ಉಜ್ವಲ ಭವಿಷ್ಯದತ್ತ ಭಾರತೀಯ ಕೈಮಗ್ಗ ವಲಯ
ಬಣ್ಣದೋಕುಳಿ, ಕಣ್ಣುಕೋರೈಸುವ ವಿನ್ಯಾಸ,ತಳುಕಿನ ಚಿತ್ತಾರ ಮತ್ತು ಬಳುಕುವ ನೇಯ್ಗೆ ಈವಸ್ತ್ರಗಳ ವಿಶಿಷ್ಠ ಆಕರ್ಷಣೆಯಾಗಿದೆ. ಈಶಾನ್ಯರಾಜ್ಯಗಳಿಂದಿಡಿದು ಕಾಶ್ಮೀರ-ದಕ್ಷಿಣದತುದಿಯವರೆವಿಗೂ ತಯಾರಾಗುವ ಪ್ರತೀಕೈಮಗ್ಗ ವಸ್ತ್ರಗಳಗೂ ಅದರದೇ ಆದ ವಿಶೇಷಗುಣಗಳಿವೆ. ಈ ವಿಶೇಷತೆಗಳಿಂದಲೇ ವಸ್ತ್ರಗಳು ಆಕರ್ಷಣೆ ಪಡೆದುಕೊಳ್ಳುತ್ತವೆ. ಭಾರತದಕರಕುಶಲಕಲೆಯೊಂದಿಗೆ ಕೈಮಗ್ಗಶತಮಾನಗಳಿಂದ ಮಿಳಿತಗೊಂಡಿದ್ದು, ದೇಶದ ಎಲ್ಲ ರಾಜ್ಯಗಳಲ್ಲೂ ನೆಲೆಸಿರುವ ಲಕ್ಷಾಂತರಕುಶಲಕರ್ಮಿಗಳಿಗೆ ಜೀವನೋಪಾಯಒದಗಿಸಿದೆ.
ಕ್ಷಿಪ್ರ ಬದಲಾವಣೆಯ ನಡುವೆಯೂ ಕೈಮಗ್ಗದಲ್ಲಿತೊಡಗಿಕೊಂಡಿರುವ ಕಲಾವಿದರು, ಅಸಾಧಾರಣಕೈಮಗ್ಗದ ರಚನೆಗಳನ್ನು ಸತತ ಪರಿಶ್ರಮದಿಂದಉಳಿಸಿಕೊಂಡು ಬಂದಿಲ್ಲದೆ, ತಮ್ಮ ಜ್ಞಾನ-ಕೌಶಲ್ಯವನ್ನು ಮುಂದಿನ ಪೀಳಿಗೆಗೆದಾಟಿಸುತ್ತಿದ್ದಾರೆ. ಇದು ಪ್ರತಿಯೊಬ್ಬ ಕೈಮಗ್ಗ ನೇಕಾರನ ಕನಸೂ ಆಗಿದೆ.
ಹೋಲಿಸಲಾಸಾಧ್ಯವಾದ ಗುಣಮಟ್ಟದಿಂದಭಾರತದ ಕೈಮಗ್ಗ ಪದಾರ್ಥಗಳುಜನಪ್ರಿಯವಾಗಿವೆ. ಛಾಂದೇರಿಯ ಮಸ್ಲಿನ್,ವಾರಣಾಸಿಯ ಅಂಚುಳ್ಳ ರೇಷ್ಮೆ ಸೀರೆಗಳು,ರಾಜಾಸ್ತಾನ-ಒಡಿಶಾದ ಬಣ್ಣದ ಉತ್ಪನ್ನಗಳು,ಮಚಲಿಪಟ್ಟಣದ ಚಿಂತಾಗಳೂ,ಹೈದಾರಾಬಾದ್‍ನ ಹಿಮ್ರಾಸ್, ಪಂಜಾಬ್‍ನಖೇಸ್, ಫಾರೂಖಾಬಾದ್‍ನ ಅಚ್ಚುಗಳು,ತೊಂಗಮ್ ಮತ್ತು ಫೀನಕ್ ಹಾಗೂ ಮಣಿಪುರ-ಅಸ್ಸಾಂನ ಬಾಟಲ್ ವಿನ್ಯಾಸ, ಮಧ್ಯಪ್ರದೇಶದಮಹೇಶ್ವರಿ ಸೀರೆಗಳು ಮತ್ತು ವಡೋದರಾದಪಾಟೋಲ ಸೀರೆಗಳು ಇವುಗಳಲ್ಲಿಪ್ರಮುಖವಾದವು.
ಜೊತೆಗೆ, ಕಾಂಚೀಪುರಂ, ಬನಾರಸ್ ಸೀರೆ,ಛತ್ತೀಸ್‍ಗಢದ ಕೋಸ, ಅಸ್ಸಾಂನ ಮೋಗಾರೇಷ್ಮೆ, ಬಂಗಾಳದ ಜಾಮ್ಧಾನಿ, ಮಧ್ಯಪ್ರದೇಶದಭಾಗಲ್‍ಪುರ್ ಮತ್ತು ಛಾಂದೇರಿ, ಓಡಿಶಾದತುಷಾರ್ ಮತ್ತು ಇಕಾತ್‍ನಂತಹ ರೇಷ್ಮೆ ವಸ್ತ್ರಗಳನ್ನು ತಯಾರಿಸುವ ಪ್ರಕ್ರಿಯೆ ಕೇವಲ ಆರ್ಥಿಕವಷ್ಟೇ ಅಲ್ಲದೇ ವಿಶೇಷ ಸಾಂಸ್ಕೃತಿಕಬಂಡವಾಳವೂ ಆಗಿದೆ.
ಹಗುರವಾಗಿದ್ದರೂ ವಿದೇಶಿ ಬಟ್ಟೆಗಳನ್ನು ಜನತೆಬಯಸುತ್ತಾರೆ. ಆದರೆ, ನಮ್ಮ ಸಾಂಪ್ರಾದಾಯಿಕವಿನ್ಯಾಸದ ವಸ್ತ್ರಗಳನ್ನು ಮದುವೆ-ಹಬ್ಬಗಳಂತಹವಿಶೇಷ ಸಂದರ್ಭಗಳಲ್ಲಿ ಉಡುವುದನ್ನುಮರೆಯುವುದಿಲ್ಲ.
ಸ್ವಾತಂತ್ರ್ಯದ ನಂತರ, ವಿದ್ಯುತ್ ಮಗ್ಗ ಮತ್ತು ಹತ್ತಿಗಿರಣಿ ಕ್ಷೇತ್ರದ ಆಕ್ರಮಣದಿಂದ ದೇಶದಸಾಂಸ್ಕøತಿಕ ಪರಂಪರೆಯಾದ ಕೈಮಗ್ಗ ಮತ್ತುನೇಕಾರರ ರಕ್ಷಣೆಗಾಗಿ ಮತ್ತು ಖಾದಿಯನ್ನುಗೌರವಿಸುವ ಗಾಂಧೀಜೀ ಅವರ ಮೌಲ್ಯವನ್ನುಕಾಪಾಡಲು ಸರ್ಕಾರ ಹಲವಾರುಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿತು.ಕೈಮಗ್ಗಗಳ (ಕರಕುಶಲ ಉತ್ಪನ್ನಗಳಿಗಾಗಿನಮೀಸಲು) ಕಾಯ್ದೆ 1985, ಅಂಚುಗಳಿರುವಸೀರೆ, ಪಂಚೆ, ಲುಂಗಿ, ಮತ್ತಿತರ ಕೈಮಗ್ಗದಉತ್ಪನ್ನಗಳನ್ನು ವರ್ಗೀಕರಿಸಿ, ವಿದ್ಯುತ್ ಮಗ್ಗಕ್ಷೇತ್ರದಿಂದ ಹೊರಗಿಟ್ಟಿತು. ಆದರೆ ಈ ಕಾಯ್ದೆತಡವಾಗಿ 8 ವರ್ಷಗಳ ನಂತರ ಜಾರಿಗೆಬಂದಾಗ, ಕಾಯ್ದೆಯಡಿ ಕೈಮಗ್ಗ ಉತ್ಪನ್ನಗಳಸಂಖ್ಯೆ ಕೇವಲ 11ಕ್ಕೆ ಇಳಿಕೆಯಾಗಿತ್ತು.ವಿದ್ಯುತ್‍ಮಗ್ಗ ವಲಯದ ವ್ಯಾಪಾರಸ್ಥರಕಾನೂನಾತ್ಮಕ ಸವಾಲು ಕಾಯ್ದೆಯ ಪಟ್ಟಿಯಲ್ಲಿನ ಕೈಮಗ್ಗ ಉತ್ಪನ್ನಗಳ ಸಂಖ್ಯೆಯನ್ನುಕಡಿತಗೊಳಿಸಿತ್ತು.
90ರ ದಶಕದಿಂದೀಚೆಗೆ ಬದಲಾದ ಗ್ರಾಹಕರಅಭಿರುಚಿ, ಬದಲಾದ ವ್ಯಾಪಾರ ಪ್ರಕ್ರಿಯೆಹಾಗೂ ಚೀಣಾದಿಂದ ಆಮದಾಗುವಸುಂಕರಹಿತ ತೆಳು ಕೆಂಪು ರೇಷ್ಮೆ (ಕ್ರೀಪ್ ರೇಷ್ಮೆ)ಭಾರತೀಯ ನೇಕಾರ ಸಮುದಾಯವನ್ನುಸಂಕಷ್ಟಕ್ಕೀಡುಮಾಡಿತು. ಕ್ರಮೇಣ ನೇಕಾರರುಕಾರ್ಮಿಕರಾದರು. ಬದಲಾದ ಕಾಲಘಟ್ಟದಲ್ಲಿ,ಜೀವನ ನಡೆಸುವುದೂ ದುಸ್ತರವಾಗಿನೇಕಾಕರರು ಆರ್ಥಿಕವಾಗಿ ಕುಸಿದರು.ಸೋಜಿಗವೆಂದರೆ, 2015ರಿಂದೀಚೆಗೆ ಗ್ರಾಹಕರಆಸಕ್ತಿ ಮತ್ತೆ ಕೈಮಗ್ಗದ ಕಡೆ ತಿರುಗಿದೆ.ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೃಷಿ ಹೊರತುಪಡಿಸಿ ಭಾರತದ ಎರಡನೇಅತಿಹೆಚ್ಚು ಕಾರ್ಮಿಕರು ತೊಡಗಿಕೊಂಡಿರುವಉದ್ಯಮ ಕೈಮಗ್ಗವಾಗಿದೆ. ವಿವಿಧಸಮುದಾಯಗಳ 43 ಲಕ್ಷ 30 ಸಾವಿರ ಮಂದಿ, 20 ಲಕ್ಷ 38 ಸಾವಿರ ಕುಟುಂಬಗಳು ಕೈಮಗ್ಗಘಟಕಗಳಲ್ಲಿ ದುಡಿಯುತ್ತಿದ್ದಾರೆ. ಇದು ದೇಶದಶೇ.15ರಷ್ಟು ಜವಳಿ ಉತ್ಪಾದನೆ ಮತ್ತು ಅಷ್ಟೇಪ್ರಮಾಣದ ರಫ್ತಿಗೆ ಕೊಡುಗೆ ನೀಡುತ್ತಿದೆ.ಜಗತ್ತಿನ ಶೇ. 95ರಷ್ಟು ಕೈಮಗ್ಗದ ಬಟ್ಟೆಭಾರತದ್ದೇ ಎಂಬುದು ಹೆಮ್ಮೆಯ ವಿಷಯ.
ನೇಕಾರರ ಹಿತದೃಷ್ಟಿಯಿಂದ, ಇತಿಹಾಸವನ್ನುಮರುಕಳಿಸುವ ಮತ್ತು ಕೈಮಗ್ಗವನ್ನು ಪ್ರಸ್ತುತಸಂದರ್ಭಕ್ಕೆ ತಕ್ಕಂತೆ ಸಜ್ಜುಗೊಳಿಸಲು ಸರ್ಕಾರಬದ್ಧವಾಗಿದೆ. 1905ರಲ್ಲೇ ಆರಂಭಿಸಲಾದಸ್ವದೇಶಿ ಚಳುವಳಿಯ ಸ್ಮರಣಾರ್ಥ ಆಗಸ್ಟ್ 7ನ್ನುಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ರಾಷ್ಟ್ರೀಯ ಕೈಮಗ್ಗದಿನವನ್ನಾಗಿ 2015ರಲ್ಲಿ ಘೋಷಿಸಿದರು. ಅವರಚುನಾವಣಾ ಸಮಯದ ಘೋಷಣೆಯಾದಕೃಷಿಯಿಂದ ನೂಲಿಗೆ, ನೂಲಿನಿಂದ ಬಟ್ಟೆ,ಬಟ್ಟೆಯಿಂದ ಸೊಬಗು, ಸೊಬಗಿನಿಂದ ವಿದೇಶಕ್ಕೆಎಂಬ ಪ್ರತಿಜ್ಞೆಗೆ ಬದ್ಧರಾಗಿದ್ದಾರೆ.
ಪ್ರಧಾನಮಂತ್ರಿ ಅವರು ಅಂದೇ, “ಇಂಡಿಯಾಹ್ಯಾಂಡ್ ಲೂಮ್” ಬ್ರಾಂಡ್, ಐಹೆಚ್‍ಬಿಗೆಚಾಲನೆ ನೀಡಿದರು. ಗ್ರಾಹಕರ ವಿಶ್ವಾಸಗಳಿಸಲುಸಾಮಾಜಿಕ ಮತ್ತು ಪರಿಸರಸ್ನೇಹಿ ವಿಷಯಗಳು ಮಾತ್ರವಲ್ಲದೇ, ಕಚ್ಚಾವಸ್ತು, ಉತ್ಪಾದನೆ, ನೇಯ್ಗೆಮತ್ತಿತರ ಅಂಶಗಳ ಗುಣಮಟ್ಟದ ಖಾತ್ರಿಗೆಐಹೆಚ್‍ಬಿಗೆ ಚಾಲನೆ ನೀಡಲಾಯಿತು.
ಶೀಘ್ರವೇ ಸಾಮಾಜಿಕ ಜಾಲತಾಣಗಳನ್ನುತಲುಪಿದ ಐಹೆಚ್‍ಬಿ, ಗ್ರಾಹಕರನ್ನು ಅದರಲ್ಲೂವಿಶೇಷವಾಗಿ ಯುವಜನತೆಯನ್ನು ತಲುಪಿದ್ದುಬಹುದೊಡ್ಡ ಸಾಧನೆ.
2016 ಜುಲೈನಲ್ಲಿ ಜವಳಿ ಸಚಿವಾಲಯದಹೊಣೆ ಹೊತ್ತ ಸಚಿವೆ ಸ್ಮೃತಿ ಇರಾನಿ ಅವರು“ನಾನು ಕೈಮಗ್ಗದ ಬಟ್ಟೆಗಳನ್ನು ತೊಡುತ್ತೇನೆ”ಎಂದು ಘೋಷಿಸುವುದರ ಮೂಲಕ ಸ್ವತಃಮಾದರಿಯಾಗಿ ಸಾಮಾಜಿಕ ತಾಣದಲ್ಲಿಆಂದೋಲನ ಆರಂಭಿಸಿದರು.
ಕೈಮಗ್ಗಗಳನ್ನು ಪುನರುಜ್ಜೀವನಗಳಿಸಲುಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.ನೇಕಾರರ ಆದಾಯವನ್ನು ಹೆಚ್ಚಿಸುವುದರತ್ತಒತ್ತು ನೀಡಿರುವ ಸರ್ಕಾರ, ಯುವಸಮುದಾಯವನ್ನು ಈ ಉದ್ಯೋಗಕ್ಕೆಸೆಳೆಯಲು ಪ್ರಯತ್ನ ನಡೆಸಿದೆ. ಕ್ಲಸ್ಟರ್ಮಟ್ಟದಲ್ಲಿ ನೇಕಾರರ ಸಂಘಟನೆ ಮತ್ತುಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವಮೂಲಕ ಮೂಲಭೂತ ಸೌಲಭ್ಯ ನೀಡಲುಸರ್ಕಾರ ಪ್ರಯತ್ನ ನಡೆಸಿದೆ.
ಕೈಮಗ್ಗವನ್ನು ಉತ್ತೇಜಿಸಲು ಜವಳಿ ಸಚಿವರು,ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿವಿಧಮುಂಚೂಣಿ ವಿನ್ಯಾಸಕರನ್ನು ಒಂದೇವೇದಿಕೆಯಡಿ ತರುವ ವಿಶಿಷ್ಟ ಕಾರ್ಯಕ್ರಮಆಯೋಜಿಸಿದ್ದರು. ಒಂದು ಡಜನ್‍ಗೂಅಧಿಕವಾಗಿದ್ದ ಇವರನ್ನು ವಿವಿಧ ಕೈಮಗ್ಗಕ್ಲಸ್ಟರ್‍ಗಳಿಗೆ ನಿಯೋಜಿಸಿ, ಉತ್ಪನ್ನಗಳಅಭಿವೃದ್ಧಿ ಮತ್ತು ನೇಕಾರರ ಕೌಶಲ್ಯಾಭಿವೃದ್ಧಿದೃಷ್ಟಿಯಿಂದ ತರಬೇತಿ ನೀಡಲು ಉತ್ತೇಜಿಸಲಾಗಿತ್ತು.
ಇ-ವಾಣಿಜ್ಯದ ಮೂಲಕ ತಮ್ಮ ಉತ್ಪನ್ನಗಳನ್ನುಮಾರಾಟ ಮಾಡಲು ಉತ್ತೇಜನ ನೀಡುವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನೇಕಾರ ಸಮುದಾಯದ ಕುಟುಂಬಗಳವಿದ್ಯಾವಂತ ಯವಜನತೆಗೆ ಮಾರುಕಟ್ಟೆ ಮಾಹಿತಿನೀಡಿಕೆ, ಉತ್ಪಾದನೆ ಮತ್ತು ಜವಳಿಯ ನೇರಮಾರುಕಟ್ಟೆ ಪುರಸ್ಕರಿಸುವ ಮೂಲಕ ಈ ಯುವ ಸಮುದಾಯವನ್ನು ಉದ್ಯಮಶೀಲರನ್ನಾಗಿಸುವಗುರಿ ಹೊಂದಲಾಗಿದೆ. ಮಾರುಕಟ್ಟೆಯ ವಿಸ್ತರಣೆಮತ್ತು ಆದಾಯ ಹೆಚ್ಚಳ ದೃಷ್ಠಿಯಿಂದಕೈಮಗ್ಗವನ್ನು ಫ್ಯಾಷನ್ ಮತ್ತುಪ್ರವಾಸೋದ್ಯಮದೊಂದಿಗೆ ಸೇರಿಸಲಾಗುತ್ತಿದೆ.ಇದರೊಂದಿಗೆ, ವಿನ್ಯಾಸ ಅಭಿವೃದ್ಧಿ ಮತ್ತುಮಾರಾಟ ತಂತ್ರಗಳಿಗಾಗಿ ಖಾಸಗಿ ಕ್ಷೇತ್ರವನ್ನುಒಳಗೊಳ್ಳಿಸಿಕೊಳ್ಳಲಾಗುತ್ತಿದೆ.
ಎಲ್ಲಾ ರೀತಿಯ ಬಟ್ಟೆಗಳಿಗೆ ಭಾರತವನ್ನುಜಾಗತಿಕ ಕೇಂದ್ರವನ್ನಾಗಿಸುವ ಪ್ರಯತ್ನದೆಡೆಗೆಸರ್ಕಾರ ಶ್ರಮವಹಿಸುತ್ತಿದ್ದು, ಭಾರತದ ಸೀಮಿತ ಗ್ರಾಹಕರ ಬದಲಿಗೆ ಜಾಗತಿಕ ಮಾರುಕಟ್ಟೆಒದಗಿಸುವುದು ಇದರ ಉದ್ದೇಶವಾಗಿದೆ.
ನೇಕಾರರಿಗೆ ಅನುಕೂಲವಾಗುವ, ಉತ್ಪಾದನೆಹೆಚ್ಚಳಗೊಳಿಸುವ ಮತ್ತು ಗುಣಮಟ್ಟದಖಾತ್ರಿಗಾಗಿ ನೇಯ್ಗೆ ತಂತ್ರಜ್ಞಾನವನ್ನುಉನ್ನರೀಕರಣಗೊಳಿಸುವ ಪ್ರಯತ್ನಗಳುನಡೆಯುತ್ತಿವೆ. ನೇಕಾರಿಕಾ ಪರಂಪರೆಯಮುಂದುವರಿಕೆಗಾಗಿ ದೇಶಾದ್ಯಂತ ಇರುವ 9ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳುಮುಂದಿನ ತಲೆಮಾರಿಗೆ ಅನುಗುಣವಾಗಿ ವಿಶೇಷತರಬೇತಿಯನ್ನು ನೀಡಲಾಗುತ್ತಿವೆ.
ಆಧುನಿಕ ಯುಗದಲ್ಲಿ ಬದಲಾಗುತ್ತಿರುವಗ್ರಾಹಕರ ಅಗತ್ಯಕ್ಕೆ-ಅಭಿರುಚಿಗೆ ತಕ್ಕಂತೆ ದೇಶದಕೈಮಗ್ಗ ನೇಕಾರಿಕೆಯೂ ತನ್ನನ್ನು ಪ್ರತೀದಿನಸಜ್ಜುಗೊಳಿಸಿಕೊಳ್ಳುತ್ತಿದೆ. ಹಲವು ರೀತಿಯನಾವೀನ್ಯ ವಿನ್ಯಾಸಗಳು, ತೂಕದ ಸಾದಾ ಬಟ್ಟೆ(ಕೇಸ್‍ಮೆಂಟ್), ತೂಕದ ಹತ್ತಿ ಬಳಸುವಚಿತ್ರನೇಯ್ಗೆ ಮಗ್ಗದ ನೂಲು (ಜಾಕ್ವರ್ಡ್ ಮಗ್ಗ)ಮತ್ತು ರೇಷ್ಮೆ ಬಟ್ಟೆಗಳು, ಪುನರ್ಬಳಸಬಹುದಾದ ರತ್ನಗಂಬಳಿಗಳು ಇಂದಿನಬೇಡಿಕೆಯ ಕೈಮಗ್ಗ ಉತ್ಪನ್ನಗಳಾಗಿವೆ.ಕೈಮಗ್ಗಗಳು ಇಂದು ವೈವಿಧ್ಯಮಯಅಲಂಕಾರಿಕ ಗೃಹೋಪಯೋಗಿ ಹತ್ತಿ ಮತ್ತುರೇಷ್ಮೇ ಉತ್ಪನ್ನಗಳನ್ನು ನೀಡುತ್ತಿದೆ. ದೇಶದಿಂದರಫ್ತಾಗುತ್ತಿರುವ ಶೇ. 50ಕ್ಕೂ ಹೆಚ್ಚಿನಉತ್ಪನ್ನಗಳು ಗೃಹೋಪಯೋಗಿಜವಳಿಗಳಾಗಿವೆ. ಜಾಗತಿಕವಾಗಿ, ಕೈಮಗ್ಗದಬಗೆಗೆ ಸಮಾಜದ ಪ್ರಖ್ಯಾತರು ಮತ್ತುವಿನ್ಯಾಸಕಾರರು ಸಕಾರಾತ್ಮಕ ಹೇಳಿಕೆಗಳನ್ನುನೀಡುತ್ತಿದ್ದಾರೆ.
ಉತ್ಪಾದನೆಯ ವಿಕೇಂದ್ರೀಕರಣ ವ್ಯವಸ್ಥೆ ಮತ್ತು ಯಾವುದೇ ತೆರೆನಾದ ಕಲುಷಿತಉದ್ಯಮವಲ್ಲದ್ದರಿಂದ, ಕೈಮಗ್ಗ ಭವಿಷ್ಯದನೆಚ್ಚಿನ ಕ್ಷೇತ್ರವಾಗಿದೆ. ತನ್ನ ವಿಶಿಷ್ಟತೆ, ಶ್ರೀಮಂತಪರಂಪರೆಯ, ಕಡಿಮೆ ಬಂಡವಾಳ-ಉತ್ತಮ ಉತ್ಪಾದನೆ ಅನುಪಾತ, ಆವಿಷ್ಕಾರ ಮತ್ತುಪೂರೈಕೆದಾರೊಂದಿಗಿನ ಅವಶ್ಯಕತೆಗೆಹೊಂದಿಕೊಳ್ಳುವಿಕೆ ಕೈಮಗ್ಗದ ಧನಾತ್ಮಕಅಂಶಗಳಾಗಿವೆ.
***
ಲೇಖಕರು ಸ್ವತಂತ್ರ ಪತ್ರಕರ್ತ ಮತ್ತುಅಂಕಣಕಾರರಾಗಿದ್ದು, ಮುದ್ರಣ, ಆನ್‍ಲೈನ್,ರೇಡಿಯೋ ಮತ್ತು ಟೆಲಿವಿಷನ್ ಕ್ಷೇತ್ರಗಳಲ್ಲಿನಾಲ್ಕು ದಶಕಗಳ ಅನುಭವವಿದೆ. ಇವರುಅಭಿವೃದ್ಧಿ ವಿಷಯಗಳ ಮೇಲೆ ಬರೆಯುತ್ತಾರೆ.
ಈ ಲೇಖನದಲ್ಲಿ ವ್ಯಕ್ತಪಡಿಸಿರುವಅಭಿಪ್ರಾಯಗಳು ಲೇಖಕರದ್ದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ