RCB ಗೆ ಸಿಹಿ-ಕಹಿ: ಅಂದು ಅದೇ ದಿನ ಗರಿಷ್ಟ ಮೊತ್ತದಿಂದ ವಿಶ್ವ ದಾಖಲೆ, ನಿನ್ನೆ ಅತ್ಯಂತ ಕನಿಷ್ಟ ಮೊತ್ತ!
ಬೆಂಗಳೂರು(ಎ.24): ಏಪ್ರಿಲ್ 23, ಆರ್'ಸಿಬಿ ಪಾಲಿಗೆ ಸಿಹಿ-ಕಹಿ ಎರಡನ್ನೂ ತಂದುಕೊಟ್ಟಿದೆ. 2013ರ ಏಪ್ರಿಲ್ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಸ್ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದಲ್ಲದೇ ಬರೋಬ್ಬರಿ 175 ರನ್ (66 ಎಸೆತ, 13 ಬೌಂಡರಿ, 17 ಸಿಕ್ಸರ್) ಬಾರಿಸಿ ವಿಶ್ವ ದಾಖಲೆ ಬರೆದಿದ್ದರು.
ಆರ್‌ಸಿಬಿ 20 ಓವರ್‌ಗಳಲ್ಲಿ ಕೇವಲ 5 ವಿಕೆಟ್ ನಷ್ಟಕ್ಕೆ 263 ರನ್ ಕಲೆಹಾಕಿತು. ಐಪಿಎಲ್ ಇತಿಹಾಸದಲ್ಲಿ ಅದು ಗರಿಷ್ಠ ಮೊತ್ತವಾಗಿ ದಾಖಲಾಗಿತ್ತು. ಸರಿಯಾಗಿ 4 ವರ್ಷಗಳ ನಂತರ ಅದೇ ದಿನ ಕೇವಲ 49 ರನ್‌ಗಳಿಗೆ ಆಲೌಟ್ ಆಗಿ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಸರ್ವಪತನಗೊಂಡ ಅಪಖ್ಯಾತಿಗೆ ಗುರಿಯಾಗಿದೆ.
ಇನ್ನು ತಮ್ಮ ಪ್ರದರ್ಶನದ ಕುರಿತಾಗಿ ಮಾತನಾಡಿದ ಆರ್'ಸಿಬಿ ತಂಡದ ನಾಯಕ ಕೊಹ್ಲಿ
ಇದು ನಮ್ಮ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ.
ನೋವಾಗುತ್ತಿದೆ. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ನಾವು ಪಂದ್ಯವನ್ನು ಸುಲಭವಾಗಿ ಗೆಲ್ಲಬೇಕಿತ್ತು. ನಾನು ಏನನ್ನೂ ಹೇಳುವುದಿಲ್ಲ. ಈ ರೀತಿಯ ಪ್ರದರ್ಶನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
- ವಿರಾಟ್ ಕೊಹ್ಲಿ, ಆರ್‌ಸಿಬಿ ನಾಯಕ
Thanks for such a valuable content! keep on writing inspiring things.
ಪ್ರತ್ಯುತ್ತರಅಳಿಸಿI have also share some usefull information on other plaforms.
chennai-super-kings-vs-royal-challengers-bangalore
chennai-super-kings-vs-royal-challengers-bangalore live streeming
Top 4 ipl teams
Top South africa pacer in ipl
MS Dhoni Great finisher in world cricket