ಶುಕ್ರವಾರ, ಜುಲೈ 3, 2015

ಎನ್.ಸಿ.ಎಪ್ ಪೊಶೀಷನ್ ಪೇಪರ್ ಶಾಲಾ ಪಠ್ಯಕ್ರಮದಲ್ಲಿ ಇತರೆ ಭಾಷಾ ಸಮಸ್ಯೆಗಳು

ಎನ್.ಸಿ.ಎಪ್ ಪೊಶೀಷನ್ ಪೇಪರ್ ಶಾಲಾ ಪಠ್ಯಕ್ರಮದಲ್ಲಿ ಇತರೆ ಭಾಷಾ ಸಮಸ್ಯೆಗಳು




Contents [hide]
೧ ಪರಿಚಯ
೨ ಉರ್ದು
೩ ಕಿರು, ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಭಾಷೆಗಳು
೪ ಶಾಸ್ತ್ರೀಯ ಭಾಷೆಗಳು
೫ ವಿದೇಶಿ ಭಾಷೆಗಳು
೬ ಇತರೆ ಬಾಷೆಗಳ ಬೊಧನೆ
ಪರಿಚಯ
ಭಾಷಾ ಶಿಕ್ಷಣ ಕಾರ್ಯಕ್ರಮಗಳನ್ನು ನಾವು ಬಹುಭಾಷಾ ದೃಷ್ಟಿಕೋನದಲ್ಲಿ ಗುರುತಿಸಬೇಕಾಗುತ್ತದೆ. ಬಹುಭಾಷಿತ್ವವು ನೈಸರ್ಗಿಕ ವಿದ್ಯಮಾನವಾಗಿದ್ದು, ಗ್ರಹಿಕಾ ನಮ್ಯತೆ ಮತ್ತು ವಿದ್ಯಾ ಸಾಧನೆಗಳಿಗೆ ಧನಾತ್ಮಕವಾಗಿ ಸಂಬಂಧಿಕರಿಸುತ್ತದೆ. ಪಠ್ಯಕ್ರಮ ರಚನಾಕಾರರು, ಪಠ್ಯಪುಸ್ತಕ ಬರಹಗಾರರು, ಶಿಕ್ಷಕರು, ಮತ್ತು ಪೋಷಕರು ಬಹುಭಾಷಿತ್ವದ ಮಹತ್ವವನ್ನು ಮನಗಾಣುವುದು ಮಹತ್ವದ ವಿಷಯವವಾಗಿದ್ದು, ಈ ಮೂಲಕ ಮಗುವಿಗೆ ತನ್ನ ಸುತ್ತಲಿನ ಸಾಂ ಸ್ಕೃತಿಕ ಮತ್ತು ಭಾಷಾ ವಿವಿಧತೆಯ ಕುರಿತು ಅರಿವು ಮೂಡಿಸುವುದು ಮತ್ತು ಮಗು ತನ್ನ ಬೆಳವಣಿಗೆಗೆ ಇದನ್ನು ಪೂರಕ ಸಂಪನ್ಮೂಲವಾಗಿ ಬಳಸಲು ಪ್ರೋತ್ಸಾಹಿಸುವುದಾಗಿದೆ. ಶಾಲಾ ಶಿಕ್ಷಣ ಮುಗಿಯುವವರೆಗೆ ದ್ವಿ-ಭಾಷೆಯನ್ನು ಉಳಿಸಿಕೊಳ್ಳಬೇಕೆoಬುದು ಭಾಷಾ ಶಿಕ್ಷಣ ಯೋಜನಾಕಾರರಲ್ಲಿರುವ ಒಂದು ಸಾಮಾನ್ಯ ಒಮ್ಮತವಾಗಿದೆ.
ಆದ್ದರಿಂದ, ಶಿಕ್ಷಣ ಶಾಸ್ತ್ರೀಯ ಭೋಧನಾ ಮತ್ತು ಕಲಿಕಾ ವಿಧಾನಗಳನ್ನು ರೂಪಿಸುವ ಸಂದರ್ಭಗಳಲ್ಲಿ ಮಗುವಿಗೆ “ಇತರೆ” ಎಂದು ಗುರುತಿಸಲ್ಪಡುವ ಭಾಷೆಗಳ ವಿಶೇಷ ಲಕ್ಷಣಗಳು ಮತ್ತು ಹಿನ್ನೆಲೆಗಳನ್ನು ಮನದಲ್ಲಿಟ್ಟುಕೊಳ್ಳಬೇಕಿರುವುದು ಅವಶ್ಯಕವಾಗಿದೆ. ಈ ಅಧ್ಯಾಯವು ಅಲ್ಪಸಂಖ್ಯಾತ, ಬುಡಕಟ್ಟಿನ, ಅಳಿವಿನಂಚಿನಲ್ಲಿರುವ ಭಾಷೆಗಳ ಸಾಮಾಜಿಕ, ಸಾಂ ಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಗಳತ್ತ ಪಠ್ಯಕ್ರಮ ತಯಾರಕರು, ಪಠ್ಯಪುಸ್ತಕ ರಚನಾಕಾರರು, ಶಿಕ್ಷಕರು ಮತ್ತು ಪೋಷಕರು ಗಮನ ಸೆಳೆಯಲು ಬಯಸುತ್ತದೆ. ಈ ಭಾಷೆಗಳು ಶ್ರೀಮoತವಾದ ಸಾಂ ಸ್ಕೃತಿಕ ಪರಿಂಪರೆಗಳು ಮತ್ತು ಜ್ಞಾನ ವ್ಯವಸ್ಥೆಗಳ ಸಂಗ್ರಹಗಳಾಗಿದ್ದು, ಇವುಗಳನ್ನು ಜೀವಂತವಾಗಿರಸಲು ಸರ್ವ ಪ್ರಯತ್ನಗಳನ್ನು ಮಾಡಬೇಕಾದ ಅವಶ್ಯಕತೆಯಿದೆ. ಶಾಲಾ ಪಠ್ಯಕ್ರಮ ಚೌಕಟ್ಟಿನಲ್ಲಿ ಇವುಗಳಿಗೆ ಅವಕಾಶ ಒದಗಿಸುವ ಮೂಲಕ ಇದನ್ನು ಮಾಡಬಹದಾಗಿದೆ. ಉರ್ದು ಭಾಷೆಯು ಯಾವುದೇ ನಿರ್ದಿಷ್ಠವಾಗಿ ಗುರುತಿಸಲ್ಪಟ್ಟ ಭೌಗೋಳಿಕ ಸ್ಥಳಕ್ಕೆ ಸೇರಿರದೇ ಇರುವ ಕಾರಣಕ್ಕಾಗಿಯೇ ಭಾರತೀಯ ಭಾಷೆಗಳಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಹೊoದಿದ್ದರಿಂದ ಇದನ್ನು ವಿಶೇಷವಾಗಿ ಗುರುತಿಸಲಾಗಿದೆ. ಈ ಅಧ್ಯಾಯವು ಶಾಸ್ತ್ರೀಯ ಭಾಷೆಗಳ ಅದರಲ್ಲೂ ವಿಶೇಷವಾಗಿ ಸಂಸ್ಕೃತದ ಕಲಿಕೆಗೆ ಸಂಬಂಧಿಸಿದಂತೆ ಚರ್ಚೆಯನ್ನು ಮಾಡುತ್ತದೆ. ವಿದೇಶೀ ಭಾಷೆಗಳನ್ನು ಕಲಿತುಕೊಳ್ಳುವ ಅವಶ್ಯಕತೆಗೆ ಪೂರಕವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಯು ಜೀವಂತವಾಗಿದೆ ಮತ್ತು ಈ ಅಧ್ಯಾಯವು ಈ ಅoಶವನ್ನು ಒತ್ತಿ ಹೇಳಲಷ್ಟೇ ಬಯಸುತ್ತದೆ.
ಉರ್ದು
ಭಾಷಾಧ್ಯಯನಕಾರರಿಗೆ, ಉರ್ದು ಮತ್ತು ಹಿಂದಿಯ ಮಧ್ಯೆ ಯಾವುದೇ ಮೂಲಭೂತ ವ್ಯತ್ಯಾಸವಿಲ್ಲ. ಎರಡೂ ಭಾಷೆಗಳು ಒಂದೇ ರೀತಿಯ ವ್ಯಾಕರಣ ಹೊoದಿದ್ದು, ಅವುಗಳು ಧ್ವನಿ ವಿಜ್ಞಾನ, ರೂಪ ವಿಜ್ಞಾನ ಮತ್ತು ಶಬ್ದ ಸಂಪತ್ತುಗಳ ಹೆಚ್ಚಿನ ಅoಶಗಳನ್ನು ಹಿಂಚಿಕೊಳ್ಳುತ್ತವೆ. ಕಳೆದ ಐವತ್ತು ವರ್ಷಗಳಿoದ ಮಾತ್ರ ಹಿಂದಿಯನ್ನು ಸಂಸ್ಕೃತೀಕರಣಗೊಳಿಸುವ ಮತ್ತು ಉರ್ದುವನ್ನು ಅರೇಬೀಕರಣಗೊಳಿಸುವ ಹೆಚ್ಚಿನ ಪ್ರಯತ್ನಗಳು ನಡೆದಿದ್ದು, ಇದರ ಪರಿಣಾಮವಂದರೆ, ಅನಂತದ ವೈವಿಧ್ಯಮಯ ತುಟ್ಟತುದಿಗಳು ಸಾಮಾನ್ಯವಾಗಿ ಪರಸ್ಪರ ಗ್ರಹಿಸಲಾರದಂತಾಗಿ ಬಿಡುತ್ತವೆ. ಶಬ್ದ ಸಂಪತ್ತಿನಲ್ಲಿನ ವ್ಯತ್ಯಾಸಗಳಿoದಾಗಿ ಅನೇಕ ಬಾರಿ ಈ ರೀತಿ ಆಗುತ್ತದೆ. ಇನ್ನೊoದು ಕಡೆ, ಹಿಂದೂಸ್ತಾನದ ಈ ಎರಡು ವಿವಿಧತೆಗಳ ಸಾಂ ಕೇತಿಕ ಮತ್ತು ಸಾಮಾಜಿಕ-ರಾಜಕೀಯ ಮಹತ್ವವು ನಿಜವಾಗಲೂ ಒಂದು ವಿಶೇಷ.
ಹಿಂದಿಯು ದೇವನಾಗರಿ ಮತ್ತು ಉರ್ದು ಪರ್ಷಿಯೋ-ಅರೇಬಿಕ್ ಲಿಪಿಗಳಲ್ಲಿ ಬರೆಯಲ್ಪಡುತ್ತವೆ ಹಿಂಬ ವಿಷಯ ಸಾಕಷ್ಟು (ಇದನ್ನು ಸುಲಭವಾಗಿ ತಿರುವು ಮುರುವಾಗಿ ಮಾಡಲು ಸಾಧ್ಯವಿದ್ದರೂ ಸಹ) ಮಹತ್ವದ್ದಾಗಿದೆ. ಪ್ರಸ್ತುತ ಜನಾoಗದಲ್ಲಿ ಪರ್ಷಿಯೋ-ಅರೇಬಿಕ್ ಲಿಪಿ ಕುರಿತು ಹೆಚ್ಚುತ್ತಿರುವ ಅಪರಿಚತತೆಯ ಜೊತೆಗೆ, ಭಾರತೀಯ ತತ್ವಗಳ ಅವಿಭಾಜ್ಯ ಅoಗವಾದ ಒಟ್ಟಾರೆ ಸಾಹಿತ್ಯ ಮತ್ತು ಸಾಂ ಸ್ಕೃತಿಕ ಪರಿಂಪರೆ ಕಳೆದುಹೊಗುತ್ತಿರುವುದು ಒಂದು ಅನುಕoಪದ ವಿಷಯವಾಗಿದೆ, ಕಲಿಕಾರ್ಥಿಗಳು ಒಂದೇ ರೀತಿಯ ರಚನೆ ಇರುವ ಎರಡು “ಭಾಷೆಗಳಲ್ಲಿ” ದ್ವಿ-ಲಿಪಿತ್ವ ಹೊoದುವಂತೆ ಮಾಡುವ ಒಂದು ಸಾಮಾಜಿಕ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿದೆ. ಮಕ್ಕಳಿಗಾಗಿ ಮತ್ತು ಪೋಷಕರಿಗಾಗಿ, ಸಾಮಾನ್ಯ ಆಸಕ್ತಿಗೆ ಸಂಬಂಧಿಸಿದ ದ್ವಿ-ಲಿಪಿಯಲ್ಲಿರುವ ಪುಸ್ತಕಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಿಸುವ ಮೂಲಕ ನಾವು ಒಂದು ಆರಿಂಭವನ್ನು ಮತ್ತು ಮತ್ತು III-IV ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ಕೆಲವು ಪಾಠಗಳನ್ನು ಎರಡೂ ಲಿಪಿಗಳಲ್ಲಿ ಪರಿಚಯಿಸುವ ಪ್ರಯತ್ನವನ್ನು ಮಾಡಬಹುದಾಗಿದೆ. (ಈ ಸಲಹೆಯನ್ನು ನಾವು ಲಾಸ್ ಹಿಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ| ಗ್ಯಾನಮ್ ಮಹಾಜನ್ ಅವರಿಂದ ಪಡೆದಿರುತ್ತೇವೆ)
ಹಿಂದಿಯೂ ಸೇರಿದಂತೆ, 8ನೇ ಶೆಡ್ಯೂಲ್ ನ ಎಲ್ಲಾ ಭಾಷೆಗಳು ಪ್ರಧಾನ ಭಾಷೆಗಳಾಗಿರುವ ರಾಜ್ಯಗಳ ಹೊರಭಾಗದಲ್ಲಿ ಅವುಗಳು ಅಲ್ಪಸಂಖ್ಯಾತ ಸ್ಥಿತಿಯನ್ನು ಹೊoದಿರುವುದರಿಂದ ಮತ್ತು ದೇಶದಲ್ಲಿ ಹೆಚ್ಚೂ ಕಡಿಮೆ ಪ್ರತಿಯೊoದು ರಾಜ್ಯ ಮತ್ತು ಜಿಲ್ಲೆಗೆ ಹೆಚ್ಚಿನ ಸಾಮಾಜಿಕ ಚಲನಶೀಲತೆಯನ್ನು ಕೊಟ್ಟಿರುವುದರಿಂದ,ಹೆಚ್ಚಿನ ರೀತಿಯಲ್ಲಿ ಬಹುಭಾಷಿಗಳಾಗುತ್ತಿರುವುದರಿಂದ, ಸಂವಿಧಾನದ ಸ್ಪೂರ್ತಿ ಮತ್ತು ಆಶಯಕ್ಕೆ ಪೂರಕವಾಗಿ, ಅಲ್ಪಸಂಖ್ಯಾತ ಭಾಷೆಗಳಿಗೆ ರಾಷ್ಟ್ರೀಯ ನೀತಿಯನ್ನು ರೂಪಿಸುವ ಸ್ಪಷ್ಟವಾದ ಅಗತ್ಯವಿದೆ.
ಉರ್ದು (ಸಂಧಿಯ ಜೊತೆಗೆ) ದೇಶದ ಎಲ್ಲೆಡೆಯಲ್ಲಿ ಮಾತನಾಡಲ್ಪಡುತ್ತಿದ್ದರೂ ಸಹ ಯಾವುದೇ ರಾಜ್ಯದ ಬಹುಸಂಖ್ಯಾತ ಭಾಷೆಯಾಗಿಲ್ಲದಿರುವ ವಿಷಯದಲ್ಲಿ ವಿಶಿಷ್ಟವಾಗಿದೆ. ಆದರೆ ಉರ್ದು ರಾಷ್ಟ್ರಮಟ್ಟದಲ್ಲಿ ವಿಶೇಷ ಗಮನವನ್ನು ಸೆಳೆಯುವ ಬೇಡಿಕೆಯನ್ನು ಹೊoದಿದ್ದರೂ ಸಹ, ರಾಜ್ಯಮಟ್ಟದಲ್ಲಿ ಅದು ಎದುರಿಸುವ ಸಮಸ್ಯೆಗಳು ಇತರೆ ಯಾವುದೇ ಅಲ್ಪಸಂಖ್ಯಾತ ಭಾಷೆಗಳು ಎದುರಿಸುವಂತಹವೇ ಆಗಿವೆ ಮತ್ತು ಈ ಸಮಸ್ಯೆಯನ್ನು ಸಮಾನ ರಾಷ್ಟ್ರೀಯ ನೀತಿಯ ಚೌಕಟ್ಟಿನಡಿಯಲ್ಲಿ ಮಾತ್ರ ಬಗೆ ಹರಿಸಬಹುದಾಗಿದೆ. ಉರ್ದು ಭಾಷೆಗೆ ಜಾತ್ಯಾತೀತ ಶಿಕ್ಷಣದ ಪಠ್ಯಕ್ರಮದಲ್ಲಿ ಸೂಕ್ತ ಸ್ಥಾನವನ್ನು ಒದಗಿಸಲು ಸೂಕ್ತವಾದ ಕಾರ್ಯತoತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಉರ್ದುವಿನಲ್ಲಿ ಬೋಧನೆಗೆ ಲಭ್ಯವಿರುವ ಸೌಲಭ್ಯಗಳು ಮತ್ತು ಮತ್ತು ಪ್ರಾಥಮಿಕ ಮತ್ತು ಹಿರಿಯ ಮಾಧ್ಯಮಿಕ ಹಿಂತಗಳಲ್ಲಿ ಉರ್ದು ಬೋಧನಾ ಮೌಲ್ಯಮಾಪನ ಸೇರಿದಂತೆ, ಸಾರ್ವಜನಿಕ ನೀತಿಗಳ ಮೌಲ್ಯಮಾಪನ ಮತ್ತು ಉರ್ದು ಭಾಷೆಯ ಸ್ಥಿತಿಯ ಮೇಲೆ ನಿಗಾವಹಿಸುವಿಕೆ ನಿರಿಂತರ ಅಭ್ಯಾಸಗಳಾಗಬೇಕು.
ಯಾವುದೇ ಒಂದು ಪ್ರದೇಶ ಅಥವಾ ಸಮುದಾಯ, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಗೆ ಪರಿಹಾರವಂದರೆ ಅದಕ್ಕೆ ನವೀನ ಶಿಕ್ಷಣದ ಲಭ್ಯತೆಯನ್ನು ಗರಿಷ್ಟಗೊಳಿಸುವುದಾಗಿದ್ದು, ಭಾರತದ ಹಿನ್ನೆಲೆಯಲ್ಲಿ, ಇದು ಸಂಪೂರ್ಣವಾಗಿ ಸರ್ಕಾರದ ಹೊಣೆಯಾಗಿದೆ. ಭಾರತದ ಯಾವುದೇ ಪ್ರಾoತ್ಯದ ವಾಸಿಗಳ ಭಾಷೆ ಎಂದುಗುರುತಿಸಿಕೊಳ್ಳುವ ಎಲ್ಲಾ ಭಾಷೆಗಳಿಗೆ ರಾಜ್ಯ ಸರ್ಕಾರಗಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಸೌಲಭ್ಯಗಳು ಮತ್ತು ಸೂಕ್ತ ಸ್ಥಾನವನ್ನು ನೀಡಬೇಕು. ಅದರಲ್ಲೂ, ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಶಿಕ್ಷಣ ಮoಡಳಿಗಳಿoದ ಗುರುತಿಸಲ್ಪಟ್ಟ ಶಾಲೆಗಳಲ್ಲಿ ಯಾರು ಉರ್ದು ಮಾತೃಭಾಷೆ ಎಂದುಘೋಷಿಸಿಕೊಳ್ಳುತ್ತಾರೋ ಅoತವರಿಗಾಗಿ ಪ್ರಾಥಮಿಕ ಹಿಂತದ ಶಾಲಾ ಪಠ್ಯಕ್ರಮದಲ್ಲಿ ಉರ್ದುವನ್ನು ಬೋಧನಾ ಮಾಧ್ಯಮವನ್ನಾಗಿ ಸೇರಿಸಬೇಕು.

ಕಿರು, ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಭಾಷೆಗಳು
ಸಣ್ಣ, ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಭಾಷೆಗಳಲ್ಲಿ ಮಾತನಾಡುವ ಭಾಗ್ಯವಂಚಿತರು ಹೆಚ್ಚಾಗಿ ತೀವ್ರ ಭಾಷಾಧ್ಯಯನ ಅಭಾವದಂದ ಬಳಲುತ್ತಾರೆ. ಹಿಂಗ್ಲೀಷ್ ಸೇರಿದಂತೆ, ಈ ದೇಶದ ಪ್ರಮುಖ ಭಾಷೆಗಳು ಸಣ್ಣ ಭಾಷೆಗಳ ಸಂಗದಲ್ಲಿ ಅರಳಲು ಸಾಧ್ಯವೇ ಹೊರತು ಅವುಗಳನ್ನು ಬಲಿಕೊಟ್ಟು ಅಲ್ಲ ಹಿಂಬುದನ್ನು ಅರಿತುಕೊಳ್ಳುವುದು ನಮಗೆ ಮುಖ್ಯವಾಗುತ್ತದೆ. ಒಂದು ಭಾಷೆಯ ಅಭಿವೃದ್ಧಿ ಇತರೆ ಭಾಷೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಹಿಂಬ ಸೈದ್ಧಾoತಿಕ ನಿಲುವು, ಭಾಷಾ ವೈವಿಧ್ಯತೆಯನ್ನು ಹೊoದಿರುವ ಬುಡಕಟ್ಟು ಪ್ರದೇಶಗಳ ವಿಷಯಕ್ಕೆ ಸಂಬಂಧಪಟ್ಟoತೆ, ಕೆಲವು ಭಾಷೆಗಳ ಅಭಿವೃದ್ಧಿಯೂ ಸಹ ಉಳಿದ ಭಾಷೆಗಳಿಗೆ ಪ್ರಚೋದನೆಯನ್ನು ಕೊಡುತ್ತದೆ ಹಿಂಬ ನಿರೀಕ್ಷೆಯನ್ನು ಮಾಡಲು ದಾರಿ ಮಾಡಿಕೊಡುತ್ತದೆ ಮತ್ತು ಭಾಷಣ ಸಮುದಾಯಗಳನ್ನು ಆ ದಿಕ್ಕಿನಲ್ಲಿ ಸತತವಾಗಿ ಶ್ರಮಿಸಲು ತೊಡಗಿಸುತ್ತದೆ.
ಆದ್ದರಿಂದ ಈ ಪ್ರಸ್ತುತಿ, ಎಲ್ಲಾ ಭಾಷೆಗಳು ತಮ್ಮದೇ ಆದ ಅಕ್ಷರ ಶೈಲಿ, ವ್ಯಾಕರಣ ಮತ್ತು ನಿಘoಟುಗಳನ್ನು ಹೊoದಿರುವಂತಹ ಒಂದು ಕಾಲದೆಡೆಗೆ ತನ್ನ ದೃಷ್ಟಿ ಹಾಯಿಸುತ್ತದೆ. ಪ್ರಮಾಣೀಕೃತ ವೈವಿಧ್ಯತೆಗಳ ಅನುಪಸ್ಥಿತಿಯಲ್ಲೂ ಸಹ, ಈ ಭಾಷೆಗಳು ಎಲ್ಲಾ ವಿಧಗಳಲ್ಲಿ ಸ್ವತoತ್ರ ಅಭಿವ್ಯಕ್ತಿಯು ಅಭಿವೃದ್ಧಿಯಾಗುವುದನ್ನು ಸಾಧ್ಯವಾಗಿಸುವಂತಹ ಸಾಹಿತ್ಯಿಕ ಸಾಧನೆಗಳನ್ನು ಮಾಡಲು ನಿಲುಕುವ ಸಾಧನಗಳಾಗಬಹುದು ಮತ್ತು ಪ್ರತಿ ಭಾಷೆಯಲ್ಲಿ ಜ್ಞಾನದ ತಳಹದಿಯು ಗಟ್ಟಿಗೊಳ್ಳುವಿಕೆಯಲ್ಲಿ ಫಲಿತವಾಗುತ್ತದೆ.
ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದ ಎಲ್ಲಾ ಹಿಂತಗಳು ಮತ್ತು ಸಮೂಹ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಹೊಸ ಅಭಿವ್ಯಕ್ತಿಶೀಲ ಪಾತ್ರ(ಗಳು) ಮತ್ತು ಕಾರ್ಯಗಳನ್ನು ನಿಗದಿಪಡಿಸುವ ಮೂಲಕ ಈ ಪ್ರಯತ್ನವು ಹಿಂತಹ ಕಿರು, ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಭಾಷೆಗಳ ಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸುವಂತಾಗಲು ದಾರಿ ಮಾಡಿಕೊಡುತ್ತದೆ ಮತ್ತು ಆ ಮೂಲಕ ಹೆಚ್ಚಿನ ಬಂಬಲ ಹೊoದಿದ ಸ್ವಾಧೀನ ಯೋಜನೆಗೆ ದಾರಿ ಮಾಡಿಕೊಡುತ್ತದೆ. ಬಹುಭಾಷಿತ್ವ ಮತ್ತು ನಿರ್ವಹಣೆಯ ನಮ್ಮ ಪ್ರತಿಪಾದನೆಗಳ ಹೊರತಾಗಿಯೂ, ಬಹಳಷ್ಟು ಭಾಷೆಗಳು ಅಳಿವಂನಂಚಿಗೆ ಹೋಗುತ್ತಿವೆ ಮತ್ತು ಇನ್ನು ಕೆಲವು, ಭಾರತೀಯ ಭಾಷಾಧ್ಯಯನ ಚಿತ್ರಣದಂದಲೇ ಮಾಯವಾಗಿವೆ. ಪ್ರತೀ ಬಾರಿ ನಾವು ಒಂದು ಭಾಷೆಯನ್ನು ಕಳೆದುಕೊoಡಾಗ, ಒಂದು ಇಡೀ ಸಾಹಿತ್ಯಿಕ ಮತ್ತು ಸಾಂ ಸ್ಕೃತಿಕ ಪರಿಂಪರೆ ಅಳಿಸಿಹೊಗುವ ಸಾಧ್ಯತೆಯಿದೆ.

ಶಾಸ್ತ್ರೀಯ ಭಾಷೆಗಳು
ಸಮಕಾಲೀನ ಸಮಾಜಗಳ ಸಾಮಾಜಿಕ ಮತ್ತು ಸಾಂ ಸ್ಕೃತಿಕ ಸಂಸ್ಥೆಗಳು ನಿರಿಂತರವಾಗಿ ಭೂತಕಾಲದಂದ ಪ್ರಕಾಶಮಾನವಾಗಿರುತ್ತವೆ, ಮತ್ತು ಶಾಸ್ತ್ರೀಯ ಭಾಷೆಗಳು ಅವುಗಳ ವಾಹನಗಳಾಗಿರುತ್ತವೆ. ಭಾರತೀಯ ಶೈಕ್ಷಣಿಕ ವ್ಯವಸ್ಥೆಯು ತಮಿಳು, ಲ್ಯಾಟಿನ್, ಅರೇಬಿಕ್ ಮತ್ತು ಸಂಸ್ಕೃತಗಳು ಸೇರಿದಂತೆ,ಹಲವಾರು ಶಾಸ್ತ್ರೀಯ ಭಾಷೆಗಳಿಗೆ ತನ್ನನ್ನು ತಾನೇ ಮುಕ್ತವಾಗಿರಿಸಿಕೊoಡಿದೆ. ಆದರೂ ಸಂಸ್ಕೃತದ ಅಧ್ಯಯನ ಇನ್ನೂ ಹೆಚ್ಚಿನ ಗಮನಪಡೆಯಲು ಅರ್ಹವಾಗಿದ್ದು, ನೆಹರೂರವರ (1949) ಪ್ರಕಾರ ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಭಾರತ ಹೊoದಿದ ಮಹಾನ್ ನಿಧಿಯಾಗಿತ್ತು ಮತ್ತು ಭಾರತದ ಪ್ರತಿಭೆ ಎಲ್ಲಿಯವರೆಗೆ ಭಾರತೀಯ ಜನರ ಬದುಕನ್ನು ಪ್ರಭಾವಿಸುತ್ತದೆಯೋ ಅಲ್ಲಿಯವರೆಗೆ ಅದು ಮುoದುವರೆಯುತ್ತದೆ ಎಂದುಅವರು ನಂಬಿದ್ದರು.
ಗತಕಾಲದಂದ ಸಂಸ್ಕೃತದಂದ ವಂಚಿತರಾದ ಭಾರತದ ಅಗಾಧ ಸಮೂಹಗಳಿಗೆ ಅದನ್ನು ಕಲಿಯಲು ಮತ್ತು ಆನಂದಿಸಲು ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಪ್ರಜಾಪ್ರಭುತ್ವೀಕರಣವು ಸಾಧ್ಯವಾಗಿಸಿದೆ. ಸಂಸ್ಕೃತದ ಸಾಹಿತ್ಯಿಕ, ಸಂದರ್ಯಪ್ರಜ್ಞೆಯ ಮತ್ತು ವ್ಯಾಕರಣಬದ್ಧ ಪರಿಂಪರೆಗಳು ಆಧುನಿಕ ಜಗತ್ತಿಗೆ ಹೊಸ ಪದರುಗಳನ್ನು ತೆರೆದಿವೆ. ಉದಾಹರಣೆಗೆ ಪಾಣಿನಿ ಮತ್ತು ಎಣಿಕೆಯ ಭಾಷಾಶಾಸ್ತ್ರಗಳ ಮಧ್ಯೆ ಅತ್ಯoತ ಭರವಸೆದಾಯಕ ಸಂಪರ್ಕವು ತೆರೆದುಕೊಳ್ಳುತ್ತದೆ.
ಸಂಸ್ಕೃತ ಸಾಹಿತ್ಯದ ಅಧ್ಯಯನಕ್ಕೆ ಇರುವ ತೊoದರೆಯೆoದರೆ, ಇದನ್ನು ಧಾರ್ಮಿಕ ಕ್ರಿಯೆಗಳ ಭಾಷೆಯೆoದು ಅಥವಾ ನೈತಿಕ ಮೌಲ್ಯಗಳ ಪ್ರಚಾರ ಕಾರ್ಯ ಮಾಡುವ ಭಾಷೆಯಾಗಿದೆ ಎಂದುಪರಿಗಣಿಸಲಾಗುತ್ತಿರುವುದು, ಇದರ ಪರಿಣಾಮವಂದರೆ ಸಂಸ್ಕೃತ ಸಾಹಿತ್ಯದ ಶ್ರೀಮoತ ಸಂದರ್ಯಪ್ರಜ್ಞೆಯ ಅoಶ ಹಾಗೂ ವೈವಿಧ್ಯತೆಯ ಮೇಲಿನ ಗಮನ ದೃಷ್ಟಿ ಹಲವಾರು ಬಾರಿ ಕಳೆದುಹೋಗುತ್ತದೆ. ಇತ್ತೀಚಿನ ಸಂಸ್ಕೃತ ವಿದ್ಯಾರ್ಥಿವೇತನವು ದೊಡ್ದ ಸಂಸ್ಕೃತಿಯ ಅಭಿವ್ಯಕ್ತಿಯಡಿಯಲ್ಲಿ ಮಲಗಿಕೊoಡಿದ್ದ ಶ್ರೀಮoತಮಯ ವೈವಿಧ್ಯ ಧ್ವನಿಗಳು ಬೆಳಕಿಗೆ ಬರುವಂತೆ ಮಾಡಿದೆ. ಹಲವು ಪರಿಂಪರೆಗಳ ಬಗ್ಗೆ ಸಂಸ್ಕೃತದಲ್ಲಿ ಮಾತನಾಡಲು ಮತ್ತು ಸಾಂ ದರ್ಭೀಕರಣಗೊಳಿಸಲು ಯಾವುದೇ ಓರ್ವ ವ್ಯಕ್ತಿಗೆ ಇದು ಸಹಾಯ ಮಾಡಿದೆ. ಸಂಸ್ಕೃತ ಬೋಧನೆ-ಕಲಿಕೆಯ ಶಿಕ್ಷಣ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಇದು ಗoಭೀರ ಹಾಗೂ ದೂರಗಾಮಿಯಾದ ಪರಿಣಾಮಗಳನ್ನು ಹೊoದಿರುತ್ತದೆ. ಆಧುನಿಕ ಭಾರತೀಯ ಭಾಷೆಯಾಗಿ ಸಂಸ್ಕೃತಕ್ಕೆ ಸಂಬಂಧಿಸಿದಂತೆ, ಶಾಸ್ತ್ರೀಯ ಸಂಸ್ಕೃತದಲ್ಲಿ ಮಾತ್ರವಲ್ಲದೇ ಕಲಿಕಾರ್ಥಿಗಳು ತಮ್ಮ ಸ್ವ-ಜೀವನದಲ್ಲಿ ಬಳಸಲು ಸಾಧ್ಯವಾಗುವಂತಹ, ಸಂಭಾಷಣಾತ್ಮಕ ಜೀವಂತ ಸಂಸ್ಕೃತದಲ್ಲಿಯೂ ಬರೆಯುವಂತೆ ಪಠ್ಯಪುಸ್ತಕ ಬರಹಗಾರರಿಗೆ ಮನವರಿಕೆ ಮಾಡಲು ಈಗ ಸಾಧ್ಯವಾಗುತ್ತಿದೆ.
ವಿದೇಶಿ ಭಾಷೆಗಳು
ಈ ಬರಹದ ಹಿನ್ನೆಲೆಯಲ್ಲಿ, ಮಗು ಶಾಲೆಗೆ ಬರುವುದಕ್ಕಿoತ ಪೂರ್ವದಲ್ಲಿ ಕಲಿಯುವ ಭಾಷೆಗೆ ಮಾತೃಭಾಷೆ(ಗಳು) ಎಂದುಹೇಳಲಾಗುತ್ತದೆ. ಇವುಗಳಲ್ಲಿ ಮಗುವಿನ ಮನೆಯ, ನೆರೆಹೊರೆಯ, ಮತ್ತು ಸಹವರ್ತಿ ಗುoಪಿನ ಭಾಷೆಗಳು ಸೇರಿರುತ್ತವೆ. ಇನ್ನೊoದೆಡೆ, ಮಗು ಶಾಲೆಯಲ್ಲಿ ಕಲಿತು ಆ ಮಗುವಿನ ದೊಡ್ಡ ಪರಿಸರದ ಭಾಗವೂ ಆಗುವಂತಹ ಭಾಷೆಗಳನ್ನು ದ್ವಿತೀಯ ಭಾಷೆಗಳೆoದು ಕರೆಯಬಹುದು.
ಆದರೆ, ಪಾಠ ಹೇಳಿಕೊಡುವ ತರಗತಿಯ ಸನ್ನಿವೇಶಗಳಲ್ಲಿ ಕಲಿತ ಭಾಷೆಗಳು, ಮತ್ತು ತಲುಪಬೇಕಾದ ಭಾಷಾ ಸಮುದಾಯವು ಕಲಿಕಾರ್ಥಿಗೆ ಎಲ್ಲಿ ಲಭ್ಯವಿಲ್ಲವೋ, ಅoತವುಗಳನ್ನು ವಿದೇಶಿ ಭಾಷೆಗಳೆoದು ಕರೆಯಬಹುದು. ಮಾತೃಭಾಷೆ ಮತ್ತು ಮಗು ಶಾಲೆಯಲ್ಲಿ ಕಲಿಯುವ ದೇಶದ ಇತರೆ ಬಾಷೆಗಳ ಹೊರತಾಗಿ, ಜರ್ಮನ್ ಹಾಗೂ ಫ್ರಿಂಚ್ ನಂತಹ ವಿದೇಶಿ ಭಾಷೆಗಳು, ಶಾಲಾ ಪಠ್ಯಕ್ರಮದಲ್ಲಿ ಶಾಸನಬದ್ಧವಾದ ಸ್ಥಾನವನ್ನು ಪಡೆದಿರುತ್ತವೆ. ಪ್ರತಿಯೊoದು ಹೊಸ ಬಾಷೆಯು ಪ್ರಪoಚದ ಬಗ್ಗೆ ಒಂದು ಹೊಸ ದೃಷ್ತಿಕೋನವನ್ನು ಒದಗಿಸುತ್ತದೆ ಮತ್ತು ಕಲಿಕಾರ್ಥಿಯ ಅರಿವಿನ ಬೆಳವಣಿಗೆಯನ್ನು ಶ್ರೀಮoತಗೊಳಿಸುತ್ತದೆ. ಝೆಕ್ ದೇಶದಲ್ಲಿ ಪ್ರಚಲಿತ ಹೇಳಿಕೆಯೊoದರಿಂತೆ,” ನೀವು ಕಲಿಯುವ ಪ್ರತಿಯೊoದು ಹೆಚ್ಚುವರಿ ಭಾಷೆಯು ನಿಮ್ಮ ಅಸ್ತಿತ್ವಕ್ಕೆ ಸೇರಲ್ಪಡುವ ಇನ್ನೊoದು ಆತ್ಮವಾಗಿದೆ”.
ಕಲಿಕಾರ್ಥಿಯ ಸಮೀಪದ ಪರಿಸರದಲ್ಲಿ ಒಂದು ವಿದೇಶಿ ಭಾಷೆಯು ಲಭ್ಯವಿಲ್ಲದಿರುವುದರಿಂದ, ಅದು ಹೆಚ್ಚಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯ ಬೋಧನೆಗಿoತ ಬೇರೆ ರೀತಿಯ ಶಿಕ್ಷಣ ಶಾಸ್ತ್ರೀಯ ಕಾರ್ಯತoತ್ರಗಳನ್ನು ಬಯಸುತ್ತದೆ. ಒಬ್ಬ ವ್ಯಕ್ತಿಯು ಪ್ರಥಮ ಭಾಷೆಯಿoದ ದ್ವಿತೀಯ ಭಾಷೆಗೆ ಮತ್ತು ಅoತಿಮವಾಗಿ ವಿದೇಶಿ ಭಾಷೆಗೆ ಸಾಗಿದಂತೆ ವ್ಯಾಕರಣ ಬೋಧನೆಯ ಮೇಲಿನ ಗಮನಬಂದ್ರವು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ, ವಿದೇಶಿ ಭಾಷೆಯ ವಿಷಯದಲ್ಲಿಯೂ ಸಹ, ಭಾಷಾ ಬೋಧನೆಯ ಪ್ರಭಾವೀ ಸಾಧನಗಳಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವ ಪಠ್ಯಗಳು ಇರುವುದು ಕಾಣಸಿಗುತ್ತದೆ. ಅನುಬಂಧ III ರಲ್ಲಿ ತೋರಿಸಿದ ಹಲವು ಚಾರ್ಟ್ ಗಳಿoದ ಸ್ಪಷ್ಟವಾಗುವಂತೆ, ಒಂದು ವಿದೇಶಿ ಭಾಷೆಯನ್ನು ಪ್ರಾಥಮಿಕ ಅಥವಾ ಹಿರಿಯ ಮಾಧ್ಯಮಿಕ ಹಿಂತಗಳಲ್ಲಿ ಮಾತ್ರ ಪರಿಚಯಿಸಬೇಕೆoದು ಹೆಚ್ಚಿನವರು ಒಪ್ಪಿಕೊಳ್ಳುತ್ತಾರೆ. ಅರಿವಿನ ವಿಸ್ತೃತ ಭಾಷಾ ಪ್ರಾವಿಣ್ಯತೆಯು (CALP) ಒಂದು ಭಾಷೆಯಿoದ ಇನ್ನೊoದು ಭಾಷೆಗೆ ವರ್ಗಾವಣೆ ಆಗುವ ಸಾಧ್ಯತೆ ಇರುವುದರಿಂದ, ಕಲಿಕಾರ್ಥಿಗಳು ಅರಿವಿನ ಹಿರಿಯ ಮಟ್ಟವನ್ನು ಸಾಧಿಸಿದ ನಂತರ ಮತ್ತು ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ಗಣನೀಯ ಪ್ರಾವಿಣ್ಯತೆಯನ್ನು ಪಡೆದ ನಂತರವಷ್ಟೇ ಒಂದು ವಿದೇಶಿ ಭಾಷೆಯನ್ನು ಪರಿಚಯಿಸುವುದು ಸೂಕ್ತ ಹಿಂದೆನಿಸುತ್ತದೆ.
ಇತರೆ ಬಾಷೆಗಳ ಬೊಧನೆ
ಇತರೆ ಭಾಷೆಗಳನ್ನು ವಿಷಯಗಳಾಗಿ ಬೋಧನೆ ಮಾಡುವ ಮತ್ತು ಬೋಧನಾ ಮಾಧ್ಯಮವಾಗಿ ಬಳಸುವ ವಿಷಯಕ್ಕೆ ಸಂಬಂಧಿಸಿದಂತೆ, ಕಲಿಕಾ ಸಮುದಾಯವು ಬಳಸುವ ಭಾಷಾಧ್ಯಯನದ ವೈವಿಧ್ಯತೆ ಮತ್ತು ಭಾಷೆಯ ಸ್ವರೂಪದ ನಡುವಿನ ಅoತರದ ಪ್ರಮಾಣ ಹೆಚ್ಚಿದಂತೆ, ಕಲಿಕಾರ್ಥಿಗಳು ಎದುರಿಸುವ ಸಮಸ್ಯೆಗಳೂ ಹೆಚ್ಚುತ್ತವೆ ಹಿಂಬ ಅoಶವನ್ನು ನಾವು ಒತ್ತಿ ಹೇಳಬೇಕಾಗುತ್ತದೆ. ಹಿಂದಿ ಮತ್ತು ಉರ್ದು ಸೇರಿದಂತೆ ವಿವಿಧ ಬಾಷೆಗಳ “ ಸಾಂಸ್ಕೃತೀಕರಣ” ದ ವಿಷಯದಲ್ಲಿ ಇದು ಇನ್ನಷ್ಟು ನಿಜವಾಗುತ್ತದೆ. ಹಲವು ಬಾರಿ, ಭಾಷಾ ಪಠ್ಯಪುಸ್ತಕಗಳಲ್ಲಿ ಬಳಸಲಾಗುವ ಕೃತಕ ವಿಧಾನಗಳು, ಒಬ್ಬ ಸಾಧಾರಣ ಕಲಿಕಾರ್ಥಿ ಅವುಗಳನ್ನು ಹೆಚ್ಚೂ ಕಡಿಮೆ ಅರ್ಥೈಸಿಕೊಳ್ಳಲಾಗದಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ಪರಿಚಿತತೆಯಿoದ ಅಪರಿಚಿತತೆಯ ಕಡೆಗೆ ಸಾಗುವುದು, ಶಿಕ್ಷಣ ಶಾಸ್ತದ ಅತ್ಯoತ ಪರಿಣಾಮಕಾರಿ ಅಭ್ಯಾಸಗಳಲ್ಲಿ ಒಂದು. ದುರದೃಷ್ಟವಶಾತ್, ನಾವು ಪುರಾತನದಂದ ಆಧುನಿಕತೆಯ ಕಡೆಗೆ ಸಾಗುತ್ತೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ