ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ
*ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ*
-----------------------------
*ಭಾರತದ ಏಕೈಕ ಬಾಹ್ಯಾಕಾಶ ಕೇಂದ್ರ ಶ್ರೀಹರಿ ಕೋಟಾದಿಂದ ಜಿಎಸ್ಎಲ್ ವಿ-09 ಉಪಗ್ರಹ ಮೇ 5ರಂದು ಉಡಾವಣೆಗೊಳ್ಳುವ ಮೂಲಕ ಇಸ್ರೋದ ಮತ್ತೊಂದು ಬಾಹ್ಯಾಕಾಶ ಯಾನಕ್ಕೆ ಸಾಕ್ಷಿಯಾಯಿತು.*
*ಕಳೆದ ಫೆಬ್ರವರಿ 15ರಂದು ಭಾರತ 104 ಸ್ಯಾಟಲೈಟ್ ಗಳನ್ನು ಒಂದು ರಾಕೆಟ್ ನಲ್ಲಿ ಉಡಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಮಾಮ್ನಿಂದ ಜಿಎಸ್ಎಲ್ ವಿ-9 ವರೆಗೆ ಆರ್ಯಭಟದಿಂದ ಇಲ್ಲಿಯವರೆಗೆ ಭಾರತ ಉಪಗ್ರಹ ಉಡಾವಣೆಯಲ್ಲಿ ಬಹುದೂರ ಸಾಗಿ ಬಂದಿದೆ.*
*ಹಳೆಯ ನೆನಪಿನ ಬುತ್ತಿಯನ್ನು ಕೆದಕಿದಾಗ ಇಸ್ರೋದ ಮಹತ್ವದ ಹೆಜ್ಜೆ ಗುರುತುಗಳನ್ನು ನೋಡಬಹುದು.*👇🏾👇🏾
*1975, ಆರ್ಯಭಟ*
-------------
*ಭಾರತದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಆರ್ಯಭಟವನ್ನು ಸೋವಿಯತ್ ಒಕ್ಕೂಟ ಉಡಾಯಿಸಿತು. ಅಂತರಿಕ್ಷದಲ್ಲಿ 19 ವರ್ಷಗಳ ಕಾಲ ಪ್ರಯಾಣ ಮಾಡಿ ಭೂ ಕಕ್ಷೆಯನ್ನು ಮರು ಪ್ರವೇಶಿಸಿತು. ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಆರ್ಯಭಟ ಉಪಗ್ರಹವನ್ನು ಬಳಸಲಾಯಿತು.*
*1979, ಭಾಸ್ಕರ್*
------------
*ಅರಣ್ಯ, ಜಲ ವಿಜ್ಞಾನ, ಭೂ ವಿಜ್ಞಾನಕ್ಕೆಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸಲು ಈ ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತಿದ್ದು ಕಾಪುಸ್ತಿನ್ ಯಾರ್ ನಲ್ಲಿ ಉಡಾಯಿಸಲಾಯಿತು. ಭಾಸ್ಕರ್ ಮೂಲಕವೇ ಟಿ ವಿ ಮತ್ತು ಕ್ಯಾಮರಾಗಳ ಆರಂಭವಾಯಿತು.*
*1980, ರೋಹಿಣಿ*
------------
*ಎಸ್ಎಲ್ ವಿ-3 ಹಾಗೂ ರೋಹಿಣಿಯನ್ನು ಒಟ್ಟಿಗೆ ಎರಡನೇ ಪ್ರಯೋಗಾತ್ಮಕ ಉಪಗ್ರಹವಾಗಿ ಉಡಾಯಿಸಲಾಯಿತು.ಕಾರ್ಯಾಚರಣೆ ಯಶಸ್ವಿಯಾಯಿತು.*
*1981,ಭಾಸ್ಕರ 2*
-------------
*ಭೂ ಕಕ್ಷೆಗೆ 1991ರಲ್ಲಿ ಮರು ಪ್ರವೇಶಿಸಿತು ಹಾಗೂ ಭೂಮಿ ಮತ್ತು ನೀರಿನ ವಲಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿತು. ಅಸಮರ್ಪಕವಾಗಿ ಕೆಲಸ ಮಾಡಿದಎರಡು ಕ್ಯಾಮರಾಗಳಲ್ಲಿ ಒಂದನ್ನು ಸುಮಾರು 2,000 ಚಿತ್ರಗಳನ್ನು ವಾಪಸ್ಸು ಕಳುಹಿಸಲಾಯಿತು.*
*1982, ಇನ್ಸಾಟ್-1 ಎ*
----------------
*ಅಮೆರಿಕಾ ರಾಕೆಟ್ ಮೂಲಕ ಉಡಾಯಿಸಲಾದ ಸಂವಹನ ಉಪಗ್ರಹ. ಇದು ನಮ್ಮ ದೇಶದ ಮೊದಲ ಹವಾಮಾನಶಾಸ್ತ್ರ ಉಪಗ್ರಹವಾಗಿದೆ.1983, ಇನ್ಸಾಟ್-2ಬಿ: ಇನ್ಸಾಟ್-1ಎಯ ಪ್ರತಿಬಿಂಬವಾಗಿದ್ದು 7 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದೆ.*
*1988, ಐಆರ್ಎಸ್-1ಎ*
-----------------
*ರಷ್ಯಾ ರಾಕೆಟ್ ಮೂಲಕ ಉಡಾವಣೆಗೊಂಡ ಭಾರತೀಯ ರಿಮೋಟ್ ಸೆನ್ಸಿಂಗ್(ಐಆರ್ಎಸ್) ಉಪಗ್ರಹವಾಗಿದೆ. ಆದರೆ ಈ ಕಾರ್ಯಾಚರಣೆ ವಿಫಲವಾಯಿತು.*
*1992, ಇನ್ಸಾಟ್-2ಡಿಟಿ*
-----------------
*1,360 ಕೆಜಿ ತೂಕದ ಈ ಉಪಗ್ರಹವನ್ನು ಆರಂಭದಲ್ಲಿ ಅರಬ್ ಮತ್ತು ನಂತರ ಭಾರತೀಯ ಸಂವಹನ ಉಪಗ್ರಹವಾಗಿ ಉಡಾಯಿಸಲಾಯಿತು. ಉದನ್ನು ಫ್ರಾನ್ಸ್ ನ ಗಯಾನಾದಲ್ಲಿ ಉಡಾಯಿಸಲಾಯಿತು.*
*1994,ವಿಸ್ತರಿಸಿದ*
*ರೋಹಿಣಿ ಉಪಗ್ರಹ ಸರಣಿ*
---------------------------
*ಅಂತರಿಕ್ಷಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪೇ ಲೋಡ್ಸ್ ಗಳನ್ನು ಹೊತ್ತೊಯ್ದ ಗುಂಪು ಉಪಗ್ರಹಗಳು ಗಾಮಾ ಕಿರಣ ಸ್ಫೋಟಗಳನ್ನು ಕಂಡು ಹಿಡಿಯುವಲ್ಲಿ ಇದು ಸಹಾಯ ಮಾಡಿದೆ.*
*1997, ಐಆರ್ಎಸ್ 1-ಡಿ*
-----------------
*ದೂರಸ್ಥಸಂವೇದನಾ ಉಪಗ್ರಹಗಳಲ್ಲಿ ಇದು ಏಳನೆಯದಾಗಿದೆ. ಇದನ್ನುಇಸ್ರೋ ನಿರ್ಮಿಸಿ ಉಡಾಯಿಸಿ,ಕಾರ್ಯನಿರ್ವಹಿಸಿದ ಉಪಗ್ರಹವಾಗಿದೆ. 12 ವರ್ಷಗಳ ಸೇವೆ ನಂತರ 2010ರಲ್ಲಿ ಪೂರ್ಣಗೊಂಡಿತು.*
*2001, ಜಿಸ್ಯಾಟ್-1*
--------------
*ಜಿಎಸ್ಎಲ್ ವಿ ಅಧಿಕ ಭಾರದ ರಾಕೆಟ್ ನ್ನು ಜಿಸ್ಯಾಟ್-1 ಮೂಲಕ ಯಶಸ್ವಿಯಾಗಿ ಉಡಾಯಿಸಿತು.*
*2002, ಕಲ್ಪನ-1*
-------------
*ಮೆಟ್ ಸಾಟ್ ದೇಶದ ಮೊದಲ ಮೀಸಲಾದ ಹವಾಮಾನ ಉಪಗ್ರಹವಾಗಿದ್ದು ಅದಕ್ಕೆ ಕಲ್ಪನ ಎಂದು ಮರು ನಾಮಕರಣ ಮಾಡಲಾಯಿತು.*
*ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಯಿತು. ಏಳು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹವಾಮಾನ ಮತ್ತು ಪರಿಸರದ ಸಂಬಂಧಿತ ಮಾಹಿತಿಯನ್ನು ಒಟ್ಟುಗೂಡಿಸಲು ಬಳಸಲಾಗಿದೆ.*
*2004, ಎಜುಸ್ಯಾಟ್*
--------------
*ದೇಶದ ಮೊದಲ ಶಿಕ್ಷಣ ಆಧಾರಿತ ಉಪಗ್ರಹವಾಗಿದ್ದು, ಸ್ಮಾರ್ಟ್ ತರಗತಿಗಳ ಪರಿಕಲ್ಪನೆ ಇದರಿಂದ ಹುಟ್ಟಿಕೊಂಡಿತು. ಎರಡು ಮಾರ್ಗಗಳ ಮೂಲಕ ಸಂವಹನ ಇದರಲ್ಲಿ ಸಾಧ್ಯವಿದ್ದು ತರಗತಿಗಳಿಗೆ ಶಿಕ್ಷಣದ ಸಾಮಗ್ರಿಗಳನ್ನು ಪೂರೈಸುತ್ತದೆ.*
*2005, ಕಾರ್ಟೊಸ್ಯಾಟ್-1*
------------------
*ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಇದನ್ನು ಉಡಾಯಿಸಲಾಯಿತು. ಪ್ರಾದೇಶಿಕ, ಸ್ಪೆಕ್ಟ್ರಲ್ ಮತ್ತು ರೇಡಿಯೊಮೆಟ್ರಿಕ್ ನಿರ್ಣಯಗಳನ್ನು ಸುಧಾರಿಸುವ ಕಾರ್ಯಾಚರಣೆ ಮತ್ತು ಅಂಕಿಅಂಶಗಳ ಸಂಗ್ರಹವನ್ನು ಹೊಂದಿದೆ.*
*2007, ಕಾರ್ಟೊಸ್ಯಾಟ್-2*
-----------------
*ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗ ಮತ್ತು ಎರಡು ವಿದೇಶಿ ಸ್ಯಾಟಲೈಟ್ ಗಳ ಉಡಾವಣೆಯನ್ನು ಇದು ಹೊಂದಿದೆ.*
*2008, ಚಂದ್ರಯಾನ*
--------------
*ಶ್ರೀ ಹರಿಕೋಟಾದಿಂದ ಮೊದಲ ಚಂದ್ರಪರಿಶೋಧನೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಇದು ಎರಡು ವರ್ಷಗಳ ಜೀವಿತಾವಧಿ ಹೊಂದಿತ್ತು. ಗ್ರಹಗಳ ಮತ್ತು ದೂರಸ್ಥ ಸಂವೇದನಾ ಕ್ಷೇತ್ರಗಳನ್ನು ಒಳಗೊಂಡಿದೆ.*
*2011, ಯೂತ್ ಸ್ಯಾಟ್*
---------------
*ಭಾರತ-ರಷ್ಯಾ ಜಂಟಿಯಾಗಿ ಉಡಾಯಿಸಿದ ಉಪಗ್ರಹವಿದು. ಪದವಿ, ಸ್ನಾತಕ ಪದವಿ ಮತ್ತು ಸಂಶೋಧನಾ ತಜ್ಞರನ್ನು ಒಟ್ಟಿಗೆ ತರುತ್ತದೆ. ಭಾರತದಮಿನಿ ಸ್ಯಾಟಲೈಟ್ ಸರಣಿಯ ಭಾಗವಾಗಿದ್ದು ಎರಡನೆಯದಾಗಿದೆ.*
*2013, ಮಾಮ್*
------------
*ಮಂಗಳಯಾನ ಎಂದು ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್ ಅಂತರಗ್ರಹ ಸ್ಥಳಕ್ಕೆ ಭಾರತದ ಮೊದಲ ಬಾಹ್ಯಾಕಾಶ ಪ್ರಯಾಣವಾಗಿದೆ.*
*2014, ಜಿಸ್ಯಾಟ್ 16*
---------------
*ಸಂವಹನ ಉಪಗ್ರಹ. ತೆರೆದ-ಸಾಮರ್ಥ್ಯದ ಆಂಟೆನಾವನ್ನು ಜಿಸ್ಯಾಟ್ 16 ಒಳಗೊಂಡಿದೆ.*
*2015, ಜಿಸ್ಯಾಟ್ 15*
---------------
*ಕು ಬಾಂಡ್ ನಲ್ಲಿ ಹೊತ್ತೊಯ್ಯುವ ಸಂವಹನ ಟ್ರಾನ್ಸ್ಪೋರ್ಡರ್ಗಳನ್ನು ಒಳಗೊಂಡಿದೆ.*
*20
16, ಸ್ಕ್ಯಾಟ್ ಸಾಟ್-1*
-----------------
*ಚಂಡಮಾರುತ, ಗಾಳಿ, ಹವಾಮಾನ ಮುನ್ಸೂಚನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತದೆ. 5 ವರ್ಷಗಳ ಜೀವಿತಾವಧಿ ಹೊಂದಿದೆ.*
*2017, ಕಾರ್ಟೊಸ್ಯಾಟ್ 2 ಡಿ*
-------------------
*ಪಿಎಸ್ಎಲ್ ವಿ ಒಂದು ಉಡಾವಣಾ ವಾಹಕದ ಮೂಲಕ ಏಕಕಾಲಕ್ಕೆ 104 ಸ್ಯಾಟಲೈಟ್ಗಳನ್ನು ಉಡಾಯಿಸಿ ಇತಿಹಾಸ ನಿರ್ಮಿಸಿತು.*
*2017, ಜಿಸ್ಯಾಟ್-9*
--------------
*ದಕ್ಷಿಣ ಏಷ್ಯಾ ದೇಶಗಳಿಗೆ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಕೊಡುಗೆಯಿದು. ಸಂವಹನ ಉಪಗ್ರಹ.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ