ಬುಧವಾರ, ಏಪ್ರಿಲ್ 26, 2017

ಸ್ವಂತ ಮನೆಯ ಕನಸಿಗೆ ನೀರೆರೆದ "ಕೇಂದ್ರ"" ರೆಂಟ್ ಟು ಓನ್" ಎಂಬ ಹೊಸ ನೀತಿ.

ಸ್ವಂತ ಮನೆಯ ಕನಸಿಗೆ ನೀರೆರೆದ "ಕೇಂದ್ರ"; "ರೆಂಟ್ ಟು ಓನ್" ಹೊಸ ವಸತಿ ಯೋಜನೆ ಶೀಘ್ರ ಜಾರಿ!
ನವದೆಹಲಿ: ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಹೊಂದಬೇಕು ಎಂಬ ಲಕ್ಷಾಂತರ ಮಂದಿಯ ಕನಸು ಶೀಘ್ರ ನನಸಾಗಲಿದ್ದು, ಕೇಂದ್ರ ಸರ್ಕಾರ ನೂತನ ವಸತಿ ಯೋಜನೆ "ರೆಂಟ್ ಟು ಓನ್" ಅನ್ನು ಶೀಘ್ರದಲ್ಲೇ ಜಾರಿಗೊಳಿಸುವ ಸಾಧ್ಯತೆ ಇದೆ.

ಈ ನೂತನ "ರೆಂಟ್ ಟು ಓನ್" (ಬಾಡಿಗೆಯಿಂದ ಸ್ವಂತ ಮನೆ) ಯೋಜನೆಯಡಿಯಲ್ಲಿ ಸ್ವಂತ ಮನೆ ಇಲ್ಲದವರಿಗೆ ಮನೆ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಯೋಜನೆ ಅನ್ವಯ ಸರ್ಕಾರಿ ಅಂಗ ಸಂಸ್ಥೆಗಳಿಂದ ಮನೆಗಳನ್ನು  ಬಾಡಿಗೆಗ ಪಡೆದು ಆ ಮನೆಗೆ ಕಂತಿನ ರೂಪದಲ್ಲಿ ಹಣ ಪಾವತಿ ಮಾಡುವ ಮೂಲಕ ಮನೆಯನ್ನು ಸ್ವಂತವಾಗಿಸಿಕೊಳ್ಳಬಹುದಾಗಿದೆ. ರಾಷ್ಟ್ರೀಯ ನಗರಪ್ರದೇಶದ ಬಾಡಿಗೆ ವಸತಿ ನೀತಿಯಡಿಯಲ್ಲಿ ಈ ರೆಂಟ್ ಟು ಓನ್ ಎಂಬ  ಹೆಸರಿನ ಯೋಜನೆಯನ್ನು ರೂಪಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು, ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ಹೀಗಾಗಿ ಅಂತಹವರಿಗೆ ಸೌಲಭ್ಯ ಕಲ್ಪಿಸುವ  ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಇದನ್ನು ಕ್ಯಾಬಿನೆಟ್ ಅನುಮೋದನೆಗೆ ರವಾನಿಸಲಾಗುತ್ತದೆ. ಬಾಡಿಗೆ ನಿಯಂತ್ರಣಾ ಕಾಯ್ದೆಯಲ್ಲಿ ಬಾಡಿಗೆದಾರರ ಹಿತಾಸಕ್ತಿಗೆ ಅನುಗುಣವಾಗಿ ತಿದ್ದುಪಡಿ  ತರಲಾಗುವುದು ಅಥವಾ ಹೊಸ ಕಾಯ್ದೆ ರೂಪಿಸಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

2011ರ ಜನಗಣತಿ ಅಂಕಿ ಅಂಶಗಳ ಅನ್ವಯ ದೇಶದ ನಗರ ಭಾಗದ ಜನರ ಪೈಕಿ ಕನಿಷ್ಟ ಶೇ.27ರಷ್ಟು ಮಂದಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದು, ಸುಮಾರು 11.09 ಮಿಲಿಯನ್  ಮನೆಗಳು ಬಾಡಿಗೆ ನಿವಾಸಗಳಾಗಿವೆ ಎಂದು ತಿಳಿದುಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ