ಭಾರತಕ್ಕೂ ವಾಟರ್ ವ್ಹೀಲ್: ಬಂದಿದೆ ನೋಡಿ ನೀರಿನ ಬಂಡಿ
ಮುಂಬೈ: ನೀರು ತುಂಬಿದ ಕೊಡಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವುದಕ್ಕೆ ಬದಲಾಗಿ, ಬಂಡಿಯಂತೆ ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗುವಂತಹ ಕ್ಯಾನ್‌ಗಳನ್ನು ವೆಲ್ಲೊ ವಾಟರ್ ಎಂಬ ಜಾಗತಿಕ ಸ್ವಯಂಸೇವಾ ಸಂಸ್ಥೆ ಭಾರತಕ್ಕೆ ಪರಿಚಯಿಸಿದೆ.
ಭಾರತದ್ದೇ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಈಗಾಗಲೇ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಹಲವು ಹಳ್ಳಿಗಳಲ್ಲಿ ಈ ನೀರಿನ ಬಂಡಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಭಾರತದಲ್ಲಿ ಈ ಕ್ಯಾನ್ ತಯಾರಿಕೆಗೆ ನೀಲ್‌ಕಮಲ್ ಕಂಪೆನಿ ಜತೆ ವೆಲ್ಲೊ ಒಪ್ಪಂದ ಮಾಡಿಕೊಂಡಿದೆ.
‘ಇಲ್ಲಿ ತಯಾರಾದ ಇಂತಹ ಒಂದು ಕ್ಯಾನ್‌ಗೆ ₹2,500 ಬೆಲೆ ನಿಗದಿ ಮಾಡಲಾಗಿದೆ. ಭಾರಿ ಸಂಖ್ಯೆಯಲ್ಲಿ ಖರೀದಿಸಿದರೆ ₹ 1,900ಕ್ಕೆ ಒಂದು ಕ್ಯಾನ್ ಅನ್ನು ಒದಗಿಸಬಹುದು. ಆದರೆ, ಇದನ್ನು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಮೂಲಕ ಈ ಕ್ಯಾನ್‌ಗಳನ್ನು ವಿತರಿಸಲು ವೆಲ್ಲೊ ಯೋಜನೆ ರೂಪಿಸಿದೆ’ ಎಂದು ನೀಲ್‌ಕಮಲ್ ಹೇಳಿದೆ.
**
ಅನುಕೂಲಗಳು
* ಹೆಚ್ಚು ಶ್ರಮವಿಲ್ಲದೆ, ಹೆಚ್ಚು ನೀರನ್ನು ಸಾಗಿಸಬಹುದು
* ತಲೆ ಮೇಲೆ ಕೊಡ/ಬಿಂದಿಗೆ ಹೊತ್ತು ನಡೆಯುವುದು ತಪ್ಪುತ್ತದೆ. ಕೊಡ ಹೊತ್ತು ಸಾಗುತ್ತಿದ್ದುರಿಂದ ಬರುತ್ತಿದ್ದ ತಲೆ ನೋವು, ಬೆನ್ನು ನೋವು ಬರುವುದು ತಪ್ಪುತ್ತದೆ.
* ಸಣ್ಣ ಮಕ್ಕಳೂ ಸುಲಭವಾಗಿ ನೀರು ಸಾಗಿಸಬಹುದು
*
‘ನಮ್ಮ ಸಂಸ್ಥೆಯ ಸಂಸ್ಥಾಪಕಿ ಸಿಂಥಿಯಾ ಕೋನಿಂಗ್ ಅವರು ಲ್ಯಾಟಿನ್ ಅಮೆರಿಕದ ದೇಶಗಳ ಕುಗ್ರಾಮಗಳಲ್ಲಿ ಸಂಶೋಧನೆಗಾಗಿ ನೆಲೆಸಿದ್ದಾಗ, ಪ್ರತಿ ದಿನ ನೀರನ್ನು ಹೊತ್ತು ತರಬೇಕಿತ್ತು. ಆ ಕುಗ್ರಾಮಗಳ ಮಹಿಳೆಯರ ದಿನನಿತ್ಯದ ಕೆಲಸವಾಗಿದ್ದ ಇದನ್ನು, ಸುಲಭವಾಗಿಸುವ ನಿಟ್ಟಿನಲ್ಲಿ ‘ವಾಟರ್ ವ್ಹೀಲ್’ ಅರ್ಥಾತ್ ನೀರಿನ ಬಂಡಿಯ ಬಗ್ಗೆ ಯೋಚಿಸಿದರು. ನಂತರ ಸಂಸ್ಥೆಯ ತಂತ್ರಜ್ಞರು, ವಿವಿಧ ಪ್ಲಾಸ್ಟಿಕ್ ಕಂಪೆನಿಗಳ ಸಹಯೋಗದಲ್ಲಿ ಈ ಬಂಡಿಯನ್ನು ಅಭಿವೃದ್ಧಿಪಡಿಸಿದರು’ ಎಂದು ವೆಲ್ಲೊ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ