ಭಾನುವಾರ, ಆಗಸ್ಟ್ 27, 2017

ಉಜ್ವಲ ಭವಿಷ್ಯದತ್ತ ಭಾರತೀಯ ಕೈಮಗ್ಗ ವಲಯ

ಉಜ್ವಲ ಭವಿಷ್ಯದತ್ತ ಭಾರತೀಯ ಕೈಮಗ್ಗ ವಲಯ

ಬಣ್ಣದೋಕುಳಿ, ಕಣ್ಣುಕೋರೈಸುವ ವಿನ್ಯಾಸ,ತಳುಕಿನ ಚಿತ್ತಾರ ಮತ್ತು ಬಳುಕುವ ನೇಯ್ಗೆ ಈವಸ್ತ್ರಗಳ ವಿಶಿಷ್ಠ ಆಕರ್ಷಣೆಯಾಗಿದೆ. ಈಶಾನ್ಯರಾಜ್ಯಗಳಿಂದಿಡಿದು ಕಾಶ್ಮೀರ-ದಕ್ಷಿಣದತುದಿಯವರೆವಿಗೂ ತಯಾರಾಗುವ ಪ್ರತೀಕೈಮಗ್ಗ ವಸ್ತ್ರಗಳಗೂ ಅದರದೇ ಆದ ವಿಶೇಷಗುಣಗಳಿವೆ. ಈ ವಿಶೇಷತೆಗಳಿಂದಲೇ ವಸ್ತ್ರಗಳು ಆಕರ್ಷಣೆ ಪಡೆದುಕೊಳ್ಳುತ್ತವೆ. ಭಾರತದಕರಕುಶಲಕಲೆಯೊಂದಿಗೆ ಕೈಮಗ್ಗಶತಮಾನಗಳಿಂದ ಮಿಳಿತಗೊಂಡಿದ್ದು, ದೇಶದ ಎಲ್ಲ ರಾಜ್ಯಗಳಲ್ಲೂ ನೆಲೆಸಿರುವ ಲಕ್ಷಾಂತರಕುಶಲಕರ್ಮಿಗಳಿಗೆ ಜೀವನೋಪಾಯಒದಗಿಸಿದೆ.

ಕ್ಷಿಪ್ರ ಬದಲಾವಣೆಯ ನಡುವೆಯೂ ಕೈಮಗ್ಗದಲ್ಲಿತೊಡಗಿಕೊಂಡಿರುವ ಕಲಾವಿದರು, ಅಸಾಧಾರಣಕೈಮಗ್ಗದ ರಚನೆಗಳನ್ನು ಸತತ ಪರಿಶ್ರಮದಿಂದಉಳಿಸಿಕೊಂಡು ಬಂದಿಲ್ಲದೆ, ತಮ್ಮ ಜ್ಞಾನ-ಕೌಶಲ್ಯವನ್ನು ಮುಂದಿನ ಪೀಳಿಗೆಗೆದಾಟಿಸುತ್ತಿದ್ದಾರೆ. ಇದು ಪ್ರತಿಯೊಬ್ಬ ಕೈಮಗ್ಗ ನೇಕಾರನ ಕನಸೂ ಆಗಿದೆ.

ಹೋಲಿಸಲಾಸಾಧ್ಯವಾದ ಗುಣಮಟ್ಟದಿಂದಭಾರತದ ಕೈಮಗ್ಗ ಪದಾರ್ಥಗಳುಜನಪ್ರಿಯವಾಗಿವೆ. ಛಾಂದೇರಿಯ ಮಸ್ಲಿನ್,ವಾರಣಾಸಿಯ ಅಂಚುಳ್ಳ ರೇಷ್ಮೆ ಸೀರೆಗಳು,ರಾಜಾಸ್ತಾನ-ಒಡಿಶಾದ ಬಣ್ಣದ ಉತ್ಪನ್ನಗಳು,ಮಚಲಿಪಟ್ಟಣದ ಚಿಂತಾಗಳೂ,ಹೈದಾರಾಬಾದ್‍ನ ಹಿಮ್ರಾಸ್, ಪಂಜಾಬ್‍ನಖೇಸ್, ಫಾರೂಖಾಬಾದ್‍ನ ಅಚ್ಚುಗಳು,ತೊಂಗಮ್‍ ಮತ್ತು ಫೀನಕ್ ಹಾಗೂ ಮಣಿಪುರ-ಅಸ್ಸಾಂನ ಬಾಟಲ್ ವಿನ್ಯಾಸ, ಮಧ್ಯಪ್ರದೇಶದಮಹೇಶ್ವರಿ ಸೀರೆಗಳು ಮತ್ತು ವಡೋದರಾದಪಾಟೋಲ ಸೀರೆಗಳು ಇವುಗಳಲ್ಲಿಪ್ರಮುಖವಾದವು.

ಜೊತೆಗೆ, ಕಾಂಚೀಪುರಂ, ಬನಾರಸ್ ಸೀರೆ,ಛತ್ತೀಸ್‍ಗಢದ ಕೋಸ, ಅಸ್ಸಾಂನ ಮೋಗಾರೇಷ್ಮೆ, ಬಂಗಾಳದ ಜಾಮ್ಧಾನಿ, ಮಧ್ಯಪ್ರದೇಶದಭಾಗಲ್‍ಪುರ್ ಮತ್ತು ಛಾಂದೇರಿ, ಓಡಿಶಾದತುಷಾರ್ ಮತ್ತು ಇಕಾತ್‍ನಂತಹ ರೇಷ್ಮೆ ವಸ್ತ್ರಗಳನ್ನು ತಯಾರಿಸುವ ಪ್ರಕ್ರಿಯೆ ಕೇವಲ ಆರ್ಥಿಕವಷ್ಟೇ ಅಲ್ಲದೇ ವಿಶೇಷ ಸಾಂಸ್ಕೃತಿಕಬಂಡವಾಳವೂ ಆಗಿದೆ.

ಹಗುರವಾಗಿದ್ದರೂ ವಿದೇಶಿ ಬಟ್ಟೆಗಳನ್ನು ಜನತೆಬಯಸುತ್ತಾರೆ. ಆದರೆ, ನಮ್ಮ ಸಾಂಪ್ರಾದಾಯಿಕವಿನ್ಯಾಸದ ವಸ್ತ್ರಗಳನ್ನು ಮದುವೆ-ಹಬ್ಬಗಳಂತಹವಿಶೇಷ ಸಂದರ್ಭಗಳಲ್ಲಿ ಉಡುವುದನ್ನುಮರೆಯುವುದಿಲ್ಲ.

ಸ್ವಾತಂತ್ರ್ಯದ ನಂತರ, ವಿದ್ಯುತ್ ಮಗ್ಗ ಮತ್ತು ಹತ್ತಿಗಿರಣಿ ಕ್ಷೇತ್ರದ ಆಕ್ರಮಣದಿಂದ ದೇಶದಸಾಂಸ್ಕøತಿಕ ಪರಂಪರೆಯಾದ ಕೈಮಗ್ಗ ಮತ್ತುನೇಕಾರರ ರಕ್ಷಣೆಗಾಗಿ ಮತ್ತು ಖಾದಿಯನ್ನುಗೌರವಿಸುವ ಗಾಂಧೀಜೀ ಅವರ ಮೌಲ್ಯವನ್ನುಕಾಪಾಡಲು ಸರ್ಕಾರ ಹಲವಾರುಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿತು.ಕೈಮಗ್ಗಗಳ (ಕರಕುಶಲ ಉತ್ಪನ್ನಗಳಿಗಾಗಿನಮೀಸಲು) ಕಾಯ್ದೆ 1985, ಅಂಚುಗಳಿರುವಸೀರೆ, ಪಂಚೆ, ಲುಂಗಿ, ಮತ್ತಿತರ ಕೈಮಗ್ಗದಉತ್ಪನ್ನಗಳನ್ನು ವರ್ಗೀಕರಿಸಿ, ವಿದ್ಯುತ್ ಮಗ್ಗಕ್ಷೇತ್ರದಿಂದ ಹೊರಗಿಟ್ಟಿತು. ಆದರೆ ಈ ಕಾಯ್ದೆತಡವಾಗಿ 8 ವರ್ಷಗಳ ನಂತರ ಜಾರಿಗೆಬಂದಾಗ, ಕಾಯ್ದೆಯಡಿ ಕೈಮಗ್ಗ ಉತ್ಪನ್ನಗಳಸಂಖ್ಯೆ ಕೇವಲ 11ಕ್ಕೆ ಇಳಿಕೆಯಾಗಿತ್ತು.ವಿದ್ಯುತ್‍ಮಗ್ಗ ವಲಯದ ವ್ಯಾಪಾರಸ್ಥರಕಾನೂನಾತ್ಮಕ ಸವಾಲು ಕಾಯ್ದೆಯ ಪಟ್ಟಿಯಲ್ಲಿನ ಕೈಮಗ್ಗ ಉತ್ಪನ್ನಗಳ ಸಂಖ್ಯೆಯನ್ನುಕಡಿತಗೊಳಿಸಿತ್ತು.

90ರ ದಶಕದಿಂದೀಚೆಗೆ ಬದಲಾದ ಗ್ರಾಹಕರಅಭಿರುಚಿ, ಬದಲಾದ ವ್ಯಾಪಾರ ಪ್ರಕ್ರಿಯೆಹಾಗೂ ಚೀಣಾದಿಂದ ಆಮದಾಗುವಸುಂಕರಹಿತ ತೆಳು ಕೆಂಪು ರೇಷ್ಮೆ (ಕ್ರೀಪ್ ರೇಷ್ಮೆ)ಭಾರತೀಯ ನೇಕಾರ ಸಮುದಾಯವನ್ನುಸಂಕಷ್ಟಕ್ಕೀಡುಮಾಡಿತು. ಕ್ರಮೇಣ ನೇಕಾರರುಕಾರ್ಮಿಕರಾದರು. ಬದಲಾದ ಕಾಲಘಟ್ಟದಲ್ಲಿ,ಜೀವನ ನಡೆಸುವುದೂ ದುಸ್ತರವಾಗಿನೇಕಾಕರರು ಆರ್ಥಿಕವಾಗಿ ಕುಸಿದರು.ಸೋಜಿಗವೆಂದರೆ, 2015ರಿಂದೀಚೆಗೆ ಗ್ರಾಹಕರಆಸಕ್ತಿ ಮತ್ತೆ ಕೈಮಗ್ಗದ ಕಡೆ ತಿರುಗಿದೆ.ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೃಷಿ ಹೊರತುಪಡಿಸಿ ಭಾರತದ ಎರಡನೇಅತಿಹೆಚ್ಚು ಕಾರ್ಮಿಕರು ತೊಡಗಿಕೊಂಡಿರುವಉದ್ಯಮ ಕೈಮಗ್ಗವಾಗಿದೆ. ವಿವಿಧಸಮುದಾಯಗಳ 43 ಲಕ್ಷ 30 ಸಾವಿರ ಮಂದಿ, 20 ಲಕ್ಷ 38 ಸಾವಿರ ಕುಟುಂಬಗಳು ಕೈಮಗ್ಗಘಟಕಗಳಲ್ಲಿ ದುಡಿಯುತ್ತಿದ್ದಾರೆ. ಇದು ದೇಶದಶೇ.15ರಷ್ಟು ಜವಳಿ ಉತ್ಪಾದನೆ ಮತ್ತು ಅಷ್ಟೇಪ್ರಮಾಣದ ರಫ್ತಿಗೆ ಕೊಡುಗೆ ನೀಡುತ್ತಿದೆ.ಜಗತ್ತಿನ ಶೇ. 95ರಷ್ಟು ಕೈಮಗ್ಗದ ಬಟ್ಟೆಭಾರತದ್ದೇ ಎಂಬುದು ಹೆಮ್ಮೆಯ ವಿಷಯ.

ನೇಕಾರರ ಹಿತದೃಷ್ಟಿಯಿಂದ, ಇತಿಹಾಸವನ್ನುಮರುಕಳಿಸುವ ಮತ್ತು ಕೈಮಗ್ಗವನ್ನು ಪ್ರಸ್ತುತಸಂದರ್ಭಕ್ಕೆ ತಕ್ಕಂತೆ ಸಜ್ಜುಗೊಳಿಸಲು ಸರ್ಕಾರಬದ್ಧವಾಗಿದೆ. 1905ರಲ್ಲೇ ಆರಂಭಿಸಲಾದಸ್ವದೇಶಿ ಚಳುವಳಿಯ ಸ್ಮರಣಾರ್ಥ ಆಗಸ್ಟ್ 7ನ್ನುಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ರಾಷ್ಟ್ರೀಯ ಕೈಮಗ್ಗದಿನವನ್ನಾಗಿ 2015ರಲ್ಲಿ ಘೋಷಿಸಿದರು. ಅವರಚುನಾವಣಾ ಸಮಯದ ಘೋಷಣೆಯಾದಕೃಷಿಯಿಂದ ನೂಲಿಗೆ, ನೂಲಿನಿಂದ ಬಟ್ಟೆ,ಬಟ್ಟೆಯಿಂದ ಸೊಬಗು, ಸೊಬಗಿನಿಂದ ವಿದೇಶಕ್ಕೆಎಂಬ ಪ್ರತಿಜ್ಞೆಗೆ ಬದ್ಧರಾಗಿದ್ದಾರೆ.

ಪ್ರಧಾನಮಂತ್ರಿ ಅವರು ಅಂದೇ, “ಇಂಡಿಯಾಹ್ಯಾಂಡ್ ಲೂಮ್” ಬ್ರಾಂಡ್, ಐಹೆಚ್‍ಬಿಗೆಚಾಲನೆ ನೀಡಿದರು. ಗ್ರಾಹಕರ ವಿಶ್ವಾಸಗಳಿಸಲುಸಾಮಾಜಿಕ ಮತ್ತು ಪರಿಸರಸ್ನೇಹಿ ವಿಷಯಗಳು ಮಾತ್ರವಲ್ಲದೇ,  ಕಚ್ಚಾವಸ್ತು, ಉತ್ಪಾದನೆ, ನೇಯ್ಗೆಮತ್ತಿತರ ಅಂಶಗಳ ಗುಣಮಟ್ಟದ ಖಾತ್ರಿಗೆಐಹೆಚ್‍ಬಿಗೆ ಚಾಲನೆ ನೀಡಲಾಯಿತು.

ಶೀಘ್ರವೇ ಸಾಮಾಜಿಕ ಜಾಲತಾಣಗಳನ್ನುತಲುಪಿದ ಐಹೆಚ್‍ಬಿ, ಗ್ರಾಹಕರನ್ನು ಅದರಲ್ಲೂವಿಶೇಷವಾಗಿ ಯುವಜನತೆಯನ್ನು ತಲುಪಿದ್ದುಬಹುದೊಡ್ಡ ಸಾಧನೆ.

2016 ಜುಲೈನಲ್ಲಿ ಜವಳಿ ಸಚಿವಾಲಯದಹೊಣೆ ಹೊತ್ತ ಸಚಿವೆ ಸ್ಮೃತಿ ಇರಾನಿ ಅವರು“ನಾನು ಕೈಮಗ್ಗದ ಬಟ್ಟೆಗಳನ್ನು ತೊಡುತ್ತೇನೆ”ಎಂದು ಘೋಷಿಸುವುದರ ಮೂಲಕ ಸ್ವತಃಮಾದರಿಯಾಗಿ ಸಾಮಾಜಿಕ ತಾಣದಲ್ಲಿಆಂದೋಲನ ಆರಂಭಿಸಿದರು.

ಕೈಮಗ್ಗಗಳನ್ನು ಪುನರುಜ್ಜೀವನಗಳಿಸಲುಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.ನೇಕಾರರ ಆದಾಯವನ್ನು ಹೆಚ್ಚಿಸುವುದರತ್ತಒತ್ತು ನೀಡಿರುವ ಸರ್ಕಾರ, ಯುವಸಮುದಾಯವನ್ನು ಈ ಉದ್ಯೋಗಕ್ಕೆಸೆಳೆಯಲು ಪ್ರಯತ್ನ ನಡೆಸಿದೆ. ಕ್ಲಸ್ಟರ್ಮಟ್ಟದಲ್ಲಿ ನೇಕಾರರ ಸಂಘಟನೆ ಮತ್ತುಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವಮೂಲಕ ಮೂಲಭೂತ ಸೌಲಭ್ಯ ನೀಡಲುಸರ್ಕಾರ ಪ್ರಯತ್ನ ನಡೆಸಿದೆ.

ಕೈಮಗ್ಗವನ್ನು ಉತ್ತೇಜಿಸಲು ಜವಳಿ ಸಚಿವರು,ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿವಿಧಮುಂಚೂಣಿ ವಿನ್ಯಾಸಕರನ್ನು ಒಂದೇವೇದಿಕೆಯಡಿ ತರುವ ವಿಶಿಷ್ಟ ಕಾರ್ಯಕ್ರಮಆಯೋಜಿಸಿದ್ದರು. ಒಂದು ಡಜನ್‍ಗೂಅಧಿಕವಾಗಿದ್ದ ಇವರನ್ನು ವಿವಿಧ ಕೈಮಗ್ಗಕ್ಲಸ್ಟರ್‍ಗಳಿಗೆ ನಿಯೋಜಿಸಿ, ಉತ್ಪನ್ನಗಳಅಭಿವೃದ್ಧಿ ಮತ್ತು ನೇಕಾರರ ಕೌಶಲ್ಯಾಭಿವೃದ್ಧಿದೃಷ್ಟಿಯಿಂದ ತರಬೇತಿ ನೀಡಲು ಉತ್ತೇಜಿಸಲಾಗಿತ್ತು.

ಇ-ವಾಣಿಜ್ಯದ ಮೂಲಕ ತಮ್ಮ ಉತ್ಪನ್ನಗಳನ್ನುಮಾರಾಟ ಮಾಡಲು ಉತ್ತೇಜನ ನೀಡುವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನೇಕಾರ ಸಮುದಾಯದ ಕುಟುಂಬಗಳವಿದ್ಯಾವಂತ ಯವಜನತೆಗೆ ಮಾರುಕಟ್ಟೆ ಮಾಹಿತಿನೀಡಿಕೆ, ಉತ್ಪಾದನೆ ಮತ್ತು ಜವಳಿಯ ನೇರಮಾರುಕಟ್ಟೆ ಪುರಸ್ಕರಿಸುವ ಮೂಲಕ ಈ ಯುವ ಸಮುದಾಯವನ್ನು ಉದ್ಯಮಶೀಲರನ್ನಾಗಿಸುವಗುರಿ ಹೊಂದಲಾಗಿದೆ. ಮಾರುಕಟ್ಟೆಯ ವಿಸ್ತರಣೆಮತ್ತು ಆದಾಯ ಹೆಚ್ಚಳ ದೃಷ್ಠಿಯಿಂದಕೈಮಗ್ಗವನ್ನು ಫ್ಯಾಷನ್ ಮತ್ತುಪ್ರವಾಸೋದ್ಯಮದೊಂದಿಗೆ ಸೇರಿಸಲಾಗುತ್ತಿದೆ.ಇದರೊಂದಿಗೆ, ವಿನ್ಯಾಸ ಅಭಿವೃದ್ಧಿ ಮತ್ತುಮಾರಾಟ ತಂತ್ರಗಳಿಗಾಗಿ ಖಾಸಗಿ ಕ್ಷೇತ್ರವನ್ನುಒಳಗೊಳ್ಳಿಸಿಕೊಳ್ಳಲಾಗುತ್ತಿದೆ.

ಎಲ್ಲಾ ರೀತಿಯ ಬಟ್ಟೆಗಳಿಗೆ ಭಾರತವನ್ನುಜಾಗತಿಕ ಕೇಂದ್ರವನ್ನಾಗಿಸುವ ಪ್ರಯತ್ನದೆಡೆಗೆಸರ್ಕಾರ ಶ್ರಮವಹಿಸುತ್ತಿದ್ದು, ಭಾರತದ ಸೀಮಿತ ಗ್ರಾಹಕರ ಬದಲಿಗೆ ಜಾಗತಿಕ ಮಾರುಕಟ್ಟೆಒದಗಿಸುವುದು ಇದರ ಉದ್ದೇಶವಾಗಿದೆ.

ನೇಕಾರರಿಗೆ ಅನುಕೂಲವಾಗುವ, ಉತ್ಪಾದನೆಹೆಚ್ಚಳಗೊಳಿಸುವ ಮತ್ತು ಗುಣಮಟ್ಟದಖಾತ್ರಿಗಾಗಿ ನೇಯ್ಗೆ ತಂತ್ರಜ್ಞಾನವನ್ನುಉನ್ನರೀಕರಣಗೊಳಿಸುವ ಪ್ರಯತ್ನಗಳುನಡೆಯುತ್ತಿವೆ. ನೇಕಾರಿಕಾ ಪರಂಪರೆಯಮುಂದುವರಿಕೆಗಾಗಿ ದೇಶಾದ್ಯಂತ ಇರುವ 9ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳುಮುಂದಿನ ತಲೆಮಾರಿಗೆ ಅನುಗುಣವಾಗಿ ವಿಶೇಷತರಬೇತಿಯನ್ನು ನೀಡಲಾಗುತ್ತಿವೆ.

ಆಧುನಿಕ ಯುಗದಲ್ಲಿ ಬದಲಾಗುತ್ತಿರುವಗ್ರಾಹಕರ ಅಗತ್ಯಕ್ಕೆ-ಅಭಿರುಚಿಗೆ ತಕ್ಕಂತೆ ದೇಶದಕೈಮಗ್ಗ ನೇಕಾರಿಕೆಯೂ ತನ್ನನ್ನು ಪ್ರತೀದಿನಸಜ್ಜುಗೊಳಿಸಿಕೊಳ್ಳುತ್ತಿದೆ. ಹಲವು ರೀತಿಯನಾವೀನ್ಯ ವಿನ್ಯಾಸಗಳು, ತೂಕದ ಸಾದಾ ಬಟ್ಟೆ(ಕೇಸ್‍ಮೆಂಟ್), ತೂಕದ ಹತ್ತಿ ಬಳಸುವಚಿತ್ರನೇಯ್ಗೆ ಮಗ್ಗದ ನೂಲು (ಜಾಕ್ವರ್ಡ್ ಮಗ್ಗ)ಮತ್ತು ರೇಷ್ಮೆ ಬಟ್ಟೆಗಳು, ಪುನರ್ಬಳಸಬಹುದಾದ ರತ್ನಗಂಬಳಿಗಳು ಇಂದಿನಬೇಡಿಕೆಯ ಕೈಮಗ್ಗ ಉತ್ಪನ್ನಗಳಾಗಿವೆ.ಕೈಮಗ್ಗಗಳು ಇಂದು ವೈವಿಧ್ಯಮಯಅಲಂಕಾರಿಕ ಗೃಹೋಪಯೋಗಿ ಹತ್ತಿ ಮತ್ತುರೇಷ್ಮೇ ಉತ್ಪನ್ನಗಳನ್ನು ನೀಡುತ್ತಿದೆ. ದೇಶದಿಂದರಫ್ತಾಗುತ್ತಿರುವ ಶೇ. 50ಕ್ಕೂ ಹೆಚ್ಚಿನಉತ್ಪನ್ನಗಳು ಗೃಹೋಪಯೋಗಿಜವಳಿಗಳಾಗಿವೆ. ಜಾಗತಿಕವಾಗಿ, ಕೈಮಗ್ಗದಬಗೆಗೆ ಸಮಾಜದ ಪ್ರಖ್ಯಾತರು ಮತ್ತುವಿನ್ಯಾಸಕಾರರು ಸಕಾರಾತ್ಮಕ ಹೇಳಿಕೆಗಳನ್ನುನೀಡುತ್ತಿದ್ದಾರೆ.

ಉತ್ಪಾದನೆಯ ವಿಕೇಂದ್ರೀಕರಣ ವ್ಯವಸ್ಥೆ ಮತ್ತು ಯಾವುದೇ ತೆರೆನಾದ ಕಲುಷಿತಉದ್ಯಮವಲ್ಲದ್ದರಿಂದ, ಕೈಮಗ್ಗ ಭವಿಷ್ಯದನೆಚ್ಚಿನ ಕ್ಷೇತ್ರವಾಗಿದೆ. ತನ್ನ ವಿಶಿಷ್ಟತೆ, ಶ್ರೀಮಂತಪರಂಪರೆಯ, ಕಡಿಮೆ ಬಂಡವಾಳ-ಉತ್ತಮ ಉತ್ಪಾದನೆ ಅನುಪಾತ, ಆವಿಷ್ಕಾರ ಮತ್ತುಪೂರೈಕೆದಾರೊಂದಿಗಿನ ಅವಶ್ಯಕತೆಗೆಹೊಂದಿಕೊಳ್ಳುವಿಕೆ ಕೈಮಗ್ಗದ ಧನಾತ್ಮಕಅಂಶಗಳಾಗಿವೆ.

***

ಲೇಖಕರು ಸ್ವತಂತ್ರ ಪತ್ರಕರ್ತ ಮತ್ತುಅಂಕಣಕಾರರಾಗಿದ್ದು, ಮುದ್ರಣ, ಆನ್‍ಲೈನ್,ರೇಡಿಯೋ ಮತ್ತು ಟೆಲಿವಿಷನ್‍ ಕ್ಷೇತ್ರಗಳಲ್ಲಿನಾಲ್ಕು ದಶಕಗಳ ಅನುಭವವಿದೆ. ಇವರುಅಭಿವೃದ್ಧಿ ವಿಷಯಗಳ ಮೇಲೆ ಬರೆಯುತ್ತಾರೆ.

ಈ ಲೇಖನದಲ್ಲಿ ವ್ಯಕ್ತಪಡಿಸಿರುವಅಭಿಪ್ರಾಯಗಳು ಲೇಖಕರದ್ದು.

ಮಾಧ್ಯಮಿಕ & ಉನ್ನತ ಶಿಕ್ಷಣ ರದ್ದಾಗದ ಮೂಲ ನಿಧಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿ,"ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ಅನ್ನು ಸೃಷ್ಟಿಸಲು ಸಮ್ಮತಿ ನೀಡಲಾಗಿದೆ. ಇದಕ್ಕೆ "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ'ಯಿಂದ ಸಂಗ್ರಹವಾಗುವ ಎಲ್ಲ ಮೊತ್ತವನ್ನು ಜಮಾ ಮಾಡಲು ನಿರ್ಧರಿಸಲಾಗಿದೆ. 

ಎಂಯುಎಸ್ಕೆ ಅಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಶೈಕ್ಷಣಿಕ ಕ್ಷೇತ್ರದ ನಾನಾ ಯೋಜನೆಗಳಿಗೆ ಬಳಸಬಹುದಾಗಿದ್ದು, ದೇಶದೆಲ್ಲೆಡೆಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. 

ಈ ನಿಧಿಗೆ ಸಂಬಂಧಪಟ್ಟಂತೆ, ಕೇಂದ್ರ ಸಂಪುಟವುವ ಕೆಳಗೆ ಉಲ್ಲೇಖಿಸಿದವಕ್ಕೆ ಸಮ್ಮತಿ ನೀಡಿದೆ. 

1) ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಈ ನಿಧಿಯ ನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ವಹಿಸಲಿದೆ 

2) ತೆರಿಗೆಯಿಂದ ಕೂಡಿಬರುವ ಮೊತ್ತವನ್ನು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಬಳಸಲಾಗುತ್ತದೆ. ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ, ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

3) ಯಾವುದೇ ಆರ್ಥಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಾಲಿ ಯೋಜನೆಗಳ ವೆಚ್ಚವನ್ನು ಪ್ರಾರಂಭದಲ್ಲಿ ಒಟ್ಟು ಆಯವ್ಯಯ ಬೆಂಬಲ(ಜಿಬಿಎಸ್) ದಿಂದ ಭರಿಸಲಾಗುತ್ತದೆ ಮತ್ತು ಜಿಬಿಎಸ್ ಖಾಲಿಯಾದ ಬಳಿಕವಷ್ಟೇ ಎಂಯುಎಸ್ಕೆಯಿಂದ ವೆಚ್ಚವನ್ನು ನೀಡಲಾಗುತ್ತದೆ. 

4) ಎಂಯುಎಸ್ಕೆಯನ್ನು ಭಾರತದ ಸಾರ್ವಜನಿಕ ಖಾತೆಯ ಬಡ್ಡಿರಹಿತ ವಿಭಾಗದ ಕಾಯ್ದಿಟ್ಟ ನಿಧಿ ಎಂದು ನಿರ್ವಹಿಸಲಾಗುತ್ತದೆ. ಇದರಿಂದ ಆಗುವ ಉಪಯೋಗವೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂಲ ದೊರೆಯಲಿದೆ. ಜತೆಗೆ, ಆರ್ಥಿಕ ವರ್ಷದ ಅಂತ್ಯದಲ್ಲಿ ಖರ್ಚಾಗದೆ ಉಳಿದ ಹಣ ಬಳಕೆಯಾಗದೆ ವಾಪಸಾಗುವುದು ನಿಲ್ಲಲಿದೆ. 

ವಿಶೇಷತೆಗಳು: 

1. ಉದ್ದೇಶಿತ ರದ್ದಾಗದೆ ಇರುವ ಮೂಲನಿಧಿಗೆ ಜಮೆಯಾಗುವ ಮೊತ್ತವು ಮಾಧ್ಯಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ವಿಸ್ತರಣೆಗೆ ಲಭ್ಯವಾಗಲಿದೆ. 

2. ಮಾಧ್ಯಮಿಕ ಶಿಕ್ಷಣ: ಪ್ರಸ್ತುತ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ತೆರಿಗೆಯಿಂದ ಬರುವ ಮೊತ್ತವನ್ನು ಮಾಧ್ಯಮಿಕ ಶಿಕ್ಷಣದ ಚಾಲ್ತಿಯಲ್ಲಿರುವ ಯೋಜನೆಗಳಾದ- 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆ ಮ ತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳಾದ ರಾಷ್ಟ್ರೀಯ ಜೀವನಾಧಾರ ಮತ್ತು ಮೆರಿಟ್ ಶಿಷ್ಯವೇತನ ಮತ್ತು ಹೆಣ್ಣು ಮಕ್ಕಳಿಗೆ ಮಾಧ್ಯಮಿಕ ಶಿಕ್ಷಣಕ್ಕೆ ನೆರವು ನೀಡುವ ರಾಷ್ಟ್ರೀಯ ಯೋಜನೆ. 

3. ಉನ್ನತ ಶಿಕ್ಷಣ: ತೆರಿಗೆ ಮೊತ್ತವನ್ನು ಚಾಲನೆಯಲ್ಲಿರುವ ಬಡ್ಡಿ ರಿಯಾಯಿತಿ ಯೋಜನೆಗಳು, ಖಾತ್ರಿ ನಿಧಿಗಳಿಗೆ ವಂತಿಗೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಗಳಿಗೆ ಶಿಷ್ಯವೇತನ ನೀಡಲು, ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನಕ್ಕೆ, ಶಿಷ್ಯವೇತನ(ವಿದ್ಯಾಲಯಗಳಿಗೆ ವಿಭಾಗ ಅನುದಾನ) ಮತ್ತು ಶಿಕ್ಷಕರು ಹಾಗೂ ತರಬೇತಿಯ ರಾಷ್ಟ್ರೀಯ ಆಂದೋಲನಕ್ಕೆ ನೀಡಲಾಗುವುದು. 

ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ ಮತ್ತು ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ತೆರಿಗೆಯನ್ನು ವಿಧಿಸುವ ಉದ್ದೇಶವೇನೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಕ್ರೊಡೀಕರಿಸುವುದಾಗಿದೆ . 

ಪ್ರಸ್ತುತ ಪ್ರಾರಂಭಿಕ ಶಿಕ್ಷಾ ಕೋಶ್(ಪಿಎಸ್ಕೆ)ದಡಿ ಇರುವ ವ್ಯವಸ್ಥೆಯನ್ನೇ ಆಧರಿಸಿ, ಈ ನಿಧಿಯನ್ನು ನಿರ್ವಹಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಿಸಿಯೂಟ ಯೋಜನೆ (ಎಂಡಿಎಂ)ಮತ್ತು ಸರ್ವ ಶಿಕ್ಷಾ ಅಭಿಯಾನ(ಎಸ್ಎಸ್ಎ)ಕ್ಕೆ ಈ ತೆರಿಗೆಯನ್ನೇ ಬಳಸಲಾಗುತ್ತಿದೆ. 

ಹಿನ್ನೆಲೆ:

1) 10ನೇ ಯೋಜನೆಯಲ್ಲಿ ಎಲ್ಲ ಕೇಂದ್ರ ತೆರಿಗೆಗಳ ಮೇಲೆ 1.4.2004ರಿಂದ ಅನ್ವಯವಾಗುವಂತೆ ಶೇ.2 ರಷ್ಟು ಶಿಕ್ಷಣ ತೆರಿಗೆಯನ್ನು ವಿಧಿಸಲಾಯಿತು. ಮೂಲ ಶಿಕ್ಷಣ/ಪ್ರಾಥಮಿಕ ಶಿಕ್ಷಣಕ್ಕೆ ಹಾಲಿ ಇದ್ದ ಆಯವ್ಯಯ ಸಂಪನ್ಮೂಲದ ಜತೆಗೆ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಡೀಕರಿಸುವುದು ಇದರ ಉದ್ದೇಶವಾಗಿತ್ತು. ಇದೇ ರೀತಿ ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶವನ್ನು ಸಾರ್ವತ್ರೀಕರಿ ಸಬೇಕು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿತು. ಆದ್ದರಿಂದ, 2007ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವರು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೇ. 1 ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಪ್ರಸ್ತಾವವನ್ನು ಮಂಡಿಸಿದರು. 

2) 2007ರ ವಿತ್ತ ಕಾಯಿದೆಯಡಿ ಶೇ. 1ರಷ್ಟು "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ"ಯನ್ನು ವಿಧಿಸಲು ನಿರ್ಧರಿಸಿ, "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಹಣಕಾಸು ನೀಡುವ ಸರ್ಕಾರದ ವಾಗ್ದಾನವನ್ನು ಈಡೇರಿಸಲು' ನಿರ್ಧರಿಸಲಾಯಿತು(ಕಾಯಿದೆಯ 136ನೇ ವಿಭಾಗ). 

3) ಜುಲೈ 2010ರಲ್ಲಿ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿಯಾದ "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ನ್ನು ಸೃಷ್ಟಿಸುವ ಕುರಿತ ಸಂಪುಟದ ಕರಡು ಟಿಪ್ಪಣಿಯನ್ನು ಹಂಚಿತು. ಸಂಬಂಧಪಟ್ಟ ಮಂತ್ರಾಲಯಗಳಾದ ಯೋಜನಾ ಆಯೋಗ, ಈಶಾನ್ಯ ಪ್ರಾಂತ್ಯಗಳ ಮಂತ್ರಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ವಿತ್ತ ಮಂತ್ರಾಲಯದ ಅಭಿಪ್ರಾಯವನ್ನು ಕೇಳಲಾಯಿತು. ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಯೋಜನೆಗಳಿಗೆ ಆಯವ್ಯಯದಲ್ಲಿ ನೀಡುತ್ತಿರುವ ಮೊತ್ತವು ಶೇ. 1 ರಂತೆ ಸಂಗ್ರಹಿಸುವ ತೆರಿಗೆಗಿಂತ ಹೆಚ್ಚು ಇದೆ ಎಂಬ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಪ್ರಸ್ತಾವವನ್ನು ಒಪ್ಪಲಿಲ್ಲ. 

ಆದ್ದರಿಂದ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಕಾರ್ಯಕ್ರಮಗಳಿಗೆ ಆ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ತೆರಿಗೆಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಪರಿಗಣಿಸಲಾಯಿತು. ಹೀಗಾಗಿ, ಹಿಂದಿನ ಅವಧಿಯ ಶೇ.1 ರಷ್ಟು ತೆರಿಗೆಯ ಮೊತ್ತವನ್ನು ಈಗ ನೀಡಲು ಲಭ್ಯವಿಲ್ಲ. 

4) ಹೀಗಾಗಿ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)' ಸೃಷ್ಟಿಸಲು ಆರ್ಥಿಕ ವ್ಯವಹಾರಗಳ ಇಲಾಖೆಯ ಅಂಗೀಕಾರವನ್ನು ಫೆಬ್ರವರಿ 11, 2016ರಲ್ಲಿ ಕೋರಿತು. ಎಂಯುಎಸ್ಕೆಯ ಸೃಷ್ಟಿಗೆ ಸಂಬಂಧಿಸಿದಂತೆ ಕರಡು ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಪುಟದ ಒಪ್ಪಿಗೆಯನ್ನು ಪಡೆಯಬೇಕೆಂದು ಆರ್ಥಿಕ ವ್ಯವಹಾರಗಳ ಇಲಾಖೆಯು ಜೂನ್ 20,2016ರಂದು ಸಮ್ಮತಿ ನೀಡಿತು. 

ಭಾರತದ ಅಣುಶಕ್ತಿ ಕಾರ್ಯಕ್ರಮ

ಭಾರತದ ಅಣುಶಕ್ತಿ ಕಾರ್ಯಕ್ರಮ

ಸ್ವಾತಂತ್ರ್ಯದ 70 ವರ್ಷಗಳು – ವಿಶೇಷ ಲೇಖನ

ಭಾರತದ ಅಣುಶಕ್ತಿ ಕಾರ್ಯಕ್ರಮ

* ಡಾ. ಎಂ. ಆರ್. ಶ್ರೀನಿವಾಸನ್

 

ಭಾರತದ ಮೊದಲ ಅಣು ಪರಿವರ್ತಕ(ರಿಯಾಕ್ಟರ್) ಅಪ್ಸರ 1956ರ ಆಗಸ್ಟ್ 4ರಂದು ಕಾರ್ಯಾಚರಣೆ ಆರಂಭಿಸುವ ಮೂಲಕ ದೇಶ ಅಣುಶಕ್ತಿ ಯುಗ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಪರಮಾಣು ಯುಗವನ್ನು ಪ್ರವೇಶಿಸಿತು. ಈ ಪರಿವರ್ತಕವನ್ನು ಭಾರತವೇ ವಿನ್ಯಾಸಗೊಳಿಸಿತ್ತು ಮತ್ತು ಅದನ್ನು ನಿರ್ಮಿಸಿತು. ಬ್ರಿಟನ್‌ನೊಂದಿಗೆ ಮಾಡಿಕೊಂಡ ಕರಾರು ಒಪ್ಪಂದದಂತೆ ಪೂರೈಕೆ ಮಾಡಲಾದ ಅಣು ಇಂಧನವನ್ನು ಬಳಸಿ, ಪರಿವರ್ತಕವನ್ನು ನಡೆಸಲಾಗುತ್ತಿತ್ತು. ಸಂಶೋಧನೆ ಉದ್ದೇಶದ ನಮ್ಮ ಎರಡನೇ ಅಣು ಪರಿವರ್ತಕ ಸೀರುಸ್(ಸಿಐಆರ್‌ಯುಎಸ್)ನನ್ನು ಕೆನಡಾದ ಸಹಕಾರದೊಂದಿಗೆ ನಿರ್ಮಿಸಲಾಯಿತು ಮತ್ತು ಅದು 1960ರ ಆರಂಭದಲ್ಲಿ ಕಾರ್ಯಾಚರಣೆ ಆರಂಭಿಸಿತು. ಈ ಸಂಶೋಧನಾ ಪರಿವರ್ತಕಗಳು ನ್ಯೂಟ್ರಾನ್ ಭೌತಶಾಸ್ತ್ರ, ನ್ಯೂಟ್ರಾನ್ ಉದ್ದೀಪನಗೊಳಿಸುವುದರಿಂದ ವಸ್ತುಗಳ ಮೇಲಾಗುವ ಬದಲಾವಣೆಗಳನ್ನು ಅರಿಯಲು ಮತ್ತು ರೇಡಿಯೋ ಐಸೋಟೋಪ್‌ಗಳ ಉತ್ಪಾದನೆ ಮತ್ತಿತರವುಗಳ ಮೇಲೆ ಶೋಧ ನಡೆಸಲು ಒಂದು ವೇದಿಕೆಯಾಗಿದೆ. ಇವು ನಾನಾ ಕಾಯಿಲೆಗಳ ಪತ್ತೆಗೆ ಮತ್ತು ಚಿಕಿತ್ಸೆಗೆ ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್‌ಗೆ ಅತ್ಯಂತ ಉಪಕಾರಿ ಮತ್ತು ಇದು ಕೈಗಾರಿಕೆಯಲ್ಲೂ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅದರಲ್ಲೂ ವಿಶೇಷವಾಗಿ ವಿಧ್ವಂಸಕಾರಿಯಲ್ಲದ ಉದ್ದೇಶದ ಪರೀಕ್ಷೆಗಳಿಗೆ ನೆರವಾಗಲಿದೆ.

 

1969ರಲ್ಲಿ           ತಾರಾಪುರದಲ್ಲಿ ಎರಡು ಪರಿವರ್ತಕಗಳು ಕಾರ್ಯಾರಂಭ ಮಾಡುವ ಮೂಲಕ ಅಣು ಇಂಧನವನ್ನು ಬಳಸಿ, ವಿದ್ಯುತ್ ಉತ್ಪಾದಿಸುವ ಕೆಲಸ ಶುರುವಾಯಿತು. ತಾರಾಪುರ ಅಣುಶಕ್ತಿ ಕೇಂದ್ರ (ಟಿಎಪಿಎಸ್) ಅನ್ನು ಅಮೆರಿಕದ ಜನರಲ್ ಎಲೆಕ್ಟ್ರಿಕಲ್ ಕಂಪನಿ ನಿರ್ಮಿಸಿದ್ದು, ಅದೀಗ 50 ವರ್ಷಗಳ ಸೇವೆ ನೀಡಿದಂತಾಗಿದೆ. ತಾರಾಪುರ ದೇಶದಲ್ಲಿ ಅತಿ ಕಡಿಮೆ ದರದಲ್ಲಿ ಜಲವಿದ್ಯುದೇತರ ವಿದ್ಯುತ್ ಶಕ್ತಿಯನ್ನು ಪೂರೈಸುತ್ತಿದೆ. ಭಾರತದ ಎರಡನೇ ಅಣುಶಕ್ತಿ ಕೇಂದ್ರ ರಾಜಸ್ಥಾನ ಸಮೀಪದ ಕೋಟಾದಲ್ಲಿ ತಲೆ ಎತ್ತಿತು, ಅದರ ಮೊದಲ ಘಟಕ 1972ರ ಆಗಸ್ಟ್ ನಲ್ಲಿ ಕಾರ್ಯಾರಂಭವಾಯಿತು. ರಾಜಸ್ಥಾನದಲ್ಲಿನ ಈ ಕೇಂದ್ರದ ಮೊದಲೆರಡು ಘಟಕಗಳನ್ನು, ನೈಸರ್ಗಿಕ ಯುರೇನಿಯಂ ಬಳಸಿ ಪರಿವರ್ತಕಗಳನ್ನು ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿರುವ ಕೆನಡಾದ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಆದರೆ ಇವುಗಳಿಗೆ ಗಡುಸು ನೀರು ಅಗತ್ಯವಿದೆ. ಪ್ರಸ್ತುತ ಸಾಮಾನ್ಯ ನೀರನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದ್ದು, ಸಂಕೀರ್ಣ ಪ್ರಕ್ರಿಯೆಯ ಮೂಲಕ ಅದನ್ನು ಆಯ್ದು ಹೊರತೆಗೆಯಲಾಗುತ್ತದೆ.

 

ಭಾರತದ ಮೂರನೇ ಅಣುಶಕ್ತಿ ಕೇಂದ್ರ ಚೆನ್ನೈ ಸಮೀಪದ ಕಲ್ಪಾಕಂನಲ್ಲಿ ಆರಂಭವಾಯಿತು. ಇದು ಭಾರತವೇ ತನ್ನ ಸ್ವಂತಶಕ್ತಿಯ ಮೇಲೆ ವಿನ್ಯಾಸಗೊಳಿಸಿ, ನಿರ್ಮಿಸಿದ ಮೊದಲ ಘಟಕವಾಗಿದೆ. ಅದಕ್ಕೆ ಬೇಕಾದ  ಎಲ್ಲ ಸಾಮಗ್ರಿ, ಸಲಕರಣೆಗಳು ಮತ್ತು ಯಂತ್ರೋಪಕರಣಗಳನ್ನೂ ಸಹ ದೇಶದಲ್ಲಿಯೇ ಉತ್ಪಾದಿಸಲಾಗಿದೆ. ಆ ಕಾಲದಲ್ಲಿ ಅಣುಶಕ್ತಿ ಕೇಂದ್ರಗಳಿಗೆ ಬೇಕಾದ ಸಂಕೀರ್ಣವಾದ ಯಂತ್ರೋಪಕರಣಗಳನ್ನು  ಉತ್ಪಾದಿಸುವಲ್ಲಿ ಯಾವುದೇ ಅನುಭವವಿಲ್ಲದ ಭಾರತೀಯ ಕೈಗಾರಿಕೆಗಳಿಗೆ ಇದೊಂದು ಭಾರೀ ಸವಾಲಾಗಿತ್ತು. ವಿಶೇಷ ಸಾಮಗ್ರಿಗಳಾದ ಅಣುಇಂಧನ, ಜಿರ್‌ಕೋನಿಯಂ ಬಿಡಿ ಭಾಗಗಳು ಮತ್ತು ಗಡುಸು ನೀರನ್ನು ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದ ಪ್ರಯೋಗಾಲಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಯಿತು. ಮೊದಲು ಪ್ರಾಯೋಗಿಕವಾಗಿ ಘಟಕಗಳನ್ನು ನಿರ್ಮಿಸಿ ನಂತರ ಅವುಗಳನ್ನು ಕೈಗಾರಿಕಾ ಘಟಕಗಳನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಕೈಗಾರಿಕೆಗಳೂ ಕೂಡ ವಿಶೇಷ ಉತ್ಪಾದನಾ ಪ್ರಕ್ರಿಯೆಗಾಗಿ ತರಬೇತಿ ನೀಡಿದ್ದಲ್ಲದೆ, ನಾವಿನ್ಯ ಗುಣಮಟ್ಟ ಪರೀಕ್ಷಾ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಯಿತು. ಹಾಗಾಗಿ ಮದ್ರಾಸ್ ಅಣುಶಕ್ತಿ ಕೇಂದ್ರ(ಎಂಇಪಿಎಸ್)ನ ಮೊದಲ ಘಟಕ 1983ರ ಜುಲೈನಲ್ಲಿ ಆರಂಭವಾಯಿತು. ಆ ಮೂಲಕ ಭಾರತ ತಾನೇ ವಿನ್ಯಾಸಗೊಳಿಸಿ, ಅಣುಶಕ್ತಿ ಕೇಂದ್ರಗಳನ್ನು ನಿರ್ಮಿಸುವಂತಹ ಸಣ್ಣ ರಾಷ್ಟ್ರಗಳ ಗುಂಪಿಗೆ ಸೇರ್ಪಡೆಗೊಂಡಿತು.

 

ನಮ್ಮ ನಾಲ್ಕನೇ ಅಣುಶಕ್ತಿ ಕೇಂದ್ರ ಗಂಗಾನದಿಯ ತಟದ ನರೋರಾದಲ್ಲಿ ತಲೆ ಎತ್ತಿತು. ಈ ಘಟಕದ ಸುತ್ತಮುತ್ತ ಭೂಕಂಪನದ ಅನುಭವವಾಗುತ್ತಿತ್ತು. ಹಾಗಾಗಿ ಸಂಭಾವ್ಯ ಭೂಕಂಪವನ್ನು ಎದುರಿಸಿ ನಿಲ್ಲಬಹುದಾದ ಸಾಮರ್ಥ್ಯವಿರುವ ಘಟಕದ ವಿನ್ಯಾಸವನ್ನು ರೂಪಿಸಲಾಯಿತು. 220 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳ ಮಾದರಿ ವಿನ್ಯಾಸವನ್ನು ಸಿದ್ಧಪಡಿಸಲಾಗಿದ್ದು, ದೇಶದ ಹಲವು ಸ್ಥಳಗಳಲ್ಲಿ ಅದನ್ನು ನಿರ್ಮಿಸಬಹುದಾಗಿತ್ತು. ನರೋರಾದಲ್ಲಿ ಮೊದಲ ಘಟಕ 1989ರ ಅಕ್ಟೋಬರ್‌ನಲ್ಲಿ ಕಾರ್ಯಾರಂಭ ಮಾಡಿತ್ತು. ಮುಂದಿನ 20 ವರ್ಷಗಳಲ್ಲಿ ಭಾರತ ತನ್ನದೇ `ಒತ್ತಡದ ಭಾರೀ ಜಲ ಪರಿವರ್ತಕ’ (ಪ್ರೆಷರೈಸಡ್ ಹೆವಿ ವಾಟರ್ ರಿಯಾಕ್ಟರ್) ತಂತ್ರಜ್ಞಾನವನ್ನು ಬಳಸಿ, 220 ಮೆಗಾವ್ಯಾಟ್ ಸಾಮರ್ಥ್ಯದ 11 ಮತ್ತು 540 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಿಸಿ, ಅವುಗಳು ಕಾರ್ಯಾರಂಭ ಮಾಡಿದವು. ಈ ಸಾಧನೆ ನಿಟ್ಟಿನಲ್ಲಿ ಭಾರತ ಭಾರೀ ಗಡುಸು ನೀರು ಉತ್ಪಾದನೆ ಸಾಮರ್ಥ್ಯವನ್ನು ಮತ್ತು ಇಂಧನ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿತಲ್ಲದೆ, ಜಾರ್ಖಂಡ್‌ನಲ್ಲಿ ಯುರೇನಿಯಂ ಗಣಿಗಾರಿಕೆಯನ್ನೂ ಆರಂಭಿಸಿತು. ಭಾರತದ ಅಣುಶಕ್ತಿ ಕಾರ್ಯಕ್ರಮಕ್ಕೆ ಎಲ್ಲ ಅಗತ್ಯ ಯಂತ್ರೋಪಕರಣಗಳು ಹಾಗೂ ಸಲಕರಣೆಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿತು.

 

ಭಾರತ ಕ್ಷಿಪ್ರಗತಿಯಲ್ಲಿ ಅಣುಸಾಮರ್ಥ್ಯವನ್ನು ಹೊಂದಲು ತೀವ್ರ ಆಸಕ್ತಿ ತಾಳಿತ್ತು. ಅದು 1988ರಲ್ಲಿ ಹಿಂದಿನ ಸೋವಿಯತ್ ಒಕ್ಕೂಟದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಯುರೇನಿಯಂ ಇಂಧನವನ್ನು ಬಳಸಿ, ಒಂದು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಿಸಲು ಮುಂದಾಯಿತು. ಆದರೆ 1990ರಲ್ಲಿ ಸೋವಿಯತ್ ಒಕ್ಕೂಟ ಕಳಚಿ ಬೀಳುವುದರೊಂದಿಗೆ ಮತ್ತು ಭಾರತ ಆ ಸಮಯದಲ್ಲಿ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟಗಳಿಂದಾಗಿ ಭಾರತ ಮತ್ತು ರಷ್ಯಾ ನಡುವಿನ ಈ ಯೋಜನೆಗೆ ಹಿನ್ನಡೆಯಾಯಿತು. 1998ರಲ್ಲಿ ಭಾರತ ಮತ್ತು ರಷ್ಯಾ ಆ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲು ನಿರ್ಧರಿಸಿದವು. 2003ರಲ್ಲಿ ಕೂಡಂಕುಳಂನಲ್ಲಿ  ಯೋಜನೆ ಕಾರ್ಯಾರಂಭವಾಯಿತು. ಮೊದಲ ಘಟಕದ ಕಾಮಗಾರಿ ಪ್ರಗತಿಯ ವೇಳೆ ಜಪಾನ್‌ನ ಫುಕುಶಿಮಾದಲ್ಲಿ 2011ರ ಮಾರ್ಚ್‌ನಲ್ಲಿ ಒಂದು ದುರ್ಘಟನೆ ನಡೆಯಿತು. ಇದರಿಂದಾಗಿ ನೆರೆಹೊರೆಯ ಜನರು ಯೋಜನೆಗೆ ಭಾರೀ ಪ್ರತಿರೋಧ ಒಡ್ಡಿದರು. ಮತ್ತೆ ಕೂಡಂಕುಳಂನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿ ಅವರಿಗೆ ತಾಳ್ಮೆಯಿಂದ ವಿವರಿಸಲು ಸಾಕಷ್ಟು ಸಮಯ ಪಡೆದುಕೊಂಡಿತು. ಜಪಾನ್ ಘಟಕದಲ್ಲಿ ಆಗಿರುವುದಕ್ಕೂ ಇಲ್ಲಿನ ಘಟಕದ ಸ್ಥಿತಿಗತಿಗಳಿಗೂ ಸಂಪೂರ್ಣ ವ್ಯತ್ಯಾಸವಿರುವುದನ್ನು ಜನರಿಗೆ ತಿಳಿಯಪಡಿಸಲಾಯಿತು. ಕೂಡಂಕುಳಂನ ಮೊದಲ ಘಟಕ 2014ರಲ್ಲಿ ಮತ್ತು ಎರಡನೇ ಘಟಕ 2016ರಲ್ಲಿ ಕಾರ್ಯಾರಂಭ ಮಾಡಿದವು.

 

ಇದೀಗ ಭಾರತದಲ್ಲಿ 21 ಅಣು ಪರಿವರ್ತಕಗಳು ಕೆಲಸ ಮಾಡುತ್ತಿವೆ. ಕೆನಡಾದಿಂದ ಅಣು ಇಂಧನ ಪೂರೈಕೆಯೊಂದಿಗೆ ರಾಜಸ್ತಾನದಲ್ಲಿ ಆರಂಭವಾಗಿದ್ದ ಘಟಕ ಕೆಲವು ಯಂತ್ರಗಳ ಕೊರತೆಯಿಂದಾಗಿ ಸದ್ಯ ಕಾರ್ಯನಿರ್ವಹಿಸುತ್ತಿಲ್ಲ. ಇತರೆ ಘಟಕಗಳ ಒಟ್ಟಾರೆ ಸಾಮರ್ಥ್ಯ 6700 ಮೆಗಾ ವ್ಯಾಟ್ ಆಗಿದ್ದು, ಅವುಗಳೆಲ್ಲಾ ಯಶಸ್ವಿಯಾಗಿ ಕಾರ‍್ಯನಿರ್ವಹಿಸಲಿವೆ. ಕಳೆದ ಐದು ವರ್ಷಗಳಲ್ಲಿ 2011ರಿಂದ 2016ರವರೆಗೆ ಘಟಕಗಳ ಸಾಮರ್ಥ್ಯ ಶೇ.78ರಷ್ಟು ಬಳಕೆಯಾಗುತ್ತಿದೆ. ಈ ಅಣು ವಿದ್ಯುತ್ ಘಟಕಗಳು ಎರಡರಿಂದ ಮೂರೂವರೆ ರೂಪಾಯಿಗೆ  ಪ್ರತಿ ಕಿಲೋ ವ್ಯಾಟ್ ವಿದ್ಯುತ್ ಅನ್ನು ಪೂರೈಕೆ ಮಾಡುತ್ತಿವೆ. ತಾರಾಪುರದಲ್ಲಿನ ವಿದ್ಯುತ್ ಉತ್ಪಾದನಾ ವೆಚ್ಚ ಒಂದು ಕಿಲೋವ್ಯಾಟ್‌ಗೆ ಒಂದು ರೂಪಾಯಿ ಮಾತ್ರ, ಕೂಡಂಕುಳಂನ ಒಂದು ಮತ್ತು ಎರಡನೇ ಘಟಕಗಳು 4 ರೂಪಾಯಿನಂತೆ ಪ್ರತಿ ಕಿಲೋವ್ಯಾಟ್ ವಿದ್ಯುತ್ ಒದಗಿಸುತ್ತಿದೆ.

 

ಭಾರತವೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ಅಣುಶಕ್ತಿ ಕೇಂದ್ರದ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ತಗುಲುವ ವೆಚ್ಚ 16.5 ಕೋಟಿ ರೂಪಾಯಿ. ರಷ್ಯಾದ ಪರಿವರ್ತಕಗಳಾದರೆ ಪ್ರತಿ ಮೆಗಾವ್ಯಾಟ್‌ಗೆ ತಗುಲುವ ವೆಚ್ಚ 22 ಕೋಟಿ ರೂಪಾಯಿ. ರಷ್ಯಾದ ರಿಯಾಕ್ಟರ್‌ಗಳಿಗೆ ಹೋಲಿಸಿದರೆ ಭಾರತೀಯ ಪರಿವರ್ತಕಗಳಿಗೆ ತಗುಲುವ ಇಂಧನ ವೆಚ್ಚ ಕಡಿಮೆ, ಎರಡೂ ಸಹ ಕಿಲೋವ್ಯಾಟ್‌ಗೆ  5 ರೂಪಾಯಿಯಂತೆ ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಕಾಲಾನುಕ್ರಮವಾಗಿ 2023-24ನೇ ಇಸವಿ ವೇಳೆಗೆ ಒಂದು ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ದರ ರೂ.6.5 ಆಗಬಹುದು. ಕಲ್ಲಿದ್ದಲು ನಿಕ್ಷೇಪಗಳು ಘಟಕಗಳಿಂದ ಅನತಿ ದೂರದಲ್ಲಿರುವ ಕಾರಣ, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ದರ  ಆದೇ ಕಾಲಕ್ಕೆ ಇನ್ನೂ ಹೆಚ್ಚಾಗಲಿದೆ. ಇತ್ತೀಚಿನ ಯೋಜನೆಗಳಂತೆ ಸೌರಶಕ್ತಿಯನ್ನು ಕಿಲೋವ್ಯಾಟ್‌ಗೆ 2.5 ರೂಪಾಯಿಯಂತೆ ಉತ್ಪಾದಿಸಬಹುದಾಗಿದೆ. ಆದರೆ ಆ ಸೌರಶಕ್ತಿಯನ್ನು ಗ್ರಿಡ್ ವ್ಯವಸ್ಥೆಗೆ ಸಂಯೋಜಿಸಲು ಪ್ರತಿಕಿಲೋ ವ್ಯಾಟ್‌ಗೆ 2 ರೂಪಾಯಿ ವೆಚ್ಚ ತಗುಲುತ್ತದೆ, ಹಾಗಾಗಿ ಒಟ್ಟಾರೆ ವಿದ್ಯುತ್ ಉತ್ಪಾದನಾ ವೆಚ್ಚ ಪ್ರತಿ ಕಿಲೋವ್ಯಾಟ್‌ಗೆ 4.5 ರೂಪಾಯಿ ಹಿಡಿಯುತ್ತದೆ.

 

ಭಾರತ, 2008ರಲ್ಲಿ ಅಮೆರಿಕಾ ಮತ್ತು ಫ್ರಾನ್ಸ್ ದೇಶಗಳೊಂದಿಗೆ ಅಣು ಸಹಕಾರ ಒಪ್ಪಂದವನ್ನು ಮಾಡಿಕೊಂಡಿದೆ. ಅದರಂತೆ ಭಾರತದಲ್ಲಿ ಆ ರಾಷ್ಟ್ರಗಳು ಅಣು ವಿದ್ಯುತ್ ಘಟಕಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಬೇಕಾಗಿದೆ. ಆಗಿನಿಂದಲೂ ಇನ್ನೂ ಆ ಬಗ್ಗೆ ಮಾತುಕತೆಗಳು ನಡೆಯುತ್ತಲೇ ಇವೆ. ಆದರೆ ಅಮೆರಿಕಾದ ಹೆಸರಾಂತ ಅಣು ವಿದ್ಯುತ್ ಘಟಕ ನಿರ್ಮಾಣ ಸಂಸ್ಥೆ, ವೆಸ್ಟಿಂಗ್‌ಹೌಸ್ ಕೆಲ ತಿಂಗಳುಗಳ ಹಿಂದೆ ದಿವಾಳಿತನ ಘೋಷಿಸಿಕೊಂಡಿತು. ಫ್ರಾನ್ಸ್ ನ ಅರೇವಾ ಸಂಸ್ಥೆ, ಫುಕುಶಿಮಾ ಘಟನೆಯ ನಂತರ ಅಣು ಇಂಧನ ವಹಿವಾಟಿನಲ್ಲಿ ಭಾರಿ ಹಣ ಕಳೆದುಕೊಂಡಿದೆ. ಫ್ರಾನ್ಸ್ ಸರ್ಕಾರ ತನ್ನ ಅಣು ರಿಯಾಕ್ಟರ್ ವ್ಯಾಪಾರವನ್ನು ರಾಷ್ಟ್ರೀಯ ಎಲೆಕ್ಟ್ರಿಕ್ ಸಂಸ್ಥೆ, ಎಲೆಕ್ಟ್ರಿಸೈಟ್ ಡೆ ಫ್ರಾನ್ಸ್ ಗೆ ವಹಿಸಿಕೊಟ್ಟಿದೆ. ಆದ್ದರಿಂದ ಅಮೆರಿಕಾ ಮತ್ತು ಫ್ರಾನ್ಸ್ ನಡುವಿನ ಅಣು ಸಹಕಾರ ಒಪ್ಪಂದ ಸಾಕಷ್ಟು ಅನಿಶ್ಚಿತತೆಯಿಂದ ಕೂಡಿದೆ.

 

ಈ ಸನ್ನಿವೇಶದಲ್ಲಿ, ಭಾರತ ಸರ್ಕಾರ 2017ರ ಜೂನ್ ತಿಂಗಳಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ 10 ಭಾರಿ ಬೃಹತ್ ಜಲ ಪರಿವರ್ತಕಗಳನ್ನು ನಿರ್ಮಿಸಲು ನಿರ್ಧರಿಸಿದೆ.  ಅಣು ವಿದ್ಯುತ್ ನಿಗಮದ ಸಾಮರ್ಥ್ಯವನ್ನು 540 ಮೆಗಾವ್ಯಾಟ್‌ನಿಂದ 700 ಮೆಗಾವ್ಯಾಟ್‌ಗೆ ಏರಿಸಲಾಗಿದೆ, ಕಕ್ರಾಪುರದಲ್ಲಿ ಎರಡು (3 ಮತ್ತು 4ನೇ ಘಟಕ) ಹಾಗೂ ರಾಜಸ್ತಾನದಲ್ಲಿ ಎರಡು (7 ಮತ್ತು 8ನೇ ಘಟಕ) ಘಟಕಗಳ ನಿರ್ಮಾಣ ಕೆಲಸ ಆರಂಭವಾಗಿದೆ. 2011ರ ಫುಕುಶಿಮಾ ಘಟನೆ ನಂತರ ಅಣು ಶಕ್ತಿ ವೃದ್ಧಿಯ ಅತಿ ದೊಡ್ಡ ಬದ್ಧತೆ ಇದಾಗಿದೆ. ಈ ಕಾರ್ಯಕ್ರಮಗಳಿಂದಾಗಿ ಭಾರತದ ಕೈಗಾರಿಕೆಗಳಿಗೆ ಸುಮಾರು ಒಂದು ದಶಕಗಳವರೆಗೆ ಸುಸ್ಥಿರ ಕಾರ‍್ಯದೊತ್ತಡ ನೀಡುವುದಲ್ಲದೆ, ಖಚಿತವಾಗಿಯೂ ಭಾರತ ಈ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ.

 

ಕೂಡಂಕುಲಂನಲ್ಲಿ 3, 4, 5 ಮತ್ತು 6ನೇ ಘಟಕಗಳ ನಿರ್ಮಾಣ ಕೆಲಸ ಆರಂಭವಾಗಿದೆ. ಭಾರತ ಗುರುತಿಸಲಿರುವ ಎರಡನೇ ಘಟಕದ ಜಾಗದಲ್ಲಿ 1200 ಮೆಗಾವ್ಯಾಟ್ ಸಾಮರ್ಥ್ಯದ ಆರು ಘಟಕಗಳನ್ನು ನಿರ್ಮಿಸಲು ರಷ್ಯಾ ಮುಂದಾಗಿದೆ. ಅದಕ್ಕೆ ಪರ‍್ಯಾಯವಾಗಿ, ದೇಶ ಯುರೇನಿಯಂ ಇಂಧನ ಬಳಸಿ 900 ಮೆಗಾವ್ಯಾಟ್ ಸಾಮರ್ಥ್ಯದ `ಭಾರತೀಯ ಒತ್ತಡದ ಜಲ ರಿಯಾಕ್ಟರ್’ ಅನ್ನು ಅಭಿವೃದ್ಧಿಗೊಳಿಸಿದೆ. ಎರಡು ಘಟಕಗಳ ನಿರ್ಮಾಣ ಕೆಲಸ ಸದ್ಯದಲ್ಲೇ ಆರಂಭವಾಗಲಿದ್ದು, ನಂತರ ಸರಣಿಯಲ್ಲಿ ಇತರೆ ಘಟಕಗಳ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಕಲ್ಪಾಕಂನಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಕಾರ‍್ಯಾರಂಭ ಮಾಡುವ ಹಂತದಲ್ಲಿದೆ. ಅದೇ ಮಾದರಿಯನ್ನು 600 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ಅನುಕರಿಸಲಿವೆ. ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ ಥೋರಿಯಂ ಬಳಸಿ 300 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ `ಆತ್ಯಾಧುನಿಕ ಉಷ್ಣ ವಿದ್ಯುತ್ ರಿಯಾಕ್ಟರ್’ ವಿನ್ಯಾಸವನ್ನು ಪೂರ್ಣಗೊಳಿಸಿದೆ. ನಮ್ಮ ದೀರ್ಘ ಕಾಲದ ಯೋಜನೆ ಎಂದರೆ ವೇಗದ ರಿಯಾಕ್ಟರ್‌ಗಳನ್ನು ಮತ್ತು ಥೋರಿಯಂ ಆಧಾರಿತ ವ್ಯವಸ್ಥೆಗಳನ್ನು ಅವಲಂಬಿಸುವುದಾಗಿದೆ.

 

ಈ ಲೇಖನದಲ್ಲಿ ಇಂಧನ ಮರುಬಳಕೆ ಸಂಸ್ಕರಣೆ, ವೇಗವರ್ಧಕಗಳ ಅಭಿವೃದ್ಧಿ ಮತ್ತಿತರರ ಸಂಶೋಧನಾ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ವಿವರಿಸಿಲ್ಲ. ಅಣುಶಕ್ತಿ ಇಲಾಖೆ, ಆಸ್ಪತ್ರೆ ಮತ್ತು ಕೈಗಾರಿಕೆಗಳಿಗೆ ಅಗತ್ಯವಾದ ರೇಡಿಯೋ ಐಸೋಟೋಪ್‌ಗಳನ್ನು ಪೂರೈಕೆ ಮಾಡುವಲ್ಲಿ ಕ್ರೀಯಾಶೀಲವಾಗಿದೆ. ಸಮುದ್ರದ ಆಹಾರೋತ್ಪನ್ನಗಳನ್ನು, ಮಸಾಲೆ ಅಥವಾ ಸಾಂಬಾರ ಪದಾರ್ಥಗಳು ಹಾಳಾಗದಂತೆ ತಡೆಯಲು ಮತ್ತು ಈರುಳ್ಳಿ, ಮಾವಿನ ಹಣ್ಣು ಮತ್ತು ಇತರೆ ಆಹಾರ ಉತ್ಪನ್ನಗಳ ಬಳಕೆ ಅವಧಿ ಹೆಚ್ಚಿಸಲು ವಿಕರಣ ತಂತ್ರಜ್ಞಾನಕ್ಕೆ ಬಳಕೆ ಮಾಡಲಾಗುತ್ತಿದೆ. ಜೊತೆಗೆ ವೈದ್ಯಕೀಯ ಸಲಕರಣೆಗಳ ಶುದ್ಧಿಗೂ ಬಳಕೆ ಮಾಡಲಾಗುತ್ತದೆ.

ಹಾಗಾಗಿ ನಾವು ಮುಂದಿನ ದಶಕಗಳಲ್ಲಿ ಅಣುಶಕ್ತಿ ಇಂಗಾಲ ರಹಿತ ಇಂಧನ ಹೊಂದುವುದಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂಬುದನ್ನು ಕಾಣಬಹುದಾಗಿದೆ ಮತ್ತು ಪರಮಾಣು ತಂತ್ರಜ್ಞಾನ ನಮ್ಮ ಜನರ ಜೀವನ ಮಟ್ಟ ವೃದ್ಧಿಗೆ ಪರಿಹಾರಗಳನ್ನು ಒದಗಿಸಲಿದೆ.

***

*ಲೇಖಕರು, ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು.

ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅವರ ವೈಯಕ್ತಿಕ ಅನಿಸಿಕೆಗಳು.