ಶನಿವಾರ, ಜೂನ್ 11, 2022

ರಾಜ್ಯದ ವಿವಿಗಳಿಗೆ `UGC' ನಿವೃತ್ತಿ ವಯೋಮಿತಿ ಕಡ್ಡಾಯವಲ್ಲ : ಹೈಕೋರ್ಟ್ ಮಹತ್ವದ ಆದೇಶ

ರಾಜ್ಯದ ವಿವಿಗಳಿಗೆ `UGC' ನಿವೃತ್ತಿ ವಯೋಮಿತಿ ಕಡ್ಡಾಯವಲ್ಲ : ಹೈಕೋರ್ಟ್ ಮಹತ್ವದ ಆದೇಶ

10 Jun 2022.06:55 AM

ಬೆಂಗಳೂರು : ವಿಶ್ವವಿದ್ಯಾಲಯಗಳ ಬೋಧಕರ ನಿವೃತ್ತಿಯ ವಯಸ್ಸನ್ನು 62 ವರ್ಷದಿಂದ 65 ವರ್ಷಕ್ಕೆ ಹೆಚ್ಚಳ ಮಾಡಿ ಯುಜಿಸಿ (UGC) ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವುದು ರಾಜ್ಯ ಸರ್ಕಾರಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.


ಧಾರವಾಡದ ಕೃಷಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಚಿದಾನಂದ ಪಿ. ಮನ್ಸೂರ್, ಯುಜಿಸಿ ನಿಯಮಾವಳಿ ಅನ್ವಯಿಸುವ ಮೂಲಕ 65 ವರ್ಷದವರೆಗೆ ಸೇವೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಇದ್ದ ಪೀಠ ವಿವಿಗಳ ಬೋಧಕರ ನಿವೃತ್ತಿಯ ವಯಸ್ಸನ್ನು 62 ವರ್ಷದಿಂದ 65 ವರ್ಷಕ್ಕೆ ಹೆಚ್ಚಳ ಮಾಡಿ ಯುಜಿಸಿ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವುದು ರಾಜ್ಯದ ವಿವಿಗಳಿಗೆ ಕಡ್ಡಾಯವಲ್ಲ ಎಂದು ಆದೇಶಿಸಿದೆ.


ಇನ್ನು ಯುಜಿಸಿ 2018 ರ ನಿಯಮಗಳ ಕುರಿತು ರಾಜ್ಯ ವಿವಿಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ನಿವೃತ್ತಿಯ ವಯೋಮಿತಿ ನಿಗದಿಯ ವಿಚಾರವನ್ನು ರಾಜ್ಯ ವಿಶ್ವವಿದ್ಯಾಲಯಗಳಿಗೆ ವಿವೇಚನೆಗೆ ಬಿಟ್ಟಿದೆ ಎಂದು ಹೈಕೋರ್ಟ್ ತಿಳಿಸಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ