ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್
ಮುಂಬೈ: ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧ ಆದೇಶದ ನಂತರ ಭಾರಿ ರಿಯಾಯಿತಿ ದರದಲ್ಲಿ ಬಿಎಸ್ 3 ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ ಉಂಟಾಗಲಿದೆ ಎಂದು ವರದಿಯೊಂದು ಹೇಳಿದೆ. ಸಂಶೋಧನಾ ಸಂಸ್ಥೆ ಕ್ರಿಸಿಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಿಯಾಯಿತಿ ದರದಲ್ಲಿ ಈಗಾಗಲೇ ವಾಹನಗಳನ್ನು ಮಾರಟ ಮಾಡಿರುವುದರಿಂದ 1,200 ಕೋಟಿ ನಷ್ಟವಾಗಿದೆ. ಇನ್ನು ಮಾರಾಟವಾಗದೇ ಉಳಿದಿರುವ ವಾಹನಗಳಿಂದ 1,300 ಕೋಟಿ ರೂಪಾಯಿ ನಷ್ಟ ಉಂತಾಗಲಿದ್ದು, ಒಟ್ಟು 2,500 ಕೋಟಿ ರೂ ನಷ್ಟವಾಗಲಿದೆ ಎಂದು ಕ್ರಿಸಿಲ್ ಅಂದಾಜಿಸಿದ್ದು ವಾಹನ ತಯಾರಿಕಾ ಸಂಸ್ಥೆಗಳ ಒಟ್ಟಾರೆ ಲಾಭದಲ್ಲಿ ಶೇ.2.5 ರಷ್ಟು ನಷ್ಟವಾಗಲಿದೆ. ಮಾರಾಟವಾಗದೇ ಉಳಿದ ವಾಹನಗಳನ್ನು ಡೀಲರ್ ಗಳಿಂದ ವಾಪಸ್ ತಂದು ನಂತರ ಅದಕ್ಕೊಂದು ವ್ಯವಸ್ಥೆ ಮಾಡಬೇಕಿರುವುದರಿಂದ 2017-18 ನೇ ಸಾಲಿನ ಆರ್ಥಿಕ ವರ್ಶದ ಮೇಲೆಯೂ ಬಿಎಸ್-III ನಿಷೇಧ ಹಾಗೂ ರಿಯಾಯಿತಿ ದರದಲ್ಲಿ ವಾಹನಗಳ ಮಾರಾಟ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ವಿಶ್ಲೇಷಿಸಿದೆ.
ಈಗಷ್ಟೇ ಮುಕ್ತಾಯಗೊಂಡಿರುವ 2016-17 ಆರ್ಥಿಕ ವರ್ಷಕ್ಕೆ ಬಿಎಸ್-III ನಿಷೇಧದಿಂದ ಇಬಿಐಟಿಡಿಎ ಮಾರ್ಜಿನ್ 100 ಬಿಪಿಎಸ್ ಕಡಿಮೆಯಾಗಲಿದೆ ಎಂದು ಕ್ರಿಸಿಲ್ ಹೇಳಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ