ಮೊದಲ ಅಧ್ಯಕ್ಷೆ, ಈಗ ಕೈದಿ
ಸೋಲ್: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪಾರ್ಕ್ ಜಿಯುನ್ ಹೈ, ಈಗ ಕೈದಿ ಸಂಖ್ಯೆ ಸಂಖ್ಯೆ 503.
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪಾರ್ಕ್, ನ್ಯಾಯಾಲಯದ ವಿಚಾರಣೆ ನಂತರ ಕಾರಾಗೃಹದಲ್ಲಿ ತಮ್ಮ ಮೊದಲ ರಾತ್ರಿಯನ್ನು ಏಕಾಂಗಿಯಾಗಿ ಕಳೆದರು.
ಪಾರ್ಕ್ ಅವರ ಭಾವಚಿತ್ರವನ್ನು ತೆಗೆದುಕೊಂಡ ನಂತರ ಅವರಿಗೆ ಕೈದಿಗಳಿಗೆ ನೀಡುವಂತಹ ಪ್ರಸಾಧನ ಸಾಮಾಗ್ರಿ, ತಟ್ಟೆ ಹಾಗೂ ಹಾಸಿಗೆ ಇರುವ ಕಿಟ್ ನೀಡಲಾಯಿತು.
ಜೈಲಿನ ಪ್ರಕ್ರಿಯೆ ಮುಗಿದ ನಂತರ ಪಾರ್ಕ್ ಅವರಿಗೆ 10.6 ಚದರ ಮೀಟರ್ ಇರುವ ಪ್ರತ್ಯೇಕ ಜೈಲಿನ ಕೊಠಡಿಯನ್ನು ನೀಡಲಾಗಿದ್ದು, ಇದು ಜೈಲಿನ ಇತರೆ ಕೊಠಡಿಗಳಿಗಿಂತ ದೊಡ್ಡದಾಗಿದೆ.
ಜೈಲಿನ ಅಧಿಕಾರಿಗಳು ಅವರ ಕೊಠಡಿ ತೋರಿಸುತ್ತಿದ್ದಂತೆಯೇ ಪಾರ್ಕ್ ಅವರು ಬಿಕ್ಕಿಬಿಕ್ಕಿ ಅತ್ತರು ಎಂದು ಮೂಲಗಳು ತಿಳಿಸಿವೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ