ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸ್ವೀಡನ್ ಮತ್ತು ಭಾರತದ ನಡುವೆ ಎಂಓಯುಗೆ ಸಚಿವ ಸಂಪುಟ ಅಂಗೀಕಾರ
ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸ್ವೀಡನ್ ಮತ್ತು ಭಾರತದ ನಡುವೆ ಎಂಓಯುಗೆ ಸಚಿವ ಸಂಪುಟ ಅಂಗೀಕಾರ
ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್)ಗಳ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಸ್ವೀಡನ್ ಮತ್ತು ಭಾರತದ ನಡುವಿನ ಒಪ್ಪಂದ(ಎಂಓಯು)ಕ್ಕೆ ಅಂಗೀಕಾರ ನೀಡಲಾಗಿದೆ.
ಎರಡೂ ದೇಶಗಳು ತಾಂತ್ರಿಕ ವಿನಿಮಯ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಒಟ್ಟಾಗಿ ಹಮ್ಮಿಕೊಳ್ಳುವ ಹಾಗೂ ಅತ್ಯುತ್ತಮ ವಿಧಾನಗಳ ವಿನಿಮಯದ ಮೂಲಕ ಐಪಿಆರ್ ಕುರಿತು ಜಾಗೃತಿ ಮೂಡಿಸುವ ವಿಶಾಲವ್ಯಾಪ್ತಿಯ ಮತ್ತು ಹೊಂದಾಣಿಕೆಯ ಕಾರ್ಯಸಂಯೋಜನೆಯೊಂದನ್ನು ಸ್ಥಾಪಿಸಲು ಈ ಎಂಓಯು ಅವಕಾಶ ನೀಡಲಿದೆ.
ಪರಿಣಾಮ:
ಐಪಿ ಪರಿಸರವ್ಯವಸ್ಥೆಗಳು ಮತ್ತು ಅನ್ವೇಷಣೆಯಲ್ಲಿನ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತಕ್ಕೆ ಅವಕಾಶ ನೀಡುವ ಮೂಲಕ, ಎರಡೂ ದೇಶದ ಉದ್ಯಮಿಗಳು, ಹೂಡಿಕೆದಾರರು ಮತ್ತು ಉದ್ಯಮಗಳಿಗೆ ಲಾಭ ತಂದುಕೊಡಲು ಒಪ್ಪಂದ ಅನುವು ಮಾಡಿಕೊಡಲಿದೆ. ಎರಡೂ ದೇಶಗಳ ನಡುವೆ ಉತ್ತಮ ವಿಧಾನಗಳ ವಿನಿಮಯದಿಂದ ಭಾರತದ ವೈವಿಧ್ಯಮಯ ಜನರಂತೆ, ವೈವಿಧ್ಯಮಯ ಬೌದ್ಧಿಕ ಸೃಷ್ಟಿಗಳ ಕುರಿತು ಜಾಗೃತಿಯಲ್ಲದೆ, ಸಂರಕ್ಷಣೆಯಲ್ಲಿ ಕಾಳಜಿ ಹೆಚ್ಚಲಿದೆ. ಜಾಗತಿಕ ಅನ್ವೇಷಣೆ ಕ್ಷೇತ್ರದಲ್ಲಿ ಭಾರತವು ಪ್ರಮುಖ ಆಟಗಾರ ಆಗುವ ಪಯಣದಲ್ಲಿ ಇದೊಂದು ಚಾರಿತ್ರಿಕ ಮೈಲುಗಲ್ಲು ಆಗಿದ್ದು, 2016ರ ರಾಷ್ಟ್ರೀಯ ಐಪಿಆರ್ ಕಾರ್ಯನೀತಿಯ ಗುರಿ ಮುಟ್ಟಲು ಇನ್ನಷ್ಟು ಉತ್ತೇಜಿಸಲಿದೆ.
ವೈಶಿಷ್ಟ್ಯಗಳು:
ಎರಡೂ ದೇಶಗಳ ಸದಸ್ಯರಿರುವ ಜಂಟಿ ಸಂಯೋಜಕ ಸಮಿತಿಯನ್ನು ರಚಿಸಲಿದ್ದು, ಅದು ಕೆಳಕಂಡ ಕ್ಷೇತ್ರಗಳಲ್ಲಿ ಯಾವ ರೀತಿ ಸಹಕರಿಸಬೇಕು ಎಂಬ ಬಗ್ಗೆ ನಿರ್ಧರಿಸಲಿದೆ:
ಎ) ಎರಡೂ ದೇಶಗಳ ಸಾರ್ವಜನಿಕರು, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಐಪಿ ಕುರಿತು ಜಾಗೃತಿ ಮೂಡಿಸಲು ಜ್ಞಾನ, ಅನುಭವ ಮತ್ತು ಉತ್ತಮ ವಿಧಾನಗಳ ವಿನಿಮಯ
ಬಿ) ತರಬೇತಿ ಕಾರ್ಯಕ್ರಮಗಳು, ತಜ್ಞರ ವಿನಿಮಯ, ತಾಂತ್ರಿಕ ವಿನಿಮಯ ಮತ್ತು ವಿಸ್ತರಣೆ ಚಟುವಟಿಕೆಗಳಲ್ಲಿ ಸಹಭಾಗಿತ್ವ ಸಿ) ಐಪಿಗೆ ಸಂಬಂಧಿಸಿದ ಉತ್ತಮ ವಿಧಾನಗಳು, ಅನುಭವಗಳು ಮತ್ತು ಜ್ಞಾನವನ್ನು ಉದ್ಯಮ, ವಿಶ್ವವಿದ್ಯಾಲಯ ಅಭಿವೃದ್ಧಿ ಮತ್ತು ಸಂಶೋಧನೆ ಸಂಸ್ಥೆಗಳು ಹಾಗೂ ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳಲ್ಲಿ ಪಾಲುದಾರಿಕೆ ಕಾರ್ಯಕ್ರಮಗಳನ್ನು ಒಂಟಿಯಾಗಿ ಇಲ್ಲವೇ ಒಟ್ಟಾಗಿ ಏರ್ಪಡಿಸುವ ಮೂಲಕ ವಿನಿಮಯ ಹಾಗೂ ಪ್ರಚುರ ಪಡಿಸುವುದು
ಡಿ) ಪೇಟೆಂಟ್ಗಳು, ಟ್ರೇಡ್ ಮಾರ್ಕರ್ಗಳು , ಕೈಗಾರಿಕಾ ವಿನ್ಯಾಸಗಳು, ಕಾಪಿರೈಟ್ ಮತ್ತು ಜಿಯಾಗ್ರಫಿಕಲ್ ಇಂಡಿಕೇಷನ್(ಜಿಐ) ಕುರಿತ ಅರ್ಜಿ ಗಳ ವಿಲೇವಾರಿಗೆ ಸಂಬಂಧಿಸಿದಂತೆ, ಮಾಹಿತಿ ಮತ್ತು ಉತ್ತಮ ವಿಧಾನಗಳ ವಿನಿಮಯ. ಜತೆಗೆ, ಐಪಿ ಹಕ್ಕುಗಳ ಬಳಕೆ, ಜಾರಿ ಮತ್ತು ರಕ್ಷಣೆ ಕುರಿತ ಮಾಹಿತಿ ವಿನಿಮಯ.
ಇ) ಆಧುನಿಕೀಕೃತ ಯೋಜನೆಗಳ ಜಾರಿಗೊಳಿಸುವಿಕೆ ಮತ್ತು ಆಟೋಮೇಷನ್ನ ಅಭಿವೃದ್ಧಿ, ಐಪಿಯಲ್ಲಿ ಹೊಸ ದಾಖಲೀಕರಣ ಮತ್ತು ಮಾಹಿತಿ ವ್ಯವಸ್ಥೆಗಳು ಮತ್ತು ಐಪಿ ನಿರ್ವಹಣೆಗೆ ವಿಧಿವಿಧಾನಗಳನ್ನು ರೂಪಿಸುವಲ್ಲಿ ಸಹಕಾರ
ಎಫ್) ಸಾಂಪ್ರದಾಯಿಕ ಜ್ಞಾನದ ರಕ್ಷಣೆ ಹೇಗೆ ಎಂದು ಅರ್ಥಮಾಡಿಕೊಳ್ಳುವಲ್ಲಿ ಸಹಕಾರ: ಮತ್ತು ಸಾಂಪ್ರದಾಯಿಕ ಜ್ಞಾನಕ್ಕೆ ಸಂಬಂಧಿಸಿದ ಡೇಟಾ ಮೂಲ ಸೇರಿದಂತೆ ಉತ್ತಮ ವಿಧಾನಗಳ ವಿನಿಮಯ ಹಾಗೂ ಹಾಲಿ ಐಪಿ ವ್ಯವಸ್ಥೆ ಕುರಿತ ಅರಿವಿನ ಹೆಚ್ಚಳ
ಜಿ) ಡಿಜಿಟಲ್ ಪರಿಸರದಲ್ಲಿ ಅದರಲ್ಲೂ ವಿಶೇಷವಾಗಿ ಕಾಪಿರೈಟ್ಗೆ ಸಂಬಂಧಿಸಿದಂತೆ ಬೌದ್ಧಿಕ ಹಕ್ಕುಗಳ ಕಾನೂನಿನ ಉಲ್ಲಂಘನೆ ತಡೆ ಕುರಿತ ಉತ್ತಮ ವಿಧಾನ ಹಾಗೂ ಮಾಹಿತಿಯ ವಿನಿಮಯ
ಎಚ್) ಎರಡೂ ಪಕ್ಷಗಳು ಒಪ್ಪಿ, ನಿರ್ಧರಿಸುವ ಯಾವುದೇ ಚಟುವಟಿಕೆಗಳಲ್ಲಿ ಸಹಕಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ