ಭಾರತದ 101ರ ಈ ಅಜ್ಜಿ 100 ಮೀಟರ್ ಓಟದಲ್ಲಿ ಚಿನ್ನ ಗೆದಿದ್ದಾಳೆ!
ಆಕ್ಲೆಂಡ್:
ಇಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ 101 ವರ್ಷದ ಮನ್ ಕೌರ್ ಚಿನ್ನದ ಪದಕವನ್ನು ಭಾರತದ ಶತಾಯುಷಿ ಅಜ್ಜಿ ವಿದೇಶದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಚಂಡೀಗಢ್ದ ಅಜ್ಜಿ ಮನ್ ಕೌರ್ ಅವರು 100 ಮೀಟರ್ಸ್ ಓಟದ ಸ್ಪರ್ಧೆಯನ್ನು ಕೇವಲ 1 ನಿಮಿಷ 14 ಸೆಕೆಂಡ್ಗಳಲ್ಲಿ ಪೂರ್ತಿಗೊಳಿಸಿದ್ದಾರೆ. ಇಡೀ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಮನ್ ಕೌರ್ ಅವರೇ ಹಿರಿಯರಾಗಿದ್ದರು.
200 ಮೀಟರ್ ಓಟ, ಶಾಟ್ಪುಟ್ ಹಾಗೂ ಜಾವಲಿನ್ ಎಸೆತ ಸ್ಪರ್ಧೆಗಳಲ್ಲಿಗೂ ಅಜ್ಜಿ ಮನ್ ಕೌರ್ ನೋಂದಾಣಿ ಮಾಡಿಸಿದ್ದು, ಬುಧವಾರ ನಡೆಯುವ ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆದ ಮಾಸ್ಟರ್ಸ್ ಕ್ರೀಡಾಕೂಟಗಳಲ್ಲಿ ಅಜ್ಜಿ ಮನ್ ಕೌರ್ 20ಕ್ಕೂ ಹೆಚ್ಚು ಪದಕಗಳನ್ನು ಜಯಿಸಿದ್ದಾರೆ.
ಇವರ ಪುತ್ರ ಗುರುದೇವ್ ಸಿಂಗ್. ಗುರುದೇವ್ ಸಹ ಓಟಗಾರರಾಗಿದ್ದು, ಇವರ ಕುಟುಂಬ ಕೆನಡಾದಲ್ಲಿ ನೆಲೆಸಿದ್ದಾರೆ. ತಮ್ಮ ಸಾಧನೆ ಬಗ್ಗೆ ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಮನ್ ಕೌರ್ ನನ್ನ ಮಗ ಹೇಳಿದ್ದನ್ನು ಮಾಡುತ್ತೇನೆ. ಮಗನಿಂದ ನಾನು ನಿತ್ಯವೂ ತರಬೇತಿ ಪಡೆಯುತ್ತಿದ್ದೇನೆ. ನಾನು ದೈಹಿಕವಾಗಿ ಸಮರ್ಥಳಾಗಿದ್ದು, ನನ್ನ ಜೀವ ಇರೋವರಿಗೂ ನಾನು ಓಡುತ್ತಲೇ ಇರುತ್ತೇನೆ' ಎಂದು ಹೇಳುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ