ಕುಶಾನರು
🔹ಮೌರ್ಯ ಸಾಮ್ರಾಜ್ಯದ ಪತನದ ನಂತರ ಭಾರತದಲ್ಲಿ ವಿಶಾಲ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ *ಕುಶಾನರದು*.
🔹 ಇವರ ಸಾಮ್ರಾಜ್ಯ ಉತ್ತರ ಭಾರತವನ್ನಲ್ಲದೇ ಮಧ್ಯ ಏಷ್ಯದವರೆಗೂ ಹಬ್ಬಿತ್ತು.
🔹ಗಾಂಧಾರ ಕಲೆ ಮತ್ತು ಮಹಾಯಾನ ಪಂಥಗಳನ್ನು ಪೋಷಿಸಿ ಬೆಳೆಸಿದರು.
*ಆಧಾರಗಳು*
ಕುಶಾನರ ಚರಿತ್ರೆ ತಿಳಿಯಲು ನಮಗೆ ಹಲವಾರು ಶಾಸನ, ನಾಣ್ಯಗಲಕು,ಹಾಗೂ ಸಾಹಿತ್ಯ ಕೃತಿಗಳು ಲಭ್ಯವಾಗಿವೆ.
⚡ ಸಾಹಿತ್ಯ ಕೃತಿಗಳಲ್ಲಿ
ಅಶ್ವಘೋಷನ- ಬುದ್ಧಚರಿತ
ನಾಗಾರ್ಜುನನ- ಮಾಧ್ಯಮಿಕ ಸೂತ್ರ
ಕಲ್ಹಣನ- ರಾಜತರಂಗಿಣಿ
ಕುಮಾರಲತನ-ಕಲ್ಪನಾಮಂದಿರ ಪ್ರಮುಖವಾದುವು.
⚡ಹ್ಯಾನರ ಕಾಲದ ಚೀನೀ ಚರಿತ್ರಕಾರ ಪಾನ-ಕು, ಚಂಗಕುಯಿನ್, ಮತ್ತು ಹ್ಯೂಯನತ್ಸಾಂಗ ಎಂಬ ಚೀನಿಯರ ಬರವಣಿಗೆಗಳು ಕುಶಾನರ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.
⚡ ಇವುಗಳ ಜೊತೆಗೆ ಮೂರ್ತಿ ಶಿಲ್ಪಗಳು, ಸ್ತೂಪಗಳು, ಅಂದಿನ ಸಾಮಾಜಿಕ, ಆರ್ಥಿಕ, ಮತ್ತು ಧಾರ್ಮಿಕ ಜೀವನದ ಕುರಿತು ಮಾಹಿತಿ ನೀಡುತ್ತವೆ.
*ಕುಶಾನರ ಮೂಲ*
🔱 ಚೀನಿ ಬರವಣಿಗೆಗಳ ಪ್ರಕಾರ ಕುಶಾನರು *ಯೂಚಿ* ಎಂಬ ಚೀನಾದ ಅಲೆಮಾರಿ ಪಂಗಡಕ್ಕೆ ಸೇರಿದವರಾಗಿದ್ದರು.
🔱 ಅವರನ್ನು *ಟೊಚಾರಿಯನ್* ಎಂದೂ ಸಹ ಕರೆಯುತ್ತಿದ್ದರು.
🔱 ಆರಂಭದಲ್ಲಿ ಇವರು ಮಧ್ಯ ಏಷ್ಯಾದಲ್ಲಿ ನೆಲೆಸಿದ್ದರು, ನಂತರ ಚೀನಾದ ಗಡಿಭಾಗವಾದ ತುರ್ಕಿಸ್ತಾನದ *ಕಾನಸು* ಎಂಬಲ್ಲಿ ನೆಲೆನಿಂತರು.
🔱 ಸುಮಾರು ಕ್ರಿ.ಪೂ 165 ರಲ್ಲಿ ಅಲ್ಲಿ ವಾಸಿಸಿದ್ದ ಮತ್ತೊಂದು ಪಂಗಡ ಹಿಯಾಂಗನರು(ಹೂಣರು) ಯೂಚಿಗಳನ್ನು ಸೋಲಿಸಿ ಆ ಸ್ಥಳದಿಂದ ಹೊರಹಾಕಿದರು.
🔱 ನಂತರ ಯೂಚಿಗಳು ದಕ್ಷಿಣಕ್ಕೆ ಚಲಿಸಿ ಟಿಬೆಟ್ ನಲ್ಲಿ ನೆಲೆನಿಂತರು.
🔱ಆಗ ಶಕರನ್ನು, ಪಾರ್ಥಿಯನ್ನರನ್ನು ಸೋಲಿಸಿ ಬ್ಯಾಕ್ಟ್ರಿಯಾ ಹಾಗೂ ಜಕ್ಸಾರ್ಟನ ನದಿ ಪ್ರದೇಶವನ್ನು ಆಕ್ರಮಿಸಿಕೊಂಡರು.
🔱 ಇಲ್ಲಿಯೂ ಬಹುಕಾಲ ಉಳಿಯದ ಯೂಚಿಗಳು ಬ್ಯಾಕ್ಟ್ರಿಯಾದಲ್ಲಿ ಬಂದು ನೆಲೆಸಿ *ಸೋಗ್ಡಿಯಾನ*ವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು.
🔱 ಕಾಬೂಲ ಕಣಿವೆಯನ್ನು ದಾಟಿ ಹಿಂದೂಕುಷ ಪರ್ವತಶ್ರೇಣಿಯನ್ನು ಹಾದು ನಂದರ ಗಾಂಧಾರ ಪ್ರದೇಶವನ್ನು ವಶಪಡಿಸಿಕೊಂಡರು.
🔱 ಆರಂಭದಲ್ಲಿ ಯೂಚಿಗಳಲ್ಲಿ ಕಿಷಾಂಗ್(kuc-i-shang), ಹುಮಿ, ಕುಯಿಶುಂಗ್, ಹಿಲೂಯಿನ್, ತುಮಿ, ಎಂಬ ಪಂಗಡಗಳಿದ್ದವು.
🔱 *ಕಿಷಾಂಗ* ಎಂಬ ಪದ ಮುಂದೆ *ಕುಶಾನ* ಎಂಬ ಹೆಸರು ಪಡೆಯಿತು.
🔱 ಕಿಷಾಂಗರ ನಾಯಕ *ಕುಜಲ ಕಾಡಫೈಸೆಸ*ನು 5 ರಾಜ್ಯಗಳನ್ನು ಒಟ್ಟುಗೂಡಿಸಿ ಕುಶಾನ ಸಂತತಿಯ ಸ್ಥಾಪಕನಾದನು.
*ರಾಜಕೀಯ ಇತಿಹಾಸ*
📢 *ಕುಜಲ ಕಾಡಪೈಸೆಸ*(ಕ್ರಿ.ಶ15-65)
*ಕುಜಲ ಕಾಡಪೈಸೆಸ* ಅಥವಾ *1 ನೇ ಕಾಡಪೈಸೆಸ* ಕುಶಾನ ವಂಶದ ಸ್ಥಾಪಕ.
📢 ಈತ 5 ಯೂಚಿ ಬಣಗಳನ್ನು ಒಂದುಗೂಡಿಸಿ *ವಾಂಗ್* ಅಥವಾ ರಾಜ ಎಂಬ ಬಿರುದು ಪಡೆದ.
📢 ಇವನು ಇಂಡೋಗ್ರೀಕರನ್ನು, ಶಕರನ್ನು, ಮತ್ತು ಪಾರ್ಥಿಯನ್ನರನ್ನು ಸೋಲಿಸಿ ಕಾಬೂಲ್, ಗಾಂಧಾರ(ಕಿಪಿನ), ತಕ್ಷಶಿಲಾ, ಕಂದಹಾರಗಳ ಒಡೆಯನಾದನು.
📢 ಇವನ ಸಾಮ್ರಾಜ್ಯವು ಪರ್ಶಿಯಾದಿಂದ ಸಿಂಧೂ ನದಿಯವರೆಗೂ ವ್ಯಾಪಿಸಿತ್ತು.
📢 ಇವನು ಚೀನಾ ಮತ್ತು ರೋಮ ಸಾಮ್ರಾಜ್ಯಗಳೊಂದಿಗೆ ವಾಣಿಜ್ಯ ಸಂಬಂಧ ಹೊಂದಿದ್ದನು.
📢 ಈತ ರೋಮನ್ನರ ಮಾದರಿಯಲ್ಲಿ *ದೀನಾರ* ಎಂಬ ತಾಮ್ರದ ನಾಣ್ಯಗಳನ್ನು ಹೊರಡಿಸಿದನು. ಅವುಗಳ ಮೇಲೆ ತನ್ನ ಬಿರುದುಗಳಾದ ಮಹಾರಾಜಾಧಿರಾಜ,ಮಹಾರಾಜ, ಮಹಾಂತಗಳನ್ನು ಖರೋಷ್ಠಿ ಲಿಪಿಯಲ್ಲಿ ಕೆತ್ತಿಸಿದನು.
📢 ಇವನು ಬೌದ್ಧ ಮತಾವಲಂಬಿಯಾಗಿದ್ದನು.
*2ನೇ ಕಾಡಪೈಸೆಸ*( *ವಿಮಾ ಕಾಡಪೈಸೆಸ*) ಕ್ರಿ.ಶ 65 -78
🍭 *ಕುಜಲ ಕಾಡಪೈಸೆಸ*ನನ ನಂತರ ಅವನ ಮಗ 2ನೇ ಕಾಡಪೈಸೆಸ ಅಧಿಕಾರಕ್ಕೆ ಬಂದನು.
🍭 ಇವನು ಭಾರತದ ಭೂಭಾಗಗಳನ್ನು ಗೆದ್ದ ಪ್ರಥಮ ಕುಶಾನ ದೊರೆ.
🍭 ಈತ ಪಂಜಾಬನ್ನು ಗೆದ್ದು ಗಂಗಾನದಿ ಬಯಲಿನವರೆಗೂ ನುಗ್ಗಿ ಬಂದನು.
🍭 ಇವನ ಸಾಮ್ರಾಜ್ಯವು ಪಶ್ಚಿಮದಲ್ಲಿ ಅಫಘಾನಿಸ್ತಾನ, ತುರ್ಕಿಸ್ತಾನ, ಬುಖಾರಾ, ಹಾಗೂ ರೋಮನ್ ಸಾಮ್ರಾಜ್ಯದ ಗಡಿಯವರೆಗೂ ವಿಸ್ತರಿಸಿತ್ತು.
🍭 ಈತ ದೊಡ್ಡ ಪ್ರಮಾಣದಲ್ಲಿ ಬಂಗಾರದ ನಾಣ್ಯಗಳನ್ನು ಟಂಕಿಸಿದನು. ಅವುಗಳ ಮೇಲೆ ತನ್ನ ಬಿರುದುಗಳಾದ *ಸಮಗ್ರ ಪ್ರಪಂಚ ಒಡೆಯ*, *ಮಹಾರಾಜ*, *ರಾಜರರಾಜ*, *ಸರ್ವಲೋಕೆಶ್ವರ*, *ಮಹೇಶ್ವರ*ಗಳನ್ನು ಕೆತ್ತಿಸಿದನು.
🍭 ಕೆಲವು ನಾಣ್ಯಗಳ ಮೇಲೆ ಶಿವ ಮತ್ತು ನಂದಿಯ ಚಿತ್ರಗಳಿದ್ದು ಅವನು ಶೈವ ಮತಾವಲಂಬಿಯಾಗಿದ್ದನೆಂದು ತಿಳಿಯುತ್ತದೆ.
🍭 ಪ್ರಾಯಶಃ ಭಾರತದಲ್ಲಿ ಮೊದಲ ಬಾರಿಗೆ *ಚಿನ್ನದ ನಾಣ್ಯಗಳನ್ನು* ಟಂಕಿಸಿದ ಮೊದಲ ರಾಜ
📣 ಕಾನಿಷ್ಕನು ಕುಶಾನರಲ್ಲೇ ಅತ್ಯಂತ ಪ್ರಸಿದ್ಧ ದೊರೆ.
📣 ದಕ್ಷ ಆಡಳಿತಗಾರ ಮತ್ತು ವೀರಯೋಧ.
📣 ಪೇಷಾವರ ಅಥವಾ ಪುರುಷಪುರ ಅವನ ರಾಜಧಾನಿಯಾಗಿತ್ತು.
📣 ಮಥುರಾ ಅವನ ಎರಡನೆಯ ರಾಜಧಾನಿ
📣 ಡಾ|| ಫ್ಲೀಟ್ ಕನ್ನಿಂಗ್‌ಹ್ಯಾಮ್ ರು ಕಾನಿಷ್ಕ ಕ್ರಿ.ಪೂ 58 ರಲ್ಲಿ ಅಧಿಕಾರಕ್ಕೆ ಬಂದನೆಂದು, *ವಿಕ್ರಮಶಕ* ವರ್ಷದ ಸ್ಥಾಪಕನೆಂದು ವಾದಿಸಿದ್ದಾರೆ.
ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ವಿಕ್ರಮಾದಿತ್ಯ ಅಥವಾ ಚಂದ್ರಗುಪ್ತನಿಂದ ಈ ಶಕೆ ಆರಂಭವಾಯಿತೆಂದು ತಿಳಿದುಬರುತ್ತದೆ.
*ಕಾನಿಷ್ಕನ ದಿಗ್ವಿಜಯಗಳು*
🔺 ಕಾಶ್ಮೀರದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಕಾನಿಷ್ಕನು ಕಾಶ್ಮೀರವನ್ನು ಗೆದ್ದನೆಂದು ಊಹಿಸಲಾಗಿದೆ.
🔺 ಕಲ್ಹಣ ರಾಜತರಂಗಣಿಯಲ್ಲಿ ಕಾನಿಷ್ಕನು ಕಾಶ್ಮೀರವನ್ನು ವಶಪಡಿಸಿಕೊಂಡನೆಂದು ಹೇಳಿದ್ದಾನೆ.
🔺 ತನ್ನ ಹೆಸರಿನಲ್ಲಿ ಕಾನಿಷ್ಕಪುರ ಎಂಬ ಹೊಸ ನಗರವನ್ನು ನಿರ್ಮಿಸಿದನು.
🔺ಬೌದ್ಧ ಬರಹಗಳು ಕಾನಿಷ್ಕನು ಮಗಧದ ಮೇಲೆ ದಾಳಿ ಮಾಡಿ ಪಾಟಲಿಪುತ್ರವನ್ನು ವಶಪಡಿಸಿಕೊಂಡನು.
🔺 ಟಿಬೆಟ್ ಹಾಗೂ ಚೀನಿ ಮೂಲಗಳು ಪಾಟಲೀಪುತ್ರ ಮತ್ತು ಸಾಕೇತಪುರ ಮೇಲಿನ ಕಾನಿಷ್ಕನ ದಾಳಿಯನ್ನು ಸಮರ್ಥಿಸಿವೆ.
🔺ತಾನು ದೇವಪುತ್ರನೆಂದು ಚೀನಿ ರಾಜನ ಸ್ಥಾನಮಾನಕ್ಕೆ ಸಮಾನನೆಂದು ಹೇಳಿ ಚೀನಿ ರಾಜನಿಗೆ ಕೊಡುತ್ತಿದ್ದ ಕಪ್ಪಕಾಣಿಕೆ ನಿಲ್ಲಿಸಿದನು.
🔺 ಕಾನಿಷ್ಕನಿಗೆ *ಕೈಸರ್*, *ದೇವಪುತ್ರ*, ಎಂಬ ಬಿರುದುಗಳಿದ್ದವು.
super
ಪ್ರತ್ಯುತ್ತರಅಳಿಸಿ🤝🤝🤝🤝🤝🤝🙏💚💚
ಪ್ರತ್ಯುತ್ತರಅಳಿಸಿ