ಅಮೆರಿಕದ ಸರ್ಜನ್ ಜನರಲ್ ಮಂಡ್ಯ ಮೂಲದ ವಿವೇಕ್ ಮೂರ್ತಿ ವಜಾ
ವಾಷಿಂಗ್ಟನ್: ಅಮೆರಿಕದ ಸರ್ಜನ್ ಜನರಲ್(ಸಾರ್ವಜನಿಕ ಆರೋಗ್ಯ ಇಲಾಖೆ ಮುಖ್ಯಸ್ಥ) ಆಗಿ ಒಬಾಮ ಆಡಳಿತದಿಂದ ನೇಮಕಗೊಂಡಿದ್ದ ಮೊದಲ ಭಾರತೀಯ-ಅಮೆರಿಕದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕರ್ನಾಟಕದ ಮಂಡ್ಯ ಮೂಲದ ವಿವೇಕ್ ಮೂರ್ತಿ (39) ಅವರನ್ನು ಟ್ರಂಪ್ ಆಡಳಿತ ವಜಾ ಮಾಡಿದೆ. ಈ ದಿಢೀರ್ ಬೆಳವಣಿಗೆಯು ಸ್ವತಃ ಆರೋಗ್ಯ ಸೇವಾ ಇಲಾಖೆಯ ನೌಕರರಿಗೂ ಅಚ್ಚರಿ ಮೂಡಿಸಿದೆ.
ಮಹತ್ವದ ಇಲಾಖೆಗೆ ಹೊಸ ನಾಯ ಕತ್ವವನ್ನು ತರುವ ಉದ್ದೇಶದಿಂದ ಅವ ರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ಅವರ ಕೆಳಗೆ ಕಾರ್ಯ ನಿರ್ವಹಿಸುತ್ತಿದ್ದ ಅಡ್ಮಿರಲ್ ಸಿಲ್ವಿಯಾ ಟ್ರೆಂಟ್-ಆ್ಯಡಮ್ಸ್‌ರನ್ನು ನೇಮಕ ಮಾಡ ಲಾಗಿದೆ. ಇವರು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೇರುತ್ತಿರುವ ಮೊದಲ ನರ್ಸ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮೂರ್ತಿ ಎರಡನೆಯವರು: "ಮೂರ್ತಿ ಅವರನ್ನು ಹುದ್ದೆಯಿಂದ ತೆಗೆದುಹಾಕಲಾ ಗಿದೆ. ಅವರು ಕಮಿಷನ್x ಕಾಪ್ಸ್ìನ ಸದಸ್ಯರಾಗಿ ಮುಂದುವರಿಯಲಿದ್ದಾರೆ,' ಎಂದು ಆರೋಗ್ಯ ಇಲಾಖೆ ತಿಳಿಸಿದೆ. "ಥ್ಯಾಂಕ್ಯೂ ಅಮೆರಿಕ, ನಿಮ್ಮ ಸರ್ಜನ್ ಜನರಲ್ ಆಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ. ಮುಂದೆ ನಿಮ್ಮೊಂದಿಗೆ ಹೊಸ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ,' ಎಂದು ಮೂರ್ತಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. 2014ರ ಡಿಸೆಂಬರಲ್ಲಿ ಮೂರ್ತಿ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ದರು. ಕುತೂಹಲದ ವಿಚಾರವೆಂದರೆ, ಮೂರ್ತಿ ಅವರು ಟ್ರಂಪ್ ಆಡಳಿತವು ಸೇವೆಯಿಂದ ವಜಾಗೊಳಿಸುತ್ತಿರುವ 2ನೇ ಭಾರತೀಯ -ಅಮೆರಿಕನ್. ಇತ್ತೀಚೆಗೆ ಯುಎಸ್ ಆಟಾರ್ನಿ ಪ್ರೀತ್ ಭರಾರಾರನ್ನು ವಜಾ ಮಾಡಲಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ