ಬುಧವಾರ, ನವೆಂಬರ್ 10, 2021

ಮೈಸೂರು: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎನಿಸಿದ್ದ 'ಸುಧರ್ಮ' ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ವಿಧಿವಶ

ಕನ್ನಡಪ್ರಭ ವಾರ್ತೆ Updated: 

ಮೈಸೂರು: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎನಿಸಿದ್ದ "ಸುಧರ್ಮ" ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ (64) ಹೃದಯಾಘಾತದಿಂದ ನಿಧನರಾದರು.

ದೇಶ ಮತ್ತು ವಿದೇಶದಲ್ಲಿ ಸಂಸ್ಕೃತ ಜನಪ್ರಿಯಗೊಳಿಸುವಲ್ಲಿ, ಜನರ ಹೃದಯಕ್ಕೆ ಹತ್ತಿರವಾಗಿಸುವಲ್ಲಿ ಕಳೆದ 5 ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದ ಸುಧರ್ಮ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಮೈಸೂರಿನಲ್ಲಿಂದು ನಿಧನ ಹೊಂದಿದರು. 

ಸುದ್ದಿ ಬರೆಯುತ್ತಲೇ .ಸಂಪತ್ ಕುಮಾರ್ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪತ್ ಕುಮಾರ್ ಹುಟ್ಟೂರು ಮೈಸೂರು ನಂಜನಗೂಡು ತಾಲೂಕು ಕಳಲೆ ಗ್ರಾಮ. ತಂದೆ ನಾಡದೂರ್ ವರದರಾಜ್ ಅಯ್ಯಂಗಾರ್, ತಾಯಿ ಸೀತಾಲಕ್ಷ್ಮೀ.
ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿರುವ ಇವರು 1945ರಲ್ಲಿ ಈ ಮುದ್ರಣಾಲಯ ಪ್ರಾರಂಭಿಸಿದ್ದು ಇಲ್ಲಿ ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳು ಸಹ ಮುದ್ರಿತವಾಗಿದ್ದವು.

1963 ರಲ್ಲಿ ಅವರು ಬಾಲಕಿಯರ ಶಾಲೆ ಪ್ರಾರಂಭಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸಂಸ್ಕೃತ ಅನೇಕ ಕಾರ್ಯಾಗಾರಗಳನ್ನು ಆಯೋಜಿಸಿದ್ದರು  1970 ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಪ್ರತಿನಿತ್ಯ ಸಂಸ್ಕೃತ ಜನರಿಗೆ ತಲುಪುವಂತೆ ಮಾಡುವುದಕ್ಕಾಗಿ “ಸುಧರ್ಮ” ಪತ್ರಿಕೆ ಪ್ರಾರಂಭಿಸಿದರು. ಆಕಾಶವಾಣಿಯಲ್ಲಿ ಸಂಸ್ಕೃತದಲ್ಲಿ ವಾರ್ತೆಯನ್ನು ವರದರಾಜ ಅಯ್ಯಂಗಾರ್ ಓದುತ್ತಿದ್ದರು.

ಸಂಪಾದಕ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಅವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದು ಪತ್ರಿಕೆಗೆ ಇಂದಿನ ಆಧುನಿಕ, ಡಿಜಟಲ್ ಯುಗದ ಆಧುನಿಕ ತಾಂತ್ರಿಕ ಸ್ಪರ್ಶನೀಡಿ ಮತ್ತಷ್ಟು ಜನಪ್ರಿಯಗೊಳಿಸಿದ್ದರು. ಜೊತೆಗೆ ಪತ್ರಿಕೆಯ ಆನ್ ಲೈನ್ ಆವೃತ್ತಿ ಸಹ ತಂದಿದ್ದರು ಸಂಪತ್ ಕುಮಾರ್ ರವರು ಸಹ ತಮ್ಮ ತಂದೆಯ ಇಚ್ಚೆಯಂತೆ ಸಂಸ್ಕೃತ ಪಸರಿಸುವ ಕೆಲಸಕ್ಕೆ ಟೊಂಕ ಕಟ್ಟಿ ನಿಂತಿದ್ದರು. ಪತ್ರಿಕೆ ಅಲ್ಲದೇ ಹಲವು ಸಂಸ್ಕೃತದ ಮೊಟ್ಟ ಮೊದಲುಗಳನ್ನು ನಿರ್ಮಿಸಿದ್ದಾರೆ. ಮೊದಲ ಸಂಸ್ಕೃತ ದಿನದರ್ಶಿಯನ್ನು ತಂದಿದ್ದಾರೆ.

“ಸುಧರ್ಮ” ಎ3 ಗಾತ್ರದ ಎರಡು-ಪುಟ, ಐದು-ಕಾಲಮ್ ಪತ್ರಿಕೆಯಾಗಿದೆ.2009 ರಲ್ಲಿ, “ಸುಧರ್ಮ” ಇ-ಪೇಪರ್ ಆವೃತ್ತಿ ಪ್ರಾರಂಭವಾಗಿದ್ದು ಜಗತ್ತಿನಾದ್ಯಂತ ಹಲವಾರು ಜನರು ಇದನ್ನು ಓದುತ್ತಿದ್ದಾರೆ.ಅಯ್ಯಂಗಾರ್ ಅವರ ಪುತ್ರ ಕೆ.ವಿ. ಸಂಪತ್ ಕುಮಾರ್ ಪ್ರಸ್ತುತ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ.ಅವರ ತಂದೆ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವ ಏಕೈಕ ಉದ್ದೇಶದಿಂದ ಈ ದಿನಪತ್ರಿಕೆ ಪ್ರಾರಂಭಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚಂದಾದಾರರನ್ನು ಹೊಂದಿದ್ದು, ಅಂಚೆ ಮೂಲಕ ಪತ್ರಿಕೆ ಕಳುಹಿಸುವ ವ್ಯವಸ್ಥೆಯೂ ಇದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಪತ್ ಕುಮಾರ್ ದಂಪತಿಗಳು ಪತ್ರಕರ್ತರಿಗೆ ಕೆಲ ದಿನ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿ ಮಾದರಿಯಾಗಿದ್ದರು.

ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ .ಎಸ್.ಜಯಲಕ್ಷ್ಮಿ ಅವರಿಗೆ 2 ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು. ಆದರೇ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ವಿಧಿವಶರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ