ಬ್ರಿಟನ್ನಲ್ಲಿ ಜೂ.8ಕ್ಕೆ ಸಾರ್ವತ್ರಿಕ ಚುನಾವಣೆ
ಲಂಡನ್: ಅಚ್ಚರಿಯ ನಡೆಯೊಂದರಲ್ಲಿ ಬ್ರಿಟನ್‌ನಲ್ಲಿ ಅವಧಿಪೂರ್ವ ಚುನಾವಣೆಯನ್ನು ಪ್ರಧಾನಿ ಥೆರೇಸಾ ಮೇ ಘೋಷಿಸಿದ್ದಾರೆ. ಈ ಹಿಂದೆ 2020ರ ಮೊದಲು ಚುನಾವಣೆ ಘೋಷಣೆಯನ್ನು ಥೆರೇಸಾ ನಿರಾಕರಿಸುತ್ತಲೇ ಬಂದಿದ್ದರು. ಸದ್ಯ ಅವಧಿ ಪೂರ್ವ ಚುನಾವಣೆಯ ಘೋಷಣೆ ಮಿತ್ರಪಕ್ಷಗಳಲ್ಲಿ, ಪ್ರತಿಪಕ್ಷಗಳಲ್ಲಿ ಅಚ್ಚರಿ ಉಂಟುಮಾಡಿದೆ. ಐರೋಪ್ಯ ಒಕ್ಕೂಟದಿಂದ ಹೊರ ಬರುವ "ಬ್ರೆಕ್ಸಿಟ್' ಜಾರಿಗೆ ತರುವ ನಿಟ್ಟಿನಲ್ಲಿ ಥೆರೇಸಾ ಈ ಕ್ರಮ ಕೈಗೊಂಡಿದ್ದಾರೆ.
ಸದ್ಯ ಮೇ ಅವರ ಘೋಷಣೆ ಜಾರಿಗೆ ಬರಬೇಕಾದರೆ ಬ್ರಿಟನ್‌ನ ಕೆಳಮನೆ, ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಪ್ರಸ್ತಾವನೆ ಅಂಗೀಕಾರಗೊಳ್ಳಬೇಕಿದೆ. ಇದು ಬುಧವಾರವೇ ಮಂಡನೆಯಾಗುವ ನಿರೀಕ್ಷೆ ಇದೆ. ಚುನಾವಣೆ ಪ್ರಸ್ತಾಪಕ್ಕೆ ಜಯ ಸಿಗಬೇಕಾದಲ್ಲಿ 650 ಸಂಸದರಲ್ಲಿ 434 ಮಂದಿ ಸಂಸದರು ಪರವಾಗಿ ಮತ ಚಲಾಯಿಸಬೇಕಾಗುತ್ತದೆ.
ಬ್ರಿಟನ್ ಪ್ರಧಾನಿ ಮಾತನಾಡಿ ಪ್ರತಿಪಕ್ಷಗಳು ಬ್ರೆಕ್ಸಿಟ್ ಕುರಿತ ನಮ್ಮ ನಡೆಯನ್ನು ಆಲೋಚನೆಯನ್ನು ಟೀಕಿಸಿವೆ ಮತ್ತು ಸವಾಲು ಹಾಕಿದೆ.
ಈ ಸಂದರ್ಭ ನಿಮಗೆ ನಮ್ಮ ನಡೆ ಯನ್ನು ತಡೆಯಲು ನಿಮಗೆ ಅವಕಾಶವಿದೆ ಎಂದಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ