ಶುಕ್ರವಾರ, ಜುಲೈ 3, 2015

ಎನ್.ಸಿ.ಎಪ್ ಪೊಶೀಷನ್ ಪೇಪರ್ ಭಾಷೆಯ ಸ್ವರೂಪ

ಎನ್.ಸಿ.ಎಪ್ ಪೊಶೀಷನ್ ಪೇಪರ್ ಭಾಷೆಯ ಸ್ವರೂಪ




Contents [hide]
೧ ಭಾಷೆಯ ಸ್ವರೂಪ ೧.೧ ಪರಿಚಯ
೧.೨ ಭಾಷಾ ಭೋದನೆ
೧.೩ ಆಡಳಿತ ವ್ಯವಸ್ಥೆಯಾಗಿ ಭಾಷೆ
೧.೪ ಮಾತನಾಡುವುದು ಮತ್ತು ಬರೆಯುವುದು
೧.೫ ಭಾಷೆ, ಸಾಹಿತ್ಯ ಮತ್ತು ಸೌಂದರ್ಯಶಾಸ್ತ್ರ
೧.೬ ಭಾಷೆ ಮತ್ತು ಸಮಾಜ
೧.೭ ಭಾಷೆ, ಮನೋಭಾವ ಮತ್ತು ಪ್ರೇರಣೆ
೧.೮ ಭಾಷೆ ಮತ್ತು ಗುರುತಿಸುವಿಕೆ
೧.೯ ಭಾಷೆ ಮತ್ತು ಅಧಿಕಾರ
೧.೧೦ ಭಾಷೆ ಮತ್ತು ಲಿಂಗ
೧.೧೧ ಭಾಷೆ, ಸಂಸ್ಕೃತಿ ಮತ್ತು ಯೋಚನೆಗಳು
೧.೧೨ ಶಿಕ್ಷಣ, ಭಾಷೆ ಮತ್ತು ಜವಾಬ್ದಾರಿಯುತ ನಾಗರೀಕ

ಭಾಷೆಯ ಸ್ವರೂಪ
ಪರಿಚಯ
ಶಿಕ್ಷಕರು , ಶಿಕ್ಷಕ-ಭೋದಕರು, ಪಠ್ಯಪುಸ್ತಕ ರಚನಾಕಾರರು , ಪಠ್ಯವಸ್ತು ವಿನ್ಯಸಗಾರರು ಮತ್ತು ಹಲವು ಶಿಕ್ಷಣ ತಜ್ಞರ ಪ್ರಕಾರ ಭಾಷೆಯೆಂದರೆ ಕೇವಲ ಸಂವಹನ ಮಾದ್ಯಮವೆಂಬುದಾಗಿದೆ. ಶಿಕ್ಷಣದಲ್ಲಿ ಭಾಷೆಯ ಪಾತ್ರವನ್ನು ಪ್ರಶಂಸಿಸುವುದಾದರೆ , ನಾವು ಭಾಷೆಯ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಭಾಷೆಯನ್ನು ರಚನಾತ್ಮಕ, ಸಾಹಿತ್ಯಾತ್ಮಕ, ಸಾಮಾಜಿಕ, ಸಾಂಸ್ಕೃತಿಕ, ಮನೋಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಯಂತಹ ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸಬೇಕು. ಶಬ್ದ, ಪದ ಮತ್ತು ವಾಕ್ಯಗಳು ವ್ಯವಸ್ಥಿತವಾದ ಹಂತದಲ್ಲಿ ಇರುವಾಗ ಔಪಚಾರಿಕವಾಗಿ ಭಾಷೆಯನ್ನು ಶಬ್ದಕೋಶಗಳ ಜೋಡಣೆಯಾಗಿ ಮತ್ತು ವಾಕ್ಯ ರಚನೆಯ ನಿಯಮಾವಳಿಯಾಗಿ ನೋಡುತ್ತೇವೆ. ಸಹಜವಾಗಿ ಇದೇ ಸಾರ್ವತ್ರಿಕ ಸತ್ಯವಾದರೂ ಇದು ಭಾಷೆಯ ಬಗೆಗೆ ಏಕಪಕ್ಷೀಯ ಚಿತ್ರಣವನ್ನು ನೀಡುತ್ತದೆ.
ಭಾಷಾ ಭೋದನೆ
ಮೂರು ವರ್ಷದ ಮೊದಲೇ ಎಲ್ಲಾ ಮಕ್ಕಳೂ ತಮ್ಮ ಸಮಾಜಿಕ ಅನ್ಯೋನ್ಯಾಂಗಗಳನ್ನು ಸೇರಿದಂತೆ , ಭಾಷೆಯ ಮೂಲ ವ್ಯವಸ್ಥೆಯನ್ನು ಮತ್ತು ಉಪ ವ್ಯವಸ್ಥೆಗಳನ್ನು ಅರ್ಥೈಸಿಕೊಳ್ಳುವುದು ಬಹು ಮುಖ್ಯವಾಗಿದೆ (ಅಂದರೆ ಅವರು ಕೇಲವ ಭಾಷಾಶಾಸ್ತ್ರವನ್ನು ಮಾತ್ರವಲ್ಲದೇ ಅಭಿವ್ಯಕ್ತಿ ಶೀಲ ಸಾಮರ್ಥ್ಯವನ್ನು ಗಳಿಸಿಕೊಳ್ಳುವುದು) . ಇದು ಮಗುವಿಗೆ ತನ್ನ ಜ್ಞಾನದ ವಲಯದಲ್ಲಿನ ಯಾವುದೇ ವಿಷಯದ ಮೇಲೇ ಅರ್ಥಪೂರ್ಣವಾದ ಸಂಭಾಷಣೆ ನಡೆಸಲು ಸಾಧ್ಯವಾಗಿಸುತ್ತದೆ.
ಸಾಮಾನ್ಯವಾಗಿ ಕೆಲವು ಮಕ್ಕಳು ಸಹಜ ಭಾಷಾ ಭೋದನೆಯಲ್ಲೇ ಬೆಳವಣಿಗೆಯಾಗಬಹುದು, ಆದ್ದರಿಂದ ಮಕ್ಕಳೆಡೆಗೆ ಹೆಚ್ಚಿನ ಕಾಳಜಿ ಮತ್ತು ಗಮನ ನೀಡಬೇಕಾಗುತ್ತದೆ (Chomsky 1957, 1965, 1986, 1988 and 1993). ಕೆಲವು ಭಾಷಾಶಾಸ್ತ್ರಜ್ಞರು ಭಾಷೆಯ ಸ್ವಾದೀನತೆಯ ಬಗ್ಗೆ ಕೆಲಸ ಮಾಡುತ್ತಿದ್ದರೂ ಇದು ಒಂದು ದೊಡ್ಡ ವಿರೋಧಾಭಾಸವಾಗಿಯೇ ಉಳಿದಿದೆ. ಇಂತಹ ಸಂದರ್ಭದಲ್ಲಿ ಮೂರು ವರ್ಷದ ಮಕ್ಕಳಿಗೆ ಭಾಷಾ ವ್ಯವಸ್ಥೆಯ ಅಗಾಧ ಸಂಕೀರ್ಣತೆಗಳನ್ನು ನಿರ್ವಹಿಸಲು ಸಾದ್ಯವೇ ? ಸಹಜ ಭಾಷಾ ಭೋದನೆಯಲ್ಲಿ ಗಮನಿಸಬೇಕಾದ ಅಂಶವೆಂದರೆ , ಭಾಷಾ ಭೋದನೆಯು ಎರಡು ರೀತಿಯ ಶೈಕ್ಷಣಿಕ ಪರಿಣಾಮಗಳನ್ನು ಹೊಂದಿರುತ್ತದೆ. ಭಾಷಾ ಭೋದನೆಯಲ್ಲಿ ವ್ಯಾಕರಣಕ್ಕಿಂತ ಹೆಚ್ಛಾಗಿ ಅರ್ಥಕ್ಕೆ ಪ್ರಾಮುಖ್ಯತೆ ನೀಡಬೇಕು. ಭಾಷಾ ಭೋದನೆಗೆ ಹೆಚ್ಚು ಗಮನವಹಿಸಿದಷ್ಟು , ಮಕ್ಕಳು ಹೊಸ ಭಾಷೆಯನ್ನು ಸರಾಗವಾಗಿ ಕಲಿಯುತ್ತಾರೆ.
ಆಡಳಿತ ವ್ಯವಸ್ಥೆಯಾಗಿ ಭಾಷೆ
ವೈಜ್ಞಾನಿಕ ವಿಧಾನದಲ್ಲಿ ಭಾಷೆಯ ರಚನೆಯನ್ನು ಅಧ್ಯಯನ ಮಾಡಿರುವ ಭಾಷಾ ವಿಜ್ಞಾನಿಗಳ ಪ್ರಕಾರ , ಒಂದು ಭಾಷೆಯ ವ್ಯಾಕರಣವು ಹಲವು ಉಪವ್ಯವಸ್ಥೆಗಳನ್ನು ಒಳಗೊಂಡಿರುವ ಒಂದು ದೊಡ್ಡ ಅಮೂರ್ತ ವ್ಯವಸ್ಥೆಯಾಗಿದೆ. ಶಬ್ದಗಳ ಹಂತದಲ್ಲಿ, ಪಠಿಸುವ ಮಾದರಿಗಳ ದೃಷ್ಟಿಯಲ್ಲಿ ನೋಡಿದಾಗ ವಿಶ್ವದ ಭಾಷೆಗಳು ಸಂಗೀತ ಮತ್ತು ಲಯ ಕ್ಕೆ ತುಂಬಾ ಹತ್ತಿರವಾಗಿ ಸಂಬಂಧೀಕರಿಸಿವೆ. ಹಾಗೆಯೇ ವ್ಯಂಜನ ಮತ್ತು ಸ್ವರಗಳ ಶಬ್ದಗಳು ಎಲ್ಲಾ ಮಾನವ ಭಾಷೆಗಳಲ್ಲಿಯೂ ವ್ಯವಸ್ಥಿತವಾಗಿ ಆಯೋಜಿಸಲ್ಪಟ್ಟಿವೆ . ಎಲ್ಲಾ ಶಬ್ದದ ವಿಭಾಗಗಳನ್ನು ಹೊಂದಿದ್ದು, ಅದರ ವ್ಯಾಪ್ತಿ ೨೫-೮೦ ಶಬ್ದಗಳ ಅಂತರದಲ್ಲಿರುತ್ತದೆ. ಸ್ವರ ಮತ್ತು ವ್ಯಂಜನ ಶಬ್ದಗಳಿಗೆ ಪರ್ಯಾಯವಾಗಿ ತೋರಿಸಲು ಭಾಷಾ ವಿಜ್ಞಾನಿಗಳು ಪದಗಳಿಗೆ ಆದ್ಯತೆ ನೀಡಿದರು . ಉದಾ : ಪದದ ಆರಂಭದಲ್ಲಿ ಮೂರಕ್ಕಿಂತ ಹೆಚ್ಚು ವ್ಯಂಜನ ಶಬ್ದಗಳನ್ನು ಒಳಗೊಂಡ ಭಾರತೀಯ ಭಾಷೆಯಿಲ್ಲ, ಇಂಗ್ಲೀಷನ್ನು ಒಳಗೊಂಡು . ಮೂರಕ್ಕಿಂತ ಹೆಚ್ಚು ವ್ಯಂಜನ ಶಬ್ದಗಳನ್ನು ಒಳಗೊಂಡಿದ್ದರೂ ಆ ಆಯ್ಕೆಗಳನ್ನು ತುಂಬಾ ಸೀಮಿತಗೊಳಿಸಲಾಗಿರುತ್ತದೆ.
ಭಾಷೆಯಲ್ಲಿ ಧ್ವನಿಗಳಿವೆ, ಪದಗಳಿವೆ, ವಾಕ್ಯ ಮಾದರಿಗಳಿವೆ. ನಾವು ಬಳಸುವ ಭಾಷೆಯಲ್ಲಿ ಈ ಎಲ್ಲವನ್ನೂ ಸಮಪ್ರಮಾಣದಲ್ಲಿ ಬಳಸುವುದಿಲ್ಲ. ಉದಾಹರಣೆಗೆ ಝ ಎಂಬೊಂದು ಧ್ವನಿ ಕನ್ನಡದಲ್ಲಿ ಇದೆಯಾದರೂ ನಾವು ಗಂಟೆಗಟ್ಟಲೆ ಕನ್ನಡ ಮಾತಾಡಿದರೂ ಅಥವಾ ಪುಟಗಟ್ಟಲೆ ಕನ್ನಡದಲ್ಲಿ ಬರೆದರೂ ‘ಝ’ ಧ್ವನಿಯುಕ್ತ ಪದವೊಂದನ್ನು ಬಳಸದೆಯೇ ಇರಬಹುದು. ಕೆಲವು ಧ್ವನಿಗಳು ಮತ್ತೆ ಮತ್ತೆ (ಉದಾಹರಣೆಗೆ ಸ್ವರಗಳು) ಬಳಕೆಯಾಗುತ್ತವೆ. ಅವುಗಳ ಬಳಕೆಯ ಪ್ರಮಾಣ ಅತ್ಯಧಿಕವಾಗಿರುತ್ತದೆ. ಹಾಗೆಯೇ ನಾವು ಬಲ್ಲ ಪದಗಳೆಲ್ಲವನ್ನೂ ಬರೆಯುವಾಗ ಇಲ್ಲವೇ ಮಾತಾಡುವಾಗ ಒಂದೇ ಪ್ರಮಾಣದಲ್ಲಿ ಬಳಸುವುದಿಲ್ಲ. ಕೆಲವು ಪದಗಳು ಮೊದಲಿಂದ ಕೊನೆಯವರೆಗೆ ಮತ್ತೆ ಮತ್ತೆ ಬಳಕೆಯಾದರೆ ಮತ್ತೆ ಕೆಲವು ಎಲ್ಲೋ ಆಗಾಗ ಸುಳಿದು ಹೋಗುತ್ತವೆ. ನಿಘಂಟುಗಳಲ್ಲಿ ಎಲ್ಲ ಪದಗಳೂ ಪಟ್ಟಿಯಾಗಿದ್ದರೂ ಅವು ಬೇರೆ ಬೇರೆ ಪ್ರಮಾಣಕ್ಕೆ ಅನುಗುಣವಾಗಿ ಬಳಕೆಯಾಗುತ್ತಿರುತ್ತವೆ.
ಭಾಷಾಧ್ಯಯನಕಾರರು ಹೀಗೆ ಭಾಷೆಯ ಘಟಕಗಳು ಬಳಕೆಯಲ್ಲಿ ಆವರ್ತನಗೊಳ್ಳುವಾಗ ಯಾವುದಾದರೂ ಕ್ರಮಬದ್ಧತೆ ಇದೆಯೋ ಎಂಬುದನ್ನು ಅರಿಯಲು ಯತ್ನಿಸಿದ್ದಾರೆ. ಈ ಅಧ್ಯಯನಗಳು ಭಾಷೆಯ ವಿವಿಧ ಘಟಕಗಳು ಬಹುಮಟ್ಟಿಗೆ ನಿರ್ದಿಷ್ಟವಾದ ಆವರ್ತನ ಕ್ರಮದಲ್ಲಿ ಬಳಕೆಯಾಗುವುದನ್ನು ತೋರಿಸಿಕೊಟ್ಟಿವೆ. ಭಾಷಿಕರು ಭಾಷೆಯನ್ನು ಬಳಸುವಾಗ ವ್ಯಕ್ತಿಯಿಂದ ವ್ಯಕ್ತಿಗೆ ಹಲವು ವ್ಯತ್ಯಾಸಗಳು ಕಂಡು ಬರುತ್ತವೆಯಾದರೂ ಭಾಷಾ ಘಟಕಗಳ ಆವರ್ತನ ಕ್ರಮದಲ್ಲಿ ಗಣನೀಯ ವ್ಯತ್ಯಾಸಗಳು ಕಾಣಸಿಗುವುದಿಲ್ಲ. ಅಂದರೆ ಕನ್ನಡ ಧ್ವನಿಗಳಲ್ಲಿ ಝ ಅಥವಾ ಘ ಅತಿ ಕಡಿಮೆ ಬಳಕೆಯ ಆವರ್ತನವನ್ನು ಪಡೆದಿವೆ ಎನ್ನೋಣ. ಕನ್ನಡಿಗರು ಯಾರೇ ಆಗಿರಲಿ ಅವರ ಬಳಕೆಯಲ್ಲಿ ಈ ಧ್ವನಿಗಳು ತಮ್ಮ ಆವರ್ತನವನ್ನು ಹೆಚ್ಚಿಸಿಕೊಳ್ಳಲಾರವು. ಈ ಮಾತು ಪದ ಗಳಿಗೂ ಅನ್ವಯಿಸುತ್ತದೆ. ಅಂದರೆ ಭಾಷೆಯ ಘಟಕಗಳು ಬಳಕೆಯಲ್ಲಿ ಪ್ರಯುಕ್ತವಾಗುವಾಗ, ಸಂಯೋಜಿತ ರೂಪವನ್ನು ಪಡೆಯುವಾಗ ಗೊತ್ತಾದ ಪ್ರಮಾಣಬದ್ಧತೆಯನ್ನು ಹೊಂದಿರುತ್ತವೆ.
ಇಂಗ್ಲೀಷ್ ಭಾಷೆಯ ಬಳಕೆಯನ್ನು ಆಧರಿಸಿ ಭಾಷಾ ಘಟಕಗಳ ಆವರ್ತನವನ್ನು ಲೆಕ್ಕಹಾಕುವ ಯತ್ನಗಳು ನಡೆದಿವೆ. ಆ ಭಾಷೆಯ ಬಳಕೆಯಲ್ಲಿ ಪ್ರತಿಶತ ಅರವತ್ತು ಭಾಗ ವ್ಯಂಜನ ಧ್ವನಿಗಳಿದ್ದರೆ ಉಳಿದ ಪ್ರತಿಶತ ನಲವತ್ತರಷ್ಟು ಸ್ವರಗಳು ಕಾಣ/ಕೇಳಸಿಗುತ್ತವೆ. ಬಳಕೆಯಾಗುವ ಪದಗಳಲ್ಲೂ ಏಕಾಕ್ಷರಗಳ ಪ್ರಮಾಣ ಅಧಿಕ. ಏಕಾಕ್ಷರಗಳೆಂದರೆ ವ್ಯಂಜನ, ಸ್ವರ ಮತ್ತು ವ್ಯಂಜನಗಳಿರುವ ರೂಪಗಳು. ಆ ಭಾಷೆಯ ಆಯ್ದ ಐವತ್ತು ಪದಗಳು, ಆ ಭಾಷೆಯ ಯಾವುದೇ ಬಳಕೆಯಲ್ಲಿ ಪ್ರತಿಶತ ನಲವತ್ತೈದರಷ್ಟು ಪ್ರಮಾಣದಲ್ಲಿರುತ್ತವೆ.
ಹೀಗೆ ಯಾವುದೇ ಭಾಷಾಘಟಕವನ್ನು ಆಯ್ದು ಅದರ ಬಳಕೆಯ ಪ್ರಮಾಣವನ್ನು ನಿಯಂತ್ರಿಸುವುದು ದಿನಬಳಕೆಯಲ್ಲಿ ಅಸಾಧ್ಯ. ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡುವುದು ಭಾಷಿಕರಿಗೆ ಆಗದ ಮಾತು. ಕೆಲವೊಮ್ಮೆ ಹಾಗೆ ವ್ಯವಸ್ಥಿತವಾಗಿ ಪ್ರಯತ್ನಿಸಿದರೂ ಅದು ಅಲ್ಪ ಕಾಲಾವಧಿಗೆ ಮಾತ್ರ ಸೀಮಿತವಾಗಿರುವುದು. ಉದಾಹರಣೆಗೆ ಸಂಸ್ಕೃತ ಭಾಷಾ ಪರಂಪರೆಯಲ್ಲಿ ಕೆಲವು ಬಗೆಯ ಜಾಣತನದ ಪದ್ಯರಚನೆಗಳಿವೆ. ಉದ್ದೇಶ ಹಾಗೂ ವ್ಯಾಪ್ತಿಯ ಇಂಥ ಪ್ರಯತ್ನಗಳನ್ನು ಬಿಟ್ಟರೆ ಧ್ವನಿಘಟಕಗಳ ಆವರ್ತನೆಯನ್ನು ಗಮನವಿಟ್ಟು ನಿಯಂತ್ರಿಸುವ ಇನ್ನೊಂದು ನೆಲೆಯೆಂದರೆ ಪ್ರಾಸ, ಅನುಪ್ರಾಸಗಳ ಅಳವಡಿಕೆ. ಇದೂ ಕೂಡ ದೀರ್ಘ ರಚನೆಗಳಲ್ಲಿ ಹಲವು ರೀತಿಯಲ್ಲಿ ಕಾಣಸಿಗುವುದೇ ಹೊರತು, ಒಂದೇ ಧ್ವನಿಯನ್ನು ಇಡೀ ರಚನೆಯ ಪ್ರಾಸಸ್ಥಾನದಲ್ಲಿ ಬಳಸುವುದಿಲ್ಲ.
ಈ ಮೇಲಿನ ನಿದರ್ಶನಗಳನ್ನು ಹೊರತುಪಡಿಸಿದರೆ ಬಹುಮಟ್ಟಿಗೆ ಭಾಷಾ ಘಟಕಗಳ ಬಳಕೆಯಲ್ಲಿ ಪ್ರತಿ ಘಟಕದ ಆವರ್ತನ ಸಾಧ್ಯತೆ ನಿಯಂತ್ರಿತ ವಾಗಿರುತ್ತದೆ. ಇದು ಬೇರೆ ಬೇರೆ ಕಾಲಮಾನಗಳಲ್ಲಿ ಬದಲಾಗಬಹುದೇ ಎಂಬುದು ಪರಿಶೀಲನೆಗೆ ಒಳಗಾಗಬೇಕಾಗಿದೆ. ಉದಾಹರಣೆಗೆ ಧ್ವನಿ ವ್ಯತ್ಯಾಸಗಳು ನಡೆದಂತೆ ಸಹಜವಾಗಿಯೇ ಪ್ರತಿ ಧ್ವನಿಯ ಆವರ್ತನ ಸಾಧ್ಯತೆ ಬದಲಾಗುತ್ತದೆ. ಹಳಗನ್ನಡದಲ್ಲಿ ೞದ ಬದಲು ಳ ಬಳಕೆಯಾಗತೊಡಗಿತು. ಆಗ ಸಹಜವಾಗಿ ಧ್ವನಿ ಆವರ್ತನ ಸಂಖ್ಯೆ ಕೂಡ ಬದಲಾಗಿರಬೇಕು.
ಭಾಷಾ ಘಟಕಗಳ ಆವರ್ತನ ಕ್ರಮವು ಆಡುಭಾಷೆ ಮತ್ತು ಬರಹ ಭಾಷೆಗಳಲ್ಲಿ ಬೇರೆಬೇರೆಯಾಗಿರುತ್ತದೆ. ಆಡುಭಾಷೆಯಲ್ಲಿ ಹೆಚ್ಚಿನ ಆವರ್ತನ ಶೀಲತೆಯನ್ನು ಪಡೆದಿರುವ ಭಾಷಾಘಟಕವು ಬರಹ ಭಾಷೆಯಲ್ಲಿ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು. ಮಹಾಪ್ರಾಣ ಧ್ವನಿಗಳಿಗೆ ಕನ್ನಡದ ಬರೆಹದ ಭಾಷೆಯಲ್ಲಿರುವ ಆವರ್ತನ ಶೀಲತೆಯು ಆಡುಮಾತಿನಲ್ಲಿ ಇಲ್ಲ. ಕನ್ನಡ ಪದಕೋಶದ ಬಳಕೆಯಲ್ಲಿ ಸಂಸ್ಕೃತ ಭಾಷೆಯ ಪದಗಳು ಆಡುಮಾತಿಗಿಂತ ಬರಹದ ಭಾಷೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಆವರ್ತಗೊಳ್ಳುತ್ತವೆ. ಭಾಷಾ ಉಪನ್ಯಾಸದ ಹಂತಗಳು ಈ ಮೇಲಿನ ವ್ಯವಸ್ಥೆಯ ಜೊತೆಗೆ ಒಂದು ನಿರ್ದಿಷ್ಟ ಸಮಾಜದಲ್ಲಿ ನಡೆಯುವ, ಭಾಷಾ ಸಮಾಜಶಾಸ್ತ್ರೀಯ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಆಧಾರವಾಗಿಟ್ಟುಕೊಂಡೇ ಸಂರಚನೆಯಾಗುತ್ತದೆ.
ಭಾರತವೂ ಅತಿ ದೊಡ್ಡ ಮತ್ತು ಬಹಳ ಶ್ರೀಮಂತ ಭಾಷಾ ಸಂಕೀರ್ಣತೆಗಳನ್ನು ಹೊಂದಿದ್ದು ಇದಕ್ಕೆ ಪಾಣಿನಿ, ಕಾತ್ಯಾಯನಿ, ಪತಂಜಲಿ, ಭಾರ್ತ್ರಹರಿ (ಸಂಸ್ಕೃತ ಭಾಷಾ ಲೇಖಕ), ಚಂದ್ರಕೀರ್ತಿ, ಜೈನೇಂದ್ರ ಮತ್ತು ಹೇಮಚಂದ್ರ ಆಚಾರ್ಯರ ಕೊಡುಗೆ ಅಪಾರವಾದುದಾಗಿದೆ. ಆದರೆ ವಿಪರ್ಯಾಸಕರವೆಂದರೆ ಈ ಇಷ್ಟು ಶ್ರೀಮಂತ ಭಾಷೆಯನ್ನುಳ್ಳ ನಮ್ಮ ಭಾರತೀಯ ಜ್ಞಾನವನ್ನು ನಾವುಗಳೇ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿದ್ದೇವೆ. ಈ ವಿಷಯದಲ್ಲಿ ವೈಜ್ಞಾನಿಕ ಸಂಶೋಧನೆ ಕೈಗೊಳ್ಳಲು ಭಾಷಾ ವಿಜ್ಞಾನ ಸಂಸ್ಥೆಗಳನ್ನು ಹುಟ್ಟುಹಾಕಬಹುದಾಗಿದೆ ಹಾಗು ಈ ಮೂಲಕ ಭಾಷಾ ಭೋದನೆಯಲ್ಲಿನ ಶೈಕ್ಷಣಿಕ ಪರಿಣಾಮಗಳನ್ನು ಹೊರಹಾಕಬಹುದು.
ಪಾಣಿನಿಯ ಅಷ್ಟಾದ್ಯಾಯಿ ಯಲ್ಲಿ ಅಡಕವಾಗಿರುವ ಭಾಷಾ ಅಂಶಗಳು ಈಗಿನ ಆಧುನಿಕ ವ್ಯಾಕರಣಗಳಿಗೆ ಸಮನಾಂತರವಾಗಿಲ್ಲ. ಅಷ್ಟಾಧ್ಯಾಯಿಯ ಪ್ರಕಾರ ನಮ್ಮ ಭಾರತದ ಸಂಪ್ರದಾಯದಲ್ಲಿ ಭಾಷೆಯೆಂದರೆ ಮಾತನಾಡುವುದು ಬರೆಯುವುದಲ್ಲ, ಸಂವೇದನ ಮಾರ್ಗ ಕೇವಲ ಸಂವಹನ ವಲ್ಲ ಮತ್ತು ಭಾಷೆಯು ರಚನಾತ್ಮಕ ವ್ಯವಸ್ಥೆ ಕೇವಲ ಪ್ರಾತಿನಿಧಿಕ ವ್ಯವಸ್ಥೆಯಲ್ಲ.
ಭಾರ್ತ್ರಹರಿ ಯ ಪ್ರಕಾರ ಭಾಷೆಯು ವಾಸ್ತವ ನೈಜ ಜ್ಞಾನವನ್ನು ಸಂರಚಿಸುತ್ತದೆ ಮತ್ತು ಈ ಜ್ಞಾನವನ್ನು ಪರಿಕಲ್ಪನಾತ್ಮಕ ಜೋಡಣೆಯ ಪ್ರಕ್ರಿಯೆಯಾಗಿ ನೋಡುತ್ತದೆ., ಭಾಷಯೆಲ್ಲಿನ ಈ ರೀತಿಯ ಸಮಗ್ರ ಪರಿಕಲ್ಪನೆಗಳು ಪ್ರಮುಖ ಶೈಕ್ಷಣಿಕ ಪರಿಣಾಮಗಳನ್ನು ಹೊಂದಿರಬಹುದಾಗಿದೆ.
ಮಾತನಾಡುವುದು ಮತ್ತು ಬರೆಯುವುದು
ಮಾತು ಮತ್ತು ಬರವಣಿಗೆಯ ನಡುವಿನ ಮೂಲಭೂತ ವ್ಯತ್ಯಾಸವೆಂದರೆ, ಭಾಷೆಯ ಬರವಣಿಗೆಯನ್ನು ಪ್ರಜ್ಞಾಪೂರ್ವಕವಾಗಿ ಮಾರ್ಗದರ್ಶನ ಮಾಡಬೇಕಾಗುತ್ತದೆ ಮತ್ತು ಇದಕ್ಕೆ ಸಮಯ ಬೇಕಾಗುತ್ತದೆ. ಮತ್ತು ಬರವಣಿಗೆಯನ್ನು ನಾವು ಬಯಸಿದಾಗ ಮರಳಿಸಬಹುದು. ಮಾತನಾಡುವ ಭಾಷೆ ಹೆಚ್ಚು ಪ್ರಾಕೃತಿಕ ಸ್ಥಿರತೆಯನ್ನು ಹೊಂದಿರುವುದಿಲ್ಲ, ಬರವಣಿಗೆಯ ಭಾಷೆಯಲ್ಲಿ ಸುಲಭವಾಗಿ ಬದಲಾವಣೆಗಳನ್ನು ಮಾಡಬಹುದು. ಆದ್ದರಿಂದಾಗಿಯೇ ಮಾತನಾಡುವ ಭಾಷೆ ಮತ್ತು ಬರೆವಣಿಗೆಯ ಭಾಷೆಯಲ್ಲಿನ ಅಂತರ ಆಶ್ಚರ್ಯಕರವಾಗಿರುತ್ತದೆ. ಭಾಷೆ ಮತ್ತು ಲಿಪಿ ನಡುವೆ ಯಾವುದೇ ಸ್ವಾಭಾವಿಕ ಸಂಬಂಧವಿಲ್ಲ, ಇಂಗ್ಲೀಷ್ ಭಾಷೆ ಮತ್ತು ರೋಮನ್ ಸ್ಕ್ರಿಪ್ಟ್ ಅಥವಾ ಹಿಂದಿ, ಸಂಸ್ಕೃತ , ದೇವನಾಗರಿ ಲಿಪಿಗಳ ನಡುವೆ ಯಾವುದೇ ಸಂರಕ್ಷಿತ ಸಂಪರ್ಕವೂ ಇಲ್ಲ . ವಾಸ್ತವವಾಗಿ ಯಾವುದೇ ಒಂದು ಭಾಷೆಯನ್ನು ವಿಶ್ವದ ಎಲ್ಲಾ ಲಿಪಿಗಳಲ್ಲಿ ಬರೆಯುವಂತೆಯೇ, ವಿಶ್ವದ ಎಲ್ಲಾ ಭಾಷೆಗಳನ್ನು ಸಣ್ಣ ಪುಟ್ಟ ಮಾರ್ಪಾಡುಗಳೊಂದಿಗೆ ಒಂದೇ ಲಿಪಿಯಲ್ಲಿ ಬರೆಯಬಹುದಾಗಿದೆ. ಇದರಿಂದ ಭಾಷೆ ಮತ್ತು ಲಿಪಿಯ ನಡುವಿನ ಸಂಬಂದವೂ ಪ್ರಮುಖ ಶೈಕ್ಷಣಿಕ ಒಳಾರ್ಥವನ್ನು ಹೊಂದಿದೆ ಎಂಬ ಅರಿವು ಮೂಡುತ್ತದೆ. ಈ ವಿದ್ಯಾಮಾನದ ಅರಿವು ಶಿಕ್ಷಕರಲ್ಲಿ ಮೂಡಿದರೆ ಭಾಷಾ ಜ್ಞಾನದ ಬಗೆಗಿನ ಅವರಲ್ಲಿನ ಮನೋಭಾವಗಳನ್ನು ಬದಲಾಯಿಸಿಕೊಂಡು ನವೀನ ಮಾದರಿಯ ಭೋದನಾ ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ.
ಭಾಷೆ, ಸಾಹಿತ್ಯ ಮತ್ತು ಸೌಂದರ್ಯಶಾಸ್ತ್ರ
ಭಾಷೆಯ ಬಗೆಗಿನ ಹಲವಾರು ಕಾರ್ಯಗಳು ಭಾಷಾ ಶಿಕ್ಷಣ ಯೋಜನಕರಿಗೆ ಬಾಯಿಪಾಠವಾಗಿಬಿಟ್ಟಿವೆ. ಇದರಲ್ಲಿ ವಿಶ್ವವಿಕಾಶದ ಗುಣಮಟ್ಟದಲ್ಲಿ ಭಾಷೆಯೂ ಅನೇಕ ಕಾಲ್ಪನಿಕ ಅಂಶಗಳನ್ನು ಹೊಂದಿದೆ. ಕಾವ್ಯ, ಗದ್ಯ, ಮತ್ತು ನಾಟಕಗಳು ಕೇವಲ ಸಾಹಿತ್ಯ ಸಂವೇದನೆಯನ್ನು ಮರುಹೊಂದಿಸುವ ಮೂಲಗಳಾಗಿರದೇ ನಮ್ಮ ಸೌಂದರ್ಯಶಾಸ್ತ್ರವನ್ನು ಸಮೃದ್ದಗೊಳಿಸುವ, ಸೌಂದರ್ಯಶಾಸ್ತ್ರ ಸಾಮಾರ್ಥ್ಯವನ್ನು ವರ್ಧಿಸುವ ಬರವಣಿಗೆಯ ಗ್ರಹಿಕೆ ಹಾಗು ಅಕ್ಷರ ಜೋಡಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅಗಾಧವಾದ ಭಾಷಾ ಸಮಾರ್ಥ್ಯವನ್ನು ಪ್ರಬಲಮೂಲಗಳಾಗಿವೆ.. ಸಾಹಿತ್ಯವು ನಮ್ಮ ದೈನಂದಿನ ಸಂವಾದಗಳಲ್ಲಿನ ವ್ಯಂಗ್ಯ, ಕಥೆ, ವಿಡಂಬನೆ, ನೀತಿಕಥೆ ಮುಂತಾದವುಗಳ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.
ರವೀಂದ್ರನಾಥ ಟ್ಯಾಗೋರ್ ರವರು ಶಾಂತಿನಿಕೇತನದ ವಿಶ್ವ ಭಾರತಿಯಲ್ಲಿ ಹೇಳಿರುವಂತೆ , ಒಂದು ಭಾಷಾ ಶಿಕ್ಷಣ ನೀತಿಯು ಭಾಷೆಯ ಅಲಂಕಾರಿಕ, ಕಾಲ್ಪನಿಕ ಮತ್ತು ನಿರೂಪಣಾತ್ಮಕ ಅಂಶಗಳನ್ನು ನಿರ್ಲಕ್ಷಿಸುವುದು ಅಸಾಧ್ಯ ಹಾಗು ಇದು ಕೇವಲ ಲೌಕಿಕ ಜ್ಞಾನದ ಲಾಭವನ್ನು ಹೊಂದುವ ಒಂದು ಸಾಧನವಾಗಿದೆ. ಮಾನವೀಯ ಗುಣಗಳು ಕೇವಲ ಸೌಂದರ್ಯವನ್ನು ಆಸ್ವಾಧಿಸುವದಷ್ಟೇ ಅಲ್ಲದೇ ವ್ಯವಸ್ಥಿತವಾದ ಸೌಂದರ್ಯಶಾಸ್ತ್ರದ ಆಯಾಮಗಳನ್ನು ಕ್ರೋಢೀಕರಿಸುವುದು ಆಗಿದೆ.
ಭಾಷಾ ಸೌಂದರ್ಯಶಾಸ್ತ್ರದ ಅಂಶಗಳಲ್ಲಿ ಪರಿಗಣಿಸಬಹುದಾದ ಮೆಚ್ಚುಗೆಯೆಂದರೆ ಅನಿವಾರ್ಯವಾಗಿ ಭಾಷೆಯ ಪರಿಪೂರ್ಣತೆ ಮತ್ತು ಶುದ್ದತೆಯ ಬದಲಿಗೆ ಭಾಷಾ ಜೀವಂತಿಕೆಗೆ ಮತ್ತು ಸೃಜನಶೀಲತೆಗೆ ಆದ್ಯತೆ ನೀಡಲಾಗುತ್ತಿದೆ. ಈ ಪ್ರಕ್ರಿಯೆಯು ಭಾಷೆಯು ಅತಿಕ್ರಮಣತೆಗೆ ಬದಲಾಗಿ ಸಂಭಾಷಣೆ ಮತ್ತು ಸಮಾಲೋಚನೆಗೆ ಅವಕಾಶಳನ್ನು ಮಾಡಿಕೊಡುತ್ತದೆ. ಇದು ಸಣ್ಣ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ನ್ಯಾಯ ಸಮ್ಮತವಾಗಿ ಗೌರವಿಸುವ ಭರವಸೆಯನ್ನು ಮೂಡಿಸಿದೆ.
ಭಾಷೆ ಮತ್ತು ಸಮಾಜ
ಮಕ್ಕಳು ಭಾಷಾ ಕಲಿಕೆಯ ಸಾಮರ್ಥ್ಯದೊಂದಿಗೇ ಹುಟ್ಟಿದಂತೆ ಕಂಡರೂ, ಪ್ರತಿ ಭಾಷೆಯ ಕಲಿಕೆ ಕೆಲವು ನಿಶ್ಚಿತ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪರಿಸರದಲ್ಲಿ ಆಗುತ್ತದೆ. ಪ್ರತಿಯೊಂದು ಮಗುವೂ ಎಲ್ಲಿ , ಏನನ್ನು, ಯಾರಿಗೆ ಹೇಳಬೇಕೆಂಬ ವಿಚಾರಗಳನ್ನು ಕಲಿಕೆಯಿಂದ ಪಡೆಯುತ್ತದೆ. ಭಾಷೆಗಳಲ್ಲಿ ಮೂಲವಾಗಿಯೇ ವ್ಯತ್ಯಾಸಗಳಿರುತ್ತವೆ ಅದರೊಂದಿಗೆ ಸನ್ನಿವೇಶ ಹಾಗೂ ವಯಸ್ಸಿಗನುಗುಣವಾಗಿ ಬಳಸುವ ಶೈಲಿಯಲ್ಲಿ ಹಲವಾರು ವಿಧಗಳನ್ನು ಕಾಣಬಹುದು(Labov 1966,1972; Trudgill 1974; Gumperz and Hymes 1972; Gumprez 1964; Habermas 1970, 1996). ಮನುಷ್ಯನ ಭಾಷಾ ಬಳಕೆಯ ಶೈಲಿ, ವಿಧಾನಗಳಲ್ಲಿರುವ ಅನೇಕತೆ ಯಾವುದೇ ನಿಯಮಕ್ಕೆ ನಿಲುಕದಂತೆ ಕಂಡರೂ, ಈ ಅನೇಕತೆಯೇ ಭಾಷೆಯ ವ್ಯವಸ್ಥೆ, ಸಂವಹನ, ಚಿಂತನೆ ಹಾಗೂ ಜ್ನಾನಗಳ ನಡುವೆ ಇರುವ ಸಂಬಂಧವನ್ನು ಸೂಚಿಸುತ್ತದೆ. ಅರೊರಿನ್ (1977) ಹೇಳುವಂತೆ ಸಮಾಜಕ್ಕೆ ಹೊರತಾಗಿ ಭಾಷೆಯ ಅಸ್ಥಿತ್ವ ಹಾಗೂ ಅಭಿವೃಧಿ ಸಾಧ್ಯವಿಲ್ಲ. ಅಂತಿಮವಾಗಿ ಭಾಷಾ ಅಭಿವ್ರುಧ್ದಿಗೆ ಉತ್ತೇಜನ ಸಮಾಜದ ಪರಂಪರೆ ಹಾಗೂ ಅಗತ್ಯಗಳಿಂದಲೇ ಬಂದರೂ ಸಹ ಸಾಮಾಜಿಕ ಅಭಿವೃದ್ದಿ ಹಾಗೂ ಪರಂಪರೆಯ ಪೋಷಣೆಯಲ್ಲಿ ಭಾಷೆಯ ಮಹತ್ವದ ಪಾತ್ರವನ್ನು ಕಡೆಗಣಿಸುವಂತಿಲ್ಲ. ಮಾನವ ಸಮಾಜ ಭಾಷೆಯಿಲ್ಲದೆ ಇರಲು ಸಾಧ್ಯವಿಲ್ಲ; ಚಿಂತನೆಗಳು ಒಂದು ರೂಪ ಪಡೆಯಲು, ಭಾವನೆಗಳನ್ನು ವ್ಯಕ್ತಪಡಿಸಲು ಹಾಗೂ ಸಂಪೂರ್ಣ ಸಂವಹನಕ್ಕೆ ಭಾಷೆಯೇ ಮೂಲ. ಅಷ್ಟೆ ಮುಖ್ಯವಾದ ಇನ್ನೊಂದು ವಿಚಾರವೆಂದರೆ ಭಾಷೆ ಒಂದು ನಿರ್ಜಿವ ವಸ್ತುವಿನಂತೆ ಸಮಯ, ಸಂದರ್ಭ, ಚಿಂತನೆಗಳಿಗೆ ಹೊರತಾಗಿ ಇದ್ದಕಡೆಯೇ ಇದ್ದಹಾಗೆಯೇ ಇರುವಂತಹುದಲ್ಲ. ವಾಸ್ತವವಾಗಿ ಭಾಷೆ ನಿರಂತರವಾಗಿ ಬದಲಾಗುವ ಹರಿಯುವ ದ್ರವ ವ್ಯವಸ್ಥೆಯಿದ್ದಂತೆ. ಇಂತಹ ಗುಣವುಳ್ಳ ಭಾಷೆಯನ್ನು ಮಾನವರು ಪಡೆದು ಮಾರ್ಪಡಿಸಿ, ತಮ್ಮನ್ನು ಹಾಗೂ ತಮ್ಮ ಸುತ್ತಲಿನ ಜಗತ್ತನ್ನು ವ್ಯಾಖ್ಯಾನಿಸಲು ಬಳಸುತ್ತಾರೆ. ಆದರೆ ಕೆಲವು ಮಂದಿ ಭಾಷೆಯನ್ನು ಒಂದು ವಸ್ತುವಿನಂತೆಯೂ ಹಾಗೂ ಅದಕ್ಕೆ ನಿರ್ದಿಷ್ಟ ಗುಣಳಿರುವಂತೆಯೂ ಕಾಣುತ್ತಾರೆ. ಈ ಬಗ್ಗೆ ನಾವು ಎಚ್ಚರವಹಿಸಬೇಕು .
ಭಾಷೆ, ಮನೋಭಾವ ಮತ್ತು ಪ್ರೇರಣೆ
ಭಾಷಾ ಕಲಿಕೆಯಲ್ಲಿ ಹಲವು ವೇಳೆ ಕಲಿಯುವವರ ಮನೋಭಾವ ಮತ್ತು ಪ್ರೇರಣೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತೆಯೇ ಶಿಕ್ಷಕರ ಹಾಗು ಪೋಷಕರ ಮನೋಭಾವ, ಮತ್ತು ಪ್ರೋತ್ಸಾಹ ಭಾಷಾ ಕಲಿಕೆಗೆ ಯಶಸ್ವಿ ಕೊಡುಗೆಯಾಗಬಹುದು. ಸಂಶೋಧಕರು ಅನ್ಯಭಾಷಾ ಕಲಿಕೆಯ ಮೇಲೆ ಪ್ರಭಾವ ಬೀರುವ ಹಲವಾರು ಸಾಮಾಜಿಕ ಹಾಗು ಮಾನಸಿಕ ಅಂಶಗಳನ್ನು ಗುರುತಿಸಿದ್ದಾರೆ. ಅಂತಹ ಕೆಲವು ಅಂಶಗಳೆಂದರೆ
1.ಯೋಗ್ಯತೆ
2.ಮನೋಭಾವ
3.ಬುದ್ಧಿಶಕ್ತಿ
4.ಪ್ರೇರಣೆ ಮತ್ತು ಪ್ರೇರಣೆಯ ತೀವ್ರತೆ
5.ನಿರಂಕುಶಾಧಿಕಾರತ್ವ
6.ಜನಾಂಗೀಯತೆ
ಆದರೆ ಅನ್ಯಭಾಷಾ ಕಲಿಕೆಯಲ್ಲಿ ಅಪಾರವಾದ ಪರಿಣಾಮ ಬೀರುವ ಅಂಶಗಳೆಂದರೆ ಶಿಕ್ಷಕರ ಮನೋಭಾವ ಮತ್ತು ಪೋಷಕರ ಪ್ರೋತ್ಸಾಹ. ಅನ್ಯಭಾಷೆ ಕಲಿಯಲು ಪ್ರೇರಣೆ ಸಾಮಾನ್ಯವಾಗಿ ಉದ್ದೇಶಿತ ಭಾಷೆಯ ಭಾಷಿಕರ ಭಾಷೆ ಮತ್ತು ಭಾಷೆಯೇತರ ವೈಶಿಷ್ಟ್ಯಗಳೊಂದಿಗೆ ಗುರುತಿಸಿಕೊಳ್ಳುವ ಮನೋಭಾವ ಮತ್ತು ಪ್ರೇರಣೆಯ ಮೇಲೆ ಅವಲಂಬಿತವಾಗಿದೆಯೆಂದು ಗಾರ್ಡ್ನರ್ ಮತ್ತು ಲ್ಯಾಂಬರ್ಟ್ (೧೯೭೨) ನಂಬುತ್ತಾರೆ. ಅವರ ಪ್ರಕಾರ ಉದ್ದೇಶಿತ ಭಾಷೆಯು ಭಾಷಿಕರೊಂದಿಗೆ ಸಕ್ರಿಯವಾಗಿ ಬೆರೆಯಲು ಒಬ್ಬ ವ್ಯಕ್ತಿ ಆ ಭಾಷೆಯನ್ನು ಕಲಿಯುತ್ತಿದ್ದರೆ ಅಂತಹ ಪ್ರೇರಣೆಯನ್ನು ಸುಸಂಯೋಜನಾತ್ಮಕವೆನ್ನುತ್ತಾರೆ. ಅದಲ್ಲದೇ ಅನ್ಯಭಾಷೆ ಕಲಿಕೆಯ ಉದ್ದೇಶ ಕೇವಲ ಉದ್ಯೋಗವನ್ನು ಪಡೆಯಲೋ ಅಥವಾ ಇನ್ನಾವದೋ ಪ್ರಯೋಜನವನ್ನು ದಕ್ಕಿಸಿಕೊಳ್ಳುವುದೋ ಆದರೆ ಅಂತಹ ಪ್ರೇರಣೆಯನ್ನು ನಿಮಿತ್ತ ಮಾತ್ರವೆಂದು ಹೇಳುತ್ತಾರೆ.
ಗಾರ್ಡ್ನರ್ ಮತ್ತು ಲ್ಯಾಂಬರ್ಟ್ ರವರ ಪ್ರಕಾರ ನಿಮಿತ್ತ ಮಾತ್ರ ಪ್ರೇರಣೆಗಿಂತ ಸುಸಂಯೋಜನಾತ್ಮಕ ಪ್ರೇರಣೆಯಲ್ಲಿ ಅನ್ಯಭಾಷಾ ಕಲಿಕೆ ಹೆಚ್ಚು ಯಶಸ್ಸು ಕಾಣುತ್ತದೆ.
ಭಾರತೀಯ ಸನ್ನಿವೇಶದಲ್ಲಿ ಉದ್ದೇಶಿತ ಭಾಷೆಯ ಸಮುದಾಯದೊಂದಿಗೆ ಬೆರೆಯಲು ಇರುವ ಅವಕಾಶಗಳಲ್ಲಿ ಭಾರಿ ವ್ಯತ್ಯಾಸಗಳನ್ನು ಕಾಣಬಹುದು. ಉದಾ: ಆಂಗ್ಲಭಾಷೆಯನ್ನು ತೆಗೆದುಕೊಂಡರೆ ಆ ಭಾಷೆಯ ನೈಜ ಸಮುದಾಯ ಭಾರತದಲ್ಲಿ ಇಲ್ಲದೇ ಹೋದರು ನಗರಗಳಲ್ಲಿ ಆಂಗ್ಲಭಾಷೆಯನ್ನು ಕಲಿಯಲು ಇರುವ ಅವಕಾಶಗಳೇ ಹೆಚ್ಚು , ಮತ್ತೊಂದೆಡೆ ಅನೇಕ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಆಂಗ್ಲಭಾಷೆಯನ್ನು ಕಿಂಚಿತ್ತು ಸ್ಥಳೀಯವಲ್ಲದ ಅನ್ಯ ಅಥವಾ ವಿದೇಶಿ ಭಾಷೆಯಂತೆ ಕಾಣಬೇಕಾಗುತ್ತದೆ. ಭಾರತೀಯ ಭಾಷೆಗಳ ವಿಚಾರಕ್ಕೆ ಬಂದರೆ ಸ್ಥಳೀಯವಲ್ಲದ ಅನ್ಯ ಅಥವಾ ವಿದೇಶಿ ಭಾಷೆಯಂತೆ ಕಾಣಬೇಕಾಗುತ್ತದೆ. ಭಾರತೀಯ ಭಾಷೆಗಳ ವಿಚಾರಕ್ಕೆ ಬಂದರೆ ಸ್ಥಳೀಯ ಉದ್ದೇಶಿತ ಭಾಷಾ ಸಮುದಾಯದೊಂದಿಗೆ ಬೆರೆಯಲು ಸಾಕಷ್ಟು ಅವಕಾಶಗಳಿವೆ . ಜಗತ್ತಿನ ಹಲವಾರು ಭಾಗಗಳಲ್ಲಿ ಅನ್ಯಭಾಷ ಕಲಿಕೆಯಲ್ಲಿನ ಸಾಮಾಜಿಕ ಹಾಗು ಮಾನಸಿಕ ವಿಚಾರಗಳ ಬಗ್ಗೆ ಸಂಶೋಧನೆಗಳಾಗಿವೆ. ಈ ಸಂಶೋಧನೆಗಳ ಪ್ರಕಾರ ಅನ್ಯಭಾಷಾ ಕಲಿಕೆಯಲ್ಲಿನ ಪ್ರಾವೀಣ್ಯತೆ ಕಲಿಯುವವರ ಮನೋಭಾವ ಮತ್ತು ಪ್ರೇರಣೆಯೊಂದಿಗೆ ಗಮನಾರ್ಹವಾದ ಸಂಬಂಧವಿರುವುದು ಕಂಡುಬಂದಿದೆ. ಆದಾಗ್ಯು ನಿಮಿತ್ತ ಮಾತ್ರ ಪ್ರೇರಣೆಗಿಂತ ಸುಸಂಯೋಜನಾತ್ಮಕ ಪ್ರೇರಣೆ ಹೆಚ್ಚು ಗಮನಾರ್ಹವೆಂಬ ಗಾರ್ಡ್ನರ್ ಮತ್ತು ಲ್ಯಾಂಬರ್ಟ್ ಕಲ್ಪನೆಗೆ ಬೆಂಬಲವಿರಲಿಲ್ಲ. ಬಹಳಷ್ಟು ಸಂಶೋಧಕರು (ಖನ್ನಾ & ಅಗ್ನಿಹೋತ್ರಿ 1982, 1983 ಸೇರಿದಂತೆ) ಗಾರ್ಡ್ನರ್ ಮತ್ತು ಲ್ಯಾಂಬರ್ಟ್ ರ ಸೈದ್ದಾಂತಿಕವಾದಗಳು ಸಾರ್ವತ್ರಿಕವಲ್ಲವೆಂದು ತೋರಿಸಿದ್ದಾರೆ. ಇವರ ಪ್ರಕಾರ ಅನ್ಯಭಾಷಾ ಪ್ರಾವೀಣ್ಯತೆಯಲ್ಲಿನ ವ್ಯತ್ಯಾಸ ಕೇವಲ ಮನೋಭಾವ ಮತ್ತು ಪ್ರೇರಣೆಯಿಂದ ವಿವರಿಸಲಾಗುವುದಿಲ್ಲ. ಮನೋಭಾವ ಮತ್ತು ಪ್ರೇರಣೆಯ ಜೊತೆಗೆ ವಿಭಿನ್ನ ಸಾಮಾಜಿಕ , ಸಾಂಸ್ಕೃತಿಕ ಮತ್ತು ಜನಸಮುದಾಯ ಸೇರಿದಂತೆ ವಿವಿಧ ಭಾಷೆಗಳು ಭಾಷಾ ಬಳಕೆಯ ಮಾದರಿಗಳು, ಕುಟುಂಬದಲ್ಲಿನ ಆಂಗ್ಲ ಭಾಷೆಯ ಬಳಕೆ, ಶಾಲೆಯ ಮಾದರಿ ಮತ್ತು ಸಮುದಾಯದ ಗಾತ್ರ.. ಇತ್ಯಾದಿ ಅಂಶಗಳ ಮೇಲೆ ಅವಲಂಬಿತವಾಗಿದೆ.
ಭಾಷೆ ಮತ್ತು ಗುರುತಿಸುವಿಕೆ
ಮನೋಭಾವ ಮತ್ತು ಪ್ರೇರಣೆಗಳ ರಚನೆ ಮತ್ತು ನಿರ್ಮಾಣ ಶೂನ್ಯ ಪರಿಸರದಲ್ಲಿ ಆಗುವುದಿಲ್ಲ ಎಂಬುದು ಸ್ಪಷ್ಟ. ಯಾವ ಗುಂಪು ಅಥವಾ ಸಮುದಾಯದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತೇವೋ ಅದರ ಮೇಲೆ ನಮ್ಮ ನಡವಳಿಕೆಗಳ ರೀತಿ ನೀತಿಗಳು ಸೃಷ್ಟಿಗೊಳ್ಳುತ್ತವೆ. ಅದರ ಸಲುವಾಗಿಯೇ ಔಪಚಾರಿಕ ಭಾಷೆಯಿಂದ ಅನೌಪಚಾರಿಕ ಭಾಷೆಯತ್ತ ಮುನ್ನಡೆಯಲು ಬೇಕಿರುವ ಅಭಿವ್ಯಕ್ತಿ ಸಾಮರ್ಥ್ಯವನ್ನು ಪಡೆಯುತ್ತಾ ಹೋಗುತ್ತೇವೆ. ನಮ್ಮನ್ನು ನಾವು ಗುರುತಿಸಿಕೊಳ್ಳಲು ಬಳಸುವ ವೈಶಿಷ್ಟ್ಯಗಳಲ್ಲಿ ಪರಸ್ಪರ ಘರ್ಷಣೆಯಿರುವುದು ಬಹಳಷ್ಟು ಸಂದರ್ಭದಲ್ಲಿ ತಿಳಿದುಬರುತ್ತದೆ. ನಮ್ಮನ್ನು ನಾವು ಗುರುತಿಸಿಕೊಳ್ಳಲು ಬಳಸುವ ವೈಶಿಷ್ಟ್ಯಗಳ ಕುರಿತ ಪ್ರಶ್ನೆ ಅಲ್ಪಸಂಖ್ಯಾತರ ಪ್ರಕರಣಗಳಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಅಲ್ಪಸಂಖ್ಯಾತರ ಭಾಷೆ ಮತ್ತು ಸಂಸ್ಕೃತಿಗಳನ್ನು ಕುರಿತು ಗೌರವದಿಂದ ಹಾಗು ಸಂವೇದನಶೀಲರಾಗಿ ಕಾಣುವುದು ಅತೀ ಅಗತ್ಯವಾಗಿದೆ. ಹಲವಾರು ಅಧ್ಯಯನಗಳ ಪ್ರಕಾರ ಅಲ್ಪ ಸಂಖ್ಯಾತರ ಸ್ಥಿತಿಗತಿಗಳ ಸುತ್ತಲಿನ ಸಮಸ್ಯೆಗಳು ಭಾಷಾ ನಿರ್ವಹಣೆ ಮತ್ತು ಬದಲಾವಣೆಯ ಮಾದರಿಗಳೊಂದಿಗೆ ಸಂಬಂಧ ಹೊಂದಿವೆ. ನಾವು ಭಾಷಾ ಶಿಕ್ಷಣದ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವ ಬಗ್ಗೆ ಚರ್ಚಿಸುವುದೇಕೆಂದರೆ ಭಾಷೆಗಳು ಬಹುವಾಗಿ ಗುರುತಿನ ರಾಜಕೀಯ ಭಾರವನ್ನು ಹೊರುತ್ತಾ ಬಂದಿವೆ. ಇದಲ್ಲದೇ ಗುರುತಿಸುವಿಕೆಯನ್ನು ನಾವೆಲ್ಲರು ಆಯ್ಕೆಯಿಂದಲೋ ಅಥವಾ ಅನಿವಾರ್ಯವಾಗಿಯೋ ತೊಡಗಿಸಿಕೊಂಡ, ಎಂದಿಗೂ ಕೊನೆಗೊಳ್ಳದ ಯಾವಾಗಲೂ ಅಪೂರ್ಣವಾಗಿಯೇ ಉಳಿಯುವ ತೆರೆದ ಚಟುವಟಿಕೆಯಂತಲೇ ಕಾಣುವುದು ಸೂಕ್ತ. ಭಾಷೆ ನಮ್ಮಲ್ಲಿ ಈಗಾಗಲೇ ಇರುವ ವೈಶಿಷ್ಟ್ಯಗಳನ್ನು ಕಂಡುಕೊಳ್ಳುವ ಅಥವಾ ನೆನಪುಗಳ ಮತ್ತು ಸಂಕೇತಗ ನಿಘಂಟಿನಂತೆ. ನಮ್ಮ ಗುರುತಿನ ನಿರ್ವಹಣೆಉ ಸಲುವಾಗಿ ಬಳಕೆಯಾಗದೇ ಅದೇ ಒಂದು ಗುರುತಿನ ವೈಶಿಷ್ಟ್ಯವಾಗಿಬಿಟ್ಟರೆ, ಭಾಷೆ ನಮ್ಮ ಕಲ್ಪನೆಗೂ ನಿಲುಕದ ಅನೇಕ ಸಾಧ್ಯತೆಗಳ ಹುಟ್ಟಿಗೆ ಕಾರಣವಾಗುತ್ತದೆ.
ಭಾಷೆ ಮತ್ತು ಅಧಿಕಾರ
ಎಲ್ಲಾ ಭಾಷೆಗಳ ಅಮೂರ್ತ ವ್ಯವಸ್ಥೆಗಳು ಅಥವಾ ಉಪವ್ಯವಸ್ಥೆಗಳು ವಾಸ್ತವವಾಗಿ ಸಮಾನವೇ ಆದರೂ ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರದ ಪರಸ್ಪರ ಪ್ರಭಾವದಿಂದಾಗಿ ಕೆಲವು ಭಾಷೆಗಳು ಇನ್ನಿತರ ಭಾಷೆಗಳಿಗಿಂತ ಪ್ರತಿಷ್ಟಿತವೂ, ಸಮಾಜಿಕ ಹಾಗು ರಾಜಕೀಯವಾಗಿ ಪ್ರಭಾವಶಾಲಿಯೂ ಆಗಿಬಿಟ್ಟಿವೆ.
ಸಾಮಾನ್ಯವಾಗಿ ಸಮಾಜದಲ್ಲಿನ ಗಣ್ಯರು ಮತ್ತು ಅಧಿಕಾರದಲ್ಲಿರುವವರು ಬಳಸುವ ಭಾಷೆಗಳು ಪ್ರಮಾಣಿತ ಹಾಗು ಅಧಿಕಾರ ಹೊಂದಿದ ಭಾಷೆಗಳಾಗಿ ಹೊರಹೊಮ್ಮುತ್ತವೆ. ಎಲ್ಲಾ ವ್ಯಾಕರಣಗಳು, ನಿಘಂಟುಗಳು ಮತ್ತು ವಿವಿಧ ಉಲ್ಲೇಖನೆಗಳು ಏಕರೂಪವಾಗಿ ಈ ಪ್ರಮಾಣಿತ ಭಾಷೆಯ ಅಗತ್ಯಗಳನ್ನು ಪೂರೈಸುತ್ತವೆ. ಭಾಷಾ ವಿಜ್ಞಾನದ ದೃಷ್ಟಿಯಿಂದ ನೋಡಿದರೆ ಪ್ರಮಾಣಿತ ಭಾಷೆ ಶುದ್ದಭಾಷೆ, ಉಪಭಾಷೆ ಎಂಬ ವಿವಿಧ ಭಾಷೆಗಳ ಮಧ್ಯೆ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಸಾಮಾನ್ಯವಾಗಿ ಒಂದು ಭಾಷೆಯನ್ನು ಸೇನೆ ಮತ್ತು ನೌಕಾದಳದ ಉಪಭಾಷೆಯೆಂದು ವ್ಯಾಖ್ಯಾನಿಸಲಾಗಿದೆ. ಅಧಿಕಾರದಲ್ಲಿರುವವರು ಹಿಂದುಳಿದವರ ಭಾಷೆಗಳ ಬಗೆಗೆ ನಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಿ ಪ್ರಚಾರಪಡಿಸುತ್ತಾರೆ. ಭಾಷಾಜ್ಞಾನಿ ಚೇಂಬರ್ಸ್ ರವರ ಪ್ರಕಾರ ಉಪಭಾಷೆಗಳ ಕುರಿತ ಪೂರ್ವಗ್ರಹಗಳು ಇನ್ನಿತರ ಚರ್ಮದ ಬಣ್ಣ, ಧರ್ಮ ಮತ್ತು ವಾಸ್ತವವಲ್ಲದ ಗುಣಲಕ್ಷಣಗಳನ್ನು ಆಧರಿಸಿದ ಪೂರ್ವಗ್ರಹಗಳಷ್ಟೆ ಕಪಟ ಮತ್ತು ಅದೇ ಪರಿಣಾಮವನ್ನು ಹೊಂದಿವೆ . ಇದಕ್ಕೂ ಮಿಗಿಲಾಗಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಗಣನೆಗಳೇ ಜನರುಅಧಿಕೃತ ಭಾಷೆಯನ್ನು ಶಿಕ್ಷಣ, ಆಡಳಿತ, ನ್ಯಾಯಾಂಗ, ಸಮೂಹ ಮಾದ್ಯಮಗಳಲ್ಲಿ ಬಳಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ತಾತ್ವಿಕವಾಗಿ ಯಾವುದೇ ಬಾಷೆಯನ್ನು ಬಳಸಿ ಏನನ್ನು ಬೇಕಾದರು ಮಾಡಬಹುದು. ಅಗತ್ಯ ಬೆಂಬಲವನ್ನು ನೀಡದೇ ಹಿಂದುಳಿದವರ ಭಾಷೆಗಳನ್ನು ಸಶಕ್ತಗೊಳಿಸಲು ಸಾಧ್ಯವಿಲ್ಲ. ವಿವಿಧ ಸಂದರ್ಭಗಳಲ್ಲಿ ಹಿಂದುಳಿದ ಭಾಷೆಗಳ ಬಳಕೆಗೆ ಅವಕಾಶವನ್ನು ಮತ್ತು ಬೆಂಬಲವನ್ನು ನೀಡಬೇಕಾಗಿದೆ. ಪ್ರಮಾಣಿತವಾದುದು ಎಂದಿಗೂ ಶಾಶ್ವತ ಮತ್ತು ಸ್ಥಿರವಾಗಿರುವಂತಹುದಲ್ಲವೆಂಬುದನ್ನು ನೆನಪಿನಲ್ಲಿಡುವುದು ಅತಿ ಮುಖ್ಯ . ಅಧಿಕಾರದ ಅಡಿಯಲ್ಲೇ ಪ್ರಮಾಣಿತವಾದುದರ ಕೇಂದ್ರ ಬದಲಾಗುತ್ತಿರುತ್ತದೆ. ಉದಾಹರಣೆಗೆ , ಬ್ರಾಹ್ಮಣರ ತಮಿಳು, ಬ್ರಾಹ್ಮಣೇತರ ತಮಿಳಿಗೆ ದಾರಿ ಮಾಡಿಕೊಟ್ಟಿರುವುದು. ಹಾಗು ಮುಂಬಯಿ ಮರಾಠಿಯು ಪುಣೆ ಮಾರಾಠಿಯ ಸ್ಥಾನ ಪಡೆದಿರುವುದು.
ಸೂಫಿ ಕಾವ್ಯ , 1857ರ ಕ್ರಾಂತಿ, ಸ್ವಾತಂತ್ರ ಹೋರಾಟ, ಭಾರತದೊಳಗೆ ವಿವಿಧ ರಾಜ್ಯಗಳ ಸ್ಥಾಪನೆ, ದಲಿತ ಸಾಹಿತ್ಯ ಹೀಗೆ ವಿವಿಧ ವಿದ್ಯಾಮಾನಗಳ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸಿದರೆ ಸಾಮಾನ್ಯ ಜನರ ಭಾಷೆಗಳು ಭಿನ್ನಾಭಿಪ್ರಾಯಗಳಿಗೆ ಪ್ರಬಲವಾದ ಧ್ವನಿಯಾಗಿರುವುದು ಕಂಡುಬರುತ್ತದೆ.

ಭಾಷೆ ಮತ್ತು ಲಿಂಗ
ಲಿಂಗತಾರತಮ್ಯದ ಪರಿಣಾಮಗಳು ಕೇವಲ ಒಂದು ಲಿಂಗಕ್ಕೆ ಸೀಮಿತವಾಗಿಲ್ಲ. ಅದರ ಪರಿಣಾಮಗಳು ಇಡೀ ಸಮಾಜವನ್ನು ಕಾಡುತ್ತಿವೆ. ಕಾಲಕ್ರಮೇಣ ಭಾಷೆ ತನ್ನ ಸ್ವರೂಪದಲ್ಲೇ ಅಗಾಧವಾದ ಲಿಂಗತಾರತಮ್ಯವನ್ನು ಶಾಶ್ವತಗೊಳಿಸುವಂತಹ ಅಂಶಗಳನ್ನು ಒಳಗೊಳ್ಳುತ್ತಾ ಬಂದಿದೆ. ಭಾಷೆ ಹಾಗು ಲಿಂಗತಾರತಮ್ಯದ ನಡುವಿನ ಸಂಬಂಧವನ್ನು ಕುರಿತು ಹಲವಾರು ಅಧ್ಯಯನಗಳಾಗಿವೆ (Cameron 1985, 1995; Lakoff 1975, 1990; Tannen 1990; Butler 1990, among others). ಬಹಳಷ್ಟು ವಿದ್ವಾಂಸರು ,ಭಾಷಾತಜ್ಞರು ಭಾಷೆಯ ಪದಕೋಶ ಹಾಗು ವಾಕ್ಯರಚನೆಯಲ್ಲಿರುವ ಲಿಂಗತಾರತಮ್ಯದ ಸಾಂಕೇತಿತ ಅಂಶಗಳನ್ನು ದೃಢಪಡಿಸಿದ್ದಾರೆ. ಪುರುಷ ಸ್ತ್ರೀಯರ ಸಂಭಾಷಣೆಯ ವಿವರವಾದ ವಿಶ್ಲೇಷಣೆಯಿಂದ , ಪುರುಷರು ಭಾಷೆಯ ಸ್ವರೂಪದಲ್ಲೇ ಒಳಗೊಂಡಿರುವ ಲಿಂಗತಾರತಮ್ಯದ ಅಂಶಗಳನ್ನು ತಮ್ಮ ದೃಷ್ಟಿಕೋನವನ್ನು ಸ್ತ್ರೀಯರ ಮೇಲೆ ಹೇರಲು ಬಳಸುವುದು ಕಂಡುಬಂದಿದೆ. ಲಿಂಗತಾರತಮ್ಯದ ಕಲ್ಪನೆಗಳು ನಿರಂತರವಾಗಿ ಹೊಸ ರೂಪ ಪಡೆಯುತ್ತಿದ್ದು ಅರಿವಿಲ್ಲದೆಯೇ ಈ ಅಂಶಗಳು ಪಠ್ಯಪುಸ್ತಕದ ಮೂಲಕವೂ ಹರಡುತ್ತಿವೆ. ಇಂತಹ ಲಿಂಗ ಅಸಮಾನತೆಯ ಜ್ಞಾನದ ನಿರ್ಮಾಣದಿಂದ ಆಗುತ್ತಿರುವ ಹಾನಿ ಬರುಬರುತ್ತಾ ಹೆಚ್ಚು ಸ್ಪಷ್ಟವಾಗುತ್ತಿದೆ. ಪಠ್ಯಪುಸ್ತಕದಲ್ಲಿ ಬಳಸಿದ ಭಾಷೆ ಚಿತ್ರಗಳು ಹಾಗು ತರಗತಿಯಲ್ಲಿ ಬಳಸುವ ದೃಶ್ಯ ಸಾಧನಗಳು ಲಿಂಗತಾರತಮ್ಯದ ಅಂಶಗಳನ್ನು ಒಳಗೊಂಡಿದ್ದು ಈ ಬಗ್ಗೆ ತಕ್ಷಣ ಗಮನ ಹರಿಸುವ ಅಗತ್ಯವಿದೆ. ಪಠ್ಯಪುಸ್ತಕ ಬರಹಗಾರರು ಮತ್ತು ಶಿಕ್ಷಕರು ಆದಷ್ಟು ತ್ವರಿತವಾಗಿ ಸಾಮಾಜಿಕ ಹಾಗು ಸಾಂಸ್ಕೃತಿಕವಾಗಿ ನಿರ್ಮಾಣಗೊಂಡಿರುವ ಲಿಂಗತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸುವುದು ಅತೀ ಮುಖ್ಯ . ಇದಕ್ಕಾಗಿ ಮಹಿಳೆಯರ ಧ್ವನಿಗೆ ನಮ್ಮ ಪಠ್ಯಪುಸ್ತಕಗಳು ಹಾಗು ಭೋಧನಾ ರೀತಿ ನೀತಿಗಳು ಪ್ರಮುಖ ಸ್ಥಾನವನ್ನು ಕೊಡಬೇಕಿದೆ.

ಭಾಷೆ, ಸಂಸ್ಕೃತಿ ಮತ್ತು ಯೋಚನೆಗಳು
ಸಮಾಜಶಾಸ್ತ್ರಜ್ಞರಿಗೆ, ಮಾನವಶಾಸ್ತ್ರಜ್ಞರಿಗೆ ಮತ್ತು ಭಾಷಾಶಾಸ್ತ್ರಜ್ಞರಿಗೆ ಭಾಷೆ, ಸಂಸ್ಕೃತಿ, ಮತ್ತು ಚಿಂತನೆಯ ನಡುವಿನ ಸಂಬಂಧವು ಬಹಳ ಬಾರಿಗೆ ಗಂಭೀರ ವಿಚಾರಣೆಯಾಗಿ ಪರಿಣಮಿಸಿದೆ. ಭಾಷೆ ಎಂಬುದು ಭಾವನೆಗಳನ್ನು, ಆಚರಣೆಗಳನ್ನು ಮತ್ತು ಅರೆ ಭಾಷಾ ವೈಶಿಷ್ಟ್ಯಗಳನ್ನು ಇತರರ ಜೊತೆಗೆ ವ್ಯಕ್ತಪಡಿಸುವುದಲ್ಲದೆ ವಿವಿಧ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪಸರಿಸುವ ಮತ್ತು ಜ್ಞಾನದ ರಚನೆಗಳನ್ನು ಅರ್ಥೈಸುವ ಬಹು ಮುಖ್ಯ ಮೂಲವಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಮಾಜಿಕ ನಡಾವಳಿಕೆಗಳಾದ ಭಾಷೆ ಮತ್ತು ಸಂಸ್ಕೃತಿ ಹೆಚ್ಚಾಗಿ ಅವ್ಯಕ್ತವಾಗಿದೆ ಮತ್ತು ಕ್ರಮೇಣ ಇವು ನಮ್ಮ ಇರುವಿಕೆಯನ್ನು ಸೂಚಿಸುವ ರಚನಾತ್ಮಕ ಗುರುತುಗಳಾಗಿವೆ. ಈ ಸಂದರ್ಭದಲ್ಲಿ ಭಾಷೆ ಮತ್ತು ಸಂಸ್ಕೃತಿ ವೈವಿಧ್ಯತೆಯ ಬಹುರೂಪ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಬೇಕು.
ಭಾಷೆ ಮತ್ತು ಚಿಂತನೆ ನಡುವೆ ಸಂಬಂಧ ಅರ್ಥೈಸುವುದು ನಿಜಕ್ಕೂ ಬಹಳ ಸಂಕೀರ್ಣವಾಗಿದೆ ಅದರಲ್ಲೂ ಮುಖ್ಯವಾಗಿ ಭಾಷಾ ತಜ್ಞರಿಗೆ, ಮನೋವಿಜ್ಞಾನಿಗಳಿಗೆ, ಮತ್ತು ಜ್ಞಾನ ವಿಜ್ಞಾನಿಗಳಿಗೆ ಒಂದು ಅತ್ಯಂತ ಸವಾಲಿನ ಒಗಟಾಗಿ ಉಳಿದಿದೆ. ಸಫೈರ್- ವುರ್ಫ್ ಅವರ ಪ್ರಬಲ ಆವೃತ್ತಿಯ ಊಹೆಯ ಪ್ರಕಾರ, ನಮ್ಮ ಆಲೋಚನೆಗಳು ಸಂಪೂರ್ಣವಾಗಿ ನಮ್ಮ ಭಾಷಾ ಶಾಸ್ತ್ರದ ವ್ಯವಸ್ಥೆಯ ಮೇಲೆ ನಿರ್ಮಿಸಲಾಗಿರುತ್ತದೆ; "ಪ್ರತಿಯೊಂದು ಭಾಷೆಯ ಭಾಷಾ ಶಾಸ್ತ್ರದ ವ್ಯವಸ್ಥೆಯ ಹಿನ್ನೆಲೆಯು ಸ್ವತಃ ಕಲ್ಪನೆಯ ಮೇಲಿರುತ್ತದೆ, ಅದು ವ್ಯಕ್ತಿಯ ಮಾನಸಿಕ ಚಟುವಟಿಗೆಗಳಿಗೆ ಚಟುವಟಿಕೆ ಮಾರ್ಗದರ್ಶಿಯಾಗಿರುತ್ತದೆ.” (ವುರ್ಫ್ ತನ್ನ ಸಾಹಿತ್ಯ1956; 212-14 ರಲ್ಲಿ ಉಲ್ಲೇಖಿಸಿದಂತೆ). ನಾವು ಮಾತನಾಡಲು ಬಳಸುವ ಭಾಷೆಯು ನಮಗೆ ವಿಶ್ವದ ಬಗೆಗಿನ ನಮ್ಮ ಆಡಳಿತ, ಜ್ಞಾನ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾದರಿಗಳ ಗ್ರಹಿಕೆಗೆ ಆಕಾರ ರೂಪಿಸಿ, ಸೂತ್ರೀಕರಿಸಿ, ಆಜ್ಞಾಪಿಸುತ್ತದೆ. ನಾವು ಸಫೈರ್- ವುರ್ಫ್ ಅವರ ಊಹೆಯಲ್ಲಿ ನಂಬಿಕೆ ಇಟ್ಟಿರಲಿ ಇಲ್ಲದಿರಲಿ ಆದರೆ ಭಾಷೆ ಮತ್ತು ಚಿಂತನೆಯ ಒಂದಕ್ಕೊಂದು ಪರಸ್ಪರ ಪೂರಕವಾಗಿವೆ. ಭಾಷೆ ನಮ್ಮ ಚಿಂತನೆಗಳನ್ನು ರಚನೆನಾತ್ಮಕವಾಗಿ ರೂಪಿಸುವುದು ಒಂದೆಡೆಯಾದರೆ ಭಾಷೆ ಇದುವರೆಗೆ ಅನ್ವೇಶಿಸದ ಕ್ಷೇತ್ರದಲ್ಲಿನ ಜ್ಞಾನವನ್ನು ಮತ್ತು ನಮ್ಮ ಕಲ್ಪನೆಯನ್ನು ನಿಜಗೊಳಿಸಿ ಹೊಸ ಜ್ಞಾನವನ್ನು ನೀಡಿ ನಮ್ಮನ್ನು ವಿಮುಕ್ತಿಗೊಳಿಸುವುದು ಇನ್ನೊಂದೆಡೆಯಾಗಿರುತ್ತದೆ. ಭಾರತದ ವಿಷಯದಲ್ಲಿ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ನಾವು ಭಾಷೆ, ಸಾಮಾಜಿಕ ಭಾಷಾಶಾಸ್ತ್ರ ಮತ್ತು ಸಾಂಸ್ಕೃತಿಕ ಶ್ರೇಣೀ ಹಂತಗಳನ್ನು ವ್ಯಕ್ತಪಡಿಸುತ್ತೇವೆ ಈ ರೀತಿಯಾಗಿ ಹಲವಾರು ಭಾಷೆಗಳಲ್ಲಿ ಶ್ರೇಣೀಕೃತ ಚರ್ಚೆಯು ಅಂತಿಮವಾಗಿ ಭಾಷಾ ಮತ್ತು ಸಾಂಸ್ಕೃತಿಕ ಪದ್ಧತಿಗಳನ್ನು ಮತ್ತಷ್ಟು ಬಲಪಡಿಸಲು ಕಾರಣವಾಗಬಹುದು. ಭಾರತದಲ್ಲಿ ಇಂಗ್ಲೀಷ್ ಸಹ ಇಂತಹ ಶ್ರೇಣೀಕರಣದ ಭಾಗವಾಗುತ್ತಿದೆ. ಆದರೂ ಅದು ಅಷ್ಟೊಂದು ವೇಗವಾಗಿಲ್ಲ, ಆದರೆ ಒಟ್ಟಾರೆಯಾಗಿ ಭಾರತೀಯ ಭಾಷಾ ಮತ್ತು ಸಾಂಸ್ಕೃತಿಯ ಅನಿವಾರ್ಯ ಭಾಗವಾಗುವಲ್ಲಿ ಸ್ಪಷ್ಟ ಸೂಚನೆ ಗೋಚರಿಸುತ್ತಿದೆ.
ಶಿಕ್ಷಣ, ಭಾಷೆ ಮತ್ತು ಜವಾಬ್ದಾರಿಯುತ ನಾಗರೀಕ
ಯುನೆಸ್ಕೋ ಪ್ರಕಾರ ಒಂದು ಸಮಾಜ ಶಿಕ್ಷಣದ ಉದ್ದೇಶವನ್ನು ಹೇಗೆ ವ್ಯಾಖ್ಯಾನಿಸಿದೆ ಎಂಬುದರ ಮೇಲೆ ಅಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಅಳೆಯಬಹುದು. 2004ರಲ್ಲಿ ಯುನೆಸ್ಕೋ ಹೇಳಿರುವ ಪ್ರಕಾರ "ಶಿಕ್ಷಣದ ಉದ್ದೇಶ ಪ್ರತಿಯೊಬ್ಬ ವಿದ್ಯಾರ್ಥಿಯೂ ಜವಾಬ್ದಾರಿಯುತ ನಾಗರೀಕನಾಗಲು ಬೇಕಾಗಿರುವ ಜ್ಞಾನ, ಕೌಶಲ ಮತ್ತು ಮೌಲ್ಯಗಳನ್ನು ಪಡೆಯುವಂತೆ ಖಾತರಿಪಡಿಸುವುದು, ಅರಿವು, ಸೃಜನಶೀಲತೆ ಹಾಗು ಭಾವನಾತ್ಮಕ ಬೆಳವಣಿಗೆಗೆ ಅವಕಾಶ ಮಾಡಿಕೊಡುವುದು, ಯಾವುದೇ ನಿರ್ಧಿಷ್ಟ ಗುಂಪಿನ ಮೇಲೆ ಯಾವುದೇ ರೀತಿಯ ತಾರತಮ್ಯವನ್ನು ವಿರೋಧಿಸಿ ನ್ಯಾಯಸಮ್ಮತ ಸಮಾಜದ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು".
ನಮ್ಮ ಸಮಕಾಲೀನ ಯುದ್ದಪೀಡಿತ ವಿಶ್ವದಲ್ಲಿ ಜವಾಬ್ದಾರಿಯುತ ನಾಗರೀಕತ್ವದ ಪಾತ್ರ ಹಿಂದಿಗಿಂತ ಹೆಚ್ಚಿದೆ. ಜವಾಬ್ದಾರಿ ಎಂಬುದು ಅಭಿವೃದ್ದಿ ಅಥವಾ ವಿಕಸನಗೊಂಡ ತಿಳುವಳಿಕೆಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಏಕೆಂದರೆ ಆ ತಿಳುವಳಿಕೆಯನ್ನು ಪಡೆಯಲು ನಾವು ತೆಗೆದುಕೊಳ್ಳುವ ಕ್ರಮಗಳೇ ಸಾಮಾಜಿಕ ಕ್ರಮದ ಮೂಲಭೂತ ವಿಧವಾಗಿದೆ. . ಸಮಾಜವನ್ನು ಆಳುವ ಸಲುವಾಗಿ ಸಮಾಜವನ್ನು ತಿಳಿಯುವ ಕಾಲ ಮರೆಯಾಗಿದೆ, ಹೀಗೇನಿದ್ದರೂ ಸಮಾಜದ ಹಲವು ವೈವಿಧ್ಯತೆಗಳ ಮದ್ಯೆಯೂ ಸಂತೋಷದಿಂದ ಹಾಗು ಸಾಮರಸ್ಯದಿಂದ ಬಾಳಲು ಬೇಕಾಗಿರುವ ತತ್ವಗಳನ್ನು ತಿಳಿಯುವತ್ತ ಸಾಗಬೇಕಿದೆ.
ವೈವಿದ್ಯತೆಯಲ್ಲಿ ಸಂತೋಷವನ್ನು ಕಾಣಲು ಕಲಿಯುವಲ್ಲಿ ಶಾಲಾ ಶಿಕ್ಷಣ ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಈಗ ಎಲ್ಲೆಡೆ ಪರಿಗಣಿಸಲಾಗಿದೆ. ಸಾಮಾಜಿಕ ಕಾರ್ಯಗಳನ್ನು ಪರಸ್ಪರ ತಿಳುವಳಿಕೆಯ ಮೂಲಕ ಸಾಧಿಸುವುದಕ್ಕೆ ಬೇಕಾಗಿರುವ ಸಾರ್ವತ್ರಿಕ ಸಾಮರ್ಥ್ಯಗಳನ್ನು ವ್ಯಾಖಾನಿಸುವತ್ತ ವಿಧ್ವಾಂಸರು, ತತ್ವಶಾಸ್ತ್ರಜ್ಞರು ಮತ್ತು ಕಾರ್ಯನೀತಿ ರೂಪಿಸುವವರು ಬಿಡುವಿಲ್ಲದೆ ತೊಡಗಿದ್ದಾರೆ . ಹೆಬರ್ಮಾಸ್ ಎಂಬ ತತ್ವಜ್ಞಾನಿಯ ಪ್ರಕಾರ "ಪರಸ್ಪರ ತಿಳುವಳಿಕೆ ಸಾಧಿಸಲು ಸಂವಹನ ಕೌಶಲಗಳು ಅತ್ಯವಶ್ಯ, ಸಂವಹನ ಭಾಷೆಗಳ ಬಹುಮುಖ್ಯ ಕಾರ್ಯಗಳಲ್ಲೊಂದು ಏಕೆಂದರೆ ಸಾರ್ವತ್ರಿಕ ತಿಳುವಳಿಕೆಯ ಸಾಧ್ಯತೆ ವೈಯುಕ್ತಿಕ ಅಭಿವ್ಯಕ್ತಿಯಲ್ಲೇ ಅಡಗಿದೆ ".
ಪಠ್ಯಪುಸ್ತಕ, ಶಿಕ್ಷಕರ ತರಭೇತಿ ಹಾಗು ತರಗತಿಯ ಪ್ರವಚನಗಳಲ್ಲಿ ಭಾಷೆಯ ಪರಿಕಲ್ಪನೆಯನ್ನು ಈ ದಾಖಲೆಯಲ್ಲಿ ಹೇಳಿದಂತೆ ಅಳವಡಿಸಿಕೊಂಡರೆ ಭಾಷೆ ವಿದ್ಯಾರ್ಥಿಗಳನ್ನು ಶಿಕ್ಷಿತರನ್ನಾಗಿ ಮಾಡುವುದಷ್ಟೇ ಅಲ್ಲ ಅವರನ್ನು ಜವಾಬ್ದಾರಿಯುತ ನಾಗರೀಕನ್ನಾಗಿಯೂ ಮಾಡುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ