ಸೋಮವಾರ, ಆಗಸ್ಟ್ 28, 2017

ಪಿ,ವಿ,ಸಿಂಧುಗೆ ಬೆಳ್ಳಿ

☑️ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್‌: ಪಿ.ವಿ. ಸಿಂಧುಗೆ ಬೆಳ್ಳಿ

# ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಜಪಾನಿನ ನೊಝೊಮಿ ಒಕುಹರ ವಿರುದ್ಧ ಪಿ.ವಿ. ಸಿಂಧುಗೆ ಅವರು ಸೋಲನುಭವಿಸಿದ್ದಾರೆ. ಇದರಿಂದ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

# ಒಕುಹರ ವಿರುದ್ಧದ ಪಂದ್ಯದಲ್ಲಿ ಸಿಂಧು ಅವರು 19-21, 22-20, 20-22 ಸೆಟ್‌ಗಳಿಂದ ಪರಾಭವಗೊಂಡರು. ಇದಕ್ಕೂ ಮುನ್ನ, ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯುಫಿ ವಿರುದ್ಧ 48 ನಿಮಿಷಗಳಲ್ಲಿ 21-13, 21-10 ಸೆಟ್‌ಗಳಿಂದ ಸಿಂಧು ಜಯಗಳಿಸಿದ್ದರು.

# ಸಿಂಧು ಅವರು 2013 ಮತ್ತು 2014ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ