ಶುಕ್ರವಾರ, ನವೆಂಬರ್ 10, 2017

ಪ್ರಮುಖ ರಾಜಕೀಯ ಪಕ್ಷಗಳು & ಸಂಸ್ಥಾಪಕರು

ಭಾರತದ ರಾಜಕೀಯ ಪಕ್ಷಗಳು :*

✴️ಅಖಿಲ ಭಾರತ ಕಾಂಗ್ರೇಸ್ ಪಕ್ಷ :
        1885ರಲ್ಲಿ  ಸ್ಥಾಪನೆಯಾಯಿತು.ಭಾರತದ ಹಳೆಯದಾದ ಪಕ್ಷಗಳಲ್ಲಿ ಒಂದಾಗಿದೆ.ಇದು ದೇಶದಲ್ಲಿ ಅತೀ ಹೆಚ್ಚು ಆಡಳಿತ ನಡೆಸಿದ ಪಕ್ಷವಾಗಿದೆ.

✴️ಭಾರತೀಯ ಜನತಾ ಪಕ್ಷ :
      1980 ರಲ್ಲಿ ಸ್ಥಾಪನೆಯಾಯಿತು.ಹಿಂದುತ್ವ , ಹಿಂದೂ ರಾಷ್ಟ್ರೀಯತೆ ಜೊತೆ ಗುರುತಿಸಿಕೊಂಡಿದೆ.ಔದರ ಸ್ಥಾಪಕರು ಅಟಲೊ ಬಿಹಾರಿ ವೋಜಪೇಯಿ & ಶ್ಯಾಮ್ ಪ್ರಸಾದ್ ಮುಖಜಿ೯.

✴️ಜನತಾ ದಳ ಪಕ್ಷ :
        1989ರಲ್ಲಿ ವಿ.ಪಿ.ಸಿಂಗ್ ರ ನೇತೃತ್ವದಲ್ಲಿ ಸ್ಥಾಪನೆಯಾಯಿತು.ಜಯಪ್ರಕಾಶ್ ನಾರಾಯಣರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದೆ.

✴️ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ :
      1920ರಲ್ಲಿ ಎಂ.ಎನ್.ರಾಯ್ ರಿಂದ ಸ್ಥಾಪನೆ.ಕಾಮಿ೯ಕ ಮತ್ತು ದುಡಿಯುವ ವಗ೯ದವರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಈ ಪಕ್ಷ ಸ್ಥಾಪನೆಯಾಯಿತು.

✴️ಕಮ್ಯೂನಿಸ್ಟ್ ಪಾಟಿ೯ ಆಫ್ ಇಂಡಿಯಾ (ಮಾಕ್ವಿ೯ಸ್ಟ್ ):
        ಸಿಪಿಎ ಪಕ್ಷದಿಂದ ಪ್ರತ್ಯೇಕಗೊಂಡು 1964 ರಲ್ಲಿ ಸ್ಥಾಪನೆಯಾಯಿತು.ಇದು ಕೂಡ ಕಾಮಿ೯ಕರು , ರೈತರು ಹಾಗೂ ಹಿಂದುಳಿದ ವಗ೯ದವರ ಹಿತಾಸಕ್ತಿಗೆ ಹೋರಾಡುವ ಪಕ್ಷವಾಗಿದೆ.

✴️ರಾಷ್ಟ್ರೀಯ ಜನತಾ ದಳ :
        ಜನತಾದಳದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಲಾಲೂ ಪ್ರಸಾದ್ ಯಾದವ್ 1997 ರಲ್ಲಿ ಈ ಪಕ್ಷವನ್ನು ಸ್ಥಾಪಿಸಿದರು.

✴️ಸಮಾಜವಾದಿ ಪಾಟಿ೯  :
        ಜನತಾದಳ ಎಸ್ ಮತ್ತು ಜನತಾ ಪಕ್ಷ ಕೂಡಿಕೊಂಡು 1992ರಲ್ಲಿ ಸ್ಥಾಪನೆಯಾಯಿತು. ಇದರ ಸ್ಥಾಪಕರು ಮುಲಾಯಂ ಸಿಂಗ್ ಯಾದವ್ ರವರು.

✴️ಬಹುಜನ ಸಮಾಜವಾದಿ ಪಾಟಿ೯ :
         1984ರಲ್ಲಿ ಕಾನ್ಶಿರಾಂ ಇದನ್ನು ಸ್ಥಾಪಿಸಿದರು. ಇದು ಅನುಸೂಚಿತ ಜಾತಿ ,ಅನುಸೂಚಿತ ಪಂಗಡದವರ ಹಿತವನ್ನು ಕಾಪಾಡುವುದಕ್ಕಾಗಿ ಹೋರಾಟ ಮಾಡುತ್ತದೆ .

✴️ಆಲ್ ಇಂಡಿಯಾ ತೃಣಮೂಲ ಕಾಂಗ್ರೇಸ್ :
        ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ 1998ರಲ್ಲಿ ಮಮತಾ ಬ್ಯಾನಜಿ೯ ಈ ಪಕ್ಷವನ್ನು ಸ್ಥಾಪಿಸಿದರು.

✴ನ್ಯಾಷನಲಿಸ್ಟ್ ಕಾಂಗ್ರೇಸ್ ಪಾಟಿ೯ :
      ಕಾಂಗ್ರೇಸ್ ಪಕ್ಷದ ಭಿನ್ನಾಭಿಪ್ರಾಯದಿಂದಾಗಿ 1999ರಲ್ಲಿ ಶರದ್ ಪವಾರ್, ಪಿ.ಎ.ಸಂಗ್ಮಾ ಮತ್ತು ತಾರೀಕ್ ಅನ್ವರ್ ಕೂಡಿಕೊಂಡು ಸ್ಥಾಪನೆ ಮಾಡಿದರು.

✴️ಅಕಾಲಿದಳ ಪಕ್ಷ :
      ಪಂಜಾಬ್ ನ ಪ್ರಮುಖ ಪಕ್ಷವಾಗಿದೆ.1920ರಲ್ಲಿ ಸಿಖ್ಖರ ಹೌತಾಸಕ್ತಿ ಕಾಪಾಡುವುದಕ್ಕಾಗಿ ಸ್ಥಾಪನಗಯಾಯಿತು.

✴️ಆಲ್ ಇಂಡಿಯಾ ಫಾವ೯ಡ್೯ ಬ್ಲಾಕ್ :
        1940ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಇದನ್ನು  ಸ್ಥಾಪಿಸಿದರು.ಸಮಾಜವಾದ ರಾಷ್ಟ್ರ ಕಟ್ಟುವುದು ಇದರ ಉದ್ದೇಶವಾಗಿದೆ.

✴ಅಸ್ಸಾಂ ಗಣ ಪರಿಷತ್ತು :
        1985ರಲ್ಲಿ ಪ್ರಫುಲ್ ಕುಮಾರ್ ಮಹಾಂತ ಇದನ್ನು ಸ್ಥಾಪಿಸಿದರು.ಇದು ಅಸ್ಸಾಂನ ಪ್ರಮುಖ ಪಕ್ಷವಾಗಿದೆ.

✴ತೆಲುಗು ದೇಶಂ : 
          1982ರಲ್ಲಿ ಎನ್.ಟಿ.ರಾಮರಾವ್ ಆಂಧ್ರಪ್ರದೇಶದಲ್ಲಿ ಸ್ಥಾಪನೆ ಮಾಡಿದರು.ಇದು ಬಡತನ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಉದ್ದೇಶ ಹೊಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ