ಶನಿವಾರ, ಜುಲೈ 17, 2021

ವಿಶ್ವ ಎಮೋಜಿ ದಿನವನ್ನು ಪ್ರತಿವರ್ಷ ಜುಲೈ 17 ರಂದು ಆಚರಿಸಲಾಗುತ್ತದೆ. ಎಮೋಜಿ ಎಂಬುದು ಜಪಾನಿ ಶಬ್ದವಾಗಿದ್ದು, ಇದರ ಅರ್ಥ 'ಚಿತ್ರ ಪದ'.

ವಿಶ್ವ ಎಮೋಜಿ ದಿನವನ್ನು ಪ್ರತಿವರ್ಷ ಜುಲೈ 17 ರಂದು ಆಚರಿಸಲಾಗುತ್ತದೆ. ಎಮೋಜಿ ಎಂಬುದು ಜಪಾನಿ ಶಬ್ದವಾಗಿದ್ದು, ಇದರ ಅರ್ಥ 'ಚಿತ್ರ ಪದ'.

ಹೌದು, ಪಠ್ಯ ಸಂದೇಶಗಳನ್ನು ಕಳುಹಿಸುವುದು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಯಾರ ಜೊತೆಗಾದರೂ ಚಾಟ್ ಮಾಡುವಾಗ ಅಥವಾ ಪಠ್ಯ ಸಂದೇಶಗಳನ್ನು ಕಳುಹಿಸುವಾಗ ಎಮೋಜಿಗಳಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯದ ಮಾತು. ಎಮೋಜಿಗಳಿಲ್ಲದ ಸಂದೇಶಗಳು ನೀರಸವಾಗಿರುತ್ತವೆ ಎಂಬುದಂತೂ ಸತ್ಯ.

ಪ್ರೀತಿ, ಪ್ರೇಮ, ನೋವು, ನಗು, ನಾಚಿಕೆ, ಗಾಬರಿ, ಅಚ್ಚರಿಯಂತಹ ಭಾವನೆಗಳನ್ನು ಬೇರೆಲ್ಲೋ ಕುಳಿತಿರುವ ವ್ಯಕ್ತಿಗೆ ವರ್ಚುವಲ್‌ ಆಗಿ ತಲುಪಿಸಲು ಎಮೋಜಿಗಳು ಅನಿವಾರ್ಯ. ಕೊರೊನಾ ಕಾಲಘಟ್ಟದಲ್ಲಿರುವ ನಾವು ಸಂವಹನ ನಡೆಸುವಾಗ ಸಾಂತ್ವನ, ನೋವು, ಅಳು, ಗಾಬರಿಯಂತಹ ಭಾವನೆಗಳು ಹೊರಹೊಮ್ಮುತ್ತಲೇ ಇರುತ್ತವೆ. ಇಂತಹ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳು ಮಾಡುವ ಕೆಲಸ ಅದ್ಬುತ ಎಂದೇ ಹೇಳಬಹುದು.

ಕೆಲವೊಮ್ಮೆ ಪದಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳನ್ನು ಎಮೋಜಿಗಳ ಮೂಲಕ ವ್ಯಕ್ತಪಡಿಸಿ ಹಗುರಾಗುತ್ತೇವೆ. ಎಮೋಜಿಗಳ ಮೂಲಕ ಮನದಾಳದ ಮಾತುಗಳನ್ನು ಕಳಿಸಿ ಸಮಾಧಾನಗೊಳ್ಳುತ್ತೇವೆ.

ಎಮೋಜಿಗಳ ಇತಿಹಾಸ- ಇದು ನಿಮಗೆ ತಿಳಿದಿರಲಿ

ಎನ್‌ಟಿಟಿ ಡೊಕೊಮೊದಲ್ಲಿ ಕೆಲಸ ಮಾಡುತ್ತಿದ್ದ ಜಪಾನ್‌ ಮೂಲದ ಶಿಗೇಟಕಾ ಕುರಿಟಾ ಎಂಬ ಇಂಜಿನೀಯರ್ 1998ರಲ್ಲಿ ಈ ಎಮೋಜಿಗಳನ್ನು ಸಿದ್ದಪಡಿಸಿದ್ದರು. 1990ರಲ್ಲಿ ಎಮೋಜಿಗಳನ್ನು ಮಾಡಿದ್ದರೂ 2010 ರಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿದ್ದಂತೆ ಎಮೋಜಿಗಳನ್ನು ಅಭಿವೃದ್ದಿ ಪಡಿಸಲಾಯಿತು.

ಅತೀ ಹೆಚ್ಚು ಉಪಯೋಗಿಸುವ ಎಮೋಜಿಗಳು

ಸಂತೋಷದ ಕಣ್ಣೀರು ಇರುವ ಎಮೋಜಿ ಸದ್ಯ ಟ್ವಿಟರ್‌ನಲ್ಲಿ ಅತೀ ಹೆಚ್ಚು ಬಳಕೆ ಕಂಡಿರುವ ಎಮೋಜಿ. ಫೇಸ್‌ಬುಕ್‌ನಲ್ಲಿ ಪ್ರೀತಿ, ಹೃದಯಕ್ಕೆ ಸಂಬಂಧಿಸಿದ ಎಮೋಜಿ ಹೆಚ್ಚು ಉಪಯೋಗಿಸಲಾಗಿದೆ. ಹಾಗೆಯೇ ಬ್ಲೋವಿಂಗ್ ಅ ಕಿಸ್‌ ಸಹ ಭಾರತದಲ್ಲಿ ಅತೀ ಹೆಚ್ಚು ಬಳಸಿರುವ ಎಮೋಜಿ.

ಎಮೋಜಿಗಳ ಬಳಕೆ ಬಗ್ಗೆ ಇನ್ನಷ್ಟು ಮಾಹಿತಿ

ಒಂದು ಸಂದೇಶದ ಜತೆ ಎಮೋಜಿಯನ್ನು ಕಳಿಸುವ ಮೂಲಕ ನಮ್ಮ ಭಾವನೆಗಳು ಸರಳವಾಗಿ ತಿಳಿಸಬಹುದು. ಅತಿಯಾದ ಕೋಪ ಬಂದಾಗ ಪೂರ್ಣವಾಗಿ ಕೆಂಪಾಗಿರುವ ಗೊಂಬೆಯ ಮುಖದ ಎಮೋಜಿಯನ್ನು ಬಳಸುತ್ತೇವೆ. ಅನಾರೋಗ್ಯದಿಂದ ಬಳಲುತ್ತಿದ್ದಾಗ ಬಾಯಲ್ಲಿ ಥರ್ಮಾಮೀಟರ್ ಇರುವ ಎಮೋಜಿಯನ್ನು ಬಳಸುತ್ತೇವೆ. ಗಾಬರಿಯಾಗುವಂತಹ ವಿಷಯ ತಿಳಿದಾಗ ಎರಡು ಕಣ್ಣುಗಳು ದೊಡ್ಡದಾಗಿ ಗಾಬರಿಯಿಂದ ನೋಡುವ ಎಮೋಜಿಯನ್ನು ಉಪಯೋಗಿಸುತ್ತೇವೆ. ಬೇಸರವಾದಾಗ ಕಣ್ಣುಗಳನ್ನು ಕೆಳಗೆ ಮಾಡುವ ಮತ್ತು ದುಃಖವಾದಾಗ ಕಣ್ಣೀರು ಬರುವ ಎಮೋಜಿಯನ್ನು ಬಳಸುತ್ತೇವೆ. ಅಸಡ್ಡೆಯಿಂದ ವರ್ತಿಸುವುದಾದರೇ ಬಾಯಿಯನ್ನು ಸೊಟ್ಟಗೆ ಮಾಡುವ ಮತ್ತು ಹುಬ್ಬು ಹಾರಿಸುವ ಎಮೋಜಿಯನ್ನು ಕಳಿಸಿಬಿಡುತ್ತೇವೆ. ತುಂಬಾ ಮುದ್ದು ಮಾಡುವ ಮನಸ್ಸು ಬಂದಾಗ ಮುತ್ತು ನೀಡುವ ಮೋಜಿಗಳನ್ನು ಬಳಸುತ್ತೇವೆ ಹೀಗೆ ಪ್ರತಿಯೊಂದು ಭಾವನೆಯನ್ನು ನಾವು ಎಮೋಜಿಗಳ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ