, ಋಷಿ, ಮುನಿ, ಋಣ, ಋತು, ವೇದ, ಪುರಾಣ, ಶಾಸ್ತ್ರ, ಶಾಸ್ತ್ರೀ, ಆಗಮ, ಉಪನಿಷತ್ತು, ಅರಣ್ಯ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಪಂಚ, ತ್ರಯ, ದಶ, ಏಕ, ಅಷ್ಟ, ಸಪ್ತ, ಆದಿತ್ಯವಾರ, ಸೋಮವಾರ, ಮಂಗಳವಾರ, ಬುಧವಾರ, ನಕ್ಷತ್ರ, ಗ್ರಹ, ಗೃಹ, ಗೃಹಿಣೀ, ಗೃಹಸ್ಥ, ಬ್ರಹ್ಮಚಾರಿ, ವಿದ್ಯಾರ್ಥಿ, ಅನ್ನ, ಪಕ್ವಾನ್ನ, ತೀರ್ಥ, ಅಸಾಧ್ಯ, ಅಶಕ್ಯ, ಅಶಕ್ತ, ಅಶಕ್ತಿ, ನಿಶ್ಶಕ್ತಿ, ವಿಶೇಷ, ಜ್ಞಾನ, ವಿದ್ಯಾ, ವಿದ್ಯಾರ್ಜನೆ, ಶಾಲಾ, ವಿಶ್ವವಿದ್ಯಾಲಯ, ಘಟಿಕಾ, ಘಟಿಕೋತ್ಸವ, ವಿವಾಹ, ಲಗ್ನ, ಲಗ್ನಪತ್ರ, ಪುತ್ರ, ಮಿತ್ರ, ಕಳತ್ರ, ಆಗಮ, ಆದೇಶ, ಲೋಪ, ಅಗ್ರಹಾರ, ಪುರ, ಪುರಿ, ನಗರ, ಗ್ರಾಮ, ಅಧಿಕಾರ, ಮಂತ್ರಿ, ರಾಜನ್, ರಾಣಿ, ಚಕ್ರವರ್ತಿ, ಸಾಮಂತ, ಮಂಡಲೇಶ್ವರ, ಸಾಮ್ರಾಜ್ಯ, ಚಕ್ರಾಧಿಪತ್ಯ, ಶಬ್ದ, ಅಕ್ಷರ, ಪದ, ಪ್ರಕೃತಿ, ವಾಕ್ಯ, ಗ್ರಂಥ, ಸಂಪುಟ, ಮತ, ಧರ್ಮ, ಮೋಕ್ಷ, ಸ್ವರ್ಗ, ನರಕ, ವಿಷಯ, ಅಧ್ಯಾಯ, ಪ್ರಕರಣ, ಪರಿಚ್ಛೇದ, ಆಮ್ಲಜನಕ, ಜಲಜನಕ, ವಿಮಾನ, ಆಕಾಶ, ಫಲ, ಫಲಾಹಾರ, ಗಂಧ, ಚಂದನ, ಲೇಪನ, ಕುಂಕುಮ, ಶಿರ, ಹಸ್ತ, ಪಾದ, ನೇತ್ರ, ಮುಖ, ದಂತ, ಪಂಙ್ತಿ, ನಕ್ಷೆ, ಲೇಖನ, ಲೇಖ, ಪತ್ರ, ಶತ್ರು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ, ಆಗ್ನೇಯ, ಈಶಾನ್ಯ, ವಾಯುವ್ಯ, ಆಕಾಶ, ಗಗನ, ವಾಯು, ವಾಯುಮಂಡಲ, ಜಗತ್, ಮಹಾ, ಉನ್ನತ, ಶಿಖರ, ರಾಶಿ, ಪುಂಜ, ಪುಷ್ಪ, ಪತ್ರಾವಳಿ, ಫಲಾವಳಿ, ಫಲ, ಭೋಜನ, ಭುಂಜನ, ಸರ್ಪ, ಉರಗ, ಔಷಧ, ವೈದ್ಯ, ಆಯುಷ್ಯ, ವರ್ಷ, ಯುಗ, ಶತ, ಶತಮಾನ, ಶತಕ, ವರ್ತಮಾನ, ಸಂಗ್ರಹ, ಯುದ್ಧ, ಗದಾ, ದಂಡ, ಬಾಣ, ಬಾಣಪ್ರಯೋಗ, ಧನು, ದರಿದ್ರ, ದೀನ, ದಲಿತ, ಮಾರ್ಗ, ಮಧ್ಯ, ಧೂಲಿ, ದ್ವಾರ, ಗುಹಾ, ಸಹಸ್ರ, ಪಾಡ್ಯಮೀ, ಏಕಾದಶೀ, ದ್ವಾದಶೀ, ದೀಕ್ಷಾ, ದೈನ್ಯ, ದಿನಾಂಕ, ಸ್ಮಾರಕ, ಪಕ್ಷ, ತಿಥಿ, ಪಂಚಾಂಗ, ಪಂಚಾಲ, ದ್ರೌಪದಿ, ಧೃತರಾಷ್ಟ್ರ, ಕಾವೇರಿ, ಕೃಷ್ಣಾ, ಗೋದಾವರಿ, ನರ್ಮದಾ, ಬ್ರಹ್ಮಪುತ್ರಾ, ಗಂಗಾ, ಯಮುನಾ, ಸರಸ್ವತಿ, ಶಿವ, ವಿಷ್ಣು, ಬ್ರಹ್ಮ, ಮಹೇಶ, ಈಶ್ವರ, ನಶ್ವರ -ಇತ್ಯಾದಿ.

(೨) ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು

ಅರ್ಜಿ, ಕಚೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ‍್ಕಾರ, ರೈತ, ಸಲಾಮು, ಕಾನೂನು, ಜಮೀನು, ಬದಲಾವಣೆ, ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ನಕಲಿ, ರಸ್ತೆ, ಕುರ್ಚಿ, ಜಮೀನ್‌ದಾರ್, ಗುಲಾಮ, ಖಾಜಿ, ಸುಬೇದಾರ್, ದಪೇದಾರ್, ಹವಾಲ್ದಾರ್, ದಾಖಲ್, ದುಕಾನ್, ಅಮಲ್ದಾರ್, ಸವಾರ, ದವಾಖಾನೆ, ಕಾಗದ, ಬಂದೂಕ, ಹುಜೂರು, ಖಾವಂದ್, ಜನಾಬ್, ಮಹಲ್, ಕಿಲ್ಲಾ-ಮುಂತಾದವುಗಳು.

(೩) ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು

ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ‍್ಮೋನಿಯಂ, ಬೆಂಚ್, ಪ್ಲೇಗು, ಮೈಲು, ಪೋಲೀಸ್, ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೊಟೆಲ್, ಚೇರಮನ್, ರೂಂ, ಸ್ಕೂಲ್, ಕಾಲೇಜ್, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್, ಹೈಡ್ರೋಜನ್, ಆಸಿಡ್, ಫ಼ೀಸ್, ರಿಜಿಸ್ಟರ್, ಫರ್ನಿಚರ್, ಜೈಲ್, ಡ್ರೆಸ್, ಬೂಟ್ಸ್, ಪುಟ್‌ಪಾತ್, ಬೈಸ್‌ಕಲ್, ಸ್ಕೂಟರ್, ಜಾಮಿಟ್ರಿ, ಮಿಷನ್, ಡಿಗ್ರಿ, ಡಾಕ್ಟರ್, ಪ್ಲಾನ್, ಬ್ರೆಡ್, ಕಾಫೀ, ಟೀ, ಬೋರ್ಡ್, ಪೆಟ್ರೋಲ್, ಲೈಟ್, ಎಲೆಕ್ಟ್ರಿಕ್, ಡಿಪಾರ್ಟ್‌ಮೆಂಟ್, ಗವರ್ನಮೆಂಟ್, ಅಪಾಯಿಂಟ್‌ಮೆಂಟ್, ಆರ್ಡರ್, ಪ್ರೈಮರಿ, ಮಿಡಲ್, ನರ್ಸರಿ, ಹೈಸ್ಕೂಲ್, ಅಗ್ರಿಕಲ್ಚರ್, ಸೋಪ್, ಹ್ಯಾಂಡ್‌ಬಿಲ್, ಬುಕ್, ನೋಟ್ಸ್, ಪೇಜ್, ಎಸ್.ಎಸ್.ಎಲ್.ಸಿ., ಬಿ.ಎ., ಎಂ.ಎ., ಎಲ್‌ಎಲ್.ಬಿ., ಆನರ್ಸ್, ಮಾಷ್ಟರ್, ಲೆಕ್ಚರರ್, ಪ್ರೊಫೆಸರ್, ರೀಡರ್, ಲೈಬ್ರರಿ, ಪ್ರೆಸ್, ಡ್ರೈವರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಸೈನ್ಸ್, ಅಡ್ವಾನ್ಸ್, ಮ್ಯಾಪ್, ಸಿನೆಮಾ, ಫಿಲ್ಮ್, ಸರ್ಟಿಫೀಕೇಟ್, ಲೀವ್, ಎಜ್ಯುಕೇಷನ್, ಕಾಂಗ್ರೇಸ್, ಪಾರ್ಟಿ, ಕ್ರಿಕೆಟ್, ಪುಟ್‌ಬಾಲ್, ವಾಲಿಬಾಲ್, ಹಾಕಿ, ಟ್ರೈನಿಂಗ್, ಕ್ರಾಪ್‌ಕಟಿಂಗ್, ಡಿಸ್ಟ್ರಿಕ್ಟ್, ಸರ್ಕಲ್, ಸೊಸೈಟಿ, ಮಿಲ್, ಪೆನ್ಸಿಲ್, ಪೆನ್, ಇಂಕ್, ಬಾಟಲ್, ಸ್ಪೀಡ್, ಸ್ವಿಚ್, ಲೈಟ್, ಬಲ್ಬ್-ಇತ್ಯಾದಿಗಳು.

(೪) ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು

ಅಲಮಾರು, ಸಾಬೂನು, ಪಾದ್ರಿ, ಮೇಜು, ಜಂಗಾಲು, ಬಟಾಟೆ-ಇತ್ಯಾದಿಗಳು.

ಸೌರವ್ಯೂಹದ ಕುರಿತು 55 ಪ್ರಶ್ನೊತ್ತರಗಳು

ಸೌರವ್ಯೂಹದ ಕುರಿತು 55 ಪ್ರಶ್ನೋತ್ತರಗಳು:

1. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ ಅಥವಾ ಬ್ರಹ್ಮಾಂಡ' ಎನ್ನುವರು.

2. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು.

3. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ.

4. ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು.

5. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್ ನೋವಾ' ಎನ್ನುವರು.

6. ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ.

7. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್

8. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು.

9. ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು

.
10. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ.

11. ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್ ಗ್ಯಾಲಾಕ್ಸಿ'

12. ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ, ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ

13. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು.

14. ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ದೂರದಲ್ಲಿ ಸಂಚರಿಸುವುದೋ ಅದನ್ನೇ ಜ್ಯೋತಿರ್ವರ್ಷ ಎನ್ನುವರು.
15. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು 'ಅಸ್ಟ್ರನಾಮಿಕಲ್ ಯೂನಿಟ್' ಎನ್ನುವರು.

16. ಸೂರ್ಯನ ಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ದೂಮಕೇತುಗಳು ಹಾಗೂ ಕ್ಷುದ್ರಗ್ರಹಗಳ

ಪರಿವಾರವನ್ನು 'ಸೌರವ್ಯೂಹ' ಎಂದು ಕರೆಯುವರು.
17. ಸೂರ್ಯನ ಶೇಕಡಾ 71 ರಷ್ಟು ಜಲಜನಕ 27 ರಷ್ಟು ಹೀಲಿಯಂ ಹಾಗೂ ಉಳಿದ ಭಾಗವು ಇತರ ಅನಿಲಗಳಿಂದ ಕೂಡಿದೆ.

18. ಸೂರ್ಯನ ಮೇಲಿರುವ ಕಪ್ಪು ಕಲೆಗಳನ್ನು ಸೂರ್ಯ ಕಲೆಗಳೆಂದು ಕರೆಯುವರು. ಇವುಗಳನ್ನು 1908 ರಲ್ಲಿ ಹ್ಯಾಲೆಯು ಸಂಶೋದಿಸಿದನು.

19. ಸೂರ್ಯನ ಮದ್ಯ ಭಾಗವನ್ನು ಕೇಂದ್ರಗೋಳ, ಇದರ ಸೂತ್ತಲೂ ವಿಕಿರಣವಲಯ ಹಾಗೂ ಪ್ರಚಲನ ವಲಯಗಳಿಂದ ಸೂತ್ತುವರಿಯಲ್ಪಟ್ಟಿದೆ. ಹಾಗೂ ಅದರ ಸೂತ್ತಲೂ ಬಳೆಯಾಕಾರದ ' ಪೋಟೋ ಸ್ಪಿಯರ ಎಂದು ಕರೆಯುವರು.

20. ಸೂರ್ಯನ ಮೇಲ್ಬಾಗದಲ್ಲಿರುವ ಸೌರ ವಾಯುಮಂಡಲವನ್ನು ಕ್ರೋಮೊಸ್ಪಿಯರ ಎಂದು ಕರೆಯುವರು.

21. ಗ್ರಹಗಳು ಸ್ವಯಂ ಪ್ರಕಾಶಮಾನವಲ್ಲ ಅವುಗಳು ಸೂರ್ಯನ ಪ್ರಕಾಶವನ್ನು ಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ ಸೂರ್ಯನ ಸೂತ್ತ ಅಂಡಾಕಾರದ ಪಥದಲ್ಲಿ ಗಡಿಯಾರದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.

22. ಶುಕ್ರ ಮತ್ತು ಯೂರೇನೆಸ್ ಗ್ರಹಗಳು ಮಾತ್ರ ಇತರ ಗ್ರಹಗಳ ದಿಕ್ಕಿನಿಲ್ಲ ಚಲಿಸುತ್ತವೆ. ಗಡಿಯಾರದ ಚಲನೆಗೆ ಅನುಗುಣವಾಗಿ.

23. ಸೂರ್ಯನ ಸೂತ್ತಲೂ 8 ಗ್ರಹಗಳು ಸೂತ್ತುತ್ತವೆ. ಅವೆಂದರೆ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.

24. ಅಗಸ್ಟ  24 2006 ರಲ್ಲಿ ನಡೆದ ಅಂತರರಾಷ್ಟ್ರಿಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಗ್ರಹವನ್ನು ಗ್ರಹವಲ್ಲ ಎಂದು ತೀರ್ಮಾನಿಸಲಾಯಿತು.

25. ಬುಧ ಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ. ಇದು ಅತೀ ಹೆಚ್ಚು ಉಷ್ಣಾಂಶದಿಂದ ಕೂಡಿದೆ.

26. ಶುಕ್ರಗ್ರಹವು ಅತ್ಯಂತ ನಿಧಾನವಾಗಿ ತನ್ನ ಅಕ್ಷದ ಸೂತ್ತ ಸುತ್ತುತ್ತದೆ.

27.  ಗುರು ಗ್ರಹವು ಅತೀ ದೊಡ್ಡದಾದ ಗ್ರಹ. ಇದು ಅತೀ ವೇಗವಾದ ಅಕ್ಷಭ್ರಮಣವನ್ನು ಹೊಂದಿದೆ. ಇದರ ಒಂದು ದಿನ 9 ಗಂಟೆ 50 ನಿಮಿಷ ಮಾತ್ರ .
28. ಶನಿ ಗ್ರಹವು ತನ್ನ ಸೂತ್ತ ಸುಂದರವಾದ ಬಳೆಗಳನ್ನು ಹೊಂದಿದೆ.

29. ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು  ಆಂತರಿಕ ಗ್ರಹಗಳು ಅಥವಾ ಶಿಲಾಗ್ರಹಗಳು ಎಂದು ಕರೆಯುವರು. ಇವುಗಳ ಸಾಂದ್ರತೆ ಅತಿ ಹೆಚ್ಚು.

30. ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ ಗ್ರಹಗಳನ್ನು  ಬಾಹ್ಯ ಗ್ರಹಗಳು ಅಥವಾ ಜೋವಿಯಾನ್ ಗ್ರಹಗಳೆಂದೂ ಕರೆಯುವರು. ಇವುಗಳ ಸಾಂದ್ರತೆ ಅತೀ ಕಡಿಮೆ.

31. ಪ್ಲೋಟೊ ಗ್ರಹವನ್ನು ಕುಬ್ಜ ಗ್ರಹವೆಂದು ಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ ಹಾಗೂ ಸೀರಿಸ್.

32. ಬುಧ ಗ್ರಹದ ಪರಿಭ್ರಮಣ ಅವಧಿಯು ಎಲ್ಲಾ ಗ್ರಹಗಳಿಗಿಂ ಕಡಿಮೆ 88 ದಿನಗಳು.

33. ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ನಕ್ಷತ್ರದಂತೆ ಪ್ರಜ್ವಲಿಸುತ್ತದೆ. ಇದನ್ನು ಮುಂಜಾನೆಯ ನಕ್ಷತ್ರ, ಬೆಳ್ಳಿ ಚುಕ್ಕಿ ಎಂತಲೂ ಕರೆಯುವರು. ಇದರ ಅಕ್ಷ ಭ್ರಮಣದ ಅವಧಿಯು ಪರಿಭ್ರಮಣ ಅವಧಿಗಿಂತ ಹೆಚ್ಚು.

34. ಭೂಮಿಯ ಏಕೈಕ ನೈಸಗರ್ಿಕ ಉಪಗ್ರಹ ಚಂದ್ರ.

35. ಮಂಗಳ ಗ್ರಹವನ್ನು 'ಕೆಂಪು ಗ್ರಹ' ಕುಜ ಅಥವಾ ಅಂಗಾರಕವೆಂತಲೂ ಕರೆಯುವರು.

36. ಮಂಗಳ ಗ್ರಹವು ಪೊಬೊಸ್ ಮತ್ತು ಡಿಮೋಸ್ ಎಂಬ ಎರಡು ಚಿಕ್ಕ ಉಪ ಗ್ರಹಗಳನ್ನು ಹೊಂದಿದೆ.

37.  ಭಾರತವು ಮಂಗಳ ಗ್ರಹವನ್ನು ಶೋಧಿಸುವ ಉಪಗ್ರಹವನ್ನು ನವಂಬರ 5, 2013 ರಲ್ಲಿ ಉಡಾಯಿಸಿ (ಮಾರ್ಸ ಅಬರ್ಿಟರ್) ಉಡಾಯಿಸಿದ್ದು. ಬಾರತವು ಅಮೇರಿಕಾ, ರಷ್ಯಾ ಮತ್ತು ಯೂರೋಪಗಳ ಒಕ್ಕೂಟದ ನಂತರ ನಾಲ್ಕನೆಯದಾಗಿದೆ.

38. ಗುರು ಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತ ದೊಡ್ಡದು. ಇದನ್ನು ಮತ್ತು ಇದರ ಉಪ ಗ್ರಹಗಳನ್ನು ಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು.

39. ಗುರು ಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚು ಉಪ ಗ್ರಹಗಳನ್ನು ಹೊಂದಿದೆ, (ಗುರು-60, ಶನಿ-50, ಯೂರೇನೆಸ್-25).

40. ಗುರು ಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕು ಉಪಗ್ರಹಗಳು- ಐಓ,ಯೂರೋಪ್,ಗ್ಯಾನಿಮೇಡ ಮತ್ತು ಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋ ಗುರುತಿಸಿದ್ದರಿಂದ ಇವುಗಳನ್ನು ಗ್ಯಾಲಿಲಿಯನ್ ಉಪಗ್ರಹಗಳು ಎನ್ನುವರು.

41. ಗ್ಯಾನಿಮೇಡ ಉಪಗ್ರಹವು ಸೌರ್ಯವ್ಯೂಹದ ಉಪ ಗ್ರಹಗಳಲ್ಲಿ ಅತೀ ದೊಡ್ಡದು. ಐಓ ಉಪಗ್ರಹವು ಸೌರವ್ಯೂಹದ ಗ್ರಹ ಹಾಗೂ ಉಪಗ್ರಹಗಳಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿದೆ.

42. ಶನಿ ಗ್ರಹವು ಎರಡನೇ ದೊಡ್ಡ ಗ್ರಹ ಹಾಗೂ ಅತ್ಯಂತ ಸುಂದರವಾದ ಗ್ರಹ. ಇದರ ಸೂತ್ತಲೂ ಮೂರು ಬಳೆಗಳಿವೆ. ಶನಿ ಗ್ರಹದ ಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್, ಡಿಯೋನ್, ಮತ್ತು ರಿಯಾ.

43. ಯುರೆನೇಸ್ ಗ್ರಹವು ಗಾಡ ನೀಲಿ ಬಣ್ಣವನ್ನು ಹೊಂದಿರುವುದು ಇದರ ವಾಯುಮಂಡಲದಲ್ಲಿ ಮಿಥೇನ ಅನಿಲವು ಅಧಿಕವಾಗಿರುವುದರಿಂದ ಈ ಬಣ್ಣಕ್ಕೆ ಮೂಲ ಕಾರಣವಾಗಿದೆ. ಯುರೆನೇಸ್ ಗ್ರಹದ ಎಲ್ಲಾ ಉಪಗ್ರಹಗಳಿಗೆ  ಷೇಕ್ಸ್ ಪಿಯರನ ನಾಟಕದ ಪಾತ್ರಧಾರಿಗಳ ಹೆಸರನ್ನು ನೀಡಲಾಗಿದೆ.

44. ಬುಧ ಮತ್ತು ಶುಕ್ರ ಗ್ರಹಗಳು ಯಾವುದೇ ಉಪಗ್ರಹಗಳನ್ನು ಹೊಂದಿರುವುದಿಲ್ಲ.

45. ಸೌರವ್ಯೂಹದ ಉಪಗ್ರಹಗಳಲ್ಲಿ ಗುರು ಗ್ರಹದ ಗ್ಯಾನಿಮೇಡ್ ಅತಿ ದೊಡ್ಡದು. ಶನಿ ಗ್ರಹದ ಇಯಾಪಿಟಸ್ ಅತೀ ಚಿಕ್ಕದು.

46. ಆಕಾಶದಿಂದ ರಾತ್ರಿ ವೇಳೆಯಲ್ಲಿ ವಾಯುಮಂಡಲದ ಮೂಲಕ ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು ವಸ್ತುಗಳಿಗೆ 'ಉಲ್ಕೆಗಳು' ಎಂದು ಕರೆಯುವರು.

47. ಉಲ್ಕೆಗಳು ಪೂರ್ಣವಾಗಿ ಉರಿದು ಹೋಗದೆ ಅವುಗಳ ಭೂಮಿಯ ಮೇಲೆ ಬೀಳುತ್ತವೆ ಅವುಗಳನ್ನು ಉಲ್ಕಾಶಿಲೆಗಳು ಎನ್ನುವರು. ಭೂಮಿಗೆ ತಲುಪಿರುವ ಉಲ್ಕಾಶಿಲೆಗಳಲ್ಲಿ ನಮೀಬಿಯಾದ ಹೋಬಾವೆಸ್ಟನಲ್ಲಿರುವ ಹಾಗೂ ಆಸ್ಟ್ರೇಲಿಯಾದ ಹೆನ್ಚುರಿ ತಗ್ಗುಗಳು.

48. ಕ್ಷುದ್ರಗಳು ಮಂಗಳು ಮತ್ತು ಗುರುಗ್ರಹಗಳ ನಡುವೆ ಸೂರ್ಯನ ಸೂತ್ತಲೂ ಸುತ್ತುತ್ತಿವೆ. ಸೀರಿಸ್ ಸೌರವ್ಯೂಹದ ಅತೀ ದೊಡ್ಡ ಕ್ಷುದ್ರಗ್ರಹ.

49. ಧೂಮಕೇತುಗಳು ಪ್ರಜ್ವಲಿಸುವ ತಲೆ ಹಾಗೂ ಉದ್ದವಾದ ಬಾಲವನ್ನು ಹೊಂದಿವೆ. ಹ್ಯಾಲೆ ಧೂಮಕೇತುವು 76 ವರ್ಷಗಳಿಗೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ.

50. 1956 ರಲ್ಲಿ ರಷ್ಯಾದ ಲೂನಿಕ್-2 ಚಂದ್ರನನ್ನು ತಲುಪಿದ ಮೊದಲ ಬಾಹ್ಯಾಕಾಶ ನೌಕೆ. 1969 ರಲ್ಲಿ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ.

51. ಚಂದ್ರನು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಅಂಡಾಕಾರವಾಗಿ ಸೂತ್ತುತ್ತಾ  ಭೂಮಿಗೆ ಸಮೀಪಿಸುವುದನ್ನು 'ಪೆರಿಜಿ' ಅಥವಾ ಉಚ್ಚಸ್ಥಾನವೆಂದೂ ಹಾಗೂ ಭೂಮಿಯಿಂದ ಗರಿಷ್ಠ ದೂರವಿರುವುದನ್ನು 'ಅಪೋಜಿ' ಅಥವಾ ನೀಚಸ್ಥಾನ ಎನ್ನುವರು.

52. ಚಂದ್ರನು ಭೂಮಿಯ ಸೂತ್ತ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಬೇಕಾಗುವ ಅವಧಿ 29 ದಿನ 12 ಗಂಟೆ 44 ನಿಮಿಷ ಮತ್ತು 11 ಸೆಕೆಂಡ್ ಅಥವಾ 29 1/2 ದಿನ

53. ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ರೇಖೆಯಲ್ಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬಿಳುವುದರಿಂದ ಉಂಟಾಗುತ್ತದೆ. ಎಲ್ಲಾ ಹುಣ್ಣಿಮೆಯ ದಿನಗಳಂದು ಚಂದ್ರಗ್ರಹಣವಾಗುವುದಿಲ್ಲ.

54. ಸೂರ್ಯ ಗ್ರಹಣವು ಅಮವಾಸ್ಯೆಯ ದಿನದಂದು ಮಾತ್ರ ಸಂಭವಿಸುತ್ತದೆ. ಇದು ಮೂರು ರೀತಿಯಲ್ಲಿ ಕಂಡು ಬರುತ್ತದೆ. 1) ಪೂರ್ಣ ಸೂರ್ಯಗ್ರಹಣ 2) ಪಾಶ್ವ ಸೂರ್ಯಗ್ರಹಣ ಹಾಗೂ 3) ಕಂಕಣ ಸೂರ್ಯಗ್ರಹಣ.

55. ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣವಾಗುತ್ತದೆ

ಭಾರತೀಯ ರೂಪಾಯಿ ಮೌಲ್ಯ

ನಮಗೆ ಡಾಲರ್ ಹೇಗೋ ಈ 13 ದೇಶಗಳಿಗೆ ನಮ್ಮ ರುಪಾಯಿ!! ಅಲ್ಲಿ ನಮ್ಮ ರುಪಾಯಿ ಬೆಲೆ ಎಷ್ಟು ಗೊತ್ತಾ?

ಯಾವಾಗಲೂ ನಮ್ಮ ರುಪಾಯಿಯನ್ನು ಡಾಲರ್ ಜತೆಗೂ, ಪೌಂಡ್ ಜತೆಗೋ ಹೋಲಿಸಿಕೊಂಡು…ಅರೆ ನಮ್ಮ ರುಪಾಯಿ ಬೆಲೆ ಇಷ್ಟು ಕಡಿಮೇನಾ ಎಂದು ಬೇಸರಗೊಳ್ಳುತ್ತಾ ಇರುತ್ತೇವೆ. ಆದರೆ ನಮಗೆ ಗೊತ್ತಿಲ್ಲದ ವಿಷಯ ಏನೆಂದರೆ ಈ ಜಗತ್ತಿನಲ್ಲಿ ನಮ್ಮ ರುಪಾಯಿಗಿಂತ ಕಡಿಮೆ ಮಾರಕ ಬೆಲೆಯುಳ್ಳ ಕರೆನ್ಸಿ ದೇಶಗಳು ಬಹಳಷ್ಟಿವೆ. ಅಷ್ಟೇಕೆ ನಮ್ಮ ಪಕ್ಕದಲ್ಲಿರುವ ಪಾಕ್, ನೇಪಾಳ್, ಶ್ರೀಲಂಕಾಗಳಿಗೆ ಹೋಲಿಸಿದರೆ ನಮ್ಮ ಕರೆನ್ಸಿ ಬೆಲೆ ಹೆಚ್ಚು!! ಕೆಲವು ದೇಶಗಳಲ್ಲಿ ನಮ್ಮ ಒಂದು ರುಪಾಯಿ ಅಲ್ಲಿ 800 ರುಪಾಯಿಗೆ ಸಮಾನ ಎಂದರೆ ಅಚ್ಚರಿಯಾಗದೆ ಇರದು. ಇಲ್ಲಿದೆ ನೋಡಿ ನಮ್ಮ ರುಪಾಯಿ ಬೆಲೆ ದೃಢವಾಗಿರುವ ಕೆಲವು ದೇಶಗಳ ಬಗ್ಗೆ ಕೊಟ್ಟಿದ್ದೇವೆ. ಒಮ್ಮೆ ಕಣ್ಣಾಯಿಸಿ.

ವಿಯಟ್ನಾಂ
1 ರುಪಾಯಿ = 343.66 ವಿಯಟ್ನಾಂ ಡಂಗ್

ಬೆಲಾರಸ್

1 ರುಪಾಯಿ = 216 ರೂಬೆಲ್

ಪೆರುಗ್ವೆ
1 ರುಪಾಯಿ = 74.26 ಗುರಾನಿ

ಕಾಂಬೋಡಿಯಾ
1 ರುಪಾಯಿ = 63.93 ರಿಯಾಲ್

ಇಂಡೋನೇಷಿಯಾ
1 ರುಪಾಯಿ = 197.02 ಇಂಡೋನೇಷಿಯಾ ರುಪಯ್ಯ

ಮಂಗೋಲಿಯಾ

1 ರುಪಾಯಿ = 33.31 ಮಂಗೋಲಿಯಾ ತುಗ್ರಿಕ್

ಕೋಸ್ಟರೀಕಾ:
1 ರುಪಾಯಿ = 8.24 ಕೋಸ್ಟರಿಕ ರುಪಿ

ಶ್ರೀಲಂಕಾ
1 ರುಪಾಯಿ = 2.08 ಶ್ರೀಲಂಕ ರುಪಿ
ನೇಪಾಳ್
1 ರುಪಾಯಿ = 1.6 ನೇಪಾಳ್ ರುಪಿ
ಪಾಕಿಸ್ತಾನ್
1 ರುಪಾಯಿ = 1.58 ಪಾಕಿಸ್ತಾನಿ ರುಪಿ
ಉಬ್ಜೇಕಿಸ್ತಾನ್
1 ರುಪಾಯಿ = 44.76 ಉಬ್ಜೇಕಿಸ್ತಾನ್ ಸಮ್
ಎಮನ್
1 ರುಪಾಯಿ = 3.74 ಎಮನ್ ರಿಯಾಲ್
ಇರಾನ್
1 ರುಪಾಯಿ = 475.25 ಇರಾನ್ ರಿಯಾಲ್

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋದಕರು

★ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (Comptroller and Auditor General of India) :

★ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (Comptroller and Auditor General of India) :

🔰ನಮ್ಮ ದೇಶದ ಸಾರ್ವಜನಿಕ ಹಣಕಾಸು ನಿಯಂತ್ರಣದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ. 2-G ಸೆಕ್ಟ್ರಮ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಕೋಲ್ ಗೇಟ್ ದಂಥ ಪ್ರಮುಖ ಅವ್ಯವಹಾರದ ಹಗರಣಗಳು ಬೆಳಕಿಗೆ ಬಂದಿದ್ದು ಮಹಾಲೆಕ್ಕ ಪರಿಶೋಧಕರಿಂದಲೇ.

🔰CAG ಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ( PAC - Public Account Committee ) ಯೊಂದಿಗೆ ಜೋಡಿಸಲಾಗಿತ್ತು. ಇದನ್ನು PAC ಯಿಂದ ಪ್ರತ್ಯೇಕಿಸಿ ಸ್ವತಂತ್ರವಾಗಿಸಿದವರು 2006 ರಿಂದ 2013 ರವರೆಗೆ CAG ಆಗಿದ್ದ ವಿನೋದ್ ರಾಯ್ ರವರು.

🔰ಪ್ರಸ್ತುತ CAG ಶಶಿಕಾಂತ ಶರ್ಮಾ 2013 ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

🔰ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.

🔰ಸಂವಿಧಾನದ 148 ನೇ ಅನುಚ್ಛೇದದ ಪ್ರಕಾರ ಭಾರತಕ್ಕೆ ಒಬ್ಬ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಇರುತ್ತಾರೆ.

🔰ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಧಿಕಾರವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಕ ಮಾಡಿದ ಒಬ್ಬ ವ್ಯಕ್ತಿಯ ಮುಂದೆ ಸಂವಿಧಾನದ 3 ನೇ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ವಚನವನ್ನು ಸ್ವಿಕರಿಸತಕ್ಕದ್ದಾಗಿದೆ.

🔰ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವೇತನ ಮತ್ತು ಸೇವೆಯ ಕರ್ತವ್ಯಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾಗಿದ್ದು, ಅವುಗಳನ್ನು ಸಂವಿಧಾನದ 2 ನೇ ಅನುಸೂಚಿಯಲ್ಲಿ ತಿಳಿಸಲಾಗಿದೆ.

🔰ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ ಪೂರ್ಣಗೊಳ್ಳುವವರೆಗೆ ಸೇವೆ ಸಲ್ಲಿಸತಕ್ಕದ್ದು. ಇವರ ವೇತನ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ ಹಾಗೂ ಇವರ ವೇತನ ಮತ್ತು ಇತರ ಸೇವಾ ನಿಯಮಗಳು ಸಂಸತ್ತಿನ ಕಾಯ್ದೆಯ ಪ್ರಕಾರ ಇರುತ್ತದೆ.

🔰ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ಅಕೌಂಟನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿಯನ್ನು ಒಪ್ಪಿಸುತ್ತಾರೆ. ರಾಷ್ಟ್ರಪತಿಯವರು ಸಂಸತ್ತಿನ ಮುಂದಿಡುತ್ತಾರೆ.

🔰ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG) ಕೇಂದ್ರ ಮತ್ತು ರಾಜ್ಯಗಳ ಹಾಗೂ ಸಂಸತ್ತಿನ ಕಾಯ್ದೆಯನ್ವಯ ಸ್ಥಾಪಿತವಾದ ಇತರ ಯಾವುದೇ ಪ್ರಾಧಿಕಾರದ ಅಥವಾ ಮಂಡಳಿಯ, ಸರ್ಕಾರಿ ಕಂಪನಿಗಳ ಲೆಕ್ಕ ಖಾತೆಯನ್ನು ಸಹ ಆಡಿಟ್ ಮಾಡುತ್ತಾರೆ.

🔰(CAG) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ಪದವಿಯಿಂದ ತೆಗೆದುಹಾಕಬೇಕಾದರೆ ಸಂಸತ್ತಿನ ತೀರ್ಮಾನದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬಹುದು. ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಯಾಂಗಕ್ಕೆ ಇವರನ್ನು ತೆಗೆಯುವ ಅಧಿಕಾರ ಇರುವುದಿಲ್ಲ. ಮಹಾಭಿಯೋಗದ ಮೂಲಕ ಮಾತ್ರ ತೆಗೆಯಬಹುದು.

🔰ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನಿವೃ ತ್ತಿ ಹೊಂದಿದ ಮೇಲೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಗೆ ಅರ್ಹರಾಗಿರುವುದಿಲ್ಲ.

ಸಾಮಾನ್ಯ ಜ್ಞಾನ ಪ್ರಶ್ನೊತ್ತರಗಳು

ಸಾಮಾನ್ಯ ಜ್ಞಾನ ಪ್ರಶ್ನೊತ್ತರಗಳು:

☼ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ☼

1) ಯಾವ ರಾಜ್ಯದಲ್ಲಿ  ಆರ್ಥಿಕ ದುರ್ಬಲರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ?
a) ಗುಜರಾತ್‌  ✔✔✔✔
b) ಮಧ್ಯಪ್ರದೇಶ
c)  ದೆಹಲಿ 
d)  ಕೇರಳ
■○●○●○●○●○●○● ○●○■
2) ಜಪಾನ್‌ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾಗಿರುವ ‘ಆರ್ಡರ್‌ ಆಫ್ ದ ರೈಸಿಂಗ್ ಸನ್ ಗೋಲ್ಡ್ ಅಂಡ್ ಸಿಲ್ವರ್’ (2015) ಪ್ರಶಸ್ತಿ ಈ ಕೆಳಕಂಡವರಲ್ಲಿ ಯಾರಿಗೆ ಸಂದಿದೆ?
a)  ಕೆ.ಬಿ ಸಿಂಗ್‌    
b) ಎನ್‌,ಕೆ. ಸಿಂಗ್‌ ✔✔✔✔
c) ಬರ್ಧನ್‌ ಸಿಂಗ್‌ 7 
d) ದಿಗ್ವಿಜಯ್‌ ಸಿಂಗ್‌
■○●○●○●○●○●○● ○●○■
3)  2016ರ ಮೇ ತಿಂಗಳ ಮೊದಲ ವಾರದಲ್ಲಿ 1957ರ  ಕಾಯ್ದೆಯೊಂದಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು.  ಆ ಕಾಯ್ದೆ  ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ?
a)  ನೀರಾವರಿ
b) ಪರಿಸರ
c) ಗಣಿ ಮತ್ತು ಖನಿಜ  ✔✔✔✔
d) ಕೃಷಿ
■○●○●○●○●○●○● ○●○■
4) 2016ನೇ ಸಾಲಿನ ‘ನೆಲ್ಸನ್ ಮಂಡೇಲಾ ಗ್ರೇಸ್ ಮಿಷೆಲ್ ಇನೋವೇಷನ್’ ಪ್ರಶಸ್ತಿಯು ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿಯೊಬ್ಬರಿಗೆ ಸಂದಿದೆ. ಅವರು ಯಾರು?
a) ಮಲಾಲ  
b) ಫಾತಿಮಾ ಜಖಾರಿ
c) ಹಸಿನಾ ರಾಜಾ
d) ತಬಸ್ಸುಮ್ ಅದ್ನನ್ ✔✔✔✔
■○●○●○●○●○●○● ○●○■
5) ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಆತ್ಮ ಚರಿತ್ರೆ ಮುಂಬರುವ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಆ ಪುಸ್ತಕ ಯಾವುದು ?
a)  ಮೈ ಟೆನಿಸ್‌ ಲೈಫ್‌
b) ಆಟೋಬಯೊಗ್ರಫಿ ಆಫ್‌ ಸಾನಿಯಾ
c) ರಾಕೇಟ್‌ ಆಂಡ್‌ ಬಾಲ್‌ 
d) ಏಸ್ ಎಗನೆಸ್ಟ್ ಆಡ್ಸ್ ('Ace Against Odds,') ✔✔✔✔
■○●○●○●○●○●○● ○●○■
6) ಬ್ರಿಟನ್‌ ದೇಶದ ಖ್ಯಾತ  ಸ್ನೊಕರ್‌ ಆಟಗಾರ 2016ರ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ ಅನ್ನು ಗೆದ್ದು ಕೊಂಡರು. ಅವರು ಯಾರು?
a)  ಡಿಂಗ್ ಜುಂಗಿ         
b) ಮೈಕಲ್‌  ಲಾರ್ಡ್‌
c) ಮಾರ್ಕ್ ಶೆಲ್ಬಿ ✔✔✔✔    
d) ಸ್ಟುವರ್ಟ್‌ ಫೊಲಾರ್ಡ್‌
■○●○●○●○●○●○● ○●○■
7) ಭಾರತ ಮತ್ತು ಇಟಲಿ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ. ?
a)  ವಿವಿಐಪಿ ಕಾರು
b) ವಿವಿಐಪಿ ಹೆಲಿಕಾಪ್ಟರ್‌  ✔✔✔✔
c) ವಿವಿಐಪಿ ಬಸ್ಸು
d) ವಿವಿಐಪಿ ಬೈಕ್‌
■○●○●○●○●○●○● ○●○■
8)  ಪ್ರಸಕ್ತ ಸಾಲಿನ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಈ ಕೆಳಕಂಡ ಯಾವ ಕ್ರಿಕೆಟ್‌ ಆಟಗಾರನನ್ನು ಬಿಸಿಸಿಐ ಶಿಫಾರಸು ಮಾಡಿದೆ
a) ವಿರಾಟ್‌ ಕೊಹ್ಲಿ  ✔✔✔✔
b) ಅಜಿಂಕ್ಯಾ ರಹಾನೆ
c) ಸುರೇಶ್‌ ರೈನಾ
d) ರೋಹಿತ್‌ ಶರ್ಮಾ
■○●○●○●○●○●○● ○●○■
9) 2016ನೇ ಸಾಲಿನ ಕಾಮನ್‌ವೆಲ್ತ್‌ ಸಣ್ಣ ಕಥೆ ಪ್ರಶಸ್ತಿ (ಏಷ್ಯಾ ವಿಭಾಗ)ಯು ಭಾರತೀಯ ಉಪನ್ಯಾಸಕರಾದ ಪರಾಶರ ಕುಲಕರ್ಣಿ ಅವರಿಗೆ  ಸಂದಿದೆ. ಅವರು ಬರೆದ ಸಣ್ಣ ಕಥೆ?
a) ಕೌ ಅಂಡ್‌ ಕಂಪೆನಿ  ✔✔✔✔
b) ಕಂಪೆನಿ
c) ಇಂಡಿಯನ್‌ ಕೌ 
d) ಮೇಲಿನ ಯಾವುದು ಅಲ್ಲ
■○●○●○●○●○●○● ○●○■
10) ಪ್ರಸಕ್ತ ವರ್ಷ ಈ ಕೆಳಕಂಡ  ಯಾವ ದಿನಾಂಕ ಮತ್ತು ತಿಂಗಳಿನಲ್ಲಿ ‘ವಿಶ್ವ ವಲಸೆ ಹಕ್ಕಿಗಳ’ ದಿನವನ್ನು ಆಚರಿಸಲಾಗುತ್ತದೆ?
a) 9, ಮೇ   
b) 10, ಮೇ ✔✔✔✔
c)  11,  ಮೇ
d) 12,  ಮೇ
■○●○●○●○●○●○● ○●○■
11)ಹಣ್ಣಿನ ವ್ಯಾಪಾರಿಯೊಬ್ಬ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುತ್ತಾನೆ. ಮೊದಲ ದಿನ, ಎರಡನೇ ದಿನ, ಮೂರನೇ ದಿನ ಮತ್ತು ನಾಲ್ಕನೆ ದಿನ ಕ್ರಮವಾಗಿ  1015, 1111, 2002  ಮತ್ತು 1991 ಹಣ್ಣುಗಳನ್ನು ಮಾರಾಟ ಮಾಡುತ್ತಾನೆ. ಆಗಾದರೆ ಮಾರಾಟವಾದ ಒಟ್ಟು ಹಣ್ಣುಗಳ ಸಂಖ್ಯೆ ಎಷ್ಟು ?
a) 4589   
b) 5670
c) 6119 ✔✔✔✔
d) 6789
■○●○●○●○●○●○● ○●○■
12)ಈ ಕೆಳಗಿನ ಯಾವ ಸಂಖ್ಯೆಯನ್ನು 3 ರಿಂದ ಪೂರ್ಣವಾಗಿ ಭಾಗಿಸಬಹುದು?
a) 5006020
b) 4006020 ✔✔✔✔
c) 3006020
d) 2006020
■○●○●○●○●○●○● ○●○■
Gkforkpsc Praveen
■○●○●○●○●○●○● ○●○■
13)35 ವಿದ್ಯಾರ್ಥಿಗಳ ಒಂದು ತರಗತಿಯಲ್ಲಿ 2/5 ಹುಡುಗಿಯರ ಮತ್ತು ಹುಡುಗರ ಸಂಖ್ಯೆ ಇರುತ್ತದೆ. ಆಗಾದರೆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು ?
a) 15 
b) 10
c) 5 
d) 25 ✔✔✔✔
■○●○●○●○●○●○● ○●○■
14)ಎರಡು ಸಂಖ್ಯೆಗಳ ಲಸಾಅ ಮತ್ತು ಮಸಾಅ ಕ್ರಮವಾಗಿ 96 ಮತ್ತು  4 ಆಗಿರುತ್ತದೆ. ಇವುಗಳಲ್ಲಿ ಒಂದು 32 ಆಗಿದ್ದರೆ ಉಳಿದ ಸಂಖ್ಯೆಯನ್ನು ಕಂಡುಹಿಡಿಯಿರಿ?
a) 12 ✔✔✔✔
b) 14
c) 16
d) 18
■○●○●○●○●○●○● ○●○■
15) ಪೃಥ್ವಿ 108 ಪುಟಗಳ ಒಂದು ಪುಸ್ತಕವನ್ನು ಓದಿದನು. ಪ್ರತಿ ದಿನವೂ 12 ಪುಟಗಳನ್ನು ಓದುತ್ತಿದ್ದನು. ಆಗಾದರೆ ಇಡೀ ಪುಸ್ತಕವನ್ನು ಓದಲು ಪೃಥ್ವಿ ಎಷ್ಟು ದಿನಗಳನ್ನು ತೆಗೆದುಕೊಂಡನು?
a) 8 ದಿನ   
b) 9 ದಿನ✔✔✔✔
c) 10 ದಿನ 
d) 11 ದಿನ
■○●○●○●○●○●○● ○●○■
16) ಒಂದು ಬೈಕ್ ಗಂಟೆಗೆ 50 ಕಿ. ಮೀ ಚಲಿಸುತ್ತಿದ್ದರೆ ಅದು 6 ಗಂಟೆಯಲ್ಲಿ ಒಟ್ಟು ಎಷ್ಟು ಕಿ.ಮೀ ದೂರವನ್ನು  ಕ್ರಮಿಸುತ್ತದೆ  ?
a) 100 ಕಿ, ಮೀ 
b) 200 ಕಿ. ಮೀ
c) 300 ಕಿ.ಮೀ ✔✔✔✔
d) 400 ಕಿ. ಮೀ
■○●○●○●○●○●○● ○●○■
17) ಒಂದು ಮೊಬೈಲ್ ಅಂಗಡಿಯಲ್ಲಿ 68  ಮೊಬೈಲ್‌ಗಳು ಇದ್ದವು. ಮತ್ತೆ 78 ಮೊಬೈಲ್‌ಗಳನ್ನು ತರಿಸಲಾಯಿತು. ನಂತರ 118 ಮೊಬೈಲ್‌ಗಳನ್ನು ಮಾರಾಟ ಮಾಡಲಾಯಿತು. ಉಳಿದ ಮೊಬೈಲ್‌ಗಳ ಸಂಖ್ಯೆ ಎಷ್ಟು?
a) 18 ಮೊಬೈಲ್‌ಗಳು
b) 24 ಮೊಬೈಲ್‌ಗಳು
c) 26 ಮೊಬೈಲ್‌ಗಳು
d) 28 ಮೊಬೈಲ್‌ಗಳು✔✔✔✔
■○●○●○●○●○●○● ○●○■
Jnanasele Praveen
■○●○●○●○●○●○● ○●○■
18) ತಾಯಿ ಮಗಳಿಗಿಂತ 20 ವರ್ಷ ದೊಡ್ಡವಳು. ತಾಯಿಯ ಈಗಿನ ವಯಸ್ಸು 58 ಆಗಿರುತ್ತದೆ. ಆಗಾದರೆ ಪ್ರಸ್ತುತ ಮಗಳ ವಯಸ್ಸು ಎಷ್ಟು?
a) 28 
b) 38✔✔✔✔
c) 18 
d) 48
■○●○●○●○●○●○● ○●○■
19)18 ಮಾವಿನ ಹಣ್ಣುಗಳನ್ನು ಡಜನ್‌ಗೆ ಪರಿವರ್ತಿಸಿದಾಗ...
a) 1.5 ಡಜನ್ ✔✔✔✔
b) 1 ಡಜನ್
b) 2 ಡಜನ್  
d) 2.5 ಡಜನ್
■○●○●○●○●○●○● ○●○■
20) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಯಾರನ್ನು ನೇಮಕ ಮಾಡಲಾಗಿದೆ?
a)  ರಾಹುಲ್‌ ದ್ರಾವಿಡ್‌  
b) ಅನಿಲ್‌ ಕುಂಬ್ಳೆ ✔✔✔✔
c) ರವಿಶಾಸ್ತ್ರಿ 
d) ಸಂಜಯ್‌ ಬಂಗಾರ
■○●○●○●○●○●○● ○●○■
21)  ಕಳೆದ ಮೇ ತಿಂಗಳಲ್ಲಿ 21ನೇ ಶತಮಾನದ ಅಣು ಒಪ್ಪಂದಕ್ಕೆ ಈ ಕೆಳಕಂಡ ಯಾವ ದೇಶಗಳು ಪರಸ್ಪರ ಸಹಿ ಹಾಕಿದವು?
a) ಭಾರತ–ಅಮೆರಿಕ         
b) ಭಾರತ–ಜಪಾನ್‌
c) ಭಾರತ–ಬಾಂಗ್ಲಾದೇಶ ✔✔✔✔  
d) ಭಾರತ–ಚೀನಾ
■○●○●○●○●○●○● ○●○■
22) ಅಂತರರಾಷ್ಟ್ರೀಯ ಬಾಹ್ಯಾಕಾಶ ಒಕ್ಕೂಟ ನೀಡುವ ‘ಹಾಲ್ ಆಫ್ ಫೇಮ್ ಪ್ರಶಸ್ತಿ’ಗೆ  ಪಾತ್ರರಾದ ಭಾರತದ ಮೊಟ್ಟಮೊದಲ ಬಾಹ್ಯಾಕಾಶ ವಿಜ್ಞಾನಿ ಯಾರು?
a) ಸಿ.ಎನ್‌.ಆರ್. ರಾವ್‌
b)  ಡಾ. ರಾಜಾರಾಮಣ್ಣ
c) ಡಾ. ರಾಧಾಕೃಷ್ಣನ್‌
d) ಯು.ಆರ್‌. ರಾವ್‌ ✔✔✔✔
■○●○●○●○●○●○● ○●○■
23) 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು,  ಎರಡನೇ ಅತ್ಯುತ್ತಮ ಚಿತ್ರ  ಪ್ರಶಸ್ತಿಯು ಯಾವ ಚಿತ್ರಕ್ಕೆ ಲಭಿಸಿದೆ?
a)  ಮಾರಿಕೊಂಡವರು ✔✔✔✔
b) ತಿಥಿ
c) ಮೈತ್ರಿ 
d) ಗಜಕೇಸರಿ
■○●○●○●○●○●○● ○●○■
24) 2016ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಇಂಟರ್‌ನ್ಯಾಷನಲ್‌  ಪ್ರಶಸ್ತಿ ಯಾರಿಗೆ ಸಂದಿದೆ? ಅವರು ಯಾವ ದೇಶದವರು?
a)  ಹಾನ್‌ ಕಾಂಗ್‌–ದಕ್ಷಿಣ ಕೋರಿಯಾ ✔✔✔✔
b) ಚಿನು ಅಚೀಬೆ–ನೈಜೀರಿಯಾ
c) ಎಲ್‌.ಡೇವಿಸ್‌–ಅಮೆರಿಕ
d) ಅಲೈಸ್‌ ಮುನ್ರೋ–ಕೆನಡಾ
■○●○●○●○●○●○● ○●○■
25)   ಖ್ಯಾತ ಕಾದಂಬರಿಕಾರ ಬಿ.ಎಲ್‌. ವೇಣು ಅವರ ಯಾವ ಕಾದಂಬರಿ 2016ನೇ ಸಾಲಿನ ‘ಮಾಸ್ತಿ ಕಾದಂಬರಿ ಪುರಸ್ಕಾರ’ಕ್ಕೆ ಪಾತ್ರವಾಗಿದೆ?
a)  ಮದಕರಿ ನಾಯಕ
b) ಓಬಳವ್ವ ನಾಗತಿ ✔✔✔✔
c) ಒನಕೆ ಓಬವ್ವ
d) ಕರಿಮಲೆಯ ಕಗ್ಗತ್ತಲು
■○●○●○●○●○●○● ○●○■
26) ಸುಮಾರು ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಕ್ಷಣಾ ಇಲಾಖೆಯ ವೈಮಾನಿಕ ವಾಯುನೆಲೆ ರಾಜ್ಯದ ಯಾವ ಜಿಲ್ಲೆಯಲ್ಲಿದೆ?
a) ಮಂಗಳೂರು
b) ಚಿತ್ರದುರ್ಗ ✔✔✔✔
c) ಬೆಳಗಾವಿ
d) ಮೈಸೂರು
■○●○●○●○●○●○● ○●○■
27) ಪುದುಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ರಂಗಸ್ವಾಮಿ
b) ನಾರಾಯಣ ಸ್ವಾಮಿ
c) ಕಿರಣ್‌ ಬೇಡಿ ✔✔✔✔
d) ಮೇಲಿನ ಯಾರೂ  ಅಲ್ಲ
■○●○●○●○●○●○● ○●○■
28)  ಭಾರತದ ಅಣು ವಿದ್ಯುತ್ ನಿಗಮ(ಎನ್‍ಪಿಸಿಐಎಲ್)ದ ನೂತನ ಅಧ್ಯಕ್ಷರನ್ನಾಗಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ಎಂ.ಎಸ್‌. ಕಾಮತ್‌    
b) ಎಂ.ಬಿ. ಶರ್ಮಾ
c)  ಎಸ್‌.ಕೆ. ಶರ್ಮಾ ✔✔✔✔
d) ಶಮಾ  ಅರವಿಂದ್‌
■○●○●○●○●○●○● ○●○■
29)ಫಿಫಾ  (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಸೋಸಿಯೇಷನ್ ಫುಟ್‍ಬಾಲ್) ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ಮಹಿಳೆ?
a) ಫತ್ಮಾ ಸಮೌರಾ ✔✔✔✔   
b) ನೇಹಾ ಸೂಫಿ
c)  ಫತ್ಮಾ ಹುಸೇನ್‌ ಬೇಗಂ
d)  ಆ್ಯಂಡ್ರೆ ಮಫ್ಲರ್‌
■○●○●○●○●○●○● ○●○■■○●○●○●○●○●○● ○●○■