ಬುಧವಾರ, ಜನವರಿ 30, 2019

ಸರ್ವ ಶಿಕ್ಷಣ ಅಭಿಯಾನ

ಸರ್ವ ಶಿಕ್ಷಣ ಅಭಿಯಾನ


CONTENTS


ಸರ್ವ ಶಿಕ್ಷಣ ಅಭಿಯಾನ. (ಸ.ಶಿ.ಅ)


ಸರ್ವಶಿಕ್ಷಣ ಅಭಿಯಾನ ಎಂದರೇನು?


ಉದ್ದೇಶದ ಸ್ಪಷ್ಟನೆ


ಎಸ್.ಎಸ್.ಎ ಅಡಿಯಲ್ಲಿ ಆರ್ಥಿಕ ಮಾದರಿಗಳು


ಹಿನ್ನಲೆ


ಪ್ರತಿ ಮಾನವ ಜೀವಿಯೂ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಲು ಅವಕಾಶ ಹೊಂದಿರಬೇಕು. ದುರ್ದೈವ ದಿಂದ ವಿಶ್ವದಲ್ಲಿ ಇಂದು ಅನೇಕ ಮಕ್ಕಳು ಈ ಅವಕಾಶದಿಂದ ವಂಚಿತರಾಗಿ ಬೆಳೆಯುತ್ತಿದ್ದಾರೆ., ಕಾರಣ ಅವರಿಗೆ ಕನಿಷ್ಠ ಶಾಲೆಗೆ ಹಾಜರಾಗುವ ಮೂಲಭೂತ ಹಕ್ಕನ್ನೇ ನಿರಾಕರಿಸಲಾಗಿದೆ.

ಶಾಲಾ ಕಾರ್ಯಕ್ರಮಗಳ ಪರಿಣಾಮವಾಗಿ, ೨೦೦೦ ನೇ ಇಸ್ವಿಯ ಕೊನೆಗೆ ಭಾರತದಲ್ಲಿ ೯೪% ಗ್ರಾಮಾಂತರ ಜನರಿಗೆ ಒಂದು ಕಿ.ಮೀ. ಒಳಗಡೆ ಪ್ರಾಥಮಿಕ ಶಾಲೆಗಳು ಲಭ್ಯವಾಗಿವೆ. ಮತ್ತು ೮೪% ಜನರಿಗೆ ಮೂರು ಕಿ.ಮೀ. ಒಳಗೆ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಪರಿಶಿಷ್ಠ ಜಾತಿ ಮತ್ತು ವರ್ಗಗಳ ಮತ್ತು ಬಾಲಕಿಯರನ್ನು ದಾಖಲು ಮಾಡಿಕೊಳ್ಳಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಮೊದಲನೆ ಪಂಚ ವಾರ್ಷಿಕ ಯೋಜನೆಯಿಂದ ಈಚೆಗೆ ಪ್ರಾಥಮಿಕ ಶಾಲೆಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ದಾಖಲಾತಿಯು ಗಣನೀಯವಾಗಿ ಹೆಚ್ಚಾಗಿದೆ. ಅದರಂತೆ ಪ್ರಾಥಮಿಕ ಶಾಲೆಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆಯೂ ಹೆಚ್ಚಿದೆ.

೧೯೫೦-೫೧ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ೩.೧ ಮಿಲಿಯನ್ ಮಕ್ಕಳು ದಾಖಲಾಗಿದ್ದರು. ೧೯೯೭-೯೮ ರಲ್ಲಿ ೩೯.೫ ಮಿಲಿಯನ್ ಮಕ್ಕಳು ಪ್ರಾಥಮಿಕ ಶಾಲೆಗಳಲ್ಲಿದ್ದಾರೆ. ಪ್ರಾಥಮಿಕ ಶಾಲೆಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ೧೯೫೦-೫೧ ರಲ್ಲಿ ೦.೨೨೩ ಮಿಲಿಯನ್ ಇದ್ದದ್ದು ೧೯೯೭-೯೮ರಲ್ಲಿ ೦.೭೭೫ ಮಿಲಿಯನ್ ಆಗಿದೆ. ೨೦೦೨/೨೦೦೩ ರಲ್ಲಿ ೬-೧೪ ವಯೋಮಾನದ ಮಕ್ಕಳಲ್ಲಿ ೮೨% ಜನ ಶಾಲೆಗೆ ದಾಖಲಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಭಾರತ ಸರ್ಕಾರವು ಇದನ್ನು ಈ ದಶಮಾನದ ಒಳಗೆ ಅದನ್ನು ೧೦೦% ಗೆ ಏರಿಸಲು ಗುರಿಯಿಟ್ಟು ಕೊಂಡಿದೆ. ಇದನ್ನು ಸಾಧಿಸಲು ಸರ್ಕಾರವು ವಿಶ್ವದಲ್ಲಿನ ಬಡತನಕ್ಕೆ ಶಾಶ್ವತವಾದ ಕೊನೆ ಹೇಳಲು ಪ್ರಯತ್ನಿಸುತ್ತಿರುವುದನ್ನು ನಾವು ಬಲ್ಲೆವು .ಅಲ್ಲದೆ ಶಾಂತಿ ಮತ್ತು ಸುರಕ್ಷತೆಗಾಗಿ ಪ್ರತಿ ದೇಶದ ನಾಗರಿಕರು ಇತ್ಯಾತ್ಮಕ ಆಯ್ಕೆ ಮಾಡಲು ಸಶಕ್ತ ರಾಗಿರಬೇಕು ಮತ್ತು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅಗತ್ಯ ಆದಾಯ ಹೊಂದಿರಬೇಕು. ಇದು ಸಾಧ್ಯವಾಗ ಬೇಕಾದರೆ ವಿಶ್ವದ ಎಲ್ಲಾ ಮಕ್ಕಳಿಗೂ ಉತ್ತಮ ಗುಣ ಮಟ್ಟದ ಶೈಕ್ಷಣಿಕ ವಾತಾವರಣ ಕೊನೆಯ ಪಕ್ಷ ಪ್ರಾಥಮಿಕ ಹಂತದಲ್ಲಾದರೂ ದೊರೆಯಬೇಕು.

ಸರ್ವ ಶಿಕ್ಷಣ ಅಭಿಯಾನ. (ಸ.ಶಿ.ಅ)

ಮಟ್ಟದಲ್ಲಿ ವಿಕೇಂದ್ರಿಕೃತವಾಗಿ, ನಿರ್ಧಿಷ್ಟವಾದ ಯೋಜನೆ ಮತ್ತು ಅನುಷ್ಠಾನ ತಂತ್ರ ಕ್ಕಾಗಿ ಸಮುದಾಯವೆ ಶಿಕ್ಷಣ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡ ಕಾರ್ಯಕ್ರಮ. ಇದು ದೇಶಾದ್ಯಂತ ಜಾರಿಯಾಗಿದೆ. ಇದು ಸರ್ಕಾರದ ಎಲ್ಲ ಪ್ರಮುಖ ಶೈಕ್ಷಣಿಕ ಮಧ್ಯವರ್ತನೆಗಳನ್ನು ಒಳಗೊಂಡಿದೆ. ಅಭಿಯಾನವು ೬-೧೪ ರೊಳಗಿನ ವಯೋಮಾನದ ಮಕ್ಕಳಿಗೆ ಅವಶ್ಯವಾದ ಮತ್ತು ಉಪಯುಕ್ತವಾದ ಪ್ರಾಥಮಿಕ ಶಿಕ್ಷಣವನ್ನು ೨೦೧೦ ರೊಳಗೆ ನೀಡಲಿದೆ.( ಭಾರತ ಸರ್ಕಾರದ೨೦೦೪ & ೨೦೦೫ ರ . (ಸ.ಶಿ.ಅ). SSA ಪ್ರಕಟಣೆ

ಸರ್ವಶಿಕ್ಷಣ ಅಭಿಯಾನ ಎಂದರೇನು?

ಸ್ಪಷ್ಟವಾದ ಸಮಯ ಮಿತಿಯುಳ್ಳ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಕಾರ್ಯ ಕ್ರಮ.


ದೇಶಾದ್ಯಂತ ಗುಣಮಟ್ಟದ ಶಿಕ್ಷಣಕ್ಕೆ ಇರುವ ಬೇಡಿಕೆಗೆ , ಇದು ಒಂದು ಸ್ಪಂದನೆ.


ಮೂಲ ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಒಂದು ಅವಕಾಶ.


ಶಾಲಾ ಆಡಳಿತ ನಿರ್ವಹಣೆಯಲ್ಲಿ ಪ್ರಪ್ರಥಮ ಹಂತದ ಸಂರಚನೆಗಳಾದ ಪಂಚಾಯತ್ ರಾಜ್ಯ ಸಂಸ್ಥೆಗಳು,, ಶಾಲಾ ನಿರ್ವಹಣಾ ಸಮಿತಿ, ಗ್ರಾಮ ಮತ್ತು ನಗರದ ಕೊಳಚೆಪ್ರದೇಶಗಳ ಶಿಕ್ಷಣ ಸಮಿತಿಗಳು. ತಾಯಿತಂದೆ ಮತ್ತು ಶಿಕ್ಷಕರ ಸಂಘಗಳು, ಮಾತೃ ಶಿಕ್ಷಕ ಸಂಘಗಳು, ಗುಡ್ಡ ಗಾಡು ಸ್ವಾಯತ್ತ ಕೌನ್ಸಿಲ್ ಗಳು ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಪ್ರಯತ್ನ.


ದೇಶಾದ್ಯಂತ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರುವ ರಾಜಕೀಯ ಶಕ್ತಿಯ ಇಚ್ಛಾಶಕ್ತಿ.


ಕೇಂದ್ರಸರ್ಕಾರ, ರಾಜ್ಯಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಡುವೆ ಸಹಭಾಗಿತ್ವ.


ರಾಜ್ಯಗಳಿಗೆ ತಮ್ಮದೆ ಆದ ಕಲ್ಪನೆಯನ್ನು ( ವಿಷನ್) ಅಭಿವೃದ್ಧಿಪಡಿಸಿಕೊಳ್ಳಲು ಒಂದು ಅವಕಾಶ


ಉದ್ದೇಶದ ಸ್ಪಷ್ಟನೆ

ಸರ್ವಶಿಕ್ಷಣ ಅಭಿಯಾನವು (SSA) ಭಾರತ ಸರ್ಕಾರದ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ (UEE) ಕಾಲ ಮಿತಿಗೆ ಒಳಪಟ್ಟ ಕಾರ್ಯ ಕ್ರಮಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ಭಾರತೀಯ ಸಂವಿಧಾನದ ೮೬ ನೇ ತಿದ್ದುಪಡಿಯು ಕಡ್ಡಾಯ ಮಾಡಿದಂತೆ ಉಚಿತ ಮತ್ತು ಕಡ್ಡಾಯ ಶಿಕ್ಷಣವು ೬-೧೪ ವಯೋಮಾನದ ಮಕ್ಕಳ ಮೂಲ ಭೂತ ಹಕ್ಕಾಗಿದೆ .ಸಾ.ಪ್ರಾ.ಶಿ . (UEE) ವನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ , ರಾಷ್ಟ್ರದ ೧೯೨ ಮಿಲಿಯನ್ ಮಕ್ಕಳ ಅಗತ್ಯಗಳನ್ನು ಪೂರೈಸಲು , ೧.೧ ಮಿಲಿಯನ್ ವಸತಿ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿದೆ. ಈ ಕಾರ್ಯಕ್ರಮವು ಶಾಲೆಯ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಹೊಸಶಾಲೆಗಳನ್ನು ತರೆದು, ಈಗಿರುವ ಶಾಲೆಗೆ ಹೆಚ್ಚುವರಿ ಕೊಟ್ಟಡಿಗಳು, ಕುಡಿಯುವ ನೀರು, ಕಕ್ಕಸು, ನಿರ್ವಹಣಾ ಅನುದಾನ ಮತ್ತು ಶಾಲಾ ಅಭಿವೃದ್ಧಿ ಅನುದಾನ ಅಲ್ಲದೆ ಅನೇಕ ಮೂಲ ಸೌಲಭ್ಯಗಳನ್ನು ಒದಗಿಸುವುದು. ಈಗಿರುವ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರು, ಈಗಿರುವ ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸಲು ಅವರಿಗೆ ವಿಸ್ತೃತ ತರಬೇತಿ, ಬೋಧನಾ ಮತ್ತು ಕಲಿಕಾ ಉಪಕರಣಗಳ ಅಭಿವೃದ್ಧಿಗೆ ನೆರವು, ಶೈಕ್ಷಣಿಕ ಬೆಂಬಲಕ್ಕಾಗಿ ಕ್ಲಷ್ಟರ್, ವಲಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಹಾಯ ನೀಡುವುದು. ಸ.ಶಿ ಅ (ಎಸ್ ಎಸ್ಎ) ಯು ಜೀವನ ಕೌಶಲ್ಯಗಳೂ ಸೇರಿದಂತೆ ಗುಣ ಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಕೊಡಲು ಒತ್ತು ನೀಡಲು ಬಯಸಿದೆ. ವಿಶೇಷ ಅಗತ್ಯವಿರುವ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಿದೆ. ಸ.ಶಿ ಅ (ಎಸ್ ಎಸ್ಎ) ಯು, ಈಗ ಉಂಟಾಗಿರುವ ಡಿಜಿಟಲ್ ಭೇದವನ್ನು ನಿವಾರಿಸಲು ಅವರಿಗೆ ಕಾಂಪ್ಯೂಟರ್ ಶಿಕ್ಷಣ ನೀಡುವುದು.

ಉದ್ದೇಶಗಳು

ಎಲ್ಲಾ ಮಕ್ಕಳು ೨೦೦೩ ರ ಒಳಗೆ ಶಾಲೆಯಲ್ಲಿ , ಶಿಕ್ಷಣ ಖಾತ್ರಿ ಕೇಂದ್ರದಲ್ಲಿ , ಪರ್ಯಾಯ ಶಾಲೆ ಗಳಲ್ಲಿ ಇರಬೇಕು. ”ಶಾಲೆಗೆ ಮರಳಿ” ಶಿಬಿರ ದಲ್ಲಿರಬೇಕು


ಎಲ್ಲಾ ಮಕ್ಕಳು ೨೦೦೭ನೆ ಇಸ್ವಿಯೊಳಗೆ ಐದು ವರ್ಷದ ಶಾಲೆಯನ್ನು ಮುಗಿಸಿರಬೇಕು.


ಎಲ್ಲಾ ಮಕ್ಕಳು ೨೦೧೧ ನೆ ಇಸ್ವಿಯೊಳಗೆ ಎಂಟು ವರ್ಷದ ಪ್ರಾಥಮಿಕ ಶಿಕ್ಷಣ ಹೊಂದಿರಬೇಕು.


ತೃಪ್ತಿದಾಯಕ ಪ್ರಾಥಮಿಕಶಿಕ್ಷಣ ಮತ್ತು ಜೀವನಕ್ಕಾಗಿ ಶಿಕ್ಷಣದ ಮೇಲೆ ಒತ್ತು ಇರಬೇಕು.


ಪ್ರಾಥಮಿಕ ಹಂತದಲ್ಲಿ ಎಲ್ಲಾ ಲಿಂಗ ಮತ್ತು ಸಾಮಾಜಿಕ ಬಿರುಕುಗಳಿಗೆ ೨೦೦೭ರೊಳಗೆ ಸೇತುವೆ ನಿರ್ಮಾಣವಾಗಬೇಕು.


೨೦೧೦ನೇ ಇಸ್ವಿಯೊಳಗೆ ಶಾಲೆಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದು ಸಾರ್ವತ್ರಿಕ ವಾಗಬೇಕು.


ಪ್ರಾಥಮಿಕ ಶಿಕ್ಷಣದ ಗುಣ ಮಟ್ಟ.ಸಾಂಸ್ಥಿಕ ಪರಿವರ್ತನೆಗಳು. - ಸ.ಶಿ ಅ (ಎಸ್ ಎಸ್.ಎ) ನ ಒಂದು ಭಾಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ನೀಡುವಲ್ಲಿನ ನೈಪುಣ್ಯವನ್ನು ಅಭಿವೃದ್ಧಿಪಡಿಸಲು ಪರಿವರ್ತನೆ ತರಬೇಕು .ರಾಜ್ಯ ಸರ್ಕಾರಗಳು ತಮ್ಮಲ್ಲಿ ಈಗ ಇರುವ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಶೈಕ್ಷಣಿಕ ಆಡಳಿತ, ಶಾಲೆಗಳಲ್ಲಿನ ಸಾಧನಾ ಮಟ್ಟ, ಆರ್ಥಿಕ ವಿಷಯಗಳು, ವಿಕೇಂದ್ರೀಕರಣ, ಮತ್ತು ಸಮುದಾಯದ ಮಾಲಿಕತ್ವಗಳೂ ಸೇರಿದಂತೆ ಎಲ್ಲವುಗಳ ನಿಷ್ಪಕ್ಷಪಾತ ಮೌಲ್ಯಮಾಪನ ಮಾಡಬೇಕು. ರಾಜ್ಯದ ಶೈಕ್ಷಣಿಕ ಕಾಯಿದೆಗಳ ಮರು ಪರಿಶೀಲನೆ ಯಾಗಬೇಕು.ಶಿಕ್ಷಕರ ನೇಮಕಾತಿ ಮತ್ತು ಕಾರ್ಯ ನಿರ್ವಹಣೆಯ ಪುನರ್ರಚನೆಯಾಗಬೇಕು. ಮೇಲುಸ್ತುವಾರಿ, ಮೌಲ್ಯಮಾಪನ, ಹೆಣ್ಣು ಮಕ್ಕಳ ಶಿಕ್ಷಣದ ಸ್ಥಿತಿ ಗತಿ ಮತ್ತು ECCE. ಹಲವಾರು ರಾಜ್ಯಗಳು ಪ್ರಾಥಮಿಕ ಶಿಕ್ಷಣದ ನೀಡುವಿಕೆಯ ವಿಧಾನವನ್ನು ಸುಧಾರಿಸಲು ಈಗಾಗಲೇ ಕ್ರಮ ಕೈಗೊಂಡಿವೆ.

 

ಸುಸ್ಥಿರ ಆರ್ಥಿಕತೆ - ಪ್ರಾಥಮಿಕ ಶಿಕ್ಷಣದ ಮಧ್ಯವರ್ತನೆಯ ಆರ್ಥಿಕತೆಯು ಸುಸ್ಥಿರವಾಗಿರಬೇಕು ಎಂಬ ತತ್ವದ ಮೇಲೆ ಸರ್ವಶಿಕ್ಷಣ ಅಭಿಯಾನವು ಆಧಾರಪಟ್ಟಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೂರ ಗಾಮಿ ಸಹಭಾಗಿತ್ವದ ತಿಳುವಳಿಕೆಯನ್ನು ಅವಲಂಬಿಸಿದೆ.

ಸಮುದಾಯದ ಮಾಲಿಕತ್ವ - ಈ ಕಾರ್ಯ ಕ್ರಮವು ಸಮುದಾಯದ ಮಾಲಿಕತ್ವದ ಶಾಲೆಗಳ ಪರಿಣಾಮಕಾರಿ ವಿಕೇಂದ್ರೀ ಕರಣದ ಮಧ್ಯವರ್ತನೆಯಿಂದ ಉಂಟಾಗುವುದು. ಇದನ್ನು ಮಹಿಳಾ ಗುಂಪುಗಳು,ಪಂಚಾಯತಿ ರಾಜ್ ಸಂಸ್ಥೆಗಳನ್ನು ಮತ್ತು , VEC ಸದಸ್ಯರುಗಳನ್ನೂ ತೊಡಗಿಸಿಕೊಳ್ಳುವುದರಿಂದ ಪರಿಣಾಮ ಕಾರಿಯನ್ನಾಗಿಸಬಹುದು.

ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸುವುದು. - ಸ.ಶಿ ಅ (ಎಸ್ ಎಸ್ಎ) ಯು ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟದ ಸಂಸ್ಥೆಗಳಾದ NIEPA/NCERT/NCTE/ SCERT/ SIEMAT/DIET ಗಳ ಸಾಮರ್ಥ್ಯ ಹೆಚ್ಚಳದಲ್ಲಿ ವಹಿಸಬಹುದಾದ ಪಾತ್ರವನ್ನು ಅರಿತು ಕೊಂಡಿದೆ. ಗುಣಮಟ್ಟದಲ್ಲಿ ಸುಧಾರಣೆ ಆಗಬೇಕಾದರೆ ಸಂಪನ್ಮೂಲ ವ್ಕಕ್ತಿಗಳು ಮತ್ತು ಸಂಸ್ಥೆಗಳಿಂದ ಸುಸ್ಥಿರವಾದ ಬೆಂಬಲದ ವ್ಯವಸ್ಥೆ ಇರಬೇಕು.

ಮುಖ್ಯವಾಹಿನಿಯ ಶೈಕ್ಷಣಿಕ ಆಡಳಿತ ಸುಧಾರಣೆ - ಸಾಂಸ್ಥಿಕ ಅಭಿವೃದ್ಧಿಯಿಂದ ಮುಖ್ಯವಾಹಿನಿಯ ಶೈಕ್ಷಣಿಕ ಆಡಳಿತ ಸುಧಾರಣೆ ಅಗುವುದು. ಹೊಸ ವಿಧಾನಗಳ, ಕಡಿಮೆ ವೆಚ್ಚದ ಮತ್ತು ಫಲದಾಯಕ ವಿಧಾನಗಳ ಅಳವಡಿಕೆಯಿಂದ ಇದು ಸಾಧ್ಯ.

ಪೂರ್ಣ ಪಾರದರ್ಶಕ ಸಮುದಾಯ ಆಧಾರಿತ ಉಸ್ತುವಾರಿ – ಈ ಕಾರ್ಯ ಕ್ರಮವು ಪೂರ್ಣ ಪಾರದರ್ಶಕ ಸಮುದಾಯ ಆಧಾರಿತ ಉಸ್ತುವಾರಿ ಯನ್ನು ಹೊಂದಿರುವುದು. ಶಿಕ್ಷಣ ನಿರ್ವಹಣಾ ಮಾಹಿತಿ ವ್ಯವಸ್ಥೆ (ದ ಎಜುಕೇಷನಲ್ ಮ್ಯನೇಜಮೆಂಟ ಇನಫರ್ಮೇಷನ್ ಸಿಸ್ಟಂ (EMIS)) ಯಿಂದ ಶಾಲಾ ಮಟ್ಟದ ದತ್ತಾಂಶದ ಜತೆಗೆ ಮೈಕ್ರೊ ಪ್ಲಾನಿಂಗ್ ಮತ್ತು ಸಮೀಕ್ಷೆ ಯ ಸಮುದಾಯ ಆಧಾರಿತ ಮಾಹಿತಿಗಳ ತುಲನೆ ಮಾಡಬಹುದು. ಜತೆಗೆ ಇದರಿಂದ ಪ್ರತಿ ಶಾಲೆಗೆ ಸಮೂದಾಯದ ಜತೆಗೆ ಪೂರ್ಣ ಪಾರದರ್ಶಕ ಸಮುದಾಯ ಆಧಾರಿತ ಉಸ್ತುವಾರಿ, ಅನುದಾನವೂ ಸೇರಿದಂತೆ ಎಲ್ಲ ಮಾಹಿತಿಯನ್ನೂ ಹಂಚಿಕೊಳ್ಳಲು ಉತ್ತೇಜನ ಸಿಗುವುದು. ಈ ಉದ್ದೇಶಕ್ಕಾಗಿ ಶಾಲೆಯಲ್ಲಿ ಒಂದು ಸೂಚನಾ ಫಲಕವನ್ನು ಹಾಕಬಹುದು.

ವಾಸಸ್ಥಳವು ಒಂದು ಯೋಜನಾ ಘಟಕ - ಸ.ಶಿ ಅ (ಎಸ್ ಎಸ್. ಎ) ಯು ಸಮುದಾಯ ಆಧಾರಿತ ಯೋಜನೆಯನ್ನು ಮಾಡಲು ವಾಸಸ್ಥಳವು ಒಂದು ಯೋಜನಾ ಘಟಕ ಎಂದು ಪರಿಗಣಿಸಿದೆ . ಇವುಗಳು ಜಿಲ್ಲಾ ಯೋಜನೆ ರೂಪಿಸಲು ಆಧಾರವಾಗಿವೆ .

ಸಮುದಾಯಕ್ಕೆ ಉತ್ತರ ದಾಯಿತ್ವ - ಸ.ಶಿ ಅ (ಎಸ್ ಸಸ್ಎ) ಯು ಶಿಕ್ಷಕರು, ತಾಯಿತಂದೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆ (ಪಿ ಆರ್ ಐ), ಗಳ ನಡುವೆ ಸಹಕಾರ, ಜೊತೆಗೆ ಅವರು ಸಮುದಾಯಕ್ಕೆ ಉತ್ತರದಾಯಿಗಳಾಗಿರಬೇಕು. ಹಾಗು ಪಾರದರ್ಶಕತೆ ಹೊಂದಿರಬೇಕು ಎಂದು ವಿಧಿಸಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ- ಹೆಣ್ಣು ಮಕ್ಕಳ ಶಿಕ್ಷಣ ಅದರಲ್ಲೂ ವಿಶೇಷವಾಗಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ, ಅಲ್ಪ ಸಂಖ್ಯಾತರಾದವರಿಗೆ ಆದ್ಯತೆ ನೀಡುವುದು ಸರ್ವ ಶಿಕ್ಷಣ ಅಭಿಯಾನದ ಮುಖ್ಯ ಉದ್ದೇಶ.

ವಿಶೇಷ ಗುಂಪುಗಳಿಗೆ ಗಮನ - ಪರಿಶಿಷ್ಟಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರು ನಗರರದ ಅವಕಾಶ ವಂಚಿತ ಮಕ್ಕಳು, ಇತರೆ ಅನಾನುಕೂಲ ಹೊಂದಿದ ಗುಂಪಿನ ಮಕ್ಕಳು ಮತ್ತು ವಿಶೇಷ ಅಗತ್ಯಬೇಕಾದ ಮಕ್ಕಳಿಗೆ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು.

ಯೋಜನಾಪೂರ್ವ ಹಂತ - ಸ.ಶಿ ಅ (ಎಸ್ ಎಸ್ಎ) ಯು ದೇಶಾದ್ಯಂತ ಚೆನ್ನಾಗಿ ಯೋಜಿತ ವಾಗಿರುವ ಯೋಜನಾಪೂರ್ವ ಹಂತ ವನ್ನು ಪ್ರಾರಂಭಿಸಿದೆ. ಅದು ಸಾಮರ್ಥ್ಯ ಬೆಳೆಸುವಲ್ಲಿ ಅಧಿಕ ಮಧ್ಯವರ್ತನೆ ಅವಕಾಶ ಕೊಡುವುದು. ಅದರಿಂದ ಲಾಭವನ್ನು ತಲುಪಿಸುವಲ್ಲಿ ಮತ್ತು ಮೇಲುಸ್ತುವಾರಿ ಮಾಡುವಲ್ಲಿ ಸುಧಾರಣೆಯಾಗುವುದು. ಇದರಲ್ಲಿ ಮನೆಮನೆಯ ಸಮೀಕ್ಷೆಗಳು, ಸಮುದಾಯ ಆಧಾರಿತ ಮೈಕ್ರೋ ಯೋಜನೆಗಳು ಮತ್ತು ಶಾಲಾ ನಕ್ಷೆಗಳು, ಸಮುದಾಯದ ನಾಯಕರಿಗೆ ತರಬೇತಿ, ಶಾಲಾಮಟ್ಟದ ಚಟುವಟಿಕಗಳು, ಮಾಹಿತಿ ವ್ಯವಸ್ಥೆಯ ಸ್ಥಾಪನೆಗೆ ಬೆಂಬಲ, ಕಚೇರಿಯ ಸಲಕರಣೆಗಳು,ಪತ್ತೆ ಮಾಡಲು ಅಧ್ಯಯನಗಳು, ಇತ್ಯಾದಿ. .

ಗುಣ ಮಟ್ಟಕ್ಕೆ ಹೆಚ್ಚು ಒತ್ತು – ಸ.ಶಿ ಅ (ಎಸ್ ಎಸ್ಎ) ಯು ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ಮಕ್ಕಳಿಗೆ ಹೆಚ್ಚು ಉಪಯುಕ್ತ ಮತ್ತು ಸುಸಂಗತವಾಗಿಸಲು ಪಠ್ಯಕ್ರಮವನ್ನು ಸುಧಾರಿಸಲಿದೆ. ಮಗು ಕೇಂದ್ರಿತ ಕಲಿಯುವಿಕೆ ಮತ್ತು ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಯ ತಂತ್ರಗಳ ಮೇಲೆ ವಿಶೇಷ ಮುತುವರ್ಜಿ ವಹಿಸಿದೆ.

ಶಿಕ್ಷಕರ ಪಾತ್ರ - ಸ.ಶಿ ಅ (ಎಸ್ ಸಸ್ಎ) ಯು ಯು ಶಿಕ್ಷಕರ ಆಯಕಟ್ಟಿನ ಮತ್ತು ಅತಿ ಮುಖ್ಯವಾದ ಪಾತ್ರವನ್ನು ಗುರುತಿಸಿದೆ. ಮತ್ತು ಅವರ ಆಭಿವೃದ್ಧಿಯ ಅಗತ್ಯವನ್ನು ಗಮನಿಸಿ ಅದಕ್ಕಾಗಿ ಸೂಕ್ತ ಬೆಂಬಲ ನೀಡಿದೆ . ವಲಯ ಸಂಪನ್ಮೂಲ ಕೇಂದ್ರ,/ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ ಸ್ಥಾಪನೆ, ಅದಕ್ಕೆ ಅರ್ಹ ಶಿಕ್ಷಕರ ನೇಮಕಾತಿ, ಪಠ್ಯಕ್ರಮಕ್ಕೆ ಸಂಬಂಧಿಸಿದ ಸಾಮಗ್ರಿಗಳ ಅಭಿವೃದ್ಧಿಮಾಡಲು, ಅದರಲ್ಲಿ ಪಾಲುಗೊಳ್ಳಲು ಅವರಿಗೆ ಅವಕಾಶ, ತರಗತಿಯ ಪ್ರಕ್ರಿಯೆಗೆ ಒತ್ತು, ಹೊರ ಪ್ರಪಂಚಕ್ಕೆ ಅವರನ್ನು ಒಡ್ಡಲು ಭೇಟಿಗಳು ಇತ್ಯಾದಿಗಳನ್ನು , ಶಿಕ್ಷಕರಲ್ಲಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಲು ವಿನ್ಯಾಸಗೊಳಿಸಲಾಗಿದೆ.

ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಗಳು - ನಿಗದಿಪಡಿಸಿದ ಮಾದರಿಯ ಪ್ರಕಾರ, ಪ್ರತಿಜಿಲ್ಲೆಯೂ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು, ಆ ಜಿಲ್ಲೆಯಲ್ಲಿ ಹೂಡುತ್ತಿರುವ ಮತ್ತು ಪ್ರಾಥಮಿಕ ಶಿಕ್ಷಣ ವಿಭಾಗಕ್ಕೆ ಬೇಕಾದ ಹಣ, ಸರ್ವಾಂಗೀಣ ಮತ್ತು ಐಕ್ಯತಾ ದೃಷ್ಟಿಕೋನದಿಂದ ಯೋಜನೆಯನ್ನು ತಯಾರಿಸಬೇಕು. ಒಂದು ಯಥಾದೃಷ್ಟಿಯ ಯೋಜನೆಯು ( UEE). ದೂರಗಾಮಿ ಅವಧಿಯಲ್ಲಿ ಸಾಧಿಸಬಹುದಾದ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಗುರಿಗೆ ಪೂರಕವಾದ ಚಟುವಟಿಕೆಗಳ ಮಾದರಿಯನ್ನು ನೀಡುತ್ತದೆ. ಒಂದು ವಾರ್ಷಿಕ ಕಾರ್ಯಯೋಜನೆ ಮತ್ತು ಆಯವ್ಯಯ ಪಟ್ಟಿ ಯೂ ಇರುವುದು. ಅದು ಆ ವರ್ಷದಲ್ಲಿ ಆದ್ಯತೆಯ ಮೇರೆಗೆ ಮಾಡಬಹುದಾದ ಚಟುವಟಿಕೆಗಳ ಪಟ್ಟಿ ತಯಾರಿಸಿರುವುದು. ಯಥಾದೃಷ್ಟಿಯ ಯೋಜನೆಯು ಒಂದು ಕ್ರಿಯಾತ್ಮಕ ದಾಖಲೆ. ಕಾರ್ಯಕ್ರಮದ ಅನುಷ್ಠಾನದ ಸಮಯದಲ್ಲಿ ಸದಾ ಸುಧಾರಣೆಗೆ ಅವಕಾಶ ಹೊಂದಿರುವುದು.

ಎಸ್.ಎಸ್.ಎ ಅಡಿಯಲ್ಲಿ ಆರ್ಥಿಕ ಮಾದರಿಗಳು

ಮಧ್ಯವರ್ತನೆಯ ಮಾದರಿಗಳು

ಶಿಕ್ಷಕರು


ಪ್ರತಿ 40 ಮಕ್ಕಳಿಗೆ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತದಲ್ಲಿ ಒಬ್ಬ ಶಿಕ್ಷಕರು


ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಿಷ್ಟ ಇಬ್ಬರು ಶಿಕ್ಷಕರು


ಪ್ರತಿ ತರಗತಿಗೆ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಶಿಕ್ಷಕರು.


ಶಾಲೆ / ಪರ್ಯಾಯ ಶಾಲಾ ಸೌಲಭ್ಯ


ವಾಸದ ಸ್ಥಳದಿಂದ ಒಂದು ಕಿಲೋಮಿಟರ್ ಒಳಗೆ


ರಾಜ್ಯದ ನಿಯಮನಸಾರ ಹೊಸ ಶಾಲೆ ಸ್ಥಾಪಿಸಲು ಅವಕಾಶ. ಅಥವ ಸೌಲಭ್ಯವಿಲ್ಲದ ಸ್ಥಳದಲ್ಲಿ ಹೊಸ ಶಾಲೆ ಶುರು ಮಾಡಲು ಅವಕಾಶ


ಉನ್ನತ ಪ್ರಾಥಮಿಕ ಶಾಲೆಗಳು / ವಲಯಗಳು


ಅಗತ್ಯದಮೇರೆಗೆ, ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದವರ ಸಂಖ್ಯೆಗೆ ಅನುಗುಣವಾಗಿ, ಪ್ರತಿ ಎರಡು ಪ್ರಾಥಮಿಕ ಶಾಲೆಗಳಿಗೆ ಒಂದುಹಿರಿಯ ಪ್ರಾಥಮಿಕ ಶಾಲೆ ಅಥವ ಒಂದು ವರ್ಗ


ತರಗತಿ ಕೊಠಡಿಗಳು


ಪ್ರಾಥಮಿಕ ಶಾಲೆಯಲ್ಲಿ ಪ್ರತಿ ಶಿಕ್ಷಕನಿಗೆ ಅಥವ ಪ್ರತಿ ತರಗತಿಗೆ /ವರ್ಗ , ಎರಡರಲ್ಲಿ ಯಾವುದು ಕಡಿಮೆಯೋ ಅದರಂತೆ ಕೊಠಡಿಇರಬೇಕು. ಮತ್ತು ಹಿರಿಯ ಪ್ರಾಥಮಿಕ ಶಾಲೆಯಾದರೆ ವರಾಂಡ ಇರುವ ಎರಡು ತರಗತಿಯ ಕೊಠಡಿಗಳು ಬೇಕು. ಕನಿಷ್ಟ ಇಬ್ಬರು ಶಿಕ್ಷಕರು ಇರಬೇಕು.


ಹಿರಿಯ ಪ್ರಾಥಮಿಕ ಶಾಲೆಯಾದರೆ ಮುಖ್ಯ ಶಿಕ್ಷಕರಿಗೆ ಒಂದುಪ್ರತ್ಯೇಕ ಕೊಠಡಿ/ ವಿಭಾಗ ಇರಬೇಕು.


ಉಚಿತ ಪಠ್ಯ ಪುಸ್ತಕಗಳು


ರಾಜ್ಯವು ಈಗ ರಾಜ್ಯದ ಯೋಜನೆಯ ಮೇರೆಗೆ ನೀಡುತ್ತಿರುವ ಉಚಿತ ಪುಸ್ತಕಗಳ ಹಂಚಿಕೆಯನ್ನು ಮುಂದುವರಿಸಬೇಕು.


ಯಾವುದೇ ರಾಜ್ಯದಲ್ಲಿ ಪುಸ್ತಕಗಳನ್ನು ಸರ್ಕಾರವು ರಿಯಾಯತಿ ದರದಲ್ಲಿ ನೀಡುತ್ತಿದ್ದರೆ , ಮಕ್ಕಳು ಕೊಡುವ ಹಣವನ್ನು ಮಾತ್ರ ಸ. ಶಿ. ಆ ವು ನೀಡಬೇಕು.


ಸಿವಿಲ್ ಕಾಮಗಾರಿಗಳು


ಪಿಎ.ಬಿಯು (ಪರಸ್ಪೆಕ್ಟಿವ್) ಯಥಾದೃಷ್ಟಿ ಯೋಜನೆಯ ಮೇರೆಗೆ ೨೦೧೦ರವರೆಗಿನ ಆವಧಿಗೆ ಕಾರ್ಯಕ್ರಮ ಅನುಮೋದಿಸಿದ ಒಟ್ಟು ನಿಧಿಯ ೩೩% ಗಿಂತ ಹೆಚ್ಚು ಹಣವನ್ನು ಸಾರ್ವಜನಿಕ ಕೆಲಸಗಳಿಗೆ ಉಪಯೋಗಿಸಬಾರದು


ಈ ೩೩% ಮಿತಿಯು ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿಯನ್ನು ಒಳಗೊಂಡಿರುವುದಿಲ್ಲ.


ಆದರೂ ಒಂದು ನಿರ್ಧಿಷ್ಟ ವರ್ಷದ ವಾರ್ಷಿಕ ಯೊಜನೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ೪೦% ರ ವರೆಗೆ ಆ ವರ್ಷದ ಕಾರ್ಯಕ್ರಮದ ವಿವಿಧ ಅಂಶಗಳ ಆದ್ಯತೆಯನ್ನು ಗಮನಿಸಿ ಖರ್ಚು ಮಾಡಬಹುದು.ಆದರೆ ಅದು ಯೋಜನೆಯ ಎಲ್ಲ ಆಯವ್ಯದ ೩೩% ಮಿತಿಯನ್ನು ಮೀರಬಾರದು.


ಶಾಲೆಯ ಸೌಲಭ್ಯಗಳನ್ನು ಸುಧಾರಿಸಲು,


ಕ್ಲಸ್ಟರ್ ಸಂಪನ್ಮೂಲ ಕೇಂದ್ರ (CRC) ಗಳನ್ನು ಹೆಚ್ಚುವರಿ ಕೊಠಡಿಯಾಗಿ ಉಪಯೋಗಿಸಬಹುದು.


ಕಚೇರಿ ಕಟ್ಟಡಕ್ಕಾಗಿ ಯಾವುದೆ ಖರ್ಚು ಮಾಡಬಾರದು.


ಜಲ್ಲೆಗಳು ಮೂಲಭೂತ ಸೌಕರ್ಯಗಳ ಯೋಜನೆ ತಯಾರಿಸಬೇಕು.


ಶಾಲಾ ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿ.


ಶಾಲೆಯ ವ್ಯವಸ್ಥಾಪಕ ಸಮಿತಿ/ /VECs ಮೂಲಕ ಮಾತ್ರ ಕೆಲಸ ಮಾಡಿಸಬೇಕು.


ಶಾಲಾ ಸಮಿತಿಯ ಪ್ರಸ್ತಾವನೆಯ ಮೇರೆಗೆ ವಾರ್ಷಿಕ ೫೦೦೦ರೂಪಾಯಿಗಳ ವರೆಗೆ ಖರ್ಚು ಮಾಡಬಹುದು


ಸಮುದಾಯದ ವಂತಿಗೆಯ ಅಂಶ ಇರಲೇಬೇಕು.


ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿಯ ಖರ್ಚನ್ನು ಸಾರ್ವಜನಿಕ ಕೆಲಸಗಳಿಗೆ ಇರುವ ೩೩% ಮಿತಿಯಲ್ಲಿ ಲೆಕ್ಕಹಾಕಬಾರದು .


ಅನುದಾನವು ಯಾವ ಶಾಲೆಗೆ ಸ್ವಂತ ಕಟ್ಟಡವಿದೆಯೋ ಅದಕ್ಕೆ ಮಾತ್ರ ದೊರೆಯುವುದು.


ಕ್ರಮಬದ್ಧ ಶಾಲೆಯಾಗಿ ಇಜಿಎಸ್ ( EGS) ಯನ್ನು ಉನ್ನತಿಕರಿಸುವುದು ಅಥವ ರಾಜ್ಯದ ಮಾದರಿ ಪ್ರಕಾರ ಹೊಸ ಶಾಲೆಯನ್ನು ತೆರೆಯಬಹುದು .


ಪ್ರತಿ ಶಾಲೆಗೆ ಟಿ ಎಲ್ ಇ TLE @ ರೂ.. 10,000/-.


ಸ್ಥಳಿಯ ಸಂದರ್ಭ ಮತ್ತು ಅಗತ್ಯಕ್ಕೆ ಅನುಗುಣವಾಗಿ ಟಿ ಎಲ್ ಈ( TLE)


ಟಿ ಎಲ್ ಇ ಯ ಆಯ್ಕೆ ಮತ್ತು ಪಡೆಯುವುದರಲ್ಲಿ ಶಿಕ್ಷಕರನ್ನು ಮತ್ತು ತಾಯಿತಂದೆಯರನ್ನು ತೊಡಗಿಸುವುದು


ಶಾಲೆ ಪಡೆಯುವ ಅತ್ಯುತ್ತಮ ವಿಧಾನವನ್ನು VEC / ಶಾಲಾ- ಗ್ರಾಮಮಟ್ಟದ ಸೂಕ್ತವಾದ ಸಂಸ್ಥೆಯು ನಿರ್ಧರಿಸುವುದು.


ಇಜಿಎಸ್ EGS ಕೇಂದ್ರವನ್ನು ಉನ್ನತಿಕರಣಕ್ಕೆ ಮೊದಲು ಅದು ೨ ವರ್ಷ ಯಶಸ್ವಿಯಾಗಿ ನೆಡೆದಿರಬೇಕು.


ಶಿಕ್ಷಕರಿಗೆ ಮತ್ತು ತರಗತಿ ಕೊಠಡಿಗಳಿಗೆ ಅವಕಾಶ


ಹಿರಿಯ ಪ್ರಾಥಮಿಕಶಾಲೆಗಳಿಗೆ ಟಿ ಎಲ್ ಇ (TLE)


ಒಳಪಡದ ಶಾಲೆಗಳಿಗೆ ಪ್ರತಿಯೊಂದಕ್ಕೆ @ ರೂ. Rs 50,000


ಶಾಲೆಯ ನಿರ್ದಿಷ್ಟ ಅಗತ್ಯವನ್ನು ಶಿಕ್ಷಕರು/ ಶಾಲಾ ಸಮಿತಿ ನಿರ್ಧರಿಸವುದು.


ಶಾಲಾ ಸಮಿತಿಯು ಶಿಕ್ಷಕರ ಸಲಹೆಯ ಮೇರೆಗೆ ಅದನ್ನು ಪಡೆಯುವ ವಿಧಾನವನ್ನು ನಿರ್ಧರಿಸಬೇಕು.


ಶಾಲಾ ಸಮಿತಿಯು ಅನುಕೂಲವಾಗುವುದಾದರೆ ಜಿಲ್ಲಾಮಟ್ಟದಲ್ಲಿ ಪದಾರ್ಥಗಳನ್ನು ಖರೀದಿಸುವ / ಪಡೆವುದನ್ನು ಶಿಫಾರ್ಸು ಮಾಡಬಹುದು.


ಮಧ್ಯ ವರ್ತನೆಯ ಮಾದರಿ.


ಶಾಲಾ ಅನುದಾನ


ಶಾಲೆಯ ಕೆಟ್ಟುಹೋದ, ಕೆಲಸ ಮಾಡದ ಉಪಕರಣಗಳ ಮರು ಖರಿದಿಗಾಗಿ ಪ್ರಾಥಮಿಕ / ಹಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಷಕ್ಕೆ ರೂ. 2000/-


ಬಳಕೆಯಲ್ಲಿ ಪಾರದರ್ಶಕತೆ.


ಗ್ರಾಮ ಶಿಕ್ಷಣ ಸಮಿತಿ / ಶಾಲಾ ನಿರ್ವಹಣ ಸಮಿತಿ ( VEC / SMC) ಮಾತ್ರ ಅನುದಾನ ಬಳಸಬೇಕು


ಶಿಕ್ಷಕ ಅನುದಾನ


ಪ್ರಾಥಮಿಕ / ಹಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಷಕ್ಕೆ ಪ್ರತಿ ಶಾಲೆಗೆ ರೂ 500.


ಬಳಕೆಯಲ್ಲಿ ಪಾರದರ್ಶಕತೆ


ಶಿಕ್ಷಕರಿಗೆ ತರಬೇತಿ


ಎಲ್ಲ ಶಿಕ್ಷಕರಿಗೆ ಪ್ರತಿವರ್ಷ ೨೦ ದಿನದ ಸೇವಾಂತರ್ಗತ ತರಬೇತಿಗೆ ಅವಕಾಶ. ಕೆಲಸದಲ್ಲಿರುವ ಆದರೆ ತರಬೇತಿ ಇಲ್ಲದ ಶಿಕ್ಷಕರಿಗೆ ೬೦ ದಿನಗಳ ತರಬೇತಿ. ಹೊಸದಾಗಿ ಕೆಲಸಕ್ಕೆ ಸೇರಿದ ಇತ್ತೀಚೆಗೆ ತರಬೇತಿ ಪಡೆದವರಿಗೆ ೩೦ ದಿನದ ಪುನರ್ ಮನನ ಕೋರ್ಸನ್ನು ನೆಡಸಬೇಕು. ಅವರಿಗೆ ದಿನಕ್ಕೆ ರೂ. ೭೦ ಗಳ ಭತ್ಯ ಕೊಡುವ ಅವಕಾಶ ಇರಬೇಕು


ಘಟಕದ ವೆಚ್ಚ ಸೂಚಕ; ವಸತಿರಹಿತ ತರಬೇತಿ ಕಾರ್ಯಕ್ರಮದ ವೆಚ್ಚ ಕಡಿಮೆ ಇರಬೇಕು


ಎಲ್ಲ ತರಬೇತಿ ವೆಚ್ಚವು ಅದರಲ್ಲಿ ಸೇರಿರುವುದು.


ಪರಿಣಾಮಕಾರಿ ತರಬೇತಿಯ ಮೌಲ್ಯಮಾಪನ ಸಾಮರ್ಥ್ಯವನ್ನು ತಿಳಿಯುವುದರಿಂದ ತರಬೇತಿಯ ವ್ಯಾಪ್ತಿ ಗೊತ್ತಾಗುವುದು


ಈಗಿರುವ ಶಿಕ್ಷಕರ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ SCERT / DIET ಗಳಿಗೆ ಬೆಂಬಲ


ರಾಜ್ಯ ಶೈಕ್ಷಣಿಕ ನಿರ್ವಹಣೆ ಮತ್ತು ತರಬೇತಿ ಸಂಸ್ಥೆ (SIEMAT)


ಮೂರು ಕೊಟಿಯವರೆಗೆ ಒಂದೆ ಸಲದ ಸಹಾಯ


ರಾಜ್ಯಗಳು ಸುಸ್ಥಿರಗೊಳಿಸಲು ಒಪ್ಪಬೇಕು.


ಆಯ್ಕೆಯ ಮಾನದಂಡ ಬಿಗಿಯಾಗಿರಬೇಕು.


ಸಮುದಾಯದ ನಾಯಕರ ತರಬೇತಿ


ಒಂದು ವರ್ಷದಲ್ಲಿ ಪ್ರತಿ ಗ್ರಾಮದಿಂದ ೮ ಜನರಿಗೆ ೨ ದಿನದ ತರಬೇತಿ ನೀಡಬೇಕು. ಹೆಣ್ಣುಮಕ್ಕಳಿಗೆ ಆದ್ಯತೆ ಇರಲಿ.


ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ @ ರೂ. 30/-


ವಿಕಲ ಚೇತನ ಮಕ್ಕಳಿಗೆ ಅವಕಾಶ


ವಿಕಲ ಚೇತನ ಮಕ್ಕಳನ್ನು ಒಂದು ಗೂಡಿಸಲು ಪ್ರತಿ ವರ್ಷಕ್ಕೆ ನಿರ್ದಿಷ್ಟ ಪ್ರಸ್ತಾವನೆಯ ಮೆರೆಗೆ ರೂ. 1200/- ತನಕ ಒಂದು ಮಗುವಿಗೆ ಕೊಡಬಹುದು.


ವಿಶೇಷ ಅಗತ್ಯವಿರುವ ಮಕ್ಕಳಿಗೆ ಒಂದು ಮಗುವಿಗೆ 1200 ರೂಪಾಯಿಯ ಒಳಗೆ ಸಹಾಯ ನಿಡಲು ಜಿಲ್ಲಾ ಯೋಜನೆಯನ್ನು ರೂಪಿಸಬೇಕು


ಸಂಪನ್ಮೂಲ ಸಂಸ್ಥೆಗಳ ತೊಡಗುವಿಕೆಯನ್ನು ಉತ್ತೇಜಿಸಬೇಕು.


ಸಂಶೋಧನೆ, ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಉಸ್ತುವಾರಿ .


ಪ್ರತಿ ಶಾಲೆಗೆ ವರ್ಷಕ್ಕೆ ರೂ.1500 ವರೆಗೆ.


ಜಿಲ್ಲಾ ಯೋಜನೆಯ ಆಯವ್ಯದ ೬% ನ್ನು ಮೀರಬಾರದು.


ಸಂಶೋಧನಾ ಮತ್ತು ಸಂಪನ್ಮೂಲ ಸಂಸ್ಥೆಗಳ ಜೊತೆ ಸಹಭಾಗಿತ್ವ. ರಾಜ್ಯದಲ್ಲಿನ ನಿರ್ಧಿಷ್ಟ ಗುರಿ ಹೊಂದಿದ ಸಂಪನ್ಮೂಲ ತಂಡಗಳ ಕ್ರೋಢೀಕರಣ.


ಮೌಲ್ಯ ಮಾಪನ ಮತ್ತು ಮೇಲ್ವಿಚಾರಣ ಸಾಮರ್ಥ್ಯದ ಅಭಿವೃದ್ಧಿಗೆ ಸಂಪನ್ಮೂಲ ಮತ್ತು ಸಂಶೋಧನ ಸಂಸ್ಥೆಗಳ ಮೂಲಕ ಅದ್ಯತೆ .ಮತ್ತು ಪರಿಣಮಕಾರಿಯಾದ EMIS .


ಶಾಲೆಗಳ ನಕ್ಷೆ ಮತ್ತು/ ಮೈಕ್ರೋ ಯೋಜನೆಗಳ ಮೂಲಕ ಮನೆಗಳ ದತ್ತಾಂಶಗಳನ್ನು ತಹಲ್ ವರೆಗೆ ತರುವುದು.


ಸಂಪನ್ಮೂಲ ವ್ಯಕ್ತಿಗಳ ಸಮೂಹ ರಚಿಸಲಾಗುವುದು, ಪ್ರವಾಸ ಅನುದಾನ, ಮೇಲುಸ್ತುವಾರಿಗೆ ಗೌರವಧನ, ಸಮುದಾಯ ಆಧಾರಿತ ದತ್ತಾಂಶದ ಉತ್ಪಾದನೆ, ಸಂಶೋಧನಾ ಅಧ್ಯಯನಗಳು, ವೆಚ್ಚದ ಅಂದಾಜು ಮತ್ತು ತಿಳುವಳಿಕೆಯ ಶರತ್ತುಗಳು ಮತ್ತು ಅವರ ಕ್ಷೇತ್ರ ಚಟುವಟಿಕೆಗಳು, ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಯ ಪರಿಶೀಲನೆ.


ಮಧ್ಯವರ್ತನೆಯ ಮಾದರಿ.


ರಾಷ್ಟ್ರ, ರಾಜ್ಯ, ಜಿಲ್ಲಾ, ವಿಭಾಗ, ಮತ್ತು ಶಾಲಾ ಮಟ್ಟದಲ್ಲಿ ನಿಧಿಯನ್ನು ಖರ್ಚು ಮಾಡುವಾಗ ಪ್ರತಿಶಾಲೆಗೆ ಮಂಜೂರಾದ ಅನುದಾನ ಗಮನದಲ್ಲಿರಬೇಕು .


ರಾಷ್ಟ್ರ ಮಟ್ಟದಲ್ಲಿ ಶಾಲೆ ಒಂದಕ್ಕೆ ಪ್ರತಿವರ್ಷ. 100 ರೂಪಾಯಿ ವೆಚ್ಚ ಮಾಡಬಹುದು.


ರಾಜ್ಯ/ಜಿಲ್ಲೆ /BRC/CRC/ಶಾಲಾ ಹಂತದಲ್ಲಿ ಮಾಡುವ ಖರ್ಚನ್ನು ಆಯಾ ರಾಜ್ಯಗಳೇ ನಿರ್ಧರಿಸಬೇಕು. ಇದು ಮೌಲ್ಯಮಾಪನ , ಉಸ್ತುವಾರಿ, MIS , ತರಗತಿಯ ಪರಶೀಲನಾ ವೆಚ್ಚವನ್ನು ಒಳಗೋಂಡಿರುವುದು.,


SCERT ಗೆ ಬೆಂಬಲ ನಿಡುವಾಗ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಕ್ಕೆ ಒದಗಿಸಿದ ನಿಧಿಯೂ ಅಲ್ಲದೆ ಹೆಚ್ಚಿನ ಅವಕಾಶ ಇರಬೇಕು.


ರಾಜ್ಯದಲ್ಲಿ ನಿರ್ದಿಷ್ಟ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧವಿರುವ ಸಂಸ್ಥೆಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.


ನಿರ್ವಹಣಾವೆಚ್ಚ :


ಕಛೇರಿವೆಚ್ಚ: , ಈಗಿರುವ ಮಾನವ ಸಂಪನ್ಮೂಲದ ಮಾಹಿತಿ ಪಡೆದು ವಿವಿಧ ಹಂತದಲ್ಲಿ ತಜ್ಞರ ಎರವಲು ಪಡೆವುದು, POL, ಇತ್ಯಾದಿ.;


MIS ನಲ್ಲಿ, ಸಮುದಾಯ ಯೊಜನಾ ಪ್ರಕ್ರಿಯೆ, ಸಾರ್ವಜನಿಕ ಕಾಮಗಾರಿಗಳು, ಲಿಂಗತ್ವ, ಇತ್ಯಾದಿ ಜಿಲ್ಲೆಯಲ್ಲಿ ಲಭ್ಯವಿರುವ ಸಾಮರ್ಥ್ಯ ಕ್ಕೆ ಅನುಗುಣವಾಗಿ ತಜ್ಞರಿಗೆ ಆದ್ಯತೆ,


ವ್ಯವಸ್ಥಾಪನಾ ವೆಚ್ಚವನ್ನು ರಾಜ್ಯ/ಜಿಲ್ಲೆ/ವಲಯ/ ಕ್ಲಸ್ಟರ್ ಹಂತದಲ್ಲಿ ಪರಿಣಾಮಕಾರಿ ತಂಡಗಳನ್ನು ಬೆಳೆಸಲು ಬಳಸಬೇಕು.


ವಲಯ ಸಂಪನ್ಮೂಲ ಕೇಂದ್ರ / ಕ್ಲಸ್ಟರ್ ಸಂಪನ್ಮೂಲ ಕೇಂದ್ರ (BRC/CRC) ಗಳಿಗೆ ಅಗತ್ಯವಾದ ಸಿಬ್ಬಂಧಿಯನ್ನು ಆದ್ಯತೆಯ ಮೇರೆಗ ಯೋಜನಾ ಪೂರ್ವ ಹಂತದಲ್ಲೆ ಗುರುತಿಸಿದರೆ ತೀವ್ರ ಪ್ರಕ್ರಿಯೆ ಆಧಾರಿತ ಯೋಜನೆಗೆ ಸಹಾಯವಾಗುವುದು.


ಬಾಲಕಿಯರ ಶಿಕ್ಷಣಕ್ಕೆ ನವೀನವಾದ ಚಟುವಟಿಕೆಗಳನ್ನು , ಶಿಶುಗಳ ಅರೈಕೆ ಮತ್ತು ಶಿಕ್ಷಣ , ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮಕ್ಕಳಿಗೆ ಮಧ್ಯವರ್ತನೆ, ವಿಶೇಷವಾಗಿ ಉನ್ನತ ಪ್ರಾಥಮಿಕ ಶಾಲಾ ಹಂತದಲ್ಲಿ ಸಮುದಾಯ ಕಾಂಪ್ಯೂಟರ್ ಶಿಕ್ಷಣ.


ನವೀನವಾದ ಪ್ರತಿ ಯೋಜನೆಗೆ ರೂ.15 ಲಕ್ಷ ಮತ್ತು ರೂ. 50 ಲಕ್ಷ ಪ್ರತಿ ಜಿಲ್ಲೆಗೆ ಪ್ರತಿವರ್ಷ,ಸ.ಶಿ ಅ ( SSA) ಅಡಿಯಲ್ಲಿ ಅನ್ವಯವಾಗುವುದು.


ECCE ಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮಧ್ಯವರ್ತನೆಗಳು ಈಗಾಗಲೇ ಇರುವ ಇತರ ಕಾರ್ಯಕ್ರಮಗಳ ಮೇರೆಗಿನ ಅನುಮೋದನೆ ಪಡೆದ ಘಟಕದ ವೆಚ್ಚದಷ್ಟೆ ಇರವವು


ವಲಯ ಸಂಪನ್ಮೂಲ ಕೇಂದ್ರಗಳು/ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳು


ಪ್ರತಿ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ಸಾಧಾರಣವಾಗಿ ಒಂದು (BRC ) ವಲಯ ಸಂಪನ್ಮೂಲ ಕೇಂದ್ರ ಇರುವುದು , ಯಾವ ರಾಜ್ಯದಲ್ಲಿ ಶೈಕ್ಷಣಿಕ ಆಡಳಿತಕ್ಕಾಗಿ ಉಪ ಜಿಲ್ಲಾ ವಲಯ ಅಥವ ವೃತ್ತಗಳು ಇದ್ದರೆ ಆಗ ರಾಜ್ಯವು ಅಲ್ಲಿಯೂ ಒಂದು ವಲಯ ಸಂಪನ್ಮೂಲ ಕೇಂದ್ರ ವನ್ನು ಹೊಂದಬಹುದು. ಹಾಗಾದರೂ ಆ ಸಿಡಿ ವಲಯದಲ್ಲಿರುವ (BRC) ವಲಯ ಸಂಪನ್ಮೂಲ ಕೇಂದ್ರಗಳು ಮತ್ತು (CRC) ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ ಅವರ್ತ ಮತ್ತು ಅನಾವರ್ತ ವೆಚ್ಚವು ಆ ಸಿ ಡಿ .ವಲಯದಲ್ಲಿ ಒಂದು ಸಿಡಿ ವಲಯದಲ್ಲಿ ಒಂದೆ ವಲಯ ಸಂಪನ್ಮೂಲ ಕೇಂದ್ರ ( BRC) ಇದ್ದರೆ ಆಗುವ ವೆಚ್ಚವನ್ನು ಮೀರಬಾರದು


(BRC/CRC) ವಲಯ ಸಂಪನ್ಮೂಲ ಕೇಂದ್ರಗಳು / ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳು ಸಾಧ್ಯವಾದ ಮಟ್ಟಿಗೆ ಶಾಲಾ ಆವರಣದಲ್ಲಿಯೇ ಇರಬೇಕು.


ಅಗತ್ಯ ಬಿದ್ದಲೆಲ್ಲ ರೂ. 6 ಲಕ್ಷ ದ ಮಿತಿಯಲ್ಲಿ (BRC) ವ.ಸಂ ಕೇಂದ್ರ ಕಟ್ಟಡ ನಿರ್ಮಿಸಬೇಕು.


ರೂ. 2 ಲಕ್ಷ ದಲ್ಲಿ (CRC) ಕ್ಲ.ಸಂ.ಕೇಂದ್ರವನ್ನು ನಿರ್ಮಾಣ ಮಾಡಬೇಕು. ಅದನ್ನು ಹೆಚ್ಚುವರಿ ಕೊಟ್ಟಡಿಯಾಗಿ ಶಾಲೆಗೆ ಅಗತ್ಯ ಬಿದ್ದಾಗ ಬಳಸಬಹುದು.


ಯಾವುದೆ ಜಿಲ್ಲೆಯಲ್ಲಿ ಅಲ್ಲಿನ ಶಾಲೆಯಲ್ಲದ (BRC and CRC) ವ.ಸಂ.ಕೇಂದ್ರ ಮತ್ತು ಕ್ಲ.ಸಂ.ಕೇಂದ್ರ ಕಟ್ಟಡಗಳ ನಿರ್ಮಾಣ ವೆಚ್ಚವು ಕಾರ್ಯಕ್ರಮದ ವರ್ಷದ ಒಟ್ಟು ಖರ್ಚಿನ ೫% ನ್ನು ಮೀರಬಾರದು. ಮಧ್ಯವರ್ತನೆ ಮಾದರಿ.


ವಲಯದಲ್ಲಿ 100 ಕ್ಕೂ ಹೆಚ್ಚು ಶಾಲೆಗಳಿದ್ದರೆ 20 ರ ತನಕ ಶಿಕ್ಷಕರನ್ನು; ಚಿಕ್ಕ ವಲಯಗಳಲ್ಲಿ ವ.ಸಂ.ಕೇಂದ್ರ (BRC)ಗಳು ಮತ್ತು CRCಳು ಸೇರಿದಂತೆ 10 ಶಿಕ್ಷಕರನ್ನು ನೇಮಿಸಬಹುದು.


ಪೀಠೋಪಕರಣಗಳಿಗೆ ಇತರೆ ಖರ್ಚಿಗೆ, . @ ರೂ. 1 ಲಕ್ಷ ಪ್ರತಿ ವ.ಸಂ.ಕೇಂದ್ರ( BRC)ಗೆ ಮತ್ತು Rs. 10,000 ಪ್ರತಿ ಕ್ಲ.ಸಂ.ಕೇಂದ್ರ( CRC) ಕ್ಕೆ


ಸಾದಿಲ್ವಾರು ಅನುದಾನ ವರ್ಷ ಒಂದಕ್ಕೆ ರೂ. 12,500 ಪ್ರತಿ ವ.ಸಂ.ಕೇಂದ್ರಕ್ಕೆ (BRC) ಮತ್ತು ರೂ. 2500 ಪ್ರತಿ ಪ್ರತಿ ಕ್ಲ.ಸಂ.ಕೇಂದ್ರಕ್ಕೆ (CRC)


ಸಭೆಗಳಿಗೆ, ಪ್ರವಾಸ ಭತ್ಯ ತಿಂಗಳಿಗೆ ಪ್ರತಿ ವಲಯ ಸಂಪನ್ಮೂಲಕೇಂದ್ರಕ್ಕೆ( BRC) , Rs 200 ಪ್ರತಿ ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕೆ ಪ್ರತಿ ಕ್ಲ.ಸಂ.ಕೇಂದ್ರ. ( CRC) ರೂ.100/-


TLM ಅನುದಾನ: ವರ್ಷ ಒಂದಕ್ಕೆ ಪ್ರತಿ ವಲಯ ಸಂಪನ್ಮೂಲ ಕೇಂದ್ರಕ್ಕೆ( BRC ) ರೂ. 5000/-, ಒಂದುವರ್ಷಕ್ಕೆ ಪ್ರತಿ ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕೆ ( CRC) ರೂ. 1000/-


BRC/CRCಸಿಬ್ಬಂದಿಯನ್ನು ತೀವ್ರವಾದ ಆಯ್ಕೆಯ ಪ್ರಕ್ರಿಯೆಯ ನಂತರ ಪೂರ್ವ ತಯಾರಿ ಹಂತದಲ್ಲಿಯೇ ಗುರುತಿಸುವುದು.


ಶಾಲೆಯಲ್ಲಿ ಇಲ್ಲದ ಮಕ್ಕಳಿಗೆ ಮಧ್ಯವರ್ತನೆಗಳು.


ಈಗಾಗಲೇ ಅನುಮೋದನೆ ಪಡೆದಿರುವ, ಶಿಕ್ಷಣ ಖಾತ್ರಿ ಯೋಜನೆ ಮತ್ತು ಪರ್ಯಾಯ ಹಾಗೂ ನವೀನ ಶಿಕ್ಷಣಗಳು ಕೆಳಕಂಡ ರೀತಿಯ ಮಧ್ಯವರ್ತನೆಗಳನ್ನು ಒದಗಿಸುತ್ತವೆ. :


ಸೇವಾ ಸೌಲಭ್ಯವಿಲ್ಲದ ಕಡೆ ಶಿಕ್ಷಣ ಖಾತ್ರಿ ಕೇಂದ್ರಗಳನ್ನು ಸ್ಥಾಪಿಸುವುದು.


ಪರ್ಯಾಯ ಶಾಲಾ ಮಾದರಿಗಳನ್ನು ಸ್ಥಾಪಿಸುವುದು.


ಸೇತು ಬಂಧ ಕೋರ್ಸಗಳು, ಪರಿಹಾರ ಬೋಧನೆಗಳು, ಮರಳಿ ಶಾಲೆಗೆ ಶಿಬಿರಗಳು ಶಾಲೆಯಲ್ಲಿ ಇಲ್ಲದ ಮಕ್ಕಳನ್ನು ಮುಖ್ಯ ವಾಹಿನಿಗೆ ತಂದು ಈಗಿರುವ ಶಾಲೆಗಳಿಗೆ ಸೇರಿಸಬೇಕು


ಮೈಕ್ರೋ ಯೋಜನೆಗಳು. ಕುಟುಂಬಗಳ, ಸಮಿಕ್ಷೆಗೆ ಅಧ್ಯಯನಕ್ಕೆ,ಸಮುದಾಯದ ಕ್ರೊಢೀಕರಣಕ್ಕೆ , ಶಾಲಾ ಆಧಾರಿತ ಚಟಯವಟಿಕೆಗಳಿಗೆ, ಕಚೇರಿ ಸಲಕರಣೆಗಳಿಗೆ ಎಲ್ಲ ಹಂತದಲ್ಲಿ ತರಬೇತಿ ಪುನರ್ ಮನನ, ಪೂರ್ವ ತಯಾರಿ, ಇತ್ಯಾದಿಗಳಿಗೆ.


ರಾಜ್ಯದಿಂದ ಶೀಫಾರಸ್ಸು ಹೊಂದಿದ ಜಿಲ್ಲೆಯ ನಿರ್ದಿಷ್ಟ ಪ್ರಸ್ತಾವನೆಯ ಮೇರೆಗೆ,


ಜಿಲ್ಲೆಯಲ್ಲಿರುವ ಪಟ್ಟಣ ಪ್ರದೇಶಗಳು ಅಥವ ಮೆಟ್ರೊ ಪಾಲಿಟಿಯನ್ ನಗರಗಳನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸಬಹುದು.


ಮೂಲ: ಪೋರ್ಟಲ್ ತಂಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ