ರೊನಾಲ್ಡೊಗೆ ವರ್ಷದ ಆಟಗಾರ ಪ್ರಶಸ್ತಿ
ಮೊನಾಕೊ, ಆ.24: ಯುಇಎಫ್‌ಎ ಚಾಂಪಿಯನ್ಸ್ ಲೀಗ್ನ ಅಗ್ರ ಸ್ಕೋರರ್ ಕ್ರಿಸ್ಟಿಯಾನೊ ರೊನಾಲ್ಡೊ ಯುಇಎಫ್‌ಎ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೊನಾಲ್ಡೊ ಸತತ 2ನೆ ಹಾಗೂ ಒಟ್ಟಾರೆ 3ನೆ ಬಾರಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
32ರಹರೆಯದ ರೊನಾಲ್ಡೊ ಗುರುವಾರ ಮೊನಾಕೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಬಾರ್ಸಿಲೋನ ಹಾಗೂ ಅರ್ಜೆಂಟೀನದ ಫಾರ್ವರ್ಡ್ ಆಟಗಾರ ಲಿಯೊನೆಲ್ ಮೆಸ್ಸಿ ಹಾಗೂ ಇಟಲಿ ಗೋಲ್ಕೀಪರ್ ಗಿಯಾನ್ಲುಗಿ ಬಫುನ್ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಪ್ರಶಸ್ತಿ ಪಡೆದಿದ್ದಾರೆ.
ರೊನಾಲ್ಡೊ ಕಳೆದ ಋತುವಿನಲ್ಲಿ ಯುಇಎಫ್‌ಎ ಚಾಂಪಿಯನ್ಸ್ ಲೀಗ್ನಲ್ಲಿ 12 ಗೋಲುಗಳನ್ನು ಬಾರಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ