ಅರಮನೆ ನಗರಿ ಮೈಸೂರಿನ ಜನರಿಗೆ ಸಿಹಿ ಸುದ್ದಿ; ನಗರದ 18 ವಿಶೇಷತೆಗಳಿಗೆ ಜಿಯಾಗ್ರಫಿಕಲ್ ಇಂಡಿಕೇಷನ್ ಟ್ಯಾಗ್
LATHA CG |
AUGUST 29, 2019, 10:52 PM IST
ಮೈಸೂರು(ಆ.29): ಸಾಂಸ್ಕೃತಿಕ ನಗರಿ, ಅರಮನೆ ನಗರಿ, ಮಲ್ಲಿಗೆ ನಗರಿ ಎಂದೇ ಪ್ರಸಿದ್ದಿ ಪಡೆದಿರುವ ಮೈಸೂರು ಅದರ ವೈಶಿಷ್ಟ್ಯಗಳಿಂದ ವಿಶೇಷತೆಗಳಿಗೆ ಭಾಜನವಾಗುತ್ತಲೇ ಇರುತ್ತದೆ. ಆ ನೆಲದ ವೈಶಿಷ್ಟ್ಯವೇ ಹಾಗೆ ಅನಿಸುತ್ತದೆ. ಮೈಸೂರಿನ 18 ವಿಶೇಷತೆಗಳಿಗೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು(ಜಿಐ-ಜಿಯಾಗ್ರಫಿಕಲ್ ಇಂಡಿಕೇಷನ್) ನೀಡಲು ಚಿಂತನೆ ನಡೆಸಲಾಗಿದೆ.
ರಾಜ್ಯದ ಒಟ್ಟು 42 ವಿಶೇಷತೆಗಳ ಪೈಕಿ ಮೈಸೂರಿನ 18 ವಿಶೇಷತೆಗಳಿಗೆ ಈ ಜಿಯಾಗ್ರಫಿಕಲ್ ಇಂಡಿಕೇಷನ್ ಸಿಗಲಿರುವುದು ಮೈಸೂರಿನ ಜನರಿಗೆ ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ. ಅಷ್ಟಕ್ಕೂ ಮೈಸೂರಿನಲ್ಲಿರುವ ಆ 18 ವಿಶೇಷತೆಗಳು ಯಾವುವು ಅಂತೀರಾ?
ಮೈಸೂರು ಸೀರೆ,
ಮೈಸೂರು ವೀಳ್ಯದೆಲೆ,
ಮೈಸೂರು ಬಾಳೆ,
ಮೈಸೂರು ಮಲ್ಲಿಗೆ,
ಮೈಸೂರು ಸ್ಯಾಂಡಲ್ ಸೋಪು,
ಮೈಸೂರಿನ ಚಿತ್ರಕಲೆ,
ಮೈಸೂರಿನ ಗಂಧದೆಣ್ಣೆ,
ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆ,
ನಂಜನಗೂಡು ರಸಬಾಳೆ
ಮೈಸೂರು ಅಗರಬತ್ತಿ
ಮೈಸೂರು ರೋಸ್ವುಡ್
ಗಂಜೀಫ ಕಾರ್ಡ್ಸ್
ಸೇರಿದಂತೆ ಒಟ್ಟು 18 ವಿಶೇಷತೆಗಳು ಜಿಯಾಗ್ರಫಿಕಲ್ ಇಂಡಿಕೇಷನ್ ಪಟ್ಟಿಯಲ್ಲಿ ಇವೆ.
ದಸರಾ ಸಂಭ್ರಮದಲ್ಲಿರುವ ಮೈಸೂರಿನ ಜನತೆಗೆ ಈ ವಿಷಯ ಇನ್ನೂ ಖುಷಿ ಹೆಚ್ಚಿಸುವ ಸಂಗತಿಯಾಗಿದೆ. ಮೈಸೂರು ಮಲ್ಲಿಗೆ, ಮೈಸೂರು ಸಿಲ್ಕ್ ಸೀರೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ವೀಳ್ಯದೆಲೆ ಸಾಕಷ್ಟು ಜನಪ್ರಿಯವಾಗಿರುವ ಉತ್ಪನ್ನಗಳು. ಹಾಗೂ ಉತ್ಪನ್ನಗಳನ್ನು ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಾರೆ. ಇವು ಅನಾದಿ ಕಾಲದಿಂದಲೂ ತಮ್ಮದೇಯಾದ ವೈಶಿಷ್ಟ್ಯವನ್ನು ಕಾಯ್ದುಕೊಂಡು ಬಂದಿವೆ.
ಜಿಯಾಗ್ರಫಿಕಲ್ ಇಂಡಿಕೇಷನ್ ಸಿಕ್ಕಿರುವ ಸಾಕಷ್ಟು ಸರಕು-ಉತ್ಪನ್ನಗಳು ಹೆಚ್ಚಾಗಿ ಸಿಗುವುದು ಕರ್ನಾಟಕದಲ್ಲಿಯೇ. ಈಗಾಗಲೇ ಕೊಲ್ಲಾಪುರಿ ಪಾದರಕ್ಷೆಗಳು, ಕಲಬುರ್ಗಿ ತೊಗರಿ ಬೇಳೆ ಸಹ ಜಿಯಾಗ್ರಫಿಕಲ್ ಇಂಡಿಕೇಷನ್ ಟ್ಯಾಗ್ ಪಡೆದಿವೆ.
ಭೌಗೋಳಿಕ ಹೆಗ್ಗುರುತು ಪಡೆಯುವ 18 ವಿಶೇಷ ಉತ್ಪನ್ನಗಳಿಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ. ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ