ಭಾನುವಾರ, ಆಗಸ್ಟ್ 14, 2016

ಇ - ಗವರ್ನನೆನ್ಸ (ಇ - ಆಡಳಿತ) (ಭಾಗ ೧)

ಇ-ಗವರ್ನೆನ್ಸ್‌

 

ಸೇವಾ ವಿತರಣೆ ವ್ಯವಸ್ಥೆಯಯನ್ನು ಮಾರ್ಪಾಡಿಸುವುದು

ರಾಷ್ಟ್ರೀಯ ಇ-ಆಡಳಿತ ಯೋಜನೆ ೨೦೦೬ ರಲ್ಲಿ ಪ್ರಾರಂಭಗೊಂಡು, ಎಲ್ಲಾ ಸರ್ಕಾರಿ ಸೇವೆಗಳು ಭಾರತ ರಾಷ್ಟ್ರಾದ್ಯಂತ ಸ್ಥಾಪನೆಗೊಳ್ಳುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಸಾಮಾನ್ಯ ಮನುಷ್ಯನಿಗೆ ಆತನ ನೆರೆಹೊರೆಯಲ್ಲಿ ಸುಲಭವಾಗಿ ಒದಗಿಸುವಂತೆ ಪ್ರಯತ್ನಿಸುತ್ತಿದೆ. ಆಗಸ್ಟ್ ೨೦೧೩ ರ ವರೆಗೆ ಸುಮಾರು ೯೭,೧೫೯ ಸಾಮಾನ್ಯ ಸೇವಾ ಕೇಂದ್ರಗಳು ವಿವಿಧ ಅಂಕಿತ ಹೆಸರುಗಳೊಂದಿಗೆ ಕಾರ್ಯಕಾರಿವಾಗಿರುತ್ತವೆ ಮತ್ತು ಜನರಿಗೆ ಸೇವೆಗಳನ್ನು ವತರಿಸಲು ಪ್ರಾರಂಭಿಸಿದೆ. ಹಲವಾರು ಸಂಸ್ಥೆಗಳಿಂದ, ಬಹು ಸ್ಪಷ್ಟವಾಗಿ ಸಾಮಾನ್ಯ ಸೇವಾ ಕೇಂದ್ರಗಳಿಂದ, ಗ್ರಾಮಿಣ ಪ್ರದೇಶಗಳು ಅಭ್ಯುದಯವಾಗುತ್ತಿರುವ ಐ. ಸಿ. ಟಿ ಉಪಕ್ರಮಗಳ ಲಾಭಗಳನ್ನು ಪಡೆಯಲು ಸಜ್ಜಾಗುತ್ತಿದ್ದು, ಭಾರತೀಯ ಅಭಿವ್ರದ್ಧಿ ದ್ವಾರದ ಪ್ರಾರಂಭ ಬಹು ಅಪೇಕ್ಷಿತ ಪರಿಮಿಡಿ ಹಾಗೂ ಸೇವೆಗಳನ್ನು, ಗ್ರಾಮೀಣ ಜನರ ಬದುಕಿನಲ್ಲಿ ವ್ಯತ್ಯಸವನ್ನುಂಟು ಮಾಡುವ, ಪ್ರಾದೇಶಿಕ ಭಾಷೆಗಳಲ್ಲಿ ನೀಡುತ್ತಿದೆ.

ಆನ್ ಲೈನ್ ನಾಗರೀಕ ಸೇವೆಗಳು, ರಾಜ್ಯ ಸ್ಪಷ್ಟ ಈ-ಆಡಳಿತ ಉಪಕ್ರಮಗಳು ಮತ್ತು ಆನ್ ಲೈನ್ ಕಾನೂನು ಸೇವೆಗಳು, ಸಂಚಾರಿ ಆಡಳಿತ, ಮಾಹಿತಿ ಹಕ್ಕು, ಇತ್ಯಾದಿ ನೀಡುವುದರ ಮೂಲಕ ಭಾರತದಲ್ಲಿ ಚಲನೆಯಲ್ಲಿರು ಈ-ಆಡಳಿತ ಚಳವಳಿಯನ್ನು ನೆರವು ನೀಡುವುದು ಈ-ಆಡಳಿತ ವಿಭಾಗದ ಮುಖ್ಯ ಕೇಂದ್ರಬಿಂದು ವಾಗಿದೆ. ಗ್ರಾಮ ಮಟ್ಟದ ಉದ್ಯಮಿಗಳಿಗೆ ಅಧಿಕಾರ ನೀಡುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಸಂಪನ್ಮೂಲ ವಸ್ತುಗಳಿಂದ ಅಭಿವ್ರದ್ಧಿಗೊಳಿಸಲು ಮತ್ತು ತಮ್ಮದೆಯಾದ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲು, ಭಾರತೀಯ ಅಭಿವ್ರದ್ಧಿ ದ್ವಾರವು ಗ್ರಾಮ ಮಟ್ಟದ ಉದ್ಯಮಿಗಳ ಮೂಲೆ “ವಿ.ಎಲ್.ಇ. ಕಾರ್ನರ್” ವೆಂಬ ಒಂದು ಹೊಸ ಭಾಗವನ್ನು ಸೇರ್ಪಡೆ ಮಾಡಿದೆ.

ಭಾರತದಲ್ಲಿ ಇ-ಆಡಳಿತ

ಈ ವಿಭಾಗವು ರಾಷ್ಟ್ರೀಯ ಇ ಆಡಳಿತ ಯೋಜನೆ , ಉಪಕ್ರಮಗಳು , ಸಂಪನ್ಮೂಲಗಳು ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ -ಆಡಳಿತ ಉಪಕ್ರಮಗಳು ಬಗ್ಗೆ ವಿವರಗಳನ್ನು ನೀಡುತ್ತದೆ.

ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಕಾಯಿದೆ ಭಾರತದ ಸಂಸತ್ತಿನ ಒಂದು ಕಾಯಿದೆಯಾಗಿದೆ. ಇದು " ನಾಗರಿಕರಿಗೆ ಮಾಹಿತಿ ಹಕ್ಕಿನ ಕಾರ್ಯಸಾಧ್ಯ ಆಡಳಿತ ಹೊರಟಿಸಿರುವ ಅಧಿನಿಯಮವಾಗಿದೆ".ಈ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ, ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ.

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ  ಭಾರತದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶವನ್ನು ಭವಿಷ್ಯತ್ತಿನ ಜ್ನಾನವಲಯಕ್ಕೆ ತಕ್ಕಂತೆ ರೂಪಿಸುವ ಯೋಜನೆ.ಈ ವಿಭಾಗವು ಇದರಮಾಹಿತಿ ಬಗ್ಗೆ ವಿವರಗಳನ್ನು ನೀಡುತ್ತದೆ.

ಆಧಾರ್‌

ಆಧಾರ್‌, ಭಾರತ ಸರ್ಕಾರದ ಪರವಾಗಿ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ನೀಡುವ ೧೨ ಅಂಕೆಗಳ ಒಂದು ವೈಯಕ್ತಿಕ ಗುರುತಿನ ಸಂಖ್ಯೆಯಾಗಿದೆ.ಈ ವಿಭಾಗವು ಇದರ ಮಾಹಿತಿ ಬಗ್ಗೆ ವಿವರಗಳನ್ನು ನೀಡುತ್ತದೆ.

ಯೋಜನೆಗಳು

ಈ ವಿಭಾಗವು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಲಾಗಿದೆ.

ಇ - ಆಡಳಿತ ಸಂಪನ್ಮೂಲ

ಈ ವಿಭಾಗವು ಇ - ಆಡಳಿತ ಸಂಪನ್ಮೂಲ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಆನ್ ಲೈನ್ ಸೇವೆಗಳು

ಈ ವಿಭಾಗವು ಲೈನ್ ನಾಗರೀಕ ಸೇವೆಗಳು ಮತ್ತು ಸಂಕ್ಷಿಪ್ತ ಪರಿಚಯ ವಿವಿಧ ಸಂಬಂಧಿತ ಉಪಯುಕ್ತ ಲಿಂಕ್ ಮಾಹಿತಿ ಬಗ್ಗೆ ವಿವರಗಳನ್ನು ನೀಡುತ್ತದೆ.

ಮೊಬೈಲ್ ಆಡಳಿತ

ಈ ವಿಭಾಗವು ವಿವರವಾದ ಪರಿಚಯದೊಂದಿಗೆ ಭಾರತ ಮತ್ತು ವಿವಿಧ ಸಂಬಂಧಿತ ಉಪಯುಕ್ತ ಲಿಂಕ್ ಮಾಹಿತಿಯನ್ನು ಮೊಬೈಲ್ ಆಡಳಿತ ಉದಯೋನ್ಮುಖ ಬಗ್ಗೆ ವಿವರಗಳನ್ನು ನೀಡುತ್ತದೆ.

ವಿ.ಎಲ್.ಇ. ಕಾರ್ನರ್

ಈ ವಿಭಾಗವು ಸೇವಾ ಕೇಂದ್ರಗಳ , ವಿವಿಧ ಉಪಯುಕ್ತ ಲಿಂಕ್ ಮತ್ತು ಸಂಬಂಧಿತ ಸೇವೆಗಳ ಬಗ್ಗೆ ವಿವರಗಳನ್ನು ನೀಡುತ್ತದೆ.

ಇ-ಆಡಳಿತ-ಚರ್ಚಾ ವೇದಿಕೆ

ಗುರುತಿಸಿದ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ/ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿರುವುದು ಈ ಪೋರ್ಟಲ್ ಚರ್ಚಾ ವೇದಿಕೆಯ ವೈಶಿಷ್ಟ್ಯ. ಚರ್ಚಿಸಲು ಹಾಗೂ ಬಳಕೆದಾರರು ಸೃಜಿಸಿ ಸಲ್ಲಿಸಿರುವ ವಿಷಯವನ್ನು ಪ್ರಕಟಿಸಲು ಈ ವೆಬ್ ತಂತ್ರಾಂಶವನ್ನು ಬಳಸಲಾಗುತ್ತದೆ. ಈ ತಾಣದಲ್ಲಿ ಸಂಬಂಧಿತ ವಿಷಯಗಳ ಬಗೆಗಿನ ಚರ್ಚೆಗೆ ಅವಕಾಶವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ