ಏಷ್ಯನ್ ಬಿಲಿಯರ್ಡ್ಸ್ ತಂಡದಲ್ಲಿ ಪಂಕಜ್
ಚೆನ್ನೈ: ಕರ್ನಾಟಕದ ಪಂಕಜ್ ಅಡ್ವಾಣಿ ಬುಧವಾರ ಭಾರತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆ (ಬಿಎಸ್‌ಎಫ್‌ಐ) ಪ್ರಕಟಿಸಿದ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಿಎಸ್‌ಎಫ್‌ಐ ಮೂರು ಟೂರ್ನಿಗಳಿಗೆ ಒಟ್ಟು 24 ಸ್ಪರ್ಧಿಗಳ ತಂಡವನ್ನು ಅಂತಿಮಗೊಳಿಸಿದೆ.
ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ತಂಡದಲ್ಲಿ ಪಂಕಜ್ ಅಡ್ವಾಣಿ, ರೂಪೇಶ್ ಷಾ, ಸೌರವ್ ಕೊಠಾರಿ, ಬ್ರಿಜೇಷ್ ದಮಾನಿ, ಧ್ರುವ್ ಸಿತ್ವಾಲ, ಧ್ವಜ್ ಹರಿಯಾ, ಸಿದ್ದಾರ್ಥ್ ಪಾರಿಖ್, ಬಿ. ಭಾಸ್ಕರ್ ಇದ್ದಾರೆ.
ಏಷ್ಯನ್ ಬಿಲಿಯರ್ಡ್ಸ್‌ಗೆ ಆಯ್ಕೆಯಾದ ಮಹಿಳೆಯರ ತಂಡದಲ್ಲಿ ಆಮೀ ಕರಮಿ, ಅರಂತಾ ಸಂಚಿತ್, ವರ್ಷಾ ಸಂಜೀವ್, ವಿದ್ಯಾ ಪಿಳ್ಳೈ, ಎಮ್.ಚಿತ್ರಾ, ಕೀರತ್ ಭಂಡಾಲ್, ಮೀನಲ್ ಠಾಕೂರ್ ಮತ್ತು ಸುನಿತಿ ದಾಮಿನಿ ಸೇರಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ