ಹಳೆ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಮುಖ ಪ್ರಶ್ನೋತ್ತರಗಳು. ಟಿಇಟಿ ಪರೀಕ್ಷಾರ್ಥಿಗಳಿಗೆ ತುಂಬಾ ಉಪಯುಕ್ತ.
1.ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ, ಪಾತ್ರಗಳು, ಸಂಭಾಷಣೆ, ಸಂದರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ಧತಿ.
= ಕಥನ ಪದ್ಧತಿ.
2.ಬೋಧನಾ ಕ್ರಿಯೆ ಪರಿಣಾಮಕಾರಿಯಾಗಲು ಪ್ರತ್ಯಕ್ಷ ಹಾಗೂ ಸಜೀವ ವಸ್ತುಗಳನ್ನು ಕೆಲವೊಮ್ಮೆ ಮಾದರಿಗಳನ್ನು ಉಪಯೋಗಿಸಿ ಕಲಿಸುವ ಪದ್ಧತಿ.
= ನಿದರ್ಶನ ಪದ್ಧತಿ.
3.ಉತ್ತಮ ಮಾತುಗಾರಿಕೆಯ ಲಕ್ಷಣ ಹೀಗಿರಬೇಕು.
= ಸಂದರ್ಭಕ್ಕನುಗುಣವಾಗಿ ಹಿತಮಿತವಾಗಿ ಮಾತನಾಡುವುದು.
4.ಒಂದು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಉತ್ತಮ ವಿಧಾನದಿಂದ ಪರಿಹಾರಕ್ಕಾಗಿ ಕೈಗೊಳ್ಳುವ ಪ್ರಕ್ರಿಯೆ.
= ಕ್ರಿಯಾ ಸಂಶೋಧನೆ.
5.ಒಂದು ನಿರ್ದಿಷ್ಟ ಪಠ್ಯಾಂಶಗಳನ್ನು ವಿದ್ಯಾರ್ಥಿಗಳು ತಾವೇ ಕಲಿಯಲು ವ್ಯವಸ್ಥೆ ಗೊಳಿಸಿರುವ ಕಲಿಕಾ ಸಾಮಗ್ರಿಗಳ ಮೂಲಕ ಕಲಿಯುವ ವಿಧಾನ.
= ಸ್ವಯಂ ಬೋಧಿನಿ ವಿಧಾನ.
6.ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಪರಿವರ್ತಿಸುವುದು.
= ಭಾಷಾಂತರ.
7.ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸಲು ಕಲಿಕೆಯತ್ತ ಆಸಕ್ತಿ ಮೂಡಿಸಿ ಪ್ರೇರಣೆ ನೀಡಲು ಪ್ರಶ್ನಿಸುವ ಪದ್ಧತಿ.
= ಪ್ರಶ್ನೋತ್ತರ ಪದ್ಧತಿ.
8.ಭಾಷೆಯು ಮೂಲಭೂತವಾಗಿ ಮೌಖಿಕ ಕ್ರಿಯೆ ನಂತರ ಪಡೆಯುವ ರೂಪ.
= ಬರಹ.
9.ಭಾಷೆಯ ಉಗಮದ ಬಗ್ಗೆ ಇರುವ ದೈವ ಮೂಲ ಸಿದ್ಧಾಂತದ ಪ್ರಕಾರ ಭಾಷೆ ಹೀಗೆ ಉದ್ಭವವಾಗಿದೆ.
= ಭಾಷೆ ಸೃಷ್ಟಿಕರ್ತ ನಿಂದ ಬಂದಿದೆ.
10.ವಿದ್ಯಾರ್ಥಿಗಳಲ್ಲಿ ಜ್ಞಾನ, ವರ್ತನೆ, ಕೌಶಲ್ಯ ಮತ್ತು ಮನೋಭಾವಗಳಲ್ಲಿನ ಬದಲಾವಣೆಗಳನ್ನು ಗುರುತಿಸುವ ನಿರಂತರ, ವ್ಯಾಪಕ ಮತ್ತು ನಿರ್ದಿಷ್ಟ ಪ್ರಕ್ರಿಯೆ.
= ಮೌಲ್ಯಮಾಪನ.
11.ಒಂದು ಮುದ್ರಿತ ಲಿಪಿಯನ್ನು ನೋಡಿ ಗಮನಿಸಿ ಅರ್ಥ ಮಾಡಿಕೊಂಡು ಧ್ವನಿ ರೂಪದಲ್ಲಿ ಅರ್ಥ ಬದ್ಧವಾಗಿ ಹೊರಹೊಮ್ಮಿಸುವ ಕ್ರಿಯೆ.
= ಓದುಗಾರಿಕೆ.
12.ಉತ್ತಮ ಮತ್ತು ಸುಂದರ ಕೈಬರಹದ ಕೌಶಲ್ಯಗೊಳಿಸಿ ಮಾನ್ಯತೆ ಪಡೆಯುವದು ಈ ಅಂಶದಿಂದ.
= ಬರವಣಿಗೆ ವಿನ್ಯಾಸದ ಸತತ ಅಭ್ಯಾಸದಿಂದ.
13.ಕವಿಯೊಬ್ಬನ ಕನಸು, ಕಲ್ಪನೆ, ಭಾವಾನುಭವಗಳನ್ನು ಸುಸಂಬದ್ಧವಾಗಿ ಮತ್ತು ಛಂದೋಬದ್ಧವಾಗಿ ಅಭಿವ್ಯಕ್ತಿ ಗೊಳ್ಳುವ ರಚನೆ ಇದು.
= ಪದ್ಯ ಸಾಹಿತ್ಯ.
14.ಆಡುವ ಮಾತು, ನಡೆಯುತ್ತಿರುವ ಕೆಲಸ, ಮಾಡುವ ಉದ್ದೇಶ ಈ ಭಾಷೆಯಲ್ಲಿ ನಡೆದಾಗ ಜನತೆಯ ಜೀವನದ ಮೇಲೆ ಸೂಕ್ತ ಪ್ರಭಾವ ಬೀರಲು ಸಾಧ್ಯವಾಗುವುದು.
= ಪ್ರಾಂತ್ಯ ಭಾಷೆ.
15.ಆರು ಸಾಲುಗಳ ಪದ್ಯವನ್ನು ಹೀಗೆಂದು ಕರೆಯುವರು.
= ಷಟ್ಪದಿ.
16.ಮನುಷ್ಯನ ಯೋಜನೆಗಳನ್ನು ಅಭಿವ್ಯಕ್ತಿಗೊಳಿಸುವ ಸಲುವಾಗಿ ಇರುವ ಒಂದು ಶಬ್ದ ಸಂಯೋಜನಾ ಮಾಧ್ಯಮವೇ ಭಾಷೆ ಎಂದು ಹೇಳಿದವರು.
= ಆಕ್ಸ್ಫರ್ಡ್ ನಿಘಂಟು.
17.ಶ್ರಮ ಪರಿಹಾರ ಸಿದ್ಧಾಂತದ ಪ್ರತಿಪಾದಕರು.
= ನೊಯಿರಿ.
18.ಆಲಿಸುವಿಕೆನ್ನು ಉತ್ತಮಪಡಿಸುವ ಪ್ರಮುಖ ಅಂಶಗಳು.
= ಆಸಕ್ತಿಯಿಂದ ವಸ್ತುನಿಷ್ಠತೆಯಿಂದ ಹೇಳುವವರನ್ನು ನೋಡುತ್ತಾ ಗ್ರಹಿಸುವುದು.
19.ಅನುಗಮನ ಪದ್ಧತಿಯ ಪ್ರತಿಪಾದಕರು.
= ಫ್ರಾನ್ಸಿಸ್ ಬೇಕನ್.
20.ವಿದ್ಯಾರ್ಥಿಯಲ್ಲಿ ಕಂಡುಬರುವ ಉತ್ತಮ ಮಾತುಗಾರಿಕೆಯ ಲಕ್ಷಣ ಹೀಗಿದೆ.
= ಉದ್ದೇಶಪೂರ್ವಕವಾಗಿ ಮಾನಸಿಕ ಸಿದ್ಧತೆಯಿಂದ ಸರಳವಾಗಿ ಅರ್ಥ ಬದ್ಧವಾಗಿ ವ್ಯಾಕರಣಬದ್ಧವಾಗಿ ಮಾತನಾಡುವುದು.
21.ಎಂಟನೆಯ ತರಗತಿ ಬಿ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆಶುಭಾಷಣ, ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಉದ್ದೇಶ.
= ಉತ್ತಮ ಮಾತುಗಾರನನ್ನಾಗಿಸಲು.
22.ಭಾಷೆ ಎನ್ನುವುದು ಅಭಿಪ್ರಾಯಗಳ ಅಭಿವ್ಯಕ್ತಿಯ ಒಂದು ವಿಧಾನ ಅಲ್ಲ ಅದೊಂದು ರೀತಿಯ ಆಲೋಚನೆ ಎಂದು ಹೇಳಿದವರು.
= ಎರ್ಧಮನ್.
23.ಸ್ಥೂಲ, ಸೂಕ್ಷ್ಮ ಗ್ರಹಿಕೆಯೊಂದಿಗೆ ರಸಭಾವಗಳ ಪ್ರಶಂಸೆ ಮತ್ತು ಅಲಂಕಾರ, ಛಂದಸ್ಸು ಒಳಗೊಂಡ ಬೋಧನೆ.
= ಕಾವ್ಯ ಬೋಧನೆ.
24.ಓದಿನಲ್ಲಿ ಹಿಮ್ಮರಳುವಿಕೆ ಉಂಟಾಗಲು ಕಾರಣ.
= ಅವಧಾನ ಏಕಾಗ್ರತೆ ಮತ್ತು ಅರ್ಥಗ್ರಹಣ ಇಲ್ಲದಿರುವುದು.
25.ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡುಬರುವ ದೋಷಗಳನ್ನು ನಿವಾರಿಸಲು ಕೈಗೊಳ್ಳುವ ಬೋಧನೆ.
= ಪರಿಹಾರ ಬೋಧನೆ.
26.ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವ ಮೌಲ್ಯಮಾಪನ.
= ನಿರಂತರ ಮೌಲ್ಯಮಾಪನ.
27.ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಉದ್ದೇಶಗಳಿಗನುಗುಣವಾಗಿ ನಿರ್ದಿಷ್ಟ ವಿಷಯಗಳನ್ನು ಅರ್ಥ ಬದ್ಧವಾಗಿ ವ್ಯವಸ್ಥಿತವಾಗಿ ಮತ್ತು ತಾರ್ಕಿಕವಾಗಿ ಜೋಡಿಸಿ ಪರಿಣಿತರು ಎಚ್ಚರಿಕೆಯಿಂದ ತಯಾರಿ ಮಾಡಿರುವುದು.
= ಪಠ್ಯಪುಸ್ತಕ.
28.ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಕುವೆಂಪುರವರ ಬಾಲ್ಯಜೀವನ ಮತ್ತು ಸಾಧನೆಗಳನ್ನು ವಿಡಿಯೋ ತೋರಿಸಿ ಮಹತ್ವ ಹೇಳುವುದು ಯಾವ ಬೋಧನೋಪಕರಣಗಳು ಉದಾಹರಣೆಯಾಗಿದೆ.
= ದೃಕ್ ಶ್ರವಣೋಪಕರಣಗಳು.
29.ವಿದ್ಯಾರ್ಥಿಗಳ ಸಾಧನೆಗಳನ್ನು ನಿರಂತರ ಮೌಲ್ಯಮಾಪನದ ಮೂಲಕ ಅಳೆಯುವ ಪರೀಕ್ಷೆಗಳನ್ನು ಶೈಕ್ಷಣಿಕವಾಗಿ ಕರೆಯುವುದು.
= ಘಟಕ ಪರೀಕ್ಷೆ.
30.ಭಾಷೆಯ ಪ್ರಾವೀಣ್ಯತೆ ಎಂದರೆ.
= ಭಾಷಾ ಕೌಶಲ್ಯಗಳಲ್ಲಿ ಪ್ರಬುದ್ಧತೆ ಪಡೆಯುವುದು.
31.ಭಾಷಾ ಬೋಧನೆಯಲ್ಲಿ ಪದ ಮಾಲ ಪದ್ಧತಿ ಎಂದರೆ.
= ಪದಗಳನ್ನು, ಪದಗಳ ಉಚ್ಚಾರಣೆ ಮತ್ತು ಅರ್ಥವನ್ನು ತಿಳಿಸಿ ಕೊಡುವುದರ ಮೂಲಕ ಓದು ಕಲಿಸುವುದು.
32.ಭಾಷಾ ಕಲಿಕೆ ಮತ್ತು ಬೋಧನೆಯ ಮನೋವೈಜ್ಞಾನಿಕ ನಿಯಮಗಳ ಸರಿಯಾದ ಕ್ರಮ.
= ಸಿದ್ಧತಾ ನಿಯಮ. ಅನುಕರಣ ನಿಯಮ. ಅಭ್ಯಾಸ ನಿಯಮ. ಪುನರ್ಬಲನ ಗೊಳಿಸುತ್ತಾ ಕಲಿಸುವುದು.
33.ಪ್ರಬಂಧ ಬೋಧನೆಯ ಉದ್ದೇಶ.
= ಸ್ವ ಅಭಿವ್ಯಕ್ತಿಯನ್ನು ಪೋಷಿಸಿ ಬೆಳೆಸುವುದು
34.ಭಾಷೆಯ ರಚನೆಯ ನಿಯಮ ಮತ್ತು ಪ್ರಯೋಗವನ್ನು ಕುರಿತು ಅಧ್ಯಯನ ಮಾಡುವುದು.
= ವ್ಯಾಕರಣ ಶಾಸ್ತ್ರ.
35.ನಿರ್ದಿಷ್ಟವಾದ ವಿಷಯಗಳಿಂದ ಒಂದು ಸಾಮಾನ್ಯ ತೀರ್ಮಾನದ ಕಡೆ ಸಾಗುವ ಪದ್ಧತಿ.
= ಅನುಗಮನ ಪದ್ಧತಿ.
36.ಬೋಧನಾ ಪದ್ಧತಿ ಎಂದರೆ.
= ಕಲಿಕೆಯನ್ನು ಸುಲಭ ಮತ್ತು ಪರಿಣಾಮಕಾರಿ ಮಾಡಲು ಶಿಕ್ಷಕರು ಅನುಸರಿಸುವ ಮಾರ್ಗ.
37.ಕಂದಪದ್ಯದ ಮೊದಲಾರ್ಧದಲ್ಲಿ ಬರುವ ಮಾತ್ರೆಗಳ ಸಂಖ್ಯೆ.
= ಮೂವತ್ತೆರಡು.
38.ಹತ್ತು ಬಾರಿ ಓದುವ ಬದಲು ಒಂದು ಬಾರಿ ಬರೆಯುವುದು ಎಂದು ಹೇಳುವುದು ಸಾಮಾನ್ಯ ಆದರೆ ಇದರಿಂದ ಬೆಳವಣಿಗೆಯಾಗುವುದು.
= ಸ್ಮರಣ ಶಕ್ತಿ ಬೆಳೆಯುತ್ತದೆ.
39.ಪದ್ಯವನ್ನು ರಾಗವಾಗಿ ಭಾವಪೂರ್ಣವಾಗಿ ಹಾಡುವ ಕ್ರಮವನ್ನು ಅಭ್ಯಾಸ ಮೂಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಈ ಸಾಮರ್ಥ್ಯ ಗಟ್ಟಿಯಾಗಿರುತ್ತದೆ.
= ರಸಸ್ವಾದನೆ ಮತ್ತು ಸೌಂದರ್ಯ ಪ್ರಜ್ಞ
MEGA DRIVE 2 | Dr.MCD
ಪ್ರತ್ಯುತ್ತರಅಳಿಸಿu a game 여수 출장마사지 of chance! 1 of 10 results 충청남도 출장마사지 for 구미 출장샵 'MEGA 제주도 출장안마 DRIVE 2' on Dr.MCD. 청주 출장마사지