ಶುಕ್ರವಾರ, ಜುಲೈ 3, 2015

ಎನ್.ಸಿ.ಎಪ್ ಪೊಶೀಷನ್ ಪೇಪರ್ ಸಾಂವಿಧಾನಿಕ ಅವಕಾಶಗಳು ಹಾಗೂ ತ್ರೀಭಾಷಾ ಸೂತ್ರ

ಎನ್.ಸಿ.ಎಪ್ ಪೊಶೀಷನ್ ಪೇಪರ್ ಸಾಂವಿಧಾನಿಕ ಅವಕಾಶಗಳು ಹಾಗೂ ತ್ರೀಭಾಷಾ ಸೂತ್ರ




Contents [hide]
೧ ಪರಿಚಯ
೨ ಸಾಂವಿಧಾನಿಕ ಅವಕಾಶಗಳು
೩ ತ್ರಿಭಾಷಾ ಸೂತ್ರ
೪ ತ್ರಿ-ಭಾಷೆ ಸೂತ್ರದ ಸಾಧಕ ಮತ್ತು ಬಾಧಕಗಳು
ಪರಿಚಯ
ಈ ಅಧ್ಯಾಯದಲ್ಲಿ, ಭಾರತದ ಸಂವಿಧಾನದಲ್ಲಿ ಒದಗಿಸಿರುವ ಭಾಷಾ ಅವಕಾಶಗಳ ಕುರಿತು ಹಾಗೂ ತ್ರಿಭಾಷಾ ಸೂತ್ರದ ಕುರಿತು ಚರ್ಚಿಸುತ್ತೇವೆ. ತ್ರಿಭಾಷಾ ಸೂತ್ರದ ಅನುಷ್ಠಾನದಲ್ಲಿ ಒಂದು ರಾಜ್ಯದ ಒಳಗಡೆ ಮತ್ತು ರಾಜ್ಯಗಳ ಮಧ್ಯೆ ಸಾಕಷ್ಟು ಹೊಂದಾಣಿಕೆಗೆ ಅವಕಾಶ ಇರಬೇಕೆಂಬುದು ನಮ್ಮ ಅಭಿಪ್ರಾಯ.
ಸಾಂವಿಧಾನಿಕ ಅವಕಾಶಗಳು
ಭಾಗ XVII ರ 343-351 ಕಲಂಗಳು ಹಾಗೂ ಭಾರತದ ಸಂವಿಧಾನದ 8ನೇ ಶೆಡ್ಯೂಲ್, ದೇಶದ ಭಾಷಾ ಸಂಬಂಧಿತ ವಿಷಯಗಳ ಕುರಿತದ್ದಾಗಿವೆ. ಕಲಂ 343 (1) ಪ್ರಕಾರ, “ದೇವನಾಗರಿ ಲಿಪಿಯ ಹಿಂದಿ ಭಾಷೆಯು ಗಣರಾಜ್ಯದ ಅಧೀಕೃತ ಭಾಷೆಯಾಗಿರುತ್ತದೆ.” ಹಿಂದಿ ಭಾಷೆಯ ಪ್ರೋತ್ಸಾಹಕ್ಕಾಗಿ ಹಲವಾರು ವಿಶೇಷ ನಿರ್ದೇಶನಗಳನ್ನು ಒದಗಿಸಲಾಗಿದೆ.: “ಹಿಂದಿ ಭಾಷೆಯ ಹರಡುವಿಕೆಯನ್ನು ಉತ್ತೇಜಿಸಲು, ಭಾರತದ ಸಂಕೀರ್ಣ ಸಂಸ್ಕೃತಿಯ ಎಲ್ಲಾ ಅಂಶಗಳಿಗೆ ಅಭಿವ್ಯಕ್ತಿ ಮಾಧ್ಯಮವಾಗಿ ಕಾರ್ಯನಿರ್ವಹಿಸಲು ಪೂರಕವಾಗುವಂತೆ ಅದನ್ನು ಅಭಿವೃದ್ಧಿ ಪಡಿಸುವುದು”. (ಕಲಂ 351)
ಹಿಂದಿ ಭಾಷೆ ನಮ್ಮ ವ್ಯವಹಾರಿಕ ಭಾಷೆ ಎಂಬ ಅಂಶವನ್ನು ಗುರುತಿಸುವುದು ಮಹತ್ವದ್ದಾಗಿದೆ. ಕಲಂ343(2) ಪ್ರಕಾರ, ಹದಿನೈದು ವರ್ಷಗಳ ಕಾಲ ಎಲ್ಲಾ ವ್ಯವಹಾರಿಕ ಉದ್ದೇಶಗಳಿಗೆ ಇಂಗ್ಲೀಷ್ ಭಾಷೆಯನ್ನು ಬಳಸಲು ಸಂವಿಧಾನ ಅವಕಾಶ ಒದಗಿಸುತ್ತದೆ. ಆದರೆ, 1965 ರ ಸುಮಾರಿಗೆ ದಕ್ಷಿಣ ಭಾರತದಲ್ಲಿ ವಿಶಾಲವಾಗಿ ಹರಡಿದ ದಂಗೆಗಳು, ಹಿಂದಿ ಭಾಷೆಯ ಪ್ರಾಬಲ್ಯದ ಕುರಿತು ಇದ್ದ ಭಯ ಹಾಗೂ ಆರ್ಯನೀಕರಣ- ಈ ಅಂಶಗಳು ಇಂಗ್ಲೀಷ್ ಭಾಷೆಗೆ ಸಂಪೂರ್ಣವಾಗಿ ವ್ಯವಹಾರಿಕ ಭಾಷೆಯ ಸ್ಥಾನದಿಂದ ಹಿಂಬಡ್ತಿ ಕೊಡಬಾರದು ಎಂಬುದನ್ನು ಸ್ಪಷ್ಟಪಡಿಸಿದವು. 1965 ರಲ್ಲಿ ಅಧೀಕೃತ ಸಹ ಭಾಷೆಯ ದರ್ಜೆಯನ್ನು ಅದಕ್ಕೆ ಕೊಡಲಾಯಿತು. ಹೈ ಕೋರ್ಟ್ ಮತ್ತು ಸುಪ್ರೀo ಕೋರ್ಟ್ ಹಾಗೂ ಸಂಸತ್ತಿನ ಖಾಯ್ದೆ ಮುಂತಾದವುಗಳಲ್ಲಿ ಬಳಸುವ ಭಾಷೆಯಾಗಿ ಇಂಗ್ಲೀಷ್ ಭಾಷೆಗೆ ಸಂವಿಧಾನವೂ ಸಹ ಅವಕಾಶ ನೀಡಿದೆ. ಸಂವಿಧಾನ ತನ್ನ ನಾಗರಿಕರಿಗೆ ಯಾವುದೇ ಭಾಷೆಯ ಮೂಲಕ ಪ್ರತಿನಿಧಿಸುವ ಹಕ್ಕನ್ನು ಒದಗಿಸುತ್ತದೆ. ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಭೋದಿಸಲು ಸಾಕಷ್ಟು ಸವಲತ್ತುಗಳನ್ನು ಒದಗಿಸಲು ಕಲಂ 350 A ( 7ನೇ ತಿದ್ದುಪಡಿ,1956) ಅವಕಾಶ ಒದಗಿಸುತ್ತದೆ. ಭಾರತದ ಸಂವಿಧಾನದ 8ನೇ ಶೆಡ್ಯೂಲ್ ಕೇವಲ ಭಾಷೆಗಳು ಎಂಬ ಶಿರ್ಷಿಕೆಯನ್ನು ಹೊಂದಿದೆ ಎಂಬುದರ ಕುರಿತು ಗಮನ ಸೆಳೆಯಲು ನಾವು ಬಯಸುತ್ತೇವೆ. 50 ವರ್ಷಗಳಲ್ಲಿ ಇವುಗಳ ಸಂಖ್ಯೆ 14 ರಿಂದ 22 ಕ್ಕೆ ಏರಿರುವ ಅಂಶವು ಇದರ ಮುಕ್ತತೆಗೆ ಸಾಕ್ಷಿಯಾಗಿದೆ. ಈ ದೇಶದಲ್ಲಿ ಮಾತನಾಡಲ್ಪಡುವ ಯಾವುದೇ ಭಾಷೆ ಕಾನೂನು ಬದ್ಧವಾಗಿ 8ನೇ ಶೆಡ್ಯೂಲ್ ನ ಭಾಗವಾಗಲು ಸಾಧ್ಯ ಎಂಬುದು ಕಾಣಸಿಗುತ್ತದೆ.
ಈ ದೇಶದ ಭಾಷಾ ಬಹುತ್ವ ಮತ್ತು ವೈವಿಧ್ಯಮಯವಾಗಿರುವ, ಪ್ರಮುಖ ಕಾರ್ಯಗಳಲ್ಲಿ ಮುಂದುವರೆದ ಇಂಗ್ಲೀಷ್ ನ ಬಳಕೆಯು ಒಂದು ಅಂಶವನ್ನು ಸ್ಪಷ್ಟಪಡಿಸುತ್ತದೆ, ಅದೆಂದರೆ, ಯಾವುದೇ ನೇರ ಹಾಗೂ ಸಾಧಾರಣ ಪರಿಹಾರಕ್ಕೆ ಒಂದು ಬಹುಭಾಷಾ ಸಮಾಜದಲ್ಲಿರುವ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯ ಸ್ವಭಾವವನ್ನು ನಿರಂತರವಾಗಿಸಲು ಸಾಧ್ಯವಿಲ್ಲ. ಸಾಮ್ರಾಜ್ಯಶಾಹೀ ಆಡಳಿತದೊಂದಿಗೆ ಇಂಗ್ಲೀಷ್ ನ ಸಂಬಂಧ ಕಡಿತದ ಮುಂದುವರಿಕೆ, ಇಂಗ್ಲೀಷ್ ಭಾಷೆಯ ಕುರಿತಾದ ಋಣಾತ್ಮಕ ಭಾವನೆಗಳನ್ನು ಕಡಿಮೆ ಮಾಡುವಲ್ಲಿ ದೊಡ್ಡ ಹೆಜ್ಜೆಯಾಗಿದೆ. ಅವಶ್ಯಕ ಅವಕಾಶಗಳ ಹಾಗೂ ಅಂತರ್ ರಾಷ್ಟ್ರೀಯ ಸಂಪರ್ಕ ಗಳ ಭಾಷೆಯಾಗಿ ಇದರ ಮಹತ್ವದ ಸ್ಪಷ್ಟತೆ ಹೆಚ್ಚುತ್ತಿದೆ. ಇನ್ನೊಂದೆಡೆ, ದೇಶದ ಶೈಕ್ಷಣಿಕ ಹಾಗೂ ಅಧಿಕಾರ ರಚನೆಯಲ್ಲಿ ತಮ್ಮ ಪಾಲನ್ನು ಕೇಳುತ್ತಿರುವ ಅಲ್ಪಸಂಖ್ಯಾತ ಹಾಗೂ ಬುಡಕಟ್ಟು ಭಾಷೆಗಳ ಸಂಖ್ಯೆ ಏರಿಕೆಯಿಂದ ಗುಣಿತಗೊಳ್ಳುತ್ತಿವೆ. ದೇಶದ ಸಂಪರ್ಕ ಭಾಷೆಯಾಗಿ ಅಭಿವೃದ್ಧಿ ಹೊಂದುತ್ತಿರುವ ಹಿಂದಿಯ ಪ್ರಾಮುಖ್ಯತೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.
ತ್ರಿಭಾಷಾ ಸೂತ್ರ
ತ್ರಿ-ಭಾಷಾ ಸೂತ್ರವು 1961 ರಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಒಂದು ಸಭೆಯಲ್ಲಿ ಒಮ್ಮತವಾಗಿ ವಿಕಾಸಗೊಂಡಿದ್ದು ಆಶ್ಚರ್ಯವೇನಲ್ಲ. ಶ್ರೀಧರ್ (1989:22) ಹೇಳುವಂತೆ, ಗುಂಪಿನ ಗುರುತಿಸುವಿಕೆ (ಮಾತೃಭಾಷೆ ಮತ್ತು ಪ್ರಾಂತೀಯ ಭಾಷೆಗಳು), ದೇಶಾಭಿಮಾನ ಮತ್ತು ಏಕತೆ (ಹಿಂದಿ), ಮುಂತಾದವುಗಳ ಕುರಿತಾಗಿರುವ ಆಸಕ್ತಿ, ಹಾಗೂ ಆಡಳಿತ ದಕ್ಷತೆ ಮತ್ತು ತಾoತ್ರಿಕ ಪ್ರಗತಿಗಾಗಿ (ಇಂಗ್ಲೀಷ್) ತ್ರಿ-ಭಾಷಾ ಸೂತ್ರವು ಕೋಠಾರಿ ಆಯೋಗದಿಂದ (1964-66) ಪರಿಷ್ಕರಿಸಲ್ಪಟ್ಟಿತು. ತ್ರಿ-ಭಾಷಾ ಸೂತ್ರವು ಕೇವಲ ಒಂದು ಕಾರ್ಯತಂತ್ರವಾಗಿದ್ದು ರಾಷ್ಟ್ರೀಯ ಭಾಷಾ ನೀತಿಯಲ್ಲ ಎಂದುದು ಪಟ್ಟನಾಯಕ್ (1986) ಗುರುತಿಸುತ್ತಾರೆ. ಒಂದು ರಾಷ್ಟ್ರೀಯ ಭಾಷಾ ನೀತಿಯು ಸಂವಿಧಾನ ಮತ್ತು ತ್ರಿ-ಭಾಷಾ ಸೂತ್ರದಡಿಯಲ್ಲಿ ಬರದೇ ಇರುವಂತಹ ವೈವಿಧ್ಯಮಯ ಸಮಸ್ಯೆಗಳು ಮತ್ತು ಕ್ಷೇತ್ರಗಳನ್ನು ಪರಿಗಣಿಸಬೇಕಾಗುತ್ತದೆ. ಶಿಕ್ಷಣದಲ್ಲಿ ಮತ್ತು ಶಾಲೆಗಳಲ್ಲೂ ಸಹ ಬಳಸುವ ಭಾಷಾ ಸಂಕೀರ್ಣತೆಯನ್ನು ಅನುಬಂಧ III ರಲ್ಲಿ ಕೊಟ್ಟಿರುವ ಕೆಲವು ಚಾರ್ಟ್ ಗಳಲ್ಲಿ ಕಾಣಬಹುದು. ಗಮನ ಕೇಂದ್ರಿತ ಗುಂಪುಗಳ (Focus group) ಕೆಲವು ಸದಸ್ಯರಿಂದ ಅವರು ಪ್ರತಿನಿಧಿಸುವ ರಾಜ್ಯಗಳ ಶಾಲಾ ಶಿಕ್ಷಣದ ಪರಿಸ್ಥಿತಿಯ ವಿಶ್ಲೇಷಣೆಯ ಆಧಾರದ ಮೇಲೆ ಈ ಚಾರ್ಟ್ ಗಳು ತಯಾರಿಸಲ್ಪಟ್ಟಿರುತ್ತವೆ. ಇವುಗಳು ಭಾರತದ ರಾಜ್ಯಗಳ ಭಾಷಾ ಪರಿಸ್ಥಿತಿಯ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ.
1968 ರ ತ್ರಿ-ಭಾಷಾ ಸೂತ್ರವು ಈ ಪರಿಸ್ಥಿತಿಯ ಸಂಕೀರ್ಣತೆಯನ್ನು ಹಿಡಿದಿಡಲು ಪ್ರಯತ್ನಿಸಿದೆ; 1986 ರ ರಾಷ್ಟ್ರೀಯ ಶಿಕ್ಷಣ ನೀತಿ (NPE) ಯಲ್ಲಿ ಇದನ್ನು ಪುನರುಚ್ಛರಿಸಲಾಗಿದೆ ಹಾಗೂ 1992 ರ ಪ್ರೊಗ್ರಾಂ ಆಫ್ ಆಕ್ಷನ್ ನಲ್ಲಿ ಇದರ ಪರಿಷೃತ ಆವೃತ್ತಿಯನ್ನು ನಾವು ಕಾಣುತ್ತೇವೆ. 1986 ರ ರಾಷ್ಟ್ರೀಯ ಶಿಕ್ಷಣ ನೀತಿಯು (www.education.nic.in/NatPol.asp ನ್ನು ನೋಡಿರಿ) 1968 ರಲ್ಲಿ ಒದಗಿಸಲಾದ ಭಾಷಾ ಸಂಬಂಧಿತ ಅವಕಾಶಗಳನ್ನು ಬಹಳಷ್ಟು ಬೆಂಬಲಿಸಿತ್ತು. 1968 ರ ರಾಷ್ಟ್ರೀಯ ಶಿಕ್ಷಣ ನೀತಿಯು (www. languageinindia.com) ಭಾಷೆಗಳ ಅಭಿವೃದ್ಧಿಯ ಕುರಿತ ಪ್ರಶ್ನೆಯ ಸ್ವಲ್ಪಮಟ್ಟಿನ ವಿವರವನ್ನು ಪರೀಕ್ಷಿಸಿತ್ತು, ಇದನ್ನು ಸುಧಾರಿಸಲು ಹೆಚ್ಚಿನ ಅವಕಾಶವಿಲ್ಲ ಮತ್ತು ಇದು ಈ ಹಿಂದಿನಷ್ಟೇ ಹಿಂದಿಗೂ ಪ್ರಸ್ತುತ ಎಂದುನಂಬಲಾಗಿತ್ತು. ಹಿಂತಹ ಸ್ಥಿತಿಯು ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಇಲ್ಲದಂತೆ ಮಾಡುತ್ತದೆ ಮತ್ತು 1960ರಿಂದ ಭಾಷಾ ಕ್ಷೇತ್ರದಲ್ಲಿ ಏನೂ ನಡೆದೇ ಇಲ್ಲ ಎಂದುಊಹಿಸುತ್ತದೆ. 1968 ರ ನೀತಿಯೂ ಸಹ ಅನುಷ್ಠಾನದಲ್ಲಿ ಅಸಮಾನವಾಗಿತ್ತು.
1968 ರ ನೀತಿಯ ಪ್ರಕಾರ:
1.ಪ್ರಥಮ ಭಾಷೆಯಾಗಿ ಕಲಿಯಬೇಕಾದ ಭಾಷೆಯು ಮಾತೃಭಾಷೆ ಅಥವಾ ಪ್ರಾoತೀಯ ಭಾಷೆಯಾಗಿರಬೇಕು.
2.ದ್ವಿತಿಯ ಭಾಷೆ : ಹಿಂದಿ ಮಾತನಾಡುವ ರಾಜ್ಯಗಳಲ್ಲಿ, ಎರಡನೆಯ ಭಾಷೆಯು ಯಾವುದೇ ಇತರೆ ಆಧುನಿಕ ಭಾರತೀಯ ಭಾಷೆ ಅಥವಾ ಹಿಂಗ್ಲೀಷ್ ಆಗಿರಬೇಕು, ಮತ್ತು ಹಿಂದಿ ಮಾತನಾಡದ ರಾಜ್ಯಗಳಲ್ಲಿ, ಎರಡನೆಯ ಭಾಷೆಯು ಹಿಂದಿ ಅಥವಾ ಹಿಂಗ್ಲೀಷ್ ಆಗಿರಬೇಕು.
3.ತೃತೀಯ ಭಾಷೆ :
ಹಿಂದಿ ಮಾತನಾಡುವ ರಾಜ್ಯಗಳಲ್ಲಿ ತೃತೀಯ ಭಾಷೆಯಾಗಿ ಇಂಗ್ಲೀಷ್ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡದೇ ಇರುವ ಒಂದು ಆಧುನಿಕ ಭಾರತೀಯ ಭಾಷೆ ಇರುತ್ತದೆ.
ಹಿಂದಿ ಮಾತನಾಡದ ರಾಜ್ಯಗಳಲ್ಲಿ, ತೃತೀಯ ಭಾಷೆಯಾಗಿ ಇಂಗ್ಲೀಷ್ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡದೇ ಇರುವ ಒಂದು ಆಧುನಿಕ ಭಾರತೀಯ ಭಾಷೆ ಇರುತ್ತದೆ.
ಪ್ರಾಥಮಿಕ ಹಿಂತದಲ್ಲಿ ಬೋಧನಾ ಮಾಧ್ಯಮವಾಗಿ ಮಾತೃಭಾಷೆ ಇರಬೇಕು ಮತ್ತು ರಾಜ್ಯ ಸರ್ಕಾರಗಳು ತ್ರಿ-ಭಾಷಾ ಸೂತ್ರವನ್ನು ಅಳವಡಿಸಬೇಕು ಹಾಗೂ ಚುರುಕಿನಂದ ಅನುಷ್ಟಾನ ಮಾಡಬೇಕು ಹಿಂಬ ಸಲಹೆಯನ್ನು ನೀಡಲಾಗಿತ್ತು. ಈ ಸೂತ್ರವು ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಹೊರತುಪಡಿಸಿ ಮತ್ತು ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿಯನ್ನು ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಒಂದಕ್ಕೆ ಆದ್ಯತೆಯಿರುವಂತೆ ಆಧುನಿಕ ಭಾರತೀಯ ಭಾಷೆಯೊoದರ ಅಧ್ಯಯನವನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಹಿಂದಿ ಮತ್ತು/ಅಥವಾ ಹಿಂಗ್ಲೀಷ್ ನಲ್ಲಿ ವಿಶ್ವವಿದ್ಯಾಲಯ ನಿಗದಿಪಡಿಸುವ ಮಟ್ಟಕ್ಕೆ ಪರಿಣಿತಿ ಹೊಂದುವ ನಿಟ್ಟಿನಲ್ಲಿ ಈ ಭಾಷೆಗಳಲ್ಲಿ ಸೂಕ್ತವಾದ ಕೋರ್ಸ್ ಗಳು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಲಭ್ಯವಿರಬೇಕು.
ತ್ರಿ-ಭಾಷಾ ಸೂತ್ರವು ಒಂದು ಗುರಿಯಲ್ಲ ಅಥವಾ ಭಾಷಾ ಸ್ವಾಧೀನವನ್ನು ಸೀಮಿತಗೊಳಿಸುವ ಅಂಶವಲ್ಲ, ಬದಲಾಗಿ, ಇದು ವಿಸ್ತೃತಗೊಳ್ಳುತ್ತಿರುವ ಜ್ಞಾನದ ವಿಶಾಲ ವ್ಯಾಪ್ತಿಯನ್ನು ಹುಡುಕಲು ಮತ್ತು ಭಾವನಾತ್ಮಕವಾದ ರಾಷ್ಟ್ರೀಯ ಸಮಗ್ರತೆಗೆ ಅನುಕೂಲವಾಗುವಂತಹ ಅವಕಾಶದ ವೇದಿಕೆಯಾಗಿದೆ.
ಈ ರೀತಿಯಲ್ಲಿ ತ್ರಿ-ಭಾಷಾ ಸೂತ್ರದ ಮೂಲ ಸ್ಪೂರ್ತಿಯು ಹಿಂದಿ, ಹಿಂಗ್ಲೀಷ್ ಮತ್ತು ಭಾರತೀಯ ಭಾಷೆಗಳಿಗೆ ಅವಕಾಶ ಒದಗಿಸುತ್ತದೆ. ಇದಕ್ಕಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ದಕ್ಷಿಣ ಭಾರತೀಯ ಒಂದು ಭಾಷೆಗೆ ಆದ್ಯತೆ. ಅದೇ ರೀತಿಯಲ್ಲಿ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಒಂದು ಪ್ರಾoತೀಯ ಭಾಷೆ, ಹಿಂದಿ, ಮತ್ತು ಹಿಂಗ್ಲೀಷ್ ಭಾಷೆಗಳಿಗೆ ಅವಕಾಶ. ಆದರೆ ಸಾಮಾನ್ಯವಾಗಿ ಈ ಸೂತ್ರವನ್ನು ಪಾಲಿಸುವುದಕ್ಕಿoತ ಮುರಿಯುವುದೇ ಹೆಚ್ಚಾಗಿದ್ದನ್ನು ಗಮನಿಸಲಾಗಿದೆ. ಹಿಂದಿ ಮಾತನಾಡುವ ರಾಜ್ಯಗಳು ಹೆಚ್ಚಾಗಿ ಹಿಂದಿ, ಹಿಂಗ್ಲೀಷ್ ಮತ್ತು ಸಂಸ್ಕೃತ ಭಾಷೆಯ ಮೂಲಕ ನಿರ್ವಹಿಸಲಾಗುತ್ತಿದ್ದು, ಹಿಂದಿ ಮಾತನಾಡದ ರಾಜ್ಯಗಳಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ,ದ್ವಿ-ಭಾಷಾ ಸೂತ್ರದ ಮೂಲಕ ಅoದರೆ ತಮಿಳು ಮತ್ತು ಹಿಂಗ್ಲೀಷ್ ಭಾಷೆಗಳ ಮೂಲಕ ಕಾರ್ಯನಿರ್ವಹಣೆಯಾಗುತ್ತದೆ. ಈಗಲೂ ಸಹ ಓಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳು ದ್ವಿ-ಭಾಷಾ ಸೂತ್ರ ಹೊoದಿರುವ ರಾಜ್ಯಗಳಲ್ಲಿ ಸೇರಿರುತ್ತವೆ.
ತ್ರಿ-ಭಾಷೆ ಸೂತ್ರದ ಸಾಧಕ ಮತ್ತು ಬಾಧಕಗಳು
ತ್ರಿ-ಭಾಷಾ ಸೂತ್ರವನ್ನು ಒಂದು ಕಾರ್ಯತoತ್ರವಾಗಿ ಅಳವಡಿಸುವ ಮೂಲಕ, ಎಟಕುವ ಭಾಷೆಗಳು, ಶಾಸ್ತ್ರೀಯ ಭಾಷೆಗಳು ಮತ್ತು ವಿದೇಶಿ ಭಾಷೆಗಳನ್ನು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಯಿತು. ಮಾತೃಭಾಷೆಯ ಅಧ್ಯಯನಕ್ಕೂ ಅವಕಾಶ ನೀಡಲಾಯಿತು. ತ್ರಿ-ಭಾಷಾ ಸೂತ್ರದ ಹೊರತಾಗಿ ಶಿಕ್ಷಣದಲ್ಲಿ ಇತರೆ ಭಾಷೆಗಳನ್ನು ಅಳವಡಿಸಲು ರಾಜ್ಯಗಳು ಸ್ವತoತ್ರವಾಗಿದ್ದವು. ಸಂಸ್ಕೃತವನ್ನು ಶಾಸ್ತ್ರೀಯ ಬಾಷೆಯಾಗಿ ಪರಿಚಯಿಸಬಹುದಾಗಿತ್ತು. ತ್ರಿ-ಭಾಷಾ ಸೂತ್ರದ ಆಶಯಕ್ಕೆ ಭoಗ ಬರದಂತೆ ಒಂದು ಆಧುನಿಕ ಭಾರತೀಯ ಭಾಷೆಯಾಗಿಯೂ ಸಹ ಅದನ್ನು ಅಳವಡಿಸಲು ಸಾಧ್ಯವಿತ್ತು., ಮಕ್ಕಳ ಶಿಕ್ಷಣಕ್ಕೆ ಮಾತೃಭಾಷೆ ಅತ್ಯoತ ಉತ್ತಮ ಮಾಧ್ಯಮವಾಗಿದೆ ಹಿಂಬ 1953 ರ ಯುನೆಸ್ಕೋ ಘೋಷಣೆಯ ನಂತರ, ತಮ್ಮ ಬಾಷೆಗೆ ಮಾನ್ಯತೆ ನೀಡಬೇಕೆoದು ಮತ್ತು ಸಂವಿಧಾನದ 8 ನೇ ಶೆಡ್ಯೂಲ್ ನಲ್ಲಿ ಅವುಗಳನ್ನು ಒಳಗೊಳಿಸುವಂತೆ ಮಾಡಲು ವಿವಿಧ ಭಾಷೆಗಳ ಗುಂಪುಗಳು ಒತ್ತಡ ಹೇರುವ ಕೆಲಸ ಮಾಡಿದವು. ಎಲ್ಲಿಯವರೆಗೆ ತ್ರಿ-ಭಾಷಾ ಸೂತ್ರದ ಮೂಲ ಆಶಯಗಳನ್ನು ಕಾಪಾಡಲಾಗುತ್ತದೋ, ಅಲ್ಲಿ ಹೊಸ ಭಾಷೆಗಳ ಅಧ್ಯಯನ ಮಾಡಲು ಯಾವುದೇ ತಡೆಯಿರುವುದಿಲ್ಲ. ಪ್ರಾಥಮಿಕ ಶಿಕ್ಷಣವು ದ್ವಿ-ಭಾಷಿತ್ವ ಪದ್ಧತಿಯಲ್ಲಿರಬೇಕು. ದ್ವಿ-ಭಾಷಿತ್ವದ ಪ್ರತಿ ಮುoದಿನ ಹಂತಗಳು ಸಮಗ್ರ ಬಹುಭಾಷಿತ್ವದ ನಿರ್ಮಾಣ ಮಾಡುವಂತಿರಬೇಕು. ಶಾಲೆಯ ಪ್ರಥಮ ಕೆಲಸವಂದರೆ, ಮನೆಯ ಭಾಷೆಯನ್ನು ಶಾಲೆಯ ಭಾಷೆಗೆ ಸಂಬಂಧೀಕರಿಸುವುದು. ಆನಂತರ ಪ್ರಥಮ ಭಾಷೆಯನ್ನು ಕಳೆದುಕೊಳ್ಳದೇ ಇತರೆ ಭಾಷೆಗಳಿಗೆ ಹೋಗಲು ಸಾಧ್ಯವಾಗುವಂತೆ ಒಂದು ಅಥವಾ ಹಲವು ಭಾಷೆಗಳನ್ನು ಸಮಗ್ರೀಕರಿಸುವುದು. ಒಂದು ಭಾಷೆ ಮತ್ತೊoದಕ್ಕೆ ಪೂರಕವಾಗುವಂತೆ, ಎಲ್ಲಾ ಭಾಷೆಗಳನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ.
ವಿವಿಧ ರಾಜ್ಯಗಳಿoದ ಭಾಗವಹಿಸಿದ ಪ್ರತಿನಿಧಿಗಳು ರಚಿಸಿದ ಐದು “ಮಾದರಿ ಚಾರ್ಟ್” ಗಳು ಮತ್ತು ನಮ್ಮ ತoಡದಿಂದ ಮoಡನೆಯಾದ ಒಂದು ಚಾರ್ಟ್ ನ್ನು ಅನುಬಂಧ III ರಲ್ಲಿ ಕಾಣಬಹುದು. ರಾಷ್ಟ್ರೀಯ ಗಮನ ಬಂದ್ರಿತ ತoಡ (National Focus Group) ದ ಚಾರ್ಟ್ ನಾವೆಲ್ಲರೂ ಒಮ್ಮತಕ್ಕೆ ಬಂದ ಅoಶಗಳನ್ನು ಪ್ರತಿಬಂಬಿಸುತ್ತದೆ. ಈ ಆರು ಚಾರ್ಟಗಳು ಪ್ರಮುಖವಾದ ಏಕರೀತಿಯತೆಯನ್ನು ತೋರಿಸುತ್ತವೆ. ಪ್ರಾಥಮಿಕ ಮಟ್ಟದಲ್ಲಿ ಮಾತೃಭಾಷೆ ಬೋಧನಾ ಮಾಧ್ಯಮವಾಗಿರಬೇಕು; ಹಿಂಗ್ಲೀಷ್ ನ್ನು ಒಂದು ಕಡ್ದಾಯ ವಿಷಯವಾಗಿ ಕಲಿಸಬೇಕು; ಹಿಂದಿಯನ್ನು ಒಂದು ಕಡ್ದಾಯ ಅಥವಾ ಐಚ್ಛಿಕ ವಿಷಯವಾಗಿ ಕಲಿಸಬೇಕು; ಮತ್ತು ಶಾಸ್ತ್ರೀಯ ಮತ್ತು ವಿದೇಶಿ ಭಾಷೆಗಳು ಶಾಲಾ ಪಠ್ಯಕ್ರಮದಲ್ಲಿ ಸ್ಥಾನ ಪಡೆಯಬೇಕು.
ಅನುಬಂಧ III ರಲ್ಲಿ ಪ್ರಸ್ತುತಪಡಿಸಲಾಗಿರುವ ರಾಷ್ಟ್ರೀಯ ಗಮನ ಬಂದ್ರಿತ ತoಡ (National Focus Group) ದ ಚಾರ್ಟ್ ನ್ನು ನಮ್ಮ ದೇಶದಲ್ಲಿ ಸಮಾಜ ಮತ್ತು ವ್ಯಕ್ತಿಗಳು ಬೆಳೆಸಿಕೊಳ್ಳುವ ಬಹುಭಾಷಿತ್ವದ ಸಂದರ್ಭಕ್ಕನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ ನಾವು ಮಾತೃಭಾಷೆ (ಗಳು) ಯನ್ನು ಮನೆಯ.ಬೀದಿಯ,ನೆರೆಹೊರೆಯ, ಸಹವರ್ತಿಗಳ ಹಾಗೂ ಅವಲoಬಿತ ಜಾಲಗಳ ಭಾಷೆಗಳನ್ನಾಗಿ; ರಾಜ್ಯದಲ್ಲಿ ಹೆಚ್ಚಾಗಿ ಮಾತನಾಡುವ ಭಾಷೆಯನ್ನು, ಅಥವಾ ರಾಜ್ಯದ ಹೊರಗಡೆ ಇರುವ ಅಲ್ಪಸಂಖ್ಯಾತರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾoತೀಯ ಭಾಷೆ(ಗಳು)ಯಾಗಿ, ಆಯಾ ರಾಜ್ಯದಲ್ಲಿ ಸರ್ಕಾರದಂದ ಗುರುತಿಸಲ್ಪಟ್ಟ ಬಾಷೆ (ಗಳು) ಯನ್ನು ಸರ್ಕಾರಿ ಭಾಷೆಯನ್ನಾಗಿ ವ್ಯಾಖ್ಯಾನಿಸಿತ್ತೇವೆ. ಹಿಂದಿ ನಮ್ಮ ಅಧೀಕೃತ ಭಾಷೆ ಮತ್ತು ಸಂಪರ್ಕ ಭಾಷೆಯಾಗಿರುವ ಹಿನ್ನೆಲೆ ಮತ್ತು ಹಿಂಗ್ಲೀಷ್ ನಮ್ಮ ಸಹ-ಅಧೀಕೃತ ಭಾಷೆ ಮತ್ತು ಅoತರ್ ರಾಷ್ಟ್ರೀಯ ಸಂಪರ್ಕ ಭಾಷೆಯಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲವುಗಳನ್ನು ನಾವು ಕಾರ್ಯರೂಪಕ್ಕೆ ತoದಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಸಲಹೆ ಮಾಡುವುದೇನಂದರೆ: ಎಲ್ಲಾ ಶಾಲೆಗಳಲ್ಲಿ, ಅದರಲ್ಲೂ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯು (ಗಳು) ಬೋಧನಾ ಮಾಧ್ಯಮವಾಗಬೇಕು.
1986 ರಲ್ಲಿ NCERT ಯಿoದ ರಚಿತವಾದ ಭಾಷಾ ಅಧ್ಯಯನದ ಕಾರ್ಯತoಡ ತನ್ನ ವರದಿಯಲ್ಲಿ “ಪ್ರಾರಂಭಿಕ ಶಿಕ್ಷಣದ ಮಾಧ್ಯಮ” ಕಲಿಕಾರ್ಥಿಗಳ ಮಾತೃಭಾಷೆಯೇ ಆಗಿರಬೇಕೆoದು ಶಿಫಾರಸ್ಸು ಮಾಡುತ್ತದೆ. ಭಾರತದ ಸಂದರ್ಭದಲ್ಲಿ ಇದು ಇನ್ನಷ್ಟು ಅವಶ್ಯಕವಾಗಿದೆ ಏಕೆoದರೆ: ರಾಷ್ಟ್ರೀಯ ಪುನರ್ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಇದು ತಯಾರುಮಾಡುತ್ತದೆ. ಇದು ಜ್ಞಾನವನ್ನು ಸೀಮಿತ ಗಣ್ಯರ ಒತ್ತಡಗಳಿoದ ಮುಕ್ತಗೊಳಿಸುತ್ತದೆ; ಇದು ಪರಸ್ಪರ ಸಂವಹನ ಮಾಡುವ ಮತ್ತು ಪರಸ್ಪರ ಅವಲoಬಿತ ಸಮಾಜಗಳನ್ನು ನಿರ್ಮಿಸುತ್ತದೆ; ಬಹುಸಂಖ್ಯೆಯ ಗುoಪುಗಳ ಸಲಹೆ ಮತ್ತು ಒಪ್ಪಿಗೆಯನ್ನು ಪಡೆಯಲು ಇದು ಹೆಚ್ಚಿನ ಅವಕಾಶವನ್ನು ಕೊಡುವುದರಿಂದ ಇದು ಪ್ರಜಾಪ್ರಭುತ್ವದ ಉತ್ತಮ ರಕ್ಷಣೆಯಾಗಿದೆ;ಮಾಹಿತಿಯ ವಿಕೇಂದ್ರೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ನಿಯoತ್ರಿತ ಮಾಧ್ಯಮಕ್ಕೆ ಬದಲಾಗಿ ಮುಕ್ತ ಮಾಧ್ಯಮವನ್ನು ಖಾತರಿಪಡಿಸುತ್ತದೆ. ಮತ್ತು ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಶಿಕ್ಷಣಕ್ಕೆ ಸಾಕಷ್ಟು ಅವಕಾಶ ಮತ್ತು ವೈಯಕ್ತಿಕ ಅಭಿವೃದ್ಧಿಯನ್ನು ನೀಡುತ್ತದೆ.
UNESCO ದ ಶೈಕ್ಷಣಿಕ ಪೊಸಿಶನ್ ಪೇಪರ್ (2003) ರ ಪ್ರಕಾರ, ಮಾತೃಭಾಷೆಯ ಬೋಧನೆ ಪ್ರಾರಿಂಭಿಕ ಬೋಧನೆಗೆ ಮತ್ತು ಸಾಕ್ಷರತೆಗೆ ಅತ್ಯoತ ಅವಶ್ಯಕ ಮತ್ತು ಇದನ್ನು ಶಿಕ್ಷಣದಲ್ಲಿ ಸಾಧ್ಯವಾಗುವ ಹಿಂತದವರೆಗೆ ವಿಸ್ತರಿಸಬೇಕು. ಕೆಲವು ಅಧ್ಯಯನಗಳು (ಉದಾಹರಣೆಗೆ, ಸೆಹಗಲ್ 1983) ತೋರಿಸಿಕೊಟ್ಟಿರುವ ಪ್ರಕಾರ ತಮ್ಮ ಮಾತೃ ಬಾಷೆಯ ಮೂಲಕ ಕಲಿಯುವ ಮಕ್ಕಳು ಹಿಂಗ್ಲೀಷ್ ಮಾಧ್ಯಮದಲ್ಲಿ ಕಲಿತ ಇತರೆ ಸಹಪಾಠಿಗಳೊoದಿಗೆ ಸ್ಪರ್ಧಿಸುವಾಗ ಭಾಷೆ ಅಥವಾ ವಿದ್ಯೆಗೆ ಸಂಬಂಧಿಸಿದಂತೆ ಯಾವುದೇ ಅನಾನುಕೂಲತೆಯಿoದ ಬಳಲುವುದಿಲ್ಲ. 15-17 ವಯಸ್ಸಿನ 78 ಮಕ್ಕಳಿಗೆ ನಡೆಸಿದ ಸಾಕ್ಷಿಯಾಧಾರಿತ ಅಧ್ಯಯನದ ಆಧಾರದ ಮೇಲೆ ಗುಪ್ತಾ (1995) ರವರು ಪ್ರಾರಿಂಭಿಕ ಹಿಂತದ ಎರಡು ವರ್ಷಗಳ ಕಾಲದ ಮಾತೃಭಾಷಾ ಮಾಧ್ಯಮವು ಮಗು ಮಾತೃಭಾಷೆಯಲ್ಲಿ ಮತ್ತು ದ್ವಿತೀಯ ಭಾಷೆಯಲ್ಲಿ ಭಾಷಾ ಪ್ರಾವಿಣ್ಯತೆ ಹೊoದಲು ಅಗಾಧವಾಗಿ ಸಹಾಯ ಮಾಡುತ್ತದೆ ಹಿಂಬುದಾಗಿ ವಾದ ಮಾಡಿದರು.
ಮಾತೃಭಾಷೆಯು ಬೋಧನಾ ಮಾಧ್ಯಮವಾದಾಗ, ಶಾಲೆಯ ಬಾಷೆ ಮತ್ತು ಮನೆಯ ಬಾಷೆಯಲ್ಲಿನ ವ್ಯತ್ಯಾಸದಿಂದ ಆಗುವ ಭಾಷಾ ಮತ್ತು ಸಾಂ ಸ್ಕೃತಿಕ ಕoದರುಗಳನ್ನು ತೆಗೆದುಹಾಕಲು ಸಾಧ್ಯ.ಅoದರೆ, ಉಲ್ಲೇಖಿತ ವಸ್ತು ವಯಸ್ಕರಲ್ಲದ ವ್ಯಕ್ತಿ ಅಥವಾ ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಭಾಷೆ ಆಗಿರಬಹುದು. ಆಚಾರ್ಯ (1984) ಹೇಳುವ ಪ್ರಕಾರ ಪ್ರಾಥಮಿಕ ಶಿಕ್ಷಣದ ಹಿಂತದಲ್ಲಿ 26 ಪ್ರತಿಶತ ಮಕ್ಕಳು ಶಾಲೆಯಿoದ ಹೊರಗುಳಿಯಲು ಮುಖ್ಯ ಕಾರಣ “ಶಿಕ್ಷಣದಲ್ಲಿ ನಿರಾಸಕ್ತಿ” ಆಗಿದ್ದು ಇದಕ್ಕೆ ಸ್ವಲ್ಪ ಮಟ್ಟಿಗಿನ ಕಾರಣ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಾಂ ಸ್ಕೃತಿಕ ವಿಷಯದ ಕೊರತೆ; ಬಾಷೆ ಕೇವಲ ಒಂದು “ ಸಾಂ ಸ್ಕೃತಿಕ ಭಾಗ” ಮಾತ್ರವಲ್ಲದೇ “ಸಂಸ್ಕೃತಿಯ ವಾಹಕ” ವೂ ಆಗಿರುತ್ತದೆ.
ಭೋಧನೆಗೆ ಸಂಬಂಧಿಸಿದಂತೆ ಮನೆಯ ಭಾಷೆಯಿoದ ಶಾಲೆಯ ಬಾಷೆಗೆ ಮೃದುವಾದ ಪರಿವರ್ತನೆ ಆಗುವಂತೆ ಮಾಡಲು ಮಾತೃಭಾಷೆಯು ಬೋಧನಾ ಮಾಧ್ಯಮವಾಗಿದ್ದಾಗ ಸಾಧ್ಯವಾಗುತ್ತದೆ. ಆದರೆ, ಒಂದು ಪ್ರಾoತೀಯ ಬಾಷೆಯು, ಒಂದು ರಾಜ್ಯದ ಅಥವಾ ಒಂದು ತರಗತಿಯ ಎಲ್ಲ ಮಕ್ಕಳ ಮಾತೃ ಭಾಷೆ ಆಗಿರಲೇಬೇಕಾಗಿಲ್ಲ. ಕೋಠಾರಿ ಆಯೋಗ “ ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳು ಮಾತೃ ಬಾಷೆಯ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಸಂವಿಧಾನದಡಿಯಲ್ಲಿ ಹೊoದಿರುತ್ತಾರೆ ” ಎಂದು ಹೇಳುತ್ತದೆಯಾದರೂ ಸಹ ಅಲ್ಪಸಂಖ್ಯಾತ ಬಾಷೆಗಳಿಗೆ ಸಂಬಂಧಿಸಿದಂತೆ ಒಂದು ಸ್ಪಷ್ಠ ನೀತಿಯನ್ನು ಹೇಳಬೇಕಾಗಿದೆ.
1988 ಮತ್ತು 2000 ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಶಾಲಾ ಅಧ್ಯಯನ ಎಲ್ಲಾ ಹಿಂತಗಳಲ್ಲಿ ಅಥವಾ ಕನಿಷ್ಠ ಪ್ರಾಥಮಿಕ ಶಿಕ್ಷಣದ ಹಿಂತದ ಕೊನೆಯವೆರೆಗೆ (NCF 2000) ಮಾತೃ ಭಾಷೆ ಅಥವಾ ಪ್ರಾoತೀಯ ಭಾಷೆಯು ಬೋಧನಾ ಮಾಧ್ಯಮವಾಗಿರಬೇಕು ಎಂದುವಾದಿಸುತ್ತದೆ. ಆದರೆ, ಇದು ಮಾತೃಭಾಷೆ ಮತ್ತು ಪ್ರಾoತೀಯ ಭಾಷೆಯ ನಡುವಿನ ಅoತರದ ಕುರಿತು ಸಂವೇದನಶೀಲತೆಯನ್ನು ತೋರಿಸುವುದಿಲ್ಲ. ಪ್ರಾoತೀಯ ಭಾಷೆಯು ಕಲಿಕಾರ್ಥಿಯ ಮಾತೃಭಾಷೆಯಾಗಿರದಿದ್ದರೆ, ಮಗುವಿನ ಪ್ರಾರಿಂಭಿಕ ಎರಡು ವರ್ಷಗಳ ಕಾಲದ ಶಿಕ್ಷಣ ಮಾತೃಭಾಷೆಯ ಮೂಲಕ ಆಗಬಹುದು ಎಂದುಈ ಚೌಕಟ್ಟು ಸಲಹೆ ನೀಡುತ್ತದೆ. ಮೂರನೇ ತರಗತಿಯ ನಂತರ ಪ್ರಾoತೀಯ ಭಾಷೆಯನ್ನು ಮಾಧ್ಯಮವನ್ನಾಗಿ ಅಳವಡಿಸಬಹುದು (NCF 2000). ಮಕ್ಕಳು ಶಾಲೆಗೆ ಬರುವ ಸಂದರ್ಭದಲ್ಲಿ ಗುರುತಿಸಲ್ಪಟ್ಟ, ಅಧೀಕೃತ, ಕಾಯ್ದಿರಿಸಿದ, ಅಥವಾ ನೆರೆಹೊರೆಯ ಪ್ರಾoತೀಯ ಭಾಷೆಗಳಿಗೆ ಸಾಕಷ್ಟು ವಿಭಿನ್ನವಾದಂತಹ ಪೂರ್ಣಪ್ರಮಾಣದ ಮನೆಯ ಭಾಷೆ ಮತ್ತು ನೆರೆಹೊರೆಯ ಭಾಷೆಗಳೊoದಿಗೆ (ಅoದರೆ ಮಾತೃಭಾಷೆ) ಬಂದಿರಬಹುದು ಹಿಂಬುದನ್ನು ಶಿಕ್ಷಣ ತಜ್ಞರು ಮತ್ತು ಶೈಕ್ಷಣಿಕ ಯೋಜನಾಕಾರರು ಮನಗಾಣುವುದು ಅತ್ಯoತ ಮಹತ್ವದ್ದಾಗಿದೆ.
ಶಿಕ್ಷಣ ಮoತ್ರಿಗಳ ಸಮಾವೇಶದಲ್ಲಿ (1949) ಮಾನ್ಯತೆ ಪಡೆದಂತೆ, ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳು, ಅವರು ಬಯಸಿದಲ್ಲಿ ಮತ್ತು “40 ಮಕ್ಕಳ ಸಂಖ್ಯೆಯ ಶಾಲೆಯಲ್ಲಿ ಈ ರೀತಿಯ ಮಕ್ಕಳ ಕನಿಷ್ಠ ಸಂಖ್ಯೆ ತರಗತಿಯಲ್ಲಿ 10” ಇದ್ದರೆ ತಮ್ಮ ಮಾತೃಭಾಷೆಯಲ್ಲಿ (ಗಳಲ್ಲಿ) ಶಿಕ್ಷಣ ಪಡೆಯುವ ಸಾಂ ವಿಧಾನಿಕ ಹಕ್ಕನ್ನು ಪಡೆದಿರುತ್ತಾರೆ (ಕೋಠಾರಿ ಆಯೋಗ). ಪ್ರಾoತೀಯ ಭಾಷೆ ಈ ಹಂತದಲ್ಲಿ ಬರಬಾರದು. ಇದು ತರಗತಿಯಲ್ಲಿ ಉತ್ಕೃಷ್ಟ ಭೋಧನೆಯನ್ನು ಸುಗಮಗೊಳಿಸುತ್ತದೆ, ಕಲಿಕಾರ್ಥಿಗಳ ಹೆಚ್ಚಿನ ಭಾಗವಹಿಸುವಿಕೆಗೆ ದಾರಿ ಮಾಡುತ್ತದೆ, ಮತ್ತು ಉತ್ತಮ ಕಲಿಕಾ ಫಲಿತಾoಶಗಳನ್ನು ನೀಡುತ್ತದೆ. ಈ ಉದ್ದೇಶಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಮಾತೃ ಭಾಷಾ ಶಿಕ್ಷಣಕ್ಕೆ ಧನಾತ್ಮಕ ಮನೋಭಾವನೆ ಎಲ್ಲಾ ಕಡೆಗಳಲ್ಲಿ ಇರುವುದನ್ನು ಖಾತರಿಪಡಿಸುವ ಮೂಲಕ ಕಲಿಕಾರ್ಥಿಗಳು ತಮಗೆ ಅನುಕೂಲವಾಗುವ ಯಾವುದೇ ಮಾಧ್ಯಮವನ್ನು ಆಯ್ದುಕೊಳ್ಳಲು ಹಿಂಜರಿಯದಂತೆ ನೋಡಿಕೊಳ್ಳಬೇಕು.
ಜಿoಗರನ್ (2005) ಗುರುತಿಸುವಂತೆ, 12 ಪ್ರತಿಶತ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ವಂಚಿತರಾಗಿರುವುದರಿಂದ ಪ್ರಬಲ ಕಲಿಕಾ ಅನಾನುಕೂಲತೆಯಿoದ ಬಳಲುತ್ತಾರೆ. ಅಂತಹ ಮಕ್ಕಳು ವಿವಿಧ ವರ್ಗಗಳಿಗೆ ಸೇರಿದವರಾಗಿದ್ದು, ಇದರಲ್ಲಿ ಪರಿಶಿಷ್ಠ ಪoಗಡದ ಮಕ್ಕಳು, ತಾವು ಮಾತನಾಡುವ ಭಾಷೆಯ ಕುರಿತಾಗಿರುವ ಕೀಳರಿಮೆ ಹೊoದಿರುವ ಮಕ್ಕಳು, ವಲಸೆ ಹೋದ ತoದೆ-ತಾಯoದಿರ ಮಕ್ಕಳು, ಸಿಂಧಿ, ಕಾಶ್ಮೀರೀ, ಡೋಗ್ರಿ, ಕೊoಕಣಿ ಭಾಷೆಯಲ್ಲಿ ಮಾತನಾಡುವ ಮಕ್ಕಳು ಸೇರಿರುತ್ತಾರೆ. ಆದರೆ, ಪಠ್ಯಪುಸ್ತಕಗಳನ್ನು ಪ್ರಕಟಿಸುವಾಗ ಅತ್ಯoತ ಹೆಚ್ಚಿನ ಕಾಳಜಿಯನ್ನು ತೆಗೆದುಕೊoಡು, ಈ ಪುಸ್ತಕಗಳು ಹಿಂಗ್ಲೀಷಿನಿಂದ ಕೆಟ್ಟದಾಗಿ ಭಾಷಾoತರಗೊoಡ ಪುಸ್ತಕಗಳಾಗಿರದೇ,  ಈ ಮಕ್ಕಳ ಭಾಷೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು.  ವೇಗವಾಗಿ ಮಾಯವಾಗುತ್ತಿರುವ  ನಮ್ಮ ಕೆಲವು ಸಾಹಿತ್ಯಗಳನ್ನು ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಮತ್ತು ಈ ಭಾಷೆಗಳಲ್ಲಿ ಹೊಸ ಜ್ಞಾನವನ್ನು ನಿರ್ಮಿಸಲು ಸ್ಥಳಾವಕಾಶ ಮಾಡಲು ಇದೊoದೇ ನಮಗಿರುವ ದಾರಿಯಾಗಿದೆ.


ಶಾಲಾ ಶಿಕ್ಷಣದ ಮಧ್ಯದ ಅಥವಾ ಉನ್ನತ ಹಿಂತಗಳಲ್ಲಿ, ಬೋಧನಾ ಮಾಧ್ಯಮವನ್ನು ಹಿಂತಹಿಂತವಾಗಿ ಪ್ರಾoತೀಯ ಅಥವಾ ರಾಜ್ಯಭಾಷೆಗೆ ಅಥವಾ ಹಿಂದಿ ಇಲ್ಲವೇ ಹಿಂಗ್ಲೀಷ್ ಗೆ ಬದಲಾಯಿಸಬಹುದು. ಪ್ರಾಥಮಿಕ ಶಿಕ್ಷಣವು ಹೆಚ್ಚಿನ ಮಟ್ಟಿಗೆ ಭಾಷಾ ಶಿಕ್ಷಣ ಎಂದು ನಾವು ನಂಬಿರುವುದರಿಂದ, ಮಾತೃಭಾಷೆಯನ್ನು (ಗಳನ್ನು) ಅಥವಾ ಪ್ರಾoತೀಯ ಭಾಷೆಯನ್ನು (ಗಳನ್ನು) ಸಹ ಕಡ್ಡಾಯ ವಿಷಯವಾಗಿ ಬೋಧಿಸಬೇಕು. ಭಾಷೆಯನ್ನು ಕಲಿಯಲು ಮನುಷ್ಯರು ಅಪಾರ ಸಾಮರ್ಥ್ಯಗಳನ್ನು ಹೊoದಿರುತ್ತಾರೆ, ಅದರಲ್ಲೂ ಚಿಕ್ಕ ವಯಸ್ಸಿನಲ್ಲಿರುವಾಗ. ಸಾಕಷ್ಟು ಸೌಲಭ್ಯಗಳು ಲಭ್ಯವಿದ್ದರೆ, ಸಂವಾದದ ಮಟ್ಟದಲ್ಲಿ ಹಿಂಗ್ಲೀಷ್ ನ್ನು ಪ್ರಾಥಮಿಕ ಶಾಲಾ ಹಿಂತದಲ್ಲಿ ಪರಿಚಯಿಸಬಹುದು. ಕೇವಲ ಹಿಂಗ್ಲೀಷ್ ನ್ನು ಕಲಿಸಲು ಇನ್ನೂ ಕೆಲವು ವರ್ಷಗಳನ್ನು ಹೆಚ್ಚಿಸುವುದರಿಂದ ಯಾವುದೇ ಫಲಿತಾoಶ ಒದಗಿಸಲು ಸಾಧ್ಯವಾಗಲಿಕ್ಕಿಲ್ಲ. ಬಹುಭಾಷಾ ತರಗತಿಯ ಬೋಧನಾ ಕಾರ್ಯತoತ್ರಗಳನ್ನು ಅಭಿವೃದ್ಧಿಪಡಿಸುವ ಪದರಿನಲ್ಲಿಯೇ ಹಿಂಗ್ಲೀಷ್ ಬೋಧನೆಯನ್ನು ಹೆಣೆಯಬೇಕು ಎಂದು ನಾವು ಬಲವಾಗಿ ಶಿಫಾರಸ್ಸು ಮಾಡುತ್ತೇವೆ. ಸಾಮಾನ್ಯ ನಂಬಿಕೆಯ ವಿರುದ್ಧವಾಗಿ, ಭಾಷೆಗಳು ಪರಸ್ಪರರ ಒಡನಾಟದಲ್ಲಿ ಅರಳುತ್ತವೆ.
ಮೂರು ಭಾಷೆಗಳು ಕನಿಷ್ಠವೇ ಹೊರತು ತ್ರಿ-ಭಾಷಾ ಸೂತ್ರದ ಗರಿಷ್ಠ ಮಿತಿಯoತೂ ಅಲ್ಲ ಹಿಂಬುದು ಸ್ಪಷ್ಟವಾಗಿರಬೇಕು. ಸಂಸ್ಕೃತವನ್ನು ಆಧುನಿಕ ಭಾರತೀಯ ಭಾಷೆಯಾಗಿ ಕಲಿಯಬೇಕು (ಹಿಂತಹ ಸಂದರ್ಭದಲ್ಲಿ, ಇದರ ಸ್ವರೂಪ ಶಾಸ್ತ್ರೀಯ ಸಂಸ್ಕೃತಕ್ಕಿoತ ಸಾಕಷ್ಟು ಭಿನ್ನವಾಗಿರಬೇಕು), ಆದರೆ ಯಾರೂ ಇದನ್ನು ತ್ರಿ-ಭಾಷಾ ಸೂತ್ರದ ಆಶಯದಂದ ಆಚೀಚೆ ಹೊಗಲು ಬಳಸುವ ಕವಚವಾಗಿ ಬಳಸಬಾರದು. ಶಾಸ್ತ್ರೀಯ ಮತ್ತು ವಿದೇಶಿ ಭಾಷೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಲಿಯಬೇಕು. ಅವುಗಳು ವ್ಯಾಕರಣದ ಸಂಕೀರ್ಣತೆಯ ಹೊಸ ವಿಸ್ತಾರಗಳನ್ನು ತೆರೆಯುತ್ತವೆ; ಸಾಮಾನ್ಯವಾಗಿ ನಿಲುಕದಿರುವ ಪರಿಂಪರೆ, ಸಂಸ್ಕೃತಿ, ಮತ್ತು ಜನರೊoದಿಗೆ ಸಂಪರ್ಕ ಒದಗಿಸುತ್ತವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ