ಭಾರತ-ನೇಪಾಳ ಗಡಿಯಲ್ಲಿ ಮೆಚಿ ನದಿಯ ಮೇಲೆ ಹೊಸ ಸೇತುವೆಯನ್ನು ನಿರ್ಮಿಸಲು ಅನುಷ್ಠಾನ ವ್ಯವಸ್ಥೆಯನ್ನು ಸಿದ್ಧಪಡಿಸುವ ಸಲುವಾಗಿ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ
ಭಾರತ-ನೇಪಾಳ ಗಡಿಯಲ್ಲಿ ಮೆಚಿ ನದಿಯ ಮೇಲೆ ಹೊಸ ಸೇತುವೆಯನ್ನು ನಿರ್ಮಿಸಲು ಅನುಷ್ಠಾನ ವ್ಯವಸ್ಥೆಯನ್ನು ಸಿದ್ಧಪಡಿಸುವ ಸಲುವಾಗಿ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ – ನೇಪಾಳ ಗಡಿಯಲ್ಲಿ ಮೇಚಿ ನದಿಯ ಮೇಲೆ ನೂತನ ಸೇತುವೆ ನಿರ್ಮಿಸುವ ಸಲುವಾಗಿ ವೆಚ್ಚ ಹಂಚಿಕೆ, ಕಾಲಮಿತಿ ಮತ್ತು ಸುರಕ್ಷತಾ ವಿಷಯಗಳ ಕುರಿತಂತೆ ಅನುಷ್ಠಾನ ವ್ಯವಸ್ಥೆ ಸಿದ್ಧಪಡಿಸಲು ಭಾರತ ಮತ್ತು ನೇಪಾಳ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆಯನ್ನು ನೀಡಿದೆ.
ಈ ಸೇತುವೆಯ ನಿರ್ಮಾಣದ ಅಂದಾಜು ವೆಚ್ಚ 158.65 ಕೋಟಿ ರೂಪಾಯಿಗಳಾಗಿದ್ದು, ಈ ಹಣವನ್ನು ಎಡಿಬಿ ಸಾಲದ ಮೂಲಕ ಭಾರತ ಸರ್ಕಾರ ಪೂರೈಸಲಿದೆ. ಹೊಸ ಸೇತುವೆಯು ರಾಷ್ಟ್ರೀಯ ಹೆದ್ದಾರಿ 327ಬಿಯಲ್ಲಿ ಕಾಕರ್ವಿಟ್ಟಾ (ನೇಪಾಳ) ದಿಂದ ಪನಿಟಾಂಕಿ ಬೈಪಾಸ್ (ಭಾರತ) ವರೆಗೆ 1500 ಮೀಟರ್ ಉದ್ದದ್ದಾಗಿದ್ದು 825 ಮೀಟರಿಗಳ 6 ಪಥದ ಸಂಪರ್ಕ ರಸ್ತೆಯನ್ನೂ ಒಳಗೊಂಡಿದೆ. ಮೆಚಿ ಸೇತುವೆಯು ನೇಪಾಳಕ್ಕೆ ಸಾಗುವ ಏಷ್ಯನ್ ಹೆದ್ದಾರಿ 02ರಲ್ಲಿ ಭಾರತದ ಅಂತಿಮ ಬಿಂದುವಾಗಿದೆ ಮತ್ತು ನೇಪಾಳಕ್ಕೆ ಮುಖ್ಯವಾದ ಸಂಪರ್ಕವನ್ನು ಒದಗಿಸುತ್ತದೆ.
ಸೇತುವೆಯ ನಿರ್ಮಾಣದಿಂದ ಪ್ರಾದೇಶಿಕ ಸಂಪರ್ಕ ಸುಧಾರಣೆ ಆಗುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಗಡಿಯಾಚೆಗಿನ ವ್ಯಾಪಾರವನ್ನು ಬಲಪಡಿಸುವ ಹಾಗೂ ಕೈಗಾರಿಕೆಗಳ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸಲು ಬಾಂಧವ್ಯವನ್ನು ಬೆಸೆಯುವ ಸಾಮರ್ಥ್ಯವನ್ನು ಹೊಂದಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್.ಎಚ್.ಐ.ಡಿ.ಸಿ.ಎಲ್.)ವನ್ನು ಈ ಯೋಜನೆಯ ಅನುಷ್ಠಾನ ಸಂಸ್ಥೆ ಎಂದು ನಿಯುಕ್ತಿಗೊಳಿಸಲಾಗಿದೆ. ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಸೇತುವೆಯ ಜೋಡಣೆ ಕುರಿತಂತೆ ನೇಪಾಳ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಆಖೈರುಗೊಳಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ