ಭಾನುವಾರ, ಏಪ್ರಿಲ್ 30, 2017

ಅಪ್ಘಾನ್ ಹಿಂಸೆಗೆ ಮಕ್ಕಳು ಬಲಿ

ಅಫ್ಘಾನ್ ಹಿಂಸೆಗೆ ಮಕ್ಕಳು ಬಲಿ: ವಿಶ್ವಸಂಸ್ಥೆ

ಕಾಬೂಲ್, ಎ. 27: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಭೀಕರ ಹಿಂಸಾಚಾರದಲ್ಲಿ 2017ರ ಮೊದಲ ಮೂರು ತಿಂಗಳಲ್ಲಿ ಬಲಿಯಾದ ನಾಗರಿಕರ ಪೈಕಿ ಮೂರನೆ ಒಂದು ಭಾಗ ಮಕ್ಕಳು ಎಂದು ವಿಶ್ವಸಂಸ್ಥೆಯ ಸಹಾಯಕ ಅಫ್ಘಾನ್ ಕಚೇರಿಯ ವರದಿಯೊಂದು ಗುರುವಾರ ಹೇಳಿದೆ.

ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ 210 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 525 ಮಂದಿ ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ ಸಂಬಂಧಿಸಿದ ನಾಗರಿಕರ ಒಟ್ಟು ಸಾವಿನ ಸಂಖ್ಯೆ 715 ಮತ್ತು ಗಾಯಗೊಂಡವರು 1,466.ಕಳೆದ ವರ್ಷ ಇದೇ ಅವಧಿಯಲ್ಲಿ ನಡೆದ ಮಕ್ಕಳ ಸಾವಿಗೆ ಹೋಲಿಸಿದರೆ ಈ ಬಾರಿಯ ಸಾವಿನ ಪ್ರಮಾಣ 17 ಶೇಕಡದಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಸಾವಿನ ಸಂಖ್ಯೆಯಲ್ಲಿ 4 ಶೇ. ಇಳಿಕೆಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ