ಬುಧವಾರ, ಜನವರಿ 30, 2019

ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ

ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ


CONTENTS


ಪೀಠಿಕೆ


ಐ.ಟಿ. ಕಾರ್ಯಪಡೆ


ಉದ್ದೇಶಗಳು


ಹಿನ್ನೆಲೆ


ಕೇಂದ್ರ ಸರ್ಕಾರದಿಂದ ಪ್ರಾಯೋಜಿತ ಯೋಜನೆಯಾದ “ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಡಿಸೆಂಬರ್ 2004 ರಂದು ಚಾಲನೆಯಾಗಿರುತ್ತದೆ. ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಕೌಶಲ್ಯಗಳನ್ನು ಪಡೆಯುವ ಅವಕಾಶಗಳನ್ನು ನೀಡುವುದು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ನೆರವಿನಿಂದ ಕಲಿಕೆಯ ಪ್ರಕ್ರಿಯೆಯನ್ನು ಸಾದರಪಡಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯು ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ತಡೆಗಳಿಂದಾದ ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸವನ್ನು ಹೋಗಲಾಡಿಸುವಲ್ಲಿ ಇದು ಪ್ರಮುಖ ವೇಗವರ್ಧಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಸ್ಥಿರತೆ ಆಧಾರದ ಮೇರೆಗೆ ಗಣಕಯಂತ್ರ ಪ್ರಯೋಗಾಲಯ (ಕಂಪ್ಯೂಟರ್ ಲ್ಯಾಬ್) ಸ್ಥಾಪಿಸಲು ಈ ಯೋಜನೆ ನೆರವು ನೀಡುತ್ತದೆ.  ಕೇಂದ್ರೀಯ ವಿದ್ಯಾಲಯಗಳಲ್ಲಿ ಮತ್ತು ನವೋದಯ ವಿದ್ಯಾಲಯಗಳಲ್ಲಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯಾಗಿ ಕಾರ್ಯನಿರ್ವಹಿಸಲು ಸ್ಮಾರ್ಟ್(SMART)ಶಾಲೆಗಳ ಸ್ಥಾಪಿಸುವ ಗುರಿ ಇರಿಸಿಕೊಂಡಿದೆ ಮತ್ತು ಇದರಿಂದ ನೆರೆಹೊರೆಯ ಶಾಲೆಗಳ ವಿದ್ಯಾರ್ಥಿಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪ್ರಚುರಪಡಿಸುವ ಉದ್ದೇಶವೂ ಇದರದ್ದಾಗಿದೆ.

ಈ ಯೋಜನೆಯು ಪ್ರಸ್ತುತ ಸರ್ಕಾರಿ ಮತ್ತು ಸರ್ಕಾರದ ನೆರವು ಪಡೆಯುತ್ತಿರುವ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅನುಷ್ಠಾನವಾಗುತ್ತಿದೆ. ಗಣಕಯಂತ್ರ, ಇತರ ಸಾಮಗ್ರಿಗಳ ಮತ್ತು ಶೈಕ್ಷಣಿಕ ಸಾಪ್ಟ್ ವೇರ್ ಖರೀದಿ, ಶಿಕ್ಷಕರಿಗೆ ತರಬೇತಿ ಮತ್ತು ಅಂತರ್ಜಾಲದ ಜೋಡಣೆ, ಇತ್ಯಾದಿಗಳಿಗಾಗಿ ಈ ಯೋಜನೆಯಿಂದ ನೆರವು ನೀಡಲಾಗುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ಯೋಜನೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಗುಂಪಿನ (PM&EG)  ಶಿಫಾರಸ್ಸಿನ ಮೇರೆಗೆ ರಾಜ್ಯಕ್ಕೆ ಮತ್ತು ಇತರೆ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಲಾಗುವುದು.

ಪೀಠಿಕೆ

ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ICT) ಸಾಮಾಜಿಕ ಪರಿವರ್ತನೆಯ ಮತ್ತು ರಾಷ್ಟ್ರೀಯ ಮುನ್ನಡೆಯ ಪ್ರಮುಖ ವೇಗವರ್ಧಕವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತಿದೆ. ಆದಾಗ್ಯೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ICT) ಸಿದ್ಧತೆಯ ಹಂತಗಳಲ್ಲಿನ ಅಸಮಾನತೆಗಳು ಮತ್ತು    ಬಳಕೆಯಲ್ಲಿನ ಅಸಮಾನತೆಯನ್ನು ಪರಿವರ್ತಿಸಿಕೊಂಡು, ದೇಶದ ಆರ್ಥಿಕ ಬೆಳವಣಿಗೆಯ ಮಟ್ಟದ ಮೇಲೆ ಪರಿಣಾಮ ಬೀರಬಹುದಾಗಿದೆ.

ಆದುದರಿಂದ ನಿರಂತರ ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಗಾಗಿ ಸೆಣಸುತ್ತಿರುವ ದೇಶಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಅರಿವು ಮತ್ತು ಬಳಕೆ ಅತಿ ನಿರ್ಣಾಯಕವಾಗಿರುತ್ತದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಬಳಕೆಯಲ್ಲಿ ಭಾರತವು ಭೌಗೋಳಿಕವಾಗಿ ಮತ್ತು  ಜನಸಂಖ್ಯೆಯಲ್ಲಿ ಅಪಾರ ವ್ಯತ್ಯಾಸವನ್ನು ತೋರುತ್ತದೆ. ವಿಶ್ವದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದಲ್ಲಿ ಭಾರಿ ಕಾರ್ಯಪಡೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ತಂತ್ರಜ್ಞಾನದ  ಗುಚ್ಛಗಳಾದ (ಕ್ಲಸ್ಟರು) ಬೆಂಗಳೂರು ಮತ್ತು ಗುಡಗಾಂ ಅಥವ  ಹೆಚ್ಚು ಆದಾಯದ ಮೇಲಿನ ಹಂತದ ಮಧ್ಯವರ್ತಿಗಳಲ್ಲಿ ಅತಿ ಹೆಚ್ಚಿನ ಬಳಕೆಯನ್ನು ಕಾಣಬಹುದಾಗಿದೆ. ಇನ್ನೊಂದು ಆರೋಪವೆಂದರೆ ದೇಶದ ಅತಿ ಹೆಚ್ಚಿನ ಭಾಗಗಳಲ್ಲಿ ಟೆಲಿಫೋನ್ ಸಂಪರ್ಕ ಕೂಡ ಇರುವುದಿಲ್ಲ.

ಐ.ಟಿ. ಕಾರ್ಯಪಡೆ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಮತ್ತು ಸಾಪ್ಟ್ ವೇರ್ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಪಡೆ (ಐ.ಟಿ. ಕಾರ್ಯಪಡೆ)

ಪ್ರಧಾನ ಮಂತ್ರಿಗಳಿಂದ ಜುಲೈ 1998 ರಲ್ಲಿ ನಿಯೋಜಿಸ್ಪಟ್ಟ ಶಾಲೆಗಳೂ ಸೇರಿದಂತೆ ಶಿಕ್ಷಣ ವಲಯದಲ್ಲಿ ಮಾಹಿತಿ ತಂತ್ರಜ್ಞಾನದ ಸೇರ್ಪಡೆ ಕುರಿತು ಕೆಲ ನಿರ್ಧಿಷ್ಟ ಶಿಫಾರಸ್ಸುಗಳನ್ನು ಮಾಡಿರುತ್ತದೆ. ಮುಖ್ಯ ಪರಿಚ್ಛೆದಗಳನ್ನು ಈ ಕೆಳಗೆ ನಮೂದಿಸಲಾಗಿದೆ:

ಗಣಕಯಂತ್ರಗಳನ್ನು ಖರೀದಿಸುವ ಇಚ್ಛೆ ಇರುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಥವ ಶಾಲೆಗಳಿಗೆ ಅನುಕ್ರಮವಾಗಿ ವಿದ್ಯಾರ್ಥಿ ಗಣಕಯಂತ್ರ ಯೋಜನೆ, ಶಿಕ್ಷಕ ಗಣಕಯಂತ್ರ ಯೋಜನೆ ಮತ್ತು ಶಾಲಾ ಗಣಕಯಂತ್ರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಆಕರ್ಷಕ ಹಣಕಾಸಿನ ನೆರವಿನೊಡನೆ ಇವುಗಳನ್ನು ಖರೀದಿಸಬಹುದಾಗಿದೆ. ಈ ಯೋಜನೆಗಳನ್ನು ಕೆಲವೊಂದು ತೊಡಗುವಿಕೆಗಳಿಂದ ಬೆಂಬಲಿಸಲಾಗಿದ್ದು, ಗಣಕಯಂತ್ರಗಳ ಬೆಲೆಯಲ್ಲಿ ಕಡಿತ, ಬ್ಯಾಂಕಿನಿಂದ ಸುಲಭ ಕಂತಿನ ಸಾಲ, ಮಾಹಿತಿ ತಂತ್ರಜ್ಞಾನ ಕಂಪನಿಗಳಿಂದ ಮತ್ತು ಇತರೆ ವಾಣಿಜ್ಯ ಗೃಹಗಳಿಂದ ಗಣಕಯಂತ್ರಗಳ ದಾನ, ಅನಿವಾಸಿ ಭಾರತೀಯ ಸಂಸ್ಥೆಗಳಿಂದ ಗಣಕಯಂತ್ರಗಳ ಬೃಹತ್ ಪ್ರಮಾಣದ ದಾನ, ದೊಡ್ಡ ಪ್ರಮಾಣದಲ್ಲಿ ಆಮದು ಮಾಡಲು ದರದಲ್ಲಿ ಸೋಡಿ, ಬಹುಮುಖಿ ಹಣಕಾಸಿನ ನೆರವು, ಇತ್ಯಾದಿಗಳನ್ನು ಪರಿಚಯಿಸಲಾಗಿದೆ.

ಗಣಕಯಂತ್ರಗಳ ಮತ್ತು ಅಂತರ್ಜಾಲದ ಲಭ್ಯತೆಯ ವ್ಯವಸ್ಥೆಯನ್ನು ಶಾಲೆಗಳಲ್ಲಿ, ಪಾಲಿಟೆಕ್ನಿಕ್ ಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ 2003 ರ ಒಳಗೆ ಮಾಡಲಾಗುವುದು.

ಸ್ಮಾರ್ಟ್ ಶಾಲೆಗಳ ಪರಿಕಲ್ಪನೆಯು ಕೇವಲ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಪ್ರಚೋದಿಸದೆ, ಮುಂದಿನ ಸಹಸ್ರಮಾನದಲ್ಲಿ ಬಹು ಮುಖ್ಯವಾಗಿರುವ ಕೌಶಲ್ಯಗಳ ಮತ್ತು ಮೌಲ್ಯಗಳ ಬಳಕೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಇದನ್ನು ಪ್ರತಿ ರಾಜ್ಯದಲ್ಲಿ ಪ್ರಾಯೋಗಿಕ ಆಧಾರದಮೇರೆಗೆ ಆರಂಭಿಸಲಾಗುವುದು. ಇದರ ಉದ್ದೇಶಗಳು ಹೀಗಿವೆ:

ಉದ್ದೇಶಗಳು

ಗ್ರಾಮೀಣ ಪ್ರದೇಶಗಳ ಮುಖ್ಯವಾಗಿ ಪ್ರೌಢ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಬಳಕೆಯನ್ನು ಉತ್ತೇಜಿಸಲು ಸೂಕ್ತ ವಾತಾವರಣವನ್ನು ನಿರ್ಮಿಸಲಾಗುವುದು. ಇಂತಹ ವಾತಾವರಣದ ಮುಖ್ಯಾಂಶಗಳೆಂದರೆ ಉಪಯೋಗಿಸುವ ಸಲಕರಣೆಗಳ ಲಭ್ಯತೆ, ಅಂತರ್ಜಾಲದ ಸಂಪರ್ಕ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಸಾಕ್ಷರತೆಯ ಪ್ರಚೋದನೆ.

ಆನ್ ಲೈನ್  ಮತ್ತು ಉಪಯೋಗಿಸುವ ಸಲಕರಣೆಗಳ ಮುಖೇನ ಗುಣಮಟ್ಟದ ಪರಿವಿಡಿಯ ಲಭ್ಯತೆಯನ್ನು ಖಾಸಗಿ ಕ್ಷೇತ್ರ ಮತ್ತು ಎಸ್.ಐ.ಈ.ಟಿಗಳಿಂದ ಖಾತ್ರಿಪಡಿಸುವುದು.

ಬೋಧನೆ ಮತ್ತು ಕಲಿಕೆಗಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉಪಕರಣಗಳ ಬಳಕೆಯಿಂದ ಪ್ರಸ್ತುತ ವಿರುವ ಪಠ್ಯಕ್ರಮ ಮತ್ತು (ಶಿಕ್ಷಣಶಾಸ್ತ್ರ )ಪೆಡಗಾಗಿಯನ್ನು ಪುಷ್ಠಿಕರಿಸಲಾಗುವುದು.

ಉನ್ನತ ಶಿಕ್ಷಣ ಮತ್ತು ಉಪಯುಕ್ತ ಉದ್ಯೋಗಕ್ಕಾಗಿ ಬೇಕಿರುವ (ಡಿಜಿಟಲ್ ಲೋಕದ)ಅಂಕೀಯ ಕೌಶಲ್ಯಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುವುದು.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉಪಕರಣಗಳ ಬಳಕೆಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪರಿಣಾಮಕಾರಿ ಮತ್ತು ಸೂಕ್ತ ಕಲಿಕಾ ವಾತಾವರಣವನ್ನು ನೀಡಲು.

ಸ್ವ-ಕಲಿಕೆಯನ್ನು ಅಭಿವೃದ್ಧಿಪಡಿಸಿ ವಿಮರ್ಶಾತ್ಮಕ ಯೋಚನೆಯನ್ನು ಮತ್ತು ವಿಶ್ಲೇಷ*ಣೆಯ ಕೌಶಲ್ಯವನ್ನು ಪ್ರಚೋದಿಸುವುದು. ಇದು ಶಾಲಾ ಕೊಠಡಿಯ ವಾತಾವರಣವನ್ನು ಶಿಕ್ಷಕ ಕೇಂದ್ರಿತದಿಂದ ವಿದ್ಯಾರ್ಥಿಕೇಂದ್ರಿತವಾಗಿ ಪರಿವರ್ತನೆ ಮಾಡುತ್ತದೆ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉಪಕರಣಗಳು ಬಳಕೆಯನ್ನು ದೂರ ಶಿಕ್ಷಣ ಸೇರಿದಂತೆ ದೃಕ್ ಶ್ರವಣ ಮಾಧ್ಯಮದ ಮತ್ತು ಉಪಗ್ರಹ ಆಧಾರಿತ ಸಲಕರಣೆಗಳ ಉಪಯೋಗವನ್ನು ಪ್ರಚೋದಿಸುತ್ತದೆ.

ಮೂಲ:ಪೋರ್ಟಲ್ ತಂಡ

ಶಿಕ್ಷಣದಲ್ಲಿ ಇ-ಆಡಳಿತ

ಶಿಕ್ಷಣದಲ್ಲಿ ಇ-ಆಡಳಿತ


CONTENTS


ಇ- ಆಡಳಿತದ ಉದ್ದೇಶಗಳು


ಇ-ಆಡಳಿತ ಯೋಜನೆಗಳ ಅನುಷ್ಟಾನ ಪೂರ್ವದ ಇಲಾಖಾ ಹಿನ್ನೋಟ


ಇ-ಆಡಳಿತ ಅನುಷ್ಟಾನಗೊಳಿಸುವಲ್ಲಿ ಎದುರಿಸಿದ ಸವಾಲುಗಳು


ಇ- ಆಡಳಿತ ಪ್ರಾರಂಭದ ಅಪೇಕ್ಷಿತ ಫಲಗಳು


ಇ ಎಮ್ ಐ ಎಸ್ (ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆ)


ಡೈಸ್ ತಂತ್ರಾಂಶ


ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯು ನಿರ್ವಹಿಸುವ ಪ್ರಮುಖ ಮಾಡ್ಯೂಲ್ ಗಳು


ಇ-ಆಡಳಿತ


ಇ ಎಮ್ ಐ ಎಸ್(ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆ)


ಶಿಕ್ಷಣ ವಾಹಿನಿ


ಹೆಚ್.ಆರ್.ಎಂ.ಎಸ್.


ಇತರೆ ತಂತ್ರಾಂಶಗಳು


ಸುತ್ತೋಲೆಗಳು


ಹಿನ್ನೆಲೆ

ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರದ ಬಹಳ ಹಳೆಯದಾದ, ದೊಡ್ಡದಾದ, ಪ್ರಮುಖವಾದ ಇಲಾಖೆಯಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಾವಿರಾರು ಶಾಲೆಗಳು, ಲಕ್ಷಾಂತರ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಇಲಾಖೆಯಡಿಯಲ್ಲಿ ಒಂದು ಕೋಟಿಗೂ ಮೀರಿ ವಿಧ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಸಂವಿಧಾನದ 45ನೇ ಅನುಚ್ಛೇದದ ಪ್ರಕಾರ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ, ಗುಣಾತ್ಮಕ ಶಿಕ್ಷಣವನ್ನು ನೀಡುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಟ್ಟಬದ್ಧ ಜವಾಬ್ದಾರಿಯಾಗಿದೆ.

ಈ ನಿಟ್ಟಿನಲ್ಲಿ ಇಲಾಖೆಯು ಹಲವಾರು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸಹಯೋಗದೊಂದಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆಯನ್ನುಹಮ್ಮಿಕೊಂಡಿದ್ದು ನಿಗದಿತ ಅವಧಿಯಲ್ಲಿ ಗುರಿಯನ್ನು ಸಾಧಿಸಲು ಕಾರ್ಯಕ್ರಮವನ್ನು ನಿರೂಪಿಸಲಾಗಿದೆ. ಪ್ರತಿ ಮಗುವಿಗೂ ಪ್ರಾಥಮಿಕ ಶಿಕ್ಷಣವನ್ನು ನೀಡಲು ಶೇಕಡ 100 ರಷ್ಟು ಅವಕಾಶ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ರಾಜ್ಯವು ಇತ್ತೀಚಿನ ದಶಕಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ದೇಶದಲ್ಲಿಯೇ ಮೂಂಚೂಣಿಯಲ್ಲಿರುವ ರಾಜ್ಯ ಎಂದು ಪರಿಗಣಿಸಲಾಗಿದೆ.

ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಾಗೂ ಪ್ರೌಢಶಾಲೆಗಳಲ್ಲಿ ಹಾಗೂ ಅನುದಾನಿತ, ಅನುದಾನರಹಿತ ವಿಧ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮಾಹಿತಿ ಸಂಗ್ರಹ ಹಾಗೂ ಕ್ರೋಢಿಕರಣ ಮಾಡುವುದು ಹಾಗೂ ವಿದ್ಯಾರ್ಥಿಗಳ ತರಗತಿಗಳಿಗೆ ಅನುಗುಣವಾಗಿ  ದಾಖಲಾತಿ, ಹಾಜರಾತಿ, ವಯಸ್ಸು, ಲಿಂಗ ಹಾಗೂ ವಿವಿಧ ಸಾಮಾಜಿಕ ಗುಂಪುಗಳನ್ನು ಆಧರಿಸಿ, ಅಂಕಿಅಂಶಗಳನ್ನು  ಸಂಗ್ರಹಿಸುದು  ಒಂದು ಸವಾಲಿನ  ಕಾರ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಇಲಾಖೆಯು ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ, ಇ-ಆಡಳಿತ ಘಟಕವನ್ನು ಇಲಾಖೆಯಲ್ಲಿ ಅನುಷ್ಠಾನಗೊಳಿಸುವುದರ ಮೂಲಕ ಆಡಳಿತದಲ್ಲಿ ವಸ್ತುನಿಷ್ಟವಾದ, ಪಾರದರ್ಶಕವಾದ ಮಾಹಿತಿಯನ್ನು ಅತೀ ವೇಗವಾಗಿ ಸಾರ್ವಜನಿಕರಿಗೆ ಹಾಗೂ ಇಲಾಖೆಗೆ ನೀಡುವುದರಲ್ಲಿ ಯಶಸ್ವಿಯಾಗಿದೆ.

ಇಲಾಖೆಯಲ್ಲಿ ಇ-ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಶೈಕ್ಷಣಿಕ ಉಪಗ್ರಹದ ಸಹಾಯದಿಂದ ಉಪಗ್ರಹ ಆಧಾರಿತ ತರಬೇತಿಗಳನ್ನು ಶಿಕ್ಷಕರಿಗೆ ಹಾಗೂ ಕ್ಷೇತ್ರ ಹಂತದ ಅಧಿಕಾರಿಗಳಿಗೆ ನೀಡುವಲ್ಲಿ ಮತ್ತು ಪ್ರಗತಿಯನ್ನು ಅವಲೋಕನ ಮಾಡಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಕಾರ್ಯಕ್ರಮಗಳಿಗಾಗಿ ಇಲಾಖೆಯು ಡಿ. ಎಸ್. ಇ ಆರ್.ಟಿ. ಬೆಂಗಳೂರಿನಲ್ಲಿ ತನ್ನದೇ ಆದ ಸ್ಟುಡಿಯೋವನ್ನು ಸ್ಥಾಪಿಸಿ, ಅಪ್ ಲಿಂಕ್ ವ್ಯವಸ್ಥೆಯನ್ನೂ ಸಹ ಮಾಡಿದೆ.ಕ್ಷಣಿಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಸಾರಮಾಡಲು ಜಿಲ್ಲೆ ಮತ್ತು ಬ್ಲಾಕ್ ಹಂತಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನೂ ಸಹ ಸ್ಥಾಪಿಸಲಾಗಿದೆ.

ಇ-ತಂತ್ರಜ್ಞಾನವನ್ನು ತರಗತಿ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ, ಮೊದಲ ಹಂತದಲ್ಲಿ ಚಾಮರಾಜನಗರ ಜಿಲ್ಲೆಯ ಎಲ್ಲಾ ಶಾಲೆಗಳನ್ನು, ಗುಲ್ಬರ್ಗಾ ಜಿಲ್ಲೆ 800 ಶಾಲೆಗಳನ್ನು ಹಾಗೂ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಒಂದು ಕ್ಲಸ್ಟರ್ ನಲ್ಲಿರುವ 18 ಶಾಲೆಗಳನ್ನು ಎಜುಸ್ಯಾಟ್ ಯೋಜನೆಗೆ ಒಳಪಡಿಸಲಾಯಿತು. ವಿವಿಧ ವಿಷಯಗಳಲ್ಲಿ ಬರುವ ಕ್ಲಿಷ್ಟ ಅಂಶಗಳನ್ನು ಹೊಂದಿರುವ ಅಧ್ಯಾಯಗಳನ್ನು ಗುರುತಿಸಿ, ವಿಷಯ ತಜ್ಞರಿಂದ ಅಧ್ಯಾಯಗಳನ್ನು ಈ ಶಾಲೆಗಳಲ್ಲಿ ಮಕ್ಕಳಲ್ಲಿ ಉತ್ತಮ ಕಲಿಕೆಯನ್ನು ಉಂಟುಮಾಡಲು ಪ್ರಸಾರ ಮಾಡಲಾಗುತ್ತಿದೆ.ಈ ಶಾಲೆಗಳು ಟಿ.ವಿ. ಮತ್ತು ಸ್ವೀಕೃತಿ ಕೇಂದ್ರವನ್ನು ಹೊಂದಿವೆ.

ಇ - ಆಡಳಿತವು ಮಾಹಿತಿ ಸಂವಹನ ತಂತ್ರಜ್ಞಾನವನ್ನು ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಬಳಸುವುದರ ಮೂಲಕ ಇಲಾಖೆಯು ನೀಡುವ ಸೇವೆಗಳನ್ನು ಉತ್ತಮವಾಗಿ ಮತ್ತು ಅತೀ ಶೀಘ್ರವಾಗಿ ಒದಗಿಸುವ ಮಹತ್ತರವಾದ ಆಶಯದೊಂದಿಗೆ ಕಾರ್ಯಪ್ರವೃತ್ತವಾಗಿದೆ.

ಇ- ಆಡಳಿತದ ಉದ್ದೇಶಗಳು

ಸಮಯಕ್ಕೆ ಸರಿಯಾಗಿ ವಸ್ತುನಿಷ್ಠ ವಿವರವಾದ ಮಾಹಿತಿಯನ್ನು ನೀಡುವುದು ಹಾಗೂ ಇದರಿಂದಾಗಿ ಆಡಳಿತಾಧಿಕಾರಿಗಳ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು.


ಮಾಹಿತಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಉಪಯೋಗಿಸುವುದರ ಮೂಲಕ ಶಿಕ್ಷಕರು ಮತ್ತು ಮಕ್ಕಳಲ್ಲಿ ಶಿಕ್ಷಣದ ಗುಣಾತ್ಮಕತೆಯನ್ನು ಹೆಚ್ಚಿಸುವುದು.


ಪರಿಣಾಮಕಾರಿಯಾದ ಸಂವಹನ ಮಾಧ್ಯಮದ ಮೂಲಕ ಅತೀ ದೂರದ ಎಲ್ಲ ಪ್ರದೇಶಗಳಿಗೂ ತಂತ್ರಜ್ಞಾನದ ಬೆಳವಣಿಗೆಯನ್ನು ವಿಸ್ತರಿಸುವುದು.


ಇಲಾಖೆಯ ಆಡಳಿತದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದರ ಮೂಲಕ ಕಾರ್ಯವೈಖರಿಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದು


ಇ-ಆಡಳಿತ ಯೋಜನೆಗಳ ಅನುಷ್ಟಾನ ಪೂರ್ವದ ಇಲಾಖಾ ಹಿನ್ನೋಟ

ಇಲಾಖೆಯ ಪ್ರತಿ ಕಛೇರಿಗಳಲ್ಲಿ ಸ್ವೀಕರಿಸುವ ಪತ್ರಗಳ ವಿವರಗಳನ್ನು ಪತ್ರ ಸ್ವೀಕೃತಿ ರಿಜಿಸ್ಟರನಲ್ಲಿ ಪ್ರತದ ವಿವರಗಳನ್ನು ನಮೂದಿಸಿ ನಿರ್ವಹಣೆ ಮಾಡಲಾಗುತ್ತಿತ್ತು


ಹೊಸ ಕಡತಗಳ ಸೃಷ್ಟಿಸುವುದು, ಕಡತಗಳ ಚಲನವಲನ, ಕಡತಗಳ ಮುಕ್ತಾಯದ ವಿವರಗಳನ್ನು ಪ್ರತ್ಯೇಕವಾಗಿ ರಿಜಿಸ್ಟರನಲ್ಲಿ ನಮೂದಿಸಲಾಗುತ್ತಿತ್ತು


ಶಾಲೆಗಳು, ಶಿಕ್ಷಕರು ಮತ್ತು ಮಕ್ಕಳ ಅಂಕಿ ಅಂಶಗಳ ಕ್ರೊಢೀಕರಣ, ಪತ್ರ ಹಾಗೂ ಕಡತಗಳ ತ್ರೈಮಾಸಿಕವಾರು ಮತ್ತು ಮಾಸಿಕವಾರು ವರದಿಗಳನ್ನು ವೈಯಕ್ತಿಕವಾಗಿ ಶ್ರಮವಹಿಸಿ ಮಾಡಲಾಗುತ್ತಿತ್ತು.


ಈ ರೀತಿಯಲ್ಲಿ ಅಂಕಿ ಅಂಶಗಳ ಸಂಗ್ರಹಣೆಯ ಕಾರ್ಯನಿರ್ವಹಣೆ ಮಾಡಲು ಸಾಕಷ್ಟು ಸಮಯ ವ್ಯಯವಾದರೂ ವರದಿಗಳಲ್ಲಿನ ಮಾಹಿತಿಯ ನಿಖರತೆಯಲ್ಲಿ ಹಾಗೂ ಪಾರದರ್ಶಕತೆಯಲ್ಲಿ ಕೊರತೆ ಇರುವುದನ್ನು ಗಮನಿಸಲಾಗಿದೆ.


ಒಂದೇ ರೀತಿಯ ಮಾಹಿತಿಯನ್ನು, ಅಂಕಿಅಂಶಗಳನ್ನು ಹಲವು ಬಾರಿ ಸಂಗ್ರಹಣೆ ಮಾಡುವುದು


ಇ-ಆಡಳಿತ ಅನುಷ್ಟಾನಗೊಳಿಸುವಲ್ಲಿ ಎದುರಿಸಿದ ಸವಾಲುಗಳು

ಅಗತ್ಯವಾದ ತರಬೇತಿ ಇಲ್ಲದೇ ಇರುವುದರಿಂದ ಗಣಕಯಂತ್ರಗಳನ್ನು ಉಪಯೋಗಿಸಲು ಜ್ಞಾನವಿಲ್ಲದೇ,ಗಣಕಯಂತ್ರ ಕಾರ್ಯನಿವರ್ಹಣೆಯಲ್ಲಿ ಹಿಂಜರಿಕೆ,


ಇಲಾಖಾ ಹಂತದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಅವಶ್ಯಕವಾಗಿ ಬೇಕಾಗಿರುವ ಗಣಕಯಂತ್ರಗಳು, ತಂತ್ರಾಂಶಗಳು, ತರಬೇತಿಗಳು ಹಾಗೂ ತಾಂತ್ರಿಕ ಜ್ಞಾನದ ಕೊರತೆ


ಇ- ಆಡಳಿತ ಪ್ರಾರಂಭದ ಅಪೇಕ್ಷಿತ ಫಲಗಳು

ಸಾರ್ವಜನಿಕರಿಗೆ/ಸಮುದಾಯಕ್ಕೆ ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ಶೀಘ್ರವಾಗಿ ಒದಗಿಸುವುದು


ಇಲಾಖಾ ಅಧಿಕಾರಿಗಳ, ಸಿಬ್ಬಂದಿಗಳ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸುವುದು


ಇಲಾಖೆಯ ವಿವಿಧ ಹಂತಗಳಲ್ಲಿ ಇ- ಆಡಳಿತ ಚಟುವಟುಕೆಗಳನ್ನು ಅನುಷ್ಟಾನಗೊಳಿಸಲು, ಮಾರ್ಗದರ್ಶನ ಮತ್ತು ನಿರ್ವಹಣೆ ಮಾಡಲು, ತರಬೇತಿ ಪಡೆದ 10 ಜನರ ತಂಡವನ್ನು ರಚಿಸುವುದರ ಮೂಲಕ ರಾಜ್ಯ ಮಟ್ಟದ ಇ-ಆಡಳಿತ ಘಟಕವನ್ನು ಸ್ಥಾಪಸಲಾಯಿತು


ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕಛೇರಿಗಳಲ್ಲಿ ಇ-ಆಡಳಿತ ಚಟುವಟುಕೆಗಳನ್ನು ಅನುಷ್ಟಾನ ಗೊಳಿಸಲು 6 ಜನ ಸದಸ್ಯರನ್ನು ಹೊಂದಿದ, ಒಟ್ಟು 238 ಇ- ಆಡಳಿತ ಘಟಕಗಳನ್ನು ಪ್ರಾರಂಭಿಸಲಾಯಿತು.


ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಕಛೇರಿಗಳಿಗೆ ಹಾರ್ಡವೇರ್ ಹಾಗೂ ಸಾಪ್ಟ್ ವೇರ್ ಹಾಗೂ ಲ್ಯಾಪ್ ಟಾಪ್ ಒದಗಿಸಲಾಯಿತು. ಉಪಗ್ರಹ ಆಧಾರಿತ ಮತ್ತು ಮುಖಾಮುಖಿ ತರಬೇತಿಯ ಮೂಲಕ ಜಿಲ್ಲಾ ಮತ್ತು ಬ್ಲಾಕ್ ಹಂತದ ಕಛೇರಿಗಳ ಇ-ಆಡಳಿತ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಎಲ್ಲಾ ಜಿಲ್ಲಾ ಮತ್ತು ಬ್ಲಾಕ್ ಕಛೇರಿಗಳಿಗೆ ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲಾಖೆಯ ಎಲ್ಲ ಹಂತದ ಅಧಿಕಾರಿಗಳೂ ಕಛೇರಿ ಕಾರ್ಯನಿರ್ವಹಿಸಲು ಇ-ಮೇಲ್ ಬಳಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಇ ಎಮ್ ಐ ಎಸ್ (ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆ)

ಶಿಕ್ಷಣ ಮಾಹಿತಿ ನಿರ್ವಹಣೆ ವ್ಯವಸ್ಥೆಯು ಕ್ರಮಬದ್ಧವಾಗಿ, ನೈಜವಾಗಿ ಶಾಲೆಯಲ್ಲಿ ಲಭ್ಯವಿರುವ ಸ್ಔಲಭ್ಯಗಳು, ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಂಕಿಅಂಶಗಳ ಸಂಗ್ರಹ, ಕ್ರೊಢೀಕರಣ ಮತ್ತು ಇಂದೀಕರಿಸುವ ಪ್ರಯತ್ನವಾಗಿದೆ ಇ ಎಮ್ ಐ ಎಸ್ ಮೊದಲು ಡಿಪಿಇಪಿ ಯೋಜನೆಯಿಂದ ಪ್ರಾರಂಭಗೊಂಡು, ನಂತರ ಸರ್ವಶಿಕ್ಷಣ ಅಭಿಯಾನದಿಂದ ಅನುದಾನ ಪಡೆಯುವುದರ ಮೂಲಕ ಮುಂದುವರೆಸಲಾಗಿದೆ ಇ ಎಮ್ ಐ ಎಸ್ ತಂತ್ರಾಂಶದ ಮೂಲಕ, ಅಂಕಿಅಂಶಗಳ ಸಂಗ್ರಹ, ವರದಿ ತಯಾರಿಕೆಯನ್ನು ಹೊಂದಿದ್ದು, ಎಲ್ಲ ಹಂತದ ಆಡಳಿತಾಧಿಕಾರಿಗಳು ಇಲಾಖೆಯ ಕಾರ್ಯಕ್ರಮಗಳಿಗೆ ಯೋಜನೆ ತಯಾರಿಸಲು, ಅನುಷ್ಠಾನಗೊಳಿಸಲು ಹಾಗೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗಿದೆ.

ಡೈಸ್ ತಂತ್ರಾಂಶ

ಡೈಸ್ ತಂತ್ರಾಂಶವನ್ನು ಮಾನವ ಸಂಪನ್ಮೂಲ ಇಲಾಖೆ ನವದೆಹಲಿ ಇವರು ಅಭಿವೃದ್ದಿಪಡಿಸಿರುತ್ತಾರೆ. ಇದು ಇ.ಎಂ.ಐ.ಎಸ್ ತಂತ್ರಾಂಶದ ಪರ್ಯಾಯವಾಗಿ ಕಾರ್ಯನಿರ್ವಹಣೆ ಮಾಡುತ್ತದೆ.ಇದು ಅನ್ ಲೈನ್ ತಂತ್ರಾಂಶವಾಗಿದ್ದು, ಇಲಾಖೆಯ ಅವಶ್ಯಕತೆಗೆ ಅನುಗುಣವಾಗಿ ತಂತ್ರಾಂಶವನ್ನು ಮಾರ್ಪಾಡು ಮಾಡಲಾಗಿದೆ. ಈ ತಂತ್ರಾಂಶದ ಮೂಲಕ ಸಂಗ್ರಹಿಸಿದ ಶಾಲೆಯಲ್ಲಿ ಲಭ್ಯವಿರುವ ಸ್ಔಲಭ್ಯಗಳು, ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಂಕಿಅಂಶಗಳ ಸಂಗ್ರಹ, ಕ್ರೊಢೀಕರಣ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.

ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಕಛೇರಿಯಲ್ಲಿರುವ ಕಡತಗಳು ಹಾಗೂ ಸ್ವೀಕರಿಸುವ ಪತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ.


ಇಲಾಖೆಯ ಆಡಳಿತದ ಕಾರ್ಯವೈಖರಿಯಲ್ಲಿ ಪಾರದರ್ಶಕತೆಯ ಜೊತೆಗೆ ವೇಗವಾಗಿ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ, ಇಲಾಖೆಯಲ್ಲಿ ಶಿಕ್ಷಣವಾಹಿನಿ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿ ಅನುಷ್ಟಾನಗೊಳಿಸಲಾಗಿದೆ.


ಕಛೇರಿಯಲ್ಲಿ ದೈನಂದಿನವಾಗಿ ಸ್ವೀಕರಿಸುವ ಪತ್ರಗಳನ್ನು ಶಿಕ್ಷಣವಾಹಿನಿ ತಂತ್ರಾಂಶದ ಮೂಲಕ ನೊಂದಾಣಿ ಮಾಡಿದಾಗ ಪ್ರತಿ ಸ್ವೀಕೃತ ಪತ್ರಗಳಿಗೆ ಒಂದು ಗಣಕಯಂತ್ರ ಸಂಖ್ಯೆಯು ತಂತ್ರಾಂಶದ ಮೂಲಕ ಸೃಜನೆಯಾಗುತ್ತದೆ.


ತದನಂತರದ ಪತ್ರದ ಚಲನವಲನಗಳು ಹಾಗೂ ಪತ್ರದ ಮುಂದಿನ ಕ್ರಮಕ್ಕಾಗಿ ಹೊಸದಾಗಿ ಕಡತ ಪ್ರಾರಂಭಿಸಿದಾಗ ಹೊಸದಾಗಿ ಕಡತ ಗಣಕಯಂತ್ರ ಸಂಖ್ಯೆ ಸೃಜನೆಯಾಗುತ್ತದೆ.


ಪತ್ರ ಹಾಗೂ ಸಂಬಂದಿಸಿದ ಕಡತದ ಮುಂದಿನ ಚಲನವಲನಗಳು, ಪತ್ರ ಗಣಕಯಂತ್ರ ಸಂಖ್ಯೆ ಹಾಗೂ ಕಡತ ಗಣಕಯಂತ್ರ ಸಂಖ್ಯೆಯನ್ನಾಧರಿಸಿ, ಶಿಕ್ಷಣವಾಹಿನಿ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ, ಅರ್ಜಿದಾರನಿಗೆ, ಇಲಾಖಾ ಸಿಬ್ಬಂದಿಗಳಿಗೆ/ಅದಿಕಾರಿಗಳಿಗೆ ಮಾಹಿತಿಯು ಇಲಾಖಾ ಅಂತರ್ಜಾಲ ಸ್ಕೂಲ್ ಎಜುಕೇಶನ್ ನಲ್ಲಿನ ಶಿಕ್ಷನವಹಿನಿ ನಲ್ಲಿ ಸಂಖ್ಯೆ/ ವಿಷಯ /ಪತ್ರ ಸಂಖ್ಯೆ/ ಕಡತ ಸಂಖ್ಯೆಯನ್ನು ಯಾವುದಾದರೂ ಒಂದನ್ನು ನಮೂದಿಸಿ, ಪತ್ರ ಹಾಗೂ ಕಡತಗಳ ಚಲನವಲನಗಳ ಮಾಹಿತಿಯನ್ನು ದೊರೆಯುತ್ತದೆ.


ಶಿಕ್ಷಣವಾಹಿನಿ ಎಂಬ ಹೆಸರಿನ ಮೂಲಕ ಈ ಯೋಜನೆಯನ್ನು , 2006-2007 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಹಾಗೂ ಸರ್ವಶಿಕ್ಷಣ ಅಭಿಯಾನ ಕಛೇರಿಯಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ ಈ ತಂತ್ರಾಂಶವನ್ನು ಇಲಾಖೆಯ ಎಲ್ಲಾ ಹಂತದ ಕಛೇರಿಗಳಿಗೆ, 02 ಅಪರ ಆಯುಕ್ತಾಲಯಗಳು, 02 ಸಹನಿರ್ದೇಶಕರ ಕಛೇರಿಗಳು, 34 ಉಪನಿರ್ದೇಶಕರ ಕಛೇರಿಗಳು ಹಾಗೂ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಗೂ ವಿಸ್ತರಿಸಲಾಗಿದೆ.

ಸರ್ಕಾರಿ ನೌಕರರ ವೇತನ ತಂತ್ರಾಂಶ- (ಹೆಚ್.ಆರ್.ಎಂ.ಎಸ್. ತಂತ್ರಾಂಶ) ಸಚಿವಾಲಯ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) 2008 ರಲ್ಲಿ ಪ್ರಾರಂಭಿಸಲಾಯಿತು. ಸಚಿವಾಲಯದ ಇ- ಆಡಳತ ಕೇಂದ್ರವು ಹೆಚ್ ಆರ್ ಎಮ್ ಎಸ್ ತಂತ್ರಾಂಶ ಸೇವೆ ಒದಗಿಸುವ ಕೇಂದ್ರವಾಗಿದೆ. ಈ ಕೇಂದ್ರವು ಯಾವುದೇ ಡಿಡಿಓ ಅಥವಾ ನೌಕರರೊಂದಿಗೆ ನೇರ ಪತ್ರ ವ್ಯವಹಾರ ನಡೆಸುವುದಿಲ್ಲ. ಆಯಾ ಇಲಾಖೆಯ ಹೆಚ್ ಆರ್ ಎಮ್ ಎಸ್ ಘಟಕದ ಮುಖ್ಯ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಸಂಪರ್ಕ ಕಲ್ಪಿಸಲಾಗಿದೆ. ಈ ಯೋಜನೆಯು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರ ವಿವರಗಳನ್ನು ವಿದ್ಯುನ್ಮಾನ ತಂತ್ರಾಂಶ ಸಾಧನ ವ್ಯವಸ್ಥೆಯ ಮೂಲಕ ನಿರ್ವಹಿಸುತ್ತದೆ.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯು ನಿರ್ವಹಿಸುವ ಪ್ರಮುಖ ಮಾಡ್ಯೂಲ್ ಗಳು

ಸೇವಾ ದಾಖಲೆಗಳು ವೇತನ ಬಿಲ್ಲುಗಳ ತಯಾರಿಕೆ ವರ್ಗಾವಣೆ ಬಡ್ತಿ ಶಿಸ್ತಿನ ಕ್ರಮಗಳು ದೂರು ನಿರ್ವಹಣಾ ವ್ಯವಸ್ಥೆ ಇತರೆ ವರದಿಗಳು ಆನ್ ಲೈನ್ ಸಹಾಯ

ಇ – ಆಡಳಿತ ಘಟಕದಿಂದ ಶಿಕ್ಷಣ ಇಲಾಖೆಗೆ ಅವಶ್ಯಕವಾಗಿ ಬೇಕಾಗುವ ಹಲವಾರು ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಇಲಾಖಾ ವೆಬ್ ಸೈಟ್ ನ್ನು ಎನ್ ಐ ಸಿ ಯವರ ಸಹಯೋಗದೊಂದಿಗೆ ಸ್ಕೂಲ್ ಎಜುಕೇಶನ್ ಅಭಿವೃದ್ಧಿ ಪಡಿಸಲಾಗಿದೆ

ಶಿಕ್ಷಣವಾಹಿನಿ ತಂತ್ರಾಂಶ ನ್ಯಾಯಾಲಯ ಪ್ರಕರಣಗಳ ನಿರ್ವಹಣಾ ವ್ಯವಸ್ಥೆ ಮಧ್ಯಾಹ್ನ ಉಪಹಾರ ಯೋಜನಾ ನಿರ್ವಹಣಾ ವ್ಯವಸ್ಥೆ ತರಗತಿ ಪ್ರಕ್ರಿಯೆ ಮೌಲ್ಯಮಾಪನ ತಂತ್ರಾಂಶ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿ ಕ್ಷೇಮಾಭುವೃದ್ಧಿ ನಿಧಿ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ತಂತ್ರಾಂಶ ಪಠ್ಯ ಪುಸ್ತಕ ನಿರ್ವಹಣಾ ವ್ಯವಸ್ಥೆ (ವಿದ್ಯಾವಾಹಿನಿ ) ಶಿಕ್ಷಕರ ತರಬೇತಿ ತಂತ್ರಾಂಶ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತು ಪ್ರಶ್ನೆಗಳಿಗೆ ಉತ್ತರ ತಂತ್ರಾಂಶ

ಮೂಲ : ಸ್ಕೂಲ್ ಎಜುಕೇಶನ್

ವಿಶ್ವ ಮಕ್ಕಳ ದಿನಾಚರಣೆ

ವಿಶ್ವ ಮಕ್ಕಳ ದಿನಾಚರಣೆ


20 ನೆ ನವಂಬರ್ ವಿಶ್ವ ಮಕ್ಕಳ ದಿನಾಚರಣೆ . 14 ನೆ ನವಂಬರ್ ಭಾರತದಲ್ಲಿ ಮಕ್ಕಳ ದಿನಾಚರಣೆ


ಪ್ರಪಂಚದಲ್ಲಿ ನವೆಂಬರ್  20 ರಂದು ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವರು. ಈ ದಿನವನ್ನು ಮಕ್ಕಳ ಬಾಲ್ಯವನ್ನು ಸಂಭ್ರಮದಿಂದ ಕಾಣಲು ಆಚರಿಸಲಾಗುವುದು. ಈ ದಿನವನ್ನು  ಬಾಲ್ಯದ ಹೆಸರಿನಲ್ಲಿ ಆಚರಿಸಲಾಗುವುದು.
ಮಕ್ಕಳ ದಿನವನ್ನು 1959 ಕ್ಕೆ ಮೊದಲು ಜಗತ್ತಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ  ಆಚರಿಸುತ್ತಿದ್ದರು. ಈ ದಿನ ವನ್ನು ವಿಶ್ವ ಸಂಸ್ಥೆಯ ಸಾಮಾನ್ಯಸಭೆಯು ತೀರ್ಮಾನಿಸಿದಂತೆ ಪ್ರಥಮ ಬಾರಿಗೆ   1954 ರಲ್ಲಿ ಆಚರಿಸಲಾಯಿತು. ಇದನ್ನು ಮೂಲಭೂತ ಉದ್ಧೇಶ ಸಮುದಾಯದ ವಿನಿಮಯದ  ಹೆಚ್ಚಳ ಮತ್ತು ಮಕ್ಕಳ ತಿಳುವಳಿಕೆ ಜಾಸ್ತಿ ಮಾಡುವುದು,  ಅಲ್ಲದೆ ಮಕ್ಕಳಿಗೆ ಅನುಕೂಲವಾದ ಕಲ್ಯಾಣ ಕಾರ್ಯಕ್ರಮಗಳನ್ನು ಉತ್ತೇಜಿಸಲು  ಜಗತ್ತಿನಾದ್ಯಂತ  ಆಚರಣೆಯನ್ನು ಪ್ರಾರಂಭಿಸಲಾಯಿತು.

ನವೆಂಬರ್  20ನ್ನು ವಿಶ್ವ ಮಕ್ಕಳ ದಿನವಾಗಿ ಆರಿಸಲು ಕಾರಣ, ಅದು  ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು 1959ರಲ್ಲಿ, ಅಂಗೀಕರಿಸಿದ ದಿನ.  ಮಕ್ಕಳ ಹಕ್ಕುಗಳ ಸಮಾವೇಶವು
1989 ರಲ್ಲಿ  ಅದಕ್ಕೆ ಸಹಿ ಮಾಡಿತು. ಆಗಿನಿಂದ  191 ದೇಶಗಳು  ಇದನ್ನು ಒಪ್ಪಿವೆ.

ಮಕ್ಕಳದಿನಾಚರಣೆಯನ್ನು ವಿಶ್ವಾದ್ಯಂತ  1953, ಅಕ್ಟೋಬರನಲ್ಲಿ ಆಚರಿಸಲಾಯಿತು. ಇದನ್ನು ಜಿನೆವಾದಲ್ಲಿನ ಅಂತರಾಷ್ಟ್ರೀಯ ಮಕ್ಕಳ ಕಲ್ಯಾಣ  ಸಮಿತಿಯು ಪ್ರಾಯೋಜಿಸಿತು.  ಅಂತರಾಷ್ಟ್ರೀಯ ಮಕ್ಕಳ ದಿನದ ಯೋಜನೆಯು ಶ್ರೀ. ಕೃಷ್ಣ ಮೆನೆನ್ ಅವರಿಂದ ಸೂಚಿಸಿದರು. 1954 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅದನ್ನು ಅನುಮೋದಿಸಿತು. ನವಂಬರ್ 20 ವಿಶ್ವ ಮಕ್ಕಳ ದಿನ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 1954 ರಲ್ಲಿ ಮಕ್ಕಳ ದಿನಾಚರಣೆ ಮಾಡಲು ಘೋಷಣೆ ಮಾಡಿತು. ಪ್ರಪಂಚದ ಎಲ್ಲ ರಾಷ್ಟ್ರಗಳು ಅದನ್ನು ಆಚರಿಸಲು  ಪ್ರೋತ್ಸಾಹಿಸಿತು. ಮಕ್ಕಳಲ್ಲಿ ಪರಸ್ಪರ ವಿನಮಯ ಮತ್ತು ಅರಿವು ಹೆಚ್ಚಿಸಲು,  ಮತ್ತು ಮಕ್ಕಳ ಕಲ್ಯಾಣ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಜಗತ್ತಿನಾದ್ಯಂತ ಕ್ರಮ ತೆಗೆದುಕೊಳ್ಳಲು  ಸಾಧ್ಯವಾಯಿತು.
ಈಗಾಗಲೇ ತೀಳಿಸಿರುವಂತೆ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಜವಹರಲಾಲ್ ನೆಹರು ಅವರ ಜನ್ಮದಿನವಾದ ನವಂಬರ ೧೪ ರಂದು ಆಚರಿಸಲಾಗುವುದು. ಅಂದು ಮಕ್ಕಳಿಗೆ ಖಷಿಯಿಂದ ಕುಣಿಯುವ ದಿನ, ಬಾಲ್ಯದ ಸೊಗಸು, ಬೆಡಗು , ಬೆರಗು ಮತ್ತು ನೆಹರು ಅವರ ಮಕ್ಕಳ ಮೇಲಿನ ಅಪಾರ ಅಕ್ಕರೆ ಪ್ರೀತಿಯನ್ನು ಸಂಭ್ರಮದಿಂದ ನೆನೆವ ದಿನ. ಭಾರತದಾದ್ಯಂತ “ಮಕ್ಕಳದಿನಾಚರಣೆ “ಯನ್ನು ಬಹು ಸಡಗರ ಮತ್ತು ಸಂಭ್ರಮದಿಂದ ಆಚರಿಸುವರು.
ಮಕ್ಕಳ ದಿನವನ್ನು  ಅವರಿಗೆ ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು,  ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರೀಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ. ಆಚರಿಸಲಾಗುವುದು.  ನಿಮ್ಮ ಮಕ್ಕಳಿಗೆ ಅದೃಷ್ಟವಶದಿಂದ  ತನ್ನಲ್ಲಿರುವುದನ್ನು  ಇಲ್ಲದೆ ಇರುವ ಇತರರೊಂದಿಗೆ ಹಂಚಿಕೊಳ್ಳುವುದರ ಮೌಲ್ಯವನ್ನು ತಿಳಿಸಿದರೆ, ಮಗುವು ಹೊಣೆಯರಿತ ಮಾನವನಾಗಿ ಬೆಳೆಯಲು ಅನುವಾಗುವುದು. ಇದರ ಜೊತೆ ಇನ್ನೊಂದು ಮಗುವು ನಿರ್ಲಕ್ಷತೆಯಿಂದ ಬಾಲಾಪರಾಧಿಯಾಗುವುದನ್ನೂ ತಪ್ಪಿಸಿದಂತಾಗುವುದು.ಇದಕ್ಕೆ ಕಾರಣ ನಿಮ್ಮ ಮುಂದಾಲೋಚನೆ ಎಂಬ ತೃಪ್ತಿಯಾಗುವುದು

ಮೂಲ: ಪೋರ್ಟಲ್ ತಂಡ