ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿ “ಪಾಸ್ ಪೋರ್ಟ್ ಕೇಂದ್ರ”
ಭಾರತ ಸರಕಾರದ ವಾರ್ತಾ ಶಾಖೆ
ಬೆಂಗಳೂರು
ಬೆಂಗಳೂರು, ಜೂನ್ 19, 2017
ಪತ್ರಿಕಾ ಹೇಳಿಕೆ
ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿ“ಪಾಸ್ ಪೋರ್ಟ್ ಕೇಂದ್ರ”
ಅಂಚೆ ಕಚೇರಿಗಳ “ಪಾಸ್ ಪೋರ್ಟ್ಕೇಂದ್ರ” ಎರಡನೆ ಹಂತ, ಕರ್ನಾಟಕಕ್ಕೆನೂತನ 7 ಕೇಂದ್ರಗಳು
ಕೇಂದ್ರ ವಿದೇಶಾಂಗ ವ್ಯವಹಾರಗಳಸಚಿವಾಲಯ ಮತ್ತು ಅಂಚೆ ಕಚೇರಿಇಲಾಖೆಗಳು ಜಂಟಿಯಾಗಿ ದೇಶದಾಧ್ಯಂತಖಾಲಿ ಸ್ಥಳಗಳನ್ನು ಹೊಂದಿರುವ ಮುಖ್ಯ ಅಂಚೆಕಚೇರಿಗಳು/ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಸೌಲಭ್ಯ ಪೂರೈಸುವಯೋಜನೆಯ ಎರಡನೇಯ ಹಂತದಲ್ಲಿಕರ್ನಾಟಕದ ಬಳ್ಳಾರಿ, ಬೀದರ್, ರಾಯಚೂರ್,ಶಿವಮೊಗ್ಗ, ತುಮಕೂರು, ಉಡುಪಿ, ಮತ್ತುವಿಜಾಪುರ ಸೇರಿದಂತೆ ( 7) ಒಟ್ಟು 149 ಅಂಚೆಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರಗಳನ್ನು ದೇಶದಾಧ್ಯಂತತೆರೆಯಲಾಗುವದು.
ಪಾಸ್ ಪೋರ್ಟ್ ವಿತರಣೆ ಸಂಬಂಧಿಸಿದ ಸೇವಾ ಸೌಲಭ್ಯಗಳ ಪೂರೈಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಸೌಕರ್ಯ ಲಭ್ಯವಿರದ ಜಿಲ್ಲಾ ಕೇಂದ್ರ ಸ್ಥಳಗಳಿಗೆ ನೂತನ ಸೇವಾ ಕೇಂದ್ರಗಳನ್ನು ತೆರೆಯಲು ಜನತೆಯ ಪಾಲ್ಗೊಳ್ಳುವಿಕೆಯ ಈ ವಿಶೇಷ ಜಂಟಿ ಯೋಜನೆಯನ್ನು ಜಾರಿಗೊಳಿಸಿದೆ.
ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರ ಯೋಜನೆಯ ಮೊದಲ ಹಂತದಲ್ಲಿಒಟ್ಟು 86 ಪಿ.ಓ.ಪಿ.ಎಸ್.ಕೆ ಗಳನ್ನು ತೆರೆಯಲುವ್ಯವಸ್ಥೆಗಳನ್ನು ಮಾಡಿದ್ದು, ಇದರಲ್ಲಿ 52ಕಾರ್ಯಗತಗೊಂಡಿವೆ. ಈಗ ದೇಶದಾಧ್ಯಂತನೂತನ 149 ಕೇಂದ್ರ ತೆರೆಲಿದ್ದು, ಒಟ್ಟು 235ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರಗಳು ಸಾರ್ವಜನಿಕರ ಸೌಕರ್ಯಕ್ಕಾಗಿಲಭ್ಯವಿದೆ.
****
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ