ಭಾರತೀಯ ಭಾಷಾ ಭೋದನೆಯ ಬಗೆಗಿನ ಎನ್.ಸಿ.ಎಪ್ ಪೊಶೀಷನ್ ಪೇಪರ್
ಪೀಠಿಕೆ
ಭಾಷೆಯು ಒಂದು ನಿಯಮಧಾರಿತ ಸಂವಹನ ವ್ಯವಸ್ಥೆ ಮಾತ್ರವಲ್ಲ. ಅದು ಹೆಚ್ಚಿನ ಮಟ್ಟಿಗೆ ನಮ್ಮ ಚಿಮತನೆಯನ್ನು ರೂಢಿಸುವ, ನಮ್ಮ ಸಾಮಾಜಿಕ ಸಂಬಂಧಗಳನ್ನು ಅಧಿಕಾರ ಹಾಗು ಸಮಾನತೆಯ ನೆಲೆಗಳಲ್ಲಿ ವ್ಯಾಖ್ಯಾನಿಸುವ ಗಹನವಾದ ವಿಷಯವೂ ಹೌದು. ಮೂರು ವರ್ಷ ವಯಸ್ಸಿನೊಳಗೆಯೇ ಸಾಮಾನ್ಯ ಮಕ್ಕಳು ಒಂದು ಮಾತ್ರವಲ್ಲ, ಅನೇಕ ವೇಗವಾಗಿ ಪ್ರೌಢಿಮೆ ಸಾಧಿಸುವ ಸಂಗತಿಯು ಬಹುಶಃ ನಾವೆಲ್ಲರೂ ಭಾಷೆಗೆ ಸಂಬಂಧಿಸಿದಂತೆ ಅಂತರಿಕವಾದ ಸಹಜ ಶಕ್ತಿಯನ್ನು ಹುಟ್ಟಿನಿಂದಲೇ ಪಡೆದಿದ್ದೇವೆ ಎಂಬುದನ್ನು ತೋರಿಸುತ್ತದೆ. ಎಲ್ಲಾ ನಿರ್ಧಿಷ್ಟ ಭಾಷಾ ಕಲಿಕಯೂ ಸಾಮಾಜಿಕ ಹಾಗು ಸಾಂಸ್ಕೃತಿಕ ಮಧ್ಯಸ್ಥಿಕೆಯಲ್ಲಿ ನಡೆಯುತ್ತದೆ ಹಾಗು ಪ್ರತಿ ವ್ಯಕ್ತಿಯೂ ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ವ್ಯವಹರಿಸಲು ಅಗತ್ಯವಾದ ಭಾಷಾ ಬಳಕೆಗಳ ಸಂಗ್ರಹವನ್ನು ತಾನೆ ಯಶಸ್ವಿಯಾಗಿ ಸೃಷ್ಟಿಸಿಕೊಳ್ಳುತ್ತಾನೆ/ಳೆ. ಶೈಕ್ಷಣಿಕ ಯೋಜನೆ ತಯಾರಿಸುವವರು ಹಾಗು ಭಾಷಾ ನೀತಿಯ ರೂಪಣೆ ಮಾಡುವವರು ಮಗುವಿನ ಆ ಆಂತರಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗದಿರುವುದು ಒಂದು ದುಃಖದ ಸಂಗಂತಿಯೇ ಸರಿ. ಭಾರತದಂತಹ ದೇಶದಲ್ಲಿ ಹೆಚ್ಚಿನ ಮಕ್ಕಳು ಬಹುಭಾಷಾ ಸಾಮರ್ಥ್ಯದೊಂದಿಗೆ ಶಾಲೆಗೆ ಬರುತ್ತಾರೆ. ಆದರೆ ಅವರು ಶಅಲಾ ವ್ಯವಸ್ಥೆಯಿಂದ ಹೊರ ಬೀಳಲಾರಂಬಿಸುತ್ತಾರೆ. ಇದಕ್ಕೆ ಕಾರಣವಾಗಿರುವ ವಿವಿಧ ಅಂಶಗಳಲ್ಲಿ ಶಾಲೆಯ ಭಾಷೆಯೂ ಅವರ ಮನೆ ಹಾಗು ನೆರೆಹೊರೆಯ ಭಾಷೆಗೆ ಸಂಬಂಧೀಕರಿಸಿಕೊಳ್ಳುವಲ್ಲಿ ಸೋಲುತ್ತದೆ ಎನ್ನುವುದೂ ಒಂದು. ಹೆಚ್ಚಿನ ಮಕ್ಕಳು ಅವರ ಮಾತೃಭಾಷೆಯಲ್ಲಿ ಕೂಡಾ ಓದುವ ಹಾಗು ಬರೆಯುವ ಕೌಶಲಗಳಲ್ಲಿ ಅತ್ಯಂತ ನಿರಾಶಾದಾಯಕ ಮಟ್ಟದ ಸಾಮರ್ಥ್ಯದೊಂದಿಗೆ ಶಾಲೆ ಪೂರೈಸುತ್ತಾರೆ. ಸಾಮಾನ್ಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಋಣಾತ್ಮಕವಾಗಿ ಪ್ರಭಾವಿಸುವ ವಿವಿಧ ಸಾಮಾಜಿಕ ಹಾಗೂ ರಾಜಕೀಯ ಅಂಶಗಳೊಂದಿಗೆ ಮಕ್ಕಳ ಸಾಮರ್ಥ್ಯ ಗಳಿಕೆ ಕೆಳಮಟ್ಟದಲ್ಲಿರಲು ಕಾರಣವಾಗಿರುವ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ :-
1.ಭಾಷೆಯ ಸ್ವಭಾವ ಹಾಗೂ ಸಂರಚನೆಯ ಕುರಿತು ಹಾಗು ವಿಶೇಷವಾಗಿ ಬಹುಭಾಷಾ ಸಂದರ್ಭಗಳಲ್ಲಿ ಭಾಷಾ ಬೋಧನೆ-ಕಲಿಕಾ ಪ್ರಕ್ರಿಯೆಗಳ ಅರ್ಥೈಸಿಕೊಳ್ಳುವಿಕೆಯಲ್ಲಿರುವ ಕೊರತೆ.
2.ಜ್ಞಾನ ರಚನೆಯಲ್ಲಿ ಭಾಷೆಯು ಸಮಗ್ರ ಪಠ್ಯಕ್ರಮಕ್ಕೆ ಸಾಮಾನ್ಯವಾಗಿ ಅನ್ವಯವಾಗುವಂತೆ ವಹಿಸುವ ಪಾತ್ರವನ್ನು ಅರ್ಥೈಸಿಕೊಳ್ಳುವಲ್ಲಿ ಶೈಕ್ಷಣಿಕ ಯೋಜನೆ ತಯಾರಿಸುವವರು ಸೋತಿರುವುದು.
3.ಭಾಷೆಯಲ್ಲಿ ಜಾತಿ, ಜನಾಂಗ, ಲಿಂಗ ಸಂಬಂಧೀ ವಿಷಯಗಳೂ ಸೇರಿದಂತೆ ಅನೇಕ ಪೂರ್ವಾಗ್ರಹಗಳು ಅಡಕಗೊಳ್ಳಲ್ಪಡುತ್ತವೆ ಎಂಬುದಕ್ಕೆ ಹೆಚ್ಚು ಗಮನ ನೀಡದಿರುವುದು.
4.ಭಾಷೆಯು ಕೇವಲ ಗಧ್ಯ, ಪದ್ಯ, ಪ್ರಬಂಧ ಹಾಗೂ ಕಥೆಗಳಿಗಿಂತಲೂ ಹೆಚ್ಚಿನದನ್ನು ಒಳಗೊಂಡಿದೆ ಎನ್ನುವುದನ್ನು ಗ್ರಹಿಸುವಲ್ಲಿ ಇರುವ ಅಸಮರ್ಥತೆ.
5.ಜ್ಞಾನಾತ್ಮಕ ಬೆಳವಣಿಗೆಯಲ್ಲಿ ಮನೆ ಹಾಗು ನೆರೆಹೊರೆಯ ಭಾಷೆಯ ಪಾತ್ರವನ್ನು ಒಪ್ಪಿಕೊಳ್ಳಲು ಮನಸ್ಸು ಮಾಡದಿರುವುದು ಹಾಗೂ ಜ್ಞಾನಾತ್ಮಕವಾಗಿ ಅಭಿವೃದ್ದಿ ಹೊಂದಿದ ಭಾಷಾ ಸಾಮರ್ಥ್ಯವು ವಿವಿಧ ಭಾಷೆಗಳಿಗೆ ವರ್ಗಾಯಿಸಲ್ಪಡುತ್ತದೆ ಎನ್ನುವುದನ್ನು ಗುರುತಿಸುವಲ್ಲಿನ ಸೋಲು.
ನಮ್ಮ ಉಳಿವಿಗೆ ಭಾಷಾ ವೈವಿಧ್ಯತೆಯು ಜೀವ ವೈವಿಧ್ಯತೆಯಷ್ಟೇ ಮುಖ್ಯವಾಗಿದೆ ಎನ್ನುವುದು ಹೆಚ್ಚು ಹೆಚ್ಚಾಗಿ ಸ್ಪಷ್ಟವಾಗುತ್ತಿದೆ. ನಾವು ಮಕ್ಕಳ ಮಾತೃಭಾಷೆಗಳಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡುವುದು ಮತ್ತು ಬಹುಭಾಷಾ ಸಂದರ್ಭವನ್ನು ತರಗತಿಯಲ್ಲಿ ಲಭ್ಯವಿರುವ ಸಂಪನ್ಮೂಲವಾಗಿ ಬಳಸಿಕೊಳ್ಳುವಲ್ಲಿ ಶಿಕ್ಷಕರಿಗೆ ತರಬೇತಿ ನೀಡುವುದು ಅಗತ್ಯವೂ ಅನಿವಾರ್ಯವೂ ಆಗಿದೆ. ಇತ್ತೀಚೆಗಿನ ಸಂಶೋಧನೆಗಳು ಕೂಡಾ ಬಹುಭಾಷಾ ಪ್ರೌಡಿಮೆ ಮತ್ತು ಶೈಕ್ಷಣಿಕ ಸಾಧನೆಗಳ ನಡುವೆ ಧನಾತ್ಮಕ ಸಹಸಂಬಂಧ ಇರುವುದನ್ನು ತೋರಿಸಿಕೊಟ್ಟಿವೆ.
ಬಹುಭಾಷಿಕತೆಯು ಹೆಚ್ಚಿನ ಜ್ಞಾನಾತ್ಮಕ ನಮ್ಯತೆ ಮತ್ತು ಸಾಮಾಜಿಕ ಸಹಿಷ್ಣುತೆಗಳನ್ನು ಸಾಧ್ಯವಾಗಿಸುತ್ತದೆ ಎನ್ನುವುದನ್ನೂ ಅವು ತೋರಿಸಿವೆ. ನಾವು ಆತಂಕರಹಿತ ಸಂದರ್ಭಗಳಲ್ಲಿ ಗ್ರಹಿಸಿಕೊಳ್ಳಬಹುದಾದ ಅನುಭವಗಳನ್ನು ನೀಡಬೇಕಾಗಿದೆ ಮತ್ತು ಜಾತಿ, ಬಣ್ಣ ಹಾಗು ಲಿಂಗ ತಾರತಮ್ಯಗಳನ್ನು ನಿವಾರಿಸಲು ಎಲ್ಲ ಪ್ರಯತ್ನ ಮಾಡಬೇಕಾಗಿದೆ. ಶೈಕ್ಷಣಿಕ ಯೋಜನೆ ತಯಾರಿಸುವವರು ಪಠ್ಯಕ್ರಮದ ಎಲ್ಲಾ ಆಯಾಮಗಳನ್ನು ಒಳಗೊಳ್ಳುವ ಭಾಷೆಗೆ ಗಮನ ನೀಡದಿದ್ದಲ್ಲಿ ಸಮತೆ, ನ್ಯಾಯ, ಪ್ರಜಾಸತ್ತೀಯ ಗುರಿಗಳು ದೂರದ ಕನಸುಗಳಾಗಿಯೇ ಉಳಿದಾವು.
೧೦ನೇ ಅಧ್ಯಾಯದಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಹಾಗೂ ಶಾಲಾ ಪಠ್ಯಕ್ರಮದಲ್ಲಿ ಭಾಷೆಗಳ ಕುರಿತಂತೆ ಪ್ರಸ್ತಾಪಿಸಲಾಗಿರುವ ಅಂಶಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ನ ಅಧ್ಯಾಯಗಳನ್ನು ಈ ಕೆಳಕಂಡ ಲಿಂಕ್ ಗಳಲ್ಲಿ ಓದಬಹುದಾಗಿದೆ.
1.ಆಧ್ಯಾಯ-೧ ಎನ್.ಸಿ.ಎಫ್ ಪೊಶೀಷನ್ ಪೇಪರ್- ಭಾಷೆಯ ಸ್ವರೂಪ
2.ಅಧ್ಯಾಯ-೨ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷೆ ಕಲಿಕೆ
3.ಅಧ್ಯಾಯ-೩ ಎನ್.ಸಿ.ಎಫ್ ಪೊಶೀಷನ್ ಪೇಪರ್-ಸಾಂವಿಧಾನಿಕ ಅವಕಾಶಗಳು ಹಾಗು ತ್ರಿಭಾಷಾ ಸೂತ್ರ
4.ಅಧ್ಯಾಯ-೪ ಎನ್.ಸಿ.ಎಫ್ ಪೊಶೀಷನ್ ಪೇಪರ್ -ಶಾಲಾ ಪಠ್ಯಕ್ರಮದಲ್ಲಿ ಇತರೆ ಭಾಷಾ ಸಮಸ್ಯಗಳು
5.ಅಧ್ಯಾಯ-೫ ಎನ್.ಸಿ.ಎಫ್ ಪೊಶೀಷನ್ ಪೇಪರ್-ಬಹುಭಾಷಾ ಹಾಗು ತತ್ವಶಾಸ್ತ್ರದ ಸಾಧನೆ
6.ಅಧ್ಯಾಯ-೬ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾ ಕಲಿಕಾ ವಿಧಾನಗಳು
7.ಅಧ್ಯಾಯ-೭ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾ ಕಲಿಕಾ ಸಾಮಗ್ರಿಗಳು
8.ಅಧ್ಯಾಯ-೮ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಯಲ್ಲಿ ಶಿಕ್ಷಕರು
9.ಅಧ್ಯಾಯ-೯ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಯ ಮೌಲ್ಯಮಾಪನ
10.ಅಧ್ಯಾಯ-೧೦ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷಾಬೋಧನೆಗೆ ಕೆಲವು ಶಿಫಾರಸ್ಸುಗಳು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ