2017-18ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇಕಡಾ 7.4ಕ್ಕೆ ಹೆಚ್ಚಳ: ಎಡಿಬಿ
ನವದೆಹಲಿ: ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇಕಡಾ 7.4ರಷ್ಟು ಅಭಿವೃದ್ಧಿ ಹೊಂದಲಿದ್ದು ನಂತರದ ವರ್ಷ ಶೇಕಡಾ 7.6ಕ್ಕೆ ಏರಿಕೆಯಾಗಿ ಚೀನಾಕ್ಕಿಂತ ಮುಂದೆ ಸಾಗಲಿದೆ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್(ಎಡಿಬಿ) ತಿಳಿಸಿದೆ.
ಅಧಿಕ ಮೌಲ್ಯದ ಬ್ಯಾಂಕು ನೋಟುಗಳ ಚಲಾವಣೆ ಹಿಂತೆಗೆತದ ಪರಿಣಾಮ ಸ್ವಲ್ಪ ಸಮಯ ವ್ಯಾಪಾರ ವಹಿವಾಟಿಗೆ ಅನನುಕೂಲವಾದರೂ ಕೂಡ ಇದರಿಂದ ಸಾಕಷ್ಟು ಆರ್ಥಿಕ ಸುಧಾರಣೆಯಾಗಿದೆ. ವ್ಯಾಪಾರ ವಿಶ್ವಾಸ ಮತ್ತು ಹೂಡಿಕೆ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರಿದೆ ಎಂದು ಎಡಿಬಿ ಪ್ರಮುಖ ಆರ್ಥಿಕ ಪ್ರಕಟಣೆಯಲ್ಲಿ ತಿಳಿಸಿದೆ.
2016-17ರಲ್ಲಿ ಭಾರತದಲ್ಲಿ ಶೇಕಡಾ 7.1ರಷ್ಟು ಪ್ರಗತಿಯಾಗಿದ್ದು, ಅಧಿಕ ಮೌಲ್ಯದ ನೋಟುಗಳ ರದ್ಧತಿಯಿಂದ ದೇಶದ ಆರ್ಥಿಕತೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದೇ ಹಲವರು ಭಾವಿಸಿದ್ದರು.
ಅದಕ್ಕೆ ವ್ಯತಿರಿಕ್ತವಾಗಿ 2017-18ರಲ್ಲಿ ಶೇಕಡಾ 7.4ಕ್ಕೆ ಏರಿಕೆಯಾಗಿದೆ. 2018-19ರಲ್ಲಿ ಅದು ಶೇಕಡಾ 7.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಚೀನಾ ದೇಶದ ಆರ್ಥಿಕ ಪ್ರಗತಿ ಶೇಕಡಾ 6.5ರಷ್ಟು 2017 ರಲ್ಲಿ ಕಾಣುವ ನಿರೀಕ್ಷೆಯಿದ್ದರೆ 2018ರಲ್ಲಿ ಅದಕ್ಕಿಂತ ಕಡಿಮೆ 6.2ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. 2016ರಲ್ಲಿ ಚೀನಾ ದೇಶದ ಆರ್ಥಿಕ ಪ್ರಗತಿ ಶೇಕಡಾ 6.7ರಷ್ಟಾಗಿತ್ತು.
ಸರಕು ಮತ್ತು ಸೇವಾ ತೆರಿಗೆ ಜುಲೈಯಲ್ಲಿ ಆರಂಭವಾಗಲಿದ್ದು ನಂತರದ ಆರ್ಥಿಕ ಪ್ರಗತಿ ಹೇಗಿರುತ್ತದೆ ಎಂಬ ಕುತೂಹಲ ಆರ್ಥಿಕ ತಜ್ಞರಿಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ