2018-19 ನೇ ಸಾಲಿನ ಬಜೆಟ್ ನ ಮುಖ್ಯಾಂಶಗಳು
►ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ
►ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಸ್ಕಾಲರ್ ಶಿಪ್
►20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ
►ಗ್ರಾಮೀಣ ಪ್ರದೇಶದಲ್ಲಿ ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಗೆ ಕ್ರಮ
►ಪ್ರತಿ ವರ್ಷ 1000 ಬಿಟೆಕ್ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪಿ ಹೆಚ್ ಡಿ ಮಾಡಲು ಉತ್ತೇಜನ ಬುಡಕಟ್ಟು
►ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ ಯೋಜನೆ
►ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ
►ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ
►ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ 30 ಸಾವಿರ ಕೋಟಿ
►ರಾಷ್ಟ್ರೀಯ ಹೆಲ್ತ್ ಪಾಲಿಸಿ ಮೂಲಕ ರೋಗಿಗಳಿಗೆ ಉಚಿತ ಚಿಕಿತ್ಸೆ
►ಗ್ರಾಮಾಂತರ ಬಜಾರ್-ಇ ನಿರ್ಮಿಸಲು ಯೋಜನೆ
►2022 ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣ ಮಾಡಲು ಯೋಜನೆ
►2018-19 ರಲ್ಲಿ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ
►8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ
►42 ಮೆಗಾ ಫುಡ್ ಪಾರ್ಕ್ ಪ್ರಾರಂಭ
►ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ನಿರ್ಧಾರ
►ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ
► ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ ಅನುದಾನ
►ಆಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲು
►ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ
►ಬಿದಿರು ಬೆಳೆಗೆ 12,090 ಕೋಟಿ ರೂ ವಿಶೇಷ ಅನುದಾನ
►ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಕೃಷಿಗೆ 500 ಕೋಟಿ ರೂ ಅನುದಾನ ಘೋಷಣೆ
►ಜಿಲ್ಲೆಗಳಿಗೆ ವಿಶೇಷ ಕ್ಲಸ್ಟರ್ ಪದ್ಧತಿ
►ಮೀನುಗಾರಿಕೆ ಸೇರಿದಂತೆ ಅಕ್ವಾಕಲ್ಚರ್ ಮೂಲಸೌಕರ್ಯ ಅಭಿವೃದ್ಧಿಗೆ 10 ಸಾವಿರ ಕೋಟಿ
►2017-18 ರಲ್ಲಿ 27.5 ಟನ್ ಆಹಾರ ಉತ್ಪಾದನೆ
►ಮಾರ್ಚ್ ವೇಳೆಗೆ 470 ಎಪಿಎಂಸಿಗಳು ಇ-ನಾಮ್ ಗೆ ಕನೆಕ್ಟ್
►ಕೃಷಿ ಉಗ್ರಾಣ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ,
►ಸುಮಾರು 1000 ಹೆಕ್ಟೆರ್ ಪ್ರದೇಶದಲ್ಲಿ ಸಾವಯವ ಕೃಷಿಗೆ ಒತ್ತು
►ರೈತರಿಗೆ ತಮ್ಮ ಬೆಳೆ ಬೆಲೆ ನಿಗದಿ ಸ್ವಾತಂತ್ರ್ಯ
►ಆಹಾರ ಸಂಸ್ಕರಣೆಗಾಗಿ ನೀಡುವ ಅನುದಾನ ಹೆಚ್ಚಳ
►ನೇರ ನಗದು ವರ್ಗಾವಣೆ ಮೂಲಕದ ಪಾರದರ್ಶಕತೆ.
►ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಸ್ಥಾಪನೆ.
►ಒಂದೇ ದಿನದಲ್ಲಿ ಪಾಸ್ ಪೋರ್ಟ್ ನೀಡಿಕೆಗೆ ಕ್ರಮ.
►ಆರೋಗ್ಯ ಭಾಗ್ಯಕ್ಕಾಗಿ 50 ಕೋಟಿ ಜನಕ್ಕೆ ತಲಾ 5 ಲಕ್ಷ
►ಹೆಲ್ತ್ ಸೆಂಟರ್ ಗೆ 1200 ಕೊಟಿ ಮೀಸಲು
►ಒಂದೂವರೆ ಲಕ್ಷ ಹೆಲ್ತ್ ಆ್ಯಂಡ್ ವೆಲ್ ನೆಸ್ ಸೆಂಟರ್ ನಿರ್ಮಾಣ
►ವಿಶ್ವದ ಅತಿದೊಡ್ಡ ಸರಕಾರಿ ಆರೋಗ್ಯ ಯೋಜನೆ ಮೋದಿ ಕೇರ್ ಆರೋಗ್ಯ ಬಾಗ್ಯ ಯೊಜನೆ ಘೊಷಣೆ
►24 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ
►10 ಕೋಟಿ ಬಡ ಕುಟಂಬಗಳಿಗೆ ಆರೋಗ್ಯ ಭಾಗ್ಯ ಯೋಜನೆ
►ಮೂರು ಸಂಸತ್ ಕ್ಷೇತ್ರಗಳಲ್ಲಿ ಕನಿಷ್ಟ ಒಂದು ಮೆಡಿಕಲ್ ಕಾಲೇಜು ನಿರ್ಮಾಣ
►ಟಿಬಿ ರೋಗಿಗಳ ಪೌಷ್ಟಿಕಾಂಶಕ್ಕೆ 600 ಕೋಟಿ
►ಪ್ರತಿ ಕುಟುಂಬಕ್ಕೆ ಆರೋಗ್ಯ ಯೋಜನೆ- 5 ಲಕ್ಷದವರೆಗೆ ಆಸ್ಪತ್ರೆ ವೆಚ್ಚ ಭರಿಸಲಾಗುವುದು
►18 ಹೊಸ ಐಐಟಿ, ಎನ್ ಐಟಿ ಘೋಷಣೆ
►ಎಲ್ಲಾ ಬಡ ಕುಟುಂಬಗಳಿಗೆ ಅಪಘಾತವಿಮೆ ಘೋಷಣೆ
►ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ತೆರಿಗೆ ಹೊಣೆ ಇಳಿಕೆ
►4 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗುರಿ
►ಪರಿಪೂರ್ಣ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಒತ್ತು
►ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ 10.30 ಕೋಟಿ
►ಸಾಮಾಜಿಕ ಭದ್ರತೆಗೆ 9975 ಕೋಟಿ ರೂ.
►ಹೆರಿಗೆ ರಜೆ 24 ವಾರದಿಂದ 26 ವಾರಗಳಿಗೆ ಹೆಚ್ಚಳ
►ಕ್ಷಯರೋಗ ಚಿಕಿತ್ಸೆಗೆ 500 ಕೋಟಿ ರೂ. ಮೀಸಲು
►ಕೃಷಿ ಉತ್ಪನ್ನಗಳ ರಫ್ತಿಗೆ ಮುಕ್ತ ಅವಕಾಶ
►70 ಲಕ್ಷ ಉದ್ಯೋಗ ಸೃಷ್ಟಿ
►ಸ್ಮಾರ್ಟ್ ಸಿಟಿ ಗೆ 99 ನಗರಗಳ ಆಯ್ಕೆ
►ಮೂಲಭೂತ ಸೌಕರ್ಯಕ್ಕೆ 50 ಲಕ್ಷ ಕೋಟಿ ಮೀಸಲು
►ಉಜ್ವಲ್ ಯೋಜನೆಯಡಿ ಪ್ರಧಾನಮಂತ್ರಿ ಉಚಿತ ಎಲ್ ಪಿಜಿ ಗ್ಯಾಸ್
►ಎಸ್ ಸಿ, ಎಸ್ ಟಿ ಅಭಿವೃದ್ಧಿಗೆ 1 ಲಕ್ಷ 5 ಸಾವಿರ ಕೋಟಿ ರೂ ಅನುದಾನ
►ಪ್ರವಾಸೋದ್ಯಮ ಉತ್ತೇಜನಕ್ಕೆ ನೂತನ ರಸ್ತೆ ನಿರ್ಮಾಣ
►ಈ ವರ್ಷ ಮತ್ತೆ 100 ಸ್ಮಾರ್ಟ್ ಸಿಟಿ ನಿರ್ಮಾಣದ ಗುರಿ
►ಸ್ಮಾರ್ಟ್ ಸಿಟಿಗೆ 2.4 ಲಕ್ಷ ಕೋಟಿ ಅನುದಾನ
►ಲಡಾಕ್ ವಲಯದಲ್ಲಿ ಸುರಂಗ ನಿರ್ಮಾಣ
►ಚಿಕ್ಕ, ಅತಿ ಚಿಕ್ಕ ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು
►ಸಾರ್ವಜನಿಕ ಹೂಡಿಕೆಗೆ ಒತ್ತು ಟೆಕ್ಸ್ ಟೈಲ್ಸ್ ಉದ್ಯಮಕ್ಕೆ 7 ಸಾವಿರ ಕೋಟಿ ಮೀಸಲು
►ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ರೂ ಮೀಸಲು
►ಆಯುಷ್ಮಾನ್ ಭಾರತ್ ಹೊಸ ಯೋಜನೆ ಜಾರಿಗೆ
►ನಮಾಮಿ ಗಂಗಾ ಯೋಜನೆಗೆ ಹೆಚ್ಚಿನ ಆದ್ಯತೆ
►ಗಂಗಾ ತಟದಲ್ಲಿನ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ಹೆಚ್ಚಿನ ಆದ್ಯತೆ
►16730 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಶೌಚಾಲಯ ನಿರ್ಮಾಣ
►ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ
►ನಮಾಮಿ ಗಂಗೆ ಯೋಜನೆಗೆ ಹೆಚ್ಚಿನ ಆಧ್ಯತೆ
►16730 ಕೋಟಿ ವೆಚ್ಚದಲ್ಲಿ ಗಂಗಾನದಿ ತಡದಲ್ಲಿನ ಗ್ರಾಮಗಳಲ್ಲಿ ಶೌಚಾಲಾಯ ನಿರ್ಮಾಣ
►ಜೀವನ ಸುಧಾರಿಸಲು ವಿಶೇಷ ಅನುದಾನ ಘೋಷಣೆ
►ಹೆಲ್ತ್ ವೆಲ್ ನೆಸ್ ಸ್ಕೀಂ ಗಾಗಿ 1200 ಕೋಟಿ ರೂ ಅನುದಾನ
►ಯೋಜನೆಯಡಿ 50 ಕೋಟಿ ಅನುದಾನ ಮುಂದುವರಿಗೆ 600 ಕೋಟಿ ಟಿಬಿ ರೋಗಿಗಳಿಗೆ ತಲಾ 500 ವೆಚ್ಚದಲ್ಲಿ ಚಿಕಿತ್ಸೆ
►ದೆಹಲಿಯ ವಾಯು ಮಾಲಿನ್ಯ ನಿಜಕ್ಕೂ ಕಳವಳಕಾರಿ. ಇದಕ್ಕಾಗಿ ದೆಹಲಿ, ಹರ್ಯಾಣ, ಪಂಜಾಬ್, ಉತ್ತರ
►ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭ.
►ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರುಪಾಯಿ ನಿಗದಿ
►ಬಡವರಿಗೆ ಉಚಿತ ಡಯಾಲಿಸಿಸ್
►ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ
►ಮೊಬೈಲ್. ಟಿವಿ ದುಬಾರಿ, ಅಬಕಾರಿ ಸುಂಕ ಶೇ.15ರಷ್ಟು ಏರಿಕೆ
►ಭಾರತ ಏರ್ಪೋರ್ಟ್ ಪ್ರಾಧಿಕಾರದಡಿಯಲ್ಲಿ 124 ವಿಮಾನ ನಿಲ್ದಾಣಗಳಿದ್ದು, ಇದನ್ನು 5 ಪಟ್ಟು ಹೆಚ್ಚಿಸಲಾಗುವುದು
ಮತ್ತು ಪ್ರತಿವರ್ಷ 1 ಬಿಲಿಯನ್ ಟ್ರಿಪ್ ಗುರಿ
►ವೈದ್ಯಕೀಯ ವಿನಾಯಿತಿ ಮಿತಿ ಸೆಕ್ಷನ್ 80ರ ಅಡಿಯಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ 10 ಸಾವಿರದಿಂದ 50 ಸಾವಿರ ರೂಗಳಿಗೆ ಏರಿಕೆ
►ವೈದ್ಯಕೀಯ ವಿಮೆ 30 ಸಾವಿರದಿಂದ 50 ಸಾವಿರ ರೂ ಗೆ ಏರಿಕೆ,
►ಹಿರಿಯ ನಾಗರಿಕರಿಗೆ 1 ಲಕ್ಷರೂ ವರೆಗೂ ಏರಿಕೆ
►ತೆರಿಗೆ ಸ್ಲಾಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
►2.5ಲಕ್ಷ ವರಿಗೆನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ.
►2.5ರಿಂದ 5 ಲಕ್ಷ ವರಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ
►5 ಲಕ್ಷದಿಂದ 10 ಲಕ್ಷ ವರೆಗೆ ಶೇ.20ರಷ್ಟು ಮತ್ತು 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ.
►40 ಸಾವಿರ ರೂವರೆಗಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಶೀಘ್ರ ಜಾರಿ.
►ಈ ವರ್ಷ ಜಿಎಸ್ ಟಿ 12 ತಿಂಗಳ ಬದಲಿಗೆ 11 ತಿಂಗಳಿಗೇ ಪಾವತಿ
►ವಾರ್ಷಿಕ 250 ಕೋಟಿ ವಹಿವಾಟು ನಡೆಸಿದ ಕಾರ್ಪೋರೇಟ್ ಸಂಸ್ಥೆಗಳ ತೆರಿಗೆ ಕಡಿತ
►5 ಲಕ್ಷ ಹಳ್ಳಿಗಳಲ್ಲಿ ವೈಫೈ ಸೌಲಭ್ಯ.
►ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದೇವೆ.
►14 ಸರ್ಕಾರಿ ಕಂಪೆನಿಗಳು ಷೇರುಮಾರುಕಟ್ಟೆಗೆ ಪ್ರವೇಶ.
►ಸಮಗ್ರ ಬಂಗಾರ ನೀತಿ ಜಾರಿ. ಚಿನ್ನ ನಗದೀಕರಣ ವ್ಯವಸ್ಥೆಯಲ್ಲಿ ಬದಲಾವಣೆ.
►ಎಲ್ಲಾ ಜಿಲ್ಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ
►ಉದ್ಯೋಗಾಕಾಂಕ್ಷಿಗಳಿಗೆ ಆಧಾರ್ ಮಾದರಿಯ 16 ಅಂಕಿಗಳ ಸಂಖ್ಯೆ
►ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ಸಂಬಳ ಹೆಚ್ಚಳ
►ಬಂಡವಾಳ ಹಿಂತೆಗೆತದಲ್ಲಿ ಗುರಿ ಮೀರಿದ ಸಾಧನೆ
►ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಮಾರ್ಗ ಉನ್ನತೀಕರಣ
►ರಕ್ಷಣಾ ಇಲಾಖೆಗೆ 2 ಶಸ್ತ್ರಾಸ್ತ್ರ ನಿರ್ಮಾಣ ಕಾರಿಡಾರ್, ಖಾಸಗಿ ಹೂಡಿಕೆ
►ಮುಂಬೈ ಸ್ಥಳೀಯ ರೈಲು ಅಭಿವೃದ್ಧಿಗಾಗಿ 11 ಸಾವಿರ ಕೋಟಿ ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಗಳ ಉನ್ನತೀಕರಣ
►1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ
►ಐಐಟಿ ಚೆನ್ನೈ ನಲ್ಲಿ 5 ಜಿ ಅಧ್ಯಯನ ಕೇಂದ್ರ
►5 ಕೋಟಿ ಗ್ರಾಮೀಣ ನಾಗರಿಕರಿಗೆ 5 ಲಕ್ಷ ಆಸ್ಪತ್ರೆಗಳ ನಿರ್ಮಾಣ
►ಮುಂಬೈ ನಲ್ಲಿ ಲೋಕಲ್ ಟ್ರೈನ್ ಮಾರ್ಗ 90 ಕಿಮೀ ಹೆಚ್ಚಳ
►ಕ್ರಿಪ್ಟೋ ಕರೆನ್ಸಿಗೆ ಕಾನೂನು ಮಾನ್ಯತೆ ಇಲ್ಲ
►700 ಲೊಕೋಮೋಟಿವ್ ಗಳ ನಿರ್ಮಾಣ 600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ
►ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ಬೆಂಗಳೂರು ಸಬ್ ಅರ್ಬರನ್ ರೈಲು ಯೋಜನೆಗೆ 17 ಸಾವಿರ ಕೋಟಿ
►ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿಮೀ ಮೇಲ್ದರ್ಜೆಗೆ
►1 ಲಕ್ಶ 48 ಸಾವಿರದ 500 ಕೋಟಿ ರೂ ರೈಲ್ವೆಗೆ ಅನುದಾನ