12000ಕಿ.ಮೀ. ಪ್ರಯಾಣಿಸಿ ಚೀನ ತಲುಪಿದ ರೈಲು
ಬೀಜಿಂಗ್: ಬ್ರಿಟನ್‌ನಿಂದ ಚೀನಕ್ಕೆ ನೇರ ಸಂಪರ್ಕ ಕಲ್ಪಿಸುವ ಸರಕು ಸಾಗಣೆ ರೈಲು ಇದೇ ಮೊದಲ ಬಾರಿಗೆ 12 ಸಾವಿರ ಕಿ.ಮೀ. ಪ್ರಯಾಣಿಸಿ ಚೀನದ ಝೆಜಿಯಾಂಗ್ ಪ್ರಾಂತ್ಯದ ಇವು ನಗರವನ್ನು ತಲುಪಿದೆ. ಕಳೆದ ಜನವರಿಯಲ್ಲಿ ಯಿವುನಿಂದ ಲಂಡನ್‌ಗೆ ಸರಕು ಹೊತ್ತ ರೈಲು ಸಾಗಿದ್ದು, ಇದೀಗ ಲಂಡನ್‌ನಿಂದ ಸರಕು ಹೊತ್ತು ವಾಪಸಾಗಿದೆ. ಒಟ್ಟು 20 ದಿನಗಳ ಯಾತ್ರೆಯನ್ನು ಈ ರೈಲು ಮಾಡಿದ್ದು, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಬೆಲರಸ್, ಪೋಲೆಂಡ್, ರಷ್ಯಾ, ಕಜಕಿಸ್ತಾನದ ಮೂಲಕ ಹಾದು ಬಂದಿದೆ. ಈ ರೈಲಿನಲ್ಲಿ ವಿಸ್ಕಿ, ಮಕ್ಕಳ ಹಾಲು, ಔಷಧ ತಯಾರಿಕಾ ಯಂತ್ರಗಳು ಇದ್ದವು. ಪ್ರಾಚೀನ ರೇಷ್ಮೆ ವ್ಯಾಪಾರದ ಮಾರ್ಗದಲ್ಲೇ ಈ ರೈಲು ಹಾದುಹೋಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ