ಪಟ್ಟಣದ ದೇವವನದಲ್ಲಿ 50 ಪ್ರಭೇದಗಳಿಗೆ ಸೇರಿದ ಇಂಥ ಸಸ್ಯಗಳನ್ನು ಬೆಳೆಸಲಾಗಿದೆ. 9 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಉದ್ಯಾನವನ್ನು ಸಾಮಾಜಿಕ ಕಾರ್ಯಕರ್ತ ಅನೂಪ್ ನೌತಿಯಾಲ್ ಉದ್ಘಾಟಿಸಿದರು.
‘ಸಸ್ಯಶಾಸ್ತ್ರದ ಪ್ರಕಾರ, ಪಾಚಿ, ಶಿಲೀಂಧ್ರ, ಜರೀಗಿಡಗಳು ‘ಕ್ರಿಪ್ಟೋಗ್ಯಾಮೆ’ ಪ್ರಭೇದಕ್ಕೆ ಸೇರಿದವುಗಳಾಗಿವೆ. ಇವು ನಾಳ ರಹಿತ ಸಸ್ಯಗಳಾಗಿದ್ದು, ಇವುಗಳು ಹೂವು ಅಥವಾ ಬೀಜಗಳ ಮೂಲಕ ಸಂತಾನೋತ್ಪತ್ತಿ ನಡೆಸುವುದಿಲ್ಲ. ಈ ಸಸ್ಯಗಳು ಕಾಂಡ, ಎಲೆ ಮತ್ತು ಬೇರಿನಂತಹ ಏಕಕೋಶಿಯ ರಚನೆಯನ್ನು ಹೊಂದಿರುತ್ತವೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್ ಚತುರ್ವೇದಿ ವಿವರಿಸಿದರು.
‘ದೇವವನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ. ಇಲ್ಲಿನ ತೇವಾಂಶ ಸಹ ಇಂಥ ಸಸ್ಯಗಳನ್ನು ಬೆಳೆಯಲು ಸೂಕ್ತವಾದುದು. ಹೀಗಾಗಿ ಈ ಉದ್ಯಾನದ ಮೂರು ಎಕರೆ ಪ್ರದೇಶದಲ್ಲಿ ಈ ಸಸ್ಯಗಳನ್ನು ಬೆಳೆಸಲಾಗಿದೆ’ ಎಂದು ಹೇಳಿದರು.
‘ದೇವವನ ಪ್ರದೇಶದಲ್ಲಿ ದೇವದಾರು ಹಾಗೂ ಓಕ್ ಮರಗಳೇ ಹೆಚ್ಚಾಗಿರುವ ಅರಣ್ಯಗಳಿವೆ. ಇಂಥ ಪ್ರದೇಶಗಳು ಪಾಚಿ, ಶಿಲೀಂಧ್ರಗಳಿಗೆ ನೈಸರ್ಗಿಕ ಆಶ್ರಯ ತಾಣಗಳಾಗುತ್ತವೆ’ ಎಂದೂ ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ