ರಾಜ್ಯಸಭೆಯಲ್ಲಿ ಮೋಟಾರು ವಾಹನ(ತಿದ್ದುಪಡಿ) ಮಸೂದೆ ಅಂಗೀಕಾರ; ಇನ್ನು ಸಂಚಾರ ನಿಯಮ ಉಲ್ಲಂಘಿಸಿದರೆ ಬೀಳಲಿದೆ ಭಾರೀ ದಂಡ
ಮೋಟಾರು ವಾಹನ (ತಿದ್ದುಪಡಿ) ಮಸೂದೆ ಪ್ರಕಾರ ಇನ್ನು ಮುಂದೆ ರಸ್ತೆ ನಿಯಮ ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ಬೀಳಲಿದೆ.
ನವದೆಹಲಿ: ರಾಜ್ಯಸಭೆಯಲ್ಲಿ ಬುಧವಾರ ಮೋಟಾರು ವಾಹನ (ತಿದ್ದುಪತಿ) ಮಸೂದೆ 2019 ಅಂಗೀಕಾರಗೊಂಡಿದೆ. ಮೋಟಾರು ವಾಹನ ಕಾಯ್ದೆ 1988ಕ್ಕೆ ಈ ತಿದ್ದುಪಡಿ ಮಾಡಲಾಗಿದೆ. ಇದೇ ಮಸೂದೆ ಇದೇ ತಿಂಗಳಲ್ಲಿ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಈ ಮಸೂದೆಯನ್ನು 2017ರಲ್ಲೇ ಪರಿಚಯಿಸಲಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು. 2019ರಲ್ಲಿ ಇದೇ ಮಸೂದೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯ ಮುಂದೆ ಇರಿಸಿದ್ದರು. ರಸ್ತೆ ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ಹೆಚ್ಚು ಪ್ರಮಾಣದ ಕಠಿಣ ದಂಡ ವಿಧಿಸುವ ನಿಯಮವನ್ನು ಮೋಟಾರು ವಾಹನ (ತಿದ್ದುಪಡಿ) ಮಸೂದೆ ಒಳಗೊಂಡಿದೆ.
ತಪ್ಪು/ನಿಯಮಗಳು ಹಳೆ ದಂಡ (ರೂ.ಗಳಲ್ಲಿ) ಹೊಸ ದಂಡ (ಕನಿಷ್ಠ)
ಸಾಮಾನ್ಯ (177) 100 500
ರಸ್ತೆ ನಿಯಮ ಉಲ್ಲಂಘನೆ (ನ್ಯೂ 177ಎ) 100 500
ಟಿಕೆಟ್ರಹಿತ ಪ್ರಯಾಣ(178) 200 500
ಆದೇಶ ಉಲ್ಲಂಘನೆ (179) 500 2,000
ಪರವಾನಗಿ ಇಲ್ಲದೆ ವಾಹನ (180) 1,000 5,000
ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ(181) 500 5,000
ಅರ್ಹತೆ ಇಲ್ಲದೆ ವಾಹನ ಚಾಲನೆ (182) 500 10,000
ಅತಿಭಾರದ ವಾಹನ (189) ನ್ಯೂ 5,000
ಅತಿವೇಗ (183) 400 1,000 ಮತ್ತು 2,000
ಅಪಾಯದ ಚಾಲನೆ (184) 1,000 5,000ದವರೆಗೆ
ಕುಡಿದು ವಾಹನ ಚಾಲನೆ(185) 2,000 10,000
ವೇಗ ಮತ್ತು ರೇಸಿಂಗ್ (189) 500 5000
ಅನುಮತಿ ಇಲ್ಲದ ವಾಹನ(192ಎ) 5,000 10,000ದವರೆಗೆ
ಲೈಸೆನ್ಸ್ ನಿಯಮ ಉಲ್ಲಂಘನೆ (193) ನ್ಯೂ 25,000 ದಿಂದ 1,00,000
ಒವರ್ಲೋಡಿಂಗ್ (194) 1ರಿಂದ 2 ಸಾವಿರ 2ರಿಂದ 20 ಸಾವಿರ
ಅತಿಯಾದ ಪ್ರಯಾಣಿಕರು (194ಎ) ಎನ್ಎ 1,000
ಸೀಟ್ ಬೆಲ್ಟ್ (194ಬಿ) 100 1,000
ತ್ರಿಬಲ್ ರೈಡಿಂಗ್ (194ಸಿ) 100 2,000 ಮತ್ತು ಲೈಸೆನ್ಸ್ ರದ್ದು
ತುರ್ತುವಾಹನಕ್ಕೆ ದಾರಿ ಬಿಡದಿರುವುದು (194ಇ) ನ್ಯೂ 10,000
ವಿಮೆ ಇಲ್ಲದ ವಾಹನ (196) 1,000 2,000
ಬಾಲಕರಿಂದ ವಾಹನ ಚಾಲನೆ (199) ನ್ಯೂ ಪೋಷಕರಿಗೆ 25 ಸಾವಿರ, 3 ವರ್ಷ ಶಿಕ್ಷೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ