ಟೈಮ್ ಪ್ರಭಾವಿ ನಾಯಕರ ಆಯ್ಕೆ; ಮೋದಿ ಶೂನ್ಯಸಾಧನೆ
ನ್ಯೂಯಾರ್ಕ್: "ಜಗತ್ತಿನ 100 ಮಂದಿ ಪ್ರಭಾವಿ ವ್ಯಕ್ತಿಗಳ ಆಯ್ಕೆ' ಗಾಗಿ ಅಮೆರಿಕದ ಟೈಮ್ ನಿಯತಕಾಲಿಕೆ ನಡೆಸುವ ಓದುಗರ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೂನ್ಯ ಸಾಧನೆ ಮಾಡಿದ್ದಾರೆ! ಭಾನುವಾರ ರಾತ್ರಿ ಮತದಾನ ಮುಕ್ತಾಯವಾಗಿದ್ದು, ಮೋದಿ ಅವರಿಗೆ ಒಂದೇ ಒಂದು ಮತವೂ ಬಿದ್ದಿಲ್ಲ. ಕಳೆದ ವರ್ಷದ ಟೈಮ್ 100 ಪಟ್ಟಿಯಲ್ಲಿ ಪೈಪೋಟಿಯಲ್ಲಿದ್ದ ಮೋದಿ, 2015ರಲ್ಲಿ ಜಗತ್ತಿನ 100 ಮಂದಿ ಪ್ರಭಾವಿಗಳ ಪೈಕಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇತ್ತೀಚೆಗಷ್ಟೇ, ಇನ್‌ಸ್ಟಾಗ್ರಾಂನಲ್ಲಿ ಅತಿ ಜನಪ್ರಿಯ ವಿಶ್ವನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ಆದರೆ, ಈ ಬಾರಿ 100 ಪ್ರಭಾವಿಗಳಿಗಾಗಿ ನಡೆದ ಮತದಾನದಲ್ಲಿ ಮೋದಿಗೆ ಮತಗಳೇ ಬಿದ್ದಿಲ್ಲ. ಇವರ ಜತೆಗೆ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳಾÉ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಕೂಡ ಶೂನ್ಯ ಸಾಧನೆ ಮಾಡಿದ್ದಾರೆ.
ಟ್ರಂಪ್ ಶೇ.2ರಷ್ಟು ಮತ ಪಡೆದರೆ, ಫಿಲಿಪ್ಪೀನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್ ಅತಿ ಹೆಚ್ಚು ಮತ ಗಳಿಸುವ ಮೂಲಕ ಜಗತ್ತಿನ ಪ್ರಭಾವಿ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ