ಮಹಿಳಾ ಸಾರಥ್ಯದಲ್ಲಿ ನಾಲ್ಕು ಹೈಕೋರ್ಟ್‌ಗಳು
ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮಹಿಳಾ ನ್ಯಾಯಮೂರ್ತಿಗಳು ಮುನ್ನಡೆಸುತ್ತಿರುವ ಹೈಕೋರ್ಟ್‌ಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಏಕಕಾಲದಲ್ಲಿ ದೇಶದ ನಾಲ್ಕು ಹೈಕೋರ್ಟ್‌ಗಳಲ್ಲಿ ಮಹಿಳೆಯರು ಮುಖ್ಯ ನ್ಯಾಯಮೂರ್ತಿಗಳಾಗಿರುವುದು ಇದೇ ಮೊದಲು. ದೇಶದ ಎಲ್ಲಾ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 10ರಷ್ಟು ಮಾತ್ರ.
* 1989ರವರೆಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಯಾವ ಮಹಿಳೆಯೂ ನೇಮಕವಾಗಿರಲಿಲ್ಲ. ಈ ಹುದ್ದೆಯನ್ನು ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೇರಳದವರಾದ, ನ್ಯಾಯಮೂರ್ತಿ ಫಾತಿಮಾ ಬೀವಿ ಅವರದ್ದು. 1989ರಿಂದ ಈವರೆಗೆ ಕೇವಲ ಆರು ಮಂದಿ ಮಹಿಳೆಯರಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಸದ್ಯ ಆರ್. ಭಾನುಮತಿ ಅವರು ಮಾತ್ರ ಸುಪ್ರೀಂ ಕೋರ್ಟ್‌ನ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ.
* ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು, ಬಾಂಬೆ ಹೈಕೋರ್ಟ್
* ನ್ಯಾಯಮೂರ್ತಿ ಜಿ.ರೋಹಿಣಿ, ದೆಹಲಿ ಹೈಕೋರ್ಟ್
* ನ್ಯಾಯಮೂರ್ತಿ ನಿಶಿತಾ ನಿರ್ಮಲ್ ಮ್ಹಾತ್ರೆ (ಹಂಗಾಮಿ ಮುಖ್ಯ ನ್ಯಾಯಮೂರ್ತಿ), ಕೋಲ್ಕತ್ತ ಹೈಕೋರ್ಟ್
* ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಮದ್ರಾಸ್ ಹೈಕೋರ್ಟ್
* ನ್ಯಾಯಮೂರ್ತಿ ಆರ್.ಭಾನುಮತಿ
––––––––
24 ದೇಶದ ಹೈಕೋರ್ಟ್‌ಗಳ ಸಂಖ್ಯೆ
652 ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ
69 ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ
28 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ
1 ಸುಪ್ರೀಂಕೋರ್ಟ್‌ನಲ್ಲಿ ಇರುವ ಮಹಿಳಾ ನ್ಯಾಯಮೂರ್ತಿ ಸಂಖ್ಯೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ