ಭಾನುವಾರ, ಏಪ್ರಿಲ್ 9, 2017

ಆಶ್ವಾಸನೆಗಳು ಕಾಗದಕ್ಕಷ್ಟೆ ಸೀಮಿತವೇ?: ನ್ಯಾ.ಖೇಹರ್

ಆಶ್ವಾಸನೆಗಳು ಕಾಗದಕ್ಕಷ್ಟೇ ಸೀಮಿತವೇ?: ನ್ಯಾ.ಖೆಹರ್‌

ನವದೆಹಲಿ: ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಆಶ್ವಾಸನೆಗಳು ಕೇವಲ ಕಡತದಲ್ಲಷ್ಟೇ ಉಳಿದುಕೊಳ್ಳುತ್ತಿವೆ. ಅವುಗಳನ್ನು ಈಡೇರಿಸುವ ಇಚ್ಛಾಶಕ್ತಿ ಪಕ್ಷಗಳಿಗಾಗಲೀ, ನಾಯಕರಿಗಾಗಲೀ ಇಲ್ಲ. ಇದಕ್ಕೆ ರಾಜಕೀಯ ಪಕ್ಷಗಳನ್ನೇ ಹೊಣೆಯಾಗಿಸಬೇಕು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್‌ ಹೇಳಿದ್ದಾರೆ.

ಶುಕ್ರವಾರವಷ್ಟೇ ರಾಜ್ಯಸಭೆ ಯಲ್ಲಿ ಹೆದ್ದಾರಿಯಂಚಿನ ಮದ್ಯ ದಂಗಡಿ ನಿಷೇಧ, ರೈತರ ಸಾಲ ಮನ್ನಾ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ್ದ ತೀರ್ಪುಗಳ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಂಗವು ಕಾನೂನಿನ ವ್ಯಾಪ್ತಿ ಮೀರಿ ಆದೇಶ ನೀಡುತ್ತಿದೆ. ಸುಖಾಸುಮ್ಮನೆ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಂಸದರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಿಜೆಐ ಖೆಹರ್‌ ಅವರು, ರಾಜಕಾರಣಿಗಳ ಹೊಣೆಗಾರಿಕೆಯನ್ನು ನೆನಪಿಸಿದ್ದಾರೆ.

ಶನಿವಾರ "ಚುನಾವಣಾ ಸಮಸ್ಯೆಗಳ ಮಧ್ಯೆ ಆರ್ಥಿಕ ಪ್ರಗತಿ' ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಸಮ್ಮುಖದಲ್ಲೇ ನ್ಯಾ. ಖೆಹರ್‌ ಈ ಮಾತುಗಳನ್ನಾಡಿದ್ದಾರೆ. "ಇತ್ತೀಚೆಗಿನ ದಿನಗಳಲ್ಲಿ ಪ್ರಣಾಳಿಕೆಯಲ್ಲಿನ ಬಹುತೇಕ ಆಶ್ವಾಸನೆಗಳು ಈಡೇರುವುದೇ ಇಲ್ಲ. ಎಲ್ಲವೂ ಪುಸ್ತಕದಲ್ಲಿಯೇ ಉಳಿದುಕೊಂಡಿರುತ್ತದೆ. ಇದರಿಂದಾಗುವ ಎಲ್ಲಾ ಪರಿಣಾಮಗಳಿಗೆ ಆಯಾ ಪಕ್ಷಗಳೇ ಹೊಣೆಹೊರಬೇಕು. ಜನ ಕೂಡ ಬೇಗ ಆಶ್ವಾಸನೆಗಳನ್ನೆಲ್ಲ ಮರೆಯುತ್ತಾರೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳ ನಾಯಕರು ನಾಚಿಕೆ ಇಲ್ಲದವರಂತೆ ವರ್ತಿಸುತ್ತಾರೆ' ಎಂದಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಬಿಡು ಗಡೆ ಮಾಡಿರುವ ಪ್ರಣಾಳಿಕೆ ಯಲ್ಲಿ ಆರ್ಥಿಕ ಸುಧಾರಣೆಗಳ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲದೇ ಆಶ್ವಾಸನೆ ನೀಡಿರು ವುದನ್ನು ಗಮನಿಸಬಹು ದಾಗಿದೆ. ಈ ವಿಚಾರವಾಗಿ ಸುಪ್ರೀಂಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದ್ದು,  ಚುನಾವಣಾ ಆಯೋಗ ಸುಪ್ರೀಂ ಆದೇಶದಲ್ಲಿನ ಮಾರ್ಗಸೂಚಿಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ವಹಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಆದಲ್ಲಿ ಅಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದೂ ಹೇಳಿದ್ದಾರೆ.

ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರೂ ಸಂವಾದದಲ್ಲಿ ಪಾಲ್ಗೊಂಡಿದ್ದರು.ಇದೇ ವೇಳೆ ಮಾತನಾಡಿದ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, "ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬಲಿಷ್ಠಗೊಳಿಸಲು ಚುನಾವಣಾ ಸುಧಾರಣೆ ಆಗಬೇಕಾದ ಅಗತ್ಯವಿದೆ,' ಎಂದಿದ್ದಾರೆ.

ಟ್ರಂಫ್ ಅಮೇರಿಕ ನೀತಿಗೆ ದಲೈಲಾಮಾ ವಿರೋಧ

ಟ್ರಂಪ್‌ ಅಮೆರಿಕ ನೀತಿಗೆ ದಲೈಲಾಮಾ ವಿರೋಧ

ತವಾಂಗ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ "ಅಮೆರಿಕ ಮೊದಲು ನೀತಿ'ಗೆ ತಮ್ಮ ವಿರೋಧವಿದೆ ಎಂದು ಟಿಬೇಟಿಯನ್‌ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.

ಟ್ರಂಪ್‌ ಅವರ ಅಮೆರಿಕ ಮೊದಲು ಎಂಬ ನೀತಿ ಒಪ್ಪಿಕೊಳ್ಳುವಂಥದ್ದಲ್ಲ. ಮುಕ್ತ ಯೋಚನೆಗೆ ಇದು ಆರೋಗ್ಯಕರ ನೀತಿಯಲ್ಲವಾದ್ದರಿಂದ ದೇಶಕ್ಕೆ ಒಳಿತಾದುದಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ನಿರ್ಗಮಿಸಿರುವುದು(ಬ್ರೆಕ್ಸಿಟ್‌) ಜನಾಭಿಪ್ರಾಯ. ಆದರೆ, ಆಫ್ರಿಕಾ ಅಮೆರಿಕ ಮತ್ತು ಏಷ್ಯಾ ಕೂಡ ಕೆಲಮಟ್ಟಿಗೆ ಇದನ್ನೇ ಅನುಸರಿಸಲೂಬಹುದು. ನಾನಂದುಕೊಂಡಂತೆ ಬ್ರಿಟನ್‌ ನಿರ್ಗಮನದಿಂದ ಜರ್ಮನಿ ಒಕ್ಕೂಟದ ಹಿಡಿತ ಸಾಧಿಸಲು ರಹದಾರಿ ಆಗಲಿದೆ ಎಂದಿದ್ದಾರೆ. ಅಲ್ಲದೆ, ಭಾರತ, ಚೀನಾ ಮತ್ತು ಪಾಕಿಸ್ತಾನ ಸಾಂಸ್ಕೃತಿಕ ಸಹಕಾರದಿಂದ ಆರ್ಥಿಕತೆ ಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದಿದ್ದಾರೆ.

ಮಲಾಲ ಕಿರಿಯ ಶಾಂತಿದೂತೆ

ಮಲಾಲ ಕಿರಿಯ ಶಾಂತಿದೂತೆ

ವಿಶ್ವಸಂಸ್ಥೆ: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ  ಹಾಗೂ ಪಾಕಿಸ್ತಾನದ ಮಾನವ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್‌ಝೈ ಅವರನ್ನು ಅತ್ಯಂತ ಕಿರಿಯ ಶಾಂತಿದೂತೆಯಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ನೇಮಿಸಿದ್ದಾರೆ.

‘ಮಲಾಲ ನೇಮಕದ ಮೂಲಕ ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಮತ್ತಷ್ಟು ನೆರವಾಗಲಿದೆ’ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಸ್ವಾತ್‌ ಕಣಿವೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿದ್ದ ಮಲಾಲ ಅವರ ಮೇಲೆ 2012ರಲ್ಲಿ ತಾಲಿಬಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

60 ಸಾವಿರ ಬಗೆಯ ಸಸ್ಯಜಾತಿ

60 ಸಾವಿರ ಬಗೆಯ ಸಸ್ಯಜಾತಿ

ಲಂಡನ್: ಭೂಮಿಯ ಮೇಲೆ 60,065 ಜಾತಿಯ ಮರಗಳು ಇವೆ ಎಂದು ಲಂಡನ್‌ನ ಬಟಾನಿಕಲ್ ಗಾರ್ಡನ್ಸ್ ಕನ್ಸರ್ವೇಷನ್ ಇಂಟರ್‌ನ್ಯಾಷನಲ್ (ಬಿಜಿಸಿಐ) ಎಂಬ  ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.

ಅಧ್ಯಯನದ ಉದ್ದೇಶ: ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವುದು ಹಾಗೂ ಅವುಗಳ ವಸ್ತುಸ್ಥಿತಿಯನ್ನು ಆಗಾಗ್ಗೆ ಮೌಲ್ಯಮಾಪನ ಮಾಡುವುದು.

ಸಸ್ಯಪ್ರಭೇದ ಕಡಿಮೆಯಾಗಲು ಕಾರಣ
*ಅರಣ್ಯ ನಾಶ.
*ಹವಾಮಾನ ವೈಪರೀತ್ಯ.
*ಮಿತಿ ಮೀರಿದ ಮಾನವ ಚಟುವಟಿಕೆ.
*300 ತೀರಾ ಅಳವಿನಂಚಿನಲ್ಲಿರುವ ಸಸ್ಯಗಳು.

ಈಜಿಪ್ಟ್ ಚರ್ಚನಲ್ಲಿ ಬಾಂಬ್ ಸ್ಪೋಟ

ಈಜಿಪ್ಟ್ ಚರ್ಚ್ ನಲ್ಲಿ ಬಾಂಬ್ ಸ್ಪೋಟ, ಸಾವಿನ ಸಂಖ್ಯೆ 21ಕ್ಕೆ ಏರಿಕೆ

ಕೈರೊ, ಏಪ್ರಿಲ್ 9: ಈಜಿಪ್ಟ್ ನ ತಂಟ ನಗರದ ಕಾಪ್ಟಿಕ್ ಚರ್ಚ್ ನಲ್ಲಿ ಭೀಕರ ಬಾಂಬ್ ಸ್ಪೋಟಿಸಿದ್ದು ಸಾವಿಗೀಡಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಈಜಿಪ್ಟ್ ನ ರಾಜಧಾನಿ ಕೈರೋದಿಂದ ಉತ್ತರಕ್ಕಿರುವ ನೈಲ್ ನದಿ ತಟದ ತಂಟಾದಲ್ಲಿ ಈ ಬಾಂಬ್ ಸ್ಪೋಟ ಸಂಭವಿಸಿದೆ. 50ಕ್ಕೂ ಹೆಚ್ಚು ಜನ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕ್ರಿಸ್ತ ಜೆರುಸಲೆಂಗೆ ಕಾಲಿಟ್ಟ ದಿನವನ್ನು ಸಂಭ್ರಮಿಸಲು 'ಪಾಮ್ ಡೇ' ಹೆಸರಿನಲ್ಲಿ ಕ್ರಿಶ್ಚಿಯನ್ ಸಮುದಾಯದವರು ಸೈಂಟ್ ಜಾರ್ಜ್ ಚರ್ಚ್ ನಲ್ಲಿ ಸೇರಿದ್ದರು. ಈ ವೇಳೆ ಬಾಂಬ್ ಸ್ಪೋಟಿಸಿದೆ.ಈಜಿಪ್ಟ್ ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ನಿರಂತರ ದಾಳಿಗಳು ನಡೆಯುತ್ತಿದ್ದು ಅದರ ಮುಂದುವರಿದ ದಾಳಿ ಇದಾಗಿದೆ.

ಮುಂದಿನ ವಾರ ಈಜಿಪ್ಟ್ ಗೆ ಪೋಪ್ ಫ್ರಾನ್ಸಿಸ್ ಭೇಟಿ ನೀಡಲಿದ್ದು ಭೇಟಿಗೂ ಮೊದಲು ಈ ದಾಳಿ ನಡೆದಿದೆ.

ಕಳೆದ ಡಿಸೆಂಬರಿನಲ್ಲಿ ಕೈರೋದ ಕಾಪ್ಟಿಕ್ ಕ್ಯಾಥೆಡ್ರಲ್ ಚರ್ಚಿನಲ್ಲಿ ನಡೆದ ಸ್ಪೋಟದಲ್ಲಿ 25 ಜನ ಸಾವನ್ನಪ್ಪಿದ್ದು 49 ಜನ ಗಾಯಗೊಂಡಿದ್ದನ್ನು ಸ್ಮರಿಸಬಹುದು.

ಕೋಲ್ಕತ್ತಾ - ಢಾಕಾ ನಡುವೆ ಬಸ್ ಸೇವೆ

ಕೋಲ್ಕತಾ-ಢಾಕಾ ನಡುವೆ ಬಸ್ ಸೇವೆ

  ಹೊಸದಿಲ್ಲಿ , ಎ.8: ಕೋಲ್ಕತಾ -ಢಾಕಾ ನಡುವೆ ಬಸ್ ಸೇವೆ ಮತ್ತು, ಪ್ರಾಯೋಗಿಕವಾಗಿ ರೈಲು ಸಂಚಾರ ಸೇರಿದಂತೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ 22 ಒಪ್ಪಂದಗಳಿಗೆ ಇಂದು ಸಹಿ ಹಾಕಲಾಗಿದೆ.
  ಹೈದರಾಬಾದ್ ಹೌಸ್‌ನಲ್ಲಿ ಇಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಒಪ್ಪಂದಗಳಿಗೆ ಸಹಿ ಮಾಡಿದರು. ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿರಿಯಾ ಮೇಲೆ ಅಮೇರಿಕ ಬಾಂಬ್: 3ನೇ ಮಹಾ ಯುದ್ದಕ್ಕೆ ನಾಂದಿ?

ಸಿರಿಯಾ ಮೇಲೆ ಅಮೆರಿಕ ಬಾಂಬ್‌: 3ನೇ ಮಹಾ ಯುದ್ಧಕ್ಕೆ ನಾಂದಿ?

ಟ್ರಿಪೋಲಿ/ವಾಷಿಂಗ್ಟನ್‌: ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ನಡೆಸಿದ ಕೆಮಿಕಲ್‌ ದಾಳಿಗೆ ಪ್ರತ್ಯುತ್ತರವಾಗಿ, ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಅಸಾದ್‌ಗೆ ಸೇರಿದ ಶಯÅತ್‌ ವಾಯುನೆಲೆ ಮೇಲೆ 59ಕ್ಕೂ ಹೆಚ್ಚು ಟಾಮ್‌ಹಾಕ್‌ ಕ್ಷಿಪಣಿಗಳನ್ನು ಉಡ್ಡಯನ ಮಾಡಿರುವ ಅಮೆರಿಕ, ಹೆಚ್ಚು ಕಡಿಮೆ ವಾಯು ನೆಲೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದೆ.

ವಿಶೇಷವೆಂದರೆ, ಟ್ರಂಪ್‌ ಅಧ್ಯಕ್ಷರಾದ ಮೇಲೆ ಅಮೆರಿಕ ನಡೆಸುತ್ತಿರುವ ಮೊದಲ ಅಂತಾರಾಷ್ಟ್ರೀಯ ಮಟ್ಟದ ದಾಳಿ ಇದು.
ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಆದರೆ, ರಷ್ಯಾ ಮಾಧ್ಯಮಗಳ ಪ್ರಕಾರ, 15 ಮಂದಿ ಸತ್ತಿದ್ದಾರೆ. ನಾಲ್ಕು ಜೆಟ್‌ ವಿಮಾನಗಳು ಮತ್ತು ರನ್‌ವೇ ಹಾಳಾಗಿವೆ. ಈ ವಾರದ ಆರಂಭದಲ್ಲಷ್ಟೇ ಸಿರಿಯಾ ಪಡೆಗಳು, ಈ ವಾಯು ನೆಲೆಯಿಂದಲೇ ಕೆಮಿಕಲ್‌ ಅಸ್ತ್ರ ಪ್ರಯೋಗಿಸಿ ಅಲ್ಲಿನ 80ಕ್ಕೂ ಹೆಚ್ಚು ನಾಗರಿಕರನ್ನೇ ಕೊಂದಿದ್ದವು.
ಹೀಗಾಗಿ ಈ ವಾಯುನೆಲೆಯನ್ನೇ ಟಾರ್ಗೆಟ್‌ ಮಾಡಿಕೊಂಡು ಅಮೆರಿಕ ಕ್ಷಿಪಣಿಗಳ ಪ್ರಯೋಗಿಸಿದೆ.

ಅಮೆರಿಕದ ಈ ಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದಾಳಿಯನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೆಮಿಕಲ್‌ ದಾಳಿಯಲ್ಲಿ ಅದೇ ದೇಶದ ಜನರು ಸತ್ತಿದ್ದಾರೆ, ಜತೆಗೆ ಮುದ್ದಾದ ಮಕ್ಕಳೂ ಅಸುನೀಗಿವೆ. ಹೀಗಾಗಿ ನಾವು ಜನರ ಹಿತರಕ್ಷಣೆಗಾಗಿ ದಾಳಿ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ರಷ್ಯಾ ಮತ್ತು ಇರಾನ್‌ ಈ ದಾಳಿಯನ್ನು ತೀವ್ರವಾಗಿ ವಿರೋಧಿಸಿವೆ. ಅಲ್ಲದೆ ರಷ್ಯಾ ತುರ್ತಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಕರೆಯಬೇಕು ಎಂದ ಆಗ್ರಹಿಸಿದೆ. ""ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವೊಂದರ ಮೇಲೆ ಅಕ್ರಮ ಆಕ್ರಮಣ,'' ಎಂದು ರಷ್ಯಾ ಕರೆದಿದೆ. ಬೇರೊಂದು ದೇಶದ ಗಡಿ ದಾಟಿ ವೈಮಾನಿಕ ದಾಳಿ ನಡೆಸಬಾರದು ಎಂದು ಹೇಳುವ ಮೂಲಕ ಚೀನಾ ಕೂಡ ಈ ದಾಳಿಯನ್ನು ಆಕ್ಷೇಪಿಸಿದೆ. ಸಿರಿಯಾ ಪಡೆಗಳೂ ಈ ದಾಳಿ ಖಂಡಿಸಿದ್ದು, ಬರ್ಬರ ಆಕ್ರಮಣ ಎಂದಿವೆ. ಜತೆಗೆ ಅಮೆರಿಕ ಐಸಿಸ್‌ ಜತೆಗೆ ಸೇರಿಕೊಂಡು ಈ ದಾಳಿ ನಡೆಸಿದೆ ಎಂದು ಆರೋಪಿಸಿವೆ.

ದಾಳಿ ನಡೆಸುವ 30 ನಿಮಿಷಗಳ ಮುನ್ನ ಅಮೆರಿಕ ರಷ್ಯಾಗೆ ಈ ಬಗ್ಗೆ ಮಾಹಿತಿ ನೀಡಿತ್ತು. ಆದರೆ ದಾಳಿಗೆ ಪರವಾನಗಿ ಪಡೆದಿರಲಿಲ್ಲ. ಇದು ರಷ್ಯಾಗೆ ಸಿಟ್ಟು ತರಿಸಿದೆ. ಇದಷ್ಟೇ ಅಲ್ಲ, ಅಸಾದ್‌ ಜತೆಗೆ ಈಗಲೂ ಸ್ನೇಹದಿಂದ ಇರುವ ರಷ್ಯಾ, ಈ ದಾಳಿಯನ್ನು ಒಪ್ಪಲು ತಯಾರಿಲ್ಲ. ಹೀಗಾಗಿಯೇ ಅಮೆರಿಕದ ಜತೆ ಸಿರಿಯಾ ವಿಚಾರವಾಗಿ ಮಾಡಿಕೊಂಡಿದ್ದ ವಾಯು ದಾಳಿಗೆ ಸಂಬಂಧಿಸಿದ ಒಪ್ಪಂದವೊಂದನ್ನು ಮುರಿದಿದೆ. ಮೂಲಗಳ ಪ್ರಕಾರ, ಈ ವಾಯು ನೆಲೆಯ ಪಕ್ಕದಲ್ಲಿಯೇ ರಷ್ಯಾ ಕೂಡ ತನ್ನ ವಾಯುನೆಲೆ ನಿರ್ಮಿಸಿಕೊಂಡಿದೆ. ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ತನ್ನ ಸಮರ ನೌಕೆ, ಅಡ್ಮಿರಲ್‌ ಗೋರ್ಬಚೇವ್‌ ಅನ್ನು ಬ್ಲಾಕ್‌ಸೀ ಕಡೆಯಿಂದ ಸಿರಿಯಾದತ್ತ ತಿರುಗಿಸಿದ್ದು, ಒಂದು ರೀತಿಯಲ್ಲಿ ಯುದ್ಧ ಸನ್ನದ್ಧ ಪರಿಸ್ಥಿತಿ ಉಂಟಾಗಿದೆ.

ಫ್ರಾನ್ಸ್‌, ಜರ್ಮನಿ, ಬ್ರಿಟನ್‌ ಬೆಂಬಲ
ಅಮೆರಿಕದ ಈ ದಾಳಿಯನ್ನು ಬಹುತೇಕ ಪಾಶ್ಚಿಮಾತ್ಯ ದೇಶಗಳು ಮತ್ತು ಸೌದಿ ಅರೆಬಿಯಾ ಬೆಂಬಲಿಸಿವೆ. ಫ್ರಾನ್ಸ್‌, ಜರ್ಮನಿ ದಾಳಿಗೆ ನೇರವಾಗಿ ಅಸಾದ್‌ ಅವರೇ ಕಾರಣ ಎಂದಿದ್ದರೆ, ಬ್ರಿಟನ್‌ ಅಮೆರಿಕದ ದಾಳಿಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದೆ. ಟರ್ಕಿ ದೇಶ ಇದೊಂದು ಧನಾತ್ಮಕ ಕ್ರಮ ಎಂದಿದೆ. ಸೌದಿ ಅರೇಬಿಯಾ ಟ್ರಂಪ್‌ ಅವರ ಧೈರ್ಯದ ಕ್ರಮ ಎಂದು ಬಣ್ಣಿಸಿದ್ದರೆ, ಇಸ್ರೇಲ್‌, ಸಿರಿಯಾದ ಇನ್ನೂ ಕೆಲವು ಭಾಗಗಳಲ್ಲಿ ದಾಳಿ ನಡೆಸುವ ಅಗತ್ಯವಿದೆ ಎಂದಿದೆ. ಕೆಮಿಕಲ್‌ ಅಸ್ತ್ರಗಳ ಬಳಕೆಯನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಜಪಾನ್‌ ಹೇಳಿದೆ.

3ನೇ ಮಹಾ ಯುದ್ಧಕ್ಕೆ ನಾಂದಿ?
ಸಿರಿಯಾದ ಮೇಲೆ ಅಮೆರಿಕ ಮಾಡಿರುವ ಈ ದಾಳಿ 3ನೇ ಮಹಾಯುದ್ಧಕ್ಕೆ ನಾಂದಿಯೇ? ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ  ಈ ಬಗ್ಗೆಯೂ ಚರ್ಚೆ ನಡೆದಿದೆ. ಈಗಾಗಲೇ ರಷ್ಯಾ ಮತ್ತು ಅಮೆರಿಕ ಸಂಬಂಧ ತೀರಾ ಹದಗೆಟ್ಟಿರುವ ಹಂತಕ್ಕೆ ಬಂದಿದ್ದು, ಈ ದಾಳಿ ನಂತರ ಸಂಪೂರ್ಣವಾಗಿ ಹಾಳಾಗಿದೆ. ಅಲ್ಲದೆ ಹಾಮ್ಸ್‌ನಲ್ಲಿರುವ ಏರ್‌ಬೇಸ್‌ನಲ್ಲಿ ರಷ್ಯಾ ಕೂಡ ತನ್ನ ಅಸ್ತಿತ್ವ ಇರಿಸಿಕೊಂಡಿದ್ದು, ಅದರ ವಾಯು ಸೇನೆಗೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ರಷ್ಯಾ ಬ್ಲಾಕ್‌ ಸೀಯಿಂದ ತನ್ನ ಸಮರ ನೌಕೆಯನ್ನು ಸಿರಿಯಾದತ್ತ ತಂದು ನಿಲ್ಲಿಸಿದೆ ಎಂದು ಹೇಳಲಾಗಿದೆ.

ಭಾರತದ ಮೇಲೇನು ಪರಿಣಾಮ?
ಸಿರಿಯಾದ ಮೇಲಿನ ಅಮೆರಿಕದ ದಾಳಿಯಿಂದ ಭಾರತಕ್ಕೆ ನಷ್ಟವೂ ಇಲ್ಲ, ಲಾಭವೂ ಇಲ್ಲ. ಆದರೆ ಈ ದಾಳಿ ತರುವಾಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರದಲ್ಲಿ ಭಾರಿ ಏರಿಕೆಯಾಗಿದ್ದು, ಇದರಿಂದ ಕೊಂಚ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗಿದೆ. ಆದರೂ, ಭಾರತ ನೇರವಾಗಿ ಸಿರಿಯಾದ ಜತೆ ತೈಲ ವಿಚಾರ ಕುರಿತು ಸಂಬಂಧವೇನೂ ಹೊಂದಿಲ್ಲ. ಅಲ್ಲದೆ ಸಿರಿಯಾ ಕೂಡ ಒಪೆಕ್‌ನ ಸದಸ್ಯ ರಾಷ್ಟ್ರವಲ್ಲ. ಹೀಗಾಗಿ ಭಾರತದ ಮೇಲೆ ಅಷ್ಟೇನೂ ಪರಿಣಾಮ ಉಂಟಾಗದು ಎಂದು ಹೇಳಲಾಗಿದೆ.

ಕುಶಾನರು

ಕುಶಾನರು

🔹ಮೌರ್ಯ ಸಾಮ್ರಾಜ್ಯದ ಪತನದ ನಂತರ ಭಾರತದಲ್ಲಿ ವಿಶಾಲ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ *ಕುಶಾನರದು*.
🔹 ಇವರ ಸಾಮ್ರಾಜ್ಯ ಉತ್ತರ ಭಾರತವನ್ನಲ್ಲದೇ ಮಧ್ಯ ಏಷ್ಯದವರೆಗೂ ಹಬ್ಬಿತ್ತು.
🔹ಗಾಂಧಾರ ಕಲೆ ಮತ್ತು ಮಹಾಯಾನ ಪಂಥಗಳನ್ನು ಪೋಷಿಸಿ ಬೆಳೆಸಿದರು.

*ಆಧಾರಗಳು*
ಕುಶಾನರ ಚರಿತ್ರೆ ತಿಳಿಯಲು ನಮಗೆ ಹಲವಾರು ಶಾಸನ, ನಾಣ್ಯಗಲಕು,ಹಾಗೂ ಸಾಹಿತ್ಯ ಕೃತಿಗಳು ಲಭ್ಯವಾಗಿವೆ.
⚡ ಸಾಹಿತ್ಯ ಕೃತಿಗಳಲ್ಲಿ
ಅಶ್ವಘೋಷನ- ಬುದ್ಧಚರಿತ
ನಾಗಾರ್ಜುನನ- ಮಾಧ್ಯಮಿಕ ಸೂತ್ರ
ಕಲ್ಹಣನ- ರಾಜತರಂಗಿಣಿ
ಕುಮಾರಲತನ-ಕಲ್ಪನಾಮಂದಿರ ಪ್ರಮುಖವಾದುವು.
⚡ಹ್ಯಾನರ ಕಾಲದ ಚೀನೀ ಚರಿತ್ರಕಾರ ಪಾನ-ಕು, ಚಂಗಕುಯಿನ್, ಮತ್ತು ಹ್ಯೂಯನತ್ಸಾಂಗ ಎಂಬ ಚೀನಿಯರ ಬರವಣಿಗೆಗಳು ಕುಶಾನರ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.
⚡ ಇವುಗಳ ಜೊತೆಗೆ ಮೂರ್ತಿ ಶಿಲ್ಪಗಳು, ಸ್ತೂಪಗಳು, ಅಂದಿನ ಸಾಮಾಜಿಕ, ಆರ್ಥಿಕ, ಮತ್ತು ಧಾರ್ಮಿಕ ಜೀವನದ ಕುರಿತು ಮಾಹಿತಿ ನೀಡುತ್ತವೆ.

*ಕುಶಾನರ ಮೂಲ*
🔱 ಚೀನಿ ಬರವಣಿಗೆಗಳ ಪ್ರಕಾರ ಕುಶಾನರು *ಯೂಚಿ* ಎಂಬ ಚೀನಾದ ಅಲೆಮಾರಿ ಪಂಗಡಕ್ಕೆ ಸೇರಿದವರಾಗಿದ್ದರು.
🔱 ಅವರನ್ನು *ಟೊಚಾರಿಯನ್* ಎಂದೂ ಸಹ ಕರೆಯುತ್ತಿದ್ದರು.
🔱 ಆರಂಭದಲ್ಲಿ ಇವರು ಮಧ್ಯ ಏಷ್ಯಾದಲ್ಲಿ ನೆಲೆಸಿದ್ದರು, ನಂತರ ಚೀನಾದ ಗಡಿಭಾಗವಾದ ತುರ್ಕಿಸ್ತಾನದ *ಕಾನಸು* ಎಂಬಲ್ಲಿ ನೆಲೆನಿಂತರು.
🔱 ಸುಮಾರು ಕ್ರಿ.ಪೂ 165 ರಲ್ಲಿ ಅಲ್ಲಿ ವಾಸಿಸಿದ್ದ ಮತ್ತೊಂದು ಪಂಗಡ ಹಿಯಾಂಗನರು(ಹೂಣರು) ಯೂಚಿಗಳನ್ನು ಸೋಲಿಸಿ ಆ ಸ್ಥಳದಿಂದ ಹೊರಹಾಕಿದರು.
🔱 ನಂತರ ಯೂಚಿಗಳು ದಕ್ಷಿಣಕ್ಕೆ ಚಲಿಸಿ ಟಿಬೆಟ್ ನಲ್ಲಿ ನೆಲೆನಿಂತರು.
🔱ಆಗ ಶಕರನ್ನು, ಪಾರ್ಥಿಯನ್ನರನ್ನು ಸೋಲಿಸಿ ಬ್ಯಾಕ್ಟ್ರಿಯಾ ಹಾಗೂ ಜಕ್ಸಾರ್ಟನ ನದಿ ಪ್ರದೇಶವನ್ನು ಆಕ್ರಮಿಸಿಕೊಂಡರು.
🔱 ಇಲ್ಲಿಯೂ ಬಹುಕಾಲ ಉಳಿಯದ ಯೂಚಿಗಳು ಬ್ಯಾಕ್ಟ್ರಿಯಾದಲ್ಲಿ ಬಂದು ನೆಲೆಸಿ *ಸೋಗ್ಡಿಯಾನ*ವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು.
🔱 ಕಾಬೂಲ ಕಣಿವೆಯನ್ನು ದಾಟಿ ಹಿಂದೂಕುಷ ಪರ್ವತಶ್ರೇಣಿಯನ್ನು ಹಾದು ನಂದರ ಗಾಂಧಾರ ಪ್ರದೇಶವನ್ನು ವಶಪಡಿಸಿಕೊಂಡರು.
🔱 ಆರಂಭದಲ್ಲಿ ಯೂಚಿಗಳಲ್ಲಿ ಕಿಷಾಂಗ್(kuc-i-shang), ಹುಮಿ, ಕುಯಿಶುಂಗ್, ಹಿಲೂಯಿನ್, ತುಮಿ, ಎಂಬ ಪಂಗಡಗಳಿದ್ದವು.
🔱 *ಕಿಷಾಂಗ* ಎಂಬ ಪದ ಮುಂದೆ *ಕುಶಾನ* ಎಂಬ ಹೆಸರು ಪಡೆಯಿತು.
🔱 ಕಿಷಾಂಗರ ನಾಯಕ *ಕುಜಲ ಕಾಡಫೈಸೆಸ*ನು 5 ರಾಜ್ಯಗಳನ್ನು ಒಟ್ಟುಗೂಡಿಸಿ ಕುಶಾನ ಸಂತತಿಯ ಸ್ಥಾಪಕನಾದನು.

*ರಾಜಕೀಯ ಇತಿಹಾಸ*
📢 *ಕುಜಲ ಕಾಡಪೈಸೆಸ*(ಕ್ರಿ.ಶ15-65)
*ಕುಜಲ ಕಾಡಪೈಸೆಸ* ಅಥವಾ *1 ನೇ ಕಾಡಪೈಸೆಸ* ಕುಶಾನ ವಂಶದ ಸ್ಥಾಪಕ.
📢 ಈತ 5 ಯೂಚಿ ಬಣಗಳನ್ನು ಒಂದುಗೂಡಿಸಿ *ವಾಂಗ್* ಅಥವಾ ರಾಜ ಎಂಬ ಬಿರುದು ಪಡೆದ.
📢 ಇವನು ಇಂಡೋಗ್ರೀಕರನ್ನು, ಶಕರನ್ನು, ಮತ್ತು ಪಾರ್ಥಿಯನ್ನರನ್ನು ಸೋಲಿಸಿ ಕಾಬೂಲ್, ಗಾಂಧಾರ(ಕಿಪಿನ), ತಕ್ಷಶಿಲಾ, ಕಂದಹಾರಗಳ ಒಡೆಯನಾದನು.
📢 ಇವನ ಸಾಮ್ರಾಜ್ಯವು ಪರ್ಶಿಯಾದಿಂದ ಸಿಂಧೂ ನದಿಯವರೆಗೂ ವ್ಯಾಪಿಸಿತ್ತು.
📢 ಇವನು ಚೀನಾ ಮತ್ತು ರೋಮ ಸಾಮ್ರಾಜ್ಯಗಳೊಂದಿಗೆ ವಾಣಿಜ್ಯ ಸಂಬಂಧ ಹೊಂದಿದ್ದನು.
📢 ಈತ ರೋಮನ್ನರ ಮಾದರಿಯಲ್ಲಿ *ದೀನಾರ* ಎಂಬ ತಾಮ್ರದ ನಾಣ್ಯಗಳನ್ನು ಹೊರಡಿಸಿದನು. ಅವುಗಳ ಮೇಲೆ ತನ್ನ ಬಿರುದುಗಳಾದ ಮಹಾರಾಜಾಧಿರಾಜ,ಮಹಾರಾಜ, ಮಹಾಂತಗಳನ್ನು ಖರೋಷ್ಠಿ ಲಿಪಿಯಲ್ಲಿ ಕೆತ್ತಿಸಿದನು.
📢 ಇವನು ಬೌದ್ಧ ಮತಾವಲಂಬಿಯಾಗಿದ್ದನು.

*2ನೇ  ಕಾಡಪೈಸೆಸ*( *ವಿಮಾ ಕಾಡಪೈಸೆಸ*) ಕ್ರಿ.ಶ 65 -78

🍭 *ಕುಜಲ ಕಾಡಪೈಸೆಸ*ನನ ನಂತರ ಅವನ ಮಗ 2ನೇ  ಕಾಡಪೈಸೆಸ ಅಧಿಕಾರಕ್ಕೆ ಬಂದನು.
🍭 ಇವನು ಭಾರತದ ಭೂಭಾಗಗಳನ್ನು ಗೆದ್ದ ಪ್ರಥಮ ಕುಶಾನ ದೊರೆ.
🍭 ಈತ ಪಂಜಾಬನ್ನು ಗೆದ್ದು ಗಂಗಾನದಿ ಬಯಲಿನವರೆಗೂ ನುಗ್ಗಿ ಬಂದನು.
🍭 ಇವನ ಸಾಮ್ರಾಜ್ಯವು ಪಶ್ಚಿಮದಲ್ಲಿ ಅಫಘಾನಿಸ್ತಾನ, ತುರ್ಕಿಸ್ತಾನ, ಬುಖಾರಾ, ಹಾಗೂ ರೋಮನ್ ಸಾಮ್ರಾಜ್ಯದ ಗಡಿಯವರೆಗೂ ವಿಸ್ತರಿಸಿತ್ತು.
🍭 ಈತ ದೊಡ್ಡ ಪ್ರಮಾಣದಲ್ಲಿ ಬಂಗಾರದ ನಾಣ್ಯಗಳನ್ನು ಟಂಕಿಸಿದನು. ಅವುಗಳ ಮೇಲೆ ತನ್ನ ಬಿರುದುಗಳಾದ *ಸಮಗ್ರ ಪ್ರಪಂಚ ಒಡೆಯ*, *ಮಹಾರಾಜ*, *ರಾಜರರಾಜ*, *ಸರ್ವಲೋಕೆಶ್ವರ*, *ಮಹೇಶ್ವರ*ಗಳನ್ನು ಕೆತ್ತಿಸಿದನು.
🍭 ಕೆಲವು ನಾಣ್ಯಗಳ ಮೇಲೆ ಶಿವ ಮತ್ತು ನಂದಿಯ ಚಿತ್ರಗಳಿದ್ದು ಅವನು ಶೈವ ಮತಾವಲಂಬಿಯಾಗಿದ್ದನೆಂದು ತಿಳಿಯುತ್ತದೆ.
🍭 ಪ್ರಾಯಶಃ ಭಾರತದಲ್ಲಿ ಮೊದಲ ಬಾರಿಗೆ *ಚಿನ್ನದ ನಾಣ್ಯಗಳನ್ನು* ಟಂಕಿಸಿದ ಮೊದಲ ರಾಜ

📣 ಕಾನಿಷ್ಕನು ಕುಶಾನರಲ್ಲೇ ಅತ್ಯಂತ ಪ್ರಸಿದ್ಧ ದೊರೆ.
📣 ದಕ್ಷ ಆಡಳಿತಗಾರ ಮತ್ತು ವೀರಯೋಧ.
📣 ಪೇಷಾವರ ಅಥವಾ ಪುರುಷಪುರ ಅವನ ರಾಜಧಾನಿಯಾಗಿತ್ತು.
📣 ಮಥುರಾ ಅವನ ಎರಡನೆಯ ರಾಜಧಾನಿ
📣 ಡಾ|| ಫ್ಲೀಟ್ ಕನ್ನಿಂಗ್‌ಹ್ಯಾಮ್ ರು ಕಾನಿಷ್ಕ ಕ್ರಿ.ಪೂ 58 ರಲ್ಲಿ ಅಧಿಕಾರಕ್ಕೆ ಬಂದನೆಂದು, *ವಿಕ್ರಮಶಕ* ವರ್ಷದ ಸ್ಥಾಪಕನೆಂದು ವಾದಿಸಿದ್ದಾರೆ.
ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ವಿಕ್ರಮಾದಿತ್ಯ ಅಥವಾ ಚಂದ್ರಗುಪ್ತನಿಂದ ಈ ಶಕೆ ಆರಂಭವಾಯಿತೆಂದು ತಿಳಿದುಬರುತ್ತದೆ.

*ಕಾನಿಷ್ಕನ ದಿಗ್ವಿಜಯಗಳು*
🔺 ಕಾಶ್ಮೀರದ ಪ್ರಕೃತಿ ಸೌಂದರ್ಯಕ್ಕೆ  ಮನಸೋತು ಕಾನಿಷ್ಕನು ಕಾಶ್ಮೀರವನ್ನು ಗೆದ್ದನೆಂದು ಊಹಿಸಲಾಗಿದೆ.
🔺 ಕಲ್ಹಣ ರಾಜತರಂಗಣಿಯಲ್ಲಿ ಕಾನಿಷ್ಕನು ಕಾಶ್ಮೀರವನ್ನು ವಶಪಡಿಸಿಕೊಂಡನೆಂದು ಹೇಳಿದ್ದಾನೆ.
🔺 ತನ್ನ ಹೆಸರಿನಲ್ಲಿ ಕಾನಿಷ್ಕಪುರ ಎಂಬ ಹೊಸ ನಗರವನ್ನು ನಿರ್ಮಿಸಿದನು.
🔺ಬೌದ್ಧ ಬರಹಗಳು ಕಾನಿಷ್ಕನು ಮಗಧದ ಮೇಲೆ ದಾಳಿ ಮಾಡಿ ಪಾಟಲಿಪುತ್ರವನ್ನು ವಶಪಡಿಸಿಕೊಂಡನು.
🔺 ಟಿಬೆಟ್ ಹಾಗೂ ಚೀನಿ ಮೂಲಗಳು ಪಾಟಲೀಪುತ್ರ ಮತ್ತು ಸಾಕೇತಪುರ ಮೇಲಿನ ಕಾನಿಷ್ಕನ ದಾಳಿಯನ್ನು ಸಮರ್ಥಿಸಿವೆ.
🔺ತಾನು ದೇವಪುತ್ರನೆಂದು ಚೀನಿ ರಾಜನ ಸ್ಥಾನಮಾನಕ್ಕೆ ಸಮಾನನೆಂದು ಹೇಳಿ ಚೀನಿ ರಾಜನಿಗೆ ಕೊಡುತ್ತಿದ್ದ ಕಪ್ಪಕಾಣಿಕೆ  ನಿಲ್ಲಿಸಿದನು.
🔺 ಕಾನಿಷ್ಕನಿಗೆ *ಕೈಸರ್*, *ದೇವಪುತ್ರ*, ಎಂಬ ಬಿರುದುಗಳಿದ್ದವು.

 

ಶನಿವಾರ, ಏಪ್ರಿಲ್ 8, 2017

ಗಾಯತ್ರಿ ಮಂತ್ರ

*ಗಾಯತ್ರಿ ಮಂತ್ರ*‌               ‌                                                                                                                        ವಿಶ್ವಾಮಿತ್ರ ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ'. ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ ಸರ್ವ ರೀತಿಯ ಸಿದ್ಧಿಪ್ರಾಪ್ತಿಯಾಗುತ್ತದೆ...

ಉಪನಯನವೆಂಬ ಸಂಸ್ಕಾರದ ಮೂಲಕ ಏಳು ವರ್ಷ ಪೂರ್ತಿಯಾಗಿ ಎಂಟನೇ ವರ್ಷಕ್ಕೆ ಕಾಲಿಡುವಾಗ ದ್ವಿಜ ಅಥವಾ ಬ್ರಾಹ್ಮಣನೆನಿಸಿ ಬ್ರಹ್ಮಜ್ಞಾನವನ್ನು ಪಡೆಯುವ ಅರ್ಹತೆಯನ್ನು ಒಬ್ಬ ಹುಡುಗ ಪಡೆಯುತ್ತಾನೆ. ಈ ಮೂಲಕ ಗಾಯತ್ರಿ ಮಂತ್ರದ ಉಪದೇಶ ಪಡೆಯುತ್ತಾನೆ.

ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ.

ಉಪನಯನ ಸಂಸ್ಕಾರದ ನಂತರದ ಕ್ಷಣವೇ ಬ್ರಾಹ್ಮಣನೆನಿಸಿಕೊಂಡ ಯಾವನೇ ವ್ಯಕ್ತಿ ಬ್ರಹ್ಮಜ್ಞಾನವನ್ನು ಕ್ರಮೇಣ ಪಡೆಯುತ್ತಾ, ಸಾತ್ವಿಕ ಬುದ್ಧಿ ಹೊಂದಿ ಸದಾ ಇನ್ನೊಬ್ಬರ ಒಳ್ಳೆಯದನ್ನೇ ಹಾರೈಸುತ್ತಾನೆ. ಎಲ್ಲರಿಗೂ ಸನ್ಮಾರ್ಗದಲ್ಲಿ ಹೋಗುವ ದಾರಿ ತೋರಿಸುತ್ತಾನೆ. ಅವನೇ ನಿಜವಾದ ಬ್ರಾಹ್ಮಣ.

ಪದ್ಮಪುರಾಣದಲ್ಲಿ ಬ್ರಹ್ಮನೇ ನಾರದರಿಗೆ ನಿಜವಾದ ಬ್ರಾಹ್ಮಣ ಎಂದರೆ ಯಾರು? ಎಂಬ ವಿವರಣೆಯನ್ನು ವಿವರಿಸಿದ್ದಾರೆ.

'ಜನ್ಮನಾ ಚಾಯತೇ ಜಂತುಃ ಸಂಸ್ಕಾರಾತ್ ದ್ವಿಜ ಉಚ್ಯತೆ'- ಅಂದರೆ ಹುಟ್ಟಿನಿಂದ ಎಲ್ಲರೂ ಶ್ರೀಸಾಮಾನ್ಯರೇ, ಸಂಸ್ಕಾರ ಬಲದಿಂದ ದ್ವಿಜನಾಗಿ ಬ್ರಹ್ಮಜ್ಞಾನ ಪಡೆಯಲು ಅರ್ಹನಾಗುತ್ತಾನೆ.

ಸಂಧ್ಯಾವಂದನೆ ಮಾಡುವುದು ಬ್ರಾಹ್ಮಣನೆನಿಸಿಕೊಂಡವನ ಆದ್ಯ ಕರ್ತವ್ಯ. ಏಕೆಂದರೆ ಈ ಮೂಲಕ ಪ್ರತಿಯೊಬ್ಬರಿಗೂ ತನ್ನ ಪ್ರವರ ಮತ್ತು ಗೋತ್ರದ ತಿಳಿವಳಿಕೆ ಬರುತ್ತದೆ. ಇದರಿಂದ ಮುಂದಕ್ಕೆ ವಿವಾಹದ ಸಂದರ್ಭದಲ್ಲಿ ಸಗೋತ್ರ ವಿವಾಹದಿಂದ ತಪ್ಪಿಸಿಕೊಳ್ಳಬಹುದು. ಸಗೋತ್ರ ವಿವಾಹ ಮತ್ತು ಹತ್ತಿರದ ಸಂಬಂಧಿಗಳ ವಿವಾಹ ಆರೋಗ್ಯಕರವಲ್ಲ. ಒಂದೇ ರಕ್ತಗುಂಪು ಇರುವ ಗಂಡು ಹೆಣ್ಣು ವಿವಾಹವಾದರೆ ಯಾವ ಸಮಸ್ಯೆಗಳು ಬರುತ್ತವೆ ಎಂಬುದನ್ನು ನಮ್ಮ ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ.

ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಗಾಯತ್ರಿ ಮಂತ್ರದ ಉಪದೇಶವನ್ನು ಪಡೆದ ನಂತರ ನಿರಂತರ ಪ್ರತಿದಿನ ತಪ್ಪದೇ ತನ್ನ ಜೀವನದುದ್ದಕ್ಕೂ ಉಚ್ಚರಿಸತಕ್ಕದ್ದು. ಏಕಂದರೆ ಎಲ್ಲಾ ಮಂತ್ರ, ಪೂಜೆ, ಪುನಸ್ಕಾರಗಳಿಗೂ ಅತೀ ಎತ್ತರದಲ್ಲಿ ರಾರಾಜಿಸುವುದು ಗಾಯತ್ರಿ ಮಹಾಮಂತ್ರ. ಗಾಯತ್ರಿ ಕಾಮಧೇನು ಅಥರ್ವವೇದದಲ್ಲಿ ಗಾಯತ್ರಿ ಮಂತ್ರ-ಶಕ್ತಿ, ಧನ ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದಿದ್ದಾರೆ.

ವಿಶ್ವಾಮಿತ್ರ ಋಷಿಗಳು ಹೇಳುವಂತೆ 'ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ'. ಭಗವಾನ್ ಮನು ಹೇಳುತ್ತಾನೆ, 'ಬ್ರಹ್ಮದೇವರು ಮೂರು ವೇದದ ಸಾರವನ್ನು ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ತುಂಬಿಸಿಕೊಟ್ಟಿರುವವರು' ಗಾಯತ್ರಿಯಿಂದ ಸರ್ವ ರೀತಿಯ ಸಿದ್ಧಿಪ್ರಾಪ್ತಿಯಾಗುತ್ತದೆ.

ಮಹರ್ಷಿ ವ್ಯಾಸರು ಹೇಳುವಂತೆ ಗಾಯತ್ರಿಯನ್ನು ಅಲ್ಲಗಳೆದು ಅನ್ಯ ಉಪಾಸನೆ ಮಾಡುವಂಥ ವ್ಯಕ್ತಿ ಪಕ್ವಾನ್ನವನ್ನು ತೊರೆದು ಭಿಕ್ಷಾನ್ನವನ್ನು ಸ್ವೀಕರಿಸುವ ಮೂರ್ಖರಿಗೆ ಸಮ. ಮಂದ ಬುದ್ಧಿಯ ಸ್ಮರಣ ಶಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳು 108 (ನೂರ ಎಂಟು) ಬಾರಿ ಜಪಿಸಬೇಕು. *ಗಾಯತ್ರಿ ತ್ರಿಗುಣಾತ್ಮಕ*, *ಗಾಯತ್ರಿ ಮಂತ್ರ ಪಠಿಸುತ್ತಿರುವಾಗ ತುಟಿ ಅಲುಗಾಡಬೇಕಲ್ಲದೆ ಇತರರಿಗೆ ಕೇಳಬಾರದು.*

ಐಶ್ವರ್ಯ ಹಾಗೂ ಶೋಭೆಯಿಂದ ಕೂಡಿದ ಗಾಯತ್ರಿಯು ಲೋಕಕ್ಕೆ ತಾಯಿ. ಪರಬ್ರಹ್ಮನ ಸ್ವರೂಪವುಳ್ಳವಳು, ಶ್ರೇಷ್ಠ ಸಂಪತ್ತನ್ನು ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮತೇಜಸ್ಸನ್ನು ಹೆಚ್ಚಿಸುವವಳು ಆಗಿದ್ದಾಳೆ.

*ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹೀ*

*ಧಿಯೋ ಯೋನಃ ಪ್ರಚೋದಯಾತ್‌*॥

ಈ ಮಂತ್ರ ಗಾಯತ್ರಿ ಛಂದಸ್ಸಿನಲ್ಲಿದೆ. ಆದುದರಿಂದ ಇದು ಗಾಯತ್ರಿ, ಇದು ಸಾವಿತ್ರಿಯೂ ಹೌದು.

ಸರ್ವೇಷಾಂ ಜಪ ಸೂಕ್ತಾನಾಂ ಗಾಯತ್ರೀ ಪರಮೋ ಜಪ॥

ದುರ್ಲಭಾ ಸರ್ವ ಮಂತ್ರೇಷು, ಗಾಯತ್ರೀ ಪ್ರಣವಾನ್ವಿತಾ॥ (ಬೃಹತ್ ಪರಾಶರ ಸಂಧ್ಯಾ ಭಾಷ್ಯ)

*ಎಲ್ಲ ಜಪಸೂಕ್ತಗಳ ಪೈಕಿ ಗಾಯತ್ರಿಯೇ ಶ್ರೇಷ್ಠ.*  ಗಾಯತ್ರಿ ಮಂಜರಿಯಲ್ಲಿ ಶಿವನು ಪಾರ್ವತಿಗೆ ಹೇಳುತ್ತಾನೆ - ಗಾಯತ್ರಿಯು ವೇದಗಳ ಮಾತೆ ಅವಳೇ ಭೂಮಿಯ ಮೇಲಿನ ಮೊತ್ತ ಮೊದಲ ಶಕ್ತಿ, ಎಲ್ಲಾ ಬ್ರಾಹ್ಮಣರು ಆದಿ ಶಕ್ತಿ ಹಾಗೂ ವೇದಮಾತೆಯಾದ ಗಾಯತ್ರಿಯನ್ನು ಉಪಾಸಿಸುತ್ತಾರೆ. ಆದ್ದರಿಂದ ಅವರೆಲ್ಲರೂ ಶಾಕ್ತರೇ ಹೊರತು ಶೈವರೂ ಅಲ್ಲ ವೈಷ್ಣವರೂ ಅಲ್ಲ.

ಗಾಯತ್ರಿ ಮಂತ್ರದ ಅರ್ಥ

ಅನಂತ ಸ್ವರೂಪನಾದ ಭೂಮಿ, ಅಂತರಿಕ್ಷ ಹಾಗೂ ಸ್ವರ್ಗ ಲೋಕಗಳಲ್ಲಿ ಮೂರು ವೇದಗಳಲ್ಲಿ ಹಾಗೂ ಮೂರು ಕಾಲಗಳಲ್ಲಿ ವ್ಯಾಪಿಸಿರುವ ಯಾವ ಪರಮಾತ್ಮನನ್ನು ಬುದ್ಧಿ, ಮಾತು ಹಾಗೂ ಕರ್ಮಗಳನ್ನು ಪ್ರೇರೇಪಿಸುತ್ತಾನೋ ಅಂಥ ಪ್ರಕಾಶ ಮಾನವಾದ ಜಗತ್ತಿನ ಸೃಷ್ಟಿಗೆ ಕಾರಣನಾದ ಸವಿತೃ ದೇವನ ಶ್ರೇಷ್ಠವಾದ ತೇಜಸ್ಸನ್ನು ಧ್ಯಾನಿಸುತ್ತೇವೆ.

- ಕೆ. ಸುಬ್ರಹ್ಮಣ್ಯ ಆಚಾರ್ಯ

ಶುಕ್ರವಾರ, ಏಪ್ರಿಲ್ 7, 2017

64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ "ಅಲ್ಲಮ" ಚಿತ್ರಕ್ಕೆ 2 ರಾಷ್ಟ್ರ ಪ್ರಶಸ್ತಿ

64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಕನ್ನಡದ 'ಅಲ್ಲಮ' ಚಿತ್ರಕ್ಕೆ 2 ರಾಷ್ಟ್ರ ಪ್ರಶಸ್ತಿ

ಸಿನಿಮಾಡೆಸ್ಕ್:
64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ನಾಗಾಭರಣ ನಿರ್ದೇಶನದ "ಅಲ್ಲಮ" ಚಿತ್ರ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು, ಅತ್ಯುತ್ತಮ ಸಂಗೀತ ನಿರ್ದೇಶಕ ಹಾಗೂ ಅತ್ಯುತ್ತಮ ಮೇಕಪ್ ಪಶಸ್ತಿಗಳು "ಅಲ್ಲಮ" ಚಿತ್ರದ ಪಡೆದುಕೊಂಡಿದೆ.

ಈ ವರ್ಷ ಒಟ್ಟು 344 ಚಿತ್ರಗಳು 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಶಸ್ತಿಯ ಕಣದಲ್ಲಿದ್ದವು.

ಮಲಯಾಳಂನ "ಮಿನ್ನಮುನಿಂಗು" ಚಿತ್ರದ ನಟಿ ಸುರಭಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರೆ. ಬಾಲಿವುಡ್'ನ ಅಕ್ಷಯ್ ಕುಮಾರ್ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಹಿಂದಿಯ 'ರುಸ್ತುಂ' ಅಭಿನಯಕ್ಕಾಗಿ ಅಕ್ಷಯ್ ಕುಮಾರ್'ಗೆ ಬೆಸ್ಟ್ ಆಯಕ್ಟಿಂಗ್ ಅವಾರ್ಡ್ ಸಿಕ್ಕಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಹೀಗಿದೆ
ಅತ್ಯುತ್ತಮ ಕನ್ನಡ ಚಿತ್ರ - ರಿಸರ್ವೇಶನ್​
ಅತ್ಯುತ್ತಮ ಕೊಂಕಣಿ ಚಿತ್ರ- ಡಿ ಝರಾ ಝರಾ
ಅತ್ಯುತ್ತಮ ತುಳು ಚಿತ್ರ: ಮುಡಿಪು
ಅತ್ಯುತ್ತಮ ಸಂಗೀತ ನಿರ್ದೇಶಕ - ಬಾಪು ಪದ್ಮನಾಭ (ಚಿತ್ರ : ಅಲ್ಲಮ ಚಿತ್ರ)
ಅತ್ಯುತ್ತಮ ಮೇಕಪ್​ - ಎನ್.ಕೆ. ರಾಮಕೃಷ್ಣನ್ (ಚಿತ್ರ : ಅಲ್ಲಮ)
ಅತ್ಯುತ್ತಮ ಬಾಲನಟ- ಮನೋಹರ್​ (ಚಿತ್ರ : ರೈಲ್ವೆ ಚಿಲ್ಡ್ರನ್​ )
ಅತ್ಯುತ್ತಮ ನಟ - ಅಕ್ಷಯ್​ ಕುಮಾರ್ (ಚಿತ್ರ : ರುಸ್ತುಂ)
ಅತ್ಯುತ್ತಮ ನಿರ್ದೇಶಕ- ರಾಜೇಶ್ ಮಾಪುಸ್ಕರ (ಮರಾಠಿ)
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ- ಪಿಂಕ್​​ (ಹಿಂದಿ)
ಅತ್ಯುತ್ತಮ ಚಿತ್ರ - ಜೋಕರ್ (ತಮಿಳು)
ಅತ್ಯುತ್ತಮ ಚಿತ್ರ - ನೀರ್ಜಾ ( ಹಿಂದಿ)
ಅತ್ಯುತ್ತಮ ಸ್ಪೆಷಲ್​ ಎಫೆಕ್ಟ್ - ಶಿವಾಯ್​ (ಹಿಂದಿ)

64th National Film Awards, 2016 announced

64th National Film Awards, 2016 announced

Kasaav awarded Best Feature Film and Sathamanam Bhavathi awarded as Best Popular Film providing Wholesome Entertainment

Akshay Kumar to be given Best Actor award for the film Rustom;

Uttar Pradesh awarded Most Film Friendly State Award; Jharkhand given the Special Mention Award

Ms. Surabhi awarded Best Actress for the Malayalam movie Minnaminungu-The Firefly
Rajesh Mapuskar given Best Direction Award for Marathi movie Ventilator

The 64th National Film Awards 2016 were announced today by the Chairpersons of the juries on Feature Films, Non Feature Films, Best Writing on Cinema and Most Film Friendly State Award. The Feature Film Central panel was headed by Shri Priyadarshan, an eminent Film filmmaker popularly known for his Malayalam movie Kanchivaram. The Chairperson for Non – Feature Film Jury was Shri Raju Mishra while the Chairperson for Writing Jury was Ms. Bhawana Somaaya. The Most Film Friendly State award which was introduced as a new category was announced by Shri Radha Krishna Jagarlamudi, a popular Director in Telugu film industry. The National Film Awards would be presented by Hon’ble President of India on May 3rd, 2017.

Prior to the announcement of awards, the Jury Members of the 64th National Film Awards for Best Writing on Cinema submitted its report to the Minister of State for Information & Broadcasting, Col. Rathore today. The Jury Members for the Feature and Non- Feature categories submitted the reports yesterday to the Minister for Information & Broadcasting Shri Venkaiah Naidu.

Some of the prominent winners in various categories for this year National Film Awards included Kasaav in Best Feature Film category and Fireflies in the Abyss in the Non-Feature Film Category. Ms. Sonam Kapoor was awarded Special Mention Award in the Feature Films Category for her role in the movie Neerja. Movies in the languages other than those specified in the VIII Schedule of the constitution in the feature Film categories were also awarded. The award for the best Moran Film was given to Haanduk while best Tulu film was given to Madipu.

Best Film Critic award was given to G. Dhananjayan for his in depth analysis on a wide range of topics such as film genres, brands, new strategies in movie watching, taxation impact and ticket pricing. Special Mention Award was given to the K.P. Jayashankar and Anjali Monteiro for the book ‘A fly in the Curry’. Best Book on Cinema award was given to ‘Lata- Sur Gatha’ authored by Yatindra Mishra.

Special Jury Award in the Feature category was given to Mohanlal for his mastery in dealing with characters of various shades with unparallel acting brilliance.

Special Jury Award in the Non-Feature category was given to ‘The Cinema Travellers’. This year a new category ‘Best on-location Sound Recordist’ in the Non-Feature Film section of the National Film Awards was also introduced.

The state of Uttar Pradesh was awarded the Most Film Friendly State award for implementing a unique film policy. The State’s Film Policy included various measures to create a suitable environment, which not only invited shooting of films on a large scale in the State but also promoted other activities related to various aspects of film production including financial incentives for filmmakers.

The state of Jharkhand was given Special Mention Award for their Film Policy which provided growth opportunities to the local filmmaking talent from within the State.