ಅಮರಾವತಿ' ಅತ್ಯುತ್ತಮ ಚಿತ್ರ, ಅಚ್ಯುತ್ ಕುಮಾರ್, ಶೃತಿ ಹರಿಹರನ್ ಅತ್ಯುತ್ತಮ ನಟ-ನಟಿ
ಬೆಂಗಳೂರು: 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ಕನ್ನಡದ ಅಮರಾವತಿ ಪ್ರಥಮ ಅತ್ಯುತ್ತಮ ಚಿತ್ರ, ರೈಲ್ವೆ ಚಿಲ್ಡ್ರನ್ ಎರಡನೇ ಅತ್ಯುತ್ತಮ ಚಿತ್ರ, ಅಂತರ್ಜಲ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು, ಡಾ.ರಾಜ್ ಕುಮಾರ್ ಅವರ ಜನ್ಮ ದಿನವಾದ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಚ್ಯುತ್ ಕುಮಾರ್ ಅವರು ಅಮರಾವತಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಶ್ರುತಿ ಹರಿಹರನ್ ಅವರು ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಆಯ್ಕೆ ಪ್ರಶಸ್ತಿಗೆ 124 ಚಿತ್ರಗಳು ಬಂದಿದ್ದವು, ಎಲ್ಲಾ ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷೆ ಕವಿತಾ ಲಂಕೇಶ್ ಅವರು ತಿಳಿಸಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ
ಅಮರಾವತಿ ಪ್ರಥಮ ಅತ್ಯುತ್ತಮ ಚಿತ್ರ
ರೈಲ್ವೆ ಚಿಲ್ಡ್ರನ್ ದ್ವಿತೀಯ ಅತ್ಯುತ್ತಮ ಚಿತ್ರ
ಅಂತರ್ಜಲ ಮೂರನೇ ಅತ್ಯುತ್ತಮ ಚಿತ್ರ
ಕಿರಿಕ್ ಪಾರ್ಟಿ ಅತ್ಯುತ್ತಮ ಮನರಂಜನಾ ಚಿತ್ರ
ರಾಮಾ ರಾಮಾರೇ ಮೊದಲ ನಿರ್ದೇಶನದ ಅತ್ಯುತ್ತಮ ಚಿತ್ರ
ಮೂಡಲ ಸೀಮೆಯಲಿ ಅತ್ಯುತ್ತಮ ಸಾಮಾಜಿಕ ಚಿತ್ರ
ತುಳು ಚಿತ್ರ ಮುದಿಪು ಅತ್ಯುತ್ತಮ ಪ್ರಾದೇಶಿಕ ಚಿತ್ರ
ಜೀರ್ ಜಿಂಬೆ ಅತ್ಯುತ್ತಮ ಮಕ್ಕಳ ಚಿತ್ರ
ನಂದಿತಾ ಯಾದವ್ ಅತ್ಯುತ್ತಮ ಕಥೆ(ರಾಜು ಎದೆಗೆ ಬಿದ್ದ ಅಕ್ಷರ)
ನವೀನ್ ಡಿ ಪಡೀಲ್ ಅತ್ಯುತ್ತಮ ಪೋಷಕ ನಟ(ಕುಡ್ಲ ಕೆಫೆ)
ಅಕ್ಷತಾ ಪಾಂಡವಪುರ ಅತ್ಯುತ್ತಮ ಪೋಷಕ ನಟಿ(ಪಲ್ಲಟ)
ಬಿಎಂ ಗಿರಿರಾಜು ಅತ್ಯುತ್ತಮ ಸಂಭಾಷಣೆ(ಅಮರಾವತಿ)
ಅರವಿಂದ ಶಾಸ್ತ್ರಿ ಅತ್ಯುತ್ತಮ ಚಿತ್ರಕಥೆ(ಕಹಿ)
ಎಂಆರ್ ಚರಣ್ ರಾಜ್ ಅತ್ಯುತ್ತಮ ಸಂಗೀತ ನಿರ್ದೇಶನ
ಸಿ.ರವಿಚಂದ್ರನ್ ಅತ್ಯುತ್ತಮ ಸಂಕಲನ
ರೈಲ್ವೆ ಚಿಲ್ಡ್ರನ್ ನಟನೆಗಾಗಿ ಮನೋಹರ್ ಗೆ ಪ್ರಶಸ್ತಿ
ವಿಜಯ್ ಪ್ರಕಾಶ್ ಅತ್ಯುತ್ತಮ ಹಿನ್ನೆಲೆ ಗಾಯಕ
ಸಂಗೀತಾ ರವೀಂದ್ರನಾಥ್ ಅತ್ಯುತ್ತಮ ಹಿನ್ನೆಲೆ ಗಾಯಕಿ(ಜಲ್ಸಾ)
ವಸ್ತ್ರಾಲಂಕಾರ ವಿಭಾಗದಲ್ಲಿ ಚಿನ್ಮಯ್ ಗೆ ಪ್ರಶಸ್ತಿ
ಕಾರ್ತಿಕ್ ಸರಗೂರು ಅತ್ಯುತ್ತಮ ಗೀತ ರಚನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ