ಸೋಮವಾರ, ಜೂನ್ 26, 2017

ಭಾರತ - ಪೋರ್ಚುಗಲ್ 11 ಒಪ್ಪಂದಗಳಿಗೆ ಸಹಿ

ಭಾರತ - ಪೋರ್ಚುಗಲ್ 11 ಒಪ್ಪಂದಗಳಿಗೆ ಸಹಿ

ಲಿಸ್ಟನ್ : ಪ್ರಧಾನಿ ಮೋದಿ ಅವರ ಮೂರು ದೇಶಗಳ ಪ್ರವಾಸದಲ್ಲಿ ನಿನ್ನೆ ಸಂಜೆ ತಮ್ಮ ಪ್ರವಾಸದ ಪ್ರಥಮ ದೇಶವಾದ ಪೋರ್ಚುಗಲ್ ಗೆ ತಲುಪಿದರು.

ಪ್ರಧಾನಿ ಮೋದಿ ಅವರನ್ನು ಪೋರ್ಚುಗಲ್ ವಿದೇಶಾಂಗ ಸಚಿವ ಅಗಸ್ಟೋ ಸ್ಯಾಂಟೊಸ್ ಸಿಲ್ವಾ ಸ್ವಾಗತಿಸಿದರು. ಬಳಿಕ ನಾಯಕರೂ ನೆಸೆಸಿಡೇಡ್ಸ್ ಅರಮನೆಯಲ್ಲಿ ಪೋರ್ಚುಗಲ್ ಪ್ರಧಾನಿ ಆಂಟೊನಿಯೋ ಕೋಸ್ಟಾ ಅವರನ್ನು ಮೋದಿ ಭೇಟಿಯಾದರು. ಈ ವೇಳೆ ಮೋದಿ ಅವರನ್ನು ಭರಮಾಡಿಕೊಂಡ ಆಂಟೊನಿಯಾ ಕೋಸ್ಟಾ, ಉಭಯ ದೇಶಗಳ ಸಂಬಂಧ ವೃದ್ಧಿಗೆ ಇದು ಅದ್ಭುತ ಅವಕಾಶ ಎಂದು ಬಣ್ಣಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಾಗಿ 28.8 ಕೋಟಿ ರೂ.
ಮೌಲ್ಯದ ನಿಧಿ ಸ್ಥಾಪನೆ ಸೇರಿದಂತೆ ಒಟ್ಟು 11 ಒಪ್ಪಂದಗಳಿಗೆ ಭಾರತ ಮತ್ತು ಪೋರ್ಚುಗಲ್ ಶನಿವಾರ ಸಹಿ ಹಾಕಿವೆ. ಬಾಹ್ಯಾಕಾಶ ಸಹಕಾರ, ನ್ಯಾನೋ ತಂತ್ರಜ್ಞಾನ, ಸಾಂಸ್ಕೃತಿಕ ಸಂಬಂಧ ವೃದ್ಧಿ, ಯುವಜನ ಮತ್ತು ಕ್ರೀಡಾಭಿವೃದ್ಧಿ, ಉನ್ನತ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇವಾಗಿವೆ.

ಪೋರ್ಚುಗಲ್-ಇಂಡಿಯಾ ಬ್ಯುಸಿನೆಸ್ ಹಬ್ ಸ್ಥಾಪನೆ ಮತ್ತು ಪೋರ್ಚುಗಲ್ ನಲ್ಲಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆಗೂ ನಿರ್ಧರಿಸಲಾಗಿದೆ. ಲಿಸ್ಟನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಅಧ್ಯಯನದ ವಿಭಾಗವನ್ನು ಸ್ಥಾಪಿಸಲು ಮತ್ತು ಹಿಂದಿ ಪೋರ್ಚುಗೀಸ್ ಶಬ್ದಕೋಶ ಅಭಿವೃದ್ಧಿಪಡಿಸಲು ಉಭಯ ದೇಶಗಳು ಸಮ್ಮತಿಸಿವೆ ಎಂದು ಮೋದಿ ಪ್ರಕಟಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ